Tag: gold

  • 15 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಹತ್ಯೆ – ತಾಯಿ, ಮಗಳು, ಅಪ್ರಾಪ್ತ ಪುತ್ರ ಅರೆಸ್ಟ್!

    15 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಹತ್ಯೆ – ತಾಯಿ, ಮಗಳು, ಅಪ್ರಾಪ್ತ ಪುತ್ರ ಅರೆಸ್ಟ್!

    ಬೆಳಗಾವಿ: ನಗರದ (Belagavi) ಅಪಾರ್ಟ್‍ಮೆಂಟ್ ಒಂದರಲ್ಲಿ ಮಹಿಳೆಯನ್ನು ಹತ್ಯೆಗೈದಿದ್ದ ತಾಯಿ, ಮಗಳು ಹಾಗೂ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರು ಆರೋಪಿಗಳಾದ ಜ್ಯೋತಿ ಬಾಂದೇಕರ್, ಸುಹಾನಿ ಬಾಂದೇಕರ್ ಹಾಗೂ ಕೊಲೆಗೆ ಸಾಥ್ ಕೊಟ್ಟ ಆರೋಪಿಯ ಅಪ್ರಾಪ್ತ ಪುತ್ರನನ್ನು ಬಂಧಿಸಿದ್ದಾರೆ. ಗಣೇಶಪುರದ ಅಪಾರ್ಟ್‍ಮೆಂಟ್‌ನಲ್ಲಿ ಏ.22 ರಂದು ಅಂಜನಾ ದಡ್ಡೀಕರ್‌ನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅಲ್ಲದೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿಗಳು ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ

    ಕೊಲೆಯಾದ ಅಂಜನಾ 15 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿದ್ದರು. ಈ ವೇಳೆ ತಲೆಗೆ ಪೆಟ್ಟಾಗಿ, ಅಂಜನಾ ಸಾವನ್ನಪ್ಪಿದ್ದಳು. ಬಳಿಕ ಅನುಮಾನ ಬರದಂತೆ, ಮಕ್ಕಳನ್ನು ಬಚಾವ್ ಮಾಡಲು ಮಹಿಳೆಯ ಚಿನ್ನಾಭರಣ ಕದ್ದಿದ್ದಳು. ಇಷ್ಟೇ ಅಲ್ಲದೇ ಘಟನೆ ನಡೆದ ದಿನ ಊರಲ್ಲಿ ಇರಲಿಲ್ಲ ಎಂಬಂತೆ ಬಿಂಬಿಸಿದ್ದರು.

    ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಧರ್ಮ ಕೇಳಿ ಉಗ್ರರಿಂದ ದಾಳಿ – ಬೇಸತ್ತು ಇಸ್ಲಾಂ ತ್ಯಜಿಸಿದ ಶಿಕ್ಷಕ

  • 1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

    1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ

    ನವದೆಹಲಿ: ಅಮೆರಿಕ-ಚೀನಾ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಲ್ಲೇ 10 ಗ್ರಾಂ ಚಿನ್ನದ ಬೆಲೆ (Gold Rate) 1 ಲಕ್ಷ ರೂ. ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.

    ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 1 ಗ್ರಾಂಗೆ 10,135 ರೂ. ತಲುಪಿದ್ದು, 10 ಗ್ರಾಂಗೆ 1,01,135 ರೂ.ಗೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಬೇಲೂರು ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸಿದ ಸೂರ್ಯನ ರಶ್ಮಿ

    22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 9,290 ರೂ.ಗೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 92,900 ರೂ. ತಲುಪಿದೆ. ಇದನ್ನೂ ಓದಿ:  Mandya | 39 ವರ್ಷ ಬಳಿಕ ನಡೆಯುತ್ತಿರುವ ಹಬ್ಬದಲ್ಲಿ ಸಿಎಂ ಭಾಗಿ

    ಇತರೆ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ವಿಧಿಸಿದ್ದೇ ಚಿನ್ನದ ಬೆಲೆ ದಾಖಲೆಯ ಏರಿಕೆಗೆ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಹೀಗಾಗಿ, ಸುರಕ್ಷಿತ ಹೂಡಿಕೆಗಾಗಿ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ. ಇದನ್ನೂ ಓದಿ: ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?

    ಅಕ್ಷಯ ತೃತೀಯಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಚಿನ್ನದ ಬೆಲೆ ಒಂದು ಲಕ್ಷ ದಾಟಿರುವುದು ಆಭರಣ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ಹಣೆಯಲ್ಲಿ ರಕ್ತ ಸೋರಿದ್ದು ಹೇಗೆ?

  • ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಲವು ರಾಷ್ಟ್ರಗಳ ಮೇಲೆ ಪ್ರತಿಸುಂಕ ವಿಧಿಸಿದ ಬಳಿಕ ವ್ಯಾಪಾರ, ವಾಣಿಜ್ಯ ವಲಯದಲ್ಲಿ ಏರಿಳಿತ ಶುರುವಾಗಿದೆ. ಷೇರು ಮಾರುಕಟ್ಟೆಯಲ್ಲೂ ಕೂಡ ಹಾವು-ಏಣಿ ಆಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳು ಯುಎಸ್ ಟ್ರೆಷರಿ ಬಿಲ್‌ಗಳ (‘ಟಿ-ಬಿಲ್’ ಯುಎಸ್ ಸರ್ಕಾರದ ಖಜಾನೆ ಇಲಾಖೆಯಿಂದ ಬೆಂಬಲಿತವಾದ ಅಲ್ಪಾವಧಿಯ ಯುಎಸ್ ಸರ್ಕಾರದ ಸಾಲದ ಬಾಧ್ಯತೆಯಾಗಿದೆ) ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಸಹ ಚಿನ್ನದ ಬೆಲೆ ಮಾತ್ರ ಗಗನಕ್ಕೆ ಏರುತ್ತಲೇ ಇದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎಂಬುದು ಜನರ ಭಾವನೆಯಾಗಿದ್ದು, ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡಿದ್ದಾರೆ. ಈ ಕಲ್ಪನೆ ನಿಜವೇ? ಪ್ರಸ್ತುತ ಆರ್ಥಿಕ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನ ತನ್ನ ಮೌಲ್ಯ ಕಾಪಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಹೌದು.. ಎಂಬುದೇ ಉತ್ತರ.

    ಟ್ರಂಪ್ ಪ್ರತಿಸುಂಕ (Tariff) ವಿಧಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಚಾಟಿ ಬೀಸಿದ್ದರಿಂದ ಚಿನ್ನವು (Gold Price Hike) ಎಂದಿಗಿಂತಲೂ ಉತ್ತಮವಾಗಿದೆ ಎಂಬುದನ್ನು ಅದರ ಬೆಲೆಯೇ ಸೂಚಿಸುತ್ತಿದೆ. ಇದೇ ಮಾರ್ಚ್ 15ರ ಹೊತ್ತಿಗೆ ಮೊದಲ ಬಾರಿಗೆ ಚಿನ್ನವು ‘ಔನ್ಸ್’ಗೆ (28.34 ಗ್ರಾಂ) ಅಂದಾಜು 2,56,161 ರೂ. (3,000 ಡಾಲರ್) ಆಗಿದೆ. ಸ್ಥಳೀಯವಾಗಿ ಗಮನಿಸಿದರೆ, ಚಿನ್ನದ ಬೆಲೆಯು 10 ಗ್ರಾಂಗೆ 95,000 ರೂ.ಗೆ ಏರಿಕೆ ಕಂಡಿದೆ. ಹಳದಿ ಲೋಹದ ಹೊಳಪಿನ ಓಟವು, ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಸಂಗ್ರಹಣೆ, ಹಣದುಬ್ಬರದ ಕಾಳಜಿ ಮತ್ತು ಸಾಂಕ್ರಾಮಿಕ ನಂತರ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಮುಂದುವರಿದಿದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಏನಿದು ಯುಎಸ್ ಟ್ರೆಷರಿ ಬಾಂಡ್?
    ಜಗತ್ತಿನ ದೈತ್ಯ ಅಮೆರಿಕದ ಆರ್ಥಿಕತೆ ನಿಂತಿರುವುದೇ ಟ್ರೆಷರಿ ಬಾಂಡ್ ಮೇಲೆ. ಯುಎಸ್ ಸರ್ಕಾರಕ್ಕೆ ಪ್ರತಿ ವರ್ಷ ಸಾಕಷ್ಟು ಹಣ ಬೇಕು, ಸಂಬಳ ನೀಡಬೇಕು, ಸೈನ್ಯಕ್ಕೆ ಹಣ ಬೇಕು, ರಸ್ತೆ-ಆಸ್ಪತ್ರೆ ಇತರೆ ಮೂಲಸೌಕರ್ಯಗಳಿಗೂ ಸಾಲ ಮಾಡಿ ಹಣ ತರುತ್ತದೆ. ಈ ಸಾಲವನ್ನು ಟ್ರೆಷರಿ ಬಾಂಡ್‌ನಿಂದ ಅಮೆರಿಕ ಸರ್ಕಾರಕ್ಕೆ ಬರುತ್ತದೆ. ಅಮೆರಿಕ ಸರ್ಕಾರ, ಅಲ್ಪಾವಧಿ-ಮಧ್ಯಮ-ಧೀರ್ಘಾವಧಿ ಎಂದು ಮೂರು ವಿಧದಲ್ಲಿ ಬಾಂಡ್ ಬಿಡುಗಡೆ ಮಾಡುತ್ತದೆ. ಈ ಬಾಂಡನ್ನು ಸಾಮಾನ್ಯ ಜನರು, ಕಂಪನಿಗಳು ಮತ್ತು ಯಾವುದೇ ದೇಶವು ಖರೀದಿಸಲು ಅವಕಾಶ ಇದೆ. ಅಮೆರಿಕದ ಸಾಲದಲ್ಲಿ ಶೇ.30 ವಿದೇಶಿ ಹೂಡಿಕೆಗಳಿಗೆ ಮಾತ್ರ ಅವಕಾಶ ಇದೆ. ಜಗತ್ತಿನಲ್ಲಿ ವ್ಯಾಪಾರ, ವಹಿವಾಟನ್ನು ಡಾಲರ್ ಮುಖಾಂತರವೇ ನಡೆಸಲಾಗುವುದು. ಹೀಗಾಗಿ, ಬಾಂಡ್ ಮೂಲಕ ಮೀಸಲು ನಿಧಿ ಖರೀದಿಸಲು ಇತರೆ ದೇಶಗಳು ಮುಂದಾಗುತ್ತವೆ. ಯಾವ ದೇಶ ಹೆಚ್ಚು ಮೀಸಲು ನಿಧಿ ಹೊಂದಿರುತ್ತೋ ಅದು ಆರ್ಥಿಕವಾಗಿ ಸುಭದ್ರವಾಗಿರುತ್ತದೆ.

    ಟ್ಯಾರಿಫ್ ಅವ್ಯವಸ್ಥೆ ನಡುವೆ ಚಿನ್ನದ ಏರಿಕೆ
    ಎಸ್&ಪಿ 500 (ಸ್ಟಾಕ್ ಮಾರುಕಟ್ಟೆ ಸೂಚ್ಯಂಕ) ಈ ತಿಂಗಳ ಆರಂಭದಲ್ಲಿ 10.5% ಕುಸಿದಾಗ, ಮಾರುಕಟ್ಟೆ ಮೌಲ್ಯ ಕೂಡ 6.6 ಮಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿತು. ಇದರ ಎಫೆಕ್ಟ್‌ನಿಂದಾಗಿ ಅಮೆರಿಕ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿರುವವರು, ಅದನ್ನು ಹಿಂತೆಗೆದುಕೊಳ್ಳಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಕಡೆ ಮುಖ ಮಾಡಿದ್ದಾರೆ. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಚಿನ್ನದ ಬೆಲೆಯಲ್ಲಾಗಲಿ ಅಥವಾ ಅದರ ಮೇಲಿನ ಹೂಡಿಕೆಗೆ ಎಫೆಕ್ಟ್ ಆಗಲಿ ಆಗಿಲ್ಲ. ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ತಾತ್ಕಾಲಿಕ ಬ್ರೇಕ್‌ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ

    ‘ಚಿನ್ನ ಯಾವತ್ತೂ ಸುರಕ್ಷಿತ ಧಾಮ ಇದ್ದಂತೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಅದು ದುರ್ಬಲಗೊಂಡಿಲ್ಲ. ಆರ್ಥಿಕ ದಿವಾಳಿ ಆರಂಭದಲ್ಲಿ ಚಿನ್ನದ ಬೆಲೆ ಕುಸಿತ ಕಂಡರೂ, ನಂತರದ ದಿನಗಳಲ್ಲಿ ಅದರ ಬೆಲೆ ಏರಿಕೆಯನ್ನು ನಾವು ನೋಡುತ್ತೇವೆ. ಚಿನ್ನದ ಬೇಡಿಕೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ’ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಸರಕುಗಳ ವಿಶ್ಲೇಷಕ ಲೀನಾ ಥಾಮಸ್ ವಿಶ್ಲೇಷಿಸಿದ್ದಾರೆ. 2020ರ ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಕುಸಿತ ಕಂಡಾಗ, ಚಿನ್ನವೂ ಶೇ.5ರಷ್ಟು ಕುಸಿದಿತ್ತು. ಅಷ್ಟೇ ತ್ವರಿತವಾಗಿ ಏರಿಕೆ ಕಂಡಿತು ಎಂದು ಥಾಮಸ್ ತಿಳಿಸಿದ್ದಾರೆ.

    ‘ಸುರಕ್ಷಿತ ಧಾಮ’ ಚಿನ್ನ
    ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ಸುರಕ್ಷಿತ ಧಾಮ ಎಂಬ ಭಾವನೆ ದೀರ್ಘಕಾಲದ್ದಾಗಿದೆ. ಯುಎಸ್, ಭಾರತ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನ ಜನಪ್ರಿಯ ಲೋಹವಾಗಿದೆ. ಮಾನವ ಇತಿಹಾಸದಲ್ಲಿ ಇದುವರೆಗೆ ಸುಮಾರು 2 ಲಕ್ಷ ಟನ್‌ಗಳಷ್ಟು ಚಿನ್ನವನ್ನು ಗಣಿಗಾರಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮೇಲಿನ ಆಕರ್ಷಣೆಯೂ ಹೆಚ್ಚಾಗಿದೆ. ಹಿಂದೆ 28 ಗ್ರಾಂ ಚಿನ್ನದ ಬೆಲೆಯು ಅಂದಾಜು 85,387 ರೂ.ನಿಂದ 1,70,774 ಡಾಲರ್‌ಗೆ ಏರಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿತ್ತು. ಬಳಿಕ ಅಂದಾಜು 2,56,161 ರೂ. ಗಡಿದಾಟಲು ಕೇವಲ 5 ವರ್ಷಗಳನ್ನಷ್ಟೇ ತೆಗೆದುಕೊಂಡಿದೆ. ಇದು ಮೂರು ವರ್ಷದ ಅವಧಿಯಲ್ಲಿ 3,41,549 ರೂ.ಗೆ ಏರಬಹುದು ಎಂದು ಅಂದಾಜು 3,41,549 ರೂ.ಗೆ ಹೆಚ್ಚಬಹುದು ಎನ್ನಲಾಗಿದೆ. ಇದನ್ನೂ ಓದಿ: ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ಗೋಲ್ಡ್ಮನ್ ಸ್ಯಾಚ್ಸ್ ತನ್ನ 2025 ರ ಅಂತ್ಯದ ಚಿನ್ನದ ಬೆಲೆ ಮುನ್ಸೂಚನೆಯನ್ನು $3,300 ರಿಂದ $3,700ಗೆ, $3,650-$3,950 ರ ಯೋಜಿತ ಶ್ರೇಣಿಯೊಂದಿಗೆ ಹೆಚ್ಚಿಸಿತು. ‘ಕಳೆದ ನಾಲ್ಕು ವರ್ಷಗಳಲ್ಲಿ ಚಿನ್ನವು ವಾರ್ಷಿಕವಾಗಿ 24-25 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯ ನಂತರ, ಚಿನ್ನ ಮತ್ತಷ್ಟು ವಿಜೃಂಭಿಸುತ್ತಿದೆ. ಜಾಗತಿಕವಾಗಿ ಸೂಕ್ಷ್ಮ ಮತ್ತು ಸ್ಥೂಲ ರಂಗಗಳಲ್ಲಿ ಸುಂಕದ ಮೇಲಿನ ಅನಿಶ್ಚಿತತೆಯಿಂದಾಗಿ, ಚಿನ್ನವು ತುಂಬಾ ಪ್ರಬಲವಾಗಿ ಕಾಣುತ್ತದೆ. ಅನಿಶ್ಚಿತತೆ ಇದ್ದಾಗಲೆಲ್ಲಾ ಚಿನ್ನವು ಸುರಕ್ಷಿತ ಧಾಮ ಆಸ್ತಿ ಎಂದೇ ಪರಿಗಣಿತವಾಗಿದೆ’ ಎಂದು ಮೋತಿಲಾಲ್ ಒಸ್ವಾಲ್ ಫಿನಾಲ್ಸಿಯಲ್ ಸರ್ವಿಸಸ್‌ನ ರಿಸರ್ಚ್ ಕಮಾಡಿಟಿಸ್‌ನ ಮುಖ್ಯಸ್ಥ ನವನೀತ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ.

    ಚಿನ್ನದತ್ತ ಕೇಂದ್ರೀಯ ಬ್ಯಾಂಕ್‌ಗಳ ಚಿತ್ತ
    ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಮೀಸಲುಗಳಲ್ಲಿ ಅಮೆರಿಕ ಡಾಲರ್‌ಗಳ ಪಾಲನ್ನು (ಯುಎಸ್ ಮೀಸಲು ನಿಧಿ) ಕಡಿಮೆ ಮಾಡಲು ಮುಂದಾಗಿವೆ. ಬದಲಾಗಿ ಚಿನ್ನವನ್ನು ಖರೀದಿಸುತ್ತಿವೆ. ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಟ್ರಂಪ್ ಪ್ರತಿಸುಂಕ ವಿಧಿಸಿದಾಗಿನಿಂದ ಮಾರುಕಟ್ಟೆ ವಲಯದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ. ಹೀಗಾಗಿ, ಜಾಗತಿಕ ಹೂಡಿಕೆದಾರರು, ಯುಎಸ್ ಟ್ರೆಷರಿ ಬಿಲ್ ನಮಗೆ ಸಮಸ್ಯೆ ತಂದೊಡ್ಡದ ಆಸ್ತಿಯಾಗಿ ಅರ್ಹತೆ ಪಡೆದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೂಡಿಕೆದಾರರು ಚಿನ್ನದ ಕಡೆಗೆ ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಈಗ ಚಿನ್ನದ ಬೆಲೆ ಎಷ್ಟಿದೆ?
    ದಿನ ಕಳೆದಂತೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂಗೆ 8,945 ರೂ. ಇದೆ. 24 ಕ್ಯಾರೆಟ್ 1 ಗ್ರಾಂ ಬೆಲೆ 9,758 ಕ್ಕೆ ಏರಿಕೆ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಈಗಿನ ದರ 89,450 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 97,580 ರೂ.ಗೆ ಏರಿದೆ.

  • 3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು

    3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು

    ಕೋಲಾರ: ಮೂರುವರೆ ಕೋಟಿ ರೂ. ಮೌಲ್ಯದ 3.5 ಕೆಜಿ ಚಿನ್ನಾಭರಣ (Gold) ದೋಚಿದ್ದ ಪ್ರಕರಣದಲ್ಲಿ ಮತ್ತೆ ಐವರನ್ನು ಕೆಜಿಎಫ್‌ ಪೊಲೀಸರು (KGF Police) ಬಂಧಿಸಿದ್ದಾರೆ.

    ಬಂಧಿತರನ್ನು ತಮಿಳುನಾಡು (Tamil Nadu) ಮೂಲದ ಪಿ.ವೇದಾವಲಂ, ಕುಮಾರನ್, ರಂಜಿತ್, ಶಂಕರ್, ದೇಬೇಶ್ ಚಕ್ರವರ್ತಿ ಮತ್ತು ವೇಲು ಎಂದು ಗುರುತಿಸಲಾಗಿದೆ. ಇನ್ನೂ ಮೂರ್ನಾಲ್ಕು ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 

    ಪ್ರಕರಣದ 8ನೇ ಆರೋಪಿ ಅಪ್ಪು ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ತಮಿಳುನಾಡಿನ ಕಂಬಟ್ಟು ಬಳಿ ಮರಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡದಿ ಪಟ್ಟಣದಲ್ಲಿ ಜೆಸಿಬಿಗಳ ಘರ್ಜನೆ – ಅಧಿಕಾರಿಗಳಿಂದ ಫುಟ್‌ಪಾತ್ ಒತ್ತುವರಿ ತೆರವು

    ಏ.2 ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ ಕೋಟ ನಾಕಿನೇರಿ ಘಾಟ್ ಬಳಿ ಚೆನ್ನೈನಿಂದ ಕೆಜಿಎಫ್‍ಗೆ ತರುತ್ತಿದ್ದ ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಈ ಸಂಬಂಧ ಕೆಜಿಎಫ್‍ನ ಚಿನ್ನದಂಗಡಿಯೊಂದರ ಮಾಲೀಕ ದೀಪಕ್ ಜೈನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

    ಪ್ರಕರಣ ಸಂಬಂಧ ಈಗಾಗಲೇ ಕೆಜಿಎಫ್ ಮೂಲದ ನಾಲ್ಕು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದನ್ನೂ ಓದಿ: ರಾಜೇಂದ್ರ ಕೊಲೆ ಸುಪಾರಿ ಕೇಸ್ – 9 ದಿನ ಕಳೆದರೂ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸದ ಪೊಲೀಸರು

  • ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!

    ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!

    ಬೆಂಗಳೂರು: ಡೊನಾಲ್ಡ್ ಟ್ರಂಪ್ (Donald Trump) ಪ್ರತಿಸುಂಕದ ಪ್ರಭಾವ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಮಧ್ಯೆ ಚಿನ್ನದ ದರ (Gold Rate) ಇಳಿಕೆಯಾಗಿದ್ದು, ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ಶರವೇಗದಲ್ಲಿ ಚಿನ್ನದ ದರ ಏರಿಕೆ ಕಂಡಿತ್ತು. ಜನ ಸಾಮಾನ್ಯರು ಚಿನ್ನ ಮುಟ್ಟಿದ್ರೇ ಶಾಕ್ ಎಂಬ ಪರಿಸ್ಥಿತಿ ಉದ್ಭವವಾಗಿತ್ತು. ಆದರೀಗ ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ಇಳಿಕೆ ಕಂಡಿದೆ. ಇದನ್ನೂ ಓದಿ: ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ಸಂಪನ್ನ

    ಎಷ್ಟು ದರ ಇಳಿಕೆ?
    *ಚಿನ್ನದ ದರ ಕಳೆದ 3 ದಿನದಿಂದ ಇಳಿಯುತ್ತಿದೆ
    *22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 8,285 ರೂಪಾಯಿ ಆಗಿದೆ.
    *24 ಕ್ಯಾರೆಟ್ ಚಿನ್ನದ ದರ 9,038 ರೂಪಾಯಿ ಆಗಿದೆ.
    *22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂ. ಕಡಿಮೆ ಆಗಿದೆ.

    ಟ್ರಂಪ್ ಸುಂಕ ನೀತಿಯಿಂದ ಚಿನ್ನದ ದರ ದಿಢೀರ್ ಇಳಿಕೆ ಕಂಡಿದೆ. ಮುಂದಿನ ದಿನದಲ್ಲಿ ಪ್ರತಿ ಗ್ರಾಂಗೆ 7,500 ರೂ. ಆಗಬಹುದು ಎನ್ನುವ ಲೆಕ್ಕಾಚಾರ ವನ್ನು ತಜ್ಞರು ಮಾಡುತ್ತಿದ್ದಾರೆ. ಒಂದು ಲಕ್ಷದ ಗಡಿಗೆ ತಲುಪಿದ್ದ ಚಿನ್ನದ ದರ ಇಳಿಕೆ ಈಗ ಜನರಿಗೆ ಕೊಂಚ ರಿಲೀಫ್ ಮೂಡಿಸಿದೆ. ಇದನ್ನೂ ಓದಿ: ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

  • ಹೆಡ್ ಕಾನ್‍ಸ್ಟೇಬಲ್ ಮನೆಗೆ ಕನ್ನ – 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    ಹೆಡ್ ಕಾನ್‍ಸ್ಟೇಬಲ್ ಮನೆಗೆ ಕನ್ನ – 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

    ದಾವಣಗೆರೆ: ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ಮನೆಯ ಬೀಗ ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ (Gold) ದೋಚಿದ ಘಟನೆ ಹರಿಹರ (Harihara) ಪಟ್ಟಣದ ವಿದ್ಯಾನಗರದಲ್ಲಿ ನಡೆದಿದೆ.

    ಹೆಡ್ ಕಾನ್‍ಸ್ಟೇಬಲ್ ಜಯನಾಯ್ಕ್ ಎಂಬವರ ಮನೆಯ ಬೀಗ ಒಡೆದು, ಕಳ್ಳರು 4.80 ಲಕ್ಷ ರೂ. ಮೌಲ್ಯದ ಬಂಗಾರದ ಅಭರಣ, 5 ಸಾವಿರ ರೂ. ನಗದು ಹಣವನ್ನು ಕಳ್ಳರು ಕದ್ದೋಯ್ದಿದ್ದಾರೆ. ರಜೆ ಇದ್ದಿದ್ದರಿಂದ ಕುಟುಂಭಸ್ಥರು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಈ ದರೋಡೆ ನಡೆದಿದೆ. ಇಂದು (ಏ.5) ಬೆಳಗ್ಗೆ ಮನೆಗ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

    ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

  • ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

    ಏರಿಕೆಯಾಗುತ್ತಿದ್ದ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

    ನವದೆಹಲಿ: ಕೆಲ ದಿನಗಳಿಂದ ಭಾರೀ ಏರಿಕೆ ಕಾಣುತ್ತಿದ್ದ ಚಿನ್ನದ (Gold) ಮತ್ತು ಬೆಳ್ಳಿಯ ದರ ಈಗ ದಿಢೀರ್‌ ಇಳಿಕೆಯಾಗಿದೆ.

    ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1,740 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಕಡಿಮೆಯಾಗಿದೆ.  ಶುಕ್ರವಾರ ಬೆಂಗಳೂರಿನಲ್ಲಿ  10 ಗ್ರಾಂ 24 ಕ್ಯಾರೆಟ್ ಚಿನ್ನದ (10 ಗ್ರಾಂ) ಬೆಲೆ 91,640 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 84,000 ರೂ.ಗೆ ಇಳಿಕೆಯಾಗಿದೆ.

    ಗುರುವಾರ 10 ಗ್ರಾಂ 24 ಕ್ಯಾರೆಟ್ ಬೆಲೆ 93,380 ರೂ. ಆಗಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 85,600 ರೂ. ಆಗಿತ್ತು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ

    ಪ್ರತಿ ಕೆಜಿ ಬೆಳ್ಳಿಯ (Silver) ಬೆಲೆ 4,000 ರೂ.ಗಳಷ್ಟು ಕಡಿಮೆಯಾಗಿದ್ದು 1 ಕೆಜಿ ಬೆಳ್ಳಿಗೆ 99,900 ರೂ. ದರವಿದೆ.

    ದರ ಇಳಿಕೆ ಯಾಕೆ?
    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತೆರಿಗೆ ಸಮರ (Tax War) ಆರಂಭಿಸಿದ ಬಳಿಕ ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಹೀಗಾಗಿ ಈ ನಷ್ಟವನ್ನು ಸರಿದೂಗಿಸಲು ಚಿನ್ನದ ಮೇಲೆ ಹೂಡಿಕೆ ಮಾಡಿರುವ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ʼರಾಜ್ಯʼದಲ್ಲೂ ಗೆದ್ದ ಮೋದಿ ಸರ್ಕಾರ – ವಕ್ಫ್ ಬಿಲ್ ಜಾರಿಗೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ

    ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳಲ್ಲಿನ ಏರಿಳಿತಗಳು ಪ್ರಾಥಮಿಕವಾಗಿ ಭಾರತದಲ್ಲಿ ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ. ಈ ಅಂಶಗಳು ಒಟ್ಟಾಗಿ ದೇಶಾದ್ಯಂತ ದೈನಂದಿನ ಚಿನ್ನದ ದರಗಳನ್ನು ನಿರ್ಧರಿಸುತ್ತವೆ.

     

  • ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!

    ಗ್ರಾಹಕರ ಸೋಗಿನಲ್ಲಿ ಬಂದು 1.13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬುರ್ಖಾಧಾರಿ ಮಹಿಳೆಯರು!

    ದಾವಣಗೆರೆ: ನ್ಯಾಮತಿ ಬ್ಯಾಂಕ್ ದರೋಡೆ ಕೇಸ್ ಪತ್ತೆ ಹಚ್ಚಿದ್ದ ದಾವಣಗೆರೆ (Davanagere) ಪೊಲೀಸರಿಗೆ ಅಂತಹದ್ದೇ ಮತ್ತೊಂದು ಪ್ರಕರಣ ಎದುರಾಗಿದೆ. ನಗರದ ಮಂಡಿ ಪೇಟೆಯಲ್ಲಿರುವ ಚಿನ್ನದಂಗಡಿಯಲ್ಲಿ ಕಳ್ಳಿಯರು ಕೈಚಳಕ ತೋರಿಸಿದ್ದು, ಸುಮಾರು 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು (Gold) ಕದ್ದು ಪರಾರಿಯಾಗಿದ್ದಾರೆ.

    ಬುರ್ಖಾ ಧರಿಸಿ ಬಂದಿದ್ದ ಐವರು ಕಳ್ಳಿಯರು ಅಂಗಡಿಗೆ ಬೆಳ್ಳಿ ಲೋಟ ಖರೀದಿಸುವ ನೆಪದಲ್ಲಿ ಬಂದಿದ್ದರು. ಈ ವೇಳೆ, ಅಂಗಡಿಯ ಕೆಲಸದವರ ಗಮನ ಬೇರೆಡೆ ಸೆಳೆದು, 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳಿದ್ದ ಬಾಕ್ಸ್‌ನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!

    ಬಾಕ್ಸ್‌ನಲ್ಲಿ ಕಿವಿ ಓಲೆ, ಜುಮುಕಿ ಹಾಗೂ ಬೆಲೆಬಾಳುವ ಆಭರಣಗಳಿದ್ದವು. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳಿಯರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ದಾವಣಗೆರೆ| ಬ್ಯಾಂಕ್ ದರೋಡೆಗೆ ಬಂದಿದ್ದ ಯುಪಿ ಗ್ಯಾಂಗ್ ಮೇಲೆ ಪೊಲೀಸರಿಂದ ಫೈರಿಂಗ್ – ನಾಲ್ವರು ಅರೆಸ್ಟ್

  • ರಿಕವರಿ ಮಾಡಿದ್ದ 950 ಗ್ರಾಂ ಚಿನ್ನ ದುರ್ಬಳಕೆ ಆರೋಪ – ಪಿಎಸ್‌ಐ ಸಸ್ಪೆಂಡ್

    ರಿಕವರಿ ಮಾಡಿದ್ದ 950 ಗ್ರಾಂ ಚಿನ್ನ ದುರ್ಬಳಕೆ ಆರೋಪ – ಪಿಎಸ್‌ಐ ಸಸ್ಪೆಂಡ್

    ಬೆಂಗಳೂರು: 950 ಗ್ರಾಂ. ಚಿನ್ನ ವಂಚನೆ ಮತ್ತು ದುರ್ಬಳಕೆ ಆರೋಪದಡಿ ಕಾಟನ್ ಪೇಟೆ ಠಾಣೆಯ ಪಿಎಸ್‌ಐ (PSI) ಸಂತೋಷ್‌ನನ್ನು ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ದಯಾನಂದ (Commissioner Dayanand) ಆದೇಶ ಹೊರಡಿಸಿದ್ದಾರೆ.

    2020ರಲ್ಲಿ ಸಂತೋಷ್ ಹಲಸೂರು ಗೇಟ್ (Halasuru Gate) ಠಾಣೆಯ ಪಿಎಸ್‌ಐ ಆಗಿದ್ದರು. ಆ ಸಮಯದಲ್ಲಿ ಕೇಸ್‌ವೊಂದರ ರಿಕವರಿ ಚಿನ್ನವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಚಿನ್ನದ ಅಂಗಡಿ ಮಾಲೀಕನ ಬಳಿ ಹೋಗಿ ರಿಕವರಿ ಚಿನ್ನ ತೋರಿಸಬೇಕಿದೆ, ಹೀಗಾಗಿ 950 ಗ್ರಾಂ. ಚಿನ್ನದ ಗಟ್ಟಿ ಕೊಡು, ಫೋಟೊ ತೆಗೆಸಿ ವಾಪಸ್ ತಂದುಕೊಡುತ್ತೇನೆ ಎಂದು ಹೇಳಿದ್ದ.ಇದನ್ನೂ ಓದಿ: ವಾಹನ ತಪಾಸಣೆ ಮಾಡ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ – ಆರೋಪಿ ಅರೆಸ್ಟ್

    ಸಂತೋಷ್ ಮಾತನ್ನು ನಂಬಿ ಚಿನ್ನದ ಅಂಗಡಿ ಮಾಲೀಕ 950 ಗ್ರಾಂ. ಚಿನ್ನದ ಗಟ್ಟಿಯನ್ನು ನೀಡಿದ್ದರು. ಬಳಿಕ ಮಾಲೀಕ ಚಿನ್ನ ವಾಪಸ್ ಕೇಳಿದಾಗ ಸಂತೋಷ್ ಹಣ ನೀಡುತ್ತೇನೆಂದು ಹೇಳಿ ಭದ್ರತೆಗೆ ಸೈಟ್ ಕರಾರು ಮಾಡಿಕೊಟ್ಟಿದ್ದ. ಆದರೆ ಆ ಸೈಟ್‌ನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಮಾಲೀಕ ಮತ್ತೆ ಪ್ರಶ್ನಿಸಿದಾಗ ಖಾಲಿ ಚೆಕ್ ನೀಡಿದ್ದ, ಅದು ಕೂಡ ಬೌನ್ಸ್ ಆಗಿತ್ತು. ಅದಾದ ಬಳಿಕವೂ ಮಾಲೀಕ ಹಣ ಮತ್ತು ಚಿನ್ನ ಕೇಳಿದಾಗ ಸಂತೋಷ್ ಆತನಿಗೆ ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಮಾಲೀಕ ಪಶ್ಚಿಮ ವಿಭಾಗ ಡಿಸಿಪಿಗೆ ದೂರು ನೀಡಿದ್ದರು.

    ದೂರಿನ ಬಗ್ಗೆ ಎಸಿಪಿ ನೇತೃತ್ವದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಪ್ರಾಥಮಿಕ ವರದಿ ಆಧಾರದ ಮೇಲೆ ಪಿಎಸ್‌ಐ ಕ್ರಮಕ್ಕೆ ಸೂಚಿಸಿದ್ದು, ಅಧಿಕಾರ ದುರುಪಯೋಗ, ವಂಚನೆ ಕೇಸ್ ಅಡಿಯಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಸದ್ಯ ಎಫ್‌ಐಆರ್ (FIR) ದಾಖಲಾದ ಹಿನ್ನೆಲೆ ಪಿಎಸ್‌ಐ ಸಂತೋಷ್ ಅಮಾನತು ಮಾಡಿ, ಪೊಲೀಸ್ ಕಮಿಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ.ಇದನ್ನೂ ಓದಿ: ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ‘ಮಾಣಿಕ್ಯ’ ನಟಿ ವರಲಕ್ಷ್ಮೀ ಕಣ್ಣೀರು

  • ವಿದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು? ಭಾರತದ ಕಸ್ಟಮ್ಸ್ ನಿಯಮಗಳೇನು?

    ವಿದೇಶಕ್ಕೆ ಪ್ರಯಾಣಿಸುವಾಗ ವಿಮಾನದಲ್ಲಿ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು? ಭಾರತದ ಕಸ್ಟಮ್ಸ್ ನಿಯಮಗಳೇನು?

    ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಇಂತಿಷ್ಟು ಮೌಲ್ಯದ ಹಣ, ಚಿನ್ನ ಕೊಂಡೊಯ್ಯಬೇಕು ಎನ್ನುವ ನಿಯಮವಿರುತ್ತದೆ. ಆದರೆ ಇತ್ತೀಚಿಗಷ್ಟೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್‌ ಚಿನ್ನದ ಕಳ್ಳಸಾಗಣೆ ಕೇಸ್‌ನಲ್ಲಿ ಬಂಧಿಸಲ್ಪಟ್ಟರು. ಈ ಸಮಯದಲ್ಲಿ ಗ್ರೀನ್‌ ಚಾನೆಲ್‌ನಲ್ಲಿ ಬರಲು ಯತ್ನಿಸುತ್ತಿದ್ದ ರನ್ಯಾಳನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿ, ಭಾರೀ ಮೊತ್ತದ ಚಿನ್ನವನ್ನು ವಶಕ್ಕೆ ಪಡೆದರು. ಹಾಗಾದರೆ ವಿಮಾನದಲ್ಲಿ ಪ್ರಯಾಣಿಸುವಾಗ ಎಷ್ಟು ಚಿನ್ನ, ನಗದು ಕೊಂಡೊಯ್ಯಬಹುದು ಹಾಗೂ ಭಾರತದ ಕಸ್ಟಮ್ಸ್ ನಿಯಮಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

    ಭಾರತೀಯ ಕಸ್ಟಮ್ಸ್‌ ಎಂದರೇನು?
    ದೇಶದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ದೇಶಕ್ಕೆ ಸರಕುಗಳ ಆಮದು ಮತ್ತು ರಫ್ತಿಗೆ ವಿಧಿಸುವ ತೆರಿಗೆ ಇದು. ಸರ್ಕಾರವು ಈ ಕಸ್ಟಮ್ಸ್ ಸುಂಕವನ್ನು ತನ್ನ ಆದಾಯವನ್ನು ಹೆಚ್ಚಿಸಲು, ದೇಶೀಯ ಕೈಗಾರಿಕೆಗಳನ್ನು ರಕ್ಷಿಸಲು ಮತ್ತು ಸರಕುಗಳ ಚಲನೆಯನ್ನು ನಿಯಂತ್ರಿಸಲು ಬಳಸುತ್ತದೆ.

    ಸಾಂದರ್ಭಿಕ ಚಿತ್ರ

    ಕಸ್ಟಮ್ಸ್ ಕಾಯ್ದೆ
    ದೇಶದಿಂದ ವಿದೇಶಕ್ಕೆ ಹಾಗೂ ವಿದೇಶದಿಂದ ದೇಶಕ್ಕೆ ಸರಕುಗಳ ಚಲನೆಯನ್ನು ನಿಯಂತ್ರಿಸುವ ನಿರ್ಣಾಯಕ ಕಾನೂನಾಗಿ ಕಾರ್ಯನಿರ್ವಹಿಸುವ ಕಸ್ಟಮ್ಸ್ ಕಾಯ್ದೆ 1962ರಲ್ಲಿ  ಭಾರತದಲ್ಲಿ ಜಾರಿಯಾಯಿತು. 17 ಅಧ್ಯಾಯಗಳಾಗಿ ವಿಂಗಡಿಸಲಾದ ಈ ಕಾಯ್ದೆಯು ಆಮದು ಸುಂಕ, ರಫ್ತು ನಿರ್ಬಂಧ ಮತ್ತು ನಿಯಮ ಉಲ್ಲಂಘನೆಗಳಿಗೆ ದಂಡ ಸೇರಿದಂತೆ ವಿವಿಧ ಕಸ್ಟಮ್ಸ್ ನಿಯಮಗಳನ್ನು ಒಳಗೊಂಡಿದೆ. ಕಾನೂನುಬದ್ಧ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವುದು ಮತ್ತು ಕಳ್ಳಸಾಗಣೆ ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

    ಭಾರತೀಯ ಕಸ್ಟಮ್ಸ್‌ ನಿಯಮಗಳ ಪ್ರಕಾರ, 1967ರ ಪಾಸ್‌ಪೋರ್ಟ್ ಕಾಯ್ದೆಯಡಿಯಲ್ಲಿ, ಭಾರತೀಯ ಪ್ರಯಾಣಿಕರು 1 ಕೆಜಿ ಚಿನ್ನವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ, ನಿರ್ದಿಷ್ಟ ತೆರಿಗೆಯೊಂದಿಗೆ ಪುರುಷರಿಗೆ 20 ಗ್ರಾಂ ಮತ್ತು ಮಹಿಳೆಯರಿಗೆ 40 ಗ್ರಾಂ ಅನುಮತಿಸಲಾಗಿದೆ. ಜೊತೆಗೆ ಮಕ್ಕಳು 20/40 ಗ್ರಾಂ ಚಿನ್ನವನ್ನು ತರಲು ಅವಕಾಶವಿದ್ದು, ಲಿಂಗದ ಆಧಾರದ ಮೇಲೆ ಮೌಲ್ಯದ ಮಿತಿ ರೂ. 50,000ರೂ ದಿಂದ 1,00,000ಕ್ಕೆ ಅನುಮತಿಸಿದೆ. ಭಾರತೀಯ ಪ್ರಯಾಣಿಕರು ಅಥವಾ ಕನಿಷ್ಠ ಆರು ತಿಂಗಳ ಕಾಲ ವಿದೇಶದಲ್ಲಿ ಉಳಿದು ಭಾರತಕ್ಕೆ ಮರಳುವ ಪಾಸ್‌ಪೋರ್ಟ್ ಹೊಂದಿರುವವರು ತಮ್ಮ ಸಾಮಾನುಗಳ ಪೈಕಿ ಚಿನ್ನವನ್ನು ಆಮದು ಮಾಡಿಕೊಳ್ಳಲು ಅನುಮತಿ ಇದೆ.

    ವಿಮಾನ ನಿಲ್ದಾಣದಲ್ಲಿ ಭಾರತೀಯ ಕಸ್ಟಮ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?
    ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಬರಲು ಬರಲು ಕಸ್ಟಮ್ಸ್‌ ಅಧಿಕಾರಿಯಿಂದ ಕ್ಲಿಯರೆನ್ಸ್ ಪಡೆದುಕೊಳ್ಳಲೇಬೇಕು. ಕನ್ವೇಯರ್ ಬೆಲ್ಟ್‌ಗಳಿಂದ ತಮ್ಮ ವಸ್ತುಗಳನ್ನು ಮರಳಿ ಪಡೆದ ನಂತರ ಕಸ್ಟಮ್ಸ್ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಹೌದು, ಇಲ್ಲಿ ಎರಡು ರೀತಿಯ ಕ್ಲಿಯರೆನ್ಸ್ ಚಾನೆಲ್‌ಗಳಿದ್ದು, ಗ್ರೀನ್ ಚಾನೆಲ್ ಮತ್ತು ರೆಡ್ ಚಾನೆಲ್ ಎಂದು ವಿಂಗಡಿಸಲಾಗಿದೆ. ತೆರಿಗೆ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿರದವರಿಗೆ ಗ್ರೀನ್ ಚಾನೆಲ್ ಹಾಗೂ ತೆರಿಗೆ ಹಾಗೂ ನಿಷೇಧಿತ ವಸ್ತುಗಳನ್ನು ಹೊಂದಿರುವವರಿಗೆ ರೆಡ್ ಚಾನೆಲ್‌ನಲ್ಲಿ ಕ್ಲಿಯರೆನ್ಸ್ ನೀಡಲಾಗುತ್ತದೆ. ಪ್ರಯಾಣಿಕರು ಕ್ಲಿಯರೆನ್ಸ್ ಚಾನೆಲ್‌ಗೆ ಹೋಗುವ ಮುಂಚೆ ತಾವು ಯಾವ ಚಾನೆಲ್‌ಗೆ ಹೋಗಬೇಕು ಎಂದು ನಿರ್ಧರಿಸಬೇಕು. ಈ ಮೂಲಕ ತಾವು ಕೊಂಡೊಯ್ಯುತ್ತಿರುವ ಚಿನ್ನ ಅಥವಾ ನಗದು ಮೊತ್ತದ ಪ್ರಮಾಣವನ್ನು ತಿಳಿಸಬೇಕು. ಜೊತೆಗೆ ಚಿನ್ನದ ಖರೀದಿ ಬಿಲ್‌, ಇನ್ನಿತರ ದಾಖಲೆಗಳನ್ನು ಒದಗಿಸಬೇಕು. ಇಲ್ಲದೇ ಹೋದಲ್ಲಿ ಕಸ್ಟಮ್ಸ್ ಕಾಯ್ದೆ 1962ರ ಸೆಕ್ಷನ್ 111ರ ಅಡಿಯಲ್ಲಿ ಚಿನ್ನ ಅಥವಾ ನಗದನ್ನು ವಶಕ್ಕೆ ಪಡೆಯಬಹುದು.

    ಇನ್ನೂ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ATITHI ಮೊಬೈಲ್ ಅಪ್ಲಿಕೇಶನ್ ಬಳಸಿ, ವಿಮಾನದಲ್ಲಿ ಪ್ರಯಾಣಿಸುವ ಮೊದಲು ತೆರಿಗೆ ವಿಧಿಸಬಹುದಾದ ವಸ್ತುಗಳು ಮತ್ತು ಕರೆನ್ಸಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ವಿದೇಶಿ ಕರೆನ್ಸಿ ನೋಟುಗಳ ಮೌಲ್ಯವು US $5,000 ಮೀರಿದರೆ ಅಥವಾ ಕರೆನ್ಸಿ ಸೇರಿದಂತೆ ಒಟ್ಟು ವಿದೇಶಿ ವಿನಿಮಯವು US $10,000 ಮೀರಿದರೆ ಸಂಬಂಧಪಟ್ಟ ದಾಖಲಾತಿಗಳು ಅವಶ್ಯಕ. ಜೊತೆಗೆ ನಿಷೇಧಿತ ಅಥವಾ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಹೊಂದಿದ್ದರೂ ಕೂಡ ಗ್ರೀನ್ ಚಾನೆಲ್ ಬಳಸುವ ಪ್ರಯಾಣಿಕರಿಗೆ ಕಾನೂನು ಕ್ರಮ, ದಂಡ ಅಥವಾ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಬಹುದು.

    ಯಾವುದೇ ವ್ಯಕ್ತಿಗೆ ನಿರ್ದಿಷ್ಟ ಮಿತಿಯಿಲ್ಲದೆ ವಿದೇಶದಿಂದ ಭಾರತಕ್ಕೆ ಚಿನ್ನ ಅಥವಾ ನಗದನ್ನು ತರಲು ಅವಕಾಶವಿದೆ. ಆದರೆ ಈ ಕುರಿತು ಮೊದಲೇ ಮಾಹಿತಿ ನೀಡಬೇಕು. ಕಸ್ಟಮ್ಸ್ ಕಾಯ್ದೆಯ ಪ್ರಕಾರ, ಮಾಹಿತಿ ನೀಡದಿರುವುದು, ತಪ್ಪಾದ ಮಾಹಿತಿ ನೀಡುವುದು ಅಥವಾ ಕಳ್ಳ ಸಾಗಾಟ ಮಾಡುವುದರಿಂದ ವಸ್ತುಗಳನ್ನು ವಶಪಡಿಸಿಕೊಳ್ಳಲು ಅವಕಾಶವಿರುತ್ತದೆ. ಇನ್ನೂ ಗ್ರೀನ್ ಚಾನೆಲ್ ಮೂಲಕ ನಿಷೇಧಿತ ಅಥವಾ ತೆರಿಗೆ ವಿಧಿಸಬಹುದಾದ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದರೇ ಅಥವಾ ರೆಡ್ ಚಾನೆಲ್‌ನಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಸ್ಟಮ್ಸ್‌ ಕಾನೂನು ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ