Tag: gold suresh

  • Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

    ಯಾರಿಗೂ ಹಣ ಕೊಡಬೇಕಿಲ್ಲ:
    ವಂಚನೆ ಆರೋಪ ಕುರಿತು ಗೋಲ್ಡ್ ಸುರೇಶ್‌ ಮೊದಲ ಬಾರಿಗೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದು ಊಹಾಪೋಹದ ಆರೋಪ. ಅಧಿಕೃತವಾಗಿ ನನ್ನ ಮೇಲೆ‌ ಎಲ್ಲೂ ಎಫ್‌ಐಆರ್ (FIR) ಆಗಿಲ್ಲ. 2018ರಲ್ಲಿ ನನ್ನ ಸ್ನೇಹಿತನ ಮೂಲಕ ಆ ವ್ಯಕ್ತಿ ಪರಿಚಯ ಆಗಿದ್ರು. ಅವರ ಕೆಲಸ ಮಾಡಿಕೊಟ್ಟಿದ್ದೀನಿ. ನಾನು ಯಾರಿಗೂ ಯಾವುದೇ ಹಣ ಕೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

     ದಾಖಲೆ ಇದ್ರೆ ದೂರು ಕೊಡಲಿ:
    ನಾನೊಬ್ಬ ಸಿವಿಲ್ ಕಂಟ್ರ್ಯಾಕ್ಟರ್‌, ಬ್ಯುಸಿನೆಸ್ ಮೆನ್, ಬೇರೆ ಬೇರೆ ವ್ಯವಹಾರ ಮಾಡ್ತಿನಿ. ಅವರ ಹತ್ರ ದಾಖಲೆ ಇದ್ದಿದ್ರೆ, ಈ ಆರೋಪ ಮೊದಲೇ ಮಾಡಬೇಕಿತ್ತು. ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಈಗ್ಯಾಕೆ ಮಾಡ್ತಿದ್ದಾರೆ? ಇದು ನಡೆದಿರೋದು 2018 ರಲ್ಲಿ ಇಷ್ಟು ದಿನ ಏನ್ ಮಾಡ್ತಿದ್ರು? ಅವರ ಹತ್ರ ದಾಖಲೆ ಇದ್ರೆ ಹೋಗಿ ದೂರು ಕೊಡಲಿ, ಕೇಸ್ ಹಾಕಲಿ, ಇದು ದುಡ್ಡಿಗಾಗಿ ಮಾಡಿರೋ ಕೆಲಸ ಅಷ್ಟೇ. ನಾನ್ ಕದ್ದು ಮುಚ್ಚಿ ಓಡಾಡ್ತಿಲ್ಲ, ಎಲ್ಲರಿಗೂ ಪರಿಚಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

    ನಾನು ಸಮಾಜ ಸೇವಕ
    ನಿನ್ನೆ ಬೆಳಗ್ಗೆ ಕಾಲ್ ಮಾಡಿ ದುಡ್ಡು ಕೊಟ್ಟಿಲ್ಲ ಅಂದರೆ ಮಾಧ್ಯಮಕ್ಕೆ ಹೋಗ್ತಿನಿ ಅಂತಾರೆ. ಇದರಿಂದಲೇ ಗೊತ್ತಾಗುತ್ತೆ ಇಂತಹ ಬೆದರಿಕೆಗೆಲ್ಲಾ ನಾನು ಜಗ್ಗಲ್ಲ, ತಲೆನೂ ಕೆಡಿಸಿಕೊಳ್ಳಲ್ಲ. ನಾನು ಸಮಾಜ ಸೇವಕ, ಹಾಗಾಗಿ ತುಂಬಾ ಕೇಳಿಕೊಂಡ್ರು ಅಂತಾ 50 ಸಾವಿರ ಸಹಾಯ ಮಾಡಿದ್ದೀನಿ ಅಷ್ಟೇ. ನಾನ್ ಏನು ಅಂತಾ ನಂಗೆ ಮಾತ್ರ ಗೊತ್ತು, ಕಾಮೆಂಟ್ ಮಾಡೋರಿಗೆಲ್ಲಾ ಉತ್ತರ ಕೊಡಲ್ಲ. ಇದರಲ್ಲಿ ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ. ನಾನು ಈಗಾಗಲೇ ದೂರು ಕೊಟ್ಟಿದ್ದೀನಿ, ಕ್ರಮ ಆಗುತ್ತೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ ಶಂಕೆ – ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ

  • 6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

    6 ಲಕ್ಷ ಹಣ ನೀಡುವಂತೆ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್‌ಗೆ ಬೆದರಿಕೆ – ಎನ್‌ಸಿಆರ್ ದಾಖಲು

    ಬೆಂಗಳೂರು: 6 ಲಕ್ಷ ರೂ. ಹಣ ನೀಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿಯ ವಿರುದ್ಧ ಬಿಗ್‌ಬಾಸ್ (Biggboss) ಖ್ಯಾತಿಯ ಉದ್ಯಮಿ ಗೋಲ್ಡ್ ಸುರೇಶ್ (Gold Suresh), ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    2017ರಲ್ಲಿ ರಾಯಚೂರಿನ ಮಾನ್ವಿಯಲ್ಲಿ ಇಂಟೀರಿಯರ್ ಬ್ಯುಸಿನೆಸ್ ಆರಂಭಿಸಿದ್ದ ಗೋಲ್ಡ್ ಸುರೇಶ್, ಮೈನುದ್ದೀನ್ ಎಂಬಾತನಿಗೆ ಈ ಕೆಲಸದ ಉಸ್ತುವಾರಿ ನೀಡಿದ್ದರು. ಸಣ್ಣಪುಟ್ಟ ಕೆಲಸಗಳು ಬಾಕಿ ಇದ್ರೂ ಮೈನುದ್ದೀನ್‌ಗೆ ಹಣ ಪಾವತಿಸುತ್ತಿದ್ದರು. 2017ರ ನಂತರ ಹಣದ ವ್ಯವಹಾರ ನಿಂತಿರುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಉಸಿರು ಸಿನಿಮಾಗಾಗಿ ಒಂದಾದ ತಿಲಕ್ & ಪ್ರಿಯಾ

    ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಇವರ ಸ್ಟೇಟಸ್ ನೋಡಿ ಮತ್ತೆ ಮೈನುದ್ದೀನ್ ಹಣ ಕೇಳಿದ್ದ. ಕರೆ ಮಾಡೋದು, ಬೆದರಿಕೆ ಹಾಕೋದು ಹಣ ಕೇಳೋದು ಮಾಡ್ತಿದ್ದ. ಇದರಿಂದ ಹೆದರಿದ ಗೋಲ್ಡ್ ಸುರೇಶ್, 50,000 ರೂ. ಹಣ ಟ್ರಾನ್ಸ್ಫರ್ ಮಾಡಿದ್ದರು. ಆ ಬಳಿಕ ಜೀವ ಭಯದಿಂದ ಮೊಬೈಲ್ ನಂಬರ್ ಚೇಂಜ್ ಮಾಡಿ, ಬೇರೆ ಬೇರೆ ಕಡೆ ಓಡಾಡಿದ್ದರು ಎಂದಿದ್ದಾರೆ. ಇದನ್ನೂ ಓದಿ: ‘ಪೆನ್‌ ಡ್ರೈವ್‌’ಗಾಗಿ ಕಿಶನ್ ಜೊತೆ ಜಬರ್ದಸ್ತ್ ಕುಣಿದ ತನಿಷಾ ಕುಪ್ಪಂಡ

    ಮಂಗಳವಾರ ಮತ್ತೆ ಕರೆ ಮಾಡಿದ ಆರೋಪಿ 6 ಲಕ್ಷ ರೂ. ಹಣ ಕೊಡುವಂತೆ ಜೀವ ಬೆದರಿಕೆ ಹಾಕಿದ್ದ. ಜೀವ ಬೆದರಿಕೆ ಹಿನ್ನೆಲೆ ಗೋವಿಂದರಾಜನಗರ ಪೊಲೀಸ್ (Govindarajanagara Police) ಠಾಣೆಗೆ ದೂರು ನೀಡಿದ್ದು, ಪೊಲೀಸರು ಎನ್‌ಸಿಆರ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.

  • ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ

    ರಾಯಚೂರು: ಕನ್ನಡದ ಬಿಗ್‌ಬಾಸ್‌ ಸೀಸನ್ 11ರ (Bigg Boss 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ವಿರುದ್ಧ ಲಕ್ಷ ಲಕ್ಷ ಹಣ ವಂಚನೆ ಆರೋಪ ಕೇಳಿಬಂದಿದೆ. ಕೇಬಲ್‌ ಚಾನೆಲ್‌ ಸೆಟ್‌ಅಪ್‌ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ.

    14 ಲಕ್ಷ ರೂ. ಅಗ್ರೀಮೆಂಟ್, ಹಣ ವಾಪಸ್ ಮಾಡದ ಆರೋಪ
    ಮಾನ್ವಿ ಪಟ್ಟಣದ ಮೈನುದ್ದಿನ್, ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟಅಪ್ (Cable Chanel Setup )ಮಾಡಿಕೊಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ 4 ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ 7 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. 2017ರಲ್ಲಿ ಇಬ್ಬರ ಮಧ್ಯೆ ಒಪ್ಪಂದ ನಡೆದಿತ್ತು. ಆದರೆ, ಆ ಬಳಿಕ ಅರೆಬರೆ ಕೆಲಸ ಮಾಡಿ ಸುರೇಶ್ ಅರ್ಧಕ್ಕೆ ಬಿಟ್ಟರು. ಇದಾದ ಬಳಿಕ 2017ರಲ್ಲೇ 1 ಲಕ್ಷ ರೂ. ಹಣ ವಾಪಸ್‌ ಪಡೆಯಲಾಗಿತ್ತು. ಆ ನಂತರ ಸುರೇಶ್ ನನ್ನ ಮತ್ತು ಸ್ನೇಹಿತನ ಸಂಪರ್ಕಕ್ಕೇ ಸಿಕ್ಕಿರಲಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ. ಇದನ್ನೂ ಓದಿ: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿಕೆ

    ಬಿಗ್‌ಬಾಸ್‌ ಬಳಿಕ ಸುರೇಶ್‌ನನ್ನ ಮೈನುದ್ದಿನ್ ಪತ್ತೆ ಹಚ್ಚಿದ್ದ, ಅದಾದಮೇಲೆ ಮೈನುದ್ದೀನ್‌ ಸ್ನೇಹಿತ ಬಸವರಾಜ್‌ಗೆ ಸುರೇಶ್‌ 50 ಸಾವಿರ ರೂ. ಹಣ ಹಾಕಿದ್ದ. ಆಗಾಗ್ಗೆ ಅಲ್ಪಸ್ವಲ್ಪ ಹಣ ಕೊಟ್ಟಿದ್ದಾರೆ, ಉಳಿದ 4 ಲಕ್ಷ ಹಣ ಕೊಡಿ ಅಂತ ಕೇಳ್ತಿದ್ದೀವಿ. ಕೆಲ ದಿನಗಳ ಹಿಂದೆಯೂ ಮುಂಬೈಗೆ ಬನ್ನಿ ಕೊಡ್ತಿನಿ ಅಂತ ಗೋಲ್ಡ್ ಸುರೇಶ್ ಮುಂಬೈ ಲೊಕೇಶನ್ ಹಾಕಿದ್ದರು ಎಂದು ದೂರಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಕ್ಯಾಂಟರ್ ಡಿಕ್ಕಿ – ಕೆಲಸಕ್ಕೆ ತೆರಳುತ್ತಿದ್ದ ಸ್ನೇಹಿತರು ಬೈಕ್ ಅಪಘಾತದಲ್ಲಿ ದುರ್ಮರಣ

    ಕಾನೂನು ಹೋರಾಟ ಮಾಡ್ತೀನಿ: ಗೋಲ್ಡ್‌ ಸುರೇಶ್‌
    ಇನ್ನೂ ಮೈನುದ್ದೀನ್‌ ಆರೋಪ ತಳ್ಳಿಹಾಕಿರುವ ಗೋಲ್ಡ್‌ ಸುರೇಶ್‌, 2017ರಲ್ಲೇ ಕೇಬಲ್ ಚಾನಲ್ ಮಾಡಿಕೊಟ್ಟಿದ್ದೀನಿ, ಈಗ ಯಾಕೆ ಆರೋಪ ಮಾಡ್ತಿದಾರೆ ಗೊತ್ತಿಲ್ಲ? ಅವರು ಕೇಬಲ್ ಚಾನೆಲ್‌ರನ್ನ ಮಾಡುತ್ತಿದ್ದಾರೆ. ಅವರು ನಮ್ಮ ಜೊತೆ ವ್ಯವಹಾರ ಸರಿಯಾಗಿ ಮಾಡದ ಹಿನ್ನೆಲೆ ಅವರಿಗೆ ಬಾಕಿ ಹಣ ಮರಳಿಸಿದ್ದೇನೆ. 2017ರ ಬಳಿಕ ನಾನು ಮೈನುದ್ದಿನ್‌ನ ಭೇಟಿಯಾಗಿಲ್ಲ. ಬಿಗ್‌ಬಾಸ್ ಮುಗಿದು ಎಷ್ಟು ದಿನ ಆಯ್ತು? ಈಗ ನನ್ನ ಮೇಲೆ ಆರೋಪ ಮಾಡ್ತಿದ್ದಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದುವರಿದ ಮಳೆ – ಕರಾವಳಿಗೆ ಆರೆಂಜ್, ಉತ್ತರ ಒಳನಾಡಿನ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

    ನಾವು 1 ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ವಿ ಅದು ಮುಗಿದೇ ಹೋಗಿದೆ. ರಾಯಚೂರಿನ ಬಸವರಾಜ್ ಎನ್ನುವವರ ಮೂಲಕ ಪರಿಚಯ ಆಗಿದ್ದ. ಬೇರೆಯವರು ನಡೆಸುತ್ತಿದ್ದ ಚಾನಲ್ ಇವರಿಗೆ ಕೊಡಿಸಿದ್ದೆವು. ಆ ಚಾನಲ್ ಸಹ ಬೇರೆಯವರ ಹೆಸರಿನಲ್ಲಿದೆ. ಅವರು ಸಹ ಈಗ ಮುಂದೆ ಬರ್ತಾರೆ. ನಮ್ಮದು 6 ವರೆ ಲಕ್ಷದ ವ್ಯವಹಾರ, ಹಣಕ್ಕೆ ತಕ್ಕಂತೆ ಸ್ಟೂಡಿಯೋ ಎಲ್ಲಾ ಸೆಟ್ ಮಾಡಿಕೊಟ್ಟಿದ್ದೇನೆ. ಸುಮ್ಮನೆ ಆರೋಪ ಮಾಡುತ್ತಿರುವುದರಿಂದ ನಾನು ಕಾನೂನು ಮೊರೆ ಹೋಗ್ತಿನಿ, ಹೋರಾಟ ಮಾಡ್ತಿನಿ ಎಂದು ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಮೊಬೈಲ್‌ನಲ್ಲಿ 13,500 ಅಶ್ಲೀಲ ಚಿತ್ರ – ಫೇಕ್ ಅಕೌಂಟ್‌ನಿಂದ ಮಹಿಳೆಯರ ಮಾನಹಾನಿ ಮಾಡ್ತಿದ್ದ ಕಾಮುಕ ಅರೆಸ್ಟ್

  • ‘ಬಿಗ್ ಬಾಸ್ 11’ರ ಸ್ಪರ್ಧಿ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು- ಅಷ್ಟಕ್ಕೂ ಆಗಿದ್ದೇನು?

    ‘ಬಿಗ್ ಬಾಸ್ 11’ರ ಸ್ಪರ್ಧಿ ಗೋಲ್ಡ್ ಸುರೇಶ್ ಆಸ್ಪತ್ರೆಗೆ ದಾಖಲು- ಅಷ್ಟಕ್ಕೂ ಆಗಿದ್ದೇನು?

    ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ಅವರು ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಸುರೇಶ್ ಇರುವ ವಿಡಿಯೋ ಇದೀಗ ವೈರಲ್ ಆಗಿದೆ. ದೊಡ್ಮನೆಯಲ್ಲಿರುವಾಗಲೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹಿನ್ನೆಲೆ ಇದೀಗ ಅವರು ಆಪರೇಷನ್‌ಗೆ ಒಳಗಾಗಿದ್ದಾರೆ. ಇದನ್ನೂ ಓದಿ:ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಒದ್ದಾಟ- ಆಸ್ಪತ್ರೆಗೆ ದಾಖಲು

    ಗೋಲ್ಡ್ ಸುರೇಶ್ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್‌ನಲ್ಲಿದ್ದಾಗ ಟಾಸ್ಕ್ ನಿರ್ವಹಿಸುವ ಸಮಯದಲ್ಲಿ ಗೋಲ್ಡ್ ಸುರೇಶ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಡ್ರಮ್ ತುಂಬಾ ನೀರು ತುಂಬಿಸಿ ಅದನ್ನು ಹೊರಚೆಲ್ಲದಂತೆ ನೋಡಿಕೊಳ್ಳುವ ಟಾಸ್ಕ್‌ನಲ್ಲಿ ಸುರೇಶ್ ಕಾಲಿಗೆ ಪೆಟ್ಟಾಗಿತ್ತು. ಅವರ ಕಾಲಿಗೆ ಡ್ರಮ್‌ ಬಿದ್ದಿತ್ತು. ಕಾಲು ಮುರಿದೇ ಹೋಯ್ತು ಎಂದು ಗೋಳಾಡಿದ್ದರು. ಸುರೇಶ್ ಅವರ ಈ ಸಂಕಟ ಕಂಡು ಮನೆಮಂದಿ ಕೂಡ ಗಾಬರಿ ಆಗಿದ್ದರು. ಬಳಿಕ ಅವರಿಗೆ ಬಿಗ್ ಬಾಸ್ ಟೀಮ್ ಚಿಕಿತ್ಸೆ ನೀಡಿದ್ದರು.

     

    View this post on Instagram

     

    A post shared by PUBLiC TV (@publictv)


    ಬಳಿಕ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎಂದು ದೊಡ್ಮನೆಯಿಂದ ಸುರೇಶ್ ಹೊರಬಂದಿದ್ದರು. ಆದರೆ ಈಗ ಅಂದು ಆಗಿರುವ ಗಾಯ ಉಲ್ಭಣಗೊಂಡಿದೆ. ಹಾಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆವೊಂದರಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಫೆ.3) ಬೆಳಗ್ಗೆ ಸುರೇಶ್‌ಗೆ ಆಪರೇಷನ್ ಮಾಡಲಾಗಿದೆ. ಆತಂಕಪಡುವ ಅಗತ್ಯವಿಲ್ಲ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, 3 ದಿನಗಳ ಬಳಿಕ ಸುರೇಶ್ ಡಿಸ್ಚಾರ್ಜ್ ಆಗಲಿದ್ದಾರೆ.

  • ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

    ಬೆಂಗಳೂರು: ಬಿಗ್‌ ಬಾಸ್‌ (Bigg Boss) ಸ್ಪರ್ಧಿ ಧನರಾಜ್‌ (Dhanraj Acharya) ಅವರ ಪುತ್ರಿ ಪ್ರಸಿದ್ಧಿಗೆ ಗೋಲ್ಡ್‌ ಸುರೇಶ್‌ (Gold Suresh) ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಧನರಾಜ್‌ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

    ಧನರಾಜ್‌ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ ಸುರೇಶ್‌ ಅವರು ತೊಟ್ಟಿಲನ್ನು ಹಸ್ತಾಂತರ ಮಾಡಿದ್ದಾರೆ.

    ಬಿಗ್‌ ಬಾಸ್‌ನಲ್ಲಿಯಲ್ಲಿದ್ದಾಗ ಗೋಲ್ಡ್‌ ಸುರೇಶ್‌, ಧನರಾಜ್‌, ಹನುಮಂತ ಜೊತೆಯಾಗಿ ಹೆಚ್ಚು ಸಮಯ ಬೆರೆಯುತ್ತಿದ್ದರು. ಹನುಮಂತ (Hanumanthu) ಮತ್ತು ಧನರಾಜ್‌ ಅವರು ಸುರೇಶ್‌ ಅವರನ್ನು “ಮಾವ ಮಾವ” ಎಂದೇ ಕರೆಯುತ್ತಿದ್ದರು. ಇದನ್ನೂ ಓದಿ: BBK 11: ಸೊಸೆ ಹೇಗಿರಬೇಕು ಅಂತ ಸುಳಿವು ಕೊಟ್ಟ ಹನುಮಂತನ ತಾಯಿ

    ಧನರಾಜ್‌ ಮತ್ತು ಸುರೇಶ್‌ ಮಾತುಕತೆಯ ಸಮಯದಲ್ಲಿ ಮಾವನಾಗಿ ನಾನು ನಿನ್ನ ಮಗಳಿಗೆ ತೊಟ್ಟಿಲು ನೀಡುತ್ತೇನೆ ಎಂದು ಹೇಳಿದ್ದರು. ಈ ಮಾತಿನಂತೆ ಗೋಲ್ಡ್‌ ಸುರೇಶ್‌ ಧನರಾಜ್‌ ನಿವಾಸಕ್ಕೆ ಆಗಮಿಸಿ ತೊಟ್ಟಿಲನ್ನು ನೀಡಿದ್ದಾರೆ.‌

    ಬಿಗ್‌ ಬಾಸ್‌ ಮನೆಯಿಂದ ಸುರೇಶ್‌ ಅವರು ದಿಢೀರ್‌ ನಿರ್ಗಮಿಸಿದ್ದರು. 12ನೇ ವಾರದಲ್ಲಿ ನಿರ್ಗಮಿಸಿದ ಸಮಯದಲ್ಲಿ ಹಲವಾರು ಅಂತೆ ಕಂತೆ ಸುದ್ದಿಗಳು ಪ್ರಕಟವಾಗಿತ್ತು. ಈ ಅಂತೆ ಕಂತೆ ಸುದ್ದಿಗಳಿಗೆ ಸುರೇಶ್‌ ಅವರು ಸ್ಪಷ್ಟನೆ ನೀಡಿ ನಾನು ಬಿಗ್‌ ಬಾಸ್‌ ಮನೆಯಿಂದ ನಿರ್ಗಮಿಸಿದ್ದು ಯಾಕೆ ಎಂದು ತಿಳಿಸಿದ್ದರು.

    ನಾನು ಬಿಗ್‌ ಬಾಸ್‌ ಮನೆಗೆ ಹೋದರೆ ನನ್ನ ಬಿಸಿನೆಸ್ ಯಾರಿಗೆ ಬಿಟ್ಟು ಹೋಗಲಿ ಎಂಬ ಯೋಚನೆ ನನಗೆ ಮೊದಲೇ ಬಂದಿತ್ತು. ಈ ಸಂದರ್ಭದಲ್ಲಿ ನನ್ನ ವ್ಯವಹಾರವನ್ನು ಪತ್ನಿಗೆ ಬಿಟ್ಟು ಹೋಗಿದ್ದೆ. ಆದರೆ ಆಕೆಗೆ ಬಿಸಿನೆಸ್ ಅನ್ನು ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ವ್ಯವಹಾರದ ಬಗ್ಗೆ ಜ್ಞಾನನೇ ಇಲ್ಲದಿರುವ ವ್ಯಕ್ತಿಗೆ ನಾನು ವಹಿಸಿ ಬಂದಿದ್ದೆ. ನನ್ನ ಕಂಪನಿಯಲ್ಲಿ ಕೆಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನೇ ಬಿಗ್‌ ಬಾಸ್‌ ಮನೆಯಿಂದ ಹೊರ ಬರಬೇಕಾಯಿತು. ಅದು ಬಿಟ್ಟು ಆತಂಕ ಪಡುವಂತಹದ್ದು ಏನು ಆಗಿಲ್ಲ ಎಂದು ತಿಳಿಸಿದ್ದರು.

     

  • ವ್ಯವಹಾರದಲ್ಲಿ ಲಾಸ್‌ ಆಗಿದ್ದಕ್ಕೆ ಬಿಗ್‌ ಬಾಸ್‌ನಿಂದ ನಿರ್ಗಮಿಸಿದ್ರಾ?: ಗೋಲ್ಡ್‌ ಸುರೇಶ್ ಸ್ಪಷ್ಟನೆ

    ವ್ಯವಹಾರದಲ್ಲಿ ಲಾಸ್‌ ಆಗಿದ್ದಕ್ಕೆ ಬಿಗ್‌ ಬಾಸ್‌ನಿಂದ ನಿರ್ಗಮಿಸಿದ್ರಾ?: ಗೋಲ್ಡ್‌ ಸುರೇಶ್ ಸ್ಪಷ್ಟನೆ

    ಬಿಗ್ ಬಾಸ್ ಕನ್ನಡ 11ರ (Bigg Boss Kannada 11)  ಆಟ ರಂಗೇರಿದೆ. ಕಳೆದ ವಾರಂತ್ಯದಲ್ಲಿ ಶಿಶಿರ್ ಶಾಸ್ತ್ರಿ ಎಲಿಮಿನೇಷನ್ ಬಳಿಕ ಕುಟುಂಬದಲ್ಲಿನ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ (Gold Suresh) ಸಡನ್ ಆಗಿ ಮನೆಯಿಂದ ನಿರ್ಗಮಿಸಿದ್ದರು. ಆದರೆ ಯಾವ ಕಾರಣಕ್ಕೆ ಅವರು ಹೊರಬಂದರು ಎಂಬುದಕ್ಕೆ ಕ್ಲ್ಯಾರಿಟಿ ಸಿಕ್ಕಿರಲಿಲ್ಲ. ಇದೀಗ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.‌

    ನನಗೆ ಬಿಗ್ ಬಾಸ್ ಕಡೆಯಿಂದ ಅವಕಾಶ ಬಂದಾಗ ಮೊದಲೇ ಯೋಚನೆ ನನಗೆ ಶುರುವಾಗಿತ್ತು. ನಾನು ಒಳಗೆ ಹೋದ್ರೆ ನನ್ನ ಬ್ಯುಸಿನೆಸ್ ಯಾರಿಗೆ ಬಿಟ್ಟು ಹೋಗಲಿ ಅಂತ. ಆಗ ನನ್ನ ವ್ಯವಹಾರವನ್ನು ನನ್ನ ಪತ್ನಿಗೆ ಬಿಟ್ಟು ಹೋಗಿದ್ದೆ, ಆದರೆ ಬ್ಯುಸಿನೆಸ್ ಅನ್ನು ಹ್ಯಾಂಡಲ್ ಮಾಡೋಕೆ ಬರಲಿಲ್ಲ. ಅದರ ಬಗ್ಗೆ ಜ್ಞಾನನೇ ಇಲ್ಲದಿರೋ ವ್ಯಕ್ತಿಗೆ ನಾನು ವಹಿಸಿ ಬಂದಿದ್ದೆ, ಅದಕ್ಕೆ ಪತ್ನಿಗೆ ನಿರ್ವಹಿಸಲು ಆಗಿಲ್ಲ. ನನ್ನ ಕಂಪನಿಯಲ್ಲಿ ಕೆಲ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಾನೇ ಹೊರಗೆ ಬರಬೇಕಾಯಿತು. ಅದು ಬಿಟ್ಟು ಆತಂಕ ಪಡುವಂತಹದ್ದು ಏನು ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಮಾಡ್ರನ್ ಡ್ರೆಸ್ ಹಾಕಿದ್ರು ಮಾಂಗಲ್ಯ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಕೀರ್ತಿ ಸುರೇಶ್

    ಈ ವೇಳೆ, ತಂದೆ ಆರೋಗ್ಯದ ಬಗ್ಗೆ ಕೂಡ ಸುರೇಶ್ ಸ್ಪಷ್ಟನೆ ನೀಡಿದರು. ಅಪ್ಪ ಆರೋಗ್ಯವಾಗಿದ್ದಾರೆ. ಅವರಿಗೇನು ಆಗಿಲ್ಲ. ಅವರ ಬಗ್ಗೆ ತಪ್ಪು ಸಂದೇಶ ಯಾರಿಗೂ ಹೋಗಬಾರದು ಅನ್ನೋದು ನನ್ನ ಅಭಿಪ್ರಾಯ. ಯಾರೇ ವ್ಯಕ್ತಿಯ ಸಾವಿನ ಸುದ್ದಿ ಹರಡುತ್ತಿದೆ ಎಂದರೆ ಸತ್ಯ ಯಾವುದು ಸುಳ್ಳು ಯಾವುದು ಎಂದು ಸ್ಪಷ್ಟನೆ ತೆಗೆದುಕೊಳ್ಳಬೇಕು ಎಂದು ಮಾತನಾಡಿದ್ದಾರೆ. ಈ ಮೂಲಕ ತಂದೆ ಆರೋಗ್ಯದ ಬಗ್ಗೆ ಕ್ಲ್ಯಾರಿಟಿ ನೀಡಿದ್ದಾರೆ.

  • ಸೋತು ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ- ಸುರೇಶ್ ನಿರ್ಗಮನದ ಬಗ್ಗೆ ಸುದೀಪ್ ಮಾತು

    ಸೋತು ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ- ಸುರೇಶ್ ನಿರ್ಗಮನದ ಬಗ್ಗೆ ಸುದೀಪ್ ಮಾತು

    ನ್ನಡದ ‘ಬಿಗ್ ಬಾಸ್ ಸೀಸನ್ 11’ರಿಂದ (Bigg Boss Kannada 11) ಗೋಲ್ಡ್ ಮ್ಯಾನ್ ಸುರೇಶ್ (Suresh) ಹೊರಬಂದಿದ್ದಾರೆ. ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ ದೊಡ್ಮನೆಯಿಂದ ನಿರ್ಗಮಿಸಿದ್ದಾರೆ. ಈ ವೇಳೆ, ಸುದೀಪ್ ಮಾತನಾಡಿ, ನೀವು ಸೋತು ಮನೆಯಿಂದ ಹೋಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಸುರೇಶ್ ಕುರಿತು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಕೈಗೆತ್ತಿಕೊಂಡ ‘ಫಾರ್ ರಿಜಿಸ್ಟ್ರೇಷನ್’ ಡೈರೆಕ್ಟರ್

    ನಿನ್ನೆಯ (ಡಿ.16) ಸಂಚಿಕೆಯಲ್ಲಿ ಸುರೇಶ್ ನಿರ್ಗಮನದ ಬಗ್ಗೆ ತೋರಿಸಲಾಗಿದೆ. ಅವರ ಕುಟುಂಬದಲ್ಲಿ ಏನಾಗಿದೆ ಎಂಬುದನ್ನು ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಇಂದು ಈ ಮನೆಯಲ್ಲಿ ಒಬ್ಬರ ಪ್ರಯಾಣ ಮುಕ್ತಾಯಗೊಂಡು, ನಿಮಗೆ ಹಾಗೂ ಈ ಮನೆಗೆ ವಿದಾಯ ಹೇಳಲಿದ್ದಾರೆ. ಈ ಸಂದರ್ಭದಲ್ಲೇ ಒಂದು ಮುಖ್ಯವಾದ ವಿಷಯವನ್ನು ಹೇಳಬೇಕಿದೆ. ಕೆಲ ಸಮಯದ ಹಿಂದೆ `ಬಿಗ್ ಬಾಸ್’ ತಂಡಕ್ಕೆ ಒಂದು ಸಂದೇಶ ತಲುಪಿದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.

    ಸ್ಪರ್ಧಿಯೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಈ ಮನೆಗಿಂತ, ಅವರ ಸ್ವಗೃಹದಲ್ಲಿ, ಅವರ ಕುಟುಂಬ ಸದಸ್ಯರಿಗೆ ಹೆಚ್ಚು ಅವಶ್ಯಕತೆ ಇದೆ. ಸುರೇಶ್, ಈ ಮನೆಗಿಂತ ನಿಮ್ಮ ಸ್ವಗೃಹದಲ್ಲಿ ನಿಮ್ಮ ಉಪಸ್ಥಿತಿ ಬಹಳ ಮುಖ್ಯ ಎಂದು ಬಿಗ್ ಬಾಸ್ ಹೇಳಿದರು. ಆಗ ಸುರೇಶ್ ಗಾಬರಿಯಿಂದ, ಏನು ಕಾರಣ ತಿಳಿಸಿ ಎಂದು ಕೇಳಿಕೊಂಡರು.

    ಬಳಿಕ ದೊಡ್ಮನೆಯ ಟಿವಿ ಪರದೆ ಮೇಲೆ ಸುದೀಪ್ ಅವರು ಕಾಣಿಸಿಕೊಂಡರು.ಸುರೇಶ್, ಗಾಬರಿ ಆಗುವಂತಹದ್ದು ಏನಿಲ್ಲ. ಆದರೆ ತಾವು ಮನೆಗೆ ಹೋಗಲೇಬೇಕಾದ ಸಂದರ್ಭ. ನಿಮ್ಮನ್ನು ಕಳುಹಿಸಿಕೊಡಬೇಕು ನಾವು. ನಿಮ್ಮ ಕುಟುಂಬಕ್ಕೆ ನಿಮ್ಮ ಅವಶ್ಯಕತೆ ಇದೆ. ನೀವು ಇಲ್ಲಿದ್ದಷ್ಟು ವಾರಗಳು ತುಂಬ ಮನರಂಜನೆ ನೀಡಿದ್ದೀರಿ. ನಿಮ್ಮ ಇನ್ನೊಂದು ಸೈಡ್ ಏನು ಅಂತ ಜನರಿಗೆ ತೋರಿಸಿಕೊಟ್ಟಿದ್ದೀರಿ. ಒಂದು ಕ್ಯಾಪ್ಟನ್ ಆಗಿ ಮನೆಯಿಂದ ಆಚೆ ಹೋಗುತ್ತಿದ್ದೀರಿ. ಸೋತು ಹೊಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಹೇಳುತ್ತಾ, ಬಿಗ್ ಬಾಸ್ ಮನೆಯಲ್ಲಿ ಖಂಡಿತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸುರೇಶ್. ನಿಮಗೆ ಧನ್ಯವಾದಗಳು ಎಂದು ಸುದೀಪ್ ಹೇಳಿದ್ದಾರೆ. ಇನ್ನೂ ಅವರ ನಿರ್ಗಮನದ ಬಗ್ಗೆ ಅಸಲಿ ವಿಚಾರ ಏನೆಂಬುದು ಹೊರ ಬೀಳುತ್ತಾ? ಎಂದು ಕಾದುನೋಡಬೇಕಿದೆ.

  • ನಾನಿನ್ನೂ ಜೀವಂತವಾಗಿದ್ದೇನೆ – ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ

    ನಾನಿನ್ನೂ ಜೀವಂತವಾಗಿದ್ದೇನೆ – ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ

    ಚಿಕ್ಕೋಡಿ: ಬಿಗ್ ಬಾಸ್ ಸೀಸನ್ 11ರ (Bigg Boss Kannada 11) ಸ್ಪರ್ಧಿ ಗೋಲ್ಡ್ ಸುರೇಶ್ (Gold Suresh) ದಿಢೀರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ವಿಚಾರದಿಂದ ಹಬ್ಬಿದ್ದ ವದಂತಿಗಳಿಗೆ ತೆರೆಬಿದ್ದಿದೆ.

    ಬೆಳಗಾವಿಯ ಅಥಣಿ ತಾಲೂಕಿನ ಪಾರ್ಥನಹಳ್ಳಿಯ ನಿವಾಸಿ ಗೋಲ್ಡ್ ಸುರೇಶ್ ಬಿಗ್ ಬಾಸ್‍ನಲ್ಲಿ ಅತ್ಯಂತ ಪ್ರಬಲ ಸ್ಪರ್ಧಿಯಾಗಿದ್ದರು. ಈ ವಾರ ಕ್ಯಾಪ್ಟನ್ ಸಹ ಆಗಿದ್ದರು. ಆದರೆ ಗೋಲ್ಡ್ ಸುರೇಶ್ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದಿದ್ದಾರೆ. ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದ್ದು, ಅವರ ಅವಶ್ಯಕತೆ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚು ಅಗತ್ಯವಿದೆ. ಗೋಲ್ಡ್ ಸುರೇಶ್ ಹೆಚ್ಚು ತಡ ಮಾಡದೇ ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಹೊರಗೆ ಬನ್ನಿ ಎಂದು ಬಿಗ್ ಬಾಸ್ ಆದೇಶಿಸಿತ್ತು.

    ಈ ವಿಚಾರ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಗೋಲ್ಡ್ ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಲಾಗಿತ್ತು. ಈ ಬಗ್ಗೆ ಸುರೇಶ್ ತಂದೆ ಶಿವಗೌಡ ಪ್ರತಿಕ್ರಿಯೆ ನೀಡಿದ್ದು, ನನ್ನ ಕಾಲಿಗೆ ನೋವಾಗಿದೆ. ನಾನು ಸತ್ತಿಲ್ಲ, ಆ ರೀತಿ ವದಂತಿ ಹಬ್ಬಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಬಿಗ್ ಬಾಸ್‍ನಲ್ಲಿ ನನ್ನ ಮಗ ಒಳ್ಳೆಯ ಆಟ ಆಡುತ್ತಿದ್ದಾನೆ. ಉತ್ತರ ಕರ್ನಾಟಕದ ಹೆಸರು ಗಳಿಸುತ್ತಾನೆ ಎಂದಿದ್ದಾರೆ.

    ಒಟ್ಟಿನಲ್ಲಿ ಸುಳ್ಳು ವದಂತಿಯಿಂದ ಸುರೇಶ್ ಬಿಗ್ ಬಾಸ್‍ನಿಂದ ಹೊರಗಡೆ ಬಂದಿದ್ದಾರೆ. ಅವರಿಗೆ ಬಿಗ್ ಬಾಸ್ ಮತ್ತೊಂದು ಕೊನೆಯ ಅವಕಾಶ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.

  • BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) ಆಟ ಶುರುವಾಗಿ 55 ದಿನಗಳನ್ನು ಪೂರೈಸಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ಮೇಲೆ ಆಟ ಮತ್ತಷ್ಟು ರೋಚಕವಾಗಿದೆ. ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದ ಬಳಸಿದ್ದ ರಜತ್ ಕಿಶನ್‌ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸುದೀಪ್ ಅವರು ರಜತ್‌ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ನಿಮ್ಮೆಲ್ಲರಿಗೂ ತೂಕಗಳಿವೆ ಎಂದ ಸುದೀಪ್ (Sudeep) ಮಾತಿಗೆ ಸುರೇಶ್ ಅವರು ಎದೆಗೆ ಕೊಟ್ರೋ ಅದನ್ನು ನನಗೆ ತಡೆದುಕೊಳ್ಳಲು ಆಗಲಿಲ್ಲ. ಆ ಪದಗಳೆಲ್ಲವೂ ಮಾತಿನ ಭರದಲ್ಲಿ ಬಂತು ಎಂದು ರಜತ್ ಸಮಜಾಯಿಸಿ ಕೊಡುತ್ತಾರೆ.

    ನನಗೆ ಕೋಪ ಬಂದಾಗ ಇಂತಹದ್ದೇ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರಶ್ನೆ ಮಾಡಿದರು. ಇದನ್ನೂ ಓದಿ:‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

    ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು ನಗುತ್ತಾ, ಮುಂದೆ ತಪ್ಪು ಆದರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಕಡೆಯದಾಗಿ ರಜತ್‌ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.

    ನ.20ರ ಎಪಿಸೋಡ್‌ನಲ್ಲಿ ಟಾಸ್ಕ್ ಆಡುವಾಗ ಬೀಪ್ ಪದಗಳನ್ನೇ ಸುರೇಶ್‌ಗೆ ಬಳಕೆ ಮಾಡಿದರು. ರಜತ್ ಆಡಿದ ಮಾತಿಗೆ ಸುರೇಶ್ ಬಿಗ್ ಬಾಸ್ ಆಟವನ್ನು ಕ್ವೀಟ್ ಮಾಡುತ್ತೇನೆ. ಇಲ್ಲಿಂದ ನನ್ನನ್ನು ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಇಂದು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ರಜತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ಅವಾಚ್ಯ ಪದ ಬಳಸಿದ ರಜತ್‌ಗೆ ಕಳಪೆ ಪಟ್ಟ- ಇನ್ಮುಂದೆ ಆಟ ಶುರು ಎಂದ ಸ್ಪರ್ಧಿ

    BBK 11: ಅವಾಚ್ಯ ಪದ ಬಳಸಿದ ರಜತ್‌ಗೆ ಕಳಪೆ ಪಟ್ಟ- ಇನ್ಮುಂದೆ ಆಟ ಶುರು ಎಂದ ಸ್ಪರ್ಧಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಶೋಭಾ ಮತ್ತು ರಜತ್ ಹಾವಳಿ ಜೋರಾಗಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಜತ್ ಕಿಶನ್‌ಗೆ (Rajath Kishen) ಕಳಪೆ ಪಟ್ಟ ಸಿಕ್ಕಿದೆ. ಅದಕ್ಕೆ ಗರಂ ಆಗಿರುವ ರಜತ್, ಇನ್ಮುಂದೆ ಅಸಲಿ ಶುರು ಅಂತ ಸವಾಲೆಸೆದಿದ್ದಾರೆ. ಇದನ್ನೂ ಓದಿ:ಸರಳವಾಗಿ ನಡೆಯಿತು ರಕ್ಷಿತಾ ಪ್ರೇಮ್ ಸಹೋದರನ ನಿಶ್ಚಿತಾರ್ಥ

    ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ. ರಜತ್ ಆಟಕ್ಕೆ ಆಡುವ ಮಾತಿಗೆ ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿದೆ. ಈ ವಾರದ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನ ಆಡಿದವರಿಗೆ ಹೆಸರನ್ನು ಸೂಚಿಸಲು ಎಂದಿನಂತೆ ಬಿಗ್ ಬಾಸ್ ಸೂಚಿಸಿದರು. ಅದರಂತೆ ಇಡೀ ಮನೆ ಮಂದಿ ರಜತ್ ಹೆಸರನ್ನು ಹೇಳಿದ್ದಾರೆ.

    ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಕೊಟ್ಟು ರಜತ್‌ಗೆ ಕಳಪೆ ಪಟ್ಟ ನೀಡಿದ್ದಾರೆ. ಇದು ರಜತ್‌ಗೆ ಕೋಪಕ್ಕೆ ಕಾರಣವಾಗಿದೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ. ಬಿಗ್ ಬಾಸ್ ಆಟ ಗೆಲ್ಲೋದು. ಹುಟ್ಟಿದಾಗನಿಂದಲೂ ಹೀಗೆ ಇದ್ದೀನಿ. ಇನ್ಮುಂದೆ ಕೂಡ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಇನ್ಮುಂದೆ ನಿಜವಾದ ಆಟ ಶುರು ಎಂದು ರಜತ್ ಮನೆ ಮಂದಿಗೆ ಸವಾಲೆಸೆದಿದ್ದಾರೆ.

    ಇನ್ನೂ ನ.20ರ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಕಿರಿಕ್ ಆಗಿದೆ. ಈ ವೇಳೆ, ಅವಾಚ್ಯ ಶಬ್ಧಗಳಿಂದ ಸುರೇಶ್‌ಗೆ ರಜತ್ ನಿಂದಿಸಿದ್ದಾರೆ. ಇದರಿಂದ ಸುರೇಶ್‌ಗೆ ಬೇಸರವಾಗಿತ್ತು. ಬಿಗ್ ಬಾಸ್‌ನಿಂದ ಹೊರ ಹೋಗಲು ಅವರು ಬಿಗ್ ಬಾಸ್‌ಗೆ ಮನವಿ ಮಾಡಿದರು.