Tag: gold

  • ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ದಾಳಿ!

    ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ದಾಳಿ!

    ವಾರಣಾಸಿ: ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

    ಶನಿವಾರ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಪೂನಮ್ ಯಾದವ್ ಮೇಲೆ ಕಲ್ಲೆಸೆದಿದ್ದಾರೆ. ಈ ವೇಳೆ ಪೂನಮ್ ಅವರನ್ನು ಕಾಪಾಡಲೆಂದು ಅವರ ಚಿಕ್ಕಪ್ಪ ಮತ್ತು ಸಹೋದರ ಸಂಬಂಧಿ ಬಂದಿದ್ದು, ಅವರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಘಟನೆಯ ತೀವ್ರತೆಯನ್ನು ಅರಿತ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪೂನಮ್ ಯಾದವ್ ಅವರನ್ನು ರಕ್ಷಣೆ ಮಾಡಿದ್ದಾರೆ.

    ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕಳುಹಿಸಿ ಕೊಡಲಾಯಿತು. ಅಲ್ಲದೇ ದುಷ್ಕರ್ಮಿಗಳಿಂದ ಪೂನಮ್ ಅವರನ್ನು ಅಪಾಯದಿಂದ ಪಾರು ಮಾಡಲಾಗಿದೆ. ದಾಳಿ ನಡೆಸಿದವರು ಯಾರೆಂಬುದು ತಿಳಿದುಬಂದಿಲ್ಲ ಅಂತ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದ್ದಾರೆ.

    ಪೂನಮ್ ಸಂಬಂಧಿಕರ ಮನೆಗೆ ತೆರಳಿದ್ದಾಗ ಅಲ್ಲಿಗೆ ಆಗಮಿಸಿದ ನೆರೆಮನೆಯವರು ಹಳೆಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದಾರೆ. ನೆರೆಮನೆಯವರು ತಮ್ಮ ಸಂಬಂಧಿಕರ ಮೇಲೆ ಜಗಳ ಮಾಡುತ್ತಿದ್ದಾಗ ಪೂನಮ್ ಯಾದವ್ ಅವರು ಮಧ್ಯಪ್ರವೇಶಿಸಿದ್ದು, ಈ ವೇಳೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಪೂನಮ್ ಯಾದವ್ ಅವರು ಆಸ್ಟ್ರೆಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 2018ರ ಕಾಮನ್ ವೆಲ್ತ್ ಗೇಮ್ಸ್ ನ 69 ಕೆ.ಜಿ ವಿಭಾಗದ ವೇಟ್ ಲಿಫ್ಟ್ ಂಗ್ ಭಾರತದ ಪರ ಆಟವಾಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

  • ಚಿನ್ನದ ಬೂಟು, ಟೈ ಹಾಕ್ಕೊಂಡು ವಿಶೇಷವಾಗಿ ಮದ್ವೆಯಾದ ವರ

    ಚಿನ್ನದ ಬೂಟು, ಟೈ ಹಾಕ್ಕೊಂಡು ವಿಶೇಷವಾಗಿ ಮದ್ವೆಯಾದ ವರ

    ಇಸ್ಲಾಮಬಾದ್: ಮದುವೆಗೆ ವಧು ವರರಿಗೆ ಚಿನ್ನದ ಸರ, ಬಳೆ, ಉಂಗುರ, ಓಲೆ ತೊಡಿಸೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ನಡೆದ ಮದುವೆಯಲ್ಲಿ ವರ ಚಿನ್ನದ ಟೈ ಮತ್ತು ಚಿನ್ನದ ಶೂ ತೊಟ್ಟು ಮಿಂಚಿದ್ದಾರೆ.

    ಪಾಕಿಸ್ತಾನದ ಲಾಹೋರ್ ನಿವಾಸಿಯಾದ ಹಫಿಜ್ ಸಲ್ಮಾನ್ ಶಾಹಿದ್ ಎಂಬ ವರ ಚಿನ್ನದ ಟೈ ಹಾಗೂ ಶೂ ತೊಟ್ಟಿದ್ದಾರೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಮದುವೆಯ ದಿನದಂದು ವಧುವಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲು ಬಂಗಾರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

    ಹಫಿಜ್ ಸಲ್ಮಾನ್ ಶಾಹಿದ್ ಅವರು ಸುಮಾರು 2.5 ಮಿಲಿಯನ್(16,30,14,000 ರೂ.) ಮೌಲ್ಯದ ಚಿನ್ನವನ್ನು ಧರಿಸಿ ಮದುವೆಯಾಗಿದ್ದಾರೆ. ಸಲ್ಮಾನ್ ಸುಮಾರು 2.5 ಮಿಲಿಯನ್ ಮೌಲ್ಯದ ಚಿನ್ನವನ್ನು ತನ್ನ ವಿವಾಹದ ದಿನದಂದು ಧರಿಸಿದ್ದು, ಚಿನ್ನದ ಬೂಟುಗಳ ಬೆಲೆ ಸುಮಾರು 1.7 ಮಿಲಿಯನ್(11,08,49,520) ಮೌಲ್ಯದ್ದಾಗಿದೆ. ಸುಮಾರು 32 ತೊಲ ಬಂಗಾರವಾಗಿತ್ತು. ಅವರು ಧರಿಸಿರುವ ಸೂಟ್ ಬರೋಬ್ಬರಿ 63,000 ರೂ. ಮೌಲ್ಯದ್ದಾಗಿದೆ. ಜೊತೆಗೆ ಅದರ ಮೇಲೆ 10 ತೊಲದ ಟೈ ಇದನ್ನು ಸ್ಫಟಿಕಗಳು ಮತ್ತು ಆಭರಣಗಳಿಂದ ಅಲಂಕೃತ ಮಾಡಲಾಗಿತ್ತು. ಇದರ ಮೌಲ್ಯ 5 ಲಕ್ಷವಾಗಿದೆ ಎಂದು ವರದಿಯಾಗಿದೆ.

    ಅಷ್ಟೇ ಅಲ್ಲದೇ ಸಲ್ಮಾನ್ ಅವರಿಗೆ ಭದ್ರತಾ ಸಿಬ್ಬಂದಿಯನ್ನು ಕೂಡ ಒದಗಿಸಲಾಗಿತ್ತು. ನನ್ನ ಮದುವೆ ದಿನದಂದು ಏನನ್ನಾದರೂ ವಿಶೇಷವಾಗಿ ಧರಿಸಬೇಕೆಂದು ಬಯಸಿದ್ದೆ ಎಂದು ಅವರು ಹೇಳಿದ್ದಾರೆ.

    ಸಲ್ಮಾನ್ ಓರ್ವ ಮಗನಾಗಿದ್ದು, 7 ಮಂದಿ ಸಹೋದರಿಯರಿದ್ದಾರೆ. ಹೀಗಾಗಿ ಅಲ್ಮಾನ್ ಪೋಷಕರು ಆತನ ಇಚ್ಛೆಯನ್ನು ಪೂರ್ಣಗೊಳಿಸಬೇಕೆಂದು ಬಯಸಿದ್ದರು ಎಂದು ವರದಿ ತಿಳಿಸಿದೆ.

    https://www.instagram.com/p/BhZb10PghvB/?taken-by=divamagazinepakistan

  • ಅಕ್ಷಯ ತೃತೀಯದಂದು ಮಹಿಳಾ ಮತದಾರರನ್ನು ಸೆಳೆಯಲು ನಡೆಯುತ್ತಿದ್ಯಂತೆ ಸಖತ್ ಪ್ಲಾನ್

    ಅಕ್ಷಯ ತೃತೀಯದಂದು ಮಹಿಳಾ ಮತದಾರರನ್ನು ಸೆಳೆಯಲು ನಡೆಯುತ್ತಿದ್ಯಂತೆ ಸಖತ್ ಪ್ಲಾನ್

    ಬೆಂಗಳೂರು: ಅಕ್ಷಯ ತೃತೀಯ ಹತ್ತಿರ ಬರುತ್ತಿದೆ. ಈ ಬಾರಿ ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.

    ಬಂಗಾರದ ಹಬ್ಬಕ್ಕೆ ಚಿನ್ನ ಮನೆಗೆ ಬಂದ್ರೆ ಮಹಿಳೆಯರನ್ನು ಹಿಡಿಯೋಕ್ಕೆ ಆಗುತ್ತಾ? ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡು ಈ ಬಾರಿ ಅಕ್ಷಯ ತೃತೀಯಗೆ ಮಹಿಳಾ ಮತದಾರರಿಗಾಗಿ ಬಂಗಾರದ ಗಿಫ್ಟ್ ಗಳನ್ನು ಕೆಲ ರಾಜಕೀಯ ನಾಯಕರು ಮಾಡಿಕೊಂಡಿದ್ದಾರಂತೆ.

    ಏಪ್ರಿಲ್ 18 ರಂದು ಅಕ್ಷಯ ತೃತೀಯವಾಗಿದ್ದು, ಚಿನ್ನದ ವ್ಯಾಪಾರಿಗಳ ನಿರೀಕ್ಷೆಗೂ ಮೀರಿ ಈ ಬಾರಿ ವ್ಯಾಪಾರ ವೃದ್ಧಿಯಾಗುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಬಂಗಾರದ ಬುಕ್ಕಿಂಗ್ ಜೋರಾಗಿದ್ಯಯಂತೆ. ಹಾಗೆ ನೋಡಿದ್ರೇ ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ದರ ಏರಿಕೆ ಕಂಡಿದೆ. ಆದ್ರೇ ವ್ಯಾಪಾರಕ್ಕೆ ನೋ ಪ್ರಾಬ್ಲಂ, ರಾಜಕೀಯ ನಾಯಕರು, ಅವರ ಬೆಂಬಲಿಗರೇ ಹೆಚ್ಚಾಗಿ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ ಅನ್ನೋದು ಚಿನ್ನದಂಗಡಿ ಮಾಲೀಕರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

  • 2.55 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ವಸ್ತು, 6.58 ಲಕ್ಷ ರೂ. ನಗದು ವಶ

    2.55 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ವಸ್ತು, 6.58 ಲಕ್ಷ ರೂ. ನಗದು ವಶ

    ಚಿತ್ರದುರ್ಗ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಾಜ್ಯಾದ್ಯಂತ ಚುನಾವಣಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ರಾಜ್ಯದ ಚಿತ್ರದುರ್ಗ, ಬಳ್ಳಾರಿ, ಧಾರವಾಡ ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 6.58 ಲಕ್ಷ ರೂ. ಹಣ ಹಾಗೂ 2.45 ಕೋಟಿ ರೂ. ಮೌಲ್ಯದ ಚಿನ್ನ, ಬೆಳ್ಳಿ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಕೋಟೆ ನಾಡು ಚಿತ್ರದುರ್ಗ ನಗರದ ಚೆಕ್ ಪೋಸ್ಟ್ ಬಳಿ ಸರ್ಕಾರಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 3.80 ಲಕ್ಷ ರೂ. ಮೌಲ್ಯದ ಬೆಳ್ಳಿ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಮೂಲದ ಹರೀಶ, ವಿಕ್ರಮ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಪರಿಶೀಲನೆ ನಡೆಸಿದ ವೇಳೆ ಬೆಳ್ಳಿವಸ್ತುಗಳು ಪತ್ತೆಯಾಗಿದೆ. ಈ ವೇಳೆ ಬಂಧಿತರು ತಾವು ವ್ಯಾಪಾರಿಗಳು ಎಂಬ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬಳ್ಳಾರಿಯ ಕುಮಾರನಹಳ್ಳಿ ತಾಂಡಾ ಚೆಕ್ ಪೋಸ್ಟ್ ಬಳಿ ಹಡಗಲಿಯಿಂದ ಹರಪನಹಳ್ಳಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.78 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹುಬ್ಬಳ್ಳಿ ಮೂಲದ ನಯನಕುಮಾರ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಸಾರಿಗೆ ಬಸ್ಸಿನಲ್ಲಿ ಹಣ ಸಾಗಾಟ ನಡೆಸುತ್ತಿದ್ದು, ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇನ್ನೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಡಬಗಸ್ತಿ ಗ್ರಾಮದ ಜಿಲ್ಲಾಧಿಕಾರಿ ಎಸ್ ಬಿ ಬೊಮ್ಮನಹಳ್ಳಿ ನೇತೃತ್ವದಲ್ಲಿ ದಾಳಿ ನಡೆಸಿ ಗೋವಾ ಮೂಲದ ಚಿನ್ನದ ವ್ಯಾಪಾರಿಗೆ ಸೇರಿದೆ ಎನ್ನಲಾದ 2.55 ಕೋಟಿ ರೂ. ಮೌಲ್ಯದ 7 ಕೆಜಿ 722 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ವಶಕ್ಕೆ ಪಡೆಯಲಾಗಿದೆ. ಜಿಲ್ಲಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಡಿಸಿಎಫ್ ಮಹೇಶ ಕುಮಾರ ಅವರೊಂದಿಗೆ ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಅಥಣಿ ನಾಕಾ ಬಳಿ ಕಾರಿನಲ್ಲಿ ಸಾಗಾಟ ನಡೆಸುತ್ತಿದ್ದ 4.80 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

  • ದಾಖಲೆ ಇಲ್ಲದ 2.55 ಕೋಟಿ ರೂ. ಮೌಲ್ಯದ ಚಿನ್ನ ವಶ

    ದಾಖಲೆ ಇಲ್ಲದ 2.55 ಕೋಟಿ ರೂ. ಮೌಲ್ಯದ ಚಿನ್ನ ವಶ

    ಧಾರವಾಡ: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇಂದು ಸುಮಾರು 2.55 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಲಘಟಗಿ ತಾಲೂಕಿನ ಕಡಬಗಸ್ತಿ ಗ್ರಾಮದ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ  ಪಡೆದಿದೆ.

    ಗೋವಾದಿಂದ ಹುಬ್ಬಳ್ಳಿ ಮಾರ್ಗವಾಗಿ ಯಾವುದೇ ದಾಖಲೆ ಇಲ್ಲದೇ ಆಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಸುಮಾರು 7 ಕೆಜಿ 722 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಚಿನ್ನ ಸಾಗಾಣೆ ಮಾಡುತ್ತಿದ್ದ ಗೋವಾ ಮೂಲದ ಪ್ರತೀಕ ನಾರ್ವೇಕರ್ ಹಾಗೂ ರಾಜಸ್ಥಾನ ಮೂಲದ ವಿಕ್ರಮಸಿಂಗ್ ರಾಠೋಡ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ದಾಖಲೆ ಇಲ್ಲದೆ ಅಕ್ರಮವಾಗಿ ಚಿನ್ನ ಸಾಗಾಣೆ ಮಾಡುತ್ತಿದ್ದ ಆರೋಪದ ಅಡಿ ಇಬ್ಬರ ವಿರುದ್ಧ ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಎಸ್‍ಬಿ ಬೊಮ್ಮನಹಳ್ಳಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಿಸಿಎಫ್ ಮಹೇಶಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ನೇತೃತ್ವದಲ್ಲಿ ಚಿನ್ನ ಜಪ್ತಿ ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನ ಗೋವಾ ಮೂಲದ ಚಿನ್ನದ ವ್ಯಾಪಾರಿಗೆ ಸೇರಿದ್ದು ಎನ್ನಲಾಗಿದೆ.

  • ಕಾಮನ್‍ವೆಲ್ತ್ ಗೇಮ್ಸ್ 2018- ನಾಲ್ಕನೇ ದಿನ ಚಿನ್ನಕ್ಕೆ ಮುತ್ತಿಟ್ಟ 22 ವರ್ಷದ ಪೂನಮ್ ಯಾದವ್

    ಕಾಮನ್‍ವೆಲ್ತ್ ಗೇಮ್ಸ್ 2018- ನಾಲ್ಕನೇ ದಿನ ಚಿನ್ನಕ್ಕೆ ಮುತ್ತಿಟ್ಟ 22 ವರ್ಷದ ಪೂನಮ್ ಯಾದವ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ನಾಲ್ಕನೇಯ ದಿನವೂ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ.

    ವೇಟ್ ಲಿಫ್ಟಿಂಗ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಭಾರತದ ಪೂನಮ್ ಯಾದವ್(22) ಅವರು ಒಟ್ಟು 222 ಕೆ.ಜಿ ಭಾರ ಎತ್ತುವ ಮೂಲಕ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್: ಭಾರತಕ್ಕೆ ನಾಲ್ಕನೇ ಚಿನ್ನ ತಂದ ರಾಗಲ ವೆಂಕಟ್ ರಾಹುಲ್

    ಇದರಂತೆಯೇ ಶೂಟಿಂಗ್ ವಿಭಾಗದಲ್ಲಿ ಮನು ಭಾಕೇರ್(ಚಿನ್ನ), ಹೀನ ಸಿಧು(ಬೆಳ್ಳಿ) ಪದಕಕ್ಕೆ ಭಾಜನರಾಗಿದ್ದಾರೆ. ಒಟ್ಟಿನಲ್ಲಿ ಈವರೆಗೆ 6 ಚಿನ್ನ, 2 ಬೆಳ್ಳಿ ಹಾಗೂ ಇಂದು ಕಂಚಿನ ಪದಕ ಭಾರತಕ್ಕೆ ಒಲಿದಿದೆ. ಇದನ್ನೂ ಓದಿ:  ಕಾಮನ್‍ವೆಲ್ತ್ ನಲ್ಲಿ ಮುಂದುವರಿದ ಚಿನ್ನದ ಬೇಟೆ- ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಸತೀಶ್ ಕುಮಾರ್ ಗೆ ಗೋಲ್ಡ್

  • ಕಾಮನ್‍ವೆಲ್ತ್ ಗೇಮ್ಸ್: ಭಾರತಕ್ಕೆ ನಾಲ್ಕನೇ ಚಿನ್ನ ತಂದ ರಾಗಲ ವೆಂಕಟ್ ರಾಹುಲ್

    ಕಾಮನ್‍ವೆಲ್ತ್ ಗೇಮ್ಸ್: ಭಾರತಕ್ಕೆ ನಾಲ್ಕನೇ ಚಿನ್ನ ತಂದ ರಾಗಲ ವೆಂಕಟ್ ರಾಹುಲ್

    ಗೋಲ್ಡ್ ಕೋಸ್ಟ್ : ಪುರುಷರ 85 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ರಾಗಲ ವೆಂಕಟ್ ರಾಹುಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ಪುರುಷರ 85 ಕೆಜಿ ವಿಭಾಗದಲ್ಲಿ ಒಟ್ಟು 338 ಕೆಜಿ ತೂಕವನ್ನು ಎತ್ತುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಸಮೋವಾ ದೇಶದ ಡಾನ್ ಒಪೆಲೊಜೆ ತೀವ್ರ ಪೈಪೋಟಿ ನೀಡಿ ಬೆಳ್ಳಿ ಪದಕವನ್ನ ಧರಿಸಿದ್ರು.

    ಕ್ರೀಡಾಕೂಟದಲ್ಲಿ ಇಲ್ಲಿಯವರೆಗೆ ವೇಟ್ ಲಿಫ್ಟಿಂಗ್ ಪರುಷರ 77 ಕೆಜಿ ವಿಭಾಗದಲ್ಲಿ ಸತೀಶ್ ಕುಮಾರ್ ಶಿವಲಿಂಗಂ ಚಿನ್ನದ ಪದಕ, 56 ಕೆಜಿ ವಿಭಾಗದಲ್ಲಿ ಪಿ. ಗುರುರಾಜ್ ಬೆಳ್ಳಿ ಪದಕ, 69 ಕೆಜಿ ವಿಭಾಗದಲ್ಲಿ ದೀಪಕ್ ಲಥರ್ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸಂಜಿತಾ ಚಾನು ಚಿನ್ನದ ಪದಕ, 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ.

    ಇಲ್ಲಿಯವರೆಗೆ ಭಾರತ ಒಟ್ಟು 6 ಪದಕಗಳನ್ನು ಗೆದ್ದಿದೆ. ಇದರಲ್ಲಿ 4 ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು ಸೇರಿದೆ.

  • ಕಾಮನ್‍ವೆಲ್ತ್ ನಲ್ಲಿ ಮುಂದುವರಿದ ಚಿನ್ನದ ಬೇಟೆ- ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಸತೀಶ್ ಕುಮಾರ್ ಗೆ ಗೋಲ್ಡ್

    ಕಾಮನ್‍ವೆಲ್ತ್ ನಲ್ಲಿ ಮುಂದುವರಿದ ಚಿನ್ನದ ಬೇಟೆ- ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಸತೀಶ್ ಕುಮಾರ್ ಗೆ ಗೋಲ್ಡ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನ ಲಭಿಸಿದೆ.

    ಶನಿವಾರ ನಡೆದ ಪುರುಷರ 77ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಸತೀಶ್ ಕುಮಾರ್ ಶಿವಲಿಂಗಂ ಅವರು ಚಿನ್ನದ ಪದಕಕ್ಕೆ ಮತ್ತಿಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ 5 ಪದಕಗಳು ಬಂದಿವೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ- ವೇಟ್ ಲಿಫ್ಟಿಂಗ್‍ನಲ್ಲಿ ಸಂಜಿತಾ ಚಾನುಗೆ ಗೋಲ್ಡ್

    ಸತೀಶ್ ಕುಮಾರ್ ಅವರು ಒಟ್ಟು 317 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇವರಿಗೆ ಇಂಗ್ಲೆಂಡ್ ನ ಜಾಕ್ ಒಲಿವರ್ ತೀವ್ರ ಪೈಪೋಟಿ ನೀಡಿದ್ದಾರೆ. ಆದ್ರೆ ಜಾಕ್ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಆಸ್ಟ್ರೇಲಿಯಾದ ಫ್ರಾಂಕೋಯಿಸ್ ಇಟೌಂಡಿ ಒಟ್ಟು 305 ಕೆ.ಜಿ ಎತ್ತುವ ಮೂಲಕ ಮೂರನೇ ಸ್ಥಾನಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡ್ರು. ಇದನ್ನೂ ಓದಿ: ವೇಟ್‍ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟ ಮೀರಾಬಾಯಿ

    ಶುಕ್ರವಾರ ಆರಂಭವಾದ ಕ್ರೀಡಾಕೂಟದಲ್ಲಿ ಸಂಜಿತಾ ಚಾನು(ಚಿನ್ನ), ದೀಪಕ್ ಲತೇರ್(ಕಂಚು), ಮೀರಾಬಾಯಿ ಚಾನು ಹಾಗೂ ಗುರುರಾಜ್ ಪೂಜಾರಿ ಅವರು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕನ್ನಡಿಗನ ಕೇಕೆ- ಬೆಳ್ಳಿ ಪದಕ ಗೆದ್ದ ಉಡುಪಿಯ ಗುರುರಾಜ್

  • ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100 ಕೆ.ಜಿ ಚಿನ್ನಾಭರಣ ವಶ- 34 ಮಂದಿ ಆರೋಪಿಗಳ ಬಂಧನ

    ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 100 ಕೆ.ಜಿ ಚಿನ್ನಾಭರಣ ವಶ- 34 ಮಂದಿ ಆರೋಪಿಗಳ ಬಂಧನ

    ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 34 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

    2017-18 ಸಾಲಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲೆತ್ನಿಸಿದ 100 ಕೆ.ಜಿ. ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬರೋಬ್ಬರಿ 30 ಕೋಟಿಗೂ ರೂ. ಅಧಿಕವಾಗಿದೆ.

    ಅಕ್ರಮವಾಗಿ ಸ್ಮಗ್ಲಿಂಗ್ ನಲ್ಲಿ ಭಾಗಿಯಾಗಿರುವ 34 ಜನ ಆರೋಪಿಗಳನ್ನ ಅಧಿಕಾರಿಗಳು ಬಂಧಿಸಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಮಧ್ಯ ಏಷ್ಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಜೋರ್ಡಾನ್, ಶ್ರೀಲಂಕಾ ಮತ್ತು ದಕ್ಷಿಣಾ ಏಷ್ಯಾದ ಅಕ್ರಮ ಸ್ಮಗ್ಲರ್ಸ್ ಇದೀಗ ಕಂಬಿ ಎಣಿಸುತ್ತಿದ್ದಾರೆ.

    ಬಟ್ಟೆ, ಕೊರಿಯರ್, ಬೆಲ್ಟ್ ಬಕಲ್, ಚಪ್ಪಲಿ, ಚಾಕಲೇಟ್, ಸೋಪ್, ಒಳ ಉಡುಪು, ಮಣ್ಣು ಮಿಶ್ರಿತ ಪುಡಿ ಹೀಗೆ ವಿವಿಧ ರೂಪಗಳಲ್ಲಿ ವಿಮಾನ ನಿಲ್ದಾಣದ ಮೂಲಕ ಸ್ಮಗ್ಲಿಂಗ್ ನಡೆಸುವ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    2016-17 ಸಾಲಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು 34 ಕೆ.ಜಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದರು. ಇದರ ಮಾರುಕಟ್ಟೆ ಮೌಲ್ಯ 9.97 ಕೋಟಿ ರೂ. ಕಳೆದ ಸಾಲಿಗೆ ಹೋಲಿಸಿಕೊಂಡರೆ ಪ್ರಸಕ್ತ ಸಾಲಿನಲ್ಲಿ ಶೇ 200 ರಷ್ಟು ಅಕ್ರಮ ಸಾಗಾಟ ಪ್ರಕರಣ ಹೆಚ್ಚಾಗಿವೆ ಎಂದು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಇದೊಂದು ಹೈಫೈ ಅಂತ್ಯಸಂಸ್ಕಾರ: ಬೆಲೆಬಾಳುವ ಚಿನ್ನದೊಂದಿಗೆ ವ್ಯಕ್ತಿಯ ಅಂತ್ಯಕ್ರಿಯೆ

    ಇದೊಂದು ಹೈಫೈ ಅಂತ್ಯಸಂಸ್ಕಾರ: ಬೆಲೆಬಾಳುವ ಚಿನ್ನದೊಂದಿಗೆ ವ್ಯಕ್ತಿಯ ಅಂತ್ಯಕ್ರಿಯೆ

    ಪೋರ್ಟ್ ಆಫ್ ಸ್ಪೇನ್: ವ್ಯಕ್ತಿಯೊಬ್ಬರು ಸತ್ತರೆ ಅವರಿಗೆ ಇಷ್ಟವಾದ ವಸ್ತುವನ್ನ ಅವರ ಜೊತೆಯಲ್ಲಿ ಸಮಾಧಿ ಮಾಡುತ್ತಾರೆ. ಆದರೆ ಕೆರೆಬಿಯನ್ ದ್ವೀಪದಲ್ಲಿ ವ್ಯಕ್ತಿಯೊಬ್ಬರು ಬರೋಬ್ಬರಿ 65 ಲಕ್ಷ ಬೆಳೆ ಬಾಳುವ ಬಂಗಾರ ಜೊತೆ ಸಮಾಧಿಯಾಗುವ ಮೂಲಕ ಸುದ್ದಿಯಾಗಿದ್ದಾರೆ.

    ಬದುಕಿದ್ದಾಗ ಮೈ ತುಂಬಾ ಚಿನ್ನಾಭರಣ ಧರಿಸಿ ಓಡಾಡಬೇಕು ಅನ್ನೋ ಆಸೆ ಎಲ್ಲರಲ್ಲೂ ಇರುತ್ತೆ. ಅದು ಸಹಜ. ಸತ್ತ ಮೇಲೆ ಯಾರೂ ಏನೂ ಹೊತ್ಕೊಂಡ್ ಹೋಗಲ್ಲ ಸ್ವಾಮಿ ಅನ್ನೋರೂ ತುಂಬಾ ಮಂದಿ. ಆದರೆ ಕೆರಿಬಿಯನ್ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೊಲೆಯಾಗಿದ್ದ ವ್ಯಕ್ತಿಯೊಬ್ಬರನ್ನು ವಿಭಿನ್ನವಾಗಿ ಸಮಾಧಿ ಮಾಡಲಾಗಿದೆ.

    ಶೆರಾನ್ ಸುಖೆಡೋ (33) ಕೊಲೆಯಾದ ವ್ಯಕ್ತಿ. ಕಳೆದ ವಾರ ಪತ್ನಿ ಮತ್ತು ಪೋಷಕರ ಜೊತೆ ಮನೆಯ ಹೊರಗೆ ಶೂಟಿಂಗ್ ನಡೆಸುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಇವರು ಜೀವನದುದ್ದಕ್ಕೂ ಮೈತುಂಬಾ ತೊಲೆಗಟ್ಟಲೆ ಚಿನ್ನ ಧರಿಸಿ ಓಡಾಡುತ್ತಿದ್ದರು. ಆದ್ದರಿಂದ ಚಿನ್ನದಿಂದಲೇ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

    ರಿಯಲ್ ಎಸ್ಟೇಟ್ ಮೂಲಕವೇ ಕೋಟಿ ಕೋಟಿ ಸಂಪಾದನೆ ಮಾಡಿದ್ದ ಶೋರನ್ ಸುಖ್ದೋ ಅವರು ದುಷ್ಕರ್ಮಿಗಳು ಗುಂಡಿಗೆ ಬಲಿಯಾಗಿದ್ದಾರೆ. ಬದುಕಿದ್ದಾಗ ಸುಖ್ದೋಗೆ ಚಿನ್ನಾಭರಣ ಧರಿಸೋ ವ್ಯಾಮೋಹವಿತ್ತು. ಯಾವಾಗಲೂ ಕತ್ತಿನಲ್ಲಿ ಚಿನ್ನದ ಹಾರಗಳು, ಕೈ ಬೆರಳುಗಳಲ್ಲಿ ದಪ್ಪದ ಉಂಗುರಗಳನ್ನ ಸುಖ್ದೋ ಧರಿಸುತ್ತಿದ್ದರು.

    ಇಷ್ಟೊಂದು ಚಿನ್ನದ ಕ್ರೇಜ್ ಹೊಂದಿದ್ದ ಸುಖ್ದೋ ಅಂತ್ಯಸಂಸ್ಕಾರವನ್ನು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಜೊತೆಗೆ ಮಾಡಲಾಗಿದೆ. ಸುಖ್ದೋ ಶವ ಇಟ್ಟ ಪೆಟ್ಟಿಗೆಗೆ 32 ಲಕ್ಷ ರೂಪಾಯಿ ಖರ್ಚು ಮಾಡಿ ಚಿನ್ನದ ಲೇಪನ ಮಾಡಿಸಲಾಗಿತ್ತು. ಅಷ್ಟೇ ಅಲ್ಲದೇ ಅವರ ಬೂಟ್ ಗಳನ್ನು ಸಹ ಅದರ ಜೊತೆಗೆ ಇಡಲಾಗಿತ್ತು. ಜೊತೆಗೆ ಅವರ ಬಳಿ ಇದ್ದ 65 ರೂಪಾಯಿ ಲಕ್ಷದ ಮೌಲ್ಯದ ಚಿನ್ನಾಭರಣವನ್ನು ಕೂಡ ಮೈಮೇಲೆ ಹಾಕಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ವರದಿಯಾಗಿದೆ.