Tag: Golden Brothers

  • ಜಾತ್ರೆಯಲ್ಲಿ ಮುಕ್ಕಾಲು ಕೆಜಿ ಬಂಗಾರದ ಸರ ಧರಿಸಿ ಗಮನ ಸೆಳೆದ ಗೋಲ್ಡನ್ ಸಹೋದರರು!

    ಜಾತ್ರೆಯಲ್ಲಿ ಮುಕ್ಕಾಲು ಕೆಜಿ ಬಂಗಾರದ ಸರ ಧರಿಸಿ ಗಮನ ಸೆಳೆದ ಗೋಲ್ಡನ್ ಸಹೋದರರು!

    ಚಿಕ್ಕಬಳ್ಳಾಪುರ: ಬಂಗಾರ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರಿಗಂತೂ ಇನ್ನಿಲ್ಲದ ಇಷ್ಟ. ಆದರೆ ಸಹೋದರಿಬ್ಬರು ಮೈ ಮೇಲೆ ಧರಿಸಿದ ಮಣಗಟ್ಟದ ಬಂಗಾರ ಜನಾಕರ್ಷಣೆ ಪಡೆದ ಪ್ರಸಂಗ ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದಲ್ಲಿ ನಡೆಯಿತು.

    ಏಳು ವರ್ಷಗಳಿಗೆ ಒಮ್ಮೆ ನಡೆಯುವ ಬೀರೇಶ್ವರ, ಸಿದ್ದೇಶ್ವರ ಆನೆ ದೇವರು ಮತ್ತು ಚೌಡೇಶ್ವರಿ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಈ ಇಬ್ಬರು ಸಹೋದರರು ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದರು.

    ಅದ್ಧೂರಿ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರಿನ ಆವಲಹಳ್ಳಿಯ ಸಹೋದರರಾದ ಮಹೇಶ್ ಮತ್ತು ಲೋಕೇಶ್ ಮೈ ಮೇಲೆ ಮುಕ್ಕಾಲು ಕೆಜಿ ತೂಕದ ಮಿರ ಮಿರ ಹೊಳೆಯುವ ಚೈನ್‍ಗಳನ್ನು ಕತ್ತಿಗೆ ಹಾಕಿಕೊಂಡು ಜಾತ್ರೆಗೆ ಬಂದಿದ್ದರು.

    ಗೋಲ್ಡನ್ ಬ್ರದರ್ಸ್‍ ನನ್ನು ಅಚ್ಚರಿಯಿಂದ ಕಂಡ ಜನ ಗೋಲ್ಡನ್ ಬಾಯ್ಸ್ ಹಾಗೂ ಬಂಗಾರದ ಹುಡುಗರು ಅಂತಲೇ ಮಾತನಾಡಿದರು. ಅಲ್ಲದೆ ಇಬ್ಬರು ಸಹೋದರರ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.