Tag: gold

  • ಡಿಕೆಶಿ ಮನೆಯಲ್ಲಿ ನಗನಾಣ್ಯ ಪತ್ತೆ: ಬಿಜೆಪಿ ಸೇರ್ಪಡೆ ಆಮಿಷ ಆರೋಪಕ್ಕೆ ಐಟಿ ಕೆಂಡಾಮಂಡಲ

    ಡಿಕೆಶಿ ಮನೆಯಲ್ಲಿ ನಗನಾಣ್ಯ ಪತ್ತೆ: ಬಿಜೆಪಿ ಸೇರ್ಪಡೆ ಆಮಿಷ ಆರೋಪಕ್ಕೆ ಐಟಿ ಕೆಂಡಾಮಂಡಲ

    ಬೆಂಗಳೂರು: ಐಟಿ ದಾಳಿ ಬಿಜೆಪಿ ಪ್ರೇರಿತ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಗೆ ಸೆಳೆಯಲು ದಾಳಿ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆದಾಯ ತೆರಿಗೆ ಇಲಾಖೆ ಗರಂ ಆಗಿದೆ.

    ಗುರುವಾರ ಸಂಜೆ ಕರ್ನಾಟಕ ಗೋವಾ ಪ್ರಾಂತ್ಯದ ಐಟಿ ಇಲಾಖೆ ಮಹಾನಿರ್ದೇಶಕರಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಿಎಂ ಆರೋಪವನ್ನು ಅಲ್ಲಗಳೆದಿದ್ದಾರೆ. ಐಟಿ ಅಧಿಕಾರಿಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಐಟಿ ಇಲಾಖೆ ವೃತ್ತಪರತೆ ಹೊಂದಿದ್ದು, ಮುಖ್ಯಮಂತ್ರಿ ಆರೋಪ ಸರಿಯಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಡಿಕೆಶಿ ಮನೆ ಮೇಲೆ ನಡೆದ ರೇಡ್‍ಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಕೂಡ ಬಿಟ್ಟುಕೊಟ್ಟಿದ್ದಾರೆ. ದಾಳಿ ವೇಳೆ, ನೂರಾರು ಕೋಟಿ ಅಘೋಷಿತ ಆಸ್ತಿ, ಚಿನ್ನಾಭರಣ ಪತ್ತೆಯಾಗಿರುವುದಾಗಿ ಮಾಧ್ಯಮ ಪ್ರಕಟಣೆ ತಿಳಿಸಲಾಗಿದೆ.

    ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?
    ನಮ್ಮ ಐಟಿ ದಾಳಿಯನ್ನ ಕೆಲವು ರಾಜಕೀಯ ಮುಖಂಡರು ಕೆಲ ಆರೋಪಗಳನ್ನ ಮಾಡುತ್ತಿದ್ದಾರೆ. ಐಟಿ ದಾಳಿ, ಐಟಿ ಇಲಾಖೆ ರಾಜಕೀಯ ಪ್ರೇರಿತ ಎಂದು ಆರೋಪಗಳನ್ನ ಮಾಡಿದ್ದಾರೆ. ಆದರಲ್ಲೂ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿ, ಐಟಿ ಅಧಿಕಾರಿಗಳು ದಾಳಿ ವೇಳೆ ಸಚಿವರನ್ನು ಬಿಜೆಪಿಗೆ ಸೇರುವಂತೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ನಾವು ಪ್ರಬಲವಾಗಿ ತಳ್ಳಿಹಾಕುತ್ತಿದ್ದೇವೆ. ಐಟಿ ಇಲಾಖೆ ವೃತ್ತಿಪರ, ರಾಜಕೀಯೇತರ ಇಲಾಖೆ. ದಾಳಿಯ ಸಂದರ್ಭದಲ್ಲಿ ನೂರಾರು ಕೋಟಿ ಅಘೋಷಿತ ಆಸ್ತಿ, ಚಿನ್ನಾಭರಣಗಳು ಪತ್ತೆಯಾಗಿವೆ. ಇದನ್ನು ದಾಳಿಯ ಸಂದರ್ಭದಲ್ಲಿ ಅವರು ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ: ಬಿಜೆಪಿಯಿಂದ ನಿಮಗೆ ಆಹ್ವಾನ ಬಂದಿತ್ತಾ: ಡಿಕೆಶಿ ತಿಳಿಸಿದ್ದು ಹೀಗೆ

    ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಮಗಳು ಐಶ್ವರ್ಯಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ಪತ್ನಿ ಉಷಾಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ಇದನ್ನೂ ಓದಿ: ನಾನು ತೆರೆದ ಪುಸ್ತಕ, ಯಾವುದಕ್ಕೂ ಭಯಪಡಲ್ಲ: ಡಿಕೆ ಶಿವಕುಮಾರ್

    ಇದನ್ನೂ ಓದಿ:  Exclusive: ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ಕೇಳಿದ ಪ್ರಶ್ನೆಗಳು ಏನು..?

    ಇದನ್ನೂ ಓದಿ: ಡಿಕೆಶಿ ಮೇಲೆ ಐಟಿ ದಾಳಿಗೆ ಪ್ಲ್ಯಾನ್ ನಡೆದಿದ್ದು ಹೀಗೆ

     

     

     

  • 8 ವರ್ಷದಲ್ಲಿ ಫಸ್ಟ್ ಟೈಂ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆ

    8 ವರ್ಷದಲ್ಲಿ ಫಸ್ಟ್ ಟೈಂ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆ

    ಮುಂಬೈ: 8 ವರ್ಷದಲ್ಲೇ ಭಾರತದಲ್ಲಿ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ವರ್ಲ್ಡ್  ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ)ಹೇಳಿದೆ.

    ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಸರಾಸರಿ ಪ್ರತಿ ವರ್ಷ 845 ಟನ್ ಚಿನ್ನ ಬಳಕೆಯಾಗುತಿತ್ತು. ಆದರೆ 2017ರಲ್ಲಿ ಅಂದಾಜು 650 ಟನ್ ಬಳಕೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಡಬ್ಲ್ಯೂಜಿಸಿ ಆಡಳಿತ ನಿರ್ದೇಶಕರಾದ ಸೋಮಸುಂದರಂ ಪಿಆರ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    2016ರಲ್ಲಿ 666.1 ಟನ್ ಚಿನ್ನ ಬಳಕೆಯಾಗಿತ್ತು, ಜಿಎಸ್‍ಟಿ ಜಾರಿ ಮತ್ತು  ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಜಾರಿ ಮಾಡಿ ಆಭರಣ ಖರೀದಿ ಮೇಲೆ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ವಿಧಿಸಿದ ಬಳಿಕ ಚಿನ್ನದ ಬಳಕೆ ಭಾರೀ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಚಿನ್ನ ಬೇಡಿಕೆ ಶೇ.24ರಷ್ಟು ಇಳಿಕೆಯಾಗಿದೆ. ಭಾರತದಲ್ಲಿ ಮೂರನೇ ಎರಡರಷ್ಟು ಚಿನ್ನದ ಬೇಡಿಕೆ ಗ್ರಾಮೀಣ ಭಾಗದಿಂದ ಬರುತ್ತದೆ. ಆದರೆ ಈ ಬಾರಿ ಮುಂಗಾರು ಮಳೆ ಕೆಲವೆಡೆ ಬಾರದೇ ಇದ್ದ ಕಾರಣ ಚಿನ್ನದ ಬೇಡಿಕೆ ಕುಸಿದಿದೆ  ಎಂದು ಡಬ್ಲ್ಯೂಜಿಸಿ ತನ್ನ ವರದಿಯಲ್ಲಿ ತಿಳಿಸಿದೆ.

    ಅಕ್ಟೋಬರ್ – ಡಿಸೆಂಬರ್ ವೇಳೆ ಹಬ್ಬಗಳು ಮತ್ತು ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ ಈ ಅವಧಿಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಡಬ್ಲ್ಯೂಜಿಸಿ ಹೇಳಿದೆ.

    ಜಿಎಸ್‍ಟಿಗೂ ಮೊದಲು ಚಿನ್ನದ ಮೇಲೆ ಸೇವಾ ತೆರಿಗೆ 1.2% ಇತ್ತು. ಜಿಎಸ್‍ಟಿಯಲ್ಲಿ ಚಿನ್ನದ ಮೇಲೆ 3% ತೆರಿಗೆ ವಿಧಿಸಲಾಗಿದೆ.

    ಇದೇ ಅಕ್ಟೋಬರ್ ನಲ್ಲಿ 50 ಸಾವಿರ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು.

    ನೋಟ್ ಬ್ಯಾನ್ ಬಳಿಕ ಆಭರಣ ಉದ್ಯಮಿಗಳು, ಅಕ್ರಮ ಹಣ ಸಕ್ರಮ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ- 2002 ಅನ್ನು ಆಭರಣ ಖರೀದಿ ವ್ಯವಹಾರಗಳಿಗೆ ವಿಸ್ತರಿಸಿತ್ತು. ವಿಸ್ತರಿಸಿದ ಪರಿಣಾಮ 50 ಸಾವಿರ ರೂ. ಮೇಲ್ಪಟ್ಟ ಚಿನ್ನಖರೀದಿ ವೇಳೆ ಗ್ರಾಹಕರು ಪಾನ್‍ಕಾರ್ಡ್ ವಿವರ ನೀಡಬೇಕಿತ್ತು. ಜೊತೆಗೆ ವ್ಯಾಪಾರಿಗಳು ಭಾರೀ ಮೌಲ್ಯದ ಖರೀದಿ ಬಗ್ಗೆ ದಾಖಲೆ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಹಣಕಾಸು ಗುಪ್ತ ಚರ ಇಲಾಖೆಗೆ ಸಲ್ಲಿಸಬೇಕಿತ್ತು.

    ಪ್ರಸ್ತುತ ಈಗ 2 ಲಕ್ಷ ರೂ. ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ ಪಾನ್, ಆಧಾರ್ ನಂಬರ್, ಡಿಎಲ್ ಅಥವಾ ಪಾಸ್‍ಪೋರ್ಟ್ ಪ್ರತಿ ನೀಡುವುದು ಕಡ್ಡಾಯವಾಗಿದೆ.

  • ಫ್ಲ್ಯಾಟ್ ನಲ್ಲಿ ತಾಯಿ,ಮಗಳ ಶವ ಪತ್ತೆ- 1.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

    ಫ್ಲ್ಯಾಟ್ ನಲ್ಲಿ ತಾಯಿ,ಮಗಳ ಶವ ಪತ್ತೆ- 1.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

    ಮುಂಬೈ: 36 ವರ್ಷದ ತಾಯಿ ಹಾಗೂ ಆಕೆಯ 11 ವರ್ಷದ ಮಗಳು ತಮ್ಮ ಡೈಗರ್ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಮೃತ ದುರ್ದೈವಿ ತಾಯಿ-ಮಗಳನ್ನು ನಝಿಯಾ ಜಮಲುದ್ದೀನ್ ಸಿದ್ದಿಕಿ ಹಾಗೂ ತಾನಿಯಾ ಫರೋಜ್ ಸಯ್ಯದ್ ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ, ತಾಯಿ-ಮಗಳನ್ನು ಕೊಲೆ ಮಾಡಿ ಬಳಿಕ ಮನೆಯಲ್ಲಿದ್ದ ಸುಮಾರು 1.17ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

    ತಾಯಿ-ಮಗಳು ಸಾವನ್ನಪ್ಪಿದ ಬಳಿಕ ನಝಿಯಾ ತಾಯಿ ಬದ್ರುನಿಸಾ ಅಸ್ಲಾಂ ಸೈಯದ್ ಧಿಲ್ ದಿಗ್ರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ `ಘಟನೆಯ ವೇಳೆ ತನ್ನ ಮಗಳ ಪತಿ ಮನೆಯಲ್ಲಿರಲಿಲ್ಲ. ಆತ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಘಟನೆ ನವೆಂಬರ್ 4ರಂದು ತಡರಾತ್ರಿ ನಡೆದಿದೆ ಅಂತ ಹೇಳಿದ್ದಾರೆ.

    ನಝೀಯಾಳಿಗೆ ಅನೇಕ ಬಾರಿ ಕರೆ ಮಾಡಿದ್ದೇವು. ಆದ್ರೆ ಆಕೆಯನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವು ಆಕೆ ವಾಸಿಸುತ್ತಿದ್ದ ನಿವಾಸಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಝೀಯಾ ಕತ್ತು ಸೀಳಿದ ರೀತಿಯಲ್ಲಿ ಹಾಗೂ ಆಕೆಯ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಅಂತ ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

    ದರೋಡೆ ನಡೆಸಲು ಈ ಕೃತದ ಎಸಗಿರಬಹುದೆಂದು ಶಂಕಿಸಲಾಗಿದೆ. ಈಕೆಯ ಮನೆಯಲ್ಲಿ 20 ವರ್ಷದ ಯುವತಿಯೊಬ್ಬಳು ಮನೆಕೆಲಸಕ್ಕೆ ಇದ್ದಳು ಎನ್ನಲಾಗಿದ್ದು, ಯುವತಿ ಎರಡು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದಳು. ಹೀಗಾಗಿ ಆಕೆಯ ಗೆಳೆಯ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ. ಈ ಕುರಿತು ತನಿಖೆ ಮುಂದುವರೆಸುವುದಾಗಿ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

    ಸದ್ಯ ಘಟನೆಯ ಕುರಿತು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರವೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ರೋಗ ಗುಣಪಡಿಸುವುದಾಗಿ ಮನೆಯಲ್ಲೇ ತೀರ್ಥ ಕುಡಿಸಿ 160 ಗ್ರಾಂ ಚಿನ್ನ ದೋಚಿದ ಸ್ವಾಮೀಜಿ!

    ರೋಗ ಗುಣಪಡಿಸುವುದಾಗಿ ಮನೆಯಲ್ಲೇ ತೀರ್ಥ ಕುಡಿಸಿ 160 ಗ್ರಾಂ ಚಿನ್ನ ದೋಚಿದ ಸ್ವಾಮೀಜಿ!

    ಬೆಂಗಳೂರು: ರೋಗ ಗುಣಪಡಿಸುವುದಾಗಿ ನಕಲಿ ಸ್ವಾಮೀಜಿಯೊಬ್ಬ ತೀರ್ಥ ಕುಡಿಸಿ ಮಹಿಳೆಯ ಚಿನ್ನ ದೋಚಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ನ 1 ನೇ ಹಂತದಲ್ಲಿ ನಡೆದಿದೆ.

    ಸ್ವಾಮೀಜಿ ಪಾಶ್ರ್ವವಾಯು ರೋಗ ಗುಣಪಡಿಸುವುದಾಗಿ ಅಶ್ವತ್ ರೆಡ್ಡಿ ಎಂಬುವರ ಮನೆಯಲ್ಲಿ ಚಿನ್ನಾಭರಣವನ್ನು ಕದ್ದಿದ್ದು, ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಏನಿದು ಪ್ರಕರಣ?
    ಅಶ್ವತ್ ರೆಡ್ಡಿ ಅವರ ತಾಯಿ ಪಾಶ್ರ್ವವಾಯು ಸಮಸ್ಯೆಯಿಂದ ಬಳಲುತ್ತಿದರು. ಈ ಖಾಯಿಲೆಯನ್ನು ಪೂಜೆ ಮಾಡಿ ಗುಣಪಡಿಸುತ್ತೇನೆ ಎಂದು ನಕಲಿ ಸ್ವಾಮೀಜಿ ಹೇಳಿದ್ದಾನೆ. ಸ್ವಾಮೀಜಿಯ ಮಾತನ್ನು ನಂಬಿ ಪೂಜೆಗೆ ತಾಯಿ ಮಗಳು ಒಪ್ಪಿದ್ದಾರೆ. ಪೂಜೆ ವೇಳೆ ಚಿನ್ನಾಭರಣ ಧರಿಸುವಂತೆ ಹೇಳಿದ್ದಾನೆ. ಇದನ್ನು ನಂಬಿದ ತಾಯಿ-ಮಗಳು ಚಿನ್ನಾಭರಣ ಧರಿಸಿ ಕುಳಿತ್ತಿದ್ದರು.

    ಈ ವೇಳೆ ಪೂಜೆ ನೆಪದಲ್ಲಿ ಮತ್ತು ಬರುವ ಔಷಧಿಯನ್ನು ತೀರ್ಥ ರೂಪದಲ್ಲಿ ಕುಡಿಸಿ ಚಿನ್ನವನ್ನು ದರೋಡೆ ಮಾಡಿದ್ದಾನೆ. ಒಟ್ಟು 160 ಗ್ರಾಂ ಚಿನ್ನಾಭರಣವನ್ನು ದೋಚಿದ್ದಾನೆ.

    ಸ್ವಾಮೀಜಿ ಪೂಜೆ ಒಪ್ಪಿಕೊಂಡ ವಿಚಾರವನ್ನು ಮಗನಿಗೆ ತಿಳಿಸಿದರೆ ಬೈತಾನೆ ಎನ್ನುವ ಕಾರಣಕ್ಕೆ ಅಶ್ವತ್ ರೆಡ್ಡಿಗೆ ತಾಯಿ ತಿಳಿಸಿರಲಿಲ್ಲ. ಆದರೆ ಚಿನ್ನ ಕಳ್ಳತನವಾದ ಬಳಿಕ ಮಗನಿಗೆ ತಿಳಿಸಿದ್ದು, ಈಗ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ. ಮಡಿವಾಳ ಪೊಲೀಸರಿಂದ ಆರೋಪಿಗಾಗಿ ಶೋಧಕಾರ್ಯ ಮುಂದುವರೆದಿದೆ.

  • ಇದು ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ- ಇದರ ಬೆಲೆ ಕೇಳಿದ್ರೆ ದಂಗಾಗ್ತೀರ

    ಇದು ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ- ಇದರ ಬೆಲೆ ಕೇಳಿದ್ರೆ ದಂಗಾಗ್ತೀರ

    ಲಂಡನ್: ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿ ಅನಾವರಣಗೊಂಡಿದೆ. ಇಂಗ್ಲೆಂಡಿನ ಡಿಸೈನರ್ ಡೆಬ್ಬಿ ವಿಂಗ್ಹಾಮ್ ಈ ಚಪ್ಪಲಿಯನ್ನ ವಿನ್ಯಾಸಗೊಳಿಸಿದ್ದಾರೆ.

    ವಿಂಗ್ಹಾಮ್ ಈ ಹಿಂದೆ ವಿಶ್ವದ ಅತ್ಯಂತ ದುಬಾರಿ ಡ್ರೆಸ್ ವಿನ್ಯಾಸಗೊಳಿಸಿದ್ದರು. 64 ಮಿಲಿಯನ್ ಡಾಲರ್‍ನ ಕೇಕ್ ಹಾಗೂ 15.45 ಮಿಲಿಯನ್ ಡಾಲರ್‍ನ ಡ್ರೆಸ್ ವಿನ್ಯಾಸಗೊಳಿಸಿದ್ರು. ಸೆಲೆಬ್ರಿಟಿಗಳಿಗಾಗಿ ದುಬಾರಿ ಉತ್ಪನ್ನಗಳನ್ನ ತಯಾರಿಸೋದು ಈಕೆಯ ಹೆಗ್ಗಳಿಕೆ.

    ಇದೀಗ ವಿಂಗ್ಹಾಮ್ ತಯಾರಿಸಿರೋ ಈ ಸಿಕ್ಕಾಪಟ್ಟೆ ಕಾಸ್ಟ್ಲಿ ಚಪ್ಪಲಿಯ ಬೆಲೆ ಬರೋಬ್ಬರಿ 15.1 ಮಿಲಿಯನ್ ಡಾಲರ್. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಅಂದಾಜು 97.8 ಕೋಟಿ ರೂಪಾಯಿ. ಇದನ್ನ ಹುಟ್ಟುಹಬ್ಬದ ಉಡುಗೊರೆಗಾಗಿ ಗ್ರಾಹಕರೊಬ್ಬರು ತಯಾರು ಮಾಡಿಸಿದ್ದಾರೆ.

    ಅಂಥದ್ದೇನಪ್ಪಾ ಈ ಚಪ್ಪಲಿಯ ವಿಶೇಷತೆ ಅಂದ್ರಾ? ಇದು ಸಾಮಾನ್ಯ ಚಪ್ಪಲಿಯಲ್ಲ. ಇದರಲ್ಲಿ ಜಗತ್ತಿನ ಅತ್ಯಂತ ಅಪರೂಪದ ಗುಲಾಬಿ ಬಣ್ಣದ ವಜ್ರ ಹಾಗೂ ನೀಲಿ ವಜ್ರಗಳನ್ನ ಹಾಕಲಾಗಿದೆ. ಪ್ರತ್ಯೇಕವಾಗಿ ಈ ವಜ್ರಗಳ ಬೆಲೆಯೇ ಸುಮಾರು 84 ಕೋಟಿ ರೂ. ಆಗುತ್ತದೆ. ಇದರ ಜೊತೆಗೆ 3 ಕ್ಯಾರೆಟ್‍ನ ಬಿಳಿ ವಜ್ರ ಹಾಕಲಾಗಿದೆ. ಕೇಕ್ ಐಸಿಂಗ್‍ನಂತೆ ಮಾಡಲಾಗಿರುವ ಡಿಸೈನ್‍ನಲ್ಲಿ 1000 ಪಾಂಯ್ಟರ್ ವಜ್ರಗಳಿವೆ.

    ಚಪ್ಪಲಿಯ ಝಿಪ್ ಮತ್ತು ಕೆಳಭಾಗವನ್ನ ಚಿನ್ನದಿಂದ ವಿನ್ಯಾಸ ಮಾಡಲಾಗಿದೆ. ಪ್ರತಿಯೊಂದು ದುಬಾರಿ ವಜ್ರವನ್ನೂ ಪ್ಲಾಟಿನಂನಿಂದ ಕೂರಿಸಲಾಗಿದೆ. ಚಪ್ಪಲಿಯ ಹಿಮ್ಮಡಿಯನ್ನ ಲೆದರ್‍ನಿಂದ ಮಾಡಲಾಗಿದ್ದು, 24 ಕ್ಯಾರೆಟ್ ಚಿನ್ನದ ಪೇಂಟ್‍ನಿಂದ ಪೇಂಟ್ ಮಾಡಲಾಗಿದೆ. ಇದನ್ನ 18 ಕ್ಯಾರೆಟ್‍ನ ಚಿನ್ನದ ನೂಲಿನಲ್ಲಿ ಹೊಲಿಯಲಾಗಿದೆ. ಚಪ್ಪಲಿಯ ಒಳಭಾಗದಲ್ಲೂ ಚಿನ್ನದ ನೂಲಿನಿಂದ ಅಲಂಕಾರ ಮಾಡಲಾಗಿದೆ.

    ತಾನು ತಯಾರಿಸಿದ ಅತ್ಯಂತ ದುಬಾರಿ ವಸ್ತುಗಳಲ್ಲಿ ಈ ಚಪ್ಪಲಿಯೇ ಕೊನೆಯದ್ದಾಗಿರುತ್ತದೆ ಎಂದು ವಿಂಗ್ಹಾಮ್ ಹೇಳಿದ್ದಾರೆ.

  • ಹೂತಿಟ್ಟ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ

    ಹೂತಿಟ್ಟ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ

    ಕಲಬುರಗಿ: ಹೂತ ಶವವನ್ನು ಹೊರ ತೆಗೆದು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.

    ಪ್ರೇಮಾಬಾಯಿ ಡಗೆ ಎಂಬ 75 ವರ್ಷದ ಅಜ್ಜಿ ಐದು ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳಿರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕೆಯ ಮೈಮೇಲಿನ ಚಿನ್ನದ ಒಡವೆ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು.

    ಈ ಮಾಹಿತಿ ತಿಳಿದ ಪರಿಚಿತ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಕಳೆದ ರಾತ್ರಿ ಸಮಾಧಿಯಿಂದ ಶವ ಹೊರ ತೆಗೆದು ಶವದ ಮೈಮೇಲಿನ 50ಗ್ರಾಂ ಗೂ ಹೆಚ್ಚು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಖದೀಮರು ಚಿನ್ನಾಭರಣ ದೋಚಿ ಶವ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.

    ಮಂಗಳವಾರ ಬೆಳಗ್ಗೆ ಸಮಾಧಿ ಮೇಲೆ ಬಿದ್ದಿರುವ ಶವ ಕಂಡು ಕುಟುಂಬಸ್ಥರು ಕಂಗಾಲಾಗಿದ್ದು, ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

     

     

  • ದೀಪಾವಳಿ ‘ಚಿನ್ನ’ದ ಶಾಕ್ – ನಿನ್ನೆ ಕುಸಿದಿದ್ದ ದರ ಇಂದು ಏರಿಕೆಯಾಯ್ತು!

    ದೀಪಾವಳಿ ‘ಚಿನ್ನ’ದ ಶಾಕ್ – ನಿನ್ನೆ ಕುಸಿದಿದ್ದ ದರ ಇಂದು ಏರಿಕೆಯಾಯ್ತು!

    ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ಚಿನ್ನದ ದರ ಇಳಿಕೆಯಾಗಿದ್ದನ್ನು ನೋಡಿ ಇಂದು ಚಿನ್ನ ಖರೀದಿಸಲು ಹೋಗಿದ್ದ ಗ್ರಾಹಕರಿಗೆ ಶಾಕ್ ಕಾದಿತ್ತು. ಕಾರಣ ನಿನ್ನೆ 140 ರೂ. ಇಳಿಕೆ ಕಂಡ ಚಿನ್ನದ ರೇಟ್ ಇಂದು 290 ರೂ. ಏರಿಕೆಯಾಗಿತ್ತು.

    ದೀಪಾವಳಿ ಹಿನ್ನೆಲೆಯಲ್ಲಿ ಸ್ಥಳೀಯ ಜ್ಯುವೆಲ್ಲರಿಗಳಿಂದ ಹೆಚ್ಚಾದ ಬೇಡಿಕೆಯೇ ಇಂದಿನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಚಿನಿವಾರ ಪೇಟೆಯಲ್ಲಿ ವ್ಯವಹಾರ ನಡೆಸುತ್ತಿರುವವರು ಹೇಳಿದ್ದಾರೆ. ಚಿನ್ನದ ದರ ಕಳೆದ 3 ವಾರದಲ್ಲೇ ಮೊದಲ ಬಾರಿಗೆ ಹೆಚ್ಚಾಗಿದ್ದು 10 ಗ್ರಾಂ ಚಿನ್ನದ ದರ 31 ಸಾವಿರ ರೂ.ಗಳ ಗಡಿ ದಾಟಿತ್ತು.

    ದೀಪಾವಳಿ ಹಿನ್ನೆಲೆಯಲ್ಲಿ ದಿಢೀರ್ ಬೇಡಿಕೆ ಹೆಚ್ಚಾಯಿತು. ಈ ಬೇಡಿಕೆಯನ್ನು ಪೂರೈಸಲು ವರ್ತಕರು ಚಿನ್ನ ಖರೀದಿಗೆ ತೊಡಗಿದ್ದೇ ಬೆಲೆ ಏರಿಕೆಗೆ ಪ್ರಮುಖ ಕಾರಣ. ಜಾಗತಿಕ ಮಟ್ಟದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೂ ಸ್ಥಳೀಯ ಬೇಡಿಕೆ ಹೆಚ್ಚಾಯಿತು. ಇದರ ಪರಿಣಾಮ ದರ ಏರಿಕೆಯಾಗಿದೆ. ಸೆಪ್ಟೆಂಬರ್ 27ರಂದು ಚಿನ್ನದ ದರ 31 ಸಾವಿರ ರೂ.ಗಳ ಗಡಿ ದಾಟಿತ್ತು. ಆದರೆ ಮಂಗಳವಾರ ‘ಧನ್ ತೆರಾಸ್’ ಇದ್ದರೂ ಚಿನ್ನದ ದರದಲ್ಲಿ 140 ರೂ. ಇಳಿಕೆಯಾಗಿತ್ತು.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 290 ರೂ. ಏರಿಕೆ ಕಂಡಿದ್ದು, ಶೇ.99.9 ಮತ್ತು ಶೇ.99.5 ರಷ್ಟು ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 31,000 ರೂ. ಮತ್ತು 30,850 ರೂ. ಆಗಿದೆ.

     

  • ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 25 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ ಅಧಿಕಾರಿ!

    ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 25 ಲಕ್ಷಕ್ಕೂ ಅಧಿಕ ಹಣ ಲೂಟಿ ಮಾಡಿದ ಅಧಿಕಾರಿ!

    ಕಾರವಾರ: ಬ್ಯಾಂಕ್‍ ನಲ್ಲಿ ಚಿನ್ನವನ್ನು ಅಡವಿಟ್ಟುಕೊಳ್ಳುವ ಮೌಲ್ಯಮಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬ ನಕಲಿ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ರೂ. ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮಲ್ಲಾಪುರದ ರಾಜಕುಮಾರ್ ಶೇಟ್ ಎಂಬವನೇ ಬ್ಯಾಂಕ್ ಗೆ ಮೋಸ ಮಾಡಿ ಪರಾರಿಯಾದ ಆಭರಣ ಮೌಲ್ಯಮಾಪಕ. ರಾಜಕುಮಾರ್ ಜಿಲ್ಲೆಯ ಕಾರವಾರ ತಾಲೂಕಿನ ಮಲ್ಲಾಪುರ ಸಿಂಡಿಕೇಟ್ ಬ್ಯಾಂಕ್‍ ನಲ್ಲಿ ಕಳೆದ 11 ವರ್ಷದಿಂದ ಕೆಲಸ ಮಾಡುತ್ತಿದ್ದ. ಅಲ್ಲದೇ ಮಲ್ಲಾಪುರದಲ್ಲಿ ಆರ್.ಕೆ ಜ್ಯುವೆಲರ್ಸ್ ಎಂಬ ಚಿನ್ನಾಭರಣ ಅಂಗಡಿಯನ್ನು ನಡೆಸುತ್ತಿದ್ದ.

    ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ರಾಜಕುಮಾರ್ ಬ್ಯಾಂಕ್‍ ನಲ್ಲಿ ಹೆಚ್ಚು ನಂಬಿಕೆ ಗಳಿಸಿದ್ದ. ಇದನ್ನೇ ದುರುಪಯೋಗ ಮಾಡಿಕೊಂಡ ಆತ ತನ್ನ ಪರಿಚಯಸ್ಥರಿಗೆ ನಕಲಿ ಬಂಗಾರದ ಆಭರಣ ಮಾಡಿಸಿಕೊಟ್ಟು ಈ ಆಭರಣವನ್ನು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‍ನಲ್ಲಿ ಚಿನ್ನಾಭರಣ ಸಾಲ ತೆಗೆಸಿ ಆ ಹಣದಲ್ಲಿ ಕಮಿಷನ್ ಪಡೆದು ಬ್ಯಾಂಕ್‍ ನಿಂದ ಬರೋಬ್ಬರಿ 35 ಲಕ್ಷ ರೂ. ಪೀಕಿದ್ದಾನೆ. ಅಲ್ಲದೇ ತನ್ನ ಆಭರಣದ ಅಂಗಡಿಯ ಗ್ರಾಹಕರಿಗೂ ನಕಲಿ ಬಂಗಾರದ ಆಭರಣ ಮಾಡಿಕೊಟ್ಟು ಲಕ್ಷಗಟ್ಟಲೇ ಹಣವನ್ನು ದೋಚಿ ಪರಾರಿಯಾಗಿದ್ದಾನೆ.

    ಘಟನೆ ಬೆಳಕಿಗೆ ಬಂದದ್ದು ಹೇಗೆ: 2016 ರಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನಾಭರಣವನ್ನು ಬ್ಯಾಂಕ್‍ ನಿಂದ ಗ್ರಾಹಕರು ಬಿಡಿಸಿಕೊಂಡು ಹೋಗದ ಹಿನ್ನಲೆಯಲ್ಲಿ ಹರಾಜಿಗೆ ಹಾಕುವ ವೇಳೆ ಮತ್ತೊಬ್ಬ ಬಂಗಾರ ಪರೀಕ್ಷಕ ನಕಲಿ ಚಿನ್ನವನ್ನು ಪತ್ತೆ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ತಮ್ಮ ಬ್ಯಾಂಕ್‍ ನಲ್ಲಿ ಅಡವಿಟ್ಟಿದ್ದ ಇತರೆ ಖಾತೆಗಳನ್ನು ಪರೀಕ್ಷಿಸಿದ್ದಾರೆ. ಇದರಲ್ಲಿ 14 ಖಾತೆದಾರು ಅಡವಿಟ್ಟಿದ್ದ ಸುಮಾರು 53 ಲಕ್ಷ ಮೊತ್ತದ ಚಿನ್ನಾಭರಣ ನಕಲಿ ಎಂಬ ಅಂಶ ಬೆಳಕಿಗೆ ಬಂದಿದೆ.

    ಸದ್ಯ ಘಟನೆಯ ಕುರಿತು ಮಲ್ಲಾಪುರ ಠಾಣೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರು ದೂರು ನೀಡಿದ್ದಾರೆ. ಆದರೆ ಆರೋಪಿ ಎರಡು ವಾರದಿಂದ ಕುಟುಂಬ ಸಮೇತ ಪರಾರಿಯಾಗಿದ್ದು ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

    ಕೊಪ್ಪಳದಲ್ಲಿ ಡೋಂಗಿ ಬಾಬಾ ಅರೆಸ್ಟ್: 56 ಲಕ್ಷ ರೂ. ಚಿನ್ನಾಭರಣ ವಶ

    ಕೊಪ್ಪಳ: ಅಮಾಯಕ ಜನರಿಗೆ ಮಂಕುಬೂದಿ ಎರಚಿ ವಂಚಿಸುತ್ತಿದ್ದ ಡೋಂಗಿ ಬಾಬಾನನ್ನ ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

    ಯಾರಬ್ ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು 56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿ ನಿಧಿಯಿದ್ದು ಪೂಜೆ ಮಾಡಿ ತೆಗೆದು ಕೊಡುವುದಾಗಿ ಹೇಳಿ ಈತ ವಂಚನೆ ಮಾಡುತ್ತಿದ್ದ.

    ಗಂಗಾವತಿಯ ಹಿರೇಜಂತಕಲ್ ನಿವಾಸಿ ಜಾಮಿದ್ ಪಾಷಾ ಅವರಿಂದ ಈತ 13 ತೊಲೆ ಬಂಗಾರ ಪಡೆದು ವಂಚಿಸಿದ್ದ. ಜಾಮಿದ್ ಪಾಷಾ ದೂರಿನ ಅನ್ವಯ ಪೊಲೀಸರು ಈಗ ಬಾಬಾನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಬಂಧಿತ ಬಾಬಾನಿಂದ 1484 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಇನ್ನೋವಾ ಕಾರು, ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದ ಕೊಲಾರ, ಬಳ್ಳಾರಿ, ಬೆಂಗಳೂರು ಯಲಹಂಕ, ಬಂಗಾರಪೇಟೆ, ಹೊಸಪೇಟೆ ಭಾಗಗಳಲ್ಲಿ ಡೋಂಗಿ ಬಾಬಾ ವಂಚನೆ ಎಸಗಿದ್ದಾನೆ ಎಂದು ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.

     

     

  • ಟಾಯ್ಲೆಟ್‍ನಲ್ಲಿ 7 ಕೋಟಿ ರೂ. ಹಣ, 3 ಕೆಜಿ ಚಿನ್ನ ಪತ್ತೆ

    ಟಾಯ್ಲೆಟ್‍ನಲ್ಲಿ 7 ಕೋಟಿ ರೂ. ಹಣ, 3 ಕೆಜಿ ಚಿನ್ನ ಪತ್ತೆ

    ನವದೆಹಲಿ: ನಗರದ ಪ್ರತಿಷ್ಠಿತ ಆಟೋ ಉತ್ಪಾದನಾ ಮತ್ತು ಜೈ ಭಾರತ್ ಮಾರುತಿ (ಜೆಬಿಎಂ) ಗ್ರೂಪ್ ಆಫ್ ಕಂಪೆನಿಯ ಮೇಲೆ ನಡೆದ ಐಟಿ ದಾಳಿ ವೇಳೆ ಟಾಯ್ಲೆಟ್ ನಲ್ಲಿ ಸುಮಾರು 3 ಕೆಜಿ ಚಿನ್ನ ಮತ್ತು ಬೆಳ್ಳಿ ಹಾಗೂ 7 ಕೋಟಿ ರೂ. ನಗದು ಹಣ ಪತ್ತೆಯಾಗಿದೆ.

    ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ಇಲಾಖೆಯು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ (ಎನ್‍ಸಿಆರ್) ದಾಳಿ ನಡೆಸುತ್ತಿದೆ. ಗುರುವಾರ 50 ಕಡೆಗಳಲ್ಲಿ ಏಕಕಾಲದಲ್ಲಿ ಐಟಿ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಜೈ ಭಾರತ್ ಮಾರುತಿ ಕಂಪೆನಿಯ ಮುಖ್ಯಸ್ಥ ಎಸ್.ಕೆ ಆರ್ಯ ಅವರ ಮನೆಯ ಫರ್ನಿಚರ್, ಹಾಸಿಗೆ ಕೆಳಗೆ ಹಾಗೂ ಟಾಯ್ಲೆಟ್‍ನಲ್ಲಿ 7 ಕೋಟಿ ನಗದು ಹಣವನ್ನು ಬಚ್ಚಿಟ್ಟಿದ್ದರು. ಅಷ್ಟೇ ಅಲ್ಲದೇ ಸಂಸ್ಥೆಯು ಹಲವಾರು ಅಕ್ರಮ ವ್ಯವಹಾರವನ್ನು ನಡೆಸುತ್ತಿದೆ. ಆದರೆ ಅದ್ಯಾವುದನ್ನು ಸರಿಯಾದ ದಾಖಲೆ ಮಾಡಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ ಎಂದು ಐಟಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಐಟಿ ಇಲಾಖೆಗೆ ದೊರಕಿರುವ ಆಸ್ತಿ,ಹಣ, ಚಿನ್ನ ಮತ್ತು ದಾಖಲೆಗೆ ಯಾವುದೇ ರೀತಿಯ ಉತ್ತರವನ್ನು ನೀಡುತ್ತಿಲ್ಲ. ಕಂಪೆನಿಯ ವೆಬ್‍ಸೈಟ್ ಪ್ರಕಾರ, ಜೆಬಿಎಂ ಗ್ರೂಪ್ ನ ವಹಿವಾಟು ಸುಮಾರು 18.33 ಸಾವಿರ ಕೋಟಿ ರೂ. (1.2 ಬಿಲಿಯನ್ ಡಾಲರ್) ಇದೆ. ಜೊತೆಗೆ ವಿವಿಧ ವಾಹನ, ಎಂಜಿನಿಯರಿಂಗ್, ವಿನ್ಯಾಸ ಸೇವೆ, ನವಿಕರಿಸಬಹುದಾದ ಶಕ್ತಿ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮಾರುತಿ ಮತ್ತು ಅಶೋಕ್ ಲೇಲ್ಯಾಂಡ್ ಕಂಪೆನಿಂತಹ ದೊಡ್ಡ ಕಂಪನಿಗಳಿಗೆ ಆಟೋ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತದೆ. ಒಟ್ಟಾರೆ 18 ಸ್ಥಳಗಳಲ್ಲಿ 35 ಉತ್ಪಾದನಾ ಘಟಕಗಳು ಮತ್ತು 4 ಎಂಜಿಯರಿಂಗ್ ಮತ್ತು ವಿನ್ಯಾಸ ಕೇಂದ್ರಗಳನ್ನು ಹೊಂದಿದೆ.