Tag: Gold Mask

  • 5.7 ಲಕ್ಷ ಕೊಟ್ಟು ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ – ಫೋಟೋ ವೈರಲ್

    5.7 ಲಕ್ಷ ಕೊಟ್ಟು ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ – ಫೋಟೋ ವೈರಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉದ್ಯಮಿಯೊಬ್ಬರು ದುಬಾರಿ ಬೆಲೆಯ ಚಿನ್ನದ ಮಾಸ್ಕ್ ಅನ್ನು ಖರೀದಿಸಿದ್ದಾರೆ.

    ಕೋವಿಡ್-19 ಇನ್ನೂ ಮುಗಿಯದ ಕಾರಣ ನಮ್ಮ ದೈನಂದಿನ ಜೀವನದಲ್ಲಿ ಮಾಸ್ಕ್ ಅಗತ್ಯವಾಗಿದೆ. ಆದರೆ ಜನರು ಮಾಸ್ಕ್‌ನಲ್ಲಿ ಕೂಡ ಟ್ರೆಂಡಿ ಹಾಗೂ ಫ್ಯಾಷನ್ ಅನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?: ಬಿಜೆಪಿ ಟ್ವೀಟ್ ವಾರ್

    ಸದ್ಯ ಆಭರಣದ ತಯಾರಕ ಚಂದನ್‍ದಾಸ್ ಎಂಬವರು ಚಿನ್ನದ ಮಾಸ್ಕ್ ತಯಾರಿಸಿದ್ದಾರೆ. ಕೇವಲ 15 ದಿನಗಳಲ್ಲಿ ಸ್ಥಳೀಯ ಉದ್ಯಮಿಗಳೊಂದಿಗೆ ಸೇರಿ ಚಂದನ್ ದಾಸ್ 5.70 ಲಕ್ಷ ರೂಪಾಯಿ ಮೌಲ್ಯದ, 108 ಗ್ರಾಂ ಚಿನ್ನದ ಮಾಸ್ಕ್ ಅನ್ನು ಸಿದ್ದಪಡಿಸಿದ್ದಾರೆ. ಇನ್ನೂ ಈ ಮಾಸ್ಕ್ ಅನ್ನು ಪತ್ರಕರ್ತೆ ರಿತುಪರ್ಣ ಚಟರ್ಜಿ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಬಿಎಸ್‌ಎಫ್‌ ಅಧಿಕಾರ ವ್ಯಾಪ್ತಿ ವಿಸ್ತರಣೆ- ಕೇಂದ್ರದ ಅಧಿಸೂಚನೆ ವಿರುದ್ಧ ಪಂಜಾಬ್‌ ನಿರ್ಣಯ

    ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಕೆಲವರು ಪ್ರಶಂಸಿದರೆ, ಮತ್ತೆ ಕೆಲವರು ಅಷ್ಟು ಸಂಪತ್ತನ್ನು ಹೊಂದಿರುವವರು, ಕಾಯಿಲೆಯಿಂದ ತಮ್ಮ ಜೀವವನ್ನು ಕಳೆದುಕೊಂಡ ಸಾವಿರಾರು ಬಡ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಅಸಭ್ಯವಾಗಿ ಸಂಪತ್ತಿನ ಪ್ರದರ್ಶನ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡ ಹಸ್ತಾಂತರ

    11 ಕೆಜಿ ತೂಕದ ಚಿನ್ನದ ಶಿವನ ಮುಖವಾಡ ಹಸ್ತಾಂತರ

    ಮೈಸೂರು: ಸೋಮವಾರ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಶಿವನ ಮುಖವಾಡವನ್ನು ಶನಿವಾರ ಹಸ್ತಾಂತರಿಸಲಾಗಿದೆ.

    ಮುಜರಾಯಿ ಇಲಾಖೆ ಅಧಿಕಾರಿಗಳು ಶಿವ ಮುಖವುಳ್ಳ ಚಿನ್ನದ ಕೊಳಗವನ್ನ ದೇವಾಯಲಕ್ಕೆ ಹಸ್ತಾಂತರಿಸಿದ್ದಾರೆ. ಈ ಶಿವನ ಮುಖವಾಡ ಬರೋಬ್ಬರಿ 11 ಕೆ.ಜಿ ತೂಕವಿದೆ. ಈ ತ್ರಿನೇಶ್ವರ ದೇವಾಲಯ ಮೈಸೂರು ಅರಮನೆ ಒಳ ಆವರಣದಲ್ಲಿ ಇದೆ. ಶಿವನ ಮುಖವಾಡವನ್ನು ಶಿವರಾತ್ರಿ ದಿನ ತ್ರಿನೇಶ್ವರ ಲಿಂಗದ ಮೇಲೆ ಇಟ್ಟು ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

    ಮುಜರಾಯಿ ಇಲಾಖೆ ಶಿವರಾತ್ರಿ ಇಡೀ ದಿನ ಭಕ್ತರಿಗೆ ತ್ರಿನೇಶ್ವರ ಲಿಂಗದ ದರ್ಶನದ ಮಾಡಲು ಅವಕಾಶ ಮಾಡಿಕೊಡಲಿದೆ. ಶಿವರಾತ್ರಿ ದಿನ ಅನೇಕ ಭಕ್ತರು ಜಾಗರಣೆ ಮಾಡುತ್ತಾರೆ. ಹೀಗಾಗಿ ಅಂದಿನ ದಿನ ಶಿವನ ದೇವಾಲಯಗಳು ರಾತ್ರಿಯಿಡೀ ತೆರೆದಿರುತ್ತದೆ. ಅದೇ ರೀತಿ ತ್ರಿನೇಶ್ವರ ದೇವಾಲಯಲೂ ತೆರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಚಿನ್ನದ ಮುಖವಾಡವುಳ್ಳ ಶಿವನನ್ನು ನೋಡಲು ಮುಜರಾಯಿ ಇಲಾಖೆ ಅವಕಾಶ ಮಾಡಿಕೊಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv