Tag: gold

  • ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ!

    – 2023-24ರ ಹಣಕಾಸು ವರದಿಯಲ್ಲಿ ವಿವರ ಪ್ರಕಟ
    – ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂತು ಚಿನ್ನ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನಿಂದ (Bank of England) ಸುಮಾರು 100 ಟನ್ ಅಥವಾ 1 ಲಕ್ಷ ಕೆಜಿ ಚಿನ್ನವನ್ನು (Gold) ಮರಳಿ ಭಾರತಕ್ಕೆ (India) ತಂದಿದೆ. 1991ರ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಆರ್‌ಬಿಐ ಚಿನ್ನವನ್ನು  ಮರಳಿ ತಂದಿರುವುದು ಇದೇ ಮೊದಲು.

    2023-24ರ ತನ್ನ ಹಣಕಾಸು ವರದಿಯಲ್ಲಿ ಆರ್‌ಬಿಐ ಈ ವಿವರ ಪ್ರಕಟಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಪ್ರಮಾಣದಲ್ಲಿ ಚಿನ್ನ ತರಲಾಗುವುದು ಎಂದು ಹೇಳಿದೆ. ತಂದ ಚಿನ್ನವನ್ನು ಮುಂಬೈ ಮತ್ತು ನಾಗ್ಪುರದಲ್ಲಿ ಆರ್‌ಬಿಐ ಕಚೇರಿಯಲ್ಲಿ ಸಂಗ್ರಹಿಸಿ ಇಡಲಾಗಿದೆ. ಆರ್‌ಬಿಐ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸಲು ಪ್ರಾರಂಭಿಸಿತ್ತು. ವಿದೇಶದಲ್ಲಿ ದಾಸ್ತಾನು ಹೆಚ್ಚುತ್ತಿರುವ ಕಾರಣ, ಸ್ವಲ್ಪ ಚಿನ್ನವನ್ನು ಭಾರತಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

    ವಿದೇಶದಲ್ಲಿ ಆರ್‌ಬಿಐ 413.8 ಟನ್ ಚಿನ್ನವನ್ನು ಇಟ್ಟಿದೆ. ಕೆಲ ವರ್ಷಗಳ ಹಿಂದೆ ಆರ್‌ಬಿಐ ವಿದೇಶಗಳಿಂದ ಚಿನ್ನ ಖರೀದಿಯಲ್ಲಿ ತೊಡಗಿದೆ. ಚಿನ್ನದ ಸಂಗ್ರಹ ಹೆಚ್ಚಿದ್ದಷ್ಟು ಆ ದೇಶದ ಆರ್ಥಿಕತೆ ಉತ್ತಮವಾಗಿದೆ ಎಂದರ್ಥ. ಈ ಕಾರಣಕ್ಕೆ ಆರ್‌ಬಿಐ ಚಿನ್ನದ ಸಂಗ್ರಹ ಮಾಡಲು ಮುಂದಾಗಿದೆ.

    ಇಂಗ್ಲೆಂಡ್‌ನಲ್ಲಿ ಇರಿಸಿದ್ದು ಯಾಕೆ?
    1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ ಆರ್‌ಬಿಐ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು 400 ಮಿಲಿಯನ್ ಡಾಲರ್‌ ಸಾಲ ಪಡೆದುಕೊಂಡಿತ್ತು.

    ಪ್ಲ್ಯಾನ್‌ ಹೇಗಿತ್ತು?
    100 ಟನ್‌ ಚಿನ್ನವನ್ನು ತರಲು ತಿಂಗಳುಗಟ್ಟಲೇ ಪ್ಲ್ಯಾನಿಂಗ್‌ ಮಾಡಿ ಎಲ್ಲಿಯೂ ಈ ವಿಚಾರ ಸೋರಿಕೆ ಆಗದಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‌ಬಿಐ, ಹಣಕಾಸು ಸಚಿವಾಲಯ, ಸರ್ಕಾರದ ಇತರೇ ಇಲಾಖೆಗಳ ಸಂಪೂರ್ಣ ಸಹಕಾರದಿಂದ ವಿಶೇಷ ವಿಮಾನದಲ್ಲಿ ಇಷ್ಟೊಂದು ಪ್ರಮಾಣದ ಚಿನ್ನವನ್ನು ಸುರಕ್ಷಿತವಾಗಿ ತರಲಾಗಿದೆ.  ದೇಶದ ʼಸಾರ್ವಭೌಮ ಆಸ್ತಿʼಯಾಗಿದ್ದ ಕಾರಣ ಈ ಚಿನ್ನಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.

    ಚಿನ್ನ ತಂದಿದ್ದು ಯಾಕೆ?
    ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇಟ್ಟಿದೆ. ವಿಶ್ವದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನ ಮತ್ತು ಕರೆನ್ಸಿ ಮೌಲ್ಯದ ಏರಿಳಿತದ ಭೀತಿಯಿಂದಾಗಿ ಆರ್‌ಬಿಐ ಈಗ ಚಿನ್ನವನ್ನು ಮರಳಿ ಭಾರತಕ್ಕೆ ತರಲು ಮುಂದಾಗಿದೆ.

    ಇಂಗ್ಲೆಂಡ್‌ನಲ್ಲಿ ದೇಶಗಳು ಚಿನ್ನ ಇಡೋದು ಯಾಕೆ?
    ಈ ಹಿಂದಿನಿಂದಲೂ ಬಹುತೇಕ ದೇಶಗಳು ಯನೈಟೆಡ್ ಕಿಂಗ್‌ಡಮ್‌ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟುಕೊಂಡು ಬರುತ್ತಿವೆ. ಇದಕ್ಕೆ ಮುಖ್ಯ ಕಾರಣ ಭದ್ರತೆ. ಭಾರೀ ಪ್ರಮಾಣದ ಚಿನ್ನ ಸಂಗ್ರಹಿಸಲು ಸುರಕ್ಷಿತ ವ್ಯವಸ್ಥೆ, ಸಂಗ್ರಹಾಲಯಗಳು ಇಲ್ಲದೇ ಇದ್ದಾಗ ದೇಶಗಳು ಯುಕೆ ಬ್ಯಾಂಕ್‌ನಲ್ಲಿ ಇಡುತ್ತಿವೆ. ಈ ರೀತಿಯಾಗಿ ಚಿನ್ನವನ್ನು ಇರಿಸಿದ್ದಕ್ಕೆ ದೇಶಗಳು ಗೌರವ ಧನ ನೀಡಬೇಕಾಗುತ್ತದೆ.

    ಆರ್‌ಬಿಐ ಬಳಿ ಎಷ್ಟು ಚಿನ್ನವಿದೆ?
    ಮಾರ್ಚ್ 2023 ರ ಮಾಹಿತಿಯ ಪ್ರಕಾರ ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು ಈ ಪೈಕಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. 15 ವರ್ಷಗಳ ಹಿಂದೆ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 200 ಟನ್ ಚಿನ್ನವನ್ನು ಖರೀದಿಸಿತ್ತು.

    2019ರಲ್ಲಿ ಚಿನ್ನ ಸಂಗ್ರಹ 618.2 ಟನ್‌ಗೆ ಏರಿಕೆಯಾಗಿದ್ದರೆ 2020ರ ವೇಳೆಗೆ ಇದು 661.4 ಟನ್‌ಗೆ ಏರಿಕೆಯಾಗಿತ್ತು. 2021ರ ವೇಳೆಗೆ 695.3 ಟನ್, 2022ಕ್ಕೆ 760.4 ಟನ್, 2023ಕ್ಕೆ 794.6 ಟನ್ ಹಾಗೂ 2024ರ ವೇಳೆಗೆ ಬರೋಬ್ಬರಿ 822.1 ಟನ್ ಚಿನ್ನದ ಸಂಗ್ರಹ ಹೊಂದಿದೆ.

    ಚಿನ್ನದಿಂದ ಶ್ರೀಮಂತವಾಯ್ತು ಅಮೆರಿಕ
    ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದ್ದರಿಂದ ಯುಕೆ, ಯುಎಸ್‌ಎಸ್‌ಆರ್‌ಗೆ ಬಲ ಬಂದಿತ್ತು. ಆದರೆ ಈ ಮಿತ್ರ ರಾಷ್ಟ್ರಗಳ ಮಧ್ಯೆ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಗಿತ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ 1944ರಲ್ಲಿ ಬ್ರೆಟ್ಟನ್‌ವುಡ್ಸ್‌ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದ್ದವು.

    ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕನ್‌ ಡಾಲರ್‌ ಅನ್ನು ಎಲ್ಲಾ ದೇಶಗಳು ವ್ಯವಹಾರಕ್ಕೆ ಬಳಸಲು ಅಧಿಕೃತ ಒಪ್ಪಿಗೆ ನೀಡಿದವು. ದೇಶಗಳು ಚಿನ್ನವನ್ನು ನೀಡಿ ಅಮೆರಿಕನ್‌ ಡಾಲರ್‌ ಖರೀದಿಸುವುದು ಒಪ್ಪಂದದ ಮುಖ್ಯ ತಿರುಳು.  ಈ ವೇಳೆ ಒಂದು ಔನ್ಸ್‌ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್‌ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಅಮೆರಿಕ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್‌ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ಅಂದು ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವರೇ ಬಾಸ್‌ ಎನ್ನುವಂತೆ ಬ್ರೆಟ್ಟನ್‌ವುಡ್ಸ್‌ ಒಪ್ಪಂದದ ಬಳಿಕ ಡಾಲರ್‌ ವಿಶ್ವದ ಕರೆನ್ಸಿಯಾಗಿ ಬದಲಾಯ್ತು. ಪರಿಣಾಮ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ.

  • ಚಿನ್ನದ ಒಳ ಉಡುಪು ಧರಿಸಿ ಫೋಟೋ ಶೇರ್ ಮಾಡಿಕೊಂಡ ಊರ್ವಶಿ

    ಚಿನ್ನದ ಒಳ ಉಡುಪು ಧರಿಸಿ ಫೋಟೋ ಶೇರ್ ಮಾಡಿಕೊಂಡ ಊರ್ವಶಿ

    ಬಾಲಿವುಡ್ ನಟಿ ಊರ್ವಶಿ ರೌಟೇಲಾ ವಜ್ರಖಚಿತ ಮೊಬೈಲ್ ಬಳಕೆ ಮಾಡುವ ಮೂಲಕ ಸಖತ್ ಸುದ್ದಿಯಾಗಿದ್ದರು. ಈ ಬಾರಿ ಚಿನ್ನದ ಒಳ ಉಡುಪು ಧರಿಸಿ ಪ್ರಚಾರ ಪಡೆಯುತ್ತಿದ್ದಾರೆ. ಆ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದು ಚಿನ್ನದ ಉಡುಪು ಅಂತ ಹೇಳದೇ ಇದ್ದರೂ, ಫ್ಯಾನ್ಸ್ ಮಾತ್ರ ಚಿನ್ನದ್ದಾ ಎಂದು ಕೇಳಿದ್ದಾರೆ.

    ಊರ್ವಶಿ ರೌಟೇಲಾ (Uravashi Rautela) ಮತ್ತು ರಿಷಬ್ ಪಂತ್  (Rishab Pant) ವಿಚಾರ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತದೆ. ಮೊನ್ನೆಯಷ್ಟೇ ರಿಷಬ್ ಪಂತ್ ಹೈಟ್ ಬಗ್ಗೆ ಊರ್ವಶಿ ಟೀಕೆ ಮಾಡಿದ್ದರು. ಇದಕ್ಕೆ ಪಂತ್ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಟೀಕೆಯ ಕುರಿತಂತೆ ನಟಿ ಸ್ಪಷ್ಟನೆ ನೀಡಿದ್ದಾರೆ. ಅದು ಜಾಹೀರಾತು ಒಂದರ ಡೈಲಾಗ್. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ರಿಷಬ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುವುದಿಲ್ಲ ಎಂದಿದ್ದಾರೆ.

    ಜಾಹೀರಾತುವೊಂದರಲ್ಲಿ ತನ್ನೊಂದಿಗೆ ಸ್ನೇಹದಲ್ಲಿದ್ದವರ ಹೈಟ್ ಬಗ್ಗೆ ಟೀಕಿಸಿರುವ ಊರ್ವಶಿ, ಕ್ರಿಕೆಟಿಗನೊಬ್ಬನ ಹೈಟ್ ನನ್ನ ಎದೆಮುಟ್ಟುವಷ್ಟೂ ಇಲ್ಲ ಎಂದು ಪರೋಕ್ಷವಾಗಿ ಕುಳ್ಳ ಎಂದಿದ್ದರು. ಇದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಊರ್ವಶಿಯನ್ನೂ ನಾನಾ ರೀತಿಯಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಹಿಂದೆ ರಿಷಬ್ ಪಂತ್ ಅವರಿಗೆ ಕಾರು ಅಪಘಾತವಾಗಿತ್ತು. ಮುಂಬೈನ(Mumbai)  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಬ್ ಹಿಂದೆಯೂ ಊರ್ವಶಿ ಬಿದ್ದಿದ್ದರು. ನಟಿಯ ವರ್ತನೆಗೆ ಅನೇಕರು ಛೀಮಾರಿ ಹಾಕಿದ್ದಾರೆ. ಜೊತೆಗೆ ಊರ್ವಶಿಯನ್ನು ತರಾಟೆಗೆ ತೆಗೆದುಕೊಂಡದ್ದರು.

     

    ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆದರೆ, ಇದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈ ಮಧ್ಯೆ ಇಬ್ಬರ ನಡುವೆ ಬ್ರೇಕಪ್ ಆಗಿದೆ ಎನ್ನಲಾಯಿತು. ನಟಿ ಊರ್ವಶಿ ಈ ಹಿಂದೆ ಅವರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡುವಾಗ ರಿಷಬ್ ಪಂತ್ ನನ್ನ ಭೇಟಿ ಮಾಡಲು ಹಲವು ಗಂಟೆ ಕಾದಿದ್ದರು ಎಂದಿದ್ದರು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಬಗ್ಗೆ ಕ್ರಿಕೆಟಿಗ ರಿಷಬ್ ಕೂಡ ನಟಿಗೆ ಖಡಕ್ ಆಗಿ ತಿರುಗೇಟು ನೀಡಿದ್ದರು.

  • ಕಾವಿ ವೇಷದಲ್ಲಿ ಮನೆಗೆ ನುಗ್ಗಿ ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದರೋಡೆ

    ಕಾವಿ ವೇಷದಲ್ಲಿ ಮನೆಗೆ ನುಗ್ಗಿ ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದರೋಡೆ

    – ಸಾರ್ವಜನಿಕರಿಂದ ಅಮಾಯಕ ಕಾವಿಧಾರಿ ಮೇಲೆ ಹಲ್ಲೆ

    ಚಿಕ್ಕಮಗಳೂರು: ಸಾಧು ಸಂತರಂತೆ ಕಾವಿ ಧರಿಸಿ ಮನೆಯೊಂದಕ್ಕೆ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ (Gold) ಕಳ್ಳತನ ಮಾಡಿದ ಘಟನೆ ತರೀಕೆರೆಯಲ್ಲಿ (Tarikere) ನಡೆದಿದೆ.

    ನಾಲ್ವರು ಕಾವಿಧಾರಿಗಳು ಮಹಿಳೆಯ ಮನೆಗೆ ಬಂದಿದ್ದಾರೆ. ಬಳಿಕ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯ ಎಚ್ಚರ ತಪ್ಪಿಸಿ, ಮಹಿಳೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಮಹಿಳೆಗೆ ಎಚ್ಚರವಾದ ಮೇಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆ ನೆರೆಹೊರೆಯವರಿಗೆ ನಡೆದ ಘಟನೆ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್‌ಗೆ ಟ್ರಕ್ ಡಿಕ್ಕಿ – 9 ಮಂದಿ ದುರ್ಮರಣ

    ಕಳ್ಳರನ್ನು ಹುಡುಕಿ ಹೋದ ಜನ, ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕ ಬುಡುಬುಡುಕೆ ಕಾವಿಧಾರಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆತ ತಪ್ಪಿತಸ್ಥನಲ್ಲ ಎಂಬುದು ತಿಳಿದು ಬಂದಿದೆ.

    ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ತಾಲೂಕಿನಲ್ಲಿ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಮಾಜಿ ಮೇಯರ್ ಮನೆಯಲ್ಲಿ 1.29 ಕೋಟಿ ರೂ. ಮೌಲ್ಯದ ವಸ್ತುಗಳ ಕಳ್ಳತನ

  • ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

    ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

    ಬೆಂಗಳೂರು: ‌ಶ್ರೀಮಂತರ ರೀತಿಯಲ್ಲೇ ಶೋಕಿಯಿಂದ ಬಂದು, ಚಿನ್ನ ಖರೀದಿಸಿ ವಂಚಿಸುತ್ತಿದ್ದ ಖತರ್ನಾಕ್‌ ಜೋಡಿಯೊಂದನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು. ಶ್ರೀಮಂತರಂತೆ ಟಿಪ್‌ಟಾಪ್‌ ಆಗಿ ಚಿನ್ನದ ಅಂಗಡಿಗೆ ಬಂದ ಜೋಡಿ, ಚಿನ್ನ ಖರೀದಿಸೋದ್ರಲ್ಲೇ (Gold Purchase) ಬ್ಯುಸಿಯಾಗಿರುತ್ತಿತ್ತು. ಅಂಗಡಿ ಮಾಲೀಕರು ಈ ಜೋಡಿ ಕೇಳಿದ್ದನ್ನೆಲ್ಲಾ ಕೊಡುತ್ತಿದ್ದರು. ಒಳ್ಳೆಯ ವ್ಯಾಪಾರ ಆಗ್ತಿತ್ತು ಅಂದುಕೊಳ್ಳುತ್ತಿದ್ದ ಚಿನ್ನದಂಗಡಿ ಮಾಲೀಕನ ಖುಷಿ ಇರುತ್ತಿದ್ದದ್ದು ಕೇವಲ ಅರ್ಧಗಂಟೆ ಮಾತ್ರ. ಈ ಜೋಡಿ ಶಾಪಿಂಗ್‌ ಮಾಡ್ತಿದ್ದ ರೀತಿ ನೋಡಿ, ಅಂಗಡಿ ಮಾಲೀಕರೇ ಬೆಚ್ಚಿ ಬೀಳುತ್ತಿದ್ದರು. ಇಂತಹ ಜೋಡಿ ತಗಲಾಕ್ಕೊಂಡಿದ್ದು ಹೇಗೆ ಅನ್ನೋ ಸ್ಟೋರಿ ಇಲ್ಲಿದೆ.

    ಡಿಜಿಟಲ್‌ ಪೇಮೆಂಟ್‌ ಆ್ಯಪ್‌ಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಫೇಕ್‌ ಪೇಮೆಂಟ್‌ ಆ್ಯಪ್‌ ( Fake Payment App) ಮೂಲಕ ಹಣ ಪಾವತಿ ಮಾಡಿರುವುದಾಗಿ ತೋರಿಸಿ, ವಂಚಿಸುತ್ತಿದ್ದರು. ಅದೇ ರೀತಿ ಬ್ಯಾಡರಹಳ್ಳಿ ವ್ಯಾಪ್ತಿಯ ಆಭರಣದ ಅಂಗಡಿಯಲ್ಲೂ ಅದೇ ರೀತಿ ನಾಟಕ ಮಾಡಿ ಎಸ್ಕೇಪ್‌ ಆಗಿದ್ದರು. 15 ದಿನಗಳ ಬಳಿಕ ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

    ಹೇಗಿದೆ ನೋಡಿ ಥ್ರಿಲ್ಲಿಂಗ್‌ ಸ್ಟೋರಿ:
    15 ದಿನದ ಹಿಂದೆ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಅಂಡ್‌ ಜ್ಯೂವೆಲರ್ಸ್‌ ಆಭರಣ ಅಂಗಡಿಗೆ ಈ ಜೋಡಿ ಬಂದಿತ್ತು. 1.65 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದಾರೆ. ಬಳಿಕ ಆನ್‌ಲೈನ್‌ ಮೂಲಕ ಹಣ ಪಾವತಿಸಿ ಹೊರಟಿದ್ದಾರೆ. ಹಣ ಪಾವತಿಸಿದ ಸಂದೇಶವನ್ನು ಮಾಲೀಕರಿಗೆ ತೋರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅಂಗಡಿ ಮಾಲೀಕ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

    ಘಟನೆ ಸಂಬಂಧ ಅಂಗಡಿ ಮಾಲೀಕ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರತು ತನಿಖೆ ಆರಂಭಿಸಿದ್ದ ಪೊಲೀಸರು 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 1.30 ಲಕ್ಷ ಚಿನ್ನ ಅಡಮಾನ ಇಟ್ಟಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಇದೇ ರೀತಿ ಹಲವು ಚಿನ್ನದ ಅಂಗಡಿಗಳಲ್ಲಿ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.

  • ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

    ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

    ಬೆಂಗಳೂರು: ಚಿನ್ನ ಅಂದ್ರೇ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮುಂದಿನ ತಿಂಗಳು ಮದುವೆ ಸೀಜನ್ ಆರಂಭವಾಗಿದ್ದು, ಸಾಕಷ್ಟು ಮದುವೆ, ಶುಭ ಸಮಾರಂಭಗಳು ನಡೆತ್ತವೆ. ಈ ಟೈಮ್ ನಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದ್ದು, ಎಲ್ಲಾ ರೆರ್ಕಾಡ್‍ಗಳನ್ನ ಬ್ರೇಕ್ ಮಾಡಿದೆ.

    ಬಡವರು ಹಾಗೂ ಮಧ್ಯಮ ಪಾಲಿನ ಜನರಿಗೆ ಗಗನ ಕುಸುಮವಾಗಿದೆ. ಭಾನುವಾರ ಬಂಗಾರದ ರೇಟ್ (Gold & Silver Rate) ಚಿನಿವಾರಪೇಟೆಯ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರವನ್ನು ಕ್ರಾಸ್ ಮಾಡಿದೆ.

    ನಿನ್ನೆ ಚಿನ್ನ, ಬೆಳ್ಳಿಯ ರೇಟ್ ಎಷ್ಟಿತ್ತು?
    * 24 ಕ್ಯಾರೆಟ್ 10 ಗ್ರಾಂ ಚಿನ್ನ- 67,800 ರೂ.
    * 22 ಕ್ಯಾರೆಟ್ 10 ಗ್ರಾಂ ಚಿನ್ನ- 61,100 ರೂ.
    * 1 ಕೆ.ಜಿ ಬೆಳ್ಳಿ- 75,000 ರೂ.

    ಇದೊಂದು ಆಲ್ ಟೈಮ್ ಹೈಯೆಸ್ಟ್ ರೆರ್ಕಾಡ್ ಆಗಿದೆ. ಬಂಗಾರ ಯಾವತ್ತೂ ಈ ರೇಟ್‍ಗೆ ತಲುಪಿರಲಿಲ್ಲ. ಮುಂದಿನ ತಿಂಗಳಿನಿಂದ ಮದುವೆ ಸೀಜನ್ ಇದ್ದು, ಅಕ್ಷಯ ತೃತೀಯಕ್ಕೂ ಚಿನ್ನಕ್ಕೆ ಡಿಮ್ಯಾಂಡ್ ಇರೋದ್ರಿಂದ ಈ ರೇಟ್ ಇದೇ ತರಹ ಮುಂದುವರಿಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಹೇಳುತ್ತಾರೆ.

    ದರ ಏರಿಕೆಗೆ ಕಾರಣಗಳೇನು?: ಅಮೆರಿಕದ ಡಾಲರ್ ದುರ್ಬಲವಾಗಿರೋದು. ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಗಾರದ ಮೇಲೆ ಇನ್ವೆಸ್ಟ್ ಮಾಡ್ತಾ ಇರೋದು ಚಿನ್ನದ ಪೂರೈಕೆಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ

    ಶುಭ ಸಮಾರಂಭಗಳ ಹೊತ್ತಲ್ಲಿ ಬಂಗಾರದ ಬೆಲೆ ಏರಿಕೆಯಾಗಿರೋದು ಗ್ರಾಹಕರಲ್ಲಿ ಆತಂಕ ತಂದಿದೆ. ಮದುವೆಗೆ ಆಭರಣಗಳನ್ನು ಮಾಡಿಸೋದು ಹೇಗೆ ಅಂತಾ ಚಿಂತಿತರಾಗಿದ್ದಾರೆ. ಒಟ್ಟಿನಲ್ಲಿ ಚಿನ್ನದ ರೇಟ್ ಮತ್ತಷ್ಟು ಗಗನಕ್ಕೆ ಏರುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಮತ್ತೊಂದು ಬರೆ ಬಿದ್ದಿದೆ.

  • ಕೆಜಿ ಚಿನ್ನ ಕದ್ದು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಸೌಮ್ಯ ಶೆಟ್ಟಿ ಬಂಧನ

    ಕೆಜಿ ಚಿನ್ನ ಕದ್ದು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಸೌಮ್ಯ ಶೆಟ್ಟಿ ಬಂಧನ

    ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಪ್ರಕರಣ ಒಂದು ರೀತಿಯಲ್ಲಿ ಪೊಲೀಸರಿಗೆ ತಲೆಬಿಸಿಯಾಗಿದ್ದರೆ, ಮತ್ತೊಂದು ಕಡೆ ಕೆಜಿ ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ತೆಲುಗು ನಟಿ ಸೌಮ್ಯ ಶೆಟ್ಟಿ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಪರಿಚಿತರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಕದ್ದು ಸೌಮ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

    ತೆಲುಗು ಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟಿಯಾಗಿರುವ ಸೌಮ್ಯ, ನಿವೃತ್ತ ಅಂಚೆ ಇಲಾಖೆಯ ನೌಕರರ ಮಗಳ ಜೊತೆ ಸ್ನೇಹವಿತ್ತು. ಆಗಾಗ್ಗೆ ಮನೆಗೆ ಬರುತ್ತಿದ್ದಳು ಸೌಮ್ಯ. ಆ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ, ವಾಶ್ ರೂಮ್ ಗೆ ಹೋಗುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ದೂರು ನೀಡಲಾಗಿದೆ.

    ತಮ್ಮ ಮನೆಗೆ ಬರುತ್ತಿದ್ದ ಸೌಮ್ಯ, ಆಗಾಗ್ಗೆ ಚಿನ್ನ ಕಳ್ಳತನ ಮಾಡುವುದು ಮನೆಯವರ ಗಮನಕ್ಕೆ ಬಂದಿಲ್ಲ. ಮದುವೆಗೆ ಹೋಗಲು ಆಭರಣ ಹುಡುಕಿದಾಗ ಮಾತ್ರ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡು ಪೊಲೀಸ್ ರಿಗೆ ದೂರು ನೀಡಿದ್ದಾರೆ. ಸೌಮ್ಯ ತಮ್ಮ ಮನೆಗೆ ಬರುತ್ತಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊನೆಗೂ ಸೌಮ್ಯಳನ್ನು ಪತ್ತೆ ಮಾಡಿರೋ ವಿಶಾಖಪಟ್ಟಣಂ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

  • ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

    ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

    ಅಯೋಧ್ಯೆ: ಬಾಲರಾಮನ ಮಂದಿರಕ್ಕೆ (Ayodhya Ram Mandir)  25 ಕೆಜಿ ಚಿನ್ನ (Gold) ಮತ್ತು ಬೆಳ್ಳಿಯ ಆಭರಣ ಸೇರಿದಂತೆ ಸುಮಾರು 25 ಕೋಟಿ ರೂ. ದೇಣಿಗೆ ಬಂದಿದೆ ಎಂದು ಟ್ರಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ರಾಮಮಂದಿರ ಟ್ರಸ್ಟ್‌ನ ಅಧಿಕಾರಿ ಪ್ರಕಾಶ್ ಗುಪ್ತಾ ಮಾತನಾಡಿ, 25 ಕೋಟಿ ರೂ. ಮೊತ್ತದಲ್ಲಿ ಚೆಕ್‍ಗಳು, ಡ್ರಾಫ್ಟ್‌ಗಳು ಮತ್ತು ದೇವಸ್ಥಾನದ ಟ್ರಸ್ಟ್‌ನ ಕಚೇರಿಯಲ್ಲಿ ಠೇವಣಿ ಮಾಡಿದ ನಗದು ಮತ್ತು ಪೆಟ್ಟಿಗೆಗಳಲ್ಲಿ ಹಾಕಲಾದ ಕಾಣಿಕೆ ಸೇರಿದೆ. ಇನ್ನೂ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಮಾಡಿದ ಆನ್‍ಲೈನ್ ವಹಿವಾಟಿನ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಜನಸಾಗರ- ರಾಮಲಲ್ಲಾನ ದರ್ಶನಕ್ಕೆ ಓಡೋಡಿ ಬರುತ್ತಿರೋ ಭಕ್ತರು

    ಜನವರಿ 23 ರಿಂದ ಒಟ್ಟು 60 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ. ರಾಮಭಕ್ತರ ಶ್ರದ್ಧೆ ಎಷ್ಟರಮಟ್ಟಿಗಿದೆ ಎಂದರೆ ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಬಳಸಲಾಗದಷ್ಟು ಬೆಳ್ಳಿ ಮತ್ತು ಚಿನ್ನದಿಂದ ಮಾಡಿದ ವಸ್ತುಗಳನ್ನು ರಾಮಲಲ್ಲಾಗೆ ದಾನ ಮಾಡುತ್ತಿದ್ದಾರೆ. ಇಷ್ಟಾದರೂ ಭಕ್ತರ ಭಕ್ತಿಯನ್ನು ಪರಿಗಣಿಸಿ ರಾಮಮಂದಿರ ಟ್ರಸ್ಟ್ ಚಿನ್ನಾಭರಣ, ಪಾತ್ರೆ, ಸಾಮಗ್ರಿಗಳನ್ನು ಸ್ವೀಕರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಇನ್ನೂ ರಾಮನವಮಿಯಂದು 50 ಲಕ್ಷ ಜನ ಭಕ್ತರು ಸೇರುವ ಸಾಧ್ಯತೆ ಇದೆ. ಆ ಸಮಯದಲ್ಲಿ ದೇಣಿಗೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ವೇಳೆ ಭಕ್ತರು ನೀಡಿದ ಕಾಣಿಕೆಯನ್ನು ಎಣಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಾಲ್ಕು ಸ್ವಯಂಚಾಲಿತ ಹೈಟೆಕ್ ಯಂತ್ರಗಳನ್ನು ಸ್ಥಾಪಿಸಿದೆ ಎಂದು ಅವರು ತಿಳಿಸಿದ್ದಾರೆ.

    ರಶೀದಿಗಳನ್ನು ನೀಡಲು ಟ್ರಸ್ಟ್‌ನಿಂದ ಹತ್ತಾರು ಗಣಕೀಕೃತ ಕೌಂಟರ್‌ಗಳನ್ನು ಮಾಡಲಾಗಿದೆ. ರಾಮಮಂದಿರ ಟ್ರಸ್ಟ್‌ನಿಂದ ದೇವಾಲಯದ ಆವರಣದಲ್ಲಿ ಹೆಚ್ಚುವರಿ ಕಾಣಿಕೆ ಪೆಟ್ಟಿಗೆಗಳನ್ನು ಇರಿಸಲಾಗುತ್ತಿದೆ. ಶೀಘ್ರದಲ್ಲೇ ರಾಮಮಂದಿರದ ಆವರಣದಲ್ಲಿ ದೊಡ್ಡ ಮತ್ತು ಸುಸಜ್ಜಿತ ಎಣಿಕೆ ಕೊಠಡಿಯನ್ನು ನಿರ್ಮಿಸಲಾಗುತ್ತದೆ. ಇನ್ನೂ ರಾಮಲಲ್ಲಾಗೆ ಉಡುಗೊರೆಯಾಗಿ ಸ್ವೀಕರಿಸಿದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಅಮೂಲ್ಯ ವಸ್ತುಗಳ ಮೌಲ್ಯಮಾಪನ ಮತ್ತು ಅವುಗಳ ನಿರ್ವಹಣೆಗೆ ಭಾರತ ಸರ್ಕಾರದ ಟಂಕಸಾಲೆಗೆ ಹಸ್ತಾಂತರಿಸಲಾಗಿದೆ ಎಂದು ರಾಮಮಂದಿರ ಟ್ರಸ್ಟ್‌ನ ಟ್ರಸ್ಟಿ ಅನಿಲ್ ಮಿಶ್ರಾ ಹೇಳಿದ್ದಾರೆ.

    ರಾಮಮಂದಿರದ ದೇಣಿಗೆ, ಕೊಡುಗೆಗಳು, ಚೆಕ್‍ಗಳು, ಡ್ರಾಫ್ಟ್‌ಗಳು ಮತ್ತು ನಗದು ಸಂಗ್ರಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಎಸ್‍ಬಿಐ ತೆಗೆದುಕೊಳ್ಳುತ್ತದೆ. ದೇಣಿಗೆ ನೀಡಿದ ಹಣವನ್ನು ಪ್ರತಿದಿನ ಎರಡು ಪಾಳಿಗಳಲ್ಲಿ ಎಣಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ

  • ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ

    ಚಿನ್ನದ ಅಂಗಡಿಗೆ ಕನ್ನ – 250 ಗ್ರಾಂ ಚಿನ್ನ, 1.8 ಲಕ್ಷ ರೂ. ಹಣದೊಂದಿಗೆ ಪರಾರಿ

    ಬೆಂಗಳೂರು: ಚಿನ್ನದ ಅಂಗಡಿಗೆ (Gold) ಕನ್ನ ಹಾಕಿದ ಕಳ್ಳರು ಲಾಕರ್‌ನಲ್ಲಿದ್ದ 250 ಗ್ರಾಂ ಚಿನ್ನ, 1.8 ಲಕ್ಷ ರೂ. ನಗದು (Cash) ದೋಚಿ ಪರಾರಿಯಾದ ಘಟನೆ ನೆಟ್ಟಕಲ್ಲಪ್ಪ ಸರ್ಕಲ್‌ ಬಳಿ ನಡೆದಿದೆ.

    ಬಸವನಗುಡಿ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಬೆನಕ ಗೋಲ್ಡ್‌ನ (Benaka Gold) ಮೂರು ಕಬ್ಬಿಣದ ಗೇಟ್ ಬೀಗ ಮುರಿದು ಕೃತ್ಯ ಮಾಡಲಾಗಿದೆ.  ಇದನ್ನೂ ಓದಿ: ಬೆಂಗಳೂರಿಗೆ ಫೆಬ್ರವರಿಯಲ್ಲೇ ಸಮಸ್ಯೆ – ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಸಮಯ ನಿಗದಿ

    ಬುಧವಾರ ಎಂದಿನಂತೆ ವ್ಯವಹಾರ ಮಾಡಿದ್ದ ಕಂಪನಿಯ ಸಿಬ್ಬಂದಿ ಗ್ರಾಹಕರಿಂದ ಚಿನ್ನಭರಣ ಖರೀದಿ ಮಾಡಿತ್ತು. ಮಧ್ಯರಾತ್ರಿ ಅಂಗಡಿಗೆ ನುಗ್ಗಿದ ಕಳ್ಳರು ಚಿನ್ನ, ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಿ ಸಿಸಿ ಕ್ಯಾಮೆರಾದ ಡಿವಿಆರ್‌ ಅನ್ನು ಪುಡಿ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್‌ ಶಾಲೆ ಮುಂದೆ ಜೈ ಶ್ರೀರಾಮ್ ಘೋಷಣೆ – ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸೇರಿ ಐವರ ವಿರುದ್ಧ FIR

    ಕಳೆದ ಬುಧವಾರ ರಾತ್ರಿ ರಾಮಮೂರ್ತಿ ನಗರದಲ್ಲಿದ್ದ ಬೇನಕ ಗೋಲ್ಡ್‌ಗೆ ಕನ್ನ ಹಾಕಿದ್ದರು. ಈಗ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅಕ್ಕನ ಆಭರಣಗಳ ಮೇಲೆ ತಂಗಿ ಕಣ್ಣು – ರೈಲಿನಲ್ಲೇ ಕೈಚಳಕ ತೋರಿ ಜೈಲು ಪಾಲು!

    ಅಕ್ಕನ ಆಭರಣಗಳ ಮೇಲೆ ತಂಗಿ ಕಣ್ಣು – ರೈಲಿನಲ್ಲೇ ಕೈಚಳಕ ತೋರಿ ಜೈಲು ಪಾಲು!

    ಬೆಂಗಳೂರು: ಸ್ವಂತ ಅಕ್ಕನ ಆಭರಣಗಳನ್ನೇ ಕದ್ದು ತಂಗಿಯೊಬ್ಬಳು ಕದ್ದು ಜೈಲು ಸೇರಿದ ಪ್ರಕರಣವೊಂದು ನಗರದಲ್ಲಿ (Bengaluru) ವರದಿಯಾಗಿದೆ.

    ಅಕ್ಕನ ಜೊತೆ ರೈಲಿನಲ್ಲಿ ಪ್ರಯಾಣ ಮಾಡುವ ವೇಳೆ, ಆಭರಣಗಳ ಮೇಲೆ ಕಣ್ಣು ಹಾಕಿದ್ದ ತಂಗಿ ಕತ್ತಲಲ್ಲಿ ಅಕ್ಕನ ಬ್ಯಾಗ್‍ನಲ್ಲಿ ಕೈಯಾಡಿಸಿ ಆಭರಣ ಕದ್ದಿದ್ದಾಳೆ. ದಂಡು ರೈಲು ನಿಲ್ದಾಣ ಬರುತ್ತಿದ್ದಂತೆ ಸದ್ದಿಲ್ಲದೇ ಚಿನ್ನಾಭರಣ ದೋಚಿ ಏನೂ ಗೊತ್ತಿಲ್ಲದವಳಂತೆ ಸುಮ್ಮನಿದ್ದಳು. ಮನೆಗೆ ಬಂದು ಬ್ಯಾಗ್ ಪರಿಶೀಲಿಸಿದ್ದ ಅಕ್ಕ ಲಲಿತಾಗೆ ಚಿನ್ನಾಭರಣ ಕಳುವಾಗಿರುವುದು ತಿಳಿದಿದೆ. ಇದನ್ನೂ ಓದಿ: ಸಾಲ ಮರುಪಾವತಿ ಮಾಡದ ಸ್ನೇಹಿತ – ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ದಂಪತಿ

    ಆಭರಣ ಕಳವು ಬಗ್ಗೆ ರೈಲ್ವೇ ಪೊಲೀಸರಿಗೆ (Police) ಲಲಿತಾ ದೂರು ನೀಡಿದ್ದಾರೆ. ಪೊಲೀಸರು ಲಲಿತಾಳ ತಂಗಿ ಚಂದ್ರ ಶರ್ಮಾಳ ನಡವಳಿಕೆ ಮೇಲೆ ಅನುಮಾನ ಪಟ್ಟು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಬಂಧಿತಳಿಂದ 8.50 ಲಕ್ಷ ರೂ. ಮೌಲ್ಯದ 152 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

    ಆರೋಪಿ ಚಂದ್ರ ಶರ್ಮಾಳನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖತರ್ನಾಕ್ ಕಳ್ಳನ ಬಂಧನ – 31 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ

  • ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ತಲುಪಿದ ಚಿನ್ನ – ಬರೋಬ್ಬರಿ 65,000ಕ್ಕೆ ಏರಿಕೆ

    ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ತಲುಪಿದ ಚಿನ್ನ – ಬರೋಬ್ಬರಿ 65,000ಕ್ಕೆ ಏರಿಕೆ

    ಬೆಂಗಳೂರು: ಈಗಾಗಲೇ ಮದುವೆ ಸೀಜನ್ಸ್ ಆರಂಭವಾಗಿದ್ದು, ಸಾಕಷ್ಟು ಮದುವೆಗಳು ನಡೆಯುತ್ತಿವೆ. ಆದರೆ ಈ ಸಮಯದಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದೆ. ಅದು ಸಹ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗರಿಷ್ಠ ಬೆಲೆಗೆ ಚಿನ್ನ (Gold) ಏರಿಕೆಯಾಗಿದೆ.

    ಚಿನ್ನ ಕಷ್ಟಕಾಲದ ಆಪದ್ಬಾಂಧವ. ಮಹಿಳೆಯರ ಪಾಲಿಗೆ ಫೇವರೆಟ್. ಆದರೆ ಈ ಚಿನ್ನವನ್ನು ಕೊಳ್ಳುವ ಹಾಗಿಲ್ಲ, ಮುಟ್ಟುವ ಹಾಗಿಲ್ಲ ಎನ್ನುವಂತಾಗಿದೆ. ಬಡವರು ಹಾಗೂ ಮಧ್ಯಮ ವರ್ಗದ ಜನರ ಪಾಲಿಕೆ ಗಗನ ಕುಸುಮವಾಗಿದೆ. ಅದರಲ್ಲೂ ಬಂಗಾರ 65,000 ರೂ.ಗಳ ಗಡಿ ದಾಟಿದ್ದು, ಬೆಳ್ಳಿ 78,000 ರೂ. ದಾಟಿದೆ. ಇದನ್ನೂ ಓದಿ: ಮನೆಬಾಗಿಲಿಗೇ ಅಂಗನವಾಡಿ ಕಾರ್ಯಕರ್ತೆಯರು – ದುಡ್ಡು ಜಮೆಯಾಗದ `ಗೃಹಲಕ್ಷ್ಮಿ’ಯರ ದಾಖಲೆ ಸಂಗ್ರಹ

    ಬುಧವಾರದ ಚಿನ್ನ, ಬೆಳ್ಳಿಯ ದರವನ್ನು ನೋಡುವುದಾದರೆ, 10 ಗ್ರಾಂನ 24 ಕ್ಯಾರೆಟ್ ಚಿನ್ನದ ಬೆಲೆ 65,000 ರೂ., 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 58,500 ರೂ., ಒಂದು ಕೆಜಿ ಬೆಳ್ಳಿಗೆ 78,500 ಸಾವಿರ ರೂ. ಇತ್ತು. ಗುರುವಾರವೂ ಈ ದರ ಮುಂದುವರಿದಿದೆ. ಇದನ್ನೂ ಓದಿ: ನನ್ನ ಅನುವಾದಕರಾಗಿರುವುದು ಅಪಾಯಕಾರಿ ಕೆಲಸ: ರಾಹುಲ್ ಗಾಂಧಿ ಹೀಗಂದಿದ್ಯಾಕೆ..?

    ಈಗ ಮದುವೆ ಸೀಜನ್ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆಯಿದೆ. ಮುಂದೆ ಕ್ರಿಸ್ಮಸ್, ಹೊಸ ವರ್ಷ ಪ್ರಾರಂಭವಾಗುವುದರಿಂದ ಈ ರೇಟ್ ಮುಂದುವರೆಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಚಿನ್ನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಮುಂಬರುವ ವರ್ಷದಲ್ಲಿ 10-15% ಬಂಗಾರದಲ್ಲಿ ಏರಿಕೆಯಾಗಬಹುದು. ಬೆಳ್ಳಿ (Silver) ಕೆ.ಜಿಗೆ 1 ಲಕ್ಷದವರೆಗೆ ಆಗಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಮಾಲೀಕರು ಅಂದಾಜಿಸುತ್ತಿದ್ದಾರೆ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ