Tag: Golden Jewelry

  • ದರೋಡೆಗೆ ಖಾರದ ಪುಡಿ ಸಿದ್ಧಗೊಳಿಸುತ್ತಿದ್ದಾಗ ಸಿಕ್ಕಿಬಿದ್ರು 6 ಜನ ಖದೀಮರು

    ದರೋಡೆಗೆ ಖಾರದ ಪುಡಿ ಸಿದ್ಧಗೊಳಿಸುತ್ತಿದ್ದಾಗ ಸಿಕ್ಕಿಬಿದ್ರು 6 ಜನ ಖದೀಮರು

    – ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    ಕೋಲಾರ: ಕುಖ್ಯಾತ 8 ಜನ ದರೋಡೆಕೋರರ ತಂಡದ ಆರು ಖದೀಮರನ್ನು ಕೋಲಾರದ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಕೋಲಾರ ತಾಲೂಕಿನ ಕೂತಾಂಡಹಳ್ಳಿ ಗ್ರಾಮದ ಧನಂಜಯ್ (20), ವಕ್ಕಲೇರಿ ಗ್ರಾಮದ ದೀಕ್ಷಿತ್ (22), ಗುರುಪ್ರಸಾದ್ (21), ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರ ಗ್ರಾಮದ ಚಂದ್ರಶೇಖರ್ (24), ಬೆಂಗಳೂರು ಮೂಲದ ಯತೀಶ್ ಹಾಗೂ ಬಸವರಾಜ್ ಬಂಧಿತ ಆರೋಪಿಗಳು. ಬಂಧಿತರು ರಾಜ್ಯದ ವಿವಿಧೆಡೆ ಬೈಕ್ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ತೊಡಗಿದ್ದರು. ಈ ಗ್ಯಾಂಗ್ ಪೈಕಿ ಇನ್ನೂ ಇಬ್ಬರು ತಪ್ಪಿಸಿಕೊಂಡಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರು, ದರೋಡೆಕೋರರು ನಗರದ ಸಮೀಪದ ಬೆಟ್ಟಬೇನಜೇನಹಳ್ಳಿ ಗೇಟ್ ಬಳಿ ಬೈಕ್ ನಿಲ್ಲಿಸಿದ್ದರು. ರಸ್ತೆ ಬಳಿಯ ಲಾಂಗ್, ಮಚ್ಚು ಹಿಡಿದುಕೊಂಡು ಖಾರದ ಪುಡಿ ಸಿದ್ಧಗೊಳಿಸುತ್ತಿದ್ದರು. ಇದನ್ನು ಗಮನಿಸಿದ ಕೋಲಾರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 6 ಜನರ ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

    ಬಂಧಿತರಿಂದ 12 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಗೆ ಪ್ರಶಂಸೆ ಪತ್ರದೊಂದಿಗೆ 10 ಸಾವಿರ ರೂ. ನಗದನ್ನು ಬಹುಮಾನ ನೀಡಲಾಗಿದೆ. ಇನ್ನೂ ಇಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದರು.

    ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ದರೋಡೆಕೋರ ಗ್ಯಾಂಗ್ ವಿರುದ್ಧ 18  ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು ನಗರ, ದೊಡ್ಡಬಳ್ಳಾಪುರ, ಕೋಲಾರದ ಮಾಲೂರು, ಮಾಸ್ತಿ ಸೇರಿದಂತೆ ವಿವಿಧ ಪ್ರದೇಶದಲ್ಲಿ ತಮ್ಮ ಕೈ ಚಳಕ ತೋರಿಸಿ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದರು ಎಂದು ತಿಳಿಸಿದರು.

    ಮನೆಗಳ್ಳತನದ ಆರೋಪಿ ಕೋಲಾರ ಮೂಲದ ಅಡುಗೆ ಶಂಕರ್ ಅಲಿಯಾಸ್ ಶಂಕರ್ ನನ್ನು ಕೋಲಾರದ ನಗರ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ನಾಲ್ಕು ಕಡೆ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಶಂಕರ್ ನಿಂದ 150 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

  • ಮಹಿಳೆಯೊಂದಿಗಿರುವ ಕಲ್ಮಠ ಶ್ರೀ ವಿಡಿಯೋ ವೈರಲ್!

    ಮಹಿಳೆಯೊಂದಿಗಿರುವ ಕಲ್ಮಠ ಶ್ರೀ ವಿಡಿಯೋ ವೈರಲ್!

    ಕೊಪ್ಪಳ: ಕಲ್ಮಠದ ಕೊಟ್ಟುರು ಸ್ವಾಮೀಜಿ ಮಹಿಳೆಯೊಂದಿಗೆ ಲಾಡ್ಜ್ ನಲ್ಲಿದ್ದ ಫೋಟೋ ವೈರಲ್ ಆಗಿದ್ದ ಬೆನ್ನಲೇ, ಈಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತನಲ್ಲಿ ಹರಿದಾಡುತ್ತಿದೆ.

    ಕೊಟ್ಟುರೂ ಶ್ರೀಗಳು ಮಹಿಳೆಯೊಬ್ಬರಿಗೆ ಬಂಗಾರದ ಆಭರಣಗಳನ್ನು ನೀಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದ್ದು, ಭಕ್ತರಿಂದ ಹಾಗೂ ನೆಟ್ಟಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದನ್ನು ಓದಿ: ಮಹಿಳೆಯೊಂದಿನ ಕೊಟ್ಟೂರು ಸ್ವಾಮಿ ಫೋಟೋ ವೈರಲ್ – ಸ್ವಾಮೀಜಿ ಉಚ್ಚಾಟನೆಗೆ ಮಹಿಳಾ ಭಕ್ತರ ಆಗ್ರಹ

    ಕೊಟ್ಟುರು ಶ್ರೀಗಳನ್ನು ಮಠದಿಂದ ಹೊರ ಹಾಕಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮಠದ ಭಕ್ತರು ಹಾಗೂ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.