Tag: gold

  • ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ಓದಿ

    ದೇಶಾದ್ಯಂತ ಸದ್ದು ಮಾಡಿದ ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ಓದಿ

    ಕೋಲಾರ: ದೇಶಾದ್ಯಂತ ಈಗ ಕೆಜಿಎಫ್ ಹೆಸರು ಕೇಳಿದರೆ ಜನರು ರೋಮಾಂಚನಗೊಳ್ಳುತ್ತಿದ್ದಾರೆ. ಕೆಜಿಎಫ್ ಹೆಸರಿನ ಹಿಂದಿರುವ ಸುವರ್ಣ ಇತಿಹಾಸ ದೇಶದ ಕೀರ್ತಿ. ಅಂದು ಇದೆ ಜಾಗ ದೇಶವನ್ನು ಉಳಿಸಿದರೆ, ಇಂದು ಹವಾ ಎಬ್ಬಿಸಿ ಮತ್ತೊಂದು ಇತಿಹಾಸಕ್ಕೆ ನಾಂದಿಯಾಗುತ್ತಿದೆ.

    ಕೆಜಿಎಫ್ ಸಿನಿಮಾಕ್ಕಾಗಿ ಇಡೀ ದೇಶ ಹಾಗೂ ವಿಶ್ವಾದ್ಯಂತ ಜನರು ಕುತೂಹಲ ಹಿಡಿದಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಸಿನಿಮಾದ ಕಥೆ ಏನೇ ಇದ್ರು ಕೆಜಿಎಫ್ ಎನ್ನುವ ಪ್ರದೇಶ ಚಿನ್ನವನ್ನು ಬೆಳೆಯುತ್ತಿದ್ದ ಮಣ್ಣು, ಶತ ಶತಮಾನಗಳ ಇತಿಹಾಸದ ಕಥೆ ಹೇಳುವ ಈ ಪ್ರದೇಶ ಇರೋದು ಕೋಲಾರ ಜಿಲ್ಲೆಯ ಚಿನ್ನದ ನಾಡು ಕೆಜಿಎಫ್ ನಲ್ಲಿ. ಇಂದು ಸಿನಿಮಾ ರೋಚಕ ಕಥೆಯನ್ನಡಗಿಸಿಟ್ಟುಕೊಂಡು ಕುತೂಹಲ ಮೂಡಿಸಿದ್ರೆ, ಈ ಕೆಜಿಎಫ್ ಪ್ರದೇಶವೂ ಅದಕ್ಕಿಂತ ರೋಚಕ ಕಥೆ ಹೊಂದಿದೆ.

    ಬರೋಬ್ಬರಿ 150 ವರ್ಷಗಳ ಕಾಲ ಈ ನೆಲದಲ್ಲಿ ಚಿನ್ನವನ್ನು ಬಗೆದು ಇಡೀ ವಿಶ್ವಕ್ಕೆ ಕೊಟ್ಟಂತ ಕೀರ್ತಿ ಈ ನೆಲಕ್ಕಿದೆ. ಆದರೆ ಕಳೆದ 2001ರ ಮಾರ್ಚ್-1ರಂದು ಈ ಅದ್ಭುತವಾದ ಸುವರ್ಣ ಇತಿಹಾಸ ಹೊಂದಿದ್ದ ಕೆಜಿಎಫ್ ಚಿನ್ನದ ಗಣಿ ನಷ್ಟದ ನೆಪವೊಡ್ಡಿ ಬೀಗ ಹಾಕಲಾಯಿತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಜನ ಕಾರ್ಮಿಕರು ಬೀದಿ ಪಾಲಾದ್ರು, ಸರ್ಕಾರದಿಂದ ಸಿಗಬೇಕಾದ ಪರಿಹಾರ ಸಿಗದೆ 18 ವರ್ಷಗಳೇ ಕಳೆದ್ರು, ಇಲ್ಲಿನ ಕಾರ್ಮಿಕರು ಮಾತ್ರ ಇಂದಲ್ಲ ನಾಳೆ ನಮ್ಮ ಬದುಕಲ್ಲೂ ಒಳ್ಳೆಯ ದಿನ ಬಂದೇ ಬರುತ್ತದೆ ಅನ್ನೋ ನಿರೀಕ್ಷೆಯ ಕಣ್ಣುಗಳಲ್ಲಿ ಕಾಯುತ್ತಿದ್ದಾರೆ. ಚಿನ್ನದ ಗಣಿಯನ್ನೇ ನಂಬಿ ಬದುಕುತ್ತಿದ್ದ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿ ಹೋಯ್ತು, ಪರಿಣಾಮ ತುತ್ತು ಅನ್ನಕ್ಕಾಗಿ ಕಾರ್ಮಿಕರು ದೂರ ಊರುಗಳಿಗೆ ನಿತ್ಯ ಅಲೆಯುವ ಪರಿಸ್ಥಿತಿ ಬಂದಿದೆ. ಕೆಜಿಎಫ್ ಎನ್ನುವ ಸಿನಿಮಾದ ಜೊತೆಗೆ ಗಣಿ ಪುನಾರಂಭವಾಗುತ್ತಾ ಎನ್ನುವ ನಿರೀಕ್ಷೆ ಕಾರ್ಮಿಕರದ್ದಾಗಿದೆ.

    ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಹಾಗೂ ಈ ಸೈನೈಡ್ ಗುಡ್ಡದ ಮೇಲೆ ಕನ್ನಡ, ತೆಲುಗು, ತಮಿಳು ಭಾಷೆಯ ನೂರಾರು ಸಿನಿಮಾಗಳ ಚಿತ್ರೀಕರಣ ಮಾಡಲಾಗಿದೆ. ಇಲ್ಲಿ ಚಿತ್ರೀಕರಣ ಮಾಡಿರುವ ಯಶಸ್ವಿ ನಟರ ಹತ್ತಾರು ಸಿನಿಮಾಗಳು ಹಿಟ್ ಆಗಿವೆ. ಆದ್ರೆ ಕೆಜಿಎಫ್ ಸಿನಿಮಾ ವಿಶೇಷ ಅಂದ್ರೆ ಇಲ್ಲಿನ ಚಿನ್ನದ ಗಣಿ ಸೈನೈಡ್ ಗುಡ್ಡದ ಮೇಲೆ ಬೃಹತ್ತಾದ ಸೆಟ್ ಹಾಕಿ ಸುಮಾರು ಎರಡು ತಿಂಗಳ ಕಾಲ ಇಲ್ಲೇ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಚಿತ್ರದಲ್ಲೂ ಚಿನ್ನದ ಗಣಿ ಕಾರ್ಮಿಕರ ಕಷ್ಟದ ಬದುಕನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗುತ್ತಿದೆ.

    ಕೆಜಿಎಫ್ ಚಿತ್ರದ ಮೂಲಕ ಸ್ಥಳೀಯ ಅಂದ್ರೆ 70- 80ರ ದಶಕದ ಪರಿಸ್ಥಿತಿಯನ್ನು ಮನದಟ್ಟು ಮಾಡುವ ಪ್ರಯತ್ನ ನಡೆದಿದೆ. ಇದರ ಮೂಲಕವಾದರೂ ಚಿನ್ನದ ಗಣಿ ಕಾರ್ಮಿಕರ ನಿಜ ಬದುಕು, ಇಲ್ಲಿನ ಜನರ ಗೋಳು ಆಡಳಿತ ವರ್ಗದ ಅಧಿಕಾರಿಗಳ ಮನ ಮುಟ್ಟಲಿ. ಆ ಮೂಲಕ 18 ವರ್ಷಗಳ ಸಂಕಷ್ಟದ ಬಳಿಕ ನಮ್ಮ ಬದುಕು ಸುಧಾರಿಸುತ್ತದಾ ಎನ್ನುವ ನಿರೀಕ್ಷೆಯಲ್ಲಿ ಕಾರ್ಮಿಕರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರ್ನಾಟಕದಲ್ಲಿ 1.26 ದಶಲಕ್ಷ ಟನ್ ಚಿನ್ನ ಪತ್ತೆ!- ರಾಜ್ಯದಲ್ಲಿ ಎಲ್ಲಿ ಏನು ಪತ್ತೆ?

    ಕರ್ನಾಟಕದಲ್ಲಿ 1.26 ದಶಲಕ್ಷ ಟನ್ ಚಿನ್ನ ಪತ್ತೆ!- ರಾಜ್ಯದಲ್ಲಿ ಎಲ್ಲಿ ಏನು ಪತ್ತೆ?

    ಸಾಂದರ್ಭಿಕ ಚಿತ್ರ

    – 10 ವರ್ಷಗಳ ಕಾಲ ಜಿಎಸ್‍ಐ ಅಧ್ಯಯನ
    – ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಧ್ಯಯನ
    – ತಮಿಳುನಾಡಿನಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆ

    ಹೈದರಾಬಾದ್: ಕರ್ನಾಟಕದಲ್ಲಿ ಚಿನ್ನ ಮತ್ತು ತಮಿಳುನಾಡಿನಲ್ಲಿ ಪ್ಲಾಟಿನಂ ನಿಕ್ಷೇಪ ಪತ್ತೆಯಾಗಿದೆ ಎಂದು ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ (ಜಿಎಸ್‍ಐ) ಹೇಳಿದೆ.

    ಹೈದರಾಬಾದಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಎಸ್‍ಐ ದಕ್ಷಿಣ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂ ಶ್ರೀಧರ್, ಕಳೆದ 10 ವರ್ಷಗಳಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಲ್ಲಿ ಅಧ್ಯಯನ ನಡೆಸಿದ್ದು, ತುಮಕೂರಿನ ಅಜ್ಜನಹಳ್ಳಿಯಲ್ಲಿ 1.26 ದಶಲಕ್ಷ ಟನ್ ಚಿನ್ನದ ನಿಕ್ಷೇಪ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಅಜ್ಜನಹಳ್ಳಿಯ ಬ್ಲಾಕ್ ಸಿಯಲ್ಲಿ 1.26 ದಶಲಕ್ಷ ಟನ್ ಸಂಪತ್ತು ಇದ್ದರೆ, ತಮಿಳುನಾಡಿನ ತಾಸಂಪಲೆಯಂನಂಲ್ಲಿ 0.402 ದಶಲಕ್ಷ ಟನ್ ಪ್ಲಾಟಿನಂ ನಿಕ್ಷೇಪವಿದೆ ಎಂದು ಅವರು ತಿಳಿಸಿದ್ದಾರೆ.

    ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕೂಸಿತ ವಾಗುವ ಸ್ಥಳಗಳ ಮ್ಯಾಪ್ ಮಾಡಿದ್ದೇವೆ. ತಮಿಳುನಾಡಿನ ಥೇನಿ, ನೀಲಗಿರಿ, ದಿಂಡಿಗಲ್, ಮಧುರೈ, ತಿರುನಲ್ವೇಲಿ, ಕನ್ಯಾಕುಮರಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಿದ್ದೇವೆ ಎಂದು ಶ್ರೀಧರ್ ತಿಳಿಸಿದರು.

    ಸಿಮೆಂಟ್ ತಯಾರಿಕೆಯಲ್ಲಿ ಬಳಸುವ ಸುಣ್ಣ ಕರ್ನಾಟಕದ ಬೆಳಗಾವಿ, ಹೊಸಕೋಟೆ, ಆಂಧ್ರದ ಗುಂಟೂರು ಮತ್ತು ಕರ್ನೂಲ್ ಜಿಲ್ಲೆಯಲ್ಲಿ ಪತ್ತೆಯಾಗಿದೆ.

    ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಪ್ರದೇಶದಲ್ಲಿ ಮ್ಯಾಂಗನೀಸ್ ನಿಕ್ಷೇಪದ ಲಭ್ಯತೆಯ ಬಗ್ಗೆ ಅಧ್ಯಯನ ನಡೆಯುತ್ತಿದ್ದು, ಸದ್ಯದ ಮಾಹಿತಿಯ ಅನ್ವಯ ಈ ಪ್ರದೇಶದಲ್ಲಿ ಸುಮಾರು 3 ಮೆಟ್ರಿಕ್ ಟನ್ ಮೆಗ್ನೀಷಿಯಂ ಲೋಹದ ಮಾದರಿಗಳು ಪತ್ತೆಯಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಬಳ್ಳಾರಿಯ ರಮಣದುರ್ಗ ಪ್ರದೇಶದಲ್ಲೂ ಮ್ಯಾಗನೀಸ್ ನಿಕ್ಷೇಪದ ಪತ್ತೆಯಾಗಿದೆ. ಉಳಿದಂತೆ 2016-17 ಅವಧಿಯಲ್ಲಿ ನಡೆದ ಅಧ್ಯಯನದ ವೇಳೆ ತೆಲಂಗಾಣದ ಕರೀಂ ನಗರ್, ಅದಿಲಾಬಾದ್, ಖಮ್ಮಂ ಹಾಗೂ ವರಂಗಲ್ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ 89.22 ಮೆಟ್ರಿಕ್ ಟನ್ ಕಬ್ಬಿಣ ಅದಿರು ಸಂಪನ್ಮೂಲಗಳು ಇರುವುದು ಜಿಎಸ್‍ಐ ಅಧ್ಯಯನದಲ್ಲಿ ಪ್ರಕಟವಾಗಿದೆ.

    ಕೇಂದ್ರ ಸರ್ಕಾರದ ಗಣಿ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಭಾರತೀಯ ಭೂಗರ್ಭ ಸರ್ವೇಕ್ಷಣಾ ಇಲಾಖೆ ಪತ್ತೆ ಹಚ್ಚಿರುವ ನಿಕ್ಷೇಪಗಳ ಬಗ್ಗೆ ಹೆಚ್ಚಿನ ಅಧ್ಯನವನ್ನು ನಡೆಸಿದೆ. ಸಂಶೋಧನಾ ಕಾರ್ಯದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ‘ಭೂಮಿ ಸಂವಾದ’ ಎಂಬ ಕಾರ್ಯಕ್ರಮವನ್ನು ನಡೆಸಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ಕಿತ್ತುಕೊಂಡು ಕಳುಹಿಸುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.

    ಪೊಲೀಸರ ಅತಿಥಿಯಾಗಿರುವ ಈ ಗ್ಯಾಂಗ್ ಥ್ರೂತ್ ಪಾಯಿಂಟ್ ಎನ್ನುವ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳನ್ನು ಆಹ್ವಾನ ಮಾಡುತ್ತಿದ್ದರು. ಸಲಿಂಗ ಕಾಮದಲ್ಲಿ ಆಸಕ್ತಿ ಇರುವವರು ಅವರು ಕರೆದ ಅಡ್ರೆಸ್‍ಗೆ ಕೂಡ ಹೋಗುತ್ತಿದ್ದರು.

    ಸಲಿಂಗಕಾಮಕ್ಕೆ ಎಂದು ಆ ಅಡ್ರೆಸ್‍ಗೆ ಹೋದಾಗ ರಾಬರಿ ಗ್ಯಾಂಗ್ ಅಲ್ಲಿಗೆ ಎಂಟ್ರಿ ಕೊಟ್ಟು ಅವರ ಚಿನ್ನಾಭರಣವನ್ನು ದೋಚುತ್ತಿದ್ದರು. ಅಲ್ಲದೇ ವಿಡಿಯೋ ಮಾಡಿದ್ದೀವಿ ಹಣ ಕೊಡು ಎಂದು ಪೀಡಿಸಿ ಅವರ ಚಿನ್ನಾಭರಣವನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು.

    ಇದೇ ರೀತಿ ಮಾಡುತ್ತಿದ್ದ ಪ್ರಭಾಕರ್ ಮತ್ತು ನಾಲ್ವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ

    ಮನೆ ಬೀಗ ಮುರಿದು 22 ಲಕ್ಷ ಮೌಲ್ಯದ ಚಿನ್ನಾಭರಣ, 1.50 ಲಕ್ಷ ರೂ. ನಗದು ಕಳ್ಳತನ

    ರಾಯಚೂರು: ಜಿಲ್ಲೆಯ ನಿಜಲಿಂಗಪ್ಪ ಕಾಲೋನಿಯಲ್ಲಿ ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಖದೀಮರು ಕಳ್ಳತನ ಮಾಡಿದ್ದಾರೆ.

    ರಮೇಶ್ ನಾಡಗೌಡ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ. ನವೆಂಬರ್ 16 ಕ್ಕೆ ಮನೆಗೆ ಬೀಗ ಹಾಕಿ ರಮೇಶ್ ಹಾಗೂ ಅವರ ಕುಟುಂಬದವರು ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೊದಲು ಮನೆಯ ಬೀಗ ಮುರಿದು ನಂತರ ಮನೆಯಲ್ಲಿದ್ದ ಸುಮಾರು 22 ಲಕ್ಷ ಮೌಲ್ಯದ 750 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ 50 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ.

    ಊರಿಗೆ ಹೋಗಿದ್ದ ರಮೇಶ್ ಹಾಗೂ ಅವರ ಕುಟುಂಬಸ್ಥರು ಇಂದು ಮನೆಗೆ ಮರಳಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

    ಘಟನೆ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಖ್ಯಾತ ಮನೆಗಳ್ಳರ ಬಂಧನ – ಅಪಾರ ಪ್ರಮಾಣದ ಕಳ್ಳತನದ ಸಾಮಾಗ್ರಿ ವಶ

    ಕುಖ್ಯಾತ ಮನೆಗಳ್ಳರ ಬಂಧನ – ಅಪಾರ ಪ್ರಮಾಣದ ಕಳ್ಳತನದ ಸಾಮಾಗ್ರಿ ವಶ

    ಬೆಂಗಳೂರು: ಆನೇಕಲ್ ಉಪವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದು, ಅವರ ಬಳಿ ಅಪಾರ ಪ್ರಮಾಣದ ಚಿನ್ನಾಭರಣವನ್ನು ವಶ ಪಡಿಸಿಕೊಂಡಿದ್ದಾರೆ.

    ಆನೇಕಲ್ ಉಪವಿಭಾಗದ ಆನೇಕಲ್, ಅತ್ತಿಬೆಲೆ, ಸರ್ಜಾಪುರ ಹಾಗೂ ಹೆಬ್ಬಗೋಡಿ ಪೊಲೀಸರಿಂದ ಈ ಕಾರ್ಯಾಚರಣೆ ನಡೆದಿದ್ದು, ಒಟ್ಟು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆನೇಕಲ್ ನಿವಾಸಿಗಳಾದ ದೇವರಾಜು, ಮಂಜು, ಶಂಕರ, ಕೋಲಾರದ ಧರ್ಮ, ಮಂಡ್ಯ ಜಿಲ್ಲೆಯ ವೆಂಕಟೇಶ್, ಸಿದ್ದ ಹಾಗೂ ಅಂತರಾಜ್ಯ ಆರೋಪಿಗಳಾದ ರಾಜೇಂದ್ರ, ನೆಹರು ಹಾಗೂ ಸತ್ಯರಾಜು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

    ಬಂಧಿತ ಆರೋಪಿಗಳಿಂದ 1 ಕೆ.ಜಿಗೂ ಹೆಚ್ಚು ಚಿನ್ನ, 2.5 ಕೆಜಿ ಬೆಳ್ಳಿಯ ಆಭರಣಗಳು ಮತ್ತು 12 ಲಕ್ಷ ರೂ. ನಗದನ್ನು ವಶಪಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಒಂದು ಟೆಂಪೋ, ಒಂದು ಕಾರು, ಆರು 6 ದ್ವಿಚಕ್ರವಾಹನ ಮತ್ತು 7 ಟನ್ ಕಬ್ಬಿಣವನ್ನು ವಶಕ್ಕೆ ಪಡೆಯಲಾಗಿದೆ.

    ಬಂಧಿತ ಆರೋಪಿಗಳ ಮೇಲಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆನೇಕಲ್ ಪೊಲೀಸ್ ಠಾಣೆಯಲ್ಲಿ 9 ಪ್ರಕರಣ, ಹೆಬ್ಬಗೋಡಿ ಠಾಣೆಯಲ್ಲಿ 7 ಮತ್ತು ಸರ್ಜಾಪುರ ಠಾಣೆಯಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವ್ಯಕ್ತಿಯ ಬೆಲ್ಟ್, ಶೂಗಳಲ್ಲಿ 3 ಕೋಟಿ ಮೌಲ್ಯದ ಚಿನ್ನ ಪತ್ತೆ!

    ವ್ಯಕ್ತಿಯ ಬೆಲ್ಟ್, ಶೂಗಳಲ್ಲಿ 3 ಕೋಟಿ ಮೌಲ್ಯದ ಚಿನ್ನ ಪತ್ತೆ!

    ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆದಾಯ ತೆರಿಗೆ ಗುಪ್ತಚರ ನಿರ್ದೇಶನಾಲಯವು(ಡಿಆರ್‍ಐ) ಬರೋಬ್ಬರಿ 3 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ ನನ್ನು ವಶಪಡಿಸಿಕೊಂಡಿದೆ.

    ಡಿಆರ್ ಐ  ಅಧಿಕಾರಿಗಳು ನ್ಯೂ ಜಲ್‍ಪಾಲ್‍ಗುರಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಅನುಮಾನ ಮೇರೆಗೆ ಪರಿಶೀಲನೆ ನಡೆಸಿದಾಗ ಆತನ ಬಳಿ 56 ಚಿನ್ನದ ಬಿಸ್ಕತ್ ಪತ್ತೆಯಾಗಿದ್ದು, ಸುಮಾರು 9.2 ಕೆ.ಜಿ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಮಣಿಪುರದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಚಿನ್ನವನ್ನು ಮ್ಯಾನ್ಮಾರ್ ದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ವ್ಯಕ್ತಿ ಅಸ್ಸಾಂನ ಗುವಾಹಾಟಿಯಲ್ಲಿನ ಮಣಿಪುರಿ ವ್ಯಕ್ತಿಯಿಂದ ಚಿನ್ನದ ಬಿಸ್ಕತ್ ಗಳನ್ನು ಪಡೆದುಕೊಂಡಿದ್ದನು ಎಂದು ತನಿಖೆ ಸಂಸ್ಥೆ ತಿಳಿಸಿದೆ.

    ಸದ್ಯಕ್ಕೆ ಡಿಆರ್‍ಐ ಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದೆ. ಈತ ಪಶ್ಚಿಮ ಬಂಗಾಳದ ಹೂಗ್ಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಈತ ಕಳ್ಳಸಾಗಾಣಿಕೆಯ ಚಿನ್ನದ ಬಿಸ್ಕತ್ ಗಳನ್ನು ತನ್ನ ಸೊಂಟದ ಸುತ್ತಲೂ ವಿಶೇಷವಾದ ಬಟ್ಟೆಯಿಂದ ತಯಾರಿಸಿದ್ದ ಬೆಲ್ಟ್ ನಲ್ಲಿ ಮತ್ತು ಸ್ಪೋರ್ಟ್ಸ್ ಶೂಗಳ ಒಳಭಾಗದಲ್ಲಿ ಅಡಗಿಸಿಕೊಂಡಿದ್ದನು ಎಂದು ಡಿಆರ್ ಐ ಹೇಳಿಕೆ ನೀಡಿದೆ.

    ಸದ್ಯಕ್ಕೆ ಡಿಆರ್‍ಐಯೂ ಬಂಧಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದೆ. ಆತನಿಂದ ವಿದೇಶಿ ಮೂಲದ 9.296 ಕೆಜಿ ಚಿನ್ನದ ಬಿಸ್ಕತ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 3.08 ಕೋಟಿ ರೂ. ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರೆಡ್ಡಿ ಕೋಟೆ ಛಿದ್ರ ಮಾಡಿದ ರಮೇಶ್ ಕೊಠಾರಿ

    ರೆಡ್ಡಿ ಕೋಟೆ ಛಿದ್ರ ಮಾಡಿದ ರಮೇಶ್ ಕೊಠಾರಿ

    ಬೆಂಗಳೂರು: ಅಲಿಖಾನ್ ಮುಖಾಂತರ ನಾನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ 18 ಕೋಟಿ ರೂ. ಮೌಲ್ಯದ 57 ಕೆ.ಜಿ. ಚಿನ್ನವನ್ನು ನೀಡಿದ್ದೇನೆ ಎಂದು ಅಂಬಿಕಾ ಜ್ಯೂವೆಲರ್ಸ್ ಮಾಲೀಕ ರಮೇಶ್ ಕೊಠಾರಿ ಸಿಆರ್ ಪಿಸಿ 164 (ತಪ್ಪೊಪ್ಪಿಗೆ ಹೇಳಿಕೆ) ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆಯೇ ಎಲ್ಲ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ

    ಇಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಬಿಡೆಂಟ್ ಕಂಪನಿ ಮಾಲೀಕ ಫರೀದ್ ಪುತ್ರ ಸೈಯದ್ 57 ಕೆಜಿ ಚಿನ್ನವನ್ನು ಜನಾರ್ದನ ರೆಡ್ಡಿಗೆ ನೀಡಲು ಮುಂದಾಗಿದ್ದನು. ಅಲಿಖಾನ್ ಆಪ್ತ ಬಳ್ಳಾರಿಯ ರಾಜಮಹಲ್ ಜ್ಯೂವೆಲರ್ಸ್ ನ ರಮೇಶ್ ಎಂಬವರನ್ನು ಸಂಪರ್ಕಿಸಿದ್ದನು. ಈ ವೇಳೆ ರಾಜಮಹಲ್ ಜ್ಯೂವೆಲರ್ಸ್ ಮಾಲೀಕ ರಮೇಶ್ 57 ಕೆಜಿ ಚಿನ್ನವನ್ನು ನೀಡಲು ಒಪ್ಪಿದ್ದನು. 18 ಕೆಜಿ ಚಿನ್ನಕ್ಕಾಗಿ ರಮೇಶ್, ಬೆಂಗಳೂರಿನ ಅಂಬಿಕಾ ಜ್ಯೂವೆಲರ್ಸ್ ಮಳಿಗೆಯ ಮಾಲೀಕ ರಮೇಶ್ ಕೊಠಾರಿಯಾ ಎಂಬವರನ್ನು ಸಂಪರ್ಕ ಮಾಡಲಾಗಿತ್ತು.

    ಬಳ್ಳಾರಿಯ ರಮೇಶ್ ಬೆಂಗಳೂರಿನಿಂದ ಚಿನ್ನ ಖರೀದಿಸಿ ಸೈಯದ್ ನೀಡಿದ್ದನು. ಕೊನೆಗೆ ಸೈಯದ್ ಎಲ್ಲ ಚಿನ್ನವನ್ನು ಜನಾರ್ದನ ರೆಡ್ಡಿಗೆ ತಲುಪಿಸಿದ್ದನು. ಈ ಸಂಬಂಧ ಸಿಸಿಬಿ ಪೊಲೀಸರು ರಮೇಶ್ ಕೊಠಾರಿಯಾರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇಂದು ನ್ಯಾಯಾಧೀಶರ ಮುಂದೆ ರಮೇಶ್ ಕೊಠಾರಿಯಾ ಚಿನ್ನ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರಿಂದ, ಸಿಸಿಬಿ ವಿಚಾರಣೆಯಲ್ಲಿರುವ ಜನಾರ್ದನ ರೆಡ್ಡಿಯ ಬಂಧನವಾಗುವ ಸಾಧ್ಯತೆಗಳಿವೆ.

    ರೆಡ್ಡಿ ಎಂಟ್ರಿ ಹೇಗಾಯ್ತು?
    ಇಡಿಯಲ್ಲಿ ಕೇಸ್ ದಾಖಲಾದ ಬಳಿಕ ಮುಂದೆ ಕಷ್ಟವಿದೆ ಎನ್ನುವುದನ್ನು ಅರಿತ ಸೈಯದ್ ಜನಾರ್ದನ ರೆಡ್ಡಿಯ ಸಹಾಯ ಕೋರಿದ್ದ. ಹೀಗಾಗಿ ಜನಾರ್ದನ ರೆಡ್ಡಿ, ರೆಡ್ಡಿ ಆಪ್ತ ಅಲಿಖಾನ್ ಮತ್ತು ಸೈಯದ್ ಒಂದು ಕಡೆ ಸಭೆ ನಡೆಸಿದ್ದರು. ಸಭೆಯಲ್ಲಿ ಈ ಪ್ರಕರಣದಲ್ಲಿ ಪಾರಾಗಲು ರೆಡ್ಡಿ 20 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ. ಒಪ್ಪಂದದ ಪ್ರಕಾರ 20 ಕೋಟಿ ರೂ.ವನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಷರತ್ತು ವಿಧಿಸಿದ್ದರು.

    ಯಾವುದಿದು ಅಂಬಿಡೆಂಟ್ ಕಂಪನಿ?
    ಅಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ದುಬೈ ಮೂಲದ ಉದ್ಯಮಿಗಳು ಸ್ಥಾಪಿಸಿದ್ದಾರೆ. ಈ ಕಂಪನಿಯ ಕಚೇರಿ ಬೆಂಗಳೂರಿನ ಕನಕನಗರದ ಮುಖ್ಯರಸ್ತೆಯಲ್ಲಿದೆ. ಈ ಕಂಪನಿಯನ್ನು ನಡೆಸುತ್ತಿದ್ದ, ಸೈಯದ್ ಅಹಮದ್, ನಿಮ್ಮ ಹಣವನ್ನ ಒಂದು ವರ್ಷದಲ್ಲಿ ದ್ವಿಗುಣ ಮಾಡಿಕೊಡುತ್ತೇವೆ ಎಂದು ಜನರಿಂದ ಹಣ ಪಡೆಯುತ್ತಿದ್ದ. ಗ್ರಾಹಕರಿಂದ ಕನಿಷ್ಠ ಹೂಡಿಕೆ ಎಂದು ಹೇಳಿ ಒಂದು ಲಕ್ಷ ರೂ. ಪಡೆದು, ಪ್ರತಿ ಮೂರು ತಿಂಗಳಿಗೊಮ್ಮೆ 40 ಸಾವಿರ ರೂ.ದಂತೆ ವರ್ಷಕ್ಕೆ 1.60 ಸಾವಿರ ವಾಪಸ್ಸು ಕೊಡುವುದಾಗಿ ಗ್ರಾಹಕರನ್ನು ನಂಬಿಸಿದ್ದ. ಹೀಗಾಗಿ ಇಲ್ಲಿ ಸಾವಿರಾರು ಜನರು ಹೂಡಿಕೆ ಮಾಡಿದ್ದರು. ಇದೇ ದೋಖಾ ಕಂಪೆನಿಯಲ್ಲಿ ಬೇನಾಮಿ ಹೆಸರಲ್ಲಿ ರೆಡ್ಡಿ ಆಪ್ತ ಅಲಿಖಾನ್ ಹಣ ಹೂಡಿಕೆ ಮಾಡಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಬ್ಬಕ್ಕೆ ಆಭರಣ ಖರೀದಿ ಜೋರು- ಚಿನ್ನ, ಬೆಳ್ಳಿ ಬೆಲೆ ಏರಿಕೆ

    ಹಬ್ಬಕ್ಕೆ ಆಭರಣ ಖರೀದಿ ಜೋರು- ಚಿನ್ನ, ಬೆಳ್ಳಿ ಬೆಲೆ ಏರಿಕೆ

    ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆಭರಣ ಖರೀದಿ ಜೋರಾಗುತ್ತಿದ್ದಂತೆ ಚಿನ್ನ, ಬೆಳ್ಳಿಯ ದರವೂ ಸ್ವಲ್ಪ ಏರಿಕೆಯಾಗಿದೆ.

    ಚಿನ್ನದ ದರ ಪ್ರತಿ ಗ್ರಾಂಗೆ 20 ರೂ. ಏರಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಶೇ.99.9 ಶುದ್ಧ ಚಿನ್ನಕ್ಕೆ 32,650 ರೂ. ನಿಗದಿಯಾಗಿದ್ದರೆ, ಶೇ.99.5 ಕ್ಯಾರೆಟ್ ಚಿನ್ನದ ಬೆಲೆ 32,500 ರೂ. ಆಗಿದೆ. ಶುಕ್ರವಾರ ಚಿನ್ನದ ಬೆಲೆ 150 ರೂ. ಇಳಿಕೆಯಾಗಿತ್ತು.

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರದ ಚಿನ್ನದ ಬೆಲೆಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಕಳೆದ ವಾರ 1 ಔನ್ಸ್ ಗೆ 1,233.80 ಡಾಲರ್ ಇದ್ದರೆ ಈ ವಾರ 1,233.20 ಡಾಲರ್ ಇದೆ. ಬೆಳ್ಳಿ 1 ಔನ್ಸ್ ಗೆ 14.82 ಡಾಲರ್ ಬೆಲೆ ಇದೆ.

    ಶುಕ್ರವಾರ 1 ಕೆಜಿ ಶುದ್ಧ ಬೆಳ್ಳಿಗೆ 39,500 ರೂ. ಇದ್ದರೆ ಶನಿವಾರ 30 ರೂ. ಏರಿಕೆಯಾಗಿ 30,530 ರೂ.ಗೆ ತಲುಪಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಕಲಿ ಚಿನ್ನವಿಟ್ಟು ಒರಿಜಿನಲ್ ಚಿನ್ನ ಕದೀತಿದ್ದ ಮಹಿಳೆ ಬಂಧನ

    ನಕಲಿ ಚಿನ್ನವಿಟ್ಟು ಒರಿಜಿನಲ್ ಚಿನ್ನ ಕದೀತಿದ್ದ ಮಹಿಳೆ ಬಂಧನ

    ಬೆಂಗಳೂರು: ನಕಲಿ ಚಿನ್ನ ಇಟ್ಟು ಒರಿಜಿನಲ್ ಚಿನ್ನ ಕದಿಯುತ್ತಿದ್ದ ಮಹಿಳೆಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

    ಶಿವಾಜಿನಗರ ನಿವಾಸಿ ಶಾಂತಿ ಬಂಧನಕೊಳಗಾದ ಮಹಿಳೆ. ಮನೆ ಕೆಲಸದ ನೆಪದಲ್ಲಿ ಹೈಫೈ ಮನೆಗಳಿಗೆ ಎಂಟ್ರಿ ಕೊಡುತ್ತಿದ್ದ ಶಾಂತಿ, ಆ ಮನೆಯಲ್ಲಿ ಕೆಲ ದಿನ ಕೆಲಸ ಮಾಡಿ ಅಸಲಿ ಚಿನ್ನವನ್ನು ಕದ್ದು ನಕಲಿ ಚಿನ್ನವಿಟ್ಟು ಎಸ್ಕೇಪ್ ಆಗುತ್ತಿದ್ದಳು. ಇದೇ ರೀತಿ ಕೋರಮಂಗಲದ ಮೂರನೇ ಬ್ಲಾಕ್‍ನಲ್ಲಿರೊ ರಹೇಜಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನಲ್ಲಿ ತನ್ನ ಕೈ ಚಳಕವನ್ನು ತೋರಿಸಿ ಶಾಂತಿ ಸಿಕ್ಕಿಬಿದ್ದಿದ್ದಾಳೆ.

    ಅಷ್ಟೇ ಅಲ್ಲದೇ ಕೋರಮಂಗಲದ ದೇವಕಿ ಎಂಬವರ ಮನೆಯಲ್ಲಿಯೂ ಮಾಂಗಲ್ಯ ಸರ ಸೇರಿ ಒಟ್ಟು 170 ಗ್ರಾಂ ಚಿನ್ನ ಕದ್ದಿದ್ದಳು. ಈ ಘಟನೆಗೆ ಸಂಬಂಧಪಟ್ಟಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಾಂತಿಯನ್ನು ಬಂಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಲೆಯಲ್ಲಿ ಚಿನ್ನವನ್ನೇ ಹಿಂದಿಕ್ಕಿದ ಸ್ಪೆಶಲ್ ವಯಗ್ರಾ ಮೂಲಿಕೆ

    ಬೆಲೆಯಲ್ಲಿ ಚಿನ್ನವನ್ನೇ ಹಿಂದಿಕ್ಕಿದ ಸ್ಪೆಶಲ್ ವಯಗ್ರಾ ಮೂಲಿಕೆ

    -ಯಾಕಿಷ್ಟು ಬೇಡಿಕೆ? ಏನಿದರ ವಿಶೇಷತೆ?

    ವಾಷಿಂಗ್ಟನ್ ಡಿಸಿ: ಬೆಲೆ ಬಾಳುವ ವಯಾಗ್ರ ಮೂಲಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ನಿರ್ಮಾಣವಾಗಿದ್ದು, ಬೆಲೆಯಲ್ಲಿ ಚಿನ್ನವನ್ನೇ ಈ ಮೂಲಿಕೆ ಅಥವಾ ಶಿಲೀಂಧ್ರ ಅಥವಾ ಬೇರು ಹಿಂದಿಕ್ಕಿದೆ. ಏಷ್ಯಾ ಖಂಡದ ಹಿಮಾಲಯ ಭಾಗಗಳಲ್ಲಿ ಕಂಡು ಬರುವ ಈ ವಿಶೇಷ ಬೇರನ್ನು ‘ಹಿಮಾಲಯ ವಯಾಗ್ರ’ ಅಂತಾನೇ ಕರೆಯುವುದುಂಟು. ಹವಾಮಾನದ ಏರುಪೇರುಗಳಿಂದಾಗಿ ಈ ಬೇರು ವಿನಾಶದ ಅಂಚು ತಲುಪಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

    ಚೀನಾ ಮತ್ತು ನೇಪಾಳ ದೇಶದ ಜನರು ಈ ಅತ್ಯಮೂಲ್ಯ ಮೂಲಿಕೆಯನ್ನು ಬಹಳ ವರ್ಷಗಳಿಂದ ನಾಶಗೊಳಿಸುತ್ತಾ ಬಂದಿದ್ದಾರೆ ಎಂದು ಸಂಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೊಂದು ಪ್ರಪಂಚದ ಅತಿ ಹೆಚ್ಚು ಮೌಲ್ಯವುಳ್ಳ ಜೈವಿಕ ವಸ್ತು. ಈ ವಸ್ತುವಿನ ಮಾರಾಟದ ಮೂಲಕ ಜನರು ಹಣ ಸಂಪಾದನೆಗೆ ಇಳಿದಿದ್ದಾರೆ. ಮತ್ತೆ ಕೆಲವರು ವಿಶೇಷ ಬೇರಿನ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ವರದಿಯಲ್ಲಿ ತಿಳಿಸಲಾಗಿದೆ.

    ಹಿಮಾಲಯ ಪ್ರದೇಶದಲ್ಲಿ ಈ ಬೇರನ್ನು ‘ಯರಚಗುಂಬಾ’ ಎಂದೇ ಕರೆಯಲಾಗುತ್ತಿದೆ. ಈ ಮೂಲಿಕೆಯ ಸೇವನೆಯಿಂದ ಲೈಂಗಿಕ ಶಕ್ತಿ ವೃದ್ಧಿ ಆಗುತ್ತೆ ಎಂದು ನಂಬಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನರು ಟೀ ಅಥವಾ ನೀರಿನಲ್ಲಿ ಬೇಯಿಸಿ ಸೇವನೆ ಮಾಡುತ್ತಾರೆಂದು ಹೇಳಲಾಗುತ್ತಿದೆ. ಲೈಂಗಿಕ ಶಕ್ತಿ ವೃದ್ಧಿಯ ಜೊತೆಗೆ ಅಮೂಲ್ಯವಾದ ಗಿಡ ಮೂಲಿಕೆ ಇದಾಗಿದ್ದು, ಹಲವು ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯನ್ನೂ ಹೊಂದಿದೆ.

    ಎಲ್ಲಿ ಸಿಗುತ್ತೆ?
    ಈ ವಿಶೇಷವಾದ ಬೇರು ಚೀನಾ, ನೇಪಾಳ, ಭೂತಾನ್ ಮತ್ತು ಭಾರತದ ಹಿಮಾಲಯ ಪ್ರದೇಶಗಳಲ್ಲಿ ಸಿಗುತ್ತದೆ. ಆದ್ರೆ ಇತ್ತೀಚಿನ ಹವಾಮಾನ ವೈಪರೀತ್ಯ ಮತ್ತು ಕೆಲವರು ಇದನ್ನೇ ತಮ್ಮ ಆದಾಯದ ಮೂಲವನ್ನು ಮಾಡಿಕೊಂಡಿದ್ದರಿಂದ ವಿನಾಶದ ಅಂಚು ತಲುಪಿದೆ ಎಂದು ಸಂಶೋಧಕರು ಹೇಳುತ್ತಾರೆ.

    ಸಮುದ್ರಮಟ್ಟದ 11,500 ಅಡಿ ಎತ್ತರದ ಪ್ರದೇಶದಲ್ಲಿ ವಿಶೇಷ ಶಿಲೀಂಧ್ರ ಸಿಗುತ್ತದೆ. ಜೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶಿಲೀಂಧ್ರ ಬೆಳೆಯುತ್ತದೆ. ಮಣ್ಣು ಯಾವುದಾದರು ಆಗಿರಲಿ ವಾತಾವರಣ ಸಮಶೀತೋಷ್ಣ ವಲಯದಿಂದ ಕೂಡಿರಬೇಕು. 0 ಡಿಗ್ರಿಗಿಂತಲೂ ಕಡಿಮೆ ತಾಪಮಾನವುಳ್ಳ ಶೀತ ಪ್ರದೇಶದಲ್ಲಿ ಕೋನಾಕಾರದಲ್ಲಿ ಬೆಳೆಯುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv