Tag: gold

  • ಮದರ್ಸ್ ಡೇಗೆ ಚಿನ್ನ ಖರೀದಿ ಮಾಡೋ ಮಂದಿಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್‍ನ್ಯೂಸ್

    ಮದರ್ಸ್ ಡೇಗೆ ಚಿನ್ನ ಖರೀದಿ ಮಾಡೋ ಮಂದಿಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್‍ನ್ಯೂಸ್

    ಬೆಂಗಳೂರು: ಮೇ 14 ಅಂದರೆ ಇದೇ ಭಾನುವಾರ ತಾಯಂದಿರ ದಿನಾಚರಣೆ. ತಾಯಂದಿರ ದಿನಾಚರಣೆ ನೀವು ಚಿನ್ನ ಖರೀದಿ ಮಾಡುಲು ಮುಂದಾಗಿದ್ದರೆ  ನಿಮಗೆ ರಿಲಯನ್ಸ್ ಜುವೆಲ್ಸ್ ನಿಂದ ಗುಡ್ ನ್ಯೂಸ್.

    ಭಾರತದಲ್ಲಿನ  ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್‍ಗಳಲ್ಲಿ ಒಂದಾಗಿರುವ ರಿಲಯನ್ಸ್ ಜುವೆಲ್ಸ್, ಈ ಬಾರಿ ತಾಯಂದಿರ ದಿನಕ್ಕೆ ಸುಂದರ ಹಾಗೂ ಅಪೂರ್ವ ಸಂಗ್ರಹವನ್ನು ತಂದಿದೆ. ಸಾಂಪ್ರದಾಯಿಕ ಭಾರತೀಯ ಆಭರಣ, ಕಾಲಕ್ಕೆ ತಕ್ಕಂತೆ ಸಮಕಾಲೀನ ವಿನ್ಯಾಸಗಳನ್ನು ಅಭರಣ ಪ್ರಿಯರಿಗಾಗಿ ರೂಪಿಸಿದೆ.

    ತಾಯಂದಿರ ದಿನದ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಜುವೆಲ್ಸ್ ನ ಸಿಇಒ ಸುನಿಲ್ ನಾಯಕ್, ಸಂಸ್ಥೆ ಪ್ರತಿಯೊಬ್ಬ ಮಹಿಳೆಯ ಅಗತ್ಯವನ್ನು ಅರ್ಥ ಮಾಡಿಕೊಂಡಿದ್ದು, ಅನನ್ಯವಾಗಿ ಕಾಣುವ ಅವರ ಬಯಕೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದೆ. ತಾಯಂದಿರ ದಿನಕ್ಕೆ, ನಾವು ಚಿನ್ನ, ವಜ್ರ, ವರ್ಣಮಯ ಹರಳುಗಳು ಹಾಗೂ ಸೂಕ್ಷ್ಮ ಆಭರಣಗಳ ವಿನ್ಯಾಸಗಳನ್ನು ಹೊಂದಿದ್ದು, ನಿಮ್ಮತಾಯಿಯ ಭಾವನೆಯನ್ನು ಅಮೂಲ್ಯಗೊಳಿಸಲು ಇವು ಪರಿಪೂರ್ಣ ಉಡುಗೊರೆಯಾಗಲಿದೆ. ಸ್ಟೈಲ್, ವಿನ್ಯಾಸ ಹಾಗೂ ಮೆಟೀರಿಯಲ್‍ನಲ್ಲಿ ಅನೇಕ ಆಯ್ಕೆಗಳಿದ್ದು, ಪರಿಪೂರ್ಣ ತಾಯಿಗಾಗಿ ಕೈಗೆಟಕುವ ಬೆಲೆಯಲ್ಲಿ ಪರಿಪೂರ್ಣ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

    ರಿಲಯನ್ಸ್ ಜುವೆಲ್ಸ್  ಬಗ್ಗೆ:
    ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 37 ನಗರಗಳಲ್ಲಿ 52 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ.

    ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ. ರಿಲಯನ್ಸ್ ಜುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ.

    ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ನಮ್ಮ ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್‍ಗಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ.

    ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂತಹ ಗ್ರಾಹಕಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್‍ಗಳು ಪ್ರತಿಯೊಂದು ರಿಲಯನ್ಸ್ ಜುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.

    ಸಮೀಪದ ರಿಲಯನ್ಸ್ ಜ್ಯುವೆಲ್ಸ್ ಶೋರೂಮ್ ತಿಳಿಯಲು  ಕ್ಲಿಕ್ ಮಾಡಿ:  http://storelocator.ril.com/jewels,                                  http://www.reliancejewels.com/

     

  • ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

    ಮಂಡ್ಯ: ಸಿಎಂ ಖಡಕ್ ಆದೇಶದ ಬೆನ್ನಲ್ಲೇ ರೈತರಿಗೆ ಬ್ಯಾಂಕ್‍ಗಳಿಂದ ಸರಣಿ ನೋಟಿಸ್

    -ಬರ ಪರಿಹಾರದ ಹಣ ಸಾಲಕ್ಕೆ ವಜಾ

    ಮಂಡ್ಯ: ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡ್ಯದ ಮಳವಳ್ಳಿಯಲ್ಲಿ ಯಾವುದೇ ಬ್ಯಾಂಕ್‍ಗಳು ರೈತರಿಂದ ಸಾಲ ವಸೂಲಿಗೆ ಮುಂದಾಗಬೇಡಿ ಅಂತಾ ಖಡಕ್ ಸಂದೇಶ ನೀಡಿದ್ರು. ಆದ್ರೆ ಮಂಡ್ಯದ ಹಲವು ಬ್ಯಾಂಕ್‍ಗಳು ಈಗಾಗಲೇ ರೈತರಿಗೆ ಸಾಲ ಮರುಪಾವತಿಗೆ ನೋಟೀಸ್ ನೀಡಿವೆ. ಅದ್ರ ಜೊತೆ ಸರ್ಕಾರ ಬರ ಪರಿಹಾರಕ್ಕೆಂದು ನೀಡಿದ್ದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ಕಂಗಾಲಾಗಿರುವ ರೈತ ಸಮುದಾಯ, ಸ್ವಾಮಿ ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕೇಳದೇ ಎಲ್ಲಿದ್ದೀರಿ ಅಂತಾ ಕಣ್ಣೀರು ಹಾಕುತಿದ್ದಾರೆ.

    ಹೌದು. ಒಂದೆಡೆ ಖಾಲಿ ಕಾಲುವೆ. ಮತೊಂದೆಡೆ ಬೆಳೆ ಇಲ್ಲದೆ ಬಣಗುಡುತ್ತಿರೋ ಭೂಮಿ. ಇಂತಹ ಸಂಕಷ್ಟದಲ್ಲಿರುವ ಮಂಡ್ಯ ರೈತರಿಗೆ ಬ್ಯಾಂಕ್‍ಗಳ ನೋಟಿಸ್ ಬೇರೆ. ಇಲ್ಲಿನ ರೈತರು ಒಡವೆ ಅಡವಿಟ್ಟು ಸಾಲ-ಸೋಲ ಮಾಡಿ ಒಂದಿಷ್ಟು ಬೆಳೆ ಬೆಳೆದಿದ್ರು. ಅದು ಮಳೆಯಿಲ್ಲದೆ ಕೈಗೆ ಬರ್ಲಿಲ್ಲ. ಈ ಸಮಸ್ಯೆಗಳ ಅರಿವಿದ್ರೂ ಬ್ಯಾಂಕ್‍ಗಳು ಮಾತ್ರ ನಿಮ್ಮ ಒಡವೆ ಹರಾಜಿಗೆ ಬಂದಿದೆ ಎಂದು ನೋಟಿಸ್ ನೀಡಿವೆ. ಇದ್ರಿಂದ ಕಂಗಾಲಾಗಿರೋ ರೈತರು, ಮುಖ್ಯಮಂತ್ರಿಗಳೇ ನೀವೇ ಒಳ್ಳೇ ಬೆಲೆಗೆ ನಮ್ಮ ಒಡವೆ ತಗೊಂಡು ನಮ್ಮನ್ನ ಕಾಪಾಡಿ ಅಂತಿದ್ದಾರೆ.

    ಮಂಡ್ಯದ ಕೆಲವು ಬ್ಯಾಂಕ್‍ಗಳು ಬರ ಪರಿಹಾರಕ್ಕೆಂದು ರೈತರ ಖಾತೆಗೆ ಹಾಕಿರುವ ಹಣವನ್ನ ಸಾಲಕ್ಕೆ ವಜಾ ಮಾಡಿಕೊಂಡಿವೆ. ಇದ್ರಿಂದ ರೈತರು ಕಣ್ಣೀರು ಹಾಕ್ತಿದ್ದಾರೆ.

    ಯಾವುದೇ ಕಾರಣಕ್ಕೆ ಸಾಲಕ್ಕೆ ಇದನ್ನು ಚುಪ್ತಾ ಮಾಡಿಕೊಳ್ಳಬಾರದೆಂದು ಜಿಲ್ಲಾಡಳಿತ ಈಗಾಗಲೇ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಗಳು ಗಮನಕ್ಕೆ ತಂದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತಾ ಮಂಡ್ಯ ತಹಶೀಲ್ದಾರ್ ಮಾರುತಿ ಪ್ರಸನ್ನ ಹೇಳಿದ್ದಾರೆ.

    ಒಟ್ಟಿನಲ್ಲಿ ರೈತರ ಬದುಕು ದಿನ ದಿನಕ್ಕೂ ಮೂರಾಬಟ್ಟೆಯಾಗ್ತಿದೆ. ಆದ್ರೆ ಜನಪ್ರತಿನಿಧಿಗಳು ಮಾತ್ರ ರಾಜಕಾರಣ ಮಾಡ್ಕೊಂಡು ಕಾಲ ಕಳೆಯುತ್ತಿರೋದು ವಿಪರ್ಯಾಸ.

  • ಕುಖ್ಯಾತ ಕಳ್ಳರ ಬಂಧನ: 40 ಲಕ್ಷ ಮೌಲ್ಯದ 6 ವಾಹನ, 50 ಗ್ರಾಂ ಚಿನ್ನಾಭರಣ ವಶ

    ಕುಖ್ಯಾತ ಕಳ್ಳರ ಬಂಧನ: 40 ಲಕ್ಷ ಮೌಲ್ಯದ 6 ವಾಹನ, 50 ಗ್ರಾಂ ಚಿನ್ನಾಭರಣ ವಶ

    ಬೆಂಗಳೂರು: ತಮಿಳುನಾಡಿನ ವೆಲಂಕಣಿಯಲ್ಲಿ ಮೂವರು ಕುಖ್ಯಾತ ಕಳ್ಳರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಜಯಪ್ರಕಾಶ್ ಅಲಿಯಾಸ್ ಜೆ.ಪಿ, ಸುಜಯ್, ಅಲೆಕ್ಸ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 40 ಲಕ್ಷ ಮೌಲ್ಯದ ಆರು ವಾಹನ ಹಾಗೂ 50 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತ ಕಳ್ಳರನ್ನು ಕಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದಾಗ ಮತ್ತೊಂದು ಕಳ್ಳತನ ಕೃತ್ಯ ಎಸಗಿರೋ ಬಗ್ಗೆ ಬಯಲಾಗಿದೆ. ತಮಿಳುನಾಡಿನ ವೆಲಂಕಣಿ ಚರ್ಚ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮತ್ತು ಚಿನ್ನಾಭರಣ ಕಳವು ಮಾಡಿರೋ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಚರ್ಚ್ ನಲ್ಲಿ ಕಳ್ಳತನ ಮಾಡಿದ್ದ ಅಮೆರಿಕ ಕರೆನ್ಸಿ ಮತ್ತು ಚಿನ್ನಾಭರಣಗಳು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳು ಜೈಲಿನಲ್ಲಿ ಪರಿಚಯವಾಗಿ ಕಳ್ಳತನ ದಂಧೆಯಲ್ಲಿ ತೊಡಗಿದ್ದರು. ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ವಿಲ್ಸನ್ ಗಾರ್ಡನ್, ಚಾಮರಾಜಪೇಟೆ, ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇರಳದ ಅರ್ಥಾಕುಲಂ, ಎಡಪಳ್ಳಿ ಮತ್ತು ತ್ರಿಶೂರ್ ಚರ್ಚ್ ಗಳಲ್ಲಿ ಕೂಡ ಆರೋಪಿಗಳು ತಮ್ಮ ಕೈಚಳಕ ತೋರಿಸಿದ್ದರು.

  • ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು ಕದ್ದು ಸಿಕ್ಕಿಬಿದ್ದ ಅಧಿಕಾರಿ!

    ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು ಕದ್ದು ಸಿಕ್ಕಿಬಿದ್ದ ಅಧಿಕಾರಿ!

    ರಾಯಚೂರು: ದೇಶದ ಏಕೈಕ ಬಂಗಾರ ಉತ್ಪಾದಿಸುವ ಚಿನ್ನದಗಣಿ ಕಂಪನಿ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಅಧಿಕಾರಿಯೇ ಅದಿರು ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಭೂತಜ್ಞ ಗಣೇಶ್ ಒಂದು ಕೆ.ಜಿ. 900 ಗ್ರಾಂ ಚಿನ್ನದ ಅದಿರನ್ನ ಹೊರಗಡೆ ಸಾಗಿಸುತ್ತಿದ್ದಾಗ ಸೆಕ್ಯೂರಿಟಿ ಗಾರ್ಡ್‍ಗೆ ಸಿಕ್ಕಿಬಿದ್ದಿದ್ದಾನೆ. ಗಣಿಗಾರಿಕೆಯಲ್ಲಿ ತೆಗೆದ ಅದಿರನ್ನ ಪ್ರಯೋಗಾಲಯಕ್ಕೆ ಅಥವಾ ಮಿಲ್‍ಗೆ ಕಳುಹಿಸಿದೆ ಸ್ವತಃ ತಾನೇ ತೆಗೆದುಕೊಂಡು ಹೊರ ಹೋಗುತ್ತಿದ್ದಾಗ ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

    ಹಟ್ಟಿ ಚಿನ್ನದಗಣಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ್ ಸಂಗೂರಮಠ್ ಅವರು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಗಣೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

     

     

  • ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

    ಕಾಲಿಟ್ಟ ಮನೆಯಲ್ಲೇ ಕಳ್ಳಿಯಾದ ಸೊಸೆ- 1.8 ಕೆಜಿಯಷ್ಟು ಚಿನ್ನ ಕದ್ದವಳು ಜೈಲುಪಾಲು

    ದೊಡ್ಡಬಳ್ಳಾಪುರ: ಯಾರೋ ಅಪರಿಚಿತ ಮಹಿಳೆ ತನ್ನನ್ನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದಳು ಅಂತ ಕಥೆ ಕಟ್ಟಿದ್ದ ಐನಾತಿ ಸೊಸೆ ಇದೀಗ ಜೈಲು ಸೇರಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೆಳಕಿಗೆ ಬಂದಿದೆ.

    ಫೆಬ್ರವರಿ 19 ರಂದು ದೊಡ್ಡಬಳ್ಳಾಪುರದ ಶಾಂತಿ ನಗರದ ವಿಶ್ವನಾಥ್ ಎಂಬವರ ಮನೆಯಲ್ಲಿ ಸೊಸೆ ಕಾವ್ಯಾ ಒಂಟಿಯಾಗಿದ್ದಾಗ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳುವಾಗಿತ್ತು. ಘಟನೆ ನಡೆದ ದಿನ ಮನೆಯವರೆಲ್ಲರೂ ಸಂಬಂಧಿಕರ ಮದುವೆಗೆ ಅಂತ ತುಮಕೂರಿನ ಶಿರಾಗೆ ತೆರಳಿದ್ದರು. ಕಾವ್ಯಾ ಗಂಡ ವಿಶ್ವನಾಥ್ ತಿರುಪತಿಗೆ ತೆರಳಿದ್ರು. ಈ ಬಗ್ಗೆ ಕೇಳಿದ್ರೆ ಯಾರೋ ಅಪರಿಚಿತ ಮಹಿಳೆ ವಿವಾಹ ಅಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಬಂದು ದರೋಡೆ ಮಾಡಿದಳು ಅಂತ ಮನೆಯವರು ಹಾಗೂ ಪೊಲೀಸರ ಮುಂದೆ ಕಾವ್ಯಾ ಕಥೆ ಕಟ್ಟಿ ಹೇಳಿಕೆ ಕೊಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ದೊಡ್ಡಬಳ್ಳಾಪುರ ನಗರ ಪೊಲೀಸರಿಗೆ ಮನೆಯ ಸೊಸೆ ಕಾವ್ಯಾಳೇ ಕಳ್ಳಿ ಅಂತ ತಿಳಿದುಬಂದಿದೆ.

    ದರ್ಗಾಜೋಗಹಳ್ಳಿಯ ನಿವಾಸಿ ಮೆಹ್‍ಬೂಬ್ ಪಾಷಾ ಎಂಬವನ ಜೊತೆ ಸೇರಿ ಸಂಚು ರೂಪಿಸಿದ್ದ ಕಾವ್ಯಾ, ಮನೆಯಲ್ಲಿದ್ದ 1 ಕೆಜಿ 800 ಗ್ರಾಂ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ನಗದು ದೋಚಿ ಮೆಹ್‍ಬೂಬ್ ಪಾಷಾ ಮನೆಯಲ್ಲಿ ಇಟ್ಟಿದ್ದಳು. ಸದ್ಯ ಅಸಲಿ ಕಳ್ಳಿ ಕಾವ್ಯಾಳೇ ಅಂತ ತಿಳಿದುಬಂದಿದ್ದು, ಬಂಧಿತರಿಂದ 1 ಕೆಜಿ 800 ಗ್ರಾಂ ಚಿನ್ನಾಭರಣ ಹಾಗೂ 45,000 ಸಾವಿರ ರೂ. ನಗದು ಹಣವನ್ನ ಪೊಲೀಸರು ಜಪ್ತಿ ಮಾಡಿ ಕಾವ್ಯಾ ಹಾಗೂ ಮೆಹ್‍ಬೂಬ್ ಪಾಷಾನನ್ನ ಜೈಲಿಗೆ ಕಳುಹಿಸಿದ್ದಾರೆ.

     

  • ವಿಮಾನದಲ್ಲಿ ಬಂದಿಳಿದ ಈ ಮಹಿಳೆ ಚಿನ್ನ ಸಾಗಾಟ ಮಾಡ್ತಿದ್ದಿದ್ದು ಹೇಗೆ ಗೊತ್ತಾ..!?

    ವಿಮಾನದಲ್ಲಿ ಬಂದಿಳಿದ ಈ ಮಹಿಳೆ ಚಿನ್ನ ಸಾಗಾಟ ಮಾಡ್ತಿದ್ದಿದ್ದು ಹೇಗೆ ಗೊತ್ತಾ..!?

    ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಚೆನ್ನೈ ಮೂಲದ ಮಹಿಳೆಯೊಬ್ಬರು ಬ್ಯಾಂಕಾಂಕ್‍ನಿಂದ ಬೆಂಗಳೂರಿಗೆ ಬಂದಿಳಿದ್ದಳು. ಈ ವೇಳೆ ಕಸ್ಟಮ್ಸ್ ಹಾಗೂ ಏರ್ ಇಂಟಲಿಜೆನ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಮಹಿಳೆ 12.48 ಮೌಲ್ಯದ ಚಿನ್ನ ಸಾಗಾಟ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ. ಈಕೆ ತನ್ನ ಗುದದ್ವಾರದ ಮೂಲಕ ಚಿನ್ನ ಸಾಗಾಟ ಮಾಡುತ್ತಿದ್ದಳು ಎನ್ನಲಾಗಿದೆ. ಸದ್ಯ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಮತ್ತೊಂದು ಪ್ರಕರಣದಲ್ಲಿ ಕಾರ್ ಸ್ವಚ್ಛಗೊಳಿಸುವ ಉಪಕರಣದಲ್ಲಿ ಚಿನ್ನ ತಂದಿದ್ದವನನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ. ಎಮಿರೇಟ್ಸ್ ಪ್ಲೈಟ್‍ನಲ್ಲಿ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಅಸಾಮಿ ಕಬ್ಬಿಣದ ಉಪಕರಣದಲ್ಲಿ 14 ಲಕ್ಷದ ಚಿನ್ನದ ಬಿಸ್ಕೆಟ್ಸ್ ಇಟ್ಟು ತಂದಿದ್ದ. ಒಟ್ಟು ನಾಲ್ಕು ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 37.21 ಲಕ್ಷ ಮೌಲ್ಯದ ಚಿನ್ನವನ್ನ ಜಪ್ತಿ ಮಾಡಿದ್ದಾರೆ.

  • ಏ.1ರಿಂದ 3 ಲಕ್ಷಕ್ಕಿಂತ ಹೆಚ್ಚು ಹಣ ಪಡೆದ್ರೆ 3 ಲಕ್ಷ ರೂ. ಫೈನ್ ನೀವೇ ಕಟ್ಬೇಕು!

    ನವದೆಹಲಿ: ಏಪ್ರಿಲ್ 1ರಿಂದ ಯಾವುದೇ ಕಾರಣಕ್ಕೂ ನೀವು 3 ಲಕ್ಷಕ್ಕಿಂತ ನಗದು ಹಣ ಸ್ವೀಕರಿಸಬೇಡಿ. ಒಂದು ವೇಳೆ 3 ಲಕ್ಷಕ್ಕಿಂತ ಹೆಚ್ಚು ಹಣ ಕೊಟ್ಟರೆ ಅಷ್ಟೇ ಮೊತ್ತದ ಫೈನ್ ಕಟ್ಟಬೇಕಾಗುತ್ತದೆ. ಕಪ್ಪು ಹಣದ ವಹಿವಾಟಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಘೋಷಿಸಿರುವ 3 ಲಕ್ಷ ರೂ. ನಗದು ವಹಿವಾಟು ಮಿತಿ ಏಪ್ರಿಲ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.

    ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಗದಿತ ಮಿತಿಗಿಂತ ಹೆಚ್ಚು ಹಣದ ನಗದು ವಹಿವಾಟು ನಡೆಸಿದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ. ಇದು ನೀವು ಸ್ವೀಕರಿಸಿದ ಹಣದ ಮೊತ್ತಕ್ಕೆ ಸರಿಸಮನಾಗಿರಬಹುದು ಎಂದು ಹೇಳಿದ್ದಾರೆ.

    ಒಂದು ವೇಳೆ ನೀವು 4 ಲಕ್ಷ ರೂ. ವಹಿವಾಟು ನಡೆಸಿದರೆ ದಂಡ 4 ಲಕ್ಷ ರೂಪಾಯಿ. ನೀವು 50 ಲಕ್ಷ ರೂ.ಗಳ ವಹಿವಾಟು ನಡೆಸಿದರೆ ದಂಡ 50 ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಹಣವನ್ನು ಸ್ವೀಕರಿಸಿದ ವ್ಯಕ್ತಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು. ಯಾರಾದರೂ ನಗದು ಹಣ ನೀಡಿ ದುಬಾರಿ ವಾಚ್ ಖರೀದಿಸಿದರೆ, ಹಣವನ್ನು ಸ್ವೀಕರಿಸಿದ ಅಂಗಡಿಯ ಮಾಲೀಕರೇ ದಂಡ ಪಾವತಿಸಬೇಕಾಗುತ್ತದೆ. ಭಾರೀ ಪ್ರಮಾಣದ ಹಣದ ವಹಿವಾಟು ನಡೆಸುವುದನ್ನು ತಡೆಗಟ್ಟುವುದೇ ನಮ್ಮ ಉದ್ದೇಶ ಎಂದು ಹೇಳಿದರು.

    ಈ ಹಿಂದೆ ಲೆಕ್ಕ ತೋರಿಸದ ಹಣವನ್ನು ಕೆಲವರು ಪ್ರವಾಸ, ದುಬಾರಿ ಕಾರು, ವಾಚ್ ಹಾಗೂ ಆಭರಣ ಖರೀದಿಗೆ ಬಳಸುತ್ತಿದ್ದರು. ಆದರೆ ಇನ್ನು ಮುಂದೆ ಈ ನಿಯಮಗಳು ಇದಕ್ಕೆ ತಡೆಯೊಡ್ಡಲಿವೆ. ಈ ಮೂಲಕ ಕಪ್ಪು ಹಣ ಚಲಾವಣೆಗೆ ಬ್ರೇಕ್ ಬೀಳಲಿದೆ ಎಂದು ಹೇಳಿದರು. ಹೊಸ ನಿಯಮಗಳು ಬ್ಯಾಂಕಿಂಗ್ ಕಂಪೆನಿಗಳು, ಪೋಸ್ಟ್ ಆಫೀಸ್ ಸೇವಿಂಗ್ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಿಗೆ ಅನ್ವಯವಾಗುವುದಿಲ್ಲ.