Tag: gold

  • ಪೂಜೆಯ ನೆಪದಲ್ಲಿ ಚಿನ್ನಾಭರಣ ದೋಚಿದ್ದ ಖತರ್‌ನಾಕ್‌ ಜೋಡಿ ಅಂದರ್‌!

    ಪೂಜೆಯ ನೆಪದಲ್ಲಿ ಚಿನ್ನಾಭರಣ ದೋಚಿದ್ದ ಖತರ್‌ನಾಕ್‌ ಜೋಡಿ ಅಂದರ್‌!

    ದಾವಣಗೆರೆ: ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು, ಪೂಜೆ ಮಾಡುವ ನೆಪದಲ್ಲಿ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Gold) ದೋಚಿದ್ದ ಇಬ್ಬರು ಆರೋಪಿಗಳನ್ನು ಹರಿಹರ (Harihar) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಒಡಿಶಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ರುಕ್ಸಾನ ಬೇಗಂ (30) ಎಂದು ಗುರುತಿಸಲಾಗಿದೆ. ಇಬ್ಬರು ದಾವಣಗೆರೆಯಲ್ಲಿ (Davanagere) ವಾಸವಾಗಿದ್ದರು. ಬಂಧಿತ ಆರೋಪಿಗಳಿಂದ 8,65,000 ರೂ. ಮೌಲ್ಯದ 90 ಗ್ರಾಂ ಚಿನ್ನ ಹಾಗೂ 750 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಉಡುಪಿ| ಹಳಿಯ ಕಬ್ಬಿಣ ಕದ್ದ ಬಾಲಕರಿಗೆ ಥಳಿಸಿದ್ದಕ್ಕೆ ರೈಲ್ವೇ ಸಿಬ್ಬಂದಿ ಮೇಲೆ ಕೇಸ್‌

    ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬವರ ಹಣಕಾಸಿನ ಸಮಸ್ಯೆ ಅರಿತು ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೋಗಿದ್ದರು. ಸಂಜೆ 4 ರಿಂದ 6 ಗಂಟೆ ವೇಳೆಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಪೂಜೆ ವೇಳೆ ಚಿನ್ನಾಭರಣ ಹಾಗೂ ನಗದು ಇಡುವಂತೆ ಹೇಳಿದ್ದರು. ಅವರು ಹೇಳಿದಂತೆ ಶಶಿಕಲಾ ಹಾಗೂ ಆಕೆಯ ಕುಟುಂಬಸ್ಥರು ಪೂಜೆ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಿದ್ದರು. ಈ ವೇಳೆ ಆರೋಪಿಗಳು ಶಶಿಕಲಾ ಕುಟುಂಬದವರನ್ನು ಯಾಮಾರಿಸಿ ಚಿನ್ನ ಹಾಗೂ ಬೆಳ್ಳಿಯನ್ನು ಎಗರಿಸಿದ್ದರು.

    ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಪೊಲೀಸರು ತಂಡವನ್ನು ರಚಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆ – ಪಾರ್ಟಿಯಲ್ಲೇ ಸೇಹಿತನ ಕೊಲೆ

  • ರಾತ್ರಿ ಲೈಟ್ ಹಾಕಿರೋ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ – ಪತಿ ಕಾರ್ಯಕ್ಕೆ ಹೆಂಡ್ತಿ, ಸ್ನೇಹಿತರ ಸಾಥ್!

    ರಾತ್ರಿ ಲೈಟ್ ಹಾಕಿರೋ ಮನೆಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ – ಪತಿ ಕಾರ್ಯಕ್ಕೆ ಹೆಂಡ್ತಿ, ಸ್ನೇಹಿತರ ಸಾಥ್!

    – 412 ಗ್ರಾಂ ಚಿನ್ನ 2.5 ಕೆಜಿ ಬೆಳ್ಳಿ ವಶ

    ಚಿಕ್ಕಬಳ್ಳಾಪುರ: ಎರಡು ಮೂರು ದಿನ ಸಂಬಂಧಿಕರ ಮನೆಗೆ ಕುಟುಂಬ ಸಮೇತ ಹೋಗುವಾಗ ಮನೆಯಲ್ಲಿ ಲೈಟ್ ಹಾಕಿ ಹೋಗೋದು ಸಾಮಾನ್ಯ, ಬೆಳಕಿದ್ರೆ ಯಾರೋ ಮನೆಯಲ್ಲಿದ್ದಾರೆ. ಕಳ್ಳರು ಮನೆಗೆ ನುಗ್ಗಲ್ಲ ಎಂಬ ಗ್ಯಾರಂಟಿ! ಆದರೆ ಇಲ್ಲೊಬ್ಬ ಕಿಲಾಡಿ ಕಳ್ಳ ದಂಪತಿ ಅಂತಹ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಪೊಲೀಸರ ಅತಿಥಿ ಆಗಿದ್ದಾರೆ.

    ಬಂಧಿತ ಆರೋಪಿಗಳನ್ನು ನೂರುಲ್ಲಾ ಅಲಿಯಾಸ್ ಖಾರದಪುಡಿ ನೂರುಲ್ಲಾ, ಆತನ ಸ್ನೇಹಿತ ವಿನೋದ್ ಮಾರ್ಕಕರ್ ಹಾಗೂ ಸಾಗಾರ್ ಎಂದು ಗುರುತಿಸಲಾಗಿದೆ. ಈತ ಹೋದ ಕಡೆಯಲ್ಲೆಲ್ಲಾ ಒಂದೊಂದು ಹೆಸರು ಹೇಳಿಕೊಂಡು ಮನೆಗಳ್ಳತನ ಮಾಡೋದನ್ನ ಕಾಯಕ ಮಾಡಿಕೊಂಡಿದ್ದ. ಈತನಿಗೆ ಸ್ವತಃ ಈತನ ಹೆಂಡತಿ ಹಮೀನಾಬಿ ಹಾಗೂ ಸ್ನೇಹಿತರಾದ ವಿನೋದ್ ಮಾರ್ಕಕರ್, ಸೇರಿದಂತೆ ಸಾಗಾರ್ ಸಾಥ್ ಕೊಡುತ್ತಿದ್ದರು. ಆರೋಪಿ ಹಮೀನಾಬಿ ತಲೆ ಮರೆಸಿಕೊಂಡಿದ್ದಾಳೆ.

    ಈ ನಾಲ್ಕು ಮಂದಿ ಜ.10 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ತ್ಯಾಗರಾಜ ಕಾಲೋನಿಯಲ್ಲಿ ಅಶ್ವತ್ಥನಾರಾಯಣಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಅಶ್ವತ್ಥನಾರಾಯಣಶೆಟ್ಟಿ ಪತ್ನಿ ಸಮೇತ ಮಗನ ಮನೆಗೆ ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಕಳ್ಳರ ಭಯದಿಂದ ಮನೆಯಲ್ಲಿ ಒಂದು ಲೈಟ್‌ ಆನ್‌ ಮಾಡಿ ಹೋಗಿದ್ದರು. ಆದರೂ ಕೈಚಳಕ ತೋರಿದ್ದ ನೂರುಲ್ಲಾ ಹಾಗೂ ಆತನ ಗ್ಯಾಂಗ್ ಮನೆಯ ಬಿರುವಿನಲ್ಲಿದ್ದ 412 ಗ್ರಾಂ ಚಿನ್ನಾಭರಣ ಸೇರಿದಂತೆ ಎರಡೂವರೆ ಕೆಜಿ ಬೆಳ್ಳಿ ಅಭರಣಗಳು ಹಾಗೂ 1 ಲಕ್ಷ ರೂ. ನಗದನ್ನು ದೋಚಿತ್ತು.

    ಗೌರಿಬಿದನೂರು (Gauribidanur) ಪೊಲೀಸರು ಆರೋಪಿಗಳನ್ನ ಹಿಡಿಯಲು ಹೋದಾಗ ಕಾರು ಅಪಘಾತವಾಗಿ ಗಾಯಗೊಂಡಿದ್ದರು. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪೊಲೀಸರು ಪಾರಾಗಿದ್ದರು. ಇದೀಗ ಪಟ್ಟು ಬಿಡದೆ ಕಳ್ಳರನ್ನ ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.

    ವಿಚಾರಣೆ ವೇಳೆ ಮನೆಯಲ್ಲಿ ಲೈಟ್ ಹಾಕಿ ಮನೆಗೆ ಬೀಗ ಹಾಕಲಾಗಿತ್ತು. ಇದ್ರಿಂದಲೇ ಮನೆಯಲ್ಲಿ ಕಳ್ಳತನ ಮಾಡಿರೋದಾಗಿ ಪೊಲೀಸರು ಬಳಿ ಕಳ್ಳರು ಬಾಯ್ಬಿಟ್ಟಿದ್ದಾರೆ.

  • ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚನೆ – ಫೈನಾನ್ಸ್ ಮ್ಯಾನೇಜರ್ ಅರೆಸ್ಟ್‌

    ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚನೆ – ಫೈನಾನ್ಸ್ ಮ್ಯಾನೇಜರ್ ಅರೆಸ್ಟ್‌

    ದಾವಣಗೆರೆ: ಸ್ನೇಹಿತರ ಹೆಸರಿನಲ್ಲಿ ಖಾತೆ ತೆರೆದು ನಕಲಿ ಚಿನ್ನ ಅಡವಿಟ್ಟು 42 ಲಕ್ಷ ರೂ. ವಂಚಿಸಿದ್ದ ಜಗಳೂರಿನ (Jagalur) ಕೆ.ಎಲ್.ಎಂ. ಆಕ್ಸಿವ ಫಿನ್ ವೆಸ್ಟ್ ಫೈನಾನ್ಸ್ ವ್ಯವಸ್ಥಾಪಕ ಅರವಿಂದ್ ಹನುಮಂತ ರೆಡ್ಡಿಯನ್ನು ಪೊಲೀಸರು ಚಿತ್ರದುರ್ಗದಲ್ಲಿ ಬಂಧಿಸಿದ್ದಾರೆ.

    ಗ್ರಾಹಕರ ಚಿನ್ನವನ್ನು (Gold) ಅಡವಿಟ್ಟುಕೊಂಡು ಸಾಲ ನೀಡುವ ಕೆ.ಎಲ್.ಎಂ. ಆಕ್ಸಿವ ಫಿನ್ ವೆಸ್ಟ್ ಪೈನಾನ್ಸ್ ವ್ಯವಸ್ಥಾಪಕ ಅರವಿಂದ ರೆಡ್ಡಿ ತಾನು ಕಾರ್ಯನಿರ್ವಹಿಸುವ ಸಂಸ್ಥೆಗೆ ವಂಚಿಸಿ ತಲೆಮರೆಸಿಕೊಂಡಿದ್ದ.

    ಅವ್ಯವಹಾರ ನಡೆದಿರುವ ಬಗ್ಗೆ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಅರವಿಂದ್ ಹನುಮಂತ ರೆಡ್ಡಿಯನ್ನು ನ್ಯಾಯಾಂಗದ ಬಂಧನಕ್ಕೆ ಒಪ್ಪಿಸಲಾಗಿದೆ.

  • ಮನೆಯಲ್ಲಿದ್ದ ಚಿನ್ನ, ಬೆಳ್ಳಿ ದೋಚಿ ಮಾಲೀಕನ ಕಾರಲ್ಲೇ ತುಂಬಿಕೊಂಡು ಪರಾರಿಯಾದ ಕಳ್ಳರು!

    ಮನೆಯಲ್ಲಿದ್ದ ಚಿನ್ನ, ಬೆಳ್ಳಿ ದೋಚಿ ಮಾಲೀಕನ ಕಾರಲ್ಲೇ ತುಂಬಿಕೊಂಡು ಪರಾರಿಯಾದ ಕಳ್ಳರು!

    ಹಾಸನ: ಮನೆಯ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದನ್ನು ದೋಚಿ ಮನೆಯ ಮಾಲೀಕನ ಕಾರಿನಲ್ಲೇ ತುಂಬಿಕೊಂಡು ಕಳ್ಳರು ಪರಾರಿಯಾದ ಘಟನೆ ಹಾಸನದ (Hassan) ವಿದ್ಯಾನಗರದಲ್ಲಿ ನಡೆದಿದೆ.

    ನಗರದ ವನಜಾಕ್ಷಿ ಎಂಬುವವರು ಕಳೆದ ಹತ್ತು ದಿನಗಳ ಹಿಂದೆ ಮನೆ, ಗೇಟ್‍ಗಳಿಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ (Bengaluru) ಮಗನ ಮನೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿರುವ ಕಳ್ಳರು ಗೇಟ್ ಬೀಗ ಒಡೆದು, ಮನೆಯ ಬಾಗಿಲಿನ ಲಾಕ್ ಮುರಿದು ಒಳಗೆ ನುಗ್ಗಿದ್ದಾರೆ. ಇದನ್ನೂ ಓದಿ: ಇಂಗ್ಲಿಷ್ ಪರೀಕ್ಷೆಗೆ ಹೆದರಿ ಮನೆ ಬಿಟ್ಟ ಮಕ್ಕಳು – ಸಕಲೇಶಪುರದಲ್ಲಿ ನಾಪತ್ತೆಯಾದವರು ಬೆಂಗಳೂರಲ್ಲಿ ಪತ್ತೆ

    ಮನೆಯ ರೂಂನಲ್ಲಿದ್ದ ಬೀರುವಿನ ಲಾಕ್ ಒಡೆದು ಅದರಲ್ಲಿಟ್ಟಿದ್ದ ಚಿನ್ನ, ಬೆಳ್ಳಿ, ನಗದನ್ನು ಕದ್ದಿದ್ದಾರೆ. ಬಳಿಕ ಮನೆಯಲ್ಲಿದ್ದ ಕಾರಿನ ಕೀ ತೆಗೆದುಕೊಂಡು ಇನ್ನೊಂದು ಗೇಟ್‍ನ ಬೀಗ ಒಡೆದು ಕಾರನ್ನು ಕದ್ದೊಯ್ದಿದ್ದಾರೆ.

    ಸಂಬಂಧಿಕರು ಮನೆಯ ಬಳಿ ಬಂದಾಗ ಕಳ್ಳತನ ನಡೆದಿರುವುದು ತಿಳಿದಿದೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಬಡಾವಣೆ ಪೊಲೀಸ್ (Police) ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಕಾಂತಾರ 2ಗೆ ಬಿಗ್ ರಿಲೀಫ್ – ಅಧಿಕಾರಿಗಳಿಂದ ಕ್ಲೀನ್ ಚಿಟ್

  • ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚಿಸಿದ ಬ್ಯಾಂಕ್ ಮ್ಯಾನೇಜರ್!

    ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 49 ಲಕ್ಷ ವಂಚಿಸಿದ ಬ್ಯಾಂಕ್ ಮ್ಯಾನೇಜರ್!

    ದಾವಣಗೆರೆ: ಬ್ಯಾಂಕ್ (Bank) ಮ್ಯಾನೇಜರ್ ಒಬ್ಬ ಸ್ನೇಹಿತರ ಹೆಸರಲ್ಲಿ ನಕಲಿ ಚಿನ್ನ (Gold) ಅಡವಿಟ್ಟು ಬರೋಬ್ಬರಿ 49 ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಜಗಳೂರಿನಲ್ಲಿ (Jagalur) ನಡೆದಿದೆ.

    ಜಗಳೂರು ಪಟ್ಟಣದಲ್ಲಿರುವ ಕೆಎಲ್‍ಎಂ ಆಕ್ಸಿವಾ ಫಿನ್ ವೆಸ್ಟ್ ಬ್ಯಾಂಕ್ ಈ ವಂಚನೆ ನಡೆದಿದೆ. ಬ್ಯಾಂಕ್‍ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅರವಿಂದ್ ರೆಡ್ಡಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

    ಅರವಿಂದ್ ರೆಡ್ಡಿ, 2024ರ ನವೆಂಬರ್‌ನಲ್ಲಿ ತನ್ನ 9 ಮಂದಿ ಸ್ನೇಹಿತರ ಹೆಸರಿನಲ್ಲಿ 84.5 ತೊಲ ನಕಲಿ ಬಂಗಾರ ಅಡವಿಟ್ಟು, ಬರೋಬ್ಬರಿ 49 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಕಣ್ಮರೆಯಾಗಿದ್ದ.

    ಮ್ಯಾನೇಜರ್‌ನ ಸ್ನೇಹಿತರಿಗೆ ಅಕ್ಸಿವಾ ಬ್ಯಾಂಕ್‍ನಿಂದ ಬಡ್ಡಿ ಹಣ ಕಟ್ಟುವಂತೆ ನೋಟಿಸ್ ಬಂದಾಗ ಪ್ರಕರಣ ಬಯಲಿಗೆ ಬಂದಿದೆ. ತಾವು ಯಾವುದೇ ಬಂಗಾರ ಅಡವಿಟ್ಟಿಲ್ಲ ಎಂದು ಬ್ಯಾಂಕ್‍ಗೆ 9 ಜನ ಸ್ನೇಹಿತರು ಬಂದಿದ್ದಾರೆ. ಈ ವೇಳೆ ವಂಚನೆ ನಡೆದಿರುವುದು ಗೊತ್ತಾಗಿದೆ.

    ಈ ಸಂಬಂಧ ಬ್ಯಾಂಕ್‍ನ ಸಹಾಯಕ ವ್ಯವಸ್ಥಾಪಕ ವಸಂತ್ ಕುಮಾರ್, ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ?

    ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ?

    ಮಂಡ್ಯ: ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ಹೇಳಿಕೊಂಡು 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ, ತನಗೆ ಮಾಜಿ ಸಿಎಂ ಕುಮಾರಸ್ವಾಮಿಯ  (H.D Kumaraswamy) ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ (Nikhil Kumaraswamy) ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿರುವುದು ಬೆಳಿಕಿಗೆ ಬಂದಿದೆ.

    ಪೂರ್ಣಿಮಾ ಎಂಬವರಿಂದ 100 ಗ್ರಾಂ ಚಿನ್ನದ ಜೊತೆ 15 ಲಕ್ಷ ರೂ. ಹಣ ಪಡೆದು ವಂಚಿಸಿದ ಆರೋಪ ಐಶ್ವರ್ಯ ಮೇಲಿದೆ. ಇಂದು ನಾಳೆ ವಾಪಸ್ಸು ಕೊಡ್ತೀನಿ ಎಂದು ಸತಾಯಿಸಿದ್ದಾಳೆ.‌ ಅಲ್ಲದೇ ಹಣ ಪಡೆಯುವ ಮುನ್ನ ನಾನು‌ ಡಿ.ಕೆ.ಸುರೇಶ್ ತಂಗಿ ಎಂದು ಐಶ್ವರ್ಯ ಪರಿಚಯ ಮಾಡಿಕೊಂಡ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ತನಗೆ ಹೆಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಬಿಲ್ಡಪ್ ಕೂಡ ಕೊಟ್ಟಿದ್ದಾಳೆ. ಈ ಕುರಿತು ಐಶ್ವರ್ಯಗೌಡ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ರವಿಕುಮಾರ್ ಹಾಗೂ ಪೂರ್ಣಿಮಾ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.

    ಅನಿತಾ ಕುಮಾರಸ್ವಾಮಿ, ನಿಖಿಲ್ ಇಬ್ಬರೂ ಬಹಳಷ್ಟು ಪರಿಚಿತರು. ನಿಮಗೆ ಅವರ ಕಡೆಯಿಂದ ಸಹಾಯ ಬೇಕಿದ್ರೆ ನನಗೆ ಹೇಳಿ. ನಾನು ನಿಮಗೆ ಸಹಾಯ ಮಾಡ್ತೇನೆ ಎಂದು ಐಶ್ವರ್ಯಗೌಡ ಹೇಳಿದ್ದಳಂತೆ. ಆ ರೀತಿ ಹೇಳಿಯೆ ನಮ್ಮನ್ನ ನಂಬಿಸಿ ನಮ್ಮ ಬಳಿ ಹಂತ ಹಂತವಾಗಿ 40 ಲಕ್ಷ ರೂ. ಹಾಗೂ ಪೂರ್ಣಿಮಾ ಬಳಿಯೂ ಹಣ, ಚಿನ್ನ ಪಡೆದಿದ್ದಳು. ಈಗ ಹಣ ವಾಪಸ್ಸು ನೀಡದೇ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ‌.

    ಐಶ್ವರ್ಯ ಕಾಂಗ್ರೆಸ್ ನಾಯಕರ ಹೆಸರನ್ನಷ್ಟೇ ಅಲ್ಲ ಜೆಡಿಎಸ್ ಹೆಸರನ್ನೂ ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂಬುದು ಈಗ ತಿಳಿದು ಬರುತ್ತಿದೆ.

  • ವಂಚನೆ ಕೇಸಲ್ಲಿ ಐಶ್ವರ್ಯಗೌಡಗೆ ಜಾಮೀನು – ರಾತ್ರಿಯೇ ಜೈಲಿಂದ ರಿಲೀಸ್

    ವಂಚನೆ ಕೇಸಲ್ಲಿ ಐಶ್ವರ್ಯಗೌಡಗೆ ಜಾಮೀನು – ರಾತ್ರಿಯೇ ಜೈಲಿಂದ ರಿಲೀಸ್

    ಬೆಂಗಳೂರು: ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿ ವಂಚಿಸಿ ಅರೆಸ್ಟ್ ಆಗಿದ್ದ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್‌ ಗೌಡಗೆ ಹೈಕೋರ್ಟ್‌ ಜಾಮೀನು ನೀಡಿದೆ.

    ವಂಚನೆ ಕೇಸ್‌ನಲ್ಲಿ ಚಂದ್ರಾ ಲೇಔಟ್ ಪೊಲೀಸರು ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಆರೋಪಿಗಳನ್ನು ಮಂಗಳವಾರ ರಾತ್ರಿಯೇ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ.

    ಆರೋಪಿ ಐಶ್ವರ್ಯ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ (D.K Suresh) ಸಹೋದರಿ ಅಂತ ಹೇಳಿಕೊಂಡು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 9ನೇ ಎಸಿಎಂಎಂ ಕೋರ್ಟ್ ಆದೇಶಿಸಿತ್ತು. ಅಲ್ಲಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದರು.

    ಏನಿದು ಪ್ರಕರಣ?
    ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಧಮೇಂದ್ರ ಡಿ.ಕೆ ಸುರೇಶ್ ವಾಯ್ಸ್‌ನಲ್ಲಿ ಕರೆ ಮಾಡಿದ್ದ ಧರ್ಮೇಂದ್ರ ಮಾಲೀಕರಾದ ವನಿತಾ ಐತಾಳ್‌ಗೆ ಕರೆ ಮಾಡಿ ಸಮಯ ಕೇಳಿದ್ದರು. ಕೊನೆಗೆ ತಾನೇ ಧರ್ಮೇಂದ್ರನನ್ನ ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದರು. ಅವಾಚ್ಯ ಶಬ್ಧಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಜ್ಯುವೆಲರಿ ಮಾಲೀಕಾರದ ವನಿತಾ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

  • 2.5 ಕೋಟಿ ಚಿನ್ನಾಭರಣ ವಂಚನೆ ಕೇಸ್‌ – ನನಗೂ ಶ್ವೇತಾಗೂ ಸಂಬಂಧವಿಲ್ಲ: ಪವಿತ್ರಾಗೌಡ ಸ್ನೇಹಿತೆ ಸಮತಾ ಸ್ಪಷ್ಟನೆ

    2.5 ಕೋಟಿ ಚಿನ್ನಾಭರಣ ವಂಚನೆ ಕೇಸ್‌ – ನನಗೂ ಶ್ವೇತಾಗೂ ಸಂಬಂಧವಿಲ್ಲ: ಪವಿತ್ರಾಗೌಡ ಸ್ನೇಹಿತೆ ಸಮತಾ ಸ್ಪಷ್ಟನೆ

    – ಮಾಧ್ಯಮದಲ್ಲಿ ಬರಲು ವಿನಯ್‌ ಭೇಟಿ ಮಾಡಿದ್ದ ಶ್ವೇತಾ?

    ಬೆಂಗಳೂರು: ಭಾರೀ ಸದ್ದು ಮಾಡುತ್ತಿರುವ 2.5 ಕೋಟಿ ಚಿನ್ನಾಭರಣ (Gold) ವಂಚನೆ ಪ್ರಕರಣದ (Fraud Case) ವಿಚಾರವಾಗಿ ಪವಿತ್ರಾ ಗೌಡ (Pavithra Gowda) ಸ್ನೇಹಿತೆ ಸಮತಾ (Samatha) ಪ್ರತಿಕ್ರಿಯಿಸಿದ್ದು, ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ರೂ. ಮೌಲ್ಯದ ಚಿನ್ನವನ್ನು ಖರೀದಿಸಿ ಹಣ ಪಾವತಿಸದೇ ವಂಚಿಸಿದ ಶ್ವೇತಾಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಶ್ವೇತಾಗೌಡಗೆ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಪವಿತ್ರಗೌಡಳನ್ನು ಭೇಟಿ ಆಗಲು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೆ. ಈ ವೇಳೆ ಶ್ವೇತಾಗೌಡ ಪರಿಚಯ ಮಾಡಿಕೊಂಡರು. ನಾನು ವಿನಯ್ ಅಣ್ಣನಿಗೆ ಪರಿಚಯ ನೋಡೋಕೆ ಬಂದಿದ್ದೆ ಎಂದಿದ್ರು. ಅವತ್ತೇ ನಾನು ಆಕೆಯನ್ನು ಭೇಟಿ ಮಾಡಿದ್ದು ಎಂದಿದ್ದಾರೆ.

    ಜೈಲಿನಿಂದ ಹೊರಗೆ ಬರುತ್ತಿದ್ದಾಗ ನನ್ನ ಜೊತೆಗೆ ಆಕೆ ಬಂದಿದ್ರು. ಜೊತೆಗೆ ಆಟೋದಲ್ಲಿ ಕಾರಿನ ತನಕ ಡ್ರಾಪ್ ಕೊಡಿ ಎಂದು ಆಟೋ ಹತ್ತಿಕೊಂಡ್ರು. ಅದು ಹೊರತುಪಡಿಸಿ ಶ್ವೇತಗೌಡಗೆ ನನಗೂ ಯಾವುದೇ ಸಂಬಂಧ ಇಲ್ಲ. ಈಗ ವಂಚನೆ ಕೇಸ್‍ಗಳು ಬೆಳಕಿಗೆ ಬರುತ್ತಿವೆ. ವಿನಯ್‍ಗೆ ಕೂಡ ಆಕೆಯ ಪರಿಚಯ ಇಲ್ಲ. ಮಾಧ್ಯಮಗಳಲ್ಲಿ ಬರೋಕೆ ಆಕೆ ಬಂದಿದ್ದಾಳೆ ಅಷ್ಟೇ ಎಂದು ಆರೋಪಿಸಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ, ಪವಿತ್ರಗೌಡ ನಾನು ಮೂರು ವರ್ಷದಿಂದ ಸ್ನೇಹಿತರು. ಅದು ಬಿಟ್ಟರೆ ಕೊಲೆ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ. ಕೆಲವೊಂದು ಮಸೇಜ್‍ಗಳ ಬಗ್ಗೆ ಮಾತಾಡಿದ್ದಳು. ಘಟನೆಗೂ ಮೂರು ತಿಂಗಳ ಹಿಂದೆ ಸೈಬರ್ ಪೊಲೀಸ್ ಠಾಣೆಗೆ ಹೋಗಬೇಕು ಎಂದು ನಿರ್ಧಾರ ಮಾಡಿದ್ವಿ. ಆದರೆ ಮೀಡಿಯಾದಲ್ಲಿ ಬರುತ್ತೆ ಅಂತಾ ಭಯದಿಂದ ಸುಮ್ಮನಾದ್ವಿ. ಪವಿತ್ರಗೌಡಗೆ ತುಂಬಾ ಜನ ಕೆಟ್ಟದಾಗಿ ಮಸೇಜ್ ಮಾಡ್ತಿದ್ರು, ನಾನು ತುಂಬಾ ಸಲ ಧೈರ್ಯ ತುಂಬಿದ್ದೆ. ಆಕೆ ಕಿಡ್ನ್ಯಾಪ್ ಮಾಡಿಸಿದ್ದಾಳೆ ಅನ್ನೋದನ್ನ ನಾನು ನಂಬಲ್ಲ ಎಂದಿದ್ದಾರೆ.

    ಜೈಲಿನಿಂದ ಬಂದ ಮೇಲೆ ಪವಿತ್ರಾಳನ್ನು ಭೇಟಿಯಾಗಿಲ್ಲ. ದರ್ಶನ್ ಮತ್ತು ಪವಿತ್ರಗೌಡ ನಡುವೆ ನಾನು ಸೇತುವೆಯಂತೆ ಇದ್ದೇನೆ ಎನ್ನುವುದು ಸುಳ್ಳು. ಇನ್ನೂ ದರ್ಶನ್ ಬಗ್ಗೆ ಒಂದು ದಿನವೂ ನಾನು ಕೇಳಿಲ್ಲ. ಬೇರೆ ಯಾವುದೇ ಚರ್ಚೆ ಆಗಿಲ್ಲ. ಪವಿತ್ರಗೌಡ ಮತ್ತೆ ದರ್ಶನ್ ಒಂದಾಗ್ತಾರಾ ಎನ್ನುವ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

    ಏನಿದು ಪ್ರಕರಣ?
    ಶ್ವೇತಾ ನವರತ್ನ ಜ್ಯುವೆಲರ್ಸ್‌ನಲ್ಲಿ 2.42 ಕೋಟಿ ರೂ. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು. ಅಲ್ಲದೆ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಹಾಕಿದ್ದಳು.

    ಈ ಬಗ್ಗೆ ಜ್ಯುವೆಲರ್ಸ್‌ನ ಮಾಲಿಕ ಸಂಜಯ್ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಪುಲಿಕೇಶಿನಗರ ಉಪವಿಭಾಗದ ಎಸಿಪಿ ಗೀತಾ ಅವರು ತನಿಖೆ ಕೈಗೆತ್ತಿಕೊಂಡಿದ್ದರು. ಇದನ್ನು ತಿಳಿದ ಆರೋಪಿ ಕೂಡಲೇ ನಗರದಿಂದ ಪರಾರಿಯಾಗಿದ್ದಳು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಆಕೆಯನ್ನು ಬಂಧಿಸಿದ್ದರು. ಜೊತೆಗೆ ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

  • ಕಾಡಿನಲ್ಲಿ ನಿಂತಿದ್ದ ಕಾರಿನಲ್ಲಿತ್ತು 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನ

    ಕಾಡಿನಲ್ಲಿ ನಿಂತಿದ್ದ ಕಾರಿನಲ್ಲಿತ್ತು 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನ

    ಭೋಪಾಲ್: ಮಿಂದೋರಿ ಕಾಡಿನಲ್ಲಿ ನಿಂತಿದ್ದ ಕಾಲಿನಲ್ಲಿ ಬರೋಬ್ಬರಿ 40 ಕೋಟಿ ರೂ. ಮೌಲ್ಯದ 52 ಕೆಜಿ ಚಿನ್ನವನ್ನು ಕಾರ್ಯಾಚರಣೆ ನಡೆಸಿ ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ರಾತ್ರಿ 2 ಗಂಟೆ ವೇಳೆಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಬಂದಿತ್ತು. 30 ವಾಹನಗಳಲ್ಲಿ 100 ಪೊಲೀಸರು ಕಾರ್ಯಾಚರಣೆ ತೆರಳಿದ್ದರು. ಜಾರಿ ನಿರ್ದೇಶನಾಲಯ (ED), ಲೋಕಾಯುಕ್ತ ಮತ್ತು ಐಟಿ ಇಲಾಖೆಯಿಂದ ರಿಯಲ್ ಎಸ್ಟೇಟ್ ಉದ್ಯಮಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಇದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಿಹಾರದಲ್ಲಿ ಥರ್ಮಲ್ ಪವರ್ ಪ್ಲಾಂಟ್ ಸ್ಥಾಪಿಸಲು ಅದಾನಿ ಗ್ರೂಪ್ 20,000 ಕೋಟಿ ಹೂಡಿಕೆ

    ಇಲಾಖೆಗೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸುಳಿವು ಸಿಕ್ಕಿತು. ನಾವು ಕರೆ ಸ್ವೀಕರಿಸಿದ ನಂತರ 30 ವಾಹನಗಳಲ್ಲಿ 100 ಪೊಲೀಸರ ತಂಡವು ಸ್ಥಳಕ್ಕೆ ಹೋದೆವು. ಪೊಲೀಸರು ಬಂಧಿಸಲು ಪ್ರಯತ್ನಿಸುತ್ತಿರುವ ಬಿಲ್ಡರ್ ಹೆಸರಿನಲ್ಲಿ ಕಾರನ್ನು ನೋಂದಾಯಿಸಲಾಗಿದೆ ಎಂದು ಐಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭೋಪಾಲ್ ಮತ್ತು ಇಂದೋರ್‌ನಲ್ಲಿರುವ ತ್ರಿಶೂಲ್ ಕನ್‌ಸ್ಟ್ರಕ್ಷನ್, ಕ್ವಾಲಿಟಿ ಗ್ರೂಪ್ ಮತ್ತು ಇಶಾನ್ ಗ್ರೂಪ್‌ಗೆ ಸೇರಿದ 51 ಸ್ಥಳಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರೆ ಪರಿಶೀಲಿಸುತ್ತಾ ಕೂರ್ತಿದ್ರಾ? – ಬಿವಿ ಶ್ರೀನಿವಾಸ್ ಆಕ್ರೋಶ

    ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಮಾಜಿ ಕಾನ್‌ಸ್ಟೆಬಲ್ ಸೌರಭ್ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 1 ಕೋಟಿ ಮತ್ತು 40 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಶರ್ಮಾ ಅವರು ಒಂದು ವರ್ಷದ ಹಿಂದೆ ಕೆಲಸ ತೊರೆದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸೇರಿದ್ದರು.

  • ಹಾಸನ | ಹಾಡಹಗಲೇ ಮನೆ ಬೀಗ ಒಡೆದು 15 ಲಕ್ಷ ನಗದು, 130 ಗ್ರಾಂ ಚಿನ್ನಾಭರಣ ಕಳ್ಳತನ

    ಹಾಸನ | ಹಾಡಹಗಲೇ ಮನೆ ಬೀಗ ಒಡೆದು 15 ಲಕ್ಷ ನಗದು, 130 ಗ್ರಾಂ ಚಿನ್ನಾಭರಣ ಕಳ್ಳತನ

    ಹಾಸನ: ನಗರದ (Hassan) ಹೊಸ ಬಸ್ ನಿಲ್ದಾಣದ ಎದುರಿನ ಕೆಹೆಚ್‍ಬಿ ಬಡಾವಣೆಯ ಮನೆಯೊಂದರಲ್ಲಿ ಸುಮಾರು 15 ಲಕ್ಷ ರೂ. ನಗದು (Money) ಹಾಗೂ 7 ಲಕ್ಷ ರೂ. ಬೆಲೆ ಬಾಳುವ 130 ಗ್ರಾಂ. ಚಿನ್ನಾಭರಣವನ್ನು (Gold) ಕೇವಲ 20 ನಿಮಿಷದಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ.

    ಬಡಾವಣೆಯ ಸಚಿನ್ ಎಂಬುವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಸಚಿನ್ ಅವರ ಪತ್ನಿ ಸರ್ಕಾರಿ ನೌಕರರಾಗಿದ್ದು ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ನಂತರ ಪತಿ ಸಚಿನ್ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿ, ಸಂಜೆ ಮನೆಗೆ ವಾಪಸ್ ಬಂದಿದ್ದಾರೆ. ಈ ವೇಳೆ ಮನೆಯ ಮುಂದಿನ ಬಾಗಿಲು ತೆರೆದಿತ್ತು. ಆತಂಕದಿಂದ ಒಳಗೆ ಹೋಗಿ ನೋಡಿದಾಗ ಎರಡೂ ರೂಮ್‍ಗಳಲ್ಲಿದ್ದ ವಾಲ್ಡ್‍ರೂಬ್‍ಗಳೂ ತೆರೆದು ಕೊಂಡಿದ್ದವು. ಒಂದು ರೂಮಿನಲ್ಲಿ ರಿಜಿಸ್ಟ್ರೇಷನ್ ಮಾಡಿಸಲು ಹಣ ಹೊಂದಿಸಿ 15 ಲಕ್ಷ ರೂ. ಇಡಲಾಗಿತ್ತು. ಮತ್ತೊಂದು ರೂಮಿನಲ್ಲಿ 38 ಗ್ರಾಂ ಚಿನ್ನದ ಸರ, 32 ಗ್ರಾಂ ತೂಕದ ಚಿನ್ನದ ಬಳೆ, 15 ಗ್ರಾಂ ತೂಕದ ಚಿನ್ನದ ಓಲೆ, 5 ಗ್ರಾಂ ಡೈಮಂಡ್ ಓಲೆ, 15 ಗ್ರಾಂ ತೂಕದ ಚಿನ್ನದ ಬಳೆ ಸೇರಿದಂತೆ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಕಳ್ಳ ಪರಾರಿಯಾಗಿದ್ದಾನೆ.

    ಹೆಲ್ಮೆಟ್ ಧರಸಿ ಬಂದಿರುವ ಕಳ್ಳ ಮನೆಯ ಮುಂಬಾಗಿಲನ್ನು ಸಲಾಕೆಯಿಂದ ಮೀಟಿ ಒಳ ನುಗ್ಗಿದ್ದು ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ಇಲ್ಲದ ಜಾಗವನ್ನು ನೋಡಿ ಆ ಕಡೆಯಿಂದ ಕಳ್ಳ ಒಳಗೆ ಬಂದಿದ್ದಾನೆ. ಕಳ್ಳತನ ಮಾಡಿಕೊಂಡು ಬೈಕ್ ಹತ್ತಿ ಪರಾರಿಯಾಗುವ ದೃಶ್ಯ ಕೆಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.