Tag: golden crown

  • ಹುಟ್ಟುಹಬ್ಬದಂದು ಗುರುವಾಯೂರಿಗೆ ಗೋಲ್ಡ್ ಕಿರೀಟ ಅರ್ಪಿಸಲಿದ್ದಾರೆ ಚಿನ್ನದ ವ್ಯಾಪಾರಿ

    ಹುಟ್ಟುಹಬ್ಬದಂದು ಗುರುವಾಯೂರಿಗೆ ಗೋಲ್ಡ್ ಕಿರೀಟ ಅರ್ಪಿಸಲಿದ್ದಾರೆ ಚಿನ್ನದ ವ್ಯಾಪಾರಿ

    ತಿರುವನಂತಪುರಂ: ಚಿನ್ನದ ವ್ಯಾಪಾರಿಯೊಬ್ಬರು (Gold Merchant) ಪ್ರಸಿದ್ಧ ಗುರುವಾಯೂರು (Guruvayur Temple) ದೇಗುಲಕ್ಕೆ ಚಿನ್ನದ ಕಿರೀಟವನ್ನು ನೀಡುತ್ತಿರುವ ಮೂಲಕ ಇದೀಗ ಎಲ್ಲರ ಗಮನಸೆಳೆದಿದ್ದಾರೆ.

    ಕೊಯಮತ್ತೂರಿನಲ್ಲಿ ಚಿನ್ನದ ಉದ್ಯಮ ನಡೆಸುತ್ತಿರುವ ತ್ರಿಶೂರ್ ಮೂಲದ ಕೆ.ವಿ ರಾಜೇಶ್ ಆಚಾರ್ಯ ತನ್ನ ಹುಟ್ಟುಹಬ್ಬದ ದಿನದಂದು ಈ ಉಡುಗೊರೆಯನ್ನು  ನೀಡಲಿದ್ದಾರೆ.

    ಸೆಪ್ಟೆಂಬರ್ 6ರ ಬುಧವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಅದೇ ದಿನ ದೇವರಿಗೆ 38 ಪವನ್ ನ ಈ ಚಿನ್ನದ ಕಿರೀಟವನ್ನು (Golden Crown) ಧರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ. ನಂತರ ದೇವಸ್ವಂನ ರಿಜಿಸ್ಟರ್ ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸುರಕ್ಷಿತ ಲಾಕರ್ ಗೆ ವರ್ಗಾಯಿಸಲಾಗುತ್ತದೆ. ಇದನ್ನೂ ಓದಿ: ಗಂಡಸರೆ ನನ್ನ ಮುಟ್ಟಬೇಡಿ, ನಾನು ಪವಿತ್ರಳು : ರಾಖಿ ಸಾವಂತ್ ಮನವಿ

    ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 14 ಲಕ್ಷ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದ್ದರು. ಜೊತೆಗೆ ಶ್ರೀಗಂಧವನ್ನು ಅರೆಯುವ ಅಂದಾಜು 2 ಲಕ್ಷ ಮೌಲ್ಯದ ಯಂತ್ರವನ್ನೂ ದೇಗುಲಕ್ಕೆ ದಾನ ಮಾಡಿದ್ದರು. ಇನ್ನು ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್‍ನಲ್ಲಿ 725 ಗ್ರಾಂ. ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಿರುಪತಿಯಲ್ಲಿ 3 ವಜ್ರಖಚಿತ ಚಿನ್ನದ ಕಿರೀಟ ನಾಪತ್ತೆ..!

    ತಿರುಪತಿಯಲ್ಲಿ 3 ವಜ್ರಖಚಿತ ಚಿನ್ನದ ಕಿರೀಟ ನಾಪತ್ತೆ..!

    ಹೈದರಾಬಾದ್: ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದ ಮೂರು ವಜ್ರಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.

    ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ಅಧೀನದಲ್ಲಿ ಬರುವ ಈ ದೇವಸ್ಥಾನದಲ್ಲಿ ಶನಿವಾರ ಸಂಜೆ 5.45ರ ಸುಮಾರಿಗೆ ಅರ್ಚಕರು ಬಾಗಿಲು ಓಪನ್ ಮಾಡಿದ ವೇಳೆ ಕಿರೀಟಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

    ದೇವಸ್ಥಾನದ ಪೂಜಾ ಕಾರ್ಯಗಳು ಹಾಗೂ ಭಕ್ತರ ದರ್ಶನದ ಬಳಿಕ ಅಂದ್ರೆ 5 ಗಂಟೆ ಸುಮಾರಿಗೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿತ್ತು. ನಂತರ 45 ನಿಮಿಷ ಬಿಟ್ಟು ಮತ್ತೆ ಪೂಜಾ ಕಾರ್ಯಗಳಿಗಾಗಿ ದೇವಸ್ಥಾನದ ಬಾಗಿಲು ತೆರೆದ ವೇಳೆ ಕಿರೀಟಗಳು ನಾಪತ್ತೆಯಾಗಿದ್ದವು ಎಂದು ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ಭಾಸ್ಕರ್ ತಿಳಿಸಿದ್ದಾರೆ.

    ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ರವಾನಿಸಿದ್ದು, ಕೂಡಲೇ ಕಾರ್ಯನಿರ್ವಹಣಾಧಿಕಾರಿ, ಮುಖ್ಯಸ್ಥ ಮತ್ತಿತರರು ದೇವಸ್ಥಾನಕ್ಕೆ ರಾತ್ರಿಯೇ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಈ ಬಗ್ಗೆ ದೇವಸ್ಥಾನದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ದೇವಸ್ಥಾನದ ಸಿಬ್ಬಂದಿಯನ್ನು ಕೂಡ ತನಿಖೆ ನಡೆಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv