Tag: gold

  • ದಾಖಲೆ ಮುರಿಯಲೇಬೇಕಿತ್ತು, ಮುಂದಿನ ಗುರಿ ಏಷ್ಯನ್ ಗೇಮ್ಸ್: ಮೀರಾ ಬಾಯಿ

    ದಾಖಲೆ ಮುರಿಯಲೇಬೇಕಿತ್ತು, ಮುಂದಿನ ಗುರಿ ಏಷ್ಯನ್ ಗೇಮ್ಸ್: ಮೀರಾ ಬಾಯಿ

    ಗೋಲ್ಡ್ ಕೋಸ್ಟ್: ದಾಖಲೆಗಳನ್ನು ಮುರಿಯುವ ನಿರೀಕ್ಷೆಯನ್ನು ನಾನು ಮಾಡಿರಲಿಲ್ಲ. ಇಲ್ಲಿಗೆ ಬಂದ ಮೇಲೆ ನಾನು ದಾಖಲೆಗಳನ್ನು ಮುರಿಯಲೇ ಬೇಕಾಗಿತ್ತು. ನನಗೆ ಆಗುತ್ತಿರುವ ಸಂತಸವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹೇಳಿದ್ದಾರೆ.

    ಕಾಮನ್‍ವೆಲ್ತ್ ಗೇಮ್ಸ್ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದಿದ್ದು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮಣಿಪುರದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ದಾಖಲೆಯ 196 ಕೆಜಿ ಎತ್ತಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

    ನಾನು ಈ ಪದಕ ಪಡೆಯಲು ತುಂಬಾ ಕಷ್ಟಪಟ್ಟಿದ್ದೆ. ಕಾಮನ್ ವೆಲ್ತ್ ಕ್ರೀಡಾಕೂಟದ ಎರಡನೇ ಪದಕವಾಗಿದೆ. ಚಿನ್ನ ಗೆದ್ದಿರುವುದು ಬಹಳ ಸಂತಸ ತಂದಿದೆ ಎಂದರು. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

    ನನ್ನ ಮುಂದಿನ ಗುರಿ ಏಷ್ಯಾನ್ ಗೇಮ್ಸ್. ಅಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ನಾನು ತುಂಬಾನೇ ಕಷ್ಟಪಡಬೇಕಾಗಿದೆ. ಮುಂದಿನ ಬಾರಿ ಇನ್ನೂ ಉತ್ತಮ ಪ್ರದರ್ಶನ ನೀಡಬೇಕು. ಆದರೆ ಇಲ್ಲಿ ಅಂತಹ ಪ್ರತಿಸ್ಪರ್ಧೆ ಇರಲಿಲ್ಲ ಎಂದು ತಿಳಿಸಿದರು.

    ಸ್ನ್ಯಾಚ್ ನಲ್ಲಿ 86 ಕೆಜಿ, ಕ್ಲೀನ್ ಮತ್ತು ಜರ್ಕ್ ನಲ್ಲಿ 110 ಕೆಜಿ ಎತ್ತುವ ಮೂಲಕ ಮೀರಾಬಾಯಿ ಚಿನ್ನವನ್ನು ಗೆದ್ದರು. ಈ ವಿಭಾಗದಲ್ಲಿ ಶ್ರೀಲಂಕಾ ದಿನುಶಾ 155 ಕೆಜಿ ಎತ್ತುವ ಮೂಲಕ ಕಂಚು ಗೆದ್ದರೆ, ಮಾರಿಷಸ್ ನ ಮಾರಿ ಹನಿಟ್ರಾ 170 ಕೆಜಿ ಎತ್ತುವ ಮೂಲಕ ಬೆಳ್ಳಿ ಗೆದ್ದರು. ಒಂದು ಚಿನ್ನ ಮತ್ತು ಒಂದು ಬೆಳ್ಳಿಯನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ  ಭಾರತ ಮೊದಲ ಸ್ಥಾನದಲ್ಲಿದೆ.

  • 42 ಆರೋಪಿಗಳ ಬಂಧನ – 140 ಬೈಕ್, 200ಗ್ರಾಂ ಚಿನ್ನ, ಹಣ, ಲ್ಯಾಪ್ ಟಾಪ್, ಮೊಬೈಲ್ ವಶ

    42 ಆರೋಪಿಗಳ ಬಂಧನ – 140 ಬೈಕ್, 200ಗ್ರಾಂ ಚಿನ್ನ, ಹಣ, ಲ್ಯಾಪ್ ಟಾಪ್, ಮೊಬೈಲ್ ವಶ

    ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ವೈಟ್ ಫೀಲ್ಡ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ, ಸರಗಳ್ಳತನ ಪ್ರಕರಣಗಳನ್ನು ಬೇಧಿಸಿ 42 ಆರೋಪಿಗಳ ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳಿಂದ 1.6 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವೈಟ್ ಫೀಲ್ಡ್ ವಿಭಾಗದ ಕಾಡುಗೋಡಿ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದ್ದಾರೆ. ಮಾರತ್ ಹಳ್ಳಿ, ಮಹದೇವಪುರ, ಎಚ್‍ಎಎಲ್ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಬಗ್ಗೆ ತನಿಖೆ ನಡೆಸಿ ಪೊಲೀಸರು 42 ಆರೋಪಿಗಳ ಬಂಧಿಸಿದ್ದು, ಬಂಧಿತರಿಂದ 140 ಬೈಕ್, 200 ಗ್ರಾಂ ಚಿನ್ನಾಭರಣ, ಲ್ಯಾಪ್ ಟಾಪ್, ಮೊಬೈಲ್, ಒಂದು ಕಾರು, ಟೆಂಪೋ ಸೇರಿದಂತೆ ಒಂದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಎಟಿಎಂಗೆ ಹಣ ಜಮೆ ಮಾಡಲು ಹೋಗಿ 52 ಲಕ್ಷ ಹಣ ದೋಚಿದ ಅಸಾಮಿ ಪರಮೇಶನನ್ನ ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತನಿಂದ ಅಷ್ಟು ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ವಿಧಾನಸಭಾ ಎಲೆಕ್ಷನ್ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಎಲ್ಲೆಡೆ ಭದ್ರತೆ ವಹಿಸಲಾಗಿದೆ. ನಗರದಲ್ಲಿ ಪರವಾನಿಗೆ ಪಡೆದಿರುವ 8000 ವೆಪನ್ಸ್ ಇದೆ. ಈಗಾಗಲೇ 1500 ವೆಪನ್ ಗಳನ್ನ ಡಿಪಾಸಿಟ್ ಮಾಡಲಾಗಿದೆ. ಉಳಿದವರು ಆಯಾ ಠಾಣಾ ವ್ಯಾಪ್ತಿಗಳಲ್ಲಿ ವೆಪನ್ ಗಳನ್ನ ಡೆಪಾಸಿಟ್ ಮಾಡಿ ಅವಶ್ಯಕತೆ ಇದ್ದಲ್ಲಿ ಡಿಸಿಪಿಗೆ ಲೇಟರ್ ನೀಡುವಂತೆ ಸೂಚನೆ ನೀಡಿದ್ದಾರೆ.

  • ಚಿನ್ನಾಭರಣ, ಹಣ ಸಿಗದಕ್ಕೆ ಶೂ ಕದ್ದ ಕಳ್ಳ

    ಚಿನ್ನಾಭರಣ, ಹಣ ಸಿಗದಕ್ಕೆ ಶೂ ಕದ್ದ ಕಳ್ಳ

    ಬೆಂಗಳೂರು: ಕಳ್ಳತನಕ್ಕೆಂದು ಮನೆಗಳಿಗೆ ನುಗ್ಗುವ ಕಳ್ಳರು ಸಾಮನ್ಯವಾಗಿ ಚಿನ್ನಾಭರಣ, ಹಣ ಅಥವಾ ಬೆಲೆ ಬಾಳುವ ವಸ್ತುಗಳನ್ನು ಕದ್ದುಕೊಂಡು ಹೋಗ್ತಾರೆ. ಕೆಲವೊಂದು ಸಾರಿ ಮನೆಯಲ್ಲಿ ಚಿನ್ನ, ಹಣ ಸಿಗದೇ ಪಕ್ಷದಲ್ಲಿ ಬೆಲೆಬಾಳುವ ಸೀರೆಗಳು ಅಥವಾ ಗೃಹಪಯೋಗಿ ವಸ್ತುಗಳನ್ನು ಕದಿಯುವದನ್ನು ನೋಡಿರುತ್ತೇವೆ.

    ಇಲ್ಲೊಬ್ಬ ಕಳ್ಳನಿಗೆ ಮನೆಯಲ್ಲಿ ಏನು ಸಿಗದಕ್ಕೆ ಅಲ್ಲಿರುವ ಎಲ್ಲ ಶೂಗಳನ್ನು ಕದ್ದುಕೊಂಡು ಹೋಗಿದ್ದಾನೆ. ಬೆಂಗಳೂರಿನ ಅಮೃತಹಳ್ಳಿಯ ಮನೆಗೆ ನುಗ್ಗಿದ ಕಳ್ಳನೊಬ್ಬ ಏನೂ ಸಿಗದೇ ಕೊನೆಗೆ ಶೂ ಕದ್ದು ಪರಾರಿಯಾಗಿದ್ದಾನೆ.

    ಕಳ್ಳ ಮನೆಗೆ ಎಂಟ್ರಿ ನೀಡುವ ಮತ್ತು ಶೂಗಳನ್ನು ಹಿಡಿದುಕೊಂಡು ಹಿಂದಿರುಗುವ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    https://youtu.be/yGHB8ixWX-4

  • ಹೆಣ್ಣು ಮಕ್ಕಳ ಚಪ್ಪಲಿಯಲ್ಲಿ ಅರ್ಧ ಕೆಜಿ ಚಿನ್ನ ಕಳ್ಳ ಸಾಗಾಣೆ – ಆರೋಪಿ ಅರೆಸ್ಟ್

    ಹೆಣ್ಣು ಮಕ್ಕಳ ಚಪ್ಪಲಿಯಲ್ಲಿ ಅರ್ಧ ಕೆಜಿ ಚಿನ್ನ ಕಳ್ಳ ಸಾಗಾಣೆ – ಆರೋಪಿ ಅರೆಸ್ಟ್

    ಬೆಂಗಳೂರು: ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಚಿನ್ನ ಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

    ದುಬೈನಿಂದ ಬೆಂಗಳೂರಿಗೆ ಶನಿವಾರ ರಾತ್ರಿ ಆಗಮಿಸಿದ್ದ ಇಂಡಿಗೋ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಣೆ ಮಾಡುತ್ತಿದ್ದ ಮುಂಬೈ ಮೂಲದ ವ್ಯಕ್ತಿಯನ್ನ ಕೆಐಎಎಲ್ ಅಧಿಕಾರಿಗಳು ಬಂಧಿಸಿದ್ದಾರೆ.

    ಆರೋಪಿ ಹೆಣ್ಣು ಮಕ್ಕಳ ಚಪ್ಪಲಿ ಹಾಗೂ ಸೌಂದರ್ಯ ಆಭರಣಗಳಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಣೆ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಕಸ್ಟಮ್ಸ್ ಆಯುಕ್ತರಾದ ಶಿವಪ್ರಕಾಶ್ ಸೇರಿದಂತೆ ವಸಂತ್ ಮಗೋಡ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ದಾಳಿಯಲ್ಲಿ ವಿವಿಧ ವಸ್ತುಗಲ್ಲಿ ಅಡಗಿಸಿಟ್ಟಿದ್ದ ಸುಮಾರು ಅರ್ಧ ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

  • ಮಂಗಳೂರು: ವಿಮಾನದ ಟಾಯ್ಲೆಟ್‍ನಲ್ಲಿ ಸಿಕ್ತು 4 ಕೆಜಿ ಚಿನ್ನ!

    ಮಂಗಳೂರು: ವಿಮಾನದ ಟಾಯ್ಲೆಟ್‍ನಲ್ಲಿ ಸಿಕ್ತು 4 ಕೆಜಿ ಚಿನ್ನ!

    ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನದಲ್ಲಿ ಆಕ್ರಮವಾಗಿ ಸಾಗಣೆ ಮಾಡುತ್ತಿದ್ದ ಸುಮಾರು ನಾಲ್ಕು ಕೆಜಿ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

    ದುಬೈ ನಿಂದ ಮಂಗಳೂರಿಗೆ ಆಗಮಿಸಿದ ಜೆಟ್ ವಿಮಾನದ ಟಾಯ್ಲೆಟ್ ನಲ್ಲಿ ಅಕ್ರಮ ಚಿನ್ನವನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

    ವಿಮಾನದ ಟಾಯ್ಲೆಟ್ ನಲ್ಲಿ ತಲಾ ಒಂದು ಕೆಜಿ ತೂಕದ 4 ಚಿನ್ನದ ಬಿಸ್ಕತ್ತು ಅಡಗಿಸಿ ಇಡಲಾಗಿತ್ತು. ಇವು ಸುಮಾರು 1.20ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

  • ಟೇಕ್‌ ಆಫ್‌ ವೇಳೆ ವಿಮಾನದಿಂದ ಜಾರಿ ಬಿತ್ತು 3 ಟನ್ ಚಿನ್ನ!

    ಟೇಕ್‌ ಆಫ್‌ ವೇಳೆ ವಿಮಾನದಿಂದ ಜಾರಿ ಬಿತ್ತು 3 ಟನ್ ಚಿನ್ನ!

    ಮಾಸ್ಕೋ : ಬೆಳೆಬಾಳುವ ಲೋಹಗಳನ್ನು ಹೊತ್ತೊಯ್ಯುವ ಸರಕು ವಿಮಾನ ಟೇಕ್ ಆಫ್ ಆಗುವ ವೇಳೆ ಆಕಸ್ಮಿಕವಾಗಿ ಸುಮಾರು ಮೂರು ಟನ್ ಚಿನ್ನ ಜಾರಿ ಬಿದ್ದಿರುವ ಘಟನೆ ರಷ್ಯಾದ ಯುಕುಟ್ಸ್ಕ್ ನಗರದ ಪೂರ್ವ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ನಿಂಬಾಸ್ ಏರ್ ಲೈನ್ಸ್ ಸಂಸ್ಥೆಯ ಆನ್-12 ಹೆಸರಿನ ಸರಕು ವಿಮಾನವು ಗುರುವಾರ ಕ್ರಾಸ್ನೊಯಾರ್ಸ್ಕ್ ಗೆ ಪ್ರಯಾಣ ಬೆಳೆಸಿತ್ತು. ಈ ವಿಮಾನದಲ್ಲಿ ಸುಮಾರು 9.3 ಟನ್ ಚಿನ್ನ ಹಾಗೂ ಇತರೇ ಬೆಳೆ ಬಾಳುವ ಲೋಹದ ವಸ್ತುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ವಿಮಾನದ ಬಾಗಿಲಿನ ಲಾಕ್ ನಲ್ಲಿ ಲೋಪ ಉಂಟಾಗಿ ತೆರೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಬಳಿಕ 3.4 ಟನ್ ತೂಕದ 172 ಚಿನ್ನದ ಗಟ್ಟಿಗಳನ್ನು ರನ್ ವೇ ಯಿಂದ ಮರಳಿ ಸಂಗ್ರಹಿಸಿರುವುದಾಗಿ ವಿಮಾನ ನಿಲ್ದಾಣದ ಆಂತರಿಕ ಸಮಿತಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಅವಘಡದ ಕುರಿತು ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

    ವಿಶೇಷವಾಗಿ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಸದ್ಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಚಿನ್ನದ ಗಟ್ಟಿಗಳು ಚದುರಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಕೆಂಪು ಕಾಂಚಿವರಂ ಸೀರೆ ತೊಟ್ಟು ಅಂತಿಮ ಯಾತ್ರೆಗೆ ಹೊರಟ ತ್ರಿಲೋಕ ಸುಂದರಿ

    ಕೆಂಪು ಕಾಂಚಿವರಂ ಸೀರೆ ತೊಟ್ಟು ಅಂತಿಮ ಯಾತ್ರೆಗೆ ಹೊರಟ ತ್ರಿಲೋಕ ಸುಂದರಿ

    ಮುಂಬೈ: ತ್ರಿಲೋಕ ಸುಂದರಿ ಶ್ರೀದೇವಿ ಆಸೆಯಂತೆಯೇ ಮೃತದೇಹಕ್ಕೆ ಚಿನ್ನ ಲೇಪಿತ ಕೆಂಪು ಕಾಂಚಿವರಂ ಸೀರೆ ಉಡಿಸಿ, ಮಾಂಗಲ್ಯ ಸರದ ಜೊತೆ ಚಿನ್ನಾಭರಣ ಹಾಕಿ, ಪಾರ್ಥಿವ ಶರೀರಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿ ಮೆರವಣಿಗೆ ಮಾಡಲಾಗುತ್ತಿದೆ.

    ಶ್ರೀದೇವಿಗೆ ಬಿಳಿ ಹೂಗಳೆಂದರೆ ಬಹಳ ಪ್ರೀತಿ. ಹಾಗಾಗಿ ಅವರ ಪಾರ್ಥಿವ ಶರೀರಕ್ಕೆ ಮಲ್ಲಿಗೆ ಹೂ ಮುಡಿಸಲಾಗಿದೆ. ಜೊತೆಗೆ ಅವರ ಅಂತಿಮ ಯಾತ್ರೆಯ ವಾಹನವನ್ನೂ ಕೂಡ ಬಿಳಿ ಹೂಗಳಿಂದ ಸಿಂಗರಿಸಲಾಗಿದೆ.

    ವಿಲ್ಲೆ ಪಾರ್ಲೆ ಸೇವಾ ಸಮಾಜ ಚಿತಾಗಾರ, ಹಿಂದೂ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಸಿದ್ಧತೆ ನಡೆದಿದೆ. ಶ್ರೀದೇವಿ ಅವರ ಚಿತೆಗೆ ಪತಿ ಬೋನಿ ಕಪೂರ್ ಅಗ್ನಿ ಸ್ಪರ್ಶ ಮಾಡಲಿದ್ದಾರೆ. ಅಂತ್ಯ ಸಂಸ್ಕಾರಕ್ಕೆ ಕಪೂರ್ ಕುಟುಂಬದ ಜೊತೆ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ.

     

    ಮುಂಬೈನ ಲೋಖಂಡ್ವಾಲಾದ ಸೆಲೆಬ್ರೇಷನ್ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಟಿ ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಜಯಪ್ರದಾ, ತಬು, ಸುಶ್ಮಿತಾ ಸೇನ್, ಮಾಧುರಿ ದೀಕ್ಷಿತ್, ಶ್ರೀದೇವಿಯ ಸೋದರ ಸೊಸೆ ಸೋನಂ ಕಪೂರ್, ಕಾಜೋಲ್, ಅಜಯ್ ದೇವಗನ್ ಮುಂತಾದ ಬಾಲಿವುಡ್ ನಟ ನಟಿಯರು ಸೇರಿದಂತೆ ಇತರೆ ಗಣ್ಯರು ಹಾಗೂ ಅಭಿಮಾನಿಗಳು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಕಳೆದ ಶನಿವಾರ ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಗೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಗಿತ್ತು.

    ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿತ್ತು.

  • ವ್ಯಕ್ತಿಗೆ ಚಾಕುವಿನಿಂದ ಇರಿದು ಹಣ, ಮೊಬೈಲ್, ಚಿನ್ನ ದರೋಡೆ

    ವ್ಯಕ್ತಿಗೆ ಚಾಕುವಿನಿಂದ ಇರಿದು ಹಣ, ಮೊಬೈಲ್, ಚಿನ್ನ ದರೋಡೆ

    ಬೆಂಗಳೂರು: ವ್ಯಕ್ತಿಗೆ ಚಾಕುವಿನಿಂದ ಇರಿದು ಹಣ ಮೊಬೈಲ್ ದರೋಡೆ ಮಾಡಿರುವ ಘಟನೆ ತಾವರೆಕೆರೆ ಬಳಿಯ ಕೊಡಿಗೆಹಳ್ಳಿ ರಸ್ತೆಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಕೊಡಿಗೆಹಳ್ಳಿ ನಿವಾಸಿ ಮಂಜುನಾಥ್ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ ತನ್ನ ಗೆಳೆಯನ ಜೊತೆ ಬೈಕ್ ನಲ್ಲಿ ಬೆಂಗಳೂರಿನಿಂದ ಮನೆಗೆ ತೆರಳುತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ನಾಲ್ಕು ದುಷ್ಕರ್ಮಿಗಳು ಮಂಜುನಾಥ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಹಣ, ಮೊಬೈಲ್ ಮತ್ತು ಒಂದು ಚಿನ್ನದ ಉಂಗುರವನ್ನು ದೋಚಿ ಪರಾರಿಯಾಗಿದ್ದಾರೆ.

    ಸದ್ಯ ಗಾಯಾಳು ಮಂಜುನಾಥ್ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕಲಿ ಜ್ಯೋತಿಷಿ ಕಿರುಕುಳಕ್ಕೆ ಬೇಸತ್ತ ದಂಪತಿ ಆತ್ಮಹತ್ಯೆಗೆ ಯತ್ನ!

    ನಕಲಿ ಜ್ಯೋತಿಷಿ ಕಿರುಕುಳಕ್ಕೆ ಬೇಸತ್ತ ದಂಪತಿ ಆತ್ಮಹತ್ಯೆಗೆ ಯತ್ನ!

    ಬೆಂಗಳೂರು: ವಶೀಕರಣದ ನೆಪದಲ್ಲಿ ನಕಲಿ ಜ್ಯೋತಿಷಿಯೊಬ್ಬ ದಂಪತಿ ಬಳಿ ಚಿನ್ನಾಭರಣ ದೋಚಿ ಕಿರುಕುಳ ನೀಡಿದ ಕಾರಣ ದಂಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.

    ರಘು(35) ಹಾಗೂ ಸುಜಾತ(22) ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಪ್ರಸ್ತುತ ದಂಪತಿಗಳು ಮಂಡ್ಯದ ಬೆಳ್ಳೂರು ಕ್ರಾಸ್‍ನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    8 ತಿಂಗಳ ಹಿಂದೆ ದಂಪತಿ ಅನಾರೋಗ್ಯದ ಕಾರಣ ಪಂಡಿತ ಚಂದ್ರಶೇಖರ್ ಸ್ವಾಮೀಜಿ ಬಳಿ ತೆರಳಿದ್ದಾರೆ. ಈ ವೇಳೆ ದಂಪತಿ ಬಳಿ ಸುಮಾರು 1.80 ಲಕ್ಷ ಹಣ ಪಡೆದು ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವುದಾಗಿ ತಿಳಿಸಿದ್ದಾನೆ. ಅನಂತರ ಮನೆಯಲ್ಲಿರುವ ಚಿನ್ನಾಭರಣ ನೀಡಿದರೆ ಪೂಜೆ ನಡೆಸಿಕೊಡುವುದಾಗಿ ತಿಳಿಸಿದ್ದಾನೆ. ಆದರೆ ಚಿನ್ನದ ಒಡವೆ ಕೊಟ್ಟ ಬಳಿಕ ಸಾಮೀಜಿ ಅವುಗಳನ್ನು ಹಿಂದಿರುಗಿಸದೆ, ನೀವು ನನಗೆ ಒಡವೆ ಕೊಟ್ಟೇ ಇಲ್ಲ ಎಂದು ಹೇಳಿದ್ದಾನೆ.

    ತನಗೆ ನೀಡಿರುವ ಹಣ, ಒಡವೆ ಕುರಿತು ಬೇರೆಡೆ ತಿಳಿಸಿದರೆ ನಿಮಗೇ ತೊಂದರೆಯಾಗುತ್ತದೆ ಎಂದು ನಕಲಿ ಸ್ವಾಮೀಜಿ ಬೆದರಿಕೆ ಹಾಕಿದ್ದಾನೆ. ಇದರಿಂದ ಮಾನಸಿಕವಾಗಿ ನೊಂದ ದಂಪತಿ ನಗರದಿಂದ ಹೊರ ತೆರಳಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ದಂಪತಿಯನ್ನು ಕಂಡ ಸ್ಥಳೀಯರು ಇಬ್ಬರನ್ನು ಮಂಡ್ಯದ ಬೆಳ್ಳೂರು ಕ್ರಾಸ್‍ನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪ್ರಸ್ತುತ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಲಗ್ಗೆರೆಯ ಪಾರ್ವತಿ ನಗರದಲ್ಲಿರುವ ಚಂದ್ರಶೇಖರ್ ಸ್ವಾಮಿಜಿ ತನ್ನ ಕಚೇರಿಯಿಂದ ಪರಾರಿಯಾಗಿದ್ದಾನೆ. ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ನಕಲಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.

    https://www.youtube.com/watch?v=vTu9lCFwsQs

  • ದಾಯಿರ ನುಡಿಸುತ್ತಾ ಬಂದ ಕಳ್ಳ ಫಕೀರ- ಮಂಕುಬೂದಿ ಎರಚಿ ಚಿನ್ನಕ್ಕೆ ಕನ್ನವಿಟ್ಟ

    ದಾಯಿರ ನುಡಿಸುತ್ತಾ ಬಂದ ಕಳ್ಳ ಫಕೀರ- ಮಂಕುಬೂದಿ ಎರಚಿ ಚಿನ್ನಕ್ಕೆ ಕನ್ನವಿಟ್ಟ

    ಉಡುಪಿ: ಅಸಲಿ ಫಕೀರನಂತೆ ದಾಯಿರ ಬಾರಿಸಿಕೊಂಡು ಮನೆಗೆ ಬಂದ ಅಪರಿಚಿತ ವ್ಯಕ್ತಿ ಮಹಿಳೆಯೊಬ್ಬರಿಗೆ ವಂಚಿಸಿರೋ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

    ಸ್ಥಳೀಯ ನಿವಾಸಿ ನಯಾಝ್ ಎಂಬವರ ಪತ್ನಿ ಆಯಿಷಾ ಮೋಸಕ್ಕೊಳಗಾದ ಮಹಿಳೆ. ಫಕೀರನ ವೇಷದಲ್ಲಿ ಹಣ ಬೇಡುತ್ತಾ ಮನೆಯಿಂದ ಮನೆಗೆ ಹೋದ ವಂಚಕ, ಆಯಿಷಾರನ್ನು ಮಾತಿನ ಮೋಡಿಗೆ ಸಿಲುಕಿಸಿ 8 ಪವನ್ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾನೆ.

    ತಲೆಗೆ ಪೇಟ ತೊಟ್ಟು ಮನೆಗೆ ಫಕೀರನಂತೆ ಬಟ್ಟೆ ಧರಿಸಿ ದಾಯಿರ ಬಾರಿಸಿ ಕೊಂಡು ಬಂದ ಅಪರಿಚಿತ ವ್ಯಕ್ತಿಗೆ ಆಯಿಷಾ 20 ರೂ ನೀಡಲು ಹೋಗಿದ್ದಾರೆ. ಆ ವೇಳೆ ಆತ ನೀವು ತುಂಬಾ ಕಷ್ಟದಲ್ಲಿದ್ದೀರಿ. ನಿಮಗೆ ಮತ್ತು ನಿಮ್ಮ ಗಂಡನಿಗೆ ಯಾರೋ ಮಾಟ ಮಾಡಿದ್ದಾರೆ. ಯಾರೋ ನಿಮ್ಮ ಕುಟುಂಬಕ್ಕೆ ಕೇಡು ಬಯಸಿದ್ದಾರೆ. ನಾನು ಮನೆಯ ಒಳಗೆ ಬಂದು ಆ ಕೇಡು ಬಯಸಿದವರು ಯಾರೆಂದು ತೋರಿಸುತ್ತೇನೆ ಅಂತ ಹೇಳುತ್ತಾ ಡೈಲಾಗ್ ಬಿಟ್ಟಿದ್ದಾನೆ. ಈತನ ನಾಟಕದ ಮಾತಿಗೆ ಮನೆಯೊಡತಿ ಮರುಳಾಗಿದ್ದಾರೆ.

    ಮನೆಯೊಳಗೆ ಬಂದ ವ್ಯಕ್ತಿ, ನಿಮ್ಮಲ್ಲಿರುವ ಚಿನ್ನವನ್ನು ನೋಡೋಣ ಅಂತ ಹೇಳಿದ್ದಾನೆ. ಮನೆಯಲ್ಲಿದ್ದ ಎಂಟು ಪವನ್ ಚಿನ್ನವನ್ನು ಆಯಿಷಾ ತಂದಿದ್ದಾರೆ. ಬಳಿಕ ಆತ ಆಯಿಷಾರ ಮುಖಕ್ಕೆ ನೀರು ಚಿಮುಕಿಸಿದ್ದಾನೆ. ಚಿನ್ನವನ್ನು ಮಡಕೆಯಲ್ಲಿ ಇಟ್ಟಿರುತ್ತೇನೆ ಎಂದು ಹೇಳಿ ಮಡಕೆಗೆ ಕೆಂಪು ನೂಲನ್ನು ಸುತ್ತಿದ್ದಾನೆ. ಮಡಕೆ ವಾಪಾಸ್ ಕೊಟ್ಟು ಮನೆಯಿಂದ ಹೋಗಿದ್ದಾನೆ.

    ಸ್ವಲ್ಪಹೊತ್ತಿನ ನಂತರ ಆಯಿಷಾ ಮಡಿಕೆಯನ್ನು ನೋಡುವಾಗ ಅದರಲ್ಲಿ ಚಿನ್ನ ಮಾಯವಾಗಿದೆ. ಕೂಡಲೇ ಅವರು ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇಲೆ ಪೊಲೀಸರು ಸಿಸಿಟಿವಿ ಪರಿಶೀಲಿಸಿ ವಂಚಿಸಿದ ಫಕೀರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.