Tag: gold

  • 2 ಕಿಲೋ ಚಿನ್ನ, ಮುಷ್ಠಿ ತುಂಬಾ ನಾಣ್ಯವಿಟ್ಟು ಶ್ರೀಕೃಷ್ಣನಿಗೆ ತುಲಾಭಾರ

    2 ಕಿಲೋ ಚಿನ್ನ, ಮುಷ್ಠಿ ತುಂಬಾ ನಾಣ್ಯವಿಟ್ಟು ಶ್ರೀಕೃಷ್ಣನಿಗೆ ತುಲಾಭಾರ

    ಉಡುಪಿ: ದೇವಾಲಯಗಳ ನಗರ ಉಡುಪಿ ಒಂದು ಕ್ಷಣ ದ್ವಾರಕೆಯಾಗಿ ಮಾರ್ಪಾಟಾಗಿತ್ತು. ಒಂದು ತಕ್ಕಡಿಯಲ್ಲಿ ಭಗವಾನ್ ಶ್ರೀಕೃಷ್ಣ, ಮತ್ತೊಂದು ಭಾಗದಲ್ಲಿ ಚಿನ್ನದ ಆಭರಣಗಳು, ನಾಣ್ಯಗಳು. ದ್ವಾಪರದಲ್ಲಿ ಮುರಾರಿಯ ತುಲಾಭಾರ ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಕಲಿಯುಗದಲ್ಲಿ ಮಾತ್ರ ದೇವರ ತುಲಾಭಾರವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡಿದ್ದಾರೆ.

    ದ್ವಾಪರ ಯುಗ ಹೇಗಿತ್ತೋ..? ದ್ವಾರಕೆಯ ನಗರ ಹೇಗಿತ್ತೋ ನೋಡಿದವರಿಲ್ಲ. ಪುರಾಣದ ಕಥೆಗಳಿಂದ ಆ ಕಾಲವನ್ನು ಇಮ್ಯಾಜಿನೇಶನ್ ಮಾಡಿಕೊಳ್ಳಬಹುದಷ್ಟೇ. ದ್ವಾರಕೆಯಲ್ಲಿ ಶ್ರೀಕೃಷ್ಣನಿಗೆ ಸತ್ಯಭಾಮೆ, ರುಕ್ಮಿಣಿ ಚಿನ್ನದ ಮತ್ತು ತುಳಸಿಯಲ್ಲಿ ತುಲಾಭಾರ ಮಾಡಿದ್ದರು. ಇದೀಗ ದೇವರಿಗೆ ಕಲಿಗಾಲದಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಮತ್ತೆ ತುಲಾಭಾರ ಸಂಪನ್ನಗೊಂಡಿದೆ.

    ಪರ್ಯಾಯ ಪಲಿಮಾರು ಸ್ವಾಮೀಜಿ ಪೂಜಾಧಿಕಾರ ಮುಗಿಯಲು ಎರಡು ವಾರ ಇರುವಾಗ ಈ ಸಂಪ್ರದಾಯ ನೆರವೇರಿಸಿದ್ದಾರೆ. ಸತ್ಯಭಾಮೆ ಕೃಷ್ಣನಿಗೆ ಚಿನ್ನದ ತುಲಾಭಾರ ಮಾಡಿಸಿದ್ದಳಂತೆ. ಎಷ್ಟು ಚಿನ್ನ ಇಟ್ಟರೂ ಕೃಷ್ಣ ಕೂತ ತಕ್ಕಡಿ ಮೇಲೆ ಏಳಲೇ ಇಲ್ವಂತೆ. ಆ ಸಂದರ್ಭ ರುಕ್ಮಿಣಿ ದೇವಿ ಒಂದು ತುಳಸಿ ದಳವನ್ನು ತಕ್ಕಡಿಗೆ ಹಾಕಿದ್ದರಿಂದ ತುಲಾಭಾರ ಆಗಿತ್ತು. ಕೃಷ್ಣ ಕೂತ ತಕ್ಕಡಿ ತುಳಸಿಯಿಟ್ಟಾಗ ತೂಗಿದೆ.

    ಉಡುಪಿಯಲ್ಲಿ ಚಿನ್ನ, ನಾಣ್ಯದ ಜೊತೆ ದೇವರಿಗೆ ಬಹಳ ಪ್ರಿಯವಾದ ಗೋಪಿ ಚಂದನದ ತುಂಡುಗಳನ್ನು ಇಟ್ಟು ತುಲಾಭಾರ ಮಾಡಲಾಯ್ತು. ರಥಬೀದಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ದೇವರ ತುಲಾಭಾರ ನೋಡಿದ್ರೆ ಪುಣ್ಯಪ್ರಾಪ್ತಿ ಎಂಬ ನಂಬಿಕೆಯೂ ಇದೆ. ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ತುಲಾಭಾರ ಹರಕೆ ರೂಪದಲ್ಲಿ, ಸೇವೆಯ ರೂಪದಲ್ಲಿ ನಡೆಯುತ್ತದೆ. ಕೃಷ್ಣನಿಗೆ ಚಿನ್ನದ ಗರ್ಭಗುಡಿ ಸೇವೆಯ ಅರ್ಥದಲ್ಲಿ ಇದನ್ನು ಆಯೋಜಿಸಲಾಗಿದ್ದು ಭಗವದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

    ಪಲಿಮಾರು ಮಠದ ಕಾರ್ಯದರ್ಶಿ ಗಿರೀಶ್ ಆಚಾರ್ಯ ಮಾತನಾಡಿ, ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ದೇವರ ಮೇಲೆ ಭಕ್ತಿ ಹೆಚ್ಚಬೇಕೆಂದು ತುಲಾಭಾರ ಸೇವೆ ಹುಟ್ಟಿರಬೇಕು. ಭಗವಂತನಿಗಿಂತ ಶ್ರೇಷ್ಠ ಮತ್ತೊಂದಿಲ್ಲ ಎಂಬೂದು ಆಚರಣೆಯ ಉದ್ದೇಶ ಎಂದು ಹೇಳಿದರು.

    ಈಗಿನ ಪರ್ಯಾಯ ಪಲಿಮಾರು ಸ್ವಾಮೀಜಿ ಕೃಷ್ಣಮಠದ ಗರ್ಭಗುಡಿಗೆ ಚಿನ್ನದ ಹಾಸು ಹೊದೆಸಿದ್ದರು. ಸುಮಾರು ಮೂರುವರೆ ಕೋಟಿ ರುಪಾಯಿ ಮೌಲ್ಯದ ಚಿನ್ನದ ತಗಡು ಕಡಿಮೆಯಾಗಿತ್ತು. ಆ ಯೋಜನೆ ಸರಿ ತೂಗಿಸಲು ತುಲಾಭಾರ ನಡೆಸಿದ್ದು ಎರಡು ಕೆಜಿಯಷ್ಟು ಮೌಲ್ಯದ ನಾಣ್ಯ, ಚಿನ್ನದ ತುಳಸಿದಳ ಸಂಗ್ರಹವಾಗಿದೆ. ಮುಂದಿನ ಎರಡು ವಾರದಲ್ಲಿ ಮತ್ತಷ್ಟು ಕನಕ ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಪಲಿಮಾರು ಮಠ ಹೇಳಿದೆ.

  • 2 ನಂಬರ್ ಪ್ಲೇಟ್‌ನಿಂದ ಸಿಕ್ಕಿಬಿದ್ದ ಕಳ್ಳ- 9.32 ಲಕ್ಷ ಮೌಲ್ಯದ ಚಿನ್ನಾಭರಣ ವಶ

    2 ನಂಬರ್ ಪ್ಲೇಟ್‌ನಿಂದ ಸಿಕ್ಕಿಬಿದ್ದ ಕಳ್ಳ- 9.32 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಮೈಸೂರು: ಸರಗಳ್ಳತನ ಮಾಡಿ ತಕ್ಷಣ ನಂಬರ್ ಪ್ಲೇಟ್ ಬದಲಿಸಿ ಪರಾರಿಯಾಗುತ್ತಿದ್ದ ಚಾಲಕಿ ಕಳ್ಳನನ್ನು ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸರು ಬಂಧಿಸಿದ್ದಾರೆ.

    ಸೈಯದ್ ಉಮರ್(39) ಬಂಧಿತ ಆರೋಪಿ. ಬಂಧಿತನಿಂದ 9.32 ಲಕ್ಷ ಮೌಲ್ಯದ 233 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸೈಯದ್ ಉಮರ್ ಮೈಸೂರಿನ ಉದಯಗಿರಿಯ ಸತ್ಯಾನಗರ ನಿವಾಸಿ ಎಂದು ತಿಳಿದು ಬಂದಿದೆ.

    ಒಂಟಿ ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದು, ಸರಗಳ್ಳತನದ ನಂತರ ಆಕ್ಟೀವಾ ಹೋಂಡಾ ನಂಬರ್ ಪ್ಲೇಟ್ ಬದಲಿಸಿ ಪರಾರಿಯಾಗುತ್ತಿದ್ದನು. ಜೆಪಿ ನಗರದಲ್ಲಿ ವಾಹನ ತಪಾಸಣೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸ್ಕೂಟರ್ ಡಿಕ್ಕಿಯಲ್ಲಿ ಎರಡು ನಂಬರ್ ಪ್ಲೇಟ್‍ಗಳು ಪತ್ತೆಯಾಗಿದ್ದವು. ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದ್ದಾಗ ಸತ್ಯ ಬಯಲಾಗಿದೆ.

    ಆರೋಪಿ ಬಳಿ ಇದ್ದ 7 ಚಿನ್ನದ ಸರ, 1 ತಾಳಿ, 2 ಗುಂಡು, 4 ಚಿನ್ನದ ಕಾಸು ಹಾಗೂ ಕೃತ್ಯಕ್ಕೆ ಬಳಸಿದ ಆಕ್ಟೀವಾ ಹೋಂಡಾ ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ವಿದ್ಯಾರಣ್ಯಪುರಂನ 5 ಪ್ರಕರಣ, ಆಲನಹಳ್ಳಿ ಹಾಗೂ ಕುವೆಂಪುನಗರ ಠಾಣೆಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ. ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • 41 ಸಾವಿರ ಗಡಿ ದಾಟಿತು – ಗಗನಕ್ಕೇರಿದ ಚಿನ್ನದ ಬೆಲೆ

    41 ಸಾವಿರ ಗಡಿ ದಾಟಿತು – ಗಗನಕ್ಕೇರಿದ ಚಿನ್ನದ ಬೆಲೆ

    ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಒಂದೇ ದಿನ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 710 ರೂ. ಏರಿಕೆಯಾಗಿ 41,130 ರೂ.ಗೆ ತಲುಪಿದೆ. ಇದು ಚಿನ್ನದ ಬೆಲೆಯ ಸಾರ್ವಕಾಲಿಕ ದಾಖಲೆಯಾಗಿದೆ.

    ಇದೇ ಮೊದಲ ಬಾರಿಗೆ ದೇಶದಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 41 ಸಾವಿರ ಗಡಿಯನ್ನು ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 2 ಸಾವಿರದಷ್ಟು ಹೆಚ್ಚಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.1.10 ರಷ್ಟು ಹೆಚ್ಚಳವಾಗಿದ್ದರೆ, 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಶೇ.0.83ರಷ್ಟು ಏರಿಕೆಯಾಗಿದೆ.

    ಡಿಸೆಂಬರ್ ತಿಂಗಳ ಅಂತ್ಯದಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇದು ಆಭರಣಕೊಳ್ಳುವವರಿಗೆ ನಿರಾಸೆಯನ್ನು ಮೂಡಿಸಿದೆ. ಅಮೆರಿಕ ಇರಾನ್ ದೇಶದ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯನ್ನು ಆಭರಣ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ:  ಅಮೆರಿಕದಿಂದ ಏರ್ ಸ್ಟ್ರೈಕ್ – ಇರಾನ್ ಸೇನಾಧಿಕಾರಿ ಹತ್ಯೆ, ಕಚ್ಚಾ ತೈಲ ಬೆಲೆ ಏರಿಕೆ

    ಭಾರತದ ಜನರು ಸಂಪೂರ್ಣವಾಗಿ ಚಿನ್ನದ ಆಮದು ಮೇಲೆ ಅವಲಂಬಿತವಾಗಿದ್ದು, ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯಾಗುವ ನೇರ ಪರಿಣಾಮವನ್ನು ಎದುರಿಸಬೇಕಿದೆ. ಚೀನಾ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಟ್ರೆಡ್ ವಾರ್ ಪರಿಣಾಮವೂ ಚಿನ್ನದ ಬೆಲೆಯ ಮೇಲೆ ಬೀರುತ್ತಿದೆ. ಭಾರತದ ವಿಶ್ವದಲ್ಲೇ ಅತಿ ದೊಡ್ಡ ಚಿನ್ನ ಆಮದು ಮಾಡುವ ದೇಶವಾಗಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತದ ಚಿನ್ನದ ಆಮದು ಪ್ರಮಾಣ ಕಡಿಮೆಯಾಗಿದೆ. 2019-20ರ ಅಂಕಿ ಅಂಶಗಳ ಅನ್ವಯ ಚಿನ್ನದ ಆಮದು ಪ್ರಮಾಣ 1.43 ಲಕ್ಷ ಕೋಟಿಗಳಷ್ಟಿದೆ. ವಾರ್ಷಿಕವಾಗಿ 800 ರಿಂದ 900 ಟನ್‍ನಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

    ತೈಲ ಬೆಲೆ ಏರಿಕೆ:
    ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.39 ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 69.16 ಡಾಲರ್(ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 66.25 ಡಾಲರ್(ಅಂದಾಜು 4,700 ರೂ.) ಇತ್ತು.

  • 77 ಕೆ.ಜಿ ಚಿನ್ನ ಹೊಡೆಯಲು ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್!

    77 ಕೆ.ಜಿ ಚಿನ್ನ ಹೊಡೆಯಲು ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್!

    ಬೆಂಗಳೂರು: ಪುಲಿಕೇಶಿ ನಗರದ ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳು ನೇಪಾಳಕ್ಕೆ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ.

    ಸುಮಾರು 9 ಜನರ ಗ್ಯಾಂಗ್ ಟಾಯ್ಲೆಟ್ ನ ಗೋಡೆ ಕೊರೆದು 77 ಕೆ.ಜಿ ಚಿನ್ನ ಕಳವು ಮಾಡಿತ್ತು. ಎಲ್ಲರೂ ನೇಪಾಳ ಮೂಲದವರು ಎನ್ನಲಾಗಿದೆ. ಮುತ್ತೂಟ್ ನಲ್ಲಿರುವ ಚಿನ್ನ ಹೊಡೆದ್ರೆ ಲೈಫ್ ಸೆಟ್ಲ್ ಆಗಬಹುದು ಅಂತ ಜೊತೆಯಲ್ಲಿದ್ದವರಿಗೆ ಗಾರ್ಡ್ ಹುರಿದುಂಬಿಸಿದ್ದನು. ಹೀಗಾಗಿ ತಿಂಗಳ ಹಿಂದೆಯೇ ನಕಲಿ ದಾಖಲೆ ನೀಡಿ, ಬೇರೆ ಬೇರೆಯವರ ಹೆಸರಲ್ಲಿ ಸಿಮ್ ಖರೀದಿ ಮಾಡಲಾಗಿತ್ತು.

    ಕದ್ದ ಮಾಲಿನ ಸಮೇತ ರೈಲಿನ ಜನರಲ್ ಕಂಪಾರ್ಟ್ ಮೆಂಟ್ ನಲ್ಲಿ ಕಳ್ಳರು ರಾಜಾರೋಷವಾಗಿ ದೆಹಲಿ ಸೇರಿದ್ದಾರೆ. ಅಲ್ಲಿಂದ ನೇಪಾಳಕ್ಕೆ ಹೋಗಿದ್ದಾರೆ. ದಾರಿ ಮಧ್ಯೆ ಸಿಕ್ಕ ನದಿಗಳಲ್ಲಿ ಬಳಕೆ ಮಾಡಿದ್ದ ಮೊಬೈಲ್ ಮತ್ತು ಸಿಮ್ ಗಳನ್ನ ಎಸೆಯಲಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

    ಈ ಘಟನೆ ಡಿಸೆಂಬರ್ 24ರಂದು ನಡೆದಿದ್ದರೂ ಚಿನ್ನ ಲೆಕ್ಕ ಹಾಕುವ ನೆಪದಲ್ಲಿ ಮುತ್ತೂಟ್ ಸಿಬ್ಬಂದಿ ಎರಡು ದಿನ ತಡವಾಗಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಈ ಮಧ್ಯೆ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ ಯಾರೋ ಬಂದು ಕೇಳಿದರು ಅಂತ ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿಕೊಂಡಿದೆ. ಆರೋಪಿಗಳು ಸಿಗೋದು ಲೇಟ್ ಆದಂತೆಲ್ಲ ಅಡ ಇಟ್ಟವರ ಆತಂಕ ಇನ್ನೂ ಹೆಚ್ಚಾಗುತ್ತಿದೆ.

  • ಫಸ್ಟ್ ನೈಟ್ ರೂಮಿಗೆ ಹೋದ ವಧು ನಾಪತ್ತೆ -ಮರುದಿನ ವರ ಶಾಕ್

    ಫಸ್ಟ್ ನೈಟ್ ರೂಮಿಗೆ ಹೋದ ವಧು ನಾಪತ್ತೆ -ಮರುದಿನ ವರ ಶಾಕ್

    -ಹಣ, ಒಡವೆ ದೋಚಿ ಅಣ್ಣನೊಂದಿಗೆ ಎಸ್ಕೇಪ್

    ಡೆಹ್ರಾಡೂನ್: ಮದುವೆಯ ಮೊದಲ ರಾತ್ರಿಯೇ ನವವಧು ಹಣ, ಚಿನ್ನವನ್ನು ದೋಚಿಕೊಂಡು ತನ್ನ ಸ್ವಂತ ಸಹೋದರನ ಜೊತೆ ಪರಾರಿಯಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

    ಶಹಜಹಾನ್ಪುರ ನಿವಾಸಿ ನವವಧು ವರನ ಮನೆಯಿಂದ ಹಣ, ಒಡವೆಯನ್ನು ದೋಚಿಕೊಂಡು ಅಣ್ಣನೊಂದಿಗೆ ಪರಾರಿಯಾಗಿದ್ದಾಳೆ.

    ಏನಿದು ಪ್ರಕರಣ:
    ಚಂಡೀಗಢದ ಕಲ್ಕಾ ಪ್ರದೇಶದ ನಿವಾಸಿ ವರನ ಸೋದರಿ ಸೋನಿಯಾ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ಪುರದ ಹುಡುಗಿಯ ಬಗ್ಗೆ ತಿಳಿದುಕೊಂಡಿದ್ದಾಳೆ. ಆಕೆ ತನ್ನ ಅಣ್ಣನ ಜೊತೆ ವಾಸವಾಗಿದ್ದಳು. ನಂತರ ಹುಡುಗಿಯನ್ನು ಒಪ್ಪಿಕೊಂಡು ಸೋನಿಯಾ ತಮ್ಮ ಸಹೋದರನ ಜೊತೆ ಮದುವೆ ಮಾಡಿಸಿದ್ದಾಳೆ.

    ವರನ ಕುಟುಂದವರು ನವ ವಧು ಮತ್ತು ವರನಿಗೂ ಹರಿದ್ವಾರದಲ್ಲಿ ಮದುವೆ ಮಾಡಿ ಹೋಟೆಲಿನಲ್ಲಿ ಫಸ್ಟ್ ನೈಟ್ ಏರ್ಪಡಿಸಿದ್ದರು. ಅದರಂತೆಯೇ ಫಸ್ಟ್ ನೈಟ್ ರೂಮಿಗೆ ವಧುವನ್ನು ಕಳುಹಿಸಿ ಸಂಬಂಧಿಕರು ಬೇರೆ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದರು.

    ಮರುದಿನ ವರನಿಗೆ ಎಚ್ಚರವಾದಾಗ ವಧು ಕಾಣಿಸಲಿಲ್ಲ. ಬಳಿಕ ಪಕ್ಕದ ರೂಮಿನಲ್ಲಿರಬೇಕು ಎಂದು ಹೋಗಿ ನೋಡಿದ್ದಾನೆ. ಅಲ್ಲೂ ವಧು ಇರಲಿಲ್ಲ. ನಂತರ ವರನ ಜೊತೆ ಸಂಬಂಧಿಕರು ಸೇರಿಕೊಂಡು ಇಡೀ ಹೋಟೆಲ್ ಹುಡುಕಾಡಿದ್ದಾರೆ. ಆದರೆ ವಧು ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50,000 ಸಾವಿರ ನಗದು ಕೂಡ ಕಾಣೆಯಾಗಿತ್ತು. ಆಗ ಸಂಬಂಧಿಕರಿಗೆ ವಧುವಿನ ಬಗ್ಗೆ ಅನುಮಾನ ಬಂದಿದೆ.

    ವರ, ಆತನ ಸಂಬಂಧಿಕರು ಮಲಗಿಕೊಂಡ ನಂತರ ಹಣ, ಒಡೆಯವನ್ನು ದೋಚಿಕೊಂಡು ವಧು ತನ್ನ ಸೋದರನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದಿದೆ. ತಕ್ಷಣ ವರನ ಸಂಬಂಧಿಕರು ಹರಿದ್ವಾರ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ರುಡ್ಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

  • ಕೇರಳ To ಭಟ್ಕಳ ಡೈರೆಕ್ಟ್ ಲಿಂಕ್- ಚಿನ್ನ ಅಕ್ರಮ ಸಾಗಾಟಗಾರರಿಗೆ ಪೊಲೀಸರು ಬಲೆ ಬೀಸಿದ ಕಥೆ

    ಕೇರಳ To ಭಟ್ಕಳ ಡೈರೆಕ್ಟ್ ಲಿಂಕ್- ಚಿನ್ನ ಅಕ್ರಮ ಸಾಗಾಟಗಾರರಿಗೆ ಪೊಲೀಸರು ಬಲೆ ಬೀಸಿದ ಕಥೆ

    ಉಡುಪಿ: ವಿದೇಶದಿಂದ ಮಂಗಳೂರು ಏರ್ ಪೋರ್ಟಿಗೆ ದಿನಂಪ್ರತಿ ಎಂಬಂತೆ ಚಿನ್ನಾಭರಣ ಅಕ್ರಮ ಆಮದಾಗುತ್ತಿದೆ. ಕಸ್ಟಮ್ಸ್ ಅಧಿಕಾರಿಗಳು ಹಲವಾರು ಪ್ರಕರಣ ಬಯಲಿಗೆ ಎಳೆಯುತ್ತಿದ್ದಾರೆ. ಅಲ್ಲಿಂದ ಕೇರಳ ಮೂಲಕ ದೇಶದೆಲ್ಲೆಡೆ ಚಿನ್ನದ ಹಂಚಿಕೆಯಾಗುತ್ತದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

    ಉಡುಪಿ ಜಿಲ್ಲೆ ಬೈಂದೂರು-ಉತ್ತರ ಕನ್ನಡದ ಭಟ್ಕಳ ಭಾಗದಲ್ಲಿ ಪೊಲೀಸರು ನಡೆಸಿದ ದಾಳಿಯಿಂದ ಇದು ಗೊತ್ತಾಗಿದೆ. ಕೇರಳದ ಎರ್ನಾಕುಲಂನಿಂದ ಭಟ್ಕಳಕ್ಕೆ ಚಿನ್ನ ಸಾಗಿಸುವ ಮೂವರು ಸಿಕ್ಕಿಬಿದ್ದಿದ್ದು ಅವರ ವಿಚಾರಣೆಯಿಂದ ಚಿನ್ನಾಭರಣ ಅಕ್ರಮ ಸಾಗಾಟ ಮತ್ತು ಮಾರಾಟದ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.

    ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಅವರ ಮಾರ್ಗದರ್ಶನದಲ್ಲಿ ಮಂಗಳವಾರ ರಾತ್ರಿ ಕುಂದಾಪುರ ಹಾಗೂ ಭಟ್ಕಳ ಉಪವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ರೈಲಿನಲ್ಲಿ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದರು. ಭಟ್ಕಳ ಮೂಲದ ಮೊಹಮ್ಮದ್ ಇಸ್ಮಾಯಿಲ್, ರಾಹೀಫ್, ಸಯ್ಯದ್ ಉಮ್ಮರ್ ಬಂಧಿತರು. ಬಂಧಿತರಿಂದ ಒಟ್ಟು 61.47 ಲಕ್ಷ ರೂ. ಬೆಲೆಯ 1.633 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಕುಂದಾಪುರ ಹಾಗೂ ಭಟ್ಕಳ ಎಎಸ್‍ಪಿಗಳ ತಂಡ ಈ ಭರ್ಜರಿ ಕಾರ್ಯಾಚರಣೆ ನಡೆಸಿತ್ತು.

    ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ, ದಾಖಲೆಗಳಿಲ್ಲದೆ ಎರ್ನಾಕುಲಂನಿಂದ ಭಟ್ಕಳಕ್ಕೆ ಚಿನ್ನ ಸಾಗಿಸುತ್ತಿರುವುದನ್ನು ಹಾಗೂ ಇದರ ಹಿಂದೆ ಬೇರೆ ಬೇರೆ ಲಿಂಕ್ ಗಳು ಇರುವುದನ್ನು ಬಂಧಿತರು ಒಪ್ಪಿಕೊಂಡಿದ್ದಾರೆ. ಜಾಲದಲ್ಲಿ ಮತ್ತಷ್ಟು ಮಂದಿ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆಪರೇಷನ್ ನಡೆದದ್ದು ಹೇಗೆ?
    ಕುಂದಾಪುರ ಎಎಸ್‍ಪಿ ಹರಿರಾಮ್ ಶಂಕರ್ ಗೆ ಚಿನ್ನ ಸಾಗಾಟದ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ, ಕಾರ್ಯೋನ್ಮುಖರಾಗಿದ್ದಾರೆ. ಕುಂದಾಪುರ, ಬೈಂದೂರು, ಭಟ್ಕಳ ರೈಲು ನಿಲ್ದಾಣಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಉಡುಪಿ ಕುಂದಾಪುರ ಉದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಿದ್ದರು. ಬೈಂದೂರು ರೈಲು ನಿಲ್ದಾಣದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಭಟ್ಕಳ ಎಂಬಾತನಿಂದ 253 ಗ್ರಾಂ ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ಮೊದಲು ವಶಪಡಿಸಿಕೊಳ್ಳಲಾಯ್ತು.

    ತಂಡದ ಸದಸ್ಯರು ಬೇರೆ ಬೇರೆ ಕಡೆ ಚದುರಿದ್ದರು. ಭಟ್ಕಳದಲ್ಲಿ ರಾಹೀಫ್ ಎಂಬಾತನಿಂದ 1.166 ಕೆಜಿ ಚಿನ್ನಾಭರಣ ಮತ್ತು ಸಯ್ಯದ್ ಉಮ್ಮರ್ ಎಂಬಾತನಿಂದ 213 ಗ್ರಾಂ ತೂಕದ ಚಿನ್ನ ವಶಪಡಿಸಿಕೊಳ್ಳಲಾಯಿತು. ಮೂವರನ್ನು ಕುಂದಾಪುರಕ್ಕೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಜಾಲದ ಬಗ್ಗೆ ಪೊಲೀಸರಿಗೆ ಇನ್ನಷ್ಟು ಮಾಹಿತಿ ಸಿಕ್ಕಿದೆ.

    ಭಟ್ಕಳ ಎಎಸ್‍ಪಿ ನಿಖಿಲ್, ಕುಂದಾಪುರ ಎಎಸ್‍ಪಿ ಹರಿರಾಮ್ ಶಂಕರ್, ಬೈಂದೂರು ಸಿಪಿಐ ಸುರೇಶ್ ನಾಯಕ್, ಉಡುಪಿ ಸಿಪಿಐ ಮಂಜುನಾಥ, ಕುಂದಾಪುರ ಎಸ್‍ಐ ಹರೀಶ್ ಆರ್.ನಾಯ್ಕ್, ಭಟ್ಕಳ, ಕುಮಟಾ ಪಿಸ್‍ಐಗಳು, ಪ್ರೊಬೇಶನರಿ ಪಿಎಸ್‍ಐ ಸುದರ್ಶನ್, ಕುಂದಾಪುರ ಎಎಸ್‍ಪಿ ತಂಡದ ಮೋಹನ್, ಸಂತೋಷ್ ಕೊರವಡಿ, ಸಂತೋಷ್ ಹೊನ್ನಾಳ, ಮಂಜುನಾಥ, ಕೃಷ್ಣ, ಪ್ರಿನ್ಸ್, ಚಂದ್ರಶೇಖರ, ವಿಜಯ ಕುಮಾರ್, ಸಲೀಂವುಲ್ಲಾ ಕಾರ್ಯಾಚರಣೆ ನಡೆಸಿದ್ದರು. ಪೊಲೀಸರ ಈ ತಂಡಕ್ಕೆ ಉಡುಪಿ ಎಸ್ ಪಿಯಿಂದ ಶ್ಲಾಘನೆ ವ್ಯಕ್ತವಾಗಿದೆ.

  • ಸ್ಮಗ್ಲಿಂಗ್ ಅಡ್ಡಗಳ ಮೇಲೆ ದಾಳಿ- 16.5 ಕೋಟಿ ರೂ. ಮೌಲ್ಯದ ಚಿನ್ನ ವಶ

    ಸ್ಮಗ್ಲಿಂಗ್ ಅಡ್ಡಗಳ ಮೇಲೆ ದಾಳಿ- 16.5 ಕೋಟಿ ರೂ. ಮೌಲ್ಯದ ಚಿನ್ನ ವಶ

    ಕೋಲ್ಕತ್ತಾ: ಚಿನ್ನವನ್ನು ಸಾಗಿಸುತ್ತಿದ್ದ ಅಡ್ಡಗಳ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ದಾಳಿ ನಡೆಸಿ, 16.5 ಕೋಟಿ ರೂ. ಮೌಲ್ಯದ 42 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು 42 ಕೆಜಿ ಚಿನ್ನದಲ್ಲಿ 500 ಗ್ರಾಂ ಆಭರಣ ಚಿನ್ನವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದೂರು ಬಂದ ಹಿನ್ನೆಲೆ ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿರುವ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಚಿನ್ನವನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

    ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಕೋಲ್ಕತ್ತಾದಲ್ಲಿ ಮಾತ್ರವಲ್ಲದೆ ರಾಯಪುರ, ಮುಂಬೈನಲ್ಲಿಯೂ ಸಹ ಸ್ಮಗ್ಲಿಂಗ್ ಮಾಡಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಈ ಎರಡು ನಗರಗಳಿಂದ ಮೂವರನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಆರ್‍ಐ ಅಧಿಕಾರಿಗಳು ಸ್ಮಗ್ಲಿಂಗ್ ಮಾಡುತ್ತಿದ್ದ 219 ಕೆಜಿಗೂ ಅಧಿಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

  • ಮದುವೆಗೆ ಹೋಗಿದ್ದವರ ಮನೆಗೆ ಕನ್ನ- 2.85 ಲಕ್ಷ ರೂ., 220 ಗ್ರಾಂ ಚಿನ್ನಾಭರಣ ಕಳವು

    ಮದುವೆಗೆ ಹೋಗಿದ್ದವರ ಮನೆಗೆ ಕನ್ನ- 2.85 ಲಕ್ಷ ರೂ., 220 ಗ್ರಾಂ ಚಿನ್ನಾಭರಣ ಕಳವು

    – ಕಳ್ಳರ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

    ರಾಯಚೂರು: ನಗರದ ಅಸ್ಕಿಹಾಳ ಬಳಿ ಕೃಷ್ಣಾ ಮೆಡೋಸ್ ಬಡಾವಣೆಯ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಕಳ್ಳರು ಕೈ ಚಳಕ ತೋರಿಸಿದ್ದಾರೆ.

    ವೆಂಕಟೇಶ್ವರರಾವ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, 2.85 ಲಕ್ಷ ರೂಪಾಯಿ ನಗದು ಹಾಗೂ 220 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಕಳ್ಳರು ಕೈ ಚಳಕ ತೋರಿದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವೆಂಕಟೇಶ್ವರರಾವ್ ಅವರು ಕುಟುಂಬ ಸಮೇತ ಭಾನುವಾರ ರಾತ್ರಿ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದರು. ಈ ವೇಳೆ ಇಬ್ಬರು ಕಳ್ಳರು ಕಾಂಪೌಂಡ್ ಹಾರಿ ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಬಾಗಿಲು ಮುರಿದು ಒಳಗೆ ಹೋಗಿ, ಬೆಡ್ ರೂಮ್‍ನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.

    ವೆಂಕಟೇಶ್ವರರಾವ್ ಅವರ ಪಕ್ಕದ ಮನೆಯವರು ಹೊರಗೆ ಬಂದು ನೋಡಿದಾಗ ಮನೆ ಬಾಗಿಲು ತೆರೆದಿದ್ದನ್ನು ನೋಡಿದ್ದಾರೆ. ಹೀಗಾಗಿ ವೆಂಕಟೇಶ್ವರರಾವ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮದುವೆ ಮನೆಯಿಂದ ಬಂದ ವೆಂಕಟೇಶ್ವರರಾವ್ ನೋಡಿದಾಗ 2.85 ಲಕ್ಷ ರೂಪಾಯಿ ನಗದು ಹಾಗೂ 220 ಗ್ರಾಂ ಚಿನ್ನಾಭರಣವನ್ನು ದೋಚಿರುವುದು ಖಚಿತವಾಗಿದೆ.

    ಈ ಕುರಿತು ವೆಂಕಟೇಶ್ವರರಾವ್ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಸಿಸಿಟಿವಿ ಕ್ಯಾಮೆರಾ ಫೂಟೇಜ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕಳ್ಳರು ಬಡಾವಣೆಯ ಖಾಲಿ ಮನೆಯಲ್ಲೂ ಕಳ್ಳತನಕ್ಕೆ ವಿಫಲಯತ್ನ ನಡೆದಿಸಿದ್ದರು. ಈ ಸಂಬಂಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಸೆರೆಗೆ ಬಲೆ ಬೀಸಿದ್ದಾರೆ.

  • ಡಕ್ಟ್ ಒಳಗಿಂದಲೂ ಕಳ್ಳರು ಫ್ಲ್ಯಾಟ್‍ಗೆ ನುಗ್ಗುತ್ತಾರೆ ಹುಷಾರ್

    ಡಕ್ಟ್ ಒಳಗಿಂದಲೂ ಕಳ್ಳರು ಫ್ಲ್ಯಾಟ್‍ಗೆ ನುಗ್ಗುತ್ತಾರೆ ಹುಷಾರ್

    ಮಂಗಳೂರು: ಕಳ್ಳರು ತಮ್ಮ ಕೈಚಳಕ ತೋರಿಸಲು ನಾನಾ ರೀತಿಯ ಹೊಸ ಹೊಸ ಉಪಾಯಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲೂ ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಬುದ್ಧಿವಂತ ಕಳ್ಳರೂ ಇದ್ದಾರೆ ಎನ್ನುವುದು ಇದೀಗ ದೊಡ್ಡ ಪ್ರಮಾಣ ದರೋಡೆಯೊಂದಿಗೆ ಬೆಳಕಿಗೆ ಬಂದಿದೆ.

    ಪ್ರತ್ಯೇಕ ಜಾಗದಲ್ಲಿ ಮನೆಗಳಿದ್ದರೆ ಕಳ್ಳಕಾಕರ ಭಯ ಎಂದು ನಗರ ಪ್ರದೇಶದ ಜನ ಅಪಾರ್ಟ್ ಮೆಂಟ್‍ಗಳ ಮೊರೆ ಹೋಗುತ್ತಾರೆ. ಆದರೆ ಜನ ಚಾಪೆ ಕೆಳಗೆ ನುಗ್ಗಿದ್ದರೆ ಕಳ್ಳರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿನಂತೆ ಕಳ್ಳರು ಫ್ಲ್ಯಾಟ್‍ ಒಳಗೂ ಆರಾಮವಾಗಿ ನುಗ್ಗಿ ದರೋಡೆ ಮಾಡುತ್ತಾರೆ ಎನ್ನುವುದಕ್ಕೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ದರೋಡೆ ಪ್ರಕರಣವೇ ಸಾಕ್ಷಿ. ಹೌದು ಅತ್ಯಂತ ಸೆಕ್ಯುರಿಟಿ ಇರುವ ಫ್ಲ್ಯಾಟ್‍ ಒಂದರ ಆರನೇ ಮಹಡಿಗೆ ಯಾರಿಗೂ ಗೊತ್ತಾಗದಂತೆ ನುಗ್ಗಿದ ದರೋಡೆ ಕೋರರ ತಂಡ ಬರೋಬ್ಬರಿ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಹಿತ ನಗದನ್ನು ದೋಚಿದ್ದಾರೆ.

    ಮಂಗಳೂರು ನಗರದ ಬಲ್ಮಠ -ಬೆಂದೂರ್ ವೆಲ್ ರಸ್ತೆಯಲ್ಲಿರುವ ಅಭಿಮಾನ್ ಟೆಕ್ಸಸ್ ಅಪಾರ್ಟ್ ಮೆಂಟ್‍ನ ಆರನೇ ಮಹಡಿಯಲ್ಲಿರುವ ಫ್ಲ್ಯಾಟ್‍ ನಂಬರ್ 604ನಲ್ಲಿ ಅನಿತಾ ಎನ್ ಶೆಟ್ಟಿ ಎಂಬವರು ವಾಸವಾಗಿದ್ದರು. ಕಳೆದ ಸೆಪ್ಟೆಂಬರ್ 8ರಿಂದ 13ರವರೆಗೆ ಅವರು ಫ್ಲ್ಯಾಟ್‍ ನಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಫ್ಲ್ಯಾಟ್‍ಗೆ ಭದ್ರವಾದ ಬೀಗ ಹಾಕಿದ್ದು ಮಾತ್ರವಲ್ಲ ಅಪಾರ್ಟ್ ​ಮೆಂಟ್‌ನಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮೆರಾ, ಸೆಕ್ಯುರಿಟಿಗಳು ಇದ್ದರು. ಆದರೆ ಸೆಪ್ಟೆಂಬರ್ 14ರಂದು ಬಂದು ನೋಡಿದಾಗ ಮನೆ ಕಪಾಟುಗಳು ಚೆಲ್ಲಾಪಿಲ್ಲಿಯಾಗಿದ್ದು ಅದರಲ್ಲಿದ್ದ 35 ಲಕ್ಷ ರೂಪಾಯಿ ಬೆಳೆಬಾಳುವ ಡೈಮಂಡ್ ನೆಕ್ಲೇಸ್, ಡೈಮಂಡ್ ಉಂಗುರ, ಚಿನ್ನದ ನೆಕ್ಲೇಸ್, ಚಿನ್ನದ ಬ್ರಾಸ್‍ಲೈಟ್, ಚಿನ್ನದ ಬಳೆಗಳು, ಚಿನ್ನದ ವಾಚ್, ಚಿನ್ನದ ನಾಣ್ಯಗಳು ಹಾಗೂ 65 ಸಾವಿರ ರೂ. ನಗದು ಕಳವಾಗಿತ್ತು.

    ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಕಮೀಷನರ್ ಡಾ.ಪಿ.ಎಸ್ ಹರ್ಷ ಒಂದು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ಬಳಿಕ ಇಂದು ಪ್ರಕರಣವನ್ನು ಭೇದಿಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ 7 ಜನ ಆರೋಪಿಗಳನ್ನು ಹಾಗೂ 34 ಲಕ್ಷ ರೂಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

    ದರೋಡೆಯ ಹೊಸ ಪ್ಲ್ಯಾನ್:
    ದರೋಡೆಗೈದ ಫ್ಲ್ಯಾಟ್ ಆರನೇ ಮಹಡಿಯಲ್ಲಿದ್ದರೂ ಆರೋಪಿಗಳು ಬಹಳಷ್ಟು ಪ್ಲ್ಯಾನ್ ಮಾಡಿ ಒಳ ನುಗ್ಗಿದ್ದಾರೆ. ಆರೋಪಿಗಳ ಪೈಕಿ ಶಾಹೀರ್ ಮೊಹಮ್ಮದ್ ಎಂಬಾತ ಇದೇ ಫ್ಲ್ಯಾಟ್‍ನ 18ನೇ ಮಹಡಿಯಲ್ಲಿ ವಾಸವಾಗಿದ್ದ. ದರೋಡೆ ನಡೆದ ಫ್ಲ್ಯಾಟ್‍ನಲ್ಲಿ ಯಾರೂ ಇಲ್ಲದ ಬಗ್ಗೆ ಮಾಹಿತಿ ಇದ್ದ ಆರೋಪಿಗಳು ಶಾಹೀರ್ ಮೊಹಮ್ಮದ್‍ನ ಫ್ಲ್ಯಾಟ್‍ಗೆ ಬಂದು ಪ್ಲ್ಯಾನ್ ಮಾಡಿದ್ದಾರೆ. ಬಳಿಕ ಆತನ ಫ್ಲ್ಯಾಟ್‍ನ ಡಕ್ಟ್ ಒಳಗೆ ಇಬ್ಬರು ಆರೋಪಿಗಳು ನುಗ್ಗಿದ್ದಾರೆ. ಡಕ್ಟ್ ಮೂಲಕವೇ ನಿಧಾನವಾಗಿ ಆರನೇ ಮಹಡಿಯವರೆಗೂ ಬಂದು ಫ್ಲ್ಯಾಟ್‍ನ ಮಾಸ್ಟರ್ ಬೆಡ್ ರೂಂನ ಶೌಚಾಲಯಕ್ಕೆ ನುಗ್ಗಿದ್ದಾರೆ. ಅಲ್ಲಿಂದ ಬೆಡ್ ರೂಂನಲ್ಲಿದ್ದ ಲಾಕರ್ ಅನ್ನು ಆಯುಧಗಳಿಂದ ಮುರಿದು ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ.

    ಆರೋಪಿಗಳ ಪೈಕಿ ಮಂಗಳೂರಿನ ಕದ್ರಿ ಶಿವಭಾಗ ನಿಬಾಸಿ ರಾಕೇಶ್ ಡಿಸೋಜಾ ಪ್ರಮುಖ ಆರೋಪಿ. ಫ್ಲ್ಯಾಟ್‍ನ ನಿವಾಸಿ ಶಾಹೀರ್ ಮೊಹಮ್ಮದ್ ಪ್ಲ್ಯಾನ್‍ನಂತೆಯೇ ದರೋಡೆ ನಡೆದಿದೆ. ಈ ಪ್ರಕರಣದಲ್ಲಿ ಗೋವಾ ಮೂಲದ ಅಶೋಕ್ ಬಂಡ್ರಗಾರ್, ಗಣೇಶ್ ಬಾಪು ಪರಾಬ್ ಭಾಗಿಯಾಗಿದ್ದರು. ದರೋಡೆ ನಡೆಸಿದ ಚಿನ್ನಾಭರಣವನ್ನು ಕರಗಿಸಿ ಮಾರಾಟ ಮಾಡಲು ಯತ್ನಿಸಿದ್ದ ಮಂಗಳೂರಿನ ಸೋಮೇಶ್ವರದ ಜನಾರ್ದನ ಆಚಾರ್ಯ, ಕೋಟೆಕಾರ್ ಬೀರಿ ನಿವಾಸಿ ಪುರುಷೋತ್ತಮ ಆಚಾರ್ಯ, ಮಂಗಳಾದೇವಿ ನಿವಾಸಿ ಚಂದನ್ ಆಚಾರ್ಯ ಇದೀಗ ಬಂಧನಕ್ಕೊಳಗಾಗಿ ಕಂಬಿ ಎಣಿಸುತ್ತಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಡಿಸೋಜಾ 2018ರ ಎಪ್ರಿಲ್ 24ರಂದು ಗುಜರಾತ್‍ನ ಅಂಕ್ಲೇಶ್ವರ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ್ದ. ಈ ವೇಳೆ ಮನೆಯಲ್ಲಿದ್ದ ಓರ್ವನನ್ನು ಕಟ್ಟಿಹಾಕಿ ಮೂರೂವರೆ ಕೋಟಿ ರೂಪಾಯಿ ನಗದನ್ನು ದೋಚಿಕೊಂಡು ಬಂದು ಗೋವಾದ ಲಾಡ್ಜೊಂದರಲ್ಲಿ ಉಳಿದುಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಗುಜರಾತ್ ಪೊಲೀಸರು ಹಣದೊಂದಿಗೆ ಆರೋಪಿಯನ್ನು ಬಂಧಿಸಿದ್ದರು. ಅಲ್ಲಿಂದ ಬಿಡುಗಡೆಗೊಂಡ ರಾಜೇಶ್ ಈ ದರೋಡೆಯನ್ನು ನಡೆಸಿದ್ದ.

    2017ರಲ್ಲಿ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದ ರಾಜೇಶ್, ಜೈಲು ವಾಸ ಮುಗಿಸಿ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಆರೋಪಿಗಳು ಯಾವುದೇ ಪ್ಲ್ಯಾನ್‍ಗಳನ್ನು ಮಾಡಿ ದರೋಡೆಗೈದರೂ ಪೊಲೀಸರ ಕೈಗೆ ಸಿಕ್ಕೇ ಸಿಗುತ್ತಾರೆ ಎನ್ನುವುದು ಈ ಪ್ರಕರಣದಿಂದ ಸಾಬೀತಾಗಿದೆ.

  • ರಾಜಕಾರಣಿಗಳಿಂದ `ಚಿನ್ನ’ದಂತಾ ಮೋಸ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು `ಗೋಲ್ಡ್’ ಸೀಕ್ರೆಟ್

    ರಾಜಕಾರಣಿಗಳಿಂದ `ಚಿನ್ನ’ದಂತಾ ಮೋಸ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲಾಯ್ತು `ಗೋಲ್ಡ್’ ಸೀಕ್ರೆಟ್

    ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಅಭ್ಯರ್ಥಿಗಳಂತೂ ಗೆಲ್ಲಲೇಬೆಕೆಂದು ಹರಸಾಹಸ ಪಡುತ್ತಿದ್ದಾರೆ. ಕೆಲವೊಂದು ಕಡೆ ಹಣ, ಬಂಗಾರ ನೀಡುವ ಆಮಿಷಗಳೂ ನಡೀತಾ ಇದೆ ಅನ್ನೋ ಮಾತುಗಳೂ ಕೇಳಿಬಂದಿವೆ. ಆದರೆ ರಾಜಕಾರಣಿಗಳು ಕೊಡುವ ಚಿನ್ನವನ್ನು ನಂಬಿ ವೋಟ್ ಹಾಕಿದರೆ ನೀವು ಮೋಸ ಹೋಗುವುದು ಪಕ್ಕಾ ಎಂಬುದು ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

    ಹೌದು. ಸಾಮಾನ್ಯವಾಗಿ ಚುನಾವಣೆಯ ಸಮಯದಲ್ಲಿ ವೋಟಿಗಾಗಿ ಮಹಿಳೆಯರಿಗೆ ಬಂಗಾರದ ಮೂಗುತಿ, ಕಿವಿಯೋಲೆಯನ್ನು ಹಂಚುವ ಕಳ್ಳ ಕೆಲಸಗಳು ನಡೆಯುತ್ತವೆ. ಹೀಗೆ “ಏನೋ ಬಂಗಾರ ಕೊಟ್ರು ಬುಡು ಅತ್ಲಾಗೆ, ಒಂದು ವೋಟು ಕೊಟ್ಟೆಬುಡುವಾ” ಎಂದು ಮಹಿಳೆಯರು ಮತ ಮಾರಿಕೊಂಡರೆ ನೀವು ಕೆಟ್ರಿ ಅಂತಾನೇ ಅರ್ಥ. ಯಾಕಂದರೆ ಮಹಿಳೆಯರನ್ನು ಯಾಮಾರಿಸೋಕೆ ಚಿನ್ನದಂತೆ ಕಾಣುವ ಅಗ್ಗದ ರೇಟಿನ ಕಾಗೆ ಬಂಗಾರವನ್ನು ಹಂಚಲಾಗುತ್ತಿದೆ. ಶೇ.65 ರಷ್ಟು ತಾಮ್ರ ಮಿಕ್ಸ್, ಚಿನ್ನದ ಲೇಪನವಿರುವ ನಕಲಿ ಚಿನ್ನವನ್ನು ರಾಜಕೀಯ ನಾಯಕರು ಕೈಗಿಡುತ್ತಿದ್ದಾರೆ. ಚುನಾವಣೆ ವೇಳೆ ಹಂಚೋಕೆ ಅಂತಾನೇ ಮೂಗುತಿ ಬೇಕೆಂದು ಗೋಲ್ಡ್ ಶಾಪ್‍ನಲ್ಲಿ ವಿಚಾರಿಸಿದ್ದೇ ತಡ, ನಕಲಿ ಬಂಗಾರದ ಅಸಲಿ ಸೀಕ್ರೆಟ್ ಹೊರಬಂದಿದೆ.

    ಪ್ರತಿನಿಧಿ: ಎಲೆಕ್ಷನ್‍ಗೆ ಹಂಚೋಕೆ ಮೂಗುತಿ ಬೇಕು.
    ಶಾಪ್ ಮಾಲೀಕ: ಹಾ ಕೊಡೋಣ..
    ಪ್ರತಿನಿಧಿ: ಇದೆಲ್ಲ ಪ್ಯೂರ್ ಬಂಗಾರನಾ..?
    ಶಾಪ್ ಮಾಲೀಕ: ಇದೆಲ್ಲ ಬಂದು 35 ಪರ್ಸೆಂಟ್ ಅಷ್ಟೇ.. ಮಿಕ್ಕಿದೆಲ್ಲ ಕಾಪರ್..! ನಾನು ಮುಂಚೆ ರಾಜಕೀಯ ನಾಯಕರಿಗೆ ತುಂಬಾ ಮಾಡಿಸಿದ್ದೀನಿ..
    ಪ್ರತಿನಿಧಿ: ಬಜೆಟ್ ಎಷ್ಟು ಅಂತ ಹೇಳಿ..?
    ಶಾಪ್ ಮಾಲೀಕ: ಇನ್ನೊಂದು ಝೀರೋ ಪರ್ಸೆಂಟ್ ಬರುತ್ತೆ ಗೋಲ್ಡ್ ಪ್ಲೇಟಿಂಗ್, ಬಟ್ ನಾವು ಮಾಡಲ್ಲ
    ಪ್ರತಿನಿಧಿ: ಇದ್ರ ಪ್ರೈಸ್ ಎಷ್ಟು..?
    ಶಾಪ್ ಮಾಲೀಕ: ಅಲ್ಲ, ಮಾಡಲ್ಲ, ಬಟ್ ಟೋಟಲ್ 30 ರೂಪಾಯಿ ಕಡಿಮೆಯಾಗುತ್ತೆ
    ಪ್ರತಿನಿಧಿ: ಈಗ ಇದಕ್ಕೆ ಎಷ್ಟು ಅಡ್ವಾನ್ಸ್ ಕೊಡಬೇಕು..?
    ಶಾಪ್ ಮಾಲೀಕ: ಶೇ 80 ಕೊಡಬೇಕು.. ಒಂದು ಲಕ್ಷದ ನಲವತ್ತು ಸಾವಿರ ಆಗಬಹುದು, ಒಂದು ಲಕ್ಷ ಕೊಟ್ರೂ ಮಾಡಿಕೊಡ್ತೀನಿ ಬಟ್ ಹದಿನೈದು ದಿನ ಟೈಂ ಕೊಟ್ರೆ ಚೆನ್ನಾಗಿ ಮಾಡಿಕೊಡ್ತೀವಿ, ಯಾವತ್ತಿಗೆ ಬೇಕು ನಿಮ್ಗೆ..?

    ಪ್ರತಿನಿಧಿ: 5 ರೊಳಗೆ ಕೊಡಬೇಕು..
    ಶಾಪ್ ಮಾಲೀಕ: ಹಾಗಿದ್ರೆ ಜಲ್ದಿ ಹೇಳಿ. ಇಲ್ ನೋಡಿ ಇದು ವಯಸ್ಸಾದವರಿಗೆ, ಫೋರ್ ಸ್ಟೋನ್‍ದು ಬರುತ್ತೆ. ಒಂದು ಸಾವಿರದ ಇನ್ನೂರು ರೂಪಾಯಿ..
    ಪ್ರತಿನಿಧಿ: ಇದ್ರಲ್ಲಿ ಎಷ್ಟು ಚಿನ್ನ ಇರುತ್ತೆ..?
    ಶಾಪ್ ಮಾಲೀಕ: ಇದ್ರಲ್ಲೂ ಮೂವತ್ತೈದು ಪರ್ಸೆಂಟ್..! ಇದು ನಾವೇ ತಯಾರಿ ಮಾಡೋದು. ನಮ್ದೇ ಫ್ಯಾಕ್ಟರಿ ಇದೆ. ಅದಕ್ಕೆ ಆ ರೇಟ್‍ಗೆ ಸಿಗುತ್ತೆ. ಪ್ಲೇಟಿಂಗ್‍ದು ನಾನ್ ಹೇಳಿದ್ದೀನಿ ಓಪನ್ ಆಗಿಯೇ. ಇದು ಸೆನ್ಸಿಟಿವ್ ಮ್ಯಾಟರ್ ಹುಷಾರ್ ಆಗಿರಬೇಕು.

    ಹೀಗೆ ಬಿಳಿ ಬಟ್ಟೆಯ ರಾಜಕೀಯ ನಾಯಕರು ಸುಳ್ಳು ಭರವಸೆ ಹೇಳಿ ಅಂಗೈಯಲ್ಲಿ ಅರಮನೆ ತೋರಿಸೋದು ಮಾತ್ರವಲ್ಲ, ಡೂಪ್ಲಿಕೇಟ್ ಬಂಗಾರ ಕೊಟ್ಟು ಮಹಿಳೆಯರಿಗೆ ಟೋಪಿ ಹಾಕ್ತಿದ್ದಾರೆ.

    ಪಬ್ಲಿಕ್ ಟಿವಿ ತಂಡ ಮತ್ತೊಂದು ಶಾಪ್ ಗೆ ಹೋಗಿ ಮಾತನಾಡಿಸಿದಾಗ, ಅಲ್ಲಿ ಎಲೆಕ್ಷನ್ ಚಿನ್ನದ ಖರೀದಿಗೆ ಬಿಲ್ ಕೊಡೋದಿಲ್ವಂತೆ. ಟ್ಯಾಕ್ಸ್ ಗೀಕ್ಸ್ ಏನೂ ಬೇಕಾಗಿಲ್ಲ. ವಿತ್ ಬಿಲ್, ವಿತೌಟ್ ಬಿಲ್ ಯಾವುದು ಬೇಕು ಹೇಳಿ ಅಂತ ಬೇರೆ ಬಂಗಾರದ ಅಂಗಡಿ ಮಾಲೀಕರು ಆಫರ್ ಕೊಡುತ್ತಾರೆ. ಒಟ್ಟಿನಲ್ಲಿ ಚುನಾವಣಾ ಅಖಾಡದಲ್ಲಿ ಮತದಾರರ ಓಲೈಕೆಗಾಗಿ ಮಾಡುವ ಖತರ್ನಾಕ್ ಐಡಿಯಾಗಳನ್ನು ರಾಜಕರಾಣಿಗಳು ಉಪಯೋಗಿಸಿಕೊಳ್ಳುತ್ತಾರೆ.