Tag: gold

  • ಭದ್ರಾವತಿಯಲ್ಲಿ ಮನೆಗಳ್ಳತನ – ಬೆಂಗಳೂರಿನ ಮಹಿಳೆ ಸೇರಿ ಇಬ್ಬರು ಅರೆಸ್ಟ್

    ಭದ್ರಾವತಿಯಲ್ಲಿ ಮನೆಗಳ್ಳತನ – ಬೆಂಗಳೂರಿನ ಮಹಿಳೆ ಸೇರಿ ಇಬ್ಬರು ಅರೆಸ್ಟ್

    ಶಿವಮೊಗ್ಗ: ಭದ್ರಾವತಿಯ (Bhadravathi) ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು (Bengaluru) ಮೂಲದ ಮಹಿಳೆ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಕೆಂಗೇರಿ ನಿವಾಸಿ ಮಂಜುಳಾ.ಆರ್ (21) ಮತ್ತು ಸುಜೈನ್ ಖಾನ್ (24) ಎಂದು ಗುರುತಿಸಲಾಗಿದೆ. ಆ.18 ರಂದು ಪೇಪರ್ ಟೌನ್‌ 5ನೇ ವಾರ್ಡ್‌ನಲ್ಲಿನ ನಿವಾಸಿ ಚಂದ್ರಮ್ಮ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಪ್ರಕರಣದ ಸಂಬಂಧ ಭದ್ರಾವತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಸಾಗರ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಜನರೇಟರ್‌ ಸ್ಫೋಟ – ಯುವಕನಿಗೆ ಗಂಭೀರ ಗಾಯ

    ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದರು. ಅದರಂತೆ ಆ.30ರಂದು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

    ಬಂಧಿತರಿಂದ 7.82 ಲಕ್ಷ ರೂ. ಮೌಲ್ಯದ 83 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ

  • ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

    ಆಟೋ EMI ಕಟ್ಟಲು ಸ್ನೇಹಿತೆಯನ್ನು ಕೊಂದು ಮಾಂಗಲ್ಯ ಸರ ಕದ್ದ ಖತರ್‌ನಾಕ್ ಚಾಲಕ

    – ಆಟೋ ಚಾಲಕ, ಸಾಥ್‌ ಕೊಟ್ಟ ಗೆಳತಿ ಅರೆಸ್ಟ್‌ – ಮತ್ತಿಬ್ಬರು ನಾಪತ್ತೆ

    ಚಿಕ್ಕಬಳ್ಳಾಪುರ: ಬೆಂಗಳೂರಿನ (Bengaluru) ಆಟೋ ಚಾಲಕನೊರ್ವ ಆಟೋ ಇಎಂಎ ಸಾಲ ತೀರಿಸಲು ತನ್ನಿಬ್ಬರು ಸ್ನೇಹಿತೆಯರನ್ನೇ ಬಳಸಿಕೊಂಡು ಪ್ರೀಪ್ಲಾನ್ ಮಾಡಿ, ಹಳೆಯ ಸ್ನೇಹಿತೆಯನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ. ಪಾಪಿ ಆಟೋ ಚಾಲಕನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

    ಆ.16 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಪೊಲೀಸ್ ಠಾಣೆಯ ನಾಮಗೊಂಡ್ಲು ಗ್ರಾಮದ ಸೇತುವೆಯೊಂದರ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಬೆನ್ನತ್ತಿದ್ದ ಪೊಲೀಸರಿಗೆ ಕಾಣೆಯಾದ ಮಹಿಳೆಯರ ಪ್ರಕರಣಗಳ ಹುಡುಕಾಟ ನಡೆಸಿದಾಗ ಆಕೆ ಆಂಧ್ರದ ಹಿಂದೂಪುರದ ಅರ್ಚನಾ ಎಂಬುದು ಗೊತ್ತಾಗಿತ್ತು. ಹಿಂದೂಪುರ ಪೊಲೀಸ್‌ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹೇಮಾವತಿ ನದಿಗೆ ಬಿದ್ದ ಕಾರು – ಇಬ್ಬರ ಶವ ಪತ್ತೆ, ಮತ್ತಿಬ್ಬರು ಕೊಚ್ಚಿ ಹೋಗಿರೋ ಶಂಕೆ

    ಗೌರಿಬಿದನೂರು ಸಿಪಿಐ ಸತ್ಯನಾರಾಯಣ್ ಹಾಗೂ ಮಂಚೇನಹಳ್ಳಿ ಪಿಎಸ್‍ಐ ಆಕೆಯ ಸಿಡಿಆರ್ ಪರಿಶೀಲನೆ ಮಾಡಿದಾಗ ಕಾಣೆಯಾದ ದಿನದಂದು ಆರ್ಚನಾಳಿಗೆ ರಾಕೇಶ್ ಎಂಬಾತ ಹಲವು ಬಾರಿ ಕರೆ ಮಾಡಿರೋದು ಗೊತ್ತಾಗಿದೆ. ಹೀಗಾಗಿ ಮೂಲತಃ ಗೌರಿಬಿದನೂರಿನ ವಿರೂಪಸಂದ್ರದ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿರುವ ರಾಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆಟೋ ಚಾಲಕ ರಾಕೇಶ್ ತನ್ನ ಆಟೋ ಇಎಂಐನ್ನ ಮೂರು ತಿಂಗಳಿಂದ ಕಟ್ಟಿಲ್ಲ, ಹಾಗೂ ಬೈಕ್ ಮೇಲೆ 30,000 ಸಾಲ ಮಾಡಿದ್ದು, ಅದು ಸಹ ತೀರಿಸಲು ಹಣ ಇಲ್ಲ. ಕೈ ಸಾಲ ಬೇರೆ ಮಾಡಿಕೊಂಡಿದ್ದು ಸಾಲಗಾರನಾಗಿದ್ದು ಸಾಲ ತೀರಿಸಲು ಸ್ನೇಹಿತೆಯನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

    ಕೊಲೆಯಾದ ಅರ್ಚನಾ ಶುಭಸಮಾರಂಭಗಳಲ್ಲಿ ಮದುವೆ ಮನೆಗಳಲ್ಲಿ ಸ್ವಾಗತಕಾರಳಾಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳ ಹಿಂದೆ ಕೊಲೆ ಮಾಡಿದ ಆಟೋ ಚಾಲಕ ಸಹ ಮದುವೆ ಮನೆಗಳಲ್ಲಿ ಆಡುಗೆ ಕೆಲಸ ಮಾಡಿಕೊಂಡಿದ್ದ. ಅಂದಿನಿಂದಲೂ ಅರ್ಚನಾ ಹಾಗೂ ರಾಕೇಶ್ ಅಣ್ಣ ತಂಗಿಯ ಸಂಬಂಧದಂತೆ ಸ್ನೇಹಿತರಾಗಿದ್ದರಂತೆ. ಇತ್ತೀಚೆಗೆ ವಿಡಿಯೋ ಕಾಲ್ ಮಾಡಿ ಮಾತನಾಡುವ ವೇಳೆ ರಾಕೇಶ್ ಅರ್ಚನಾಳ ಕತ್ತಲ್ಲಿ ಲಕ ಲಕ ಹೊಳೆಯುತ್ತಿದ್ದ ಮಾಂಗಲ್ಯ ಸರದ ಮೇಲೆ ಕಣ್ಣು ಹಾಕಿದ್ದ. ಹಾಗಾಗಿ ಬೆಂಗಳೂರಿನಲ್ಲಿ ಪರಿಚಯವಾಗಿದ್ದ ತನ್ನ ಮತ್ತೊಬ್ಬ ಸ್ನೇಹಿತಾ ನಿಹಾರಿಕಾ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದ. ತಾನು ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ಆಟೋ ಇಎಂಐ ಸಹ ಕಟ್ಟಿಲ್ಲ, ಹಾಗಾಗಿ ನನ್ನ ಫ್ರೆಂಡ್ ಅರ್ಚನಾ ಹತ್ರ ಚಿನ್ನದ ಸರ ಇದೆ ಅವಳನ್ನ ಸಾಯಿಸಿ ಆದ್ರೂ ಸರ ಕದ್ದು ಸಾಲ ತೀರಿಸಬೇಕು ನೀನು ನನಗೆ ಸಹಾಯ ಮಾಡು ಅಂತ ಕೇಳಿಕೊಂಡಿದ್ದನಂತೆ.

    ನಿಹಾರಿಕಾ ನಾನು ಬರೋಕೆ ಆಗಲ್ಲ ನನ್ನ ಪ್ರಾಣ ಸ್ನೇಹಿತೆ ಅಂಜಲಿ ಅಂತಾ ಇದಾಳೆ ಅವಳನ್ನ ಕರೆದುಕೊಂಡು ಹೋಗು ಅಂತ ಅಂಜಲಿನಾ ಕಳಿಸಿಕೊಟ್ಟಿದ್ದಾಳೆ. ಇನ್ನೂ ಅಂಜಲಿ ತಾನೊಬ್ಬಳೇ ಯಾಕೆ ಅಂತ ತನ್ನ ಸ್ನೇಹಿತ ನವೀನ್‌ ಎಂಬಾತನನ್ನ ಸಹ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ರಾಕೇಶ್ ಆಟೋದಲ್ಲಿ ಆದ್ರೆ ಮರ್ಡರ್ ಮಾಡೋಕೆ ಆಗಲ್ಲ ಅಂತ ಕಾರಿನಲ್ಲಿ ಆದ್ರೆ ಕೆಲಸ ಸುಲಭ ಅಂತ ಯೋಚನೆ ಮಾಡಿ, ಅಂಜಲಿ ವಾಸವಿದ್ದ ಪಿಜಿ ಮಾಲೀಕಿಗೆ ಸ್ನೇಹಿತೆಯನ್ನ ನೊಡೋಕೆ ಹಿಂದೂಪುರಕ್ಕೆ ಹೋಗಿ ಬರ್ತಿವಿ ಅಂತ ಪಿಜಿ ಮಾಲೀಕಿಯ ಇಟಿಯೋಸ್ ಕಾರನ್ನ ತೆಗೆದುಕೊಂಡು ಹೋಗಿದ್ದ.

    ಆಗಸ್ಟ್ 14 ರಂದು ಬೆಂಗಳೂರಿನಿಂದ ರಾಕೇಶ್, ಅಂಜಲಿ ಹಾಗೂ ನವೀನ್ ಮೂವರು ಸೀದಾ ಹಿಂದೂಪುರಕ್ಕೆ ಹೋಗಿ ಅರ್ಚನಾಳನ್ನ ಬಾ ಊಟಕ್ಕೆ ಹೋಗಿ ಬರೋಣ ಅಂತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರು ಹತ್ತಿಸಿಕೊಂಡಿದ್ದಾರೆ. ರಾಕೇಶ್ ಹಾಗೂ ಎಲ್ಲರೂ ಹಿಂದೂಪುರದಲ್ಲೇ ಫೋನ್‍ಗಳನ್ನ ಸ್ವಿಚ್ ಅಫ್ ಮಾಡಿಕೊಂಡಿದ್ದಾರೆ. ಹಿಂದೂಪುರದಿಂದ ಆರಂಭವಾದ ಕಾರು ಜರ್ನಿ ಗೌರಿಬಿದನೂರು ಮಂಚೇನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಹಾಗೂ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಜೆಯವರೆಗೂ ಸಾಗಿದ್ದು ಸಂಜೆ ಕತ್ತಲಾಗುತ್ತಿದ್ದಂತೆ ಆಂಧ್ರದ ಚಿಲಮತ್ತೂರು ಬಳಿ ಕಾರಿನಲ್ಲಿದ್ದ ಅರ್ಚನಾಳ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ ಮೃತದೇಹವನ್ನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಮಗೊಂಡ್ಲು ಗ್ರಾಮದ ಬಳಿ ದೊಡ್ಡ ಸೇತುವೆಯೊಂದರ ಬಳಿ ಬಿಸಾಕಿ ಪರಾರಿಯಾಗಿದ್ದರು.

    ಅರ್ಚನಾಳನ್ನ ಕೊಲೆ ಮಾಡಿ ಕದ್ದಿದ್ದ ಮಾಂಗಲ್ಯಸರ ಹಾಗೂ ಬಂಗಾರದ ಕಿವಿಯ ಒಲೆಯನ್ನ ಫೈನಾನ್ಸ್‌ ಒಂದರಲ್ಲಿ 2.19 ಲಕ್ಷ ರೂ.ಗೆ ಅಡಮಾನ ಇಟ್ಟಿದ್ದರು. ಬಂದ ಹಣದಿಂದ ಆಟೋ ಇಎಂಐ ಹಾಗೂ ಕೈ ಸಾಲ ತೀರಿಸಿ ಉಳಿದ ಹಣದಲ್ಲಿ ಎಲ್ಲರೂ ಮೋಜು ಮಸ್ತಿ ಮಾಡಿಕೊಂಡಿದ್ದರು. ಈಗ ರಾಕೇಶ್ ಹಾಗೂ ಅಂಜಲಿಗೆ ಪೊಲೀಸರು ಜೈಲು ದರ್ಶನ ಮಾಡಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ನವೀನ್ ಹಾಗೂ ನಿಹಾರಿಕಾಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯಲ್ಲಿ ಹಸುಗೂಸನ್ನು ಹತ್ಯೆಗೈದಿದ್ದ ಪಾಪಿ ತಾಯಿ ಅರೆಸ್ಟ್‌

  • ವರಮಹಾಲಕ್ಷ್ಮಿ ಹಬ್ಬಕ್ಕೆ ಬ್ಯಾಂಕ್ ಲಾಕರ್‌ನಿಂದ ತಂದಿದ್ದ 1 ಕೆಜಿ ಚಿನ್ನ, 15 ಲಕ್ಷ ನಗದು ಕಳ್ಳರ ಪಾಲು!

    ವರಮಹಾಲಕ್ಷ್ಮಿ ಹಬ್ಬಕ್ಕೆ ಬ್ಯಾಂಕ್ ಲಾಕರ್‌ನಿಂದ ತಂದಿದ್ದ 1 ಕೆಜಿ ಚಿನ್ನ, 15 ಲಕ್ಷ ನಗದು ಕಳ್ಳರ ಪಾಲು!

    • ಹಳೇಬೀಡಲ್ಲಿ ಚಿನ್ನಾಭರಣದೋಚಿದ ಕಳ್ಳರು

    ಹಾಸನ: ನಗರದ (Hassan) ಖಾಸಗಿ ಬ್ಯಾಂಕ್‍ನ ನೌಕರರೊಬ್ಬರ ಮನೆಯಲ್ಲಿ 1 ಕೆಜಿ ಚಿನ್ನ (Gold) ಹಾಗೂ 15 ಲಕ್ಷಕ್ಕೂ ಹೆಚ್ಚಿನ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಸದಾಶಿವನಗರದ ನವೀನ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆಂದು ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಆಭರಣ ಹಾಗೂ 15 ಲಕ್ಷಕ್ಕೂ ಹೆಚ್ಚಿನ ನಗದನ್ನು ಕಳ್ಳರು ದೋಚಿದ್ದಾರೆ. ಗುರುವಾರ ರಾತ್ರಿ ನವೀನ್ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆರಳಿದ್ದರು. ಶನಿವಾರ (ಆ.23) ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಮುರಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ – ಗೃಹಿಣಿ ಆತ್ಮಹತ್ಯೆ

    ನವೀನ್ ಈಗ ವಾಸವಿದ್ದ ಮನೆ ಎದುರು ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸಿಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    3.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
    ಮತ್ತೊಂದು ಪ್ರಕರಣದಲ್ಲಿ ಮನೆಯ ಬಾಗಿಲು ಮುರಿದು ಸುಮಾರು 3.50 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ಹಾಗೂ 5,000 ರೂ. ನಗದು ದೋಚಿರುವ ಘಟನೆ ಬೇಲೂರು ತಾಲೂಕಿನ ಹಳೇಬೀಡಿನ ಕಲ್ಲುಮಠ ಬೀದಿಯಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಮಂಜಪ್ಪ ಮತ್ತು ಪತ್ನಿ ಪ್ರೇಮಲೀಲಾ ಅವರು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಜಾವಗಲ್ ಸರ್ಕಲ್‍ನಲ್ಲಿರುವ ತಾವು ನಡೆಸುತ್ತಿರುವ ಮೆಡಿಕಲ್‌ಗೆ ಹೋಗಿದ್ದರು. ಈ ವೇಳೆ ಈ ಕಳ್ಳತನ ನಡೆದಿದೆ.

    ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ, ಮನೆಯ ಬಾಗಿಲನ್ನು ಕಳ್ಳರು ಒಡೆದು, ಬೀರುಗಳಲ್ಲಿದ್ದ 30 ಗ್ರಾಂ ತೂಕದ ಚಿನ್ನದ ಸರ, 3 ಗ್ರಾಂ. ತೂಕದ ಗುಂಡಿನ ಚೈನ್, 10 ಗ್ರಾಂ. ತೂಕದ ಬೆಳ್ಳಿಯ ಪೆಂಡೆಂಟ್, 2 ಉಂಗುರ, 6 ಗ್ರಾಂ. ತೂಕದ 1 ಮೂಗುತಿ ಹಾಗೂ ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Nelamangala | 16 ವರ್ಷದ ಬಾಲಕಿ ನೇಣಿಗೆ ಶರಣು

  • ಚಿಕ್ಕಮಗಳೂರು | ಮಾಜಿ ಸಚಿವರ ಮನೆಯಲ್ಲಿ 7 ಲಕ್ಷ ನಗದು, ಚಿನ್ನಾಭರಣ ದೋಚಿದ ನೇಪಾಳಿ ದಂಪತಿ

    ಚಿಕ್ಕಮಗಳೂರು | ಮಾಜಿ ಸಚಿವರ ಮನೆಯಲ್ಲಿ 7 ಲಕ್ಷ ನಗದು, ಚಿನ್ನಾಭರಣ ದೋಚಿದ ನೇಪಾಳಿ ದಂಪತಿ

    ಚಿಕ್ಕಮಗಳೂರು: ಮಲೆನಾಡ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ (Govinde Gowda) ಮನೆಯಲ್ಲಿ 7 ಲಕ್ಷ ರೂ. ನಗದು (Money) ಹಾಗೂ ಚಿನ್ನಾಭರಣ (Gold) ಕಳವಾಗಿದೆ.

    ನೇಪಾಳ ಮೂಲದ ಮನೆಗೆಲಸದವರಿಂದಲೇ ಕಳ್ಳತನ ನಡೆದಿದೆ. ಗೋವಿಂದೇಗೌಡರ ಪುತ್ರ ವೆಂಕಟೇಶ್ ವಾಸವಿರುವ ಕೊಪ್ಪ (Koppa) ತಾಲೂಕಿನ ಮಣಿಪುರ ಎಸ್ಟೇಟ್‍ನಲ್ಲಿ ಈ ಕಳ್ಳತನ ನಡೆದಿದೆ. ಈ ಮನೆಗೆ ಕಳೆದ 15 ದಿನಗಳ ಹಿಂದಷ್ಟೇ ನೇಪಾಳ ಮೂಲದ ದಂಪತಿ ಕೆಲಸಕ್ಕೆ ಸೇರಿದ್ದರು. ಕಳೆದ ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾಗ, ದಂಪತಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: 

    ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ – ಪೊಲೀಸರಿಂದ ಪುಂಡನಿಗೆ ದಂಡದ ರುಚಿ!

  • ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

    ನವದೆಹಲಿ: ಭಾರತೀಯ ಆಮದುಗಳ ಮೇಲೆ ಟ್ರಂಪ್‌ ಹೆಚ್ಚುವರಿ 25% ಸುಂಕ (Tariff) ವಿಧಿಸಿದ ಪರಿಣಾಮ ಚಿನ್ನದ ಬೆಲೆ (Gold Price) ಏರಿಕೆ ಕಂಡಿದೆ.

    ಭಾರತದ ಮೇಲೆ ಟ್ರಂಪ್‌ ಸುಂಕ ಘೋಷಿಸಿದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳನ್ನು ಮುಖ ಮಾಡಿದ್ದಾರೆ. ಹೀಗಾಗಿ, ಚಿನ್ನದ ಬೆಲೆ 3,600 ರೂ. ಏರಿಕೆಯಾಗಿದ್ದು, 10 ಗ್ರಾಂಗೆ 1,02,620 ರೂ.ಗೆ ತಲುಪಿ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.‌ ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

    ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9% ಶುದ್ಧತೆಯ ಚಿನ್ನವು ಬುಧವಾರ 10 ಗ್ರಾಂಗೆ 99,020 ರೂ.ಗೆ ತಲುಪಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಶೇ.99.5 ರಷ್ಟು ಶುದ್ಧತೆಯ ಚಿನ್ನದ ಬೆಲೆ 3,600 ರುಪಾಯಿ ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳು ಸೇರಿದಂತೆ) 1,02,200 ರು. ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ.

    ಆ.1 ರಿಂದಲೇ ಜಾರಿಗೆ ಬರುವಂತೆ ಭಾರತದ ಆಮದುಗಳ ಮೇಲೆ ಅಮೆರಿಕವು ಶೇ.25 ರಷ್ಟು ಸುಂಕ ವಿಧಿಸಿತ್ತು. ರಷ್ಯಾ ಜೊತೆಗಿನ ಒಪ್ಪಂದ ಕೊನೆಗಾಣಿಸದಿದ್ದಕ್ಕೆ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ಭಾರತದ ಮೇಲೆ ವಿಧಿಸಿದೆ. ಆ ಮೂಲಕ 50% ಸುಂಕವನ್ನು ಅಮೆರಿಕ ಹಾಕಿದೆ. ಇದು ಎರಡು ಆರ್ಥಿಕತೆಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

    ಗುರುವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,500 ರೂ. ಏರಿಕೆಯಾಗಿ 1,14,000 ರೂ.ಗೆ ತಲುಪಿದೆ (ಎಲ್ಲಾ ತೆರಿಗೆಗಳು ಸೇರಿದಂತೆ). ಬುಧವಾರ ಬಿಳಿ ಲೋಹ ಬೆಲೆ ಪ್ರತಿ ಕೆಜಿಗೆ 1,12,500 ರೂ. ಇತ್ತು.

  • CRPF ಅಧಿಕಾರಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ – ದೂರು ಕೊಟ್ರೂ ಕ್ರಮವಿಲ್ಲ ಅಂತ ಕಣ್ಣೀರು

    CRPF ಅಧಿಕಾರಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ – ದೂರು ಕೊಟ್ರೂ ಕ್ರಮವಿಲ್ಲ ಅಂತ ಕಣ್ಣೀರು

    -ರಾಜ್ಯ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಅಣ್ಣಾಮಲೈ ಕಿಡಿ

    ಚೆನ್ನೈ: ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಆಭರಣಗಳು ಕಳ್ಳತನವಾಗಿದೆ ಹುಡುಕಿಕೊಡಿ ಅಂತ ಸಿಆರ್‌ಪಿಎಫ್‌ನ‌ (CRPF) ಮಹಿಳಾ ಅಧಿಕಾರಿಯೊಬ್ಬರು ಕಣ್ಣೀರಿಟ್ಟಿದ್ದಾರೆ.

    ತಮಿಳುನಾಡಿನ (Tamil Nadu) ವೇಲೂರು (Velur) ಜಿಲ್ಲೆಯ ನಾರಾಯಣಪುರಂ ಗ್ರಾಮದ 32 ವರ್ಷದ ಕಲಾವತಿ ಎಂಬುವವರು ಮನೆಯಲ್ಲಿ 15 ಸವರನ್ ಚಿನ್ನಾಭರಣ, 50,000 ರೂಪಾಯಿ ನಗದು, ರೇಷ್ಮೆ ಸೀರೆ ಇಟ್ಟಿದ್ದರು. ಇದು ಜೂನ್ 24ರಂದು ಕಳುವಾಗಿದೆ. ಕುಟುಂಬಸ್ಥರು ಕೃಷಿ ಕೆಲಸಕ್ಕೆ ಹೋಗಿದ್ದನ್ನೇ ಹೊಂಚುಹಾಕಿ ಕಾದಿದ್ದ ಕಳ್ಳರು ಮನೆ ಬಾಗಿಲು ಒಡೆದು ಲೂಟಿ ಮಾಡಿದ್ದಾರೆ. ಸ್ಥಳೀಯ ಪೊಲಿಸರಿಗೆ ದೂರು ಕೊಟ್ಟರೆ ಇನ್ನೂ ಕ್ರಮ ಇಲ್ಲ ಅಂತ ಕಲಾವತಿ ಕಣ್ಣೀರು ಹಾಕಿದ್ದು ವೈರಲ್ ಆಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ ಡಿಕೆಶಿ

    ಇದನ್ನು ಬಿಜೆಪಿ ನಾಯಕ ಅಣ್ಣಾಮಲೈ ಗಮನಿಸಿ ರಾಜ್ಯ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಕಿಡಿಕಾರಿದ್ದರು. ತಕ್ಷಣವೇ ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಿದ್ದು, ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ

  • ನಕಲಿ ಚಿನ್ನ ಕೊಟ್ಟು 35 ಲಕ್ಷ ವಂಚನೆ – ಇಬ್ಬರು ಅರೆಸ್ಟ್

    ನಕಲಿ ಚಿನ್ನ ಕೊಟ್ಟು 35 ಲಕ್ಷ ವಂಚನೆ – ಇಬ್ಬರು ಅರೆಸ್ಟ್

    ಚಿತ್ರದುರ್ಗ: ನಕಲಿ ಚಿನ್ನ (Gold) ನೀಡಿ 35 ಲಕ್ಷ ರೂ. ವಂಚಿಸಿದ್ದ ಇಬ್ಬರು ಆರೋಪಿಗಳನ್ನು (Chitradurga) ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ದಾವಣಗೆರೆ ಮೂಲದ ರಮೇಶ್ ಹಾಗೂ ವಿಜಯನಗರ ಮೂಲದ ರಾಮಕೃಷ್ಣ ಎಂದು ಗುರುತಿಸಲಾಗಿದೆ. ಇಬ್ಬರು ಸೇರಿ ತಮಿಳುನಾಡು ಮೂಲದ ಕೆ.ಪಾಂಡಿ ಎಂಬವರಿಗೆ 2ಕೆಜಿ ಚಿನ್ನ ಕೊಡುವುದಾಗಿ 35ಲಕ್ಷ ರೂ. ಪಡೆದು, ನಕಲಿ ಚಿನ್ನ ನೀಡಿ ವಂಚಿಸಿದ್ದರು. ಇದನ್ನೂ ಓದಿ: ಜೈಲಲ್ಲಿರೊ ಉಗ್ರ ನಾಸೀರ್‌ಗೆ ಮನೋವೈದ್ಯನಿಂದ ಮೊಬೈಲ್ ಸಪ್ಲೈ – ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ

    ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತರಿಂದ 22ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ವಿಜಯಪುರ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

  • ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

    ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

    ಟೆಲ್‌ ಅವಿವ್‌/ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ (Israel Iran Conflict) ಮತ್ತಷ್ಟು ತೀವ್ರಗೊಳ್ಳುತ್ತಿದ್ದಂತೆ ಚಿನ್ನದ ಬೆಲೆ (Gold Rate) ಗಗನಕ್ಕೇರಿದೆ. ಕಳೆದ ಒಂದು ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 3,645 ರೂ. ಏರಿಕೆಯಾಗಿದ್ದರೆ, ದೇಶಿಯ ಮಾರುಕಟ್ಟೆಯಲ್ಲಿ 897 ರೂ.ಗಳಷ್ಟು ಹೆಚ್ಚಾಗಿದೆ.

    ಉಭಯ ದೇಶಗಳ ನಡುವಿನ ಪರಸ್ಪರ ಮಿಸೈಲ್‌ ದಾಳಿಗಳು ವಿಶ್ವದ ಷೇರು ಮಾರುಕಟ್ಟೆಯ (Stock Market) ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಚಿನ್ನದ ಬೆಲೆ ಗಗನಕ್ಕೇರಿದೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MSX) ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಚಿನ್ನದ ಬೇಲೆ 1 ಲಕ್ಷ ರೂ. ಗಡಿ ದಾಟಿದೆ. ಅದೇ ರೀತಿ ದೇಶಿಯ ಮಾರುಕಟ್ಟೆಯಲ್ಲಿ 1 ಲಕ್ಷ ರೂ. ಸಮೀಪಿಸಿದೆ. ಇದರ ಇನ್ನಷ್ಟು ವಿವರ ಮುಂದೆ ನೋಡೋಣ…

    MSX ನಲ್ಲಿ 1 ಲಕ್ಷ ರೂ. ಗಡಿ ದಾಟಿದ ಗೋಲ್ಡ್‌ ರೇಟ್‌
    ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಂಘರ್ಷದಿಂದಾಗಿ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (MSX) ಇಂಡಿಯಾ ಲಿಮಿಟೆಡ್‌ನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಗಡಿ ದಾಟಿದೆ. ಇದೇ ಜೂನ್‌ 6ರಂದು 10 ಗ್ರಾಂ ಚಿನ್ನದ ಬೆಲೆ 97,036 ರೂ. ಇತ್ತು. ಇದು ಜೂನ್‌ 13ರಂದು ಮಾರುಕಟ್ಟೆ ಮುಕ್ತಾಯದ ವೇಳೆಗೆ 1,00,681 ರೂ.ಗಳಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಂದ್ರೆ ಕಳದೆ ಒಂದು ವಾರದಲ್ಲಿ 3,645 ರೂ. ಏರಿಕೆ ಕಂಡಿದೆ. ಇದನ್ನೂ ಓದಿ: ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

    ಸಾಂದರ್ಭಿಕ ಚಿತ್ರ

    ದೇಶಿ ಮಾರುಕಟ್ಟೆಯಲ್ಲೂ ಚಿನ್ನ ದುಬಾರಿ
    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆಯು ದೇಶಿಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಭಾರತೀಯ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ IBJA.Com ಪ್ರಕಾರ, ಜೂನ್‌ 6ರಂದು 24 ಕ್ಯಾರೆಟ್‌ ಚಿನ್ನದ ದರ 10 ಗ್ರಾಂಗೆ 98,163 ರೂ. ಇತ್ತು. ಆದ್ರೆ ಜೂನ್‌ 13ರಂದು ಮಾರುಕಟ್ಟೆ ಅಂತ್ಯದ ವೇಳೆಗೆ 99,060 ರೂ. ಗಳಿಗೆ ತಲುಪಿತ್ತು. ಅಂದ್ರೆ ಕಳೆದ ಒಂದು ವಾರದಲ್ಲಿ 897 ರೂ.ಗಳಷ್ಟು ದರ ಏರಿಕೆ ಕಂಡಿದೆ. ಇದೀಗ ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿರುವುದರಿಂದ ಸೋಮವಾರ (ಜೂ.16) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ

    ಸದ್ಯದಲ್ಲಿ ಚಿನ್ನದ ದರ ಯಾವುದಕ್ಕೆ ಎಷ್ಟಿದೆ? (ಪ್ರತಿ 10 ಗ್ರಾಂಗೆ)
    * 22 ಕ್ಯಾರೆಟ್ ಚಿನ್ನ – 96,680 ರೂ.
    * 20 ಕ್ಯಾರೆಟ್ ಚಿನ್ನ – 88,160 ರೂ.
    * 18 ಕ್ಯಾರೆಟ್ ಚಿನ್ನ – 80,240 ರೂ.
    * 14 ಕ್ಯಾರೆಟ್ ಚಿನ್ನ – 63,890 ರೂ.

  • ಭ್ರಷ್ಟ ಅಧಿಕಾರಿಯ 3 ರಾಜ್ಯಗಳಲ್ಲಿದ್ದ ಆಸ್ತಿ ಮೇಲೆ ಸಿಬಿಐ ದಾಳಿ – 1 ಕೋಟಿ ನಗದು, 3.5 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಪತ್ತೆ

    ಭ್ರಷ್ಟ ಅಧಿಕಾರಿಯ 3 ರಾಜ್ಯಗಳಲ್ಲಿದ್ದ ಆಸ್ತಿ ಮೇಲೆ ಸಿಬಿಐ ದಾಳಿ – 1 ಕೋಟಿ ನಗದು, 3.5 ಕೆಜಿ ಚಿನ್ನ, 2 ಕೆಜಿ ಬೆಳ್ಳಿ ಪತ್ತೆ

    ನವದೆಹಲಿ: ಕಂದಾಯ ಇಲಾಖೆಯ (Indian Revenue Service) ಅಧಿಕಾರಿಯೊಬ್ಬರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ (CBI) ಅಧಿಕಾರಿಗಳು ಮುಂಬೈ (Mumbai), ಪಂಜಾಬ್‌ (Punjab) ಮತ್ತು ದೆಹಲಿಯಲ್ಲಿ (Delhi) ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗೆ ಸೇರಿರುವ 1 ಕೋಟಿ ನಗದು ಹಣ, 3.5 ಕೆಜಿ ಚಿನ್ನ (Gold) ಹಾಗೂ 2 ಕೆಜಿ ಬೆಳ್ಳಿ ಪತ್ತೆಯಾಗಿದೆ.

    25 ಲಕ್ಷ ರೂ. ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಂದಾಯ ಅಧಿಕಾರಿ ಅಮಿತ್ ಕುಮಾರ್ ಸಿಂಗಲ್ ಮತ್ತು ಅವರ ಸಹಚರರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, 1 ಕೋಟಿ ನಗದು, ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಪತ್ತೆಯಾಗಿದೆ. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

    ಸಿಂಗಲ್ ಅವರು 2007 ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿಯಾಗಿದ್ದು, ದೆಹಲಿಯ ತೆರಿಗೆ ಪಾವತಿದಾರರ ಸೇವೆಗಳ ನಿರ್ದೇಶನಾಲಯದಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ತನಿಖೆಯ ಸಮಯದಲ್ಲಿ ಅವರು ದೆಹಲಿ, ಮುಂಬೈ ಮತ್ತು ಪಂಜಾಬ್‌ನಲ್ಲಿ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಈ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು.

    ದಾಳಿ ವೇಳೆ, ವಿವಿಧ ಬ್ಯಾಂಕ್‌ಗಳಲ್ಲಿ ಲಾಕರ್ ಇರುವ ಬಗ್ಗೆ ಹಾಗೂ 25 ಬ್ಯಾಂಕ್ ಖಾತೆಗಳ ದಾಖಲೆಗಳು ಪತ್ತೆಯಾಗಿವೆ. ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಒಟ್ಟು ಮೌಲ್ಯವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿಂಗಲ್ ಅವರು, ಪಿಜ್ಜಾ ಚೈನ್ ಮಾಲೀಕರ ಆದಾಯ ತೆರಿಗೆ ನೋಟಿಸ್ ಇತ್ಯರ್ಥಕ್ಕೆ 45 ಲಕ್ಷ ರೂ. ಲಂಚ ಕೇಳಿದ್ದರು. ಅದರಂತೆ ಮೊದಲ ಕಂತಿನಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಜೂ.9ರಂದು ಸರ್ವಪಕ್ಷಗಳ ನಿಯೋಗ ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ

  • ಸಂಸಾರ ಸಾಗಿಸೋಕೆ ಸರಗಳ್ಳತನ ಮಾಡಿದ್ದ ಲವರ್ಸ್ ಅರೆಸ್ಟ್!

    ಸಂಸಾರ ಸಾಗಿಸೋಕೆ ಸರಗಳ್ಳತನ ಮಾಡಿದ್ದ ಲವರ್ಸ್ ಅರೆಸ್ಟ್!

    ಚಿಕ್ಕಬಳ್ಳಾಪುರ: ಅವನಿಗೆ ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿಯನ್ನ ಗರ್ಭಿಣಿ ಮಾಡಿ, ಆಕೆ ಜೊತೆ ಕದ್ದು ಮುಚ್ಚಿ ಸಂಸಾರ ನಡೆಸುತ್ತಿದ್ದ. ಈ ವಿಚಾರ ಎರಡು ಮನೆಯ ಕಡೆಯವರಿಗೂ ಗೊತ್ತಾಗಿ, ಇಬ್ಬರೂ ಮನೆ ಬಿಟ್ಟು ಊರೂರು ಅಲೆಯುವಂತಾಗಿತ್ತು. ಹೀಗಾಗಿ ಇಬ್ಬರಿಗೂ ಇರೋಕೆ ನೆಲೆ ಇರಲಿಲ್ಲ. ಇದರಿಂದ ಮನೆ ಬಾಡಿಗೆಗೆ ಪಡೆದು, ಸಂಸಾರ ಸಾಗಿಸೋಕೆ ಹೋಗಿ ಪ್ರೇಮಿಗಳಿಬ್ಬರು ಸರಗಳ್ಳತನ ಮಾಡಿ ಈಗ ಚಿಕ್ಕಬಳ್ಳಾಪುರ (Chikkaballapur) ಪೊಲೀಸರ ಅತಿಥಿಗಳಾಗಿದ್ದಾರೆ.

    ಬಂಧಿತರನ್ನು ಗೌರಿಬಿದನೂರು (Gauribidanur) ತಾಲೂಕಿನ ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Belagavi | ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಹರಿದ ಟ್ಯಾಂಕರ್ – ಮೂವರು ದುರ್ಮರಣ

    ಏನಿದು ಘಟನೆ?
    ಕಳೆದ ಮೇ 26 ರಂದು ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಬಳಿ ನಿರ್ಮಾಣ ಹಂತದ ತೋಟದ ಮನೆಯಲ್ಲಿ ಒಂಟಿಯಾಗಿದ್ದ ಅಂಜನಮ್ಮಳ ಬಾಯಿಗೆ ಬಟ್ಟೆ ತುರುಕಿ ಹಲ್ಲೆ ಮಾಡಿ 50 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ನಂದಿಗಿರಿಧಾಮ ಪೊಲೀಸರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದ ಅಶ್ವಿನಿ ಹಾಗೂ ಗೋವಿಂದರಾಜುನನ್ನು ಬಂಧಿಸಿದ್ದಾರೆ.

    ಅಂದಹಾಗೆ ಗೋವಿಂದರಾಜುಗೆ ಮದುವೆಯಾಗಿ ಮಕ್ಕಳಿದ್ರೂ ತಮ್ಮದೇ ಗ್ರಾಮದ ತಂದೆ ತಾಯಿ ಇಲ್ಲದೆ ಅಜ್ಜಿಯ ಆಸರೆಯಲ್ಲಿದ್ದ ಅಶ್ವಿನಿಯನ್ನ ಪುಸಲಾಯಿಸಿ ಆಕೆಯನ್ನ ಗರ್ಭಿಣಿ ಮಾಡಿದ್ದ. ಹೀಗಾಗಿ ಮನೆಯಲ್ಲಿ ಊರೆಲ್ಲೆಲ್ಲಾ ವಿಚಾರ ಗೊತ್ತಾಗಿ ಊರು ಬಿಟ್ಟು ಬಂದಿದ್ದರು. ವಾಸ ಮಾಡೋಕೆ ಮನೆ ಇರದೇ ಬಾಡಿಗೆಗೆ ಮನೆ ಮಾಡೋಣ ಎಂದು ಯೋಚಿಸಿದ್ದರು. ಆದರೆ ಹಣವಿರದೇ ಬೈಕ್‌ ಒಂದನ್ನು ಕದ್ದಿದ್ದರು. ಅದೇ ಬೈಕ್‌ಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದರು ಎಂದು ತಿಳಿದು ಬಂದಿದೆ.

    ಸರ ಕದ್ದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ದಶ್ಯ ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಿಸಿದ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಗೆಳೆಯ ಲಾಟರಿಯಲ್ಲಿ ಗೆದ್ದ 30 ಕೋಟಿ ರೂ. ಕದ್ದು ಪ್ರಿಯಕರನೊಂದಿಗೆ ಪರಾರಿಯಾದ ಕೇಡಿ ಲೇಡಿ!