Tag: gold

  • ಪ್ರಿಯತಮನ ಸಹಾಯದಿಂದ ತಂದೆ ಬಳಿಯಿದ್ದ 19 ಲಕ್ಷ ಮೌಲ್ಯದ ಆಭರಣ ಕದ್ದು ಸಿಕ್ಕಿಬಿದ್ಳು!

    ಪ್ರಿಯತಮನ ಸಹಾಯದಿಂದ ತಂದೆ ಬಳಿಯಿದ್ದ 19 ಲಕ್ಷ ಮೌಲ್ಯದ ಆಭರಣ ಕದ್ದು ಸಿಕ್ಕಿಬಿದ್ಳು!

    – ದೈಹಿಕ ಶಿಕ್ಷಣ ಶಿಕ್ಷಕನಾಗಿರೋ ಗೆಳೆಯ

    ಮುಂಬೈ: ತನ್ನ ಪ್ರಿಯತಮನ ಸಹಾಯದಿಂದ ತಂದೆಯ ಬಳಿಯಿದ್ದ 19 ಲಕ್ಷ ಮೌಲ್ಯದ ಆಭರಣ ಕದ್ದು ಸಿಕ್ಕಿಬಿದ್ದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಮುಂಬೈನ ಓಶಿವಾರಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉಜ್ಮಾ ಖುರೇಷಿ(21) ಹಾಗೂ ಚರಂದೀಪ್ ಸಿಂಗ್ ಅರೋರಾ(35) ಎಂದು ಗುರುತಿಸಲಾಗಿದೆ. ಅರೋರಾ ವರ್ಸೋವಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜುಲೈ 31ರಂದು ಉಜ್ಮಾ ಮನೆಯಿಂದ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಓಶಿವಾರಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಯಿತು. ಆ ಬಳಿಕ ಈಕೆ ಅರೋರಾ ಜೊತೆ ಓಡಿಹೋಗಿದ್ದಾಳೆ ಎಂಬ ಸುದ್ದಿ ಸಿಕ್ಕಿತ್ತು ಎಂದು ತಂದೆ ಉಮ್ರಾಡರಾಜ್ ಖುರೇಶಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

    ಉಮ್ರಾಡರಾಜ್ ಹೋಟೆಲ್ ನಡೆಸುತ್ತಿದ್ದು, 65 ತೊಲ ಚಿನ್ನ ಹಾಗೂ 10 ಲಕ್ಷ ರೂ. ಕಳವಾಗಿರುವುದು ಗಮನಕ್ಕೆ ಬಂದಿದೆ. ಇತ್ತ ಜುಲೈ 23ರಂದು ಮಗಳು ಉಜ್ಮಾ ಲಾಕರ್ ಕೀಯನ್ನು ನೀಡುವಂತೆ ಕೇಳಿಕೊಂಡಿದ್ದು ಇದೇ ವೇಳೆ ಅವರಿಗೆ ನೆನಪಾಗುತ್ತದೆ.

    ಸ್ನೇಹಿತನ ಕುಟುಂಬಕ್ಕೆ ಕೋವಿಡ್ 18 ಬಂದು ಆಸ್ಪತ್ರೆಗೆ ದಾಖಲಾಗಿದ್ದರಿಂದ ತಮ್ಮ ಚಿನ್ನವನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಂಡು ನಂತರ ವಾಪಸ್ ನೀಡುವಂತೆ ಮಗಳಲ್ಲಿ ಹೇಳಿ ಆಸ್ಪತ್ರೆಗೆ ತೆರಳಿದ್ದಾರೆ. ಆದರೆ ಆಸ್ಪತ್ರೆಯಿಂದ ಮನೆಗೆ ಮರಳುವಾಗ ಮಗಳು ಇಲ್ಲ, ಇತ್ತ ಚಿನ್ನವೂ ಇಲ್ಲ. ಇದರಿಂದ ಎಚ್ಚೆತ್ತ ಉಮ್ರಾಡರಾಜ್ ಕೂಡಲೇ ಮಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದಯಾನಂದ್ ತಿಳಿಸಿದ್ದಾರೆ.

    ತಂದೆ ನೀಡಿದ ದೂರಿನಂತೆ ಪೊಲೀಸರು ಮಗಳ ವಿರುದ್ಧ ಐಪಿಸಿ ಸೆಕ್ಷನ್ 378(ಕಳ್ಳತನ), 406 (ವಿಶ್ವಾಸ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ತಾಂತ್ರಿಕ ಸಹಾಯದಿಂದ ಆರೋಪಿಗಳು ಪಂಜಾಬ್‍ನಲ್ಲಿ ಇದ್ದ ಸ್ಥಳದ ಮಾಹಿತಿ ಕಲೆ ಹಾಕಿ, ನಂತರ ನಮ್ಮ ತಂಡವನ್ನು ಕಳುಹಿಸಿದೆವು. ಸೀತಾ ನಿವಾಸದಲ್ಲಿ ಆರೋಪಿಗಳು ಸಿಕ್ಕಿಬಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಆರೋಪಿಗಳ ಕೈಯಿಂದ ಹಣ, ಚಿನ್ನ ಹಾಗೂ ಲಾಕರ್ ಕೀಯನ್ನು ವಶಕ್ಕೆ ಪಡೆದುಕೊಂಡಿದ್ದು, ಅವರನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಒಂದು ಇಂಚಿನ ಚಿನ್ನದ ರಾಮನ ಪ್ರತಿಮೆ ತಯಾರು

    ಒಂದು ಇಂಚಿನ ಚಿನ್ನದ ರಾಮನ ಪ್ರತಿಮೆ ತಯಾರು

    ಚೆನ್ನೈ: ಶತಮಾನಗಳ ಕನಸು ನನಸಾಗುವ ಸಂದರ್ಭದಲ್ಲಿ ಚಿಕಣಿ ಕಲಾವಿದರೊಬ್ಬರು ಚಿನ್ನವನ್ನು ಬಳಸಿ ಭಗವಾನ್ ಶ್ರೀರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಇಂದು ಧನುರ್ಧಾರಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ಹೀಗಾಗಿ ರಾಮನೂರು ಅಯೋಧ್ಯೆ ನವ ವಧುವಿನಂತೆ ಶೃಂಗಾರಗೊಂಡಿದ್ದು, ದೀಪಾವಳಿಯಂತಹ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಚಿಕಣಿ ಕಲಾವಿದ ಮರಿಯಪ್ಪನ್ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ

    ಮರಿಯಪ್ಪನ್ 1.2 ಗ್ರಾಂ ಚಿನ್ನವನ್ನು ಬಳಸಿ ಇಂದು ಇಂಚಿನ ರಾಮನ ಪ್ರತಿಮೆಯನ್ನು ತನ್ನ ಕೈಯಾರೆ ತಯಾರಿಸಿದ್ದಾರೆ. ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಇದರ ನೆನಪಿಗಾಗಿ ಮರಿಯಪ್ಪನ್ ಚಿನ್ನದ ರಾಮನ ಪ್ರತಿಮೆಯನ್ನು ತಯಾರಿಸಿದ್ದಾರೆ.

    https://twitter.com/ANI/status/1290743128681410560

    “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಐತಿಹಾಸಿಕವಾಗಿದೆ. ಈ ಸಂದರ್ಭವನ್ನು ಗುರುತಿಸಲು ನಾನು 1.2 ಗ್ರಾಂ ಚಿನ್ನವನ್ನು ಬಳಸಿ ಭಗವಾನ್ ರಾಮನ ಒಂದು ಇಂಚಿನ ಪ್ರತಿಮೆಯನ್ನು ಮಾಡಿದ್ದೇನೆ. ಇದನ್ನು ರಾಮಮಂದಿರ ಟ್ರಸ್ಟ್‌ಗೆ ಕಳುಹಿಸುತ್ತೇನೆ” ಎಂದು ಮರಿಯಪ್ಪನ್ ಸಂತಸದಿಂದ ಹೇಳಿದ್ದಾರೆ.

  • ಜಯಲಲಿತಾ ನಿವಾಸದಲ್ಲಿದೆ 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ

    ಜಯಲಲಿತಾ ನಿವಾಸದಲ್ಲಿದೆ 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ

    – 11 ಟಿವಿ ಸೆಟ್‌, 10 ಫ್ರಿಡ್ಜ್‌
    – ತಮಿಳುನಾಡು ಸರ್ಕಾರದಿಂದ ಪಟ್ಟಿ

    ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ ಸಿಕ್ಕಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

    ಜಯಲಲಿತಾ ವಾಸವಿದ್ದ ʼವೇದ ನಿಲಯಂʼ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸಲು ತಮಿಳುನಾಡು ಸರ್ಕಾರ ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೇದ ನಿಲಯಂನಲ್ಲಿರುವ ಸ್ಥಿರ ಮತ್ತು ಚರ ಸ್ವತ್ತನ್ನು ತಮಿಳುನಾಡು ಸರ್ಕಾರ ಪುರಚ್ಚಿ ತಲೈವಿ ಡಾ.ಜಯಲಲಿತಾ ಮೆಮೋರಿಯಲ್‌ ಫೌಂಡೇಷನ್‌ಗೆ ಕಳುಹಿಸಿಕೊಡುತ್ತಿದೆ. ಇದನ್ನೂ ಓದಿ: ಎಷ್ಟೇ ವಿರೋಧಿಗಳಾಗಿದ್ರೂ ಜಯಲಲಿತಾ, ಕರುಣಾನಿಧಿ ಒಂದು ಮಾತಿಗೆ ಬದ್ಧರಾಗಿದ್ರು

    ಸರ್ಕಾರ ನಿವಾಸದಲ್ಲಿರುವ ವಸ್ತುಗಳನ್ನು ಪಟ್ಟಿಮಾಡಿದ್ದು, ಪೀಠೋಪಕರಣಗಳು, ಪುಸ್ತಕಗಳು, ಆಭರಣಗಳು ಸೇರಿ ಒಟ್ಟು 32,721 ಚರ ಸ್ವತ್ತುಗಳಿವೆ ಎಂದು ತಿಳಿಸಿದೆ.

    ನಿವಾಸದಲ್ಲಿ ಏನು ಸಿಕ್ಕಿದೆ?
    4.72 ಕೆಜಿ ಚಿನ್ನ( 14 ವಸ್ತುಗಳು), 601. 424 ಕೆಜಿ ಬೆಳ್ಳಿ( 87 ವಸ್ತುಗಳು) 162 ಸಣ್ಣ ಪಾತ್ರೆಗಳು, 11 ಟಿವಿ ಸೆಟ್‌, 10 ಫ್ರಿಡ್ಜ್‌, 556 ಪಿಠೋಪಕರಣ ಸಾಮಾಗ್ರಿಗಳು, 10,438 ವಸ್ತ್ರ ಸಾಮಾಗ್ರಿಗಳು, 6,514 ಅಡಿಗೆ ಪಾತ್ರೆಗಳು, 15 ಪೂಜಾ ಪಾತ್ರೆಗಳು, 10,438 ತುಂಡು ಉಡುಗೆ ವಸ್ತುಗಳು(ಟವೆಲ್/ಬೆಡ್‌ಶೀಟ್‌ಗಳು/ಇತರ ಬಟ್ಟೆ/ ಪರದೆ/ ಪಾದರಕ್ಷೆಗಳು), 29 ದೂರವಾಣಿಗಳು / ಮೊಬೈಲ್ ಫೋನ್‌ಗಳು, 221 ಅಡುಗೆ ಎಲೆಕ್ಟ್ರಿಕ್‌ ವಸ್ತುಗಳು, 251 ಎಲೆಕ್ಟ್ರಿಕ್‌ ವಸ್ತುಗಳು, 8,376 ಪುಸ್ತಕಗಳು, 394 ಮೆಮೆಂಟೋಗಳು, ನ್ಯಾಯಾಲಯದ ದಾಖಲೆಗಳು ಮತ್ತು ಐಟಿ ಹೇಳಿಕೆಗಳು, 253 ಲೇಖನ ಸಾಮಗ್ರಿಗಳು, 65 ಸೂಟ್‌ಕೇಸ್‌ಗಳು, 108 ಸೌಂದರ್ಯವರ್ಧಕ ವಸ್ತುಗಳು, 6 ಗಡಿಯಾರಗಳು, 1 ಕ್ಯಾನನ್ ಫೋಟೋಕಾಪಿಂಗ್ ಯಂತ್ರ, 1 ಲೇಸರ್ ಪ್ರಿಂಟರ್‌ ಮತ್ತು 959 ವಿವಿಧ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನೂ ಓದಿ: ಜಯಲಲಿತಾ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ-ಮದ್ರಾಸ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸರ್ಕಾರ

    ಅಣ್ಣಾಡಿಎಂಕೆ ಪಕ್ಷದ ನಾಯಕಿಯಾಗಿದ್ದ ಜಯಲಲಿತಾ ಅವರು ಮೂರು ಅಂತಸ್ತಿನ ವೇದ ನಿಲಯಂ ನಿವಾಸದಲ್ಲಿ ವಾಸಿಸುತ್ತಿದ್ದರು. 2016ರಲ್ಲಿ ಮೃತಪಟ್ಟ ಬಳಿಕ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದಾಗಿ ತಮಿಳುನಾಡು ಸರ್ಕಾರ ಪ್ರಕಟಿಸಿತ್ತು.

    ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಜುಲೈ 25 ರಂದು ಸ್ಥಳೀಯ ಸಿವಿಲ್‌ ನ್ಯಾಯಾಲಯದಲ್ಲಿ 67.9 ಕೋಟಿ ರೂ. ಹಣವನ್ನು ಠೇವಣಿಯಾಗಿ ಇರಿಸಿತ್ತು. ಇದರಲ್ಲಿ 36.9ಕೋಟಿ ರೂ. ಗಳನ್ನು ಜಯಲಲಿತಾ ಅವರು ಬಾಕಿ ಉಳಿಸಿಕೊಂಡಿದ್ದರು ಎನ್ನಲಾದ ತೆರೆಗೆ ಇಲಾಖೆಗೆ ಪಾವತಿಸಲಾಗಿದೆ.

    ಜಯಲಲಿತಾ ಬಂಗಲೆಯಲ್ಲಿ ಎರಡು ಮಾವಿನ ಮರ, ಒಂದು ಹಲಸಿನ ಮರ, 5 ತೆಂಗಿನ ಮರ, ಬಾಳೆ ಗಿಡಗಳು ಇವೆ ಎಂದು ಸರ್ಕಾರ ತಿಳಿಸಿದೆ.

  • ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ – ಬೆಳ್ಳಿ ದರವೂ ಭಾರೀ ಏರಿಕೆ

    ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ – ಬೆಳ್ಳಿ ದರವೂ ಭಾರೀ ಏರಿಕೆ

    ನವದೆಹಲಿ: ಭಾರತದಲ್ಲಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೆ ಮೊದಲ ಬಾರಿಗೆ ಚಿನ್ನದ ಬೆಲೆ 50 ಸಾವಿರ ರೂ. ಗಡಿ ದಾಟಿದೆ.

    10 ಗ್ರಾಂ 24 ಕ್ಯಾರೆಟ್‌ ಶುದ್ಧ ಚಿನ್ನದ ಬೆಲೆ ಬೆಂಗಳೂರಿನಲ್ಲಿ 50,720 ರೂ. ಆಗಿದ್ದರೆ ಚೆನ್ನೈನಲ್ಲಿ 51,380 ರೂ. ತಲುಪಿದೆ. 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ ಬೆಂಗಳೂರಿನಲ್ಲಿ 46,520 ರೂ.ಗೆ ಏರಿಕೆ ಆಗಿದ್ದರೆ ಚೆನ್ನೈನಲ್ಲಿ 47,100 ರೂ. ತಲುಪಿದೆ.

     

    ಚಿನ್ನದ ಜೊತೆ ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು 1 ಕೆಜಿ ಬೆಳ್ಳಿ ದರ 61,280 ರೂ. ಗೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಬೆಳ್ಳಿ ದರ 8,500 ರೂ. ಏರಿಕೆ ಕಂಡಿದೆ. 7 ವರ್ಷದ ಬಳಿಕ ಭಾರತದಲ್ಲಿ ಬೆಳ್ಳಿ ದರ ಭಾರೀ ಏರಿಕೆ ಕಂಡಿದೆ.

    ಬುಧವಾರ ಜಾಗತಿಕ ಮಾರುಕಟ್ಟೆಯಲ್ಲಿ 1 ಔನ್ಸ್‌( 28.3 ಗ್ರಾಂ) ಚಿನ್ನದ ಬೆಲೆ ಶೇ.1.3 ರಷ್ಟು ಏರಿಕೆಯಾಗಿ 1,865.81 ಡಾಲರ್‌(1.39 ಲಕ್ಷ ರೂ.) ತಲುಪಿದೆ. 1 ಔನ್ಸ್‌ ಬೆಳ್ಳಿಯ ಬೆಲೆ ಶೇ.7.2 ರಷ್ಟು 22.8366 ಡಾಲರ್‌(1,700 ರೂ. )ಏರಿಕೆಯಾಗಿದೆ. 9 ವರ್ಷಗಳ ಬಳಿಕ ದರ ಭಾರೀ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಭಾರತದಲ್ಲೂ ಚಿನ್ನದ ದರ ಏರಿಕೆಯಾಗಿದೆ. ಇದನ್ನೂ ಓದಿ: ಚಿನ್ನ ಸ್ಮಗ್ಲಿಂಗ್‌ ಕೇಸ್‌ – ಮಗಳಿಂದಾಗಿ ಬೆಂಗಳೂರಿನಲ್ಲಿ ಅಡಗಿದ್ದ ಸ್ವಪ್ನ ಸುರೇಶ್‌ ಅರೆಸ್ಟ್

     

    ಭಾರತದಲ್ಲಿ ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಮೇಕಿಂಗ್‌ ಶುಲ್ಕ ಇರುವ ಕಾರಣ ಆಭರಣದ ಬೆಲೆ ಮತ್ತಷ್ಟು ಜಾಸ್ತಿಯಾಗುತ್ತದೆ.

    ಬೆಲೆ ಜಾಸ್ತಿಯಾಗಲು ಕಾರಣವೇನು?
    ಕೋವಿಡ್‌ 19 ನಿಂದಾಗಿ ವಿಶ್ವಕ್ಕೆ ಆರ್ಥಿಕ ಸಂಕಷ್ಟ ಬಂದಿದೆ. ಹಣಕ್ಕೆ ಸಮಸ್ಯೆಯಾಗಿರುವಾಗ ಯಾರು ಆಭರಣ ಖರೀದಿಸುತ್ತಾರೆ ಎನ್ನುವ ಪ್ರಶ್ನೆ ಏಳುವುದು ಸಹಜ. ಆದರೆ ಇಲ್ಲಿ ಆಭರಣಕ್ಕೆ ಚಿನ್ನ ಖರೀದಿಸುತ್ತಿಲ್ಲ. ಬದಲಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತಿದೆ.

    ಕೋವಿಡ್‌ 19ನಿಂದಾಗಿ ಹೂಡಿಕೆದಾರರು ಸುರಕ್ಷಿತ ವಸ್ತು, ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಅದರಲ್ಲೂ ಅಮೆರಿಕ ಮತ್ತು ಯುರೋಪ್‌ ಹೂಡಿಕೆದಾರರು ಚಿನ್ನದ ಬಾಂಡ್‌ಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ.  ಮೊದಲಿನಿಂದಲೂ ಚಿನ್ನಕ್ಕೆ ಬೇಡಿಕೆ ಜಾಸ್ತಿಯಿದೆ. ಈಗ  ಹೂಡಿಕೆಯಿಂದಾಗಿ ಬೇಡಿಕೆ ಮತ್ತಷ್ಟು ಜಾಸ್ತಿಯಾಗಿದೆ. ಆದರೆ ಪೂರೈಕೆ ಕಡಿಮೆಯಿದೆ.  ಹೀಗಾಗಿ ಕೋವಿಡ್‌ 19 ಅವಧಿಯಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಇದೆ.

    24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ
    24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.

  • ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಆನ್‍ಲೈನ್ ಕ್ಲಾಸ್ ಎಫೆಕ್ಟ್- ಬ್ಯಾಂಕಲ್ಲಿ ಚಿನ್ನ ಅಡವಿಡಲು ಮುಂದಾದ ಪೋಷಕರು

    ಮಂಗಳೂರು: ಸರ್ಕಾರ ಆನ್‍ಲೈನ್ ಕ್ಲಾಸ್ ಮಾಡಲು ತಯಾರಿ ನಡೆಸುತ್ತಿದ್ದರೆ ಇತ್ತ ಆನ್‍ಲೈನ್ ಕ್ಲಾಸ್‍ಗೆ ಪೋಷಕರು ಸಾಲಕ್ಕಾಗಿ ಬ್ಯಾಂಕಿನ ಮೊರೆ ಹೋಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸಹಕಾರಿ ಬ್ಯಾಂಕುಗಳಿಗೆ ಪೋಷಕರು ಸಾಲಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಆನ್‍ಲೈನ್ ಕ್ಲಾಸಿಗಾಗಿ ಮೊಬೈಲ್, ಲ್ಯಾಪ್ ಟಾಪ್ ಹಾಗೂ ಟಿವಿ ಖರೀದಿಗಾಗಿ ಅನ್ನೋ ಮಾಹಿತಿ ಹೊರ ಬಿದ್ದಿದೆ.

    ಗ್ರಾಮೀಣ ಪ್ರದೇಶದ ಹೆಚ್ಚಿನ ಜನರಲ್ಲಿ ಆನ್‍ಲೈನ್ ಕ್ಲಾಸ್ ಗಾಗಿ ಬೇಕಾದ ಆಧುನಿಕ ತಂತ್ರಜ್ಞಾನ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗೂ ಟಿವಿ ಇಲ್ಲ. ಆದರೆ ಆನ್‍ಲೈನ್ ಕ್ಲಾಸ್‍ಗೆ ಇವೆಲ್ಲದರ ಅಗತ್ಯ ಮಕ್ಕಳಿಗೆ ಇದೆ. ಹೀಗಾಗಿ ಚಿನ್ನಾಭರಣಗಳನ್ನು ಅಡವಿಟ್ಟು ಹಾಗೂ ಹೆಚ್ಚಿನ ಬಡ್ಡಿಗೆ ವೈಯಕ್ತಿಕ ಸಾಲ ಪಡೆಯಲು ಪೋಷಕರು ಮುಂದಾಗಿದ್ದಾರೆ.

    ಈ ವಿಚಾರನ್ನು ಪೋಷಕರು ಬ್ಯಾಂಕಿನಲ್ಲಿ ಹೇಳಿಕೊಂಡು ಸಾಲ ಕೇಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಇಂತಹ ಅಗತ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಚಿತ್ತರಂಜನ್ ಬೋಳಾರ್ ಒತ್ತಾಯಿಸಿದ್ದಾರೆ.

  • 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್ ತಯಾರಿಸಿ ಧರಿಸಿದ ವ್ಯಕ್ತಿ!

    – ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
    – ಉಸಿರಾಡಲು ಯಾವುದೇ ತೊಂದರೆ ಇಲ್ಲ

    ಮುಂಬೈ: ಮಹಾಮಾರಿ ಕೊರೊನಾ ವೈರಸ್ ಹರಡುವುದುನ್ನು ನಿಯಂತ್ರಿಸಲು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಇದೀಗ ವ್ಯಕ್ತಿಯೊಬ್ಬರು ಲಕ್ಷ ಬೆಲೆ ಬಾಳುವ ಮಾಸ್ಕ್ ತಯಾರಿಸಿ ಅದನ್ನು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿದ್ದಾರೆ. ಸದ್ಯ ಶಂಕರ್ ಚಿನ್ನದ ಮಾಸ್ಕ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಈ ಬಗ್ಗೆ ಮಾತನಾಡಿರುವ ಶಂಕರ್, ಈ ಮಾಸ್ಕ್ ತೆಳುವಾಗಿದ್ದು, ಗಾಳಿ ಒಳಕ್ಕೆ ಹಾಗೂ ಹೊರ ಹೋಗಲೆಂದೇ ಸಣ್ಣ ಸಣ್ಣ ರಂಧ್ರಗಳನ್ನು ಮಾಡಲಾಗಿದೆ. ಹೀಗಾಗಿ ಉಸಿರಾಡಲು ಯಾವುದೇ ತೊಂದರೆಯಾಗಲ್ಲ. ಆದರೆ ಈ ಮಾಸ್ಕ್ ಎಷ್ಟು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಪಿಂಪ್ರಿ ಚಿಂಚ್ವಾಡ್ ನಲ್ಲಿ ಜುಲೈ 1ರವರೆಗೆ ಸುಮಾರು 3,284 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದವು. ಅಲ್ಲದೆ 47 ಮಂದಿ ಕೋವಿಡ್ 19ಗೆ ಬಲಿಯಾಗಿದ್ದರು.

  • ಬೀಗ ಹಾಕಿದ ಮನೆಯೇ ಟಾರ್ಗೆಟ್- 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಬೀಗ ಹಾಕಿದ ಮನೆಯೇ ಟಾರ್ಗೆಟ್- 25 ಲಕ್ಷ ಮೌಲ್ಯದ ಚಿನ್ನಾಭರಣ ವಶ

    – ಐಷಾರಾಮಿ ಜೀವನ ನಡೆಸ್ತಿದ್ದ ಕಳ್ಳ ಅಂದರ್

    ರಾಮನಗರ: ಕುಖ್ಯಾತ ಮನೆಗಳ್ಳನನ್ನ ಬಂಧಿಸಿ, ಬಂಧಿತನಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳುವಲ್ಲಿ ರಾಮನಗರ ಜಿಲ್ಲೆ ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಉದಯ್‍ಕುಮಾರ್ ಅಲಿಯಾಸ್ ಅಶೋಕ ಬಂಧಿತ ಆರೋಪಿಯಾಗಿದ್ದು, ಈತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನಾಗಿದ್ದಾನೆ. ಈ ಆರೋಪಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 18 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಬಂಧಿತನಿಂದ 560 ಗ್ರಾಂ ಚಿನ್ನಾಭರಣಗಳು, 3 ಕೆ.ಜಿ ಬೆಳ್ಳಿ ಸಾಮಾಗ್ರಿಗಳು, ಕೃತ್ಯಕ್ಕೆ ಬಳಸುತ್ತಿದ್ದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಆರೋಪಿ ಮಾರ್ಚ್ ತಿಂಗಳಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹರ್ತಿ ಗ್ರಾಮದ ರೇಣುಕಮ್ಮ ಮನೆ ಒಡೆದು 1,20,000 ಬೆಲೆ ಬಾಳುವ ಚಿನ್ನಾಭರಣಗಳನ್ನ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಪಿಐ ಮಂಜುನಾಥ್ ಹಾಗೂ ಅವರ ತಂಡ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಷ್ಟು ಕಳ್ಳತನದ ಪ್ರಕರಣಗಳು ಹೊರ ಬಂದಿವೆ.

    ಮಾಗಡಿ ಸರಹದ್ದಿನಲ್ಲಿ 2, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 15 ಮನೆ ಕಳ್ಳತನದ ಪ್ರಕರಣಗಳು ಹಾಗೂ ತುಮಕೂರು ಜಿಲ್ಲೆಯ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿ ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ ಕಾರಗೃಹದಲ್ಲಿದ್ದು, 2019ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದನು.

    ಜೈಲಿನಿಂದ ಹೊರ ಬಂದ ಮೇಲೂ ಈತ ತನ್ನ ಹಳೇ ಚಾಳಿಯನ್ನ ಬಿಟ್ಟಿರಲಿಲ್ಲ. ಈ ಆರೋಪಿ ಹಗಲು ಸಮಯದಲ್ಲೇ ಬೀಗ ಹಾಕಿದ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಐಷರಾಮಿ ಜೀವನ ನಡೆಸುತ್ತಿದ್ದನು. ಇಂತಹ ಖತನಾರ್ಕ್ ಮನೆಗಳ್ಳನನ್ನ ಬಂಧಿಸಿದ ಮಾಗಡಿ ಪೊಲೀಸರಿಗೆ ಎಸ್‍ಪಿ ಅನೂಪ್ ಎ.ಶೆಟ್ಟಿ ಅಭಿನಂದಿಸಿದ್ದಾರೆ.

  • 1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

    1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ

    ಬೆಂಗಳೂರು: 1.16 ಕೆಜಿ ಚಿನ್ನಾಭರಣ ಕದ್ದು ಮಾರಲು ಯತ್ನಿಸಿದ್ದ ಖತರ್ನಾಕ್ ಕಳ್ಳನೊಬ್ಬ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಉತ್ತಮ್ ದೋಲಾಯಿ ಬಂಧಿತ ಆರೋಪಿ. ನಂದಿನಿ ಲೇಔಟ್ ಪೊಲೀಸರ ಕಾರ್ಯಾಚರಣೆಯಲ್ಲಿ ಉತ್ತಮ್ ಸಿಕ್ಕಿಬಿದ್ದಿದ್ದು, ಬಂಧಿತನಿಂದ 45 ಲಕ್ಷ ರೂ. ಮೌಲ್ಯದ 1 ಕೆಜಿ 16 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿ ಉತ್ತಮ್ ದೋಲಾಯಿ ನಂದಿನಿ ಲೇಔಟ್‍ನಲ್ಲಿ ಇದೇ ಜೂನ್ 8ರಂದು ರಾತ್ರಿ ಅನುಮಾನಸ್ಪದವಾಗಿ ಜ್ಯುವೆಲರಿ ಶಾಪ್ ಬಳಿ ಓಡಾಡುತ್ತಿದ್ದ. ಈ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಿದಾಗ ಆರೋಪಿಯ ಜೇಬಿನಲ್ಲಿ ಚಿನ್ನಾಭರಣಗಳು ಪತ್ತೆಯಾಗಿದ್ದವು. ಚಿನ್ನ ಸಿಕ್ಕ ಕೂಡಲೇ ಪೊಲೀಸರು ಪ್ರಶ್ನಿಸಿದಾಗ ಉತ್ತಮ್ ತಬ್ಬಿಬ್ಬಾಗಿದ್ದ. ತಕ್ಷಣವೇ ಆರೋಪಿಯನ್ನ ಠಾಣೆಗೆ ಕರೆತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣೆಯ ಪೊಲೀಸರು ಆರೋಪಿಯನ್ನ ಸದ್ಯ ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತಮ್ ಬೆಂಗಳೂರಿನ ವಿವಿಧ ಕಡೆ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

  • ಹಣಕ್ಕಾಗಿ ಪತಿಯ ಕಿಡ್ನಾಪ್‍ಗೆ ಸುಪಾರಿ ನೀಡಿದ ಪತ್ನಿ – ಇಬ್ಬರು ಮಡದಿಯರ ಗಂಡನ ರಕ್ಷಣೆ

    ಹಣಕ್ಕಾಗಿ ಪತಿಯ ಕಿಡ್ನಾಪ್‍ಗೆ ಸುಪಾರಿ ನೀಡಿದ ಪತ್ನಿ – ಇಬ್ಬರು ಮಡದಿಯರ ಗಂಡನ ರಕ್ಷಣೆ

    -ಮೊದಲ ಪತ್ನಿಯ ಒಡವೆ ಎರಡನೇ ಮಡದಿಗೆ ನೀಡಿದ್ದ

    ಬೆಂಗಳೂರು: ಹಣಕ್ಕಾಗಿ ಪತಿಯ ಅಪಹರಣಕ್ಕೆ ಸುಪಾರಿ ನೀಡಿದ್ದ ಪ್ರಕರಣ ಬೇಧಿಸುವಲ್ಲಿ ನಗರದ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಪಹರಣಕ್ಕೊಳಗಾಗಿದ್ದ ಇಬ್ಬರು ಮಡದಿಯರ ಪತಿ ಶಾಹಿದ್ ಷೇಕ್ ನನ್ನು ಪೊಲೀಸರು ರಕ್ಷಿಸಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ. ಸುಪಾರಿ ನೀಡಿದ್ದ ಮೊದಲ ಪತ್ನಿ ರೋಮಾ ಷೇಕ್ ಸೇರಿದಂತೆ ನಾಲ್ವರ ಬಂಧನಕ್ಕಾಗಿ ಪೊಲೀಸರು ವಿಶೇಷ ಬಲೆ ಬೀಸಿದ್ದಾರೆ.

    ಅಪಹರಣಕ್ಕೊಳಗಾದ ಶಾಹಿದ್‍ಗೆ ಇಬ್ಬರು ಮಡದಿಯರು. ಮೊದಲನೇ ಮಡದಿ ರೋಮಾ ಷೇಕ್, ಎರಡನೇ ಪತ್ನಿ ರತ್ನಾ ಕಾತೂಮ್. ರೋಮಾ ಷೇಕ್ ಬಳಿಯಲ್ಲಿದ್ದ ಒಡವೆ ಮತ್ತು ಹಣವನ್ನು ತೆಗೆದುಕೊಂಡು ಹೋಗಿ ಎರಡನೇ ಪತ್ನಿ ರತ್ನಾಗೆ ನೀಡಿ ಶಾಹಿದ್ ಅಲ್ಲಿಯೇ ವಾಸವಾಗಿದ್ದನು. ಇದರಿಂದ ಕೋಪಗೊಂಡ ರೋಮಾ, ತಮ್ಮನ ಸಹಾಯದ ಮೂಲಕ ಕೆಲ ಹುಡುಗರನ್ನು ಒಗ್ಗೂಡಿಸಿ ಪತಿಯ ಅಪಹರಣಕ್ಕೆ ಪ್ಲಾನ್ ಮಾಡಿದ್ದಳು.

    ಹಣಕ್ಕೆ ಡಿಮ್ಯಾಂಡ್ ಮಾಡಿದ್ಳು: ಪತಿಯನ್ನು ಅಪಹರಿಸಿ ರತ್ನಾಗೆ ಕರೆ ಮಾಡಿ ಹೆಚ್ಚು ಹಣ ಹಾಗೂ ಒಡವೆಗಳಿಗೆ ಬೇಡಿಕೆ ಇರಿಸಲು ರೋಮಾ ಆ್ಯಂಡ್ ಗ್ಯಾಂಗ್ ನಿರ್ಧರಿಸಿತ್ತು. ಪೂರ್ವ ನಿಯೋಜಿತವಾದ ಪ್ಲಾನ್ ನಂತೆ ಜೂನ್ 7ರಂದು ಎಂಇಐ ಲೇಔಟ್ ಬಳಿ ತರಕಾರಿ ಖರೀದಿಗೆ ಬಂದಿದ್ದ ಶಾಹಿದ್ ನನ್ನು ಅಪಹರಣ ಮಾಡಿ ಪರಾರಿಯಾಗಿದ್ದರು. ಪತಿಯ ಕಿಡ್ನಾಪ್ ಸುದ್ದಿ ತಿಳಿದ ರತ್ನಾ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಕಾರ್ಯಪ್ರವೃತ್ತರಾದ ಪೊಲೀಸರು ನಾಗಮಂಗಲ ತಾಲೂಕಿನ ಬಿ.ಜಿ.ಎಸ್. ಟೋಲ್ ಗೇಟ್ ಬಳಿ ಆರೋಪಿಗಳನ್ನು ಬಂಧಿಸಿ, ಶಾಹಿದ್ ಷೇಕ್ ನನ್ನು ರಕ್ಷಣೆ ಮಾಡಿದ್ದಾರೆ. ಅಭಿಷೇಕ್ (26), ಭರತ್ (25), ಪ್ರಕಾಶ್ ಕೆ.ಪಿ. (22), ಚಲುವಮೂರ್ತಿ (22) ನಾಲ್ವರನ್ನು ಬಂಧಿಸಿದ್ದಾರೆ.

  • ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    – ತನ್ನ ದುಡಿಮೆಯಲ್ಲಿ ಸಂಪಾದಿಸಿದ ಆಸ್ತಿ ಮಾರಾಟ
    – ಸಿದ್ಧಲಿಂಗೇಶ್ವರ ದೇವರಿಗೆ 10 ಕೋಟಿ ವೆಚ್ಚದ ಚಿನ್ನದ ತೇರು

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವರಿಗೆ ಭಕ್ತರೊಬ್ಬರು ಸುಮಾರು 10 ಕೋಟಿ ರೂ. ಮೌಲ್ಯದ  ಚಿನ್ನದ ತೇರನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಕುಣಿಗಲ್ ತಾಲೂಕಿನ ದೇವಕನ್ನಸಂದ್ರದ ಶಿವಣ್ಣ ತೋಂಟದಾರ್ಯ ಎಂಬುವರು ದೇವರಿಗೆ ಚಿನ್ನದ ತೇರನ್ನ ಸಮರ್ಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಶಿವಣ್ಣ ಅವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತಂತೆ. ಆಗ ಎಡೆಯೂರು ಸಿದ್ಧಲಿಂಗೇಶ್ವರ ದೇವರು ಕೈ ಹಿಡಿದು ಕೋಟ್ಯಂತರ ರೂ. ಸಂಪಾದನೆ ಮಾಡುವಂತೆ ಆಶೀರ್ವಾದ ಮಾಡಿದ್ದರಂತೆ. ಹೀಗಾಗಿ ದೇವರ ಕೃಪೆಯಿಂದ ತಾನು ಶ್ರೀಮಂತನಾಗಿದ್ದು, ದೇವರಿಗೆ ಕಾಣಿಕೆ ಕೊಡಬೇಕು ಎಂದು ಬಯಸಿ ಕುಟುಂಬ ಸಮೇತವಾಗಿ ಬಂದು ಚಿನ್ನದ ತೇರನ್ನ ಸಮರ್ಪಿಸಿದ್ದಾರೆ.

    ಶಿವಣ್ಣ 50 ವರ್ಷದ ಹಿಂದೆ ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಹೋದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡದೆ ಬದುಕಿಲ್ಲ ಎನ್ನುವ ಸ್ಥಿತಿಯಲ್ಲಿ ಕುಟುಂಬ ಇತ್ತು. ಅಂದಿನಿಂದ ಕೆಲ ಕಾಲ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ತರಕಾರಿ ವ್ಯಾಪಾರ ಮಾಡಿದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟರು. ಇದೀಗ ಶಿವಣ್ಣನವರು ಬೆಂಗಳೂರಿನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರು. ಅಂದು ಧೈರ್ಯ ತುಂಬಿದ ದೈವಕ್ಕೆ ಏನಾದರೂ ಮಾಡಬೇಕು ಎನ್ನುವ ಬಯಕೆಯ ಹಿನ್ನೆಲೆಯಲ್ಲಿ ತಮ್ಮ ಹೆಸರಿಗಿದ್ದ ಸೈಟ್‍ಗಳನ್ನ ಮಾರಿ ಎಡೆಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ನೀಡಿದ್ದಾರೆ ಎಂದು ಪ್ರಧಾನ ಅರ್ಚಕರು ಶಿವಮೂರ್ತಿಯ್ಯ ತಿಳಿಸಿದ್ದಾರೆ.

    ಶಿವಣ್ಣ ತಾವು ಹಂತ ಹಂತವಾಗಿ ಜೀವನದಲ್ಲಿ ಮೇಲಕ್ಕೆ ಏರುತಿದ್ದಂತೆ ಎಡೆಯೂರು ಸಿದ್ಧಲಿಂಗೇಶ್ವರನಿಗೆ ವಿಶೇಷ ಕಾಣಿಕೆ, ದೇವಸ್ಥಾನದ ಸೇವಾಕಾರ್ಯ ಮಾಡುತ್ತಿದ್ದರು. ಈ ಹಿಂದೆ ಕಗ್ಗೆರೆ ಸಿದ್ಧಲಿಂಗೇಶ್ವರನಿಗೆ ಬೆಳ್ಳಿಯ ಮೂರ್ತಿ ಅರ್ಪಿಸಿದ್ದರು. ಇದೀಗ ಶಿವಣ್ಣ ಕೊಟ್ಟ ಚಿನ್ನದ ತೇರು ಶ್ರೀಕ್ಷೇತ್ರದ ಜಾತ್ರೆ ವೇಳೆ ರಥದಲ್ಲಿ ಅಲಂಕರಿಸಿ ಎಳೆಯಲಾಗುವುದು.