Tag: gold

  • ಚಿನ್ನ 225 ರೂ., ಬೆಳ್ಳಿ 450 ರೂ. ಇಳಿಕೆ

    ಚಿನ್ನ 225 ರೂ., ಬೆಳ್ಳಿ 450 ರೂ. ಇಳಿಕೆ

    ಮುಂಬೈ: ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಕುಸಿದಿದ್ದು, 10 ಗ್ರಾಂ ಚಿನ್ನದ ಬೆಲೆ 225 ರೂ. ಕಡಿಮೆಯಾಗಿ 30,375 ರೂ. ಗಳಿಗೆ ಕುಸಿದಿದೆ. ಸ್ಥಳೀಯ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಅಭರಣ ಬೇಡಿಕೆ ಕುಸಿತಗೊಂಡಿದ್ದರಿಂದ ಚಿನ್ನದ ದರ ಇಳಿಕೆಯಾಗಿದೆ.

    ಒಂದು ಕೆಜಿ ಬೆಳ್ಳಿ ದರ 450 ರೂ. ಇಳಿಕೆಯಾಗಿದ್ದು ಈಗ 40,000 ರೂ.ಗಳಿಗೆ ತಲುಪಿದೆ. ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರಿಂದ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಳ್ಳಿ ದರ ಕುಸಿತವಾಗಿದೆ.

    ದೆಹಲಿಯಲ್ಲಿ ಪ್ರತಿ 10 ಗ್ರಾಂ 99.9 ಶುದ್ಧ ಚಿನ್ನದ ಬೆಲೆ 225 ರೂ. ಇಳಿಕೆಯಾಗಿ 30,375 ರೂ. ನಲ್ಲಿ ಮಾರಾಟವಾಗುತ್ತಿದ್ದರೆ, 10 ಗ್ರಾಂ 99.5 ಶುದ್ಧ ಚಿನ್ನದ ಬೆಲೆ 30,225 ರೂ. ನಲ್ಲಿ ಮಾರಾಟವಾಗುತ್ತಿದೆ.

  • ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಸಿಕ್ತು 11ಕೆಜಿ ಚಿನ್ನ, ಕೋಟ್ಯಂತರ ಆಸ್ತಿ ಪತ್ತೆ

    ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಸಿಕ್ತು 11ಕೆಜಿ ಚಿನ್ನ, ಕೋಟ್ಯಂತರ ಆಸ್ತಿ ಪತ್ತೆ

    ವಿಜಯವಾಡ: ಭ್ರಷ್ಟಾಚಾರ ನಿಗ್ರಹ ದಳ(ಸಿಎಬಿ) ಅಧಿಕಾರಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿ 11 ಕೆಜಿ ಚಿನ್ನ ಮತ್ತು ಕೋಟ್ಯಂತರ ಆಸ್ತಿ ಪಾಸ್ತಿಯನ್ನು ವಶಕ್ಕೆ ಪಡೆದಿದೆ.

    ಆಂಧ್ರಪ್ರದೇಶ  ನಗರ ಯೋಜನೆ ವಿಭಾಗದ ನಿರ್ದೇಶಕ ಗೊಲ್ಲ ವೆಂಕಟ ರಘು ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು 600 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.

    ವಿಶೇಷ ಏನೆಂದರೆ ಗೊಲ್ಲ ವೆಂಕಟ ರಘು ರೆಡ್ಡಿ ಇನ್ನು ಮೂರು ದಿನಗಳಲ್ಲಿ ನಿವೃತ್ತಿಯಾಗಬೇಕಾಗಿತ್ತು. ಆದರೆ ನಿವೃತ್ತಿ ಆಗುವುದರ ಒಳಗಡೆ ಎಸಿಬಿ ದಾಳಿ ನಡೆಸಿ ಶಾಕ್ ನೀಡಿದೆ.

    2009 ರಲ್ಲಿ ಹೈದರಬಾದ್‍ನ ಮುಖ್ಯ ನಗರ ಯೋಜಕನಾಗಿ ವೆಂಕಟ ರಘು ನೇಮಕವಾದ ಬಳಿಕ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡುವ ವಿಚಾರದಲ್ಲಿ ಭಾರೀ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಏನು ಸಿಕ್ಕಿದೆ?
    ಮನೆಯಲ್ಲಿ 50 ಲಕ್ಷ ರೂ. ನಗದು, 11 ಕೆಜಿ ಚಿನ್ನಾಭರಣಗಳು, 25 ಕೆಜಿ ಬೆಳ್ಳಿ ಆಭರಣ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾಗೂ ದಾಖಲೆಗಳನ್ನು ಅಧಿಕಾರಿಗಳು ಸಿಕ್ಕಿದೆ. ದಾಳಿ ವೇಳೆ ಶಿರಡಿಯಲ್ಲೂ ಲಾಡ್ಜ್ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ವಿಜಯವಾಡದ ಗನ್ನಾವರಂ ಎಂಬಲ್ಲಿ 300 ಎಕರೆ ಭೂಮಿ ಕೂಡ ಹೊಂದಿದ್ದು, ನಾಲ್ಕು ಖಾಸಗಿ ಕಂಪನಿ, ಹಲವೆಡೆ ತೋಟ, ಗದ್ದೆಗಳು ಪತ್ತೆಯಾಗಿವೆ.

    ನಿವೃತ್ತಿ ಹಿನ್ನೆಲೆಯಲ್ಲಿ ಗೊಲ್ಲ ವೆಂಕಟ ರಘು ಸ್ನೇಹಿತರಿಗೆ ಪಾರ್ಟಿ ನೀಡಲು ಸಿದ್ಧತೆ ನಡೆಸುತ್ತಿದ್ದರು. ಬಳಿಕ ವಿದೇಶ ಪ್ರವಾಸಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು.

  • ಕದ್ದೊಯ್ದ ಚಿನ್ನವನ್ನು ವಾಪಸ್ ತಂದು ಮನೆ ಮುಂದೆ ಎಸೆದು ಹೋದ್ರು

    ಕದ್ದೊಯ್ದ ಚಿನ್ನವನ್ನು ವಾಪಸ್ ತಂದು ಮನೆ ಮುಂದೆ ಎಸೆದು ಹೋದ್ರು

    ಮಂಗಳೂರು: ಕದ್ದೊಯ್ದ ಚಿನ್ನವನ್ನು ಕಳ್ಳರೇ ಮರಳಿ ಮನೆಯ ಮುಂದೆ ಎಸೆದು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಶನಿವಾರದಂದು ಹಾಡಹಗಲೇ ಮಂಗಳೂರಿನ ಪಡೀಲ್ ಬಳಿಯ ಆಡುಮರೋಳಿಯಲ್ಲಿ ಶೇಖರ್ ಕುಂದರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಮಾರು 970 ಗ್ರಾಂ ಚಿನ್ನಾಭರಣ ಮತ್ತು 13 ಸಾವಿರ ನಗದು ಕಳವಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಪೊಲೀಸರು ಕಳ್ಳರ ಬಗ್ಗೆ ಶೋಧ ನಡೆಸುತ್ತಿರುವಂತೆಯೇ ಸೋಮವಾರ ಸಂಜೆ ಬೈಕ್ ನಲ್ಲಿ ಆಗಮಿಸಿದ ಆಗಂತುಕರಿಬ್ಬರು ಚಿನ್ನಾಭರಣಗಳನ್ನ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕಳವಾದ ಮನೆಯ ಮುಂಭಾಗದಲ್ಲಿ ಎಸೆದು ಹೋಗಿದ್ದಾರೆ.

    ವಿಚಿತ್ರ ಅಂದ್ರೆ ಕಳವಾದ ಆಭರಣಗಳ ಪೈಕಿ ಬಹುತೇಕ ಪೂರ್ತಿ ಚಿನ್ನವನ್ನು ಕಳ್ಳರು ಮರಳಿಸಿದ್ದಾರೆ. ಈ ನಡುವೆ ಮನೆಯವರು ದೇವರಿಗೆ ಹರಕೆ ಹೇಳಿಕೊಂಡಿದ್ದೇ ಕಳ್ಳರು ಚಿನ್ನ ಮರಳಿಸಲು ಕಾರಣ ಎಂದು ನಂಬಿದ್ದಾರೆ. ಮನೆ ಮಾಲೀಕ ಶೇಖರ್ ಕುಂದರ್ ಗ್ಯಾರೇಜ್ ಹೊಂದಿದ್ದರೆ, ಪತ್ನಿ ತಿಲೋತ್ತಮೆ ಗಣಿ ಇಲಾಖೆಯಲ್ಲಿ ಸರ್ಕಾರಿ ಕೆಲಸದಲ್ಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳತನ ನಡೆದಿತ್ತು.

  • ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!

    ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ 4.11ಕಿಲೋ ಚಿನ್ನ ದರೋಡೆ!

    ಉಡುಪಿ: ಚಲಿಸುತ್ತಿದ್ದ ರೈಲಿನಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ದರೊಡೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಮುಂಬೈನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ನೇತ್ರಾವತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಗಡಿಭಾಗ ಪಡುಬಿದ್ರೆ ಗ್ರಾಮವನ್ನು ಹಾದು ಹೋಗುತ್ತಿದ್ದ ವೇಳೆ ಚಿನ್ನದ ದರೋಡೆ ನಡೆದಿದೆ.

    S7 ಸ್ಲೀಪರ್ ಕೋಚ್ ನಿಂದ ರಾಜೇಂದ್ರ ಸಿಂಗ್ ಎಂಬವರನ್ನು ಆಗಂತುಕರ ತಂಡವೊಂದು ಸೀಟಿನಿಂದ ಹೊರ ಎಳೆದಿದೆ. ಬಳಿಕ ಚೂರಿ, ಪಿಸ್ತೂಲ್ ತೋರಿಸಿ ಸಿಂಗ್ ಕೈಯಲ್ಲಿದ್ದ ಸೂಟ್ ಕೇಸ್ ಎಳೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸೂಟ್ ಕೇಸಲ್ಲಿ 4.11 ಕಿಲೋ ಚಿನ್ನದೊಡವೆಗಳಿತ್ತು ಅಂತ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ರೈಲು ನಿಲ್ದಾಣದಿಂದ ಪರಾರಿಯಾಗಿರೋದಾಗಿ ರಾಜೇಂದ್ರ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಕಳ ಎಎಸ್ಪಿ ಹೃಷಿಕೇಷ್ ನೇತೃತ್ವದಲ್ಲಿ ಮೂರು ತಂಡ ರಚನೆ ಮಾಡಲಾಗಿದೆ.

    ಆರೋಪಿಗಳು ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ದರೋಡೆ ಕೃತ್ಯ ಎಸಗಿದ್ದಾರೆ. ಉಡುಪಿ ಎಸ್.ಪಿ ಡಾ. ಸಂಜೀವ ಪಾಟೀಲ್ ಮಾಹಿತಿಗಳನ್ನು ತರಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.

    ರಾಜೇಂದ್ರ ಸಿಂಗ್ ಮುಂಬೈನ ಜ್ಯುವೆಲ್ಲರಿ ಕಂಪೆನಿಯೊಂದರ ಉದ್ಯೋಗಿ. ಗೋವಾ, ಕಾರವಾರ, ಉಡುಪಿ, ಮಂಗಳೂರು, ಕೇರಳ, ತಮಿಳ್ನಾಡಿನಲ್ಲಿರೋ ಚಿನ್ನದಂಗಡಿಗಳಿಗೆ ಒಡವೆಗಳ ಸಪ್ಲೈ ಮಾಡುತ್ತಿದ್ದರು. ಸಿಂಗ್ ಆರ್ಡರ್ ತೆಗೆದುಕೊಂಡು ಚಿನ್ನ ಕೊಡಲು ರೈಲು ಹತ್ತಿದ್ದರು. ಈ ಎಲ್ಲಾ ಮಾಹಿತಿಯಿದ್ದ ಯಾರೋ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ದೊಡ್ಡಣ್ಣ ಅಳಿಯ ವೀರೇಂದ್ರ ಮನೆಯಲ್ಲಿ ಕಳ್ಳತನ ಎಸಗಿದ್ದ ಮೂವರು ಅರೆಸ್ಟ್

    ದೊಡ್ಡಣ್ಣ ಅಳಿಯ ವೀರೇಂದ್ರ ಮನೆಯಲ್ಲಿ ಕಳ್ಳತನ ಎಸಗಿದ್ದ ಮೂವರು ಅರೆಸ್ಟ್

    ಚಿತ್ರದುರ್ಗ: ಉದ್ಯಮಿ ಹಾಗೂ ಚಿತ್ರನಟ ದೊಡ್ಡಣ್ಣನ ಅಳಿಯ ಕೆ.ಸಿ.ವೀರೇಂದ್ರ ಹಾಗೂ ಅವರ ಸಹೋದರ ತಿಪ್ಪೇಸ್ವಾಮಿ ಅವರ ಮನೆಯನ್ನು ದೋಚಿದ್ದ ಓರ್ವ ಬಾಲಾಪರಾಧಿ ಸೇರಿದಂತೆ ನಾಲ್ವರು ಚೋರರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

    ಮಂಜುನಾಥ್, ರಾಕೇಶ್, ಸ್ವರೂಪ್ ಬಂಧಿತ ಆರೋಪಿಗಳು. ಚಳ್ಳಕೆರೆ ಸಿಪಿಐ ತಿಮ್ಮಣ್ಣ ನೇತೃತ್ವದ ತಂಡ ನಾಲ್ಕು ದಿನಗಳಲ್ಲಿ ಈ ಪ್ರಕರಣ ಬೇಧಿಸಿದ್ದು, ಬಂಧಿತರಿಂದ 17 ಕೆಜಿ ಚಿನ್ನದ ಬಿಸ್ಕೆಟ್ ಹಾಗೂ 10 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಕೆ.ಸಿ.ವೀರೇಂದ್ರ ಹಾಗೂ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ 21 ಕೆಜಿ ಚಿನ್ನ ಹಾಗೂ 10 ಲಕ್ಷದ 70 ಸಾವಿರ ಹಣ ಲಪಟಾಯಿಸಿದ್ದರು. ಈ ಸಂಬಂಧ ಮೂರು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಬಂಧಿತ ಆರೋಪಿಗಳ ಪೈಕಿ ಮಂಜುನಾಥ್ ವೀರೇಂದ್ರ ಅವರ ಮನೆಯಲ್ಲೇ ಕೆಲಸ ಮಾಡುತ್ತಿದ್ದ. ಕದ್ದ ಚಿನ್ನದ ಗಟ್ಟಿಗಳನ್ನು ಮಹಾರಾಷ್ಟ್ರ, ಆಂಧ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿರುವುದಾಗಿ ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

    ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
    ಮಂಜುನಾಥ್ ಹಾಗೂ ರಾಕೇಶ್ ಪೊಲೀಸರನ್ನು ನೋಡಿ ಚಳ್ಳಕೆರೆಯಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ನಡುವೆ ಆರೋಪಿ ಮಂಜುನಾಥ್ ಮೋಜಿಗಾಗಿ ಕಳ್ಳತನ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಷಿ ಹೇಳಿದ್ದಾರೆ.

  • ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಬೆಂಗಳೂರು: ದುಬಾರಿಯಾಗಿ ಬಲು ಭಾರವಾಗಿದ್ದ ಚಿನ್ನದ ದರ ಈಗ ಕೊಂಚ ಇಳಿಕೆಯಾಗಿ ರಿಲೀಫ್ ಮೂಡಿಸಿದೆ. ಕಳೆದ ಮೂರು ದಿನದಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿದ್ದ ಚಿನ್ನ ಇಂದು ಏಕಾಏಕಿ ಹತ್ತು ಗ್ರಾಂಗೆ 1200 ರೂ ಕುಸಿತ ಕಂಡಿದೆ.

    24 ಕ್ಯಾರೆಟ್ ಚಿನ್ನದ ಹಿಂದಿನ ದರ 31,900 ರೂ. ಆಗಿತ್ತು. ಆದರೆ ಇಂದು 1,270 ರೂ. ಕಡಿಮೆಯಾಗಿ 30,630 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಹಿಂದಿನ ದರ 28,750 ರೂ. ಆಗಿತ್ತು. ಆದರೆ ಈಗ 300 ರೂ. ಕಡಿಮೆಯಾಗಿದ್ದು 28,450 ರೂ. ಆಗಿದೆ.

    ಸಪ್ಟೆಂಬರ್ 8 ರಂದು ಒಂದೇ ದಿನ 990 ರೂ. ಏರಿಕೆಯಾಗಿತ್ತು. ಇದರಿಂದಾಗಿ 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿತ್ತು. ಈ ಬೆಲೆ ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಏರಿಕೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಇದನ್ನೂ ಓದಿ: 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿದ್ದು ಮತ್ತು ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಚಿನ್ನದ ದರ ಭಾರೀ ಏರಿಕೆಯಾಗಿತ್ತು.

    ಇದನ್ನೂ ಓದಿ: ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

  • ಸುರಂಗ ಕೊರೆದು ಬೆಂಗಳೂರಿನ ಜ್ಯುವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದ ಕಳ್ಳರು ಕೊನೆಗೂ ಸಿಕ್ಕಿಬಿದ್ರು!

    ಸುರಂಗ ಕೊರೆದು ಬೆಂಗಳೂರಿನ ಜ್ಯುವೆಲ್ಲರಿ ಅಂಗಡಿಗೆ ಕನ್ನ ಹಾಕಿದ್ದ ಕಳ್ಳರು ಕೊನೆಗೂ ಸಿಕ್ಕಿಬಿದ್ರು!

    ಬೆಂಗಳೂರು: ಎರಡು ತಿಂಗಳ ಹಿಂದೆ ಬೆಂಗಳೂರು ಹೊರವಲಯ ಕೆ.ಆರ್.ಪುರದ ಮೋರಿಯಲ್ಲಿ ಸುರಂಗ ಮಾರ್ಗ ಕೊರೆದು, ಜ್ಯುವೆಲ್ಲರಿ ಅಂಗಡಿಯಿಂದ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನ ಕದ್ದಿದ್ದ ನಾಲ್ಕು ಮಂದಿ ದರೋಡೆಕೋರರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

    ಈ ಕಳ್ಳರನ್ನ ಬಂಧಿಸುವಲ್ಲಿ ನೆಲಮಂಗಲ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆ.ಆರ್.ಪುರಂ ಮೂಲದ ಸುಶಾಂತ್, ಜಗದೀಶ್, ಜಿಗಣಿ ಮೂಲದ ಸಿದ್ದರಾಜು, ಸುನಿಲ್ ಕುಮಾರ್ ಬಂಧಿತ ಆರೋಪಿಗಳು.

    ನೆಲಮಂಗಲ ಪಟ್ಟಣದಲ್ಲಿಯೂ ಸಹ ಕಳ್ಳತನಕ್ಕೆ ಮುಂದಾಗುತ್ತಿದ್ದ ವೇಳೆ ಈ ನಾಲ್ವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ನಾವೇ ಕೆ.ಆರ್.ಪುರದ ಮೋರಿಯಲ್ಲಿ ಸುರಂಗ ಮಾರ್ಗ ಕೊರೆದು ಜ್ಯುವೆಲ್ಲರಿ ಶಾಪಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನ ಕದ್ದಿದ್ದು ಎಂಬುದಾಗಿ ಬಾಯಿಬಿಟ್ಟಿದ್ದಾರೆ.

    ಬಂಧಿತ ಆರೋಪಿಗಳು ಜುಲೈ ತಿಂಗಳ 15 ರಂದು ಕೆ.ಆರ್.ಪುರಂನ, ಬಾಲಾಜಿ ಜ್ಯುವೆಲ್ಲರಿ ಅಂಗಡಿಯಲ್ಲಿ ಸುರಂಗ ಮಾರ್ಗ ಕೊರೆದು ಸುಮಾರು, 29 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನ ಕದ್ದು ನಾಪತ್ತೆಯಾಗಿದ್ದರು. ಪೊಲೀಸರು ಪ್ರಕರಣವನ್ನ ಕೈಗೆತ್ತಿಕೊಂಡು ಕಾರ್ಯಾಚರಣೆ ನಡೆಸಿ 14 ಕೆ.ಜಿ ಬೆಳ್ಳಿ, 200 ಗ್ರಾಂ ಚಿನ್ನ, 10 ಬೈಕುಗಳು ಸೇರಿದಂತೆ, 1 ಹೊಂಡಾ ಅಮೇಜ್ ಕಾರನ್ನ ವಶಕ್ಕೆ ಪಡೆದಿದ್ದಾರೆ.

    ಈ ಆರೋಪಿಗಳು ಕೆ.ಆರ್.ಪುರಂ, ಆನೇಕಲ್, ಬನ್ನೇರುಘಟ್ಟ, ಅತ್ತಿಬೆಲೆ ಸೇರಿಂದತೆ, ನೆಲಮಂಗಲ ಠಾಣೆಯಲ್ಲಿ ಕಳ್ಳತನ ಕೊಲೆ ಸೇರಿದಂತೆ ಅನೇಕ ಪ್ರಕರಣಗಳಿದ್ದು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಅಮಿತ್ ಸಿಂಗ್ ಹೇಳಿದರು.

    ಇದನ್ನೂ ಓದಿ:  ಮೋರಿ ಒಳಗೆ ಸುರಂಗ ಕೊರೆದು ಜ್ಯುವೆಲ್ಲರಿ ಅಂಗಡಿಗೆ ಕನ್ನ

  • ಮಾವನ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಅಳಿಯ ಅರೆಸ್ಟ್

    ಮಾವನ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಅಳಿಯ ಅರೆಸ್ಟ್

    ಚಿಕ್ಕಬಳ್ಳಾಪುರ: ಮಾವನ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದ ಅಳಿಯ ಪೊಲೀಸರ ಅತಿಥಿಯಾಗಿರುವ ಘಟನೆ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ.

    ನೂರ್ ಮಹಮದ್ ಪೊಲೀಸರ ಅತಿಥಿಯಾಗಿರುವ ಕಳ್ಳ ಅಳಿಯ. ಮೂಲತಃ ಆಂಧ್ರದ ಹಿಂದೂಪುರ ಮೂಲದ ನೂರ್ ಮಹಮದ್ ಗುಡಿಬಂಡೆ ತಾಲೂಕಿನ ರಾಮಪಟ್ಟಣ ಗ್ರಾಮದ ಮಹಬೂಬ್ ಸಾಬ್ ರ ಕಿರಿಯ ಮಗಳು ಕೌಸರ್ ಉನ್ನೀಸಾರನ್ನ ವಿವಾಹವಾಗಿದ್ದ.

    2 ವರ್ಷಗಳ ಹಿಂದೆ ಕೌಸರ್ ಉನ್ನೀಸಾ ಅನಾರೋಗ್ಯದ ಹಿನ್ನೆಲೆಯಲ್ಲಿ ತವರು ಮನೆ ಸೇರಿದ್ದರು. ಮಹಮದ್ ಪತ್ನಿ ಕೌಸರ್ ಉನ್ನೀಸಾರನ್ನ ನೋಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದ. ಮನೆಯಲ್ಲಿ ಹಳೆಯ ಕಾಲದ ಪೆಟ್ಟಿಗೆಯಲ್ಲಿದ್ದ 370 ಗ್ರಾಂ ಚಿನ್ನಾಭರಣಗಳು, 450 ಗ್ರಾಂ ಬೆಳ್ಳಿ ಅಭರಣಗಳು ಸೇರಿದಂತೆ 6000 ರೂ. ನಗದು ಕಳವು ಮಾಡಿ ಪರಾರಿಯಾಗಿದ್ದ.

    ಈ ಸಂಬಂಧ ಅಳಿಯನ ಮೇಲೆ ಅನುಮಾನಗೊಂಡಿದ್ದ ಮಾವ ಮೆಹಬೂಬ್ ಸಾಬ್ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳ ಅಳಿಯ ನೂರ್ ಮಹಮದ್ ನನ್ನ ಬಂಧಿಸಿದ್ದಾರೆ. ಬಂಧಿತನಿಂದ 6000 ರೂ. ನಗದು ಸೇರಿದಂತೆ 11 ಲಕ್ಷದ 35 ಸಾವಿರದ 600 ರೂ. ಮೌಲ್ಯದ ಅಭರಣಗಳನ್ನ ವಶಪಿಡಿಸಿಕೊಂಡಿದ್ದಾರೆ.

  • ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ಬೆಂಗಳೂರು: ಬಿಡಿಎ ಬ್ರೋಕರ್‍ವೊಬ್ಬರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಕಂತೆ ಕಂತೆ ನೋಟುಗಳು ಹಾಗೂ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನ ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಿಡಿಎ ಬ್ರೋಕರ್ ಸುರೇಶ್ ಅಲಿಯಾಸ್ ಸೂರಿ ಮನೆಯಲ್ಲಿ ಗರಿಗರಿ ನೋಟುಗಳ ಕಂತೆ ಮೇಲೆ ಲಕ್ಷ್ಮೀ ವಿಗ್ರಹವಿಟ್ಟು ಪೂಜೆ ಮಾಡಲಾಗಿದೆ. ಸೂರಿ ಎಚ್‍ಎಸ್‍ಆರ್ ಲೇಔಟ್ ಬಿಡಿಎ ವಿಭಾಗದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ನರ್ ಕಟ್ಟಿಂಗ್ ಸೂರಿ ಎನ್ನುವ ಅಡ್ಡ ಹೆಸರಿದೆ. ಇದೀಗ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ಪೂಜೆಗೆ ಸಾಲಾಗಿ ಜೋಡಿಸಿರುವ ಹಣದ ಮುಂದೆ ರಾಜಾರೋಷವಾಗಿ ಫೋಸ್ ಕೊಟ್ಟು ಪೀಕಲಾಟಕ್ಕೆ ಸಿಲುಕಿದಂತಾಗಿದೆ.

    ಕಾರ್ನರ್ ಕಟಿಂಗ್ ಸೈಟ್, ಬದಲಿ ಸೈಟ್ ಹೆಸರಿನಲ್ಲಿ ಸೂರಿ ಕೋಟ್ಯಾಂತರ ರುಪಾಯಿ ಹಣ ಗಳಿಕೆ ಮಾಡಿದ್ದಾರೆ ಎನ್ನುವ ಆರೋಪ ಈಗ ಬಲವಾಗಿ ಕೇಳಿಬಂದಿದೆ. ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್‍ಗಳಾಗಿ ಕನ್ವರ್ಟ್ ಮಾಡಿ ಮಾರಿದ್ದ ಆರೋಪ ಇವರ ಮೇಲಿದೆ.

     

  • ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಒಳ ಉಡುಪಿನಲ್ಲಿ 4 ಕೆಜಿ ಚಿನ್ನ ಸಾಗಿಸ್ತಿದ್ದ ಮಹಿಳೆಯರು ಮುಂಬೈನಲ್ಲಿ ಅರೆಸ್ಟ್

    ಮುಂಬೈ: ತಮ್ಮ ಒಳ ಉಡುಪಿನಲ್ಲಿ 4 ಕೆ.ಜಿ ಯಷ್ಟು ಚಿನ್ನವನ್ನು ಸಾಗಾಟ ಮಾಡುತ್ತಿದ್ದ ಭಾರತೀಯ ಮೂಲದ ಮಹಿಳೆಯರಿಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಮಲೇಷಿಯಾದ ಸಂತಾಲೆತ್ಮಿ ಸುಮಮಾನಂ(41) ಹಾಗೂ ಸಿಂಗಾಪುರದ ಮ್ಯಾಗಿಸ್ವೇರಿ ಜೈರಾಮ್ನ(59) ಬಂಧಿತ ಮಹಿಳೆಯರು.

    ಶನಿವಾರ ಈ ಮಹಿಳೆಯರಿಬ್ಬರು ಜೆಟ್ ಏರ್ ವೇಸ್ ಫ್ಲೈಟ್ 9ಢ 009 ಮೂಲಕ 3 ಗಂಟೆ ಸುಮಾರಿಗೆ ಮುಂಬೈ ಏರ್‍ಪೋರ್ಟ್ ಗೆ ಬಂದಿಳಿದಿದ್ದಾರೆ. ಈ ವೇಳೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಮಹಿಳೆಯರು ತಮ್ಮ ಸೊಂಟ, ಕೈ ಅಡಿ ಹಾಗೂ ಒಳ ಉಡುಪಿನಲ್ಲಿ ಸುಮಾರು 1.2 ಕೋಟಿ ರೂ. ಮೌಲ್ಯದ ಚಿನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಓರ್ವ ಮಹಿಳೆ ತಾನು ಶಾಪಿಂಗ್ ಮುಗಿಸಿ ಬಂದಿದ್ದು, ನಾಳೆ ಸಿಂಗಾಪುರಕ್ಕೆ ತೆರಳಲಿದ್ದೇನೆ ಅಂತ ಅಧಿಕಾರಿಗಳ ಜೊತೆ ಹೇಳಿದ್ದಾಳೆ. ಆದ್ರೆ ಆಕೆಯ ಹೇಳಿಕೆಯಿಂದ ಅಧಿಕಾರಿಗಳಲ್ಲಿ ಸಂಶಯ ವ್ಯಕ್ತವಾಗಿದೆ. ಒಟ್ಟಾರೆ ಇಬ್ಬರು ಮಹಿಳೆಯರಿಂದ ಅಧಿಕಾರಿಗಳು ತಲಾ 2 ಕೆಜಿ ಚಿನ್ನದ ಸರವನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಚಿನ್ನವನ್ನು ಸ್ವೀಕರಿಸಲು ವ್ಯಕ್ತಿಯೊಬ್ಬರು ಹೊರಗಡೆ ನಿಂತಿರುವುದಾಗಿ ಮಹಿಳೆಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಈ ವಿಚಾರ ತಿಳಿದು ಅಧಿಕಾರಿಗಳು ವಿಮಾನ ನಿಲ್ದಾಣದ ಹೊರಗಡೆ ನಿಂತಿದ್ದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಈ ವೇಳೆ `ತಾನು ಸಿಂಗಾಪುರ ಮೂಲದ ವ್ಯಕ್ತಿಯಿಂದ ನಾನು ಚಿನ್ನ ಖರೀದಿಸುತ್ತಿದ್ದೆ. ಆದ್ರೆ ಆತ ಯಾರ ಬಳಿ ಕಳುಹಿಸುತ್ತಿದ್ದಾನೆ ಅಂತ ನನಗೆ ಗೊತ್ತಿಲ್ಲ. ಆತ ಚಿನ್ನ ಕಳುಹಿಸುತ್ತಿರೋ ವ್ಯಕ್ತಿಯ ಫೋಟೋಗಳನ್ನು ನನಗೆ ಮೊಬೈಲ್ ನಲ್ಲಿ ಕಳುಹಿಸುತ್ತಿದ್ದ. ಹೀಗಾಗಿ ನಾನು ಅವರ ಕೈಯಿಂದ ತೆಗೆದುಕೊಳ್ಳಲೆಂದು ಬಂದಿದ್ದೆ. ಆದ್ರೆ ಇದರಲ್ಲಿ ನನ್ನ ತಪ್ಪಿಲ್ಲ ಅಂತ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ.

    ಬಂಧಿತ ಇಬ್ಬರು ಮಹಿಳೆಯರು ಬಹಳ ಬುದ್ಧಿವಂತಿಕೆಯಿಂದ ಚಿನ್ನದ ಸರ ಹಾಗೂ ಕಡಗಗಳನ್ನು ಸಾಗಾಟ ಮಾಡುತ್ತಿದ್ದರು. ಸದ್ಯ ಈ ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಂತ ಕಸ್ಟಮ್ಸ್ ಉಪ ಕಮಿಷನರ್ ಎಐಯು ಪ್ರದ್ನ್ಯಾ ಶೀಲ್ ಜುಮ್ಮೆ ಹೇಳಿದ್ದಾರೆ.

    ಇನ್ನು ಚಿನ್ನವನ್ನು ಕಳುಹಿಸಿದ ವ್ಯಕ್ತಿ ಈ ಇಬ್ಬರು ಮಹಿಳೆಯರಿಗೆ ಉಳಿದುಕೊಳ್ಳಲೆಂದು ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಹೊಟೇಲಿನಲ್ಲಿ ರೂಮ್ ಕೂಡ ಬುಕ್ ಮಾಡಿದ್ದನು ಎನ್ನಲಾಗಿದೆ.