Tag: gold ring

  • ನಕಲಿ ನಾಗಸಾಧುವಿನಿಂದ ಕಾರು ಚಾಲಕನಿಗೆ ಮಂಕುಬೂದಿ – ರುದ್ರಾಕ್ಷಿ ಕೊಟ್ಟು ಉಂಗುರ ಕಸಿದು ಎಸ್ಕೇಪ್!

    ನಕಲಿ ನಾಗಸಾಧುವಿನಿಂದ ಕಾರು ಚಾಲಕನಿಗೆ ಮಂಕುಬೂದಿ – ರುದ್ರಾಕ್ಷಿ ಕೊಟ್ಟು ಉಂಗುರ ಕಸಿದು ಎಸ್ಕೇಪ್!

    ಬೆಂಗಳೂರು: ನಕಲಿ ನಾಗಸಾಧುವೊಬ್ಬ (Fake Naga Sadhu) ಕಾರು ಚಾಲಕನಿಗೆ ಮಂಕುಬೂದಿ ಎರಚಿರೊ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ. ಚಾಲಕನಿಗೆ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರ (Gold Ring) ಕಸಿದು ಪರಾರಿಯಾಗಿದ್ದಾನೆ.

    ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಇದೇ ಏ.19ರಂದು ಖಾಸಗಿ ಹೋಟೆಲ್ ಬಳಿ ಮಾಲೀಕರನ್ನ ಡ್ರಾಪ್ ಮಾಡಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿದ್ದಾನೆ. ನಂತ್ರ ತನ್ನ ಅಸಲಿ ವರಸೆ ತೆಗೆದಿದ್ದಾನೆ. ಇದನ್ನೂ ಓದಿ: ಮೇ 7ರಿಂದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭ

    ಸಾಂದರ್ಭಿಕ ಚಿತ್ರ

    ಚಾಲಕನಿಗೆ 5 ರುದ್ರಾಕ್ಷಿ (Rudraksha) ಕೊಟ್ಟು ಒಂದು ವಾಪಸ್ಸು ಕೂಡುವಂತೆ ಹೇಳಿದ್ದ. ವಾಪಸ್‌ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಓಪನ್ ಮಾಡಿದ್ದ. ಈ ವೇಳೆ ರುದ್ರಾಕ್ಷಿ ಹೂ ಆಗಿ ಬದಲಾಗಿತ್ತು. ನೋಡು ಇದು ಶುಭ ಸೂಚಕ ನಿನಗೆ ಒಳ್ಳೆಯದಾಗುತ್ತೆ ಲಕ್ಷ್ಮಿ ಕೃಪಾಕಟಾಕ್ಷವಾಗುತ್ತೆ ಅಂತ ರೈಲುಬಿಟ್ಟಿದ್ದಾನೆ. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

    ನಂತ್ರ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು ಅಂತ ಹೇಳಿದ್ದಾನೆ. ಚಿನ್ನದ ಉಂಗುರ ಬಿಚ್ಚಿ ಕೊಡುತ್ತಿದ್ದಂತೆ ಹಣೆಗೆ ಬೂದಿ ರೀತಿಯ ವಸ್ತುವನ್ನು ಹಚ್ಚಿದ್ದಾನೆ. ಹಿಂದೆ ತಿರುಗಿ ನೋಡದೇ ಸ್ವಲ್ಪ ಮುಂದೆ ಹೋಗು ಇಲ್ಲದಿದ್ರೆ ನಿನಗೆ ಕೆಡುಕಾಗುತ್ತದೆ ಅಂತ ಹೇಳಿದ್ದಾನೆ. ಆತನ ಮಾತು ಕೇಳಿ ಮಂಕುಬಡಿದಂತಾದ ವೆಂಕಟಕೃಷ್ಣಯ್ಯ ಮುಂದೆ ಬಂದಿದ್ದಾನೆ. ಬಳಿಕ ನಕಲಿ ನಾಗಸಾಧು ಅಲ್ಲಿಂದ ಮಾಯವಾಗಿದ್ದಾನೆ.

    ಬಳಿಕ ಮನೆಯವರಿಗೆ ವಿಚಾರ ತಿಳಿಸಿದ ವೆಂಕಟಕೃಷ್ಣಯ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ (High Grounds Police Station) ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ನಾಗಸಾಧುಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್‌’ ಅಂತ ಕೂಗಿದ ಜಿಪ್‌ಲೈನ್‌ ಆಪರೇಟರ್‌

  • ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿಯನ್ನೇ ಮುಗಿಸಿದ ಪತ್ನಿ!

    ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿಯನ್ನೇ ಮುಗಿಸಿದ ಪತ್ನಿ!

    ಲಕ್ನೋ: ಮದುವೆ ಉಡುಗೊರೆಗೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆಯೊಂದು ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.

    ಮೃತನನನು ಚಂದ್ರಪ್ರಕಾಶ್‌ (35) ಎಂದು ಗುರುತಿಸಲಾಗಿದೆ. ಈತನನ್ನು ಪತ್ನಿ ಚಾಬಿ ತನ್ನ ಸಹೋದರರ ಸಹಾಯದಿಂದ ಕೊಲೆ ಮಾಡಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.

    ನಡೆದಿದ್ದೇನು?: ಚಂದ್ರಪ್ರಕಾಶ್‌ ಸಹೋದರಿಗೆ ಮದುವೆ ನಿಗದಿಯಾಗಿತ್ತು. ಅಂತೆಯೇ ಏಪ್ರಿಲ್‌ 26 ರಂದು ಮದುವೆ ಕಾರ್ಯಕ್ರಮ ನಡೆಯುವುದಿತ್ತು. ಹೀಗಾಗಿ ಸಹೋದರಿಗೆ ಏನಾದರೂ ಗಿಫ್ಟ್‌ ಕೊಡಬೇಕು ಎಂದು ಯೋಚಿಸುತ್ತಿರುವಾಗ ಚಂದ್ರಶೇಖರ್‌ಗೆ ಚಿನ್ನದ ಉಂಗುರ ಮತ್ತು ಟಿವಿ ಕೊಡಿಸುವ ಯೋಚನೆ ಬಂತು. ಅಂತೆಯೇ ಈ ವಿಚಾರವನ್ನು ಪತ್ನಿಯ ಮುಂದೆ ಪ್ರಸ್ತಾಪಿಸಿದ್ದಾನೆ. ಇದನ್ನೂ ಓದಿ; 6 ವರ್ಷದ ಮಗಳ ಮುಂದೆಯೇ ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ!

    ಈ ವೇಳೆ ಪತಿಯ ನಿರ್ಧಾರಕ್ಕೆ ಪತ್ನಿ ಚಾಬಿ ವಿರೋಧ ವ್ಯಕ್ತಪಡಿಸಿದ್ದಾಳೆ. ಅಲ್ಲದೇ ಇದೇ ವಿಚಾರವಾಗಿ ಪತಿ- ಪತ್ನಿಯ ನಡುವೆ ವಾಗ್ವಾದವೂ ನಡೆದಿದೆ. ಆದರೆ ಚಂದ್ರಶೇಖರ್‌ ಈ ಎರಡು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳುತ್ತಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಪತ್ನಿ ಚಾಬಿ ತನ್ನ ಸಹೋದರರಿಗೆ ಈ ವಿಷಯ ಮುಟ್ಟಿಸುತ್ತಾಳೆ. ಅಲ್ಲದೇ ಪತಿಗೆ ತಕ್ಕ ಬುದ್ಧಿ ಕಲಿಸುವಂತೆ ಹೇಳುತ್ತಾಳೆ.

    ಸಹೋದರಿ ಚಾಬಿ ಮಾತು ಕೇಳಿ ಮನೆಗೆ ಬಂದು ಚಂದ್ರಶೇಖರ್‌ಗೆ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಥಳಿಸಿದ್ದರಿಂದ ಗಂಭೀರ ಗಾಯಗೊಂಡು ಚಂದ್ರಶೇಕರ್‌ ಕುಸಿದು ಬಿದ್ದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಚಂದ್ರಶೇಖರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಸದೇ ಚಂದ್ರಶೇಖರ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ.

    ಇತ್ತ ಪ್ರಕರಣ ಸಂಬಂಧ ಚಾಬಿ ಮತ್ತು ಆಕೆಯ ಸಹೋದರರು ಸೇರಿದಂತೆ ಐವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

  • ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

    ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

    ಚೆನ್ನೈ : ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹುಟ್ಟುಹಬ್ಬದ(Birthday) ಪ್ರಯುಕ್ತ ತಮಿಳುನಾಡಿನ(Tamil Nadu) ಬಿಜೆಪಿ(BJP) ನಾಳೆ ಹುಟ್ಟುವ ಮಕ್ಕಳಿಗೆ(Children) ಚಿನ್ನದ ಉಂಗುರವನ್ನು(Gold Ring) ನೀಡುವುದಾಗಿ ಘೋಷಿಸಿದೆ. ಮಾತ್ರವಲ್ಲದೇ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಹಿನ್ನೆಲೆ 720 ಕೆ.ಜಿ ಯಷ್ಟು ಮೀನನ್ನು ವಿತರಿಸುವುದಾಗಿ ತಿಳಿಸಿದೆ.

    ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರವನ್ನು ನೀಡಲು ಪಕ್ಷ ನಗರದ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದೆ. ಮಕ್ಕಳಿಗೆ ನೀಡಲಾಗುವ ಪ್ರತಿ ಉಂಗುರ 2 ಗ್ರಾಂ. ನಷ್ಟು ತೂಗುತ್ತದೆ. ಇದು ಕೊಡುಗೆಯಲ್ಲ, ಬದಲಿಗೆ ಮಕ್ಕಳನ್ನು ಜಗತ್ತಿಗೆ ಸ್ವಾಗತಿಸುವ ಉದ್ದೇಶವಾಗಿದೆ ಎಂದು ಸಚಿವ ಎಲ್ ಮುರುಗನ್ ತಿಳಿಸಿದ್ದಾರೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

    bjP

    ವರದಿಗಳ ಪ್ರಕಾರ ಸೆಪ್ಟೆಂಬರ್ 17ರಂದು ಆರ್‌ಎಸ್‌ಆರ್‌ಎಂ ಆಸ್ಪತ್ರೆಯಲ್ಲಿ 10 ರಿಂದ 17 ಮಕ್ಕಳು ಜನಿಸುವ ನಿರೀಕ್ಷೆಯಿದೆ.

    ಮೀನು ವಿತರಣೆಯ ಬಗ್ಗೆ ಮಾತನಾಡಿದ ಅವರು, ಎಂ.ಕೆ ಸ್ಟಾಲಿನ್ ಅವರ ಕ್ಷೇತ್ರವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಮೀನಿನ ಸೇವನೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ನರೇಂದ್ರ ಮೋದಿ ಅವರಿಗೆ 72 ವರ್ಷವಾಗುವುದರಿಂದ 720 ಕೆ.ಜಿ ಮೀನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ

    ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗ್ರಾಮೀಣ ಪ್ರದೇಶದ ಬಡ SSLC ಟಾಪರ್ಸ್‍ಗೆ ಚಿನ್ನದ ಉಂಗುರ ಕೊಟ್ಟ ನಾಟಿ ವೈದ್ಯ

    ಗ್ರಾಮೀಣ ಪ್ರದೇಶದ ಬಡ SSLC ಟಾಪರ್ಸ್‍ಗೆ ಚಿನ್ನದ ಉಂಗುರ ಕೊಟ್ಟ ನಾಟಿ ವೈದ್ಯ

    ನೆಲಮಂಗಲ: ಗ್ರಾಮೀಣ ಭಾಗದ ಶಾಲೆಯ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಂದೆ-ತಾಯಿ ಹೆಸರಲ್ಲಿ ವಿದ್ಯಾರ್ಥಿಗಳಿಗೆ ನಾಟಿ ವೈದ್ಯ ರವಿಕುಮಾರ್‌ ಚಿನ್ನದ ಉಂಗುರ ಕೊಟ್ಟಿದ್ದಾರೆ.

    ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಸರ್ಕಾರಿ ಪ್ರೌಢಶಾಲೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ಸ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಮೂರು ವಿದ್ಯಾರ್ಥಿಗಳಿಗೆ ಚಿನ್ನದ ಉಂಗುರಗಳನ್ನು ಪ್ರತಿಭಾ ಪುರಸ್ಕಾರವಾಗಿ ನೀಡಲಾಯಿತು. ಭಟ್ಟರಹಳ್ಳಿ ಗ್ರಾಮದ ನಾಟಿ ವೈದ್ಯ ಗಂಗಣ್ಣ ಅವರು ನಿರ್ಮಿಸಿ ಸರ್ಕಾರಕ್ಕೆ ಬಿಟ್ಟುಕೊಟ್ಟ ಸೋಲದೇವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿ ವರ್ಷವು ಒಬ್ಬ ವಿದ್ಯಾರ್ಥಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿತ್ತು. ಇದನ್ನೂ ಓದಿ:  ಬೆಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳ ನೇಮಕ 

    ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣ ಕಾರ್ಯಕ್ರಮ ಮುಂದೂಡಿದ್ದು, ಈಗ ಮೂರು ಸಾಲಿನ ಒಬ್ಬೊಬ್ಬ ವಿದ್ಯಾರ್ಥಿಗೆ ಚಿನ್ನದ ಉಂಗುರ ನೀಡಿದ ರವಿಕುಮಾರ್ ತನ್ನ ತಂದೆ-ತಾಯಿಯ ಕೆಲಸವನ್ನು ಮುಂದುವರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮಯ್ಯ ಸೇರಿದಂತೆ ಶಾಲೆಯ ಉಪನ್ಯಾಸಕ ವೃಂದ ಹಾಗೂ ಗ್ರಾಮ ಪಂಚಾಯಿತಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು.

  • ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

    ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

    ಚೆನ್ನೈ: ತಮಿಳುನಟ ವಿಜಯ್ ಅವರು ತಮ್ಮ ‘ಬಿಗಿಲ್’ ಚಿತ್ರತಂಡಕ್ಕೆ ಒಟ್ಟು 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ.

    ವಿಜಯ್ ತಮ್ಮ ಬಹುನಿರೀಕ್ಷಿತ ಬಿಗಿಲ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಚಿತ್ರತಂಡಕ್ಕೆ 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷ ಅಂದರೆ ಚಿನ್ನದ ಉಂಗುರದ ಮೇಲೆ ಬಿಗಿಲ್ ಎಂದು ಬರೆಯಲಾಗಿದೆ.

    ಚಿತ್ರತಂಡಕ್ಕೆ ವಿಜಯ್ ಚಿನ್ನದ ಉಂಗುರವನ್ನು ಹಂಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಜಯ್ ಅವರ ಈ ಕೆಲಸ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಗಿಲ್ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಉಂಗುರವನ್ನು ನೀಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಮಂಗಳವಾರ ಬಿಗಿಲ್ ಚಿತ್ರದ ಚಿತ್ರೀಕರಣ ಮುಗಿದಿದೆ. ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಈಗ ಎರಡು ದಿನದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದ್ದು, ಇದೇ ವರ್ಷ ಅಕ್ಟೋಬರ್ 27ರಂದು ಚಿತ್ರ ಬಿಡುಗಡೆ ಆಗಲಿದೆ.

    ಈ ಚಿತ್ರದಲ್ಲಿ ವಿಜಯ್ ಸೇರಿದಂತೆ ನಟಿ ನಯನತಾರಾ, ಜಾಕಿ ಶ್ರಾಫ್, ವಿವೇಕ್ ಡೇನಿಯಲ್ ಬಾಲಾಜಿ, ಆನಂದ್‍ರಾಜ್, ಇಂದುಜಾ ರವಿಚಂದ್ರನ್, ವರ್ಷ ಬೋಲಮ್ಮ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    https://twitter.com/ActorAATHMA/status/1161279624904663043?ref_src=twsrc%5Etfw%7Ctwcamp%5Etweetembed%7Ctwterm%5E1161279624904663043&ref_url=https%3A%2F%2Fwww.timesnownews.com%2Fentertainment%2Fsouth-gossip%2Farticle%2Fviral-video-thalapathy-vijay-is-winning-the-internet-as-he-surprises-team-bigil-by-gifting-400-gold-rings%2F468727

  • ಪ್ರಧಾನಿ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಸಿಕ್ತು ಗಿಫ್ಟ್!

    ಪ್ರಧಾನಿ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಸಿಕ್ತು ಗಿಫ್ಟ್!

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ 68ನೇ ಹುಟ್ಟುಹಬ್ಬದಂದು ಹುಟ್ಟಿದ ಮಗುವಿಗೆ ಬಿಜೆಪಿ ಚಿನ್ನದ ಉಂಗುರವನ್ನು ಗಿಫ್ಟ್ ಮಾಡಿದೆ.

    ತಮಿಳುನಾಡಿನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥೆ ತಮಿಳಿಸಾಯಿ ಸೌಂದರರಾಜನರ್ ಅವರು ಮಗುವಿಗೆ ಉಂಗುರ ನೀಡಿದ್ದಾರೆ. ಈ ಮೂಲಕ ಬಿಜೆಪಿ ಪ್ರಧಾನಿಯವರನ್ನು ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದ್ದಾರೆ.

    ಸೌಂದರರಾಜನ್ ಅವರು ಆರೋಗ್ಯ ಕೇಂದ್ರದಲ್ಲಿ ಹುಟ್ಟಿದ ಉಳಿದ ಮಕ್ಕಳಿಗೂ ಬಹುಮಾನವನ್ನು ನೀಡಿದ್ದಾರೆ. ಮುಂದಿನ ಸೋಮವಾರ(ಮೋದಿ ಹುಟ್ಟುಹಬ್ಬ)ದಂದು ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವುದಾಗಿ ರಾಜ್ಯ ಬಿಜೆಪಿ ಘಟಕ ಮೊದಲೇ ಘೋಷಣೆ ಮಾಡಿತ್ತು. ಆದ್ರೆ ಸೋಮವಾರ ಒಂದು ಮಗು ಮಾತ್ರ ಹುಟ್ಟಿತ್ತು. ಹೀಗಾಗಿ ಆ ಮಗುವಿಗೆ ಚಿನ್ನದ ಉಂಗುರವನ್ನು ಗಿಫ್ಟ್ ಮಾಡಿದೆ.

    ಬಳಿಕ ಮಾಧ್ಯಮಕ್ಕೆ ಪತ್ರಿಕ್ರಿಯಿಸಿದ ಅವರು, ಸೋಮವಾರ ಹುಟ್ಟಿದ ಮಗುವಿಗೆ ನಾನು ಚಿನ್ನದ ಉಂಗುರವನ್ನು ಈಗಾಗಲೇ ಉಡುಗೊರೆಯಾಗಿ ನೀಡಿದ್ದೇನೆ. ಅಲ್ಲದೇ ಇದರ ಜೊತೆ 17-18 ದಿನಗಳ ಹಿಂದೆ ಹುಟ್ಟಿದ ಮಕ್ಕಳಿಗೂ ಗಿಫ್ಟ್ ಪ್ಯಾಕ್ ಕೊಟ್ಟಿದ್ದೇವೆ ಅಂತ ಹೇಳಿದ್ರು.

    ಅಸ್ಸಾಂನಲ್ಲೂ ಮೋದಿ ಜೀ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದ್ದು, ಬಿಜೆಪಿ ವಕ್ತಾರ ಪ್ರಮೋದ್ ಸ್ವಾಮಿ ಅವರು ಗುವಾಹಟಿಯ ಹೈಸ್ಕೂಲ್ ನಲ್ಲಿ 8ನೇ ತರಗತಿಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನ ಮಾಡುವ ಮೂಲಕ ಆಚರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv