Tag: gold jewellery

  • ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೆಜಿ ಚಿನ್ನಾಭರಣ ಜಪ್ತಿ!

    ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೆಜಿ ಚಿನ್ನಾಭರಣ ಜಪ್ತಿ!

    ಚಿತ್ರದುರ್ಗ: ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ದಾಖಲೆ ಇಲ್ಲದೇ ಸಂಗ್ರಹಿಸಿದ್ದ 3.55 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಹಿರಿಯೂರು ನಗರ ಠಾಣೆ ಪೊಲೀಸರು (Hiriyur Police) ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 5 ಕೆಜಿ 250 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

    ಇದು ದಾವಣಗೆರೆಯ ವರ್ಧಮಾನ ಜುವೆಲರಿಗೆ ಸೇರಿದ ಚಿನ್ನಾಭರಣ ಎಂದು ತಿಳಿದುಬಂದಿದೆ. ದಾಖಲೆ ಇಲ್ಲದ ಚಿನ್ನ ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ರಾಜೇಶ್ ಹಾಗೂ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು. ಇದನ್ನೂ ಓದಿ: ನನ್ನಲ್ಲಿ ಸಾಕಷ್ಟು ಹಣವಿಲ್ಲ.. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ: ಕೇಂದ್ರ ಹಣಕಾಸು ಸಚಿವೆ

    ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಲೋಕ’ಸಮರಕ್ಕೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು – ಸಿಎಂ, ಡಿಸಿಎಂ ನೇತೃತ್ವದಲ್ಲಿ ಸಂಧಾನ ಸಭೆ

  • ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

    ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

    ಬೆಂಗಳೂರು: ಗಂಡನಿಗೆ ಬುದ್ಧಿ ಕಲಿಸಲು ಹೋಗಿ ತನ್ನ ಚಿನ್ನವನ್ನೇ (Gold) ಸ್ನೇಹಿತರಿಂದ ಕಳವು (Theft) ಮಾಡಿಸಿ ನಾಟಕ ಮಾಡಿದ ಮಹಿಳೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ (Bengaluru) ಮಲ್ಲೇಶ್ವರಂನಲ್ಲಿ (Malleshwaram) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಚಿನ್ನ ಕಳವು ಮಾಡಿದ್ದ ಮಹಿಳೆಯ ಸ್ನೇಹಿತರಾದ ಧನರಾಜ್ ಹಾಗೂ ರಾಕೇಶ್ ಬಂಧಿತ ಆರೋಪಿಗಳು. ಮಹಿಳೆಗೆ ತನ್ನ ಪತಿಯೊಂದಿಗೆ ಕಲಹವಿತ್ತು. ಈ ಹಿನ್ನೆಲೆ ಗಂಡನಿಗೆ ಬುದ್ಧಿ ಕಲಿಸಲು ಮಹಿಳೆ ಪ್ಲಾನ್ ಮಾಡಿದ್ದಳು.

    ಗಂಡ ಹಾಗೂ ತನಗೂ ಸೇರಿದ್ದ 109 ಗ್ರಾಂ ಚಿನ್ನವನ್ನು ಮಹಿಳೆ ಬ್ಯಾಂಕ್‌ನಿಂದ ಬಿಡಿಸಿಕೊಂಡು ಬಂದಿದ್ದಳು. ಅದನ್ನು ಸ್ಕೂಟಿಯ ಡಿಕ್ಕಿಯಲ್ಲಿರಿಸಿ ತನ್ನ ಸ್ನೇಹಿತ ಧನರಾಜ್‌ಗೆ ಕರೆ ಮಾಡಿದ್ದಳು. ಅದರಂತೆ ಧನರಾಜ್ ಅಲ್ಲಿಗೆ ಬಂದು ಚಿನ್ನವನ್ನು ಕಳವು ಮಾಡಿ ಎಸ್ಕೇಪ್ ಆಗಿದ್ದ. ಬಳಿಕ ಯಾರೋ ಅಪರಿಚಿತರು ಚಿನ್ನ ಕಳವು ಮಾಡಿದ್ದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಲಾಂಗ್ ಝಳಪಿಸಿದ ವಿದ್ಯಾರ್ಥಿ

    ಆದರೆ ಪೊಲೀಸರ ತನಿಖೆಯಲ್ಲಿ ಮಹಿಳೆ ಚಿನ್ನವನ್ನು ತಾನೇ ತೆಗೆದುಕೊಂಡು ಸ್ನೇಹಿತರಿಂದ ಕಳವು ಮಾಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಹುಡುಗಿ ಹುಡುಕದ ತಾಯಿಯನ್ನು ಬಡಿದು ಕೊಂದ ಮಗ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರೋಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ

    ಬರೋಬ್ಬರಿ 5 ಕೋಟಿ ಮೌಲ್ಯದ ದಾಖಲೆ ಇಲ್ಲದ ಚಿನ್ನಾಭರಣ ವಶಕ್ಕೆ

    ಧಾರವಾಡ: ಸೂಕ್ತ ದಾಖಲೆಗಳಿಲ್ಲದೇ ಸಾಗಿಸಲಾಗುತ್ತಿದ್ದ ಬರೋಬ್ಬರಿ 5 ಕೋಟಿ ರೂ. ಮೌಲ್ಯದ 7 ಕೆಜಿ 700 ಗ್ರಾಂ ತೂಕದ ಚಿನ್ನಾಭರಣಗಳನ್ನು (Gold Jewellery) ಧಾರವಾಡ (Dharwad) ಹೊರವಲಯದ ತೇಗೂರು ಚೆಕ್ ಪೋಸ್ಟ್ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಇತ್ಯಾದಿ ಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿ ಚೆಕ್ ಪೋಸ್ಟ್ ತೆರೆದಿದ್ದಾರೆ. ಧಾರವಾಡ-ಬೆಳಗಾವಿ ರಸ್ತೆಯ ತೇಗೂರು ಚೆಕ್ ಪೋಸ್ಟ್‌ನಲ್ಲಿ ಇದೀಗ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಇದು ನನ್ನ ಕೊನೇ ಚುನಾವಣೆ, 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ – ನಾಮಪತ್ರ ಸಲ್ಲಿಸಿ ಸಿದ್ದು ಮನವಿ

    ಬೆಳಗಾವಿ ಕಡೆಯಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಬಿವಿಸಿ ಎಂಬ ಲಾಜಿಸ್ಟಿಕ್ ವಾಹನದಲ್ಲಿ ಈ ಚಿನ್ನಾಭಾರಣ ಸಾಗಿಸಲಾಗುತ್ತಿತ್ತು. ಮಲಬಾರ್, ಜೋಯಾಲುಕಾಸ್, ಕಲ್ಯಾಣ್ ಜ್ಯುವೆಲರ್ಸ್ ಸೇರಿದಂತೆ ಇತರ ಚಿನ್ನಾಭರಣಗಳನ್ನು ಗರಗ ಠಾಣೆ ಪೊಲೀಸರು ವಶಪಡಿಸಿಕೊಂಡು ಆದಾಯ ಮತ್ತು ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಮಾಮಾನನ್ನು ಮತ್ತೊಮ್ಮೆ ಗೆಲ್ಲಿಸಿ: ಜನರಲ್ಲಿ ಸುದೀಪ್‌ ಮನವಿ

  • ಯುವತಿಗೆ ದುಬಾರಿ ಬೆಲೆಯ ಬಂಗಾರ ಗಿಫ್ಟ್‌ ನೀಡಿದ್ದ ಜಾರಕಿಹೊಳಿ

    ಯುವತಿಗೆ ದುಬಾರಿ ಬೆಲೆಯ ಬಂಗಾರ ಗಿಫ್ಟ್‌ ನೀಡಿದ್ದ ಜಾರಕಿಹೊಳಿ

    ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿಗೆ ಸಂಬಂಧಿಸಿದ 300 ಪುಟಗಳ ಚಾಟ್‌ ಹಿಸ್ಟರಿಯನ್ನು ಎಸ್‌ಐಟಿ ಪೊಲೀಸರಿಗೆ ನೀಡಲು ಯುವತಿ ಮುಂದಾಗಿದ್ದಾರೆ.

    ಹೌದು. 300 ಪುಟಗಳ ಚಾಟಿಂಗ್ ಜೆರಾಕ್ಸ್ ಪ್ರತಿಯನ್ನು ಯುವತಿ ಪರ ವಕೀಲರು ತೆಗೆದುಕೊಂಡಿದ್ದು, ಇಂದು ಈ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಯುವತಿ ನೀಡುವ ಸಾಧ್ಯತೆಯಿದೆ. ಯುವತಿಗೆ ಜಾರಕಿಹೊಳಿ ದುಬಾರಿ ಬೆಲೆಯ ಬಂಗಾರವನ್ನು ನೀಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಎಸ್‌ಐಟಿಗೆ ನೀಡಲು ಮುಂದಾಗಿದ್ದಾರೆ.

    ವಾಟ್ಸಪ್‌ ಚಾಟಿಂಗ್‌ ಲಿಸ್ಟ್‌ ನೀಡಿದರೂ ಯುವತಿ ಬಳಸುತ್ತಿದ್ದ ಮೊಬೈಲ್‌ನ್ನು ತನಿಖೆ ಸಂಬಂಧ ಎಸ್‌ಐಟಿ ಕೇಳಲಿದೆ. ಬಳಿಕ ಆ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.

    ಜಾರಕಿಹೊಳಿ ಒಡನಾಟಕ್ಕೆ ಯುವತಿ ಪಶ್ಚಾತ್ತಾಪ ಪಟ್ಟಿದ್ದಾರೆ. ನಾನು ಕೆಲಸಕ್ಕೆ ಸೇರಿಕೊಳ್ಳುವ ಆಸೆಯಿಂದ ಸಹವಾಸ ಮಾಡಿದೆ. ನನ್ನ ಕುಟುಂಬದ ನಿರ್ವಹಣೆಯ ಸಲುವಾಗಿ ನನಗೆ ಕೆಲಸದ ಅವಶ್ಯಕತೆ ಇತ್ತು. ಹೀಗಾಗಿ ನಾನು ಸಹವಾಸೆ ಮಾಡಿದ್ದೆ ಎಂದು ಯುವತಿ ಎಸ್‌ಐಟಿ ಮುಂದೆ ಹೇಳಿರುವುದಾಗಿ ತಿಳಿದು ಬಂದಿದೆ.

  • ಕೈಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ದರೋಡೆಕೋರರು

    ಕೈಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ ದರೋಡೆಕೋರರು

    ಬೆಂಗಳೂರು: ದರೋಡೆಕೋರರು ಶಿಕ್ಷಕರೊಬ್ಬರ ಮನೆಗೆ ನುಗ್ಗಿ, ಮನೆಯಲ್ಲಿದ್ದವರ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದಿದೆ.

    ಸೋಮವಾರ ರಾತ್ರಿ 8.30ರ ಸುಮಾರಿಗೆ 8 ರಿಂದ 10 ಜನ ದುಷ್ಕರ್ಮಿಗಳ ತಂಡ ಕೊತ್ತನೂರಿನ ಶಬರಿ ನಗರದಲ್ಲಿರೋ ಶಿಕ್ಷಕಿ ಅನಿತಾ ಅವರ ಮನೆಗೆ ನುಗ್ಗಿ, ಮನೆಯಲ್ಲಿದ್ದ ಮೂರು ಜನರ ಕೈಕಾಲುಗಳನ್ನ ಕಟ್ಟಿ ಮಾರಕಾಸ್ತ್ರಗಳಿಂದ ಹೆದರಿಸಿದ್ದಾರೆ. ಬಳಿಕ ತಮ್ಮ ಬಳಿ ಇದ್ದ ಚೂಪಾದ ಆಯುಧಗಳಿಂದ ಲಾಕರ್ ತೆಗೆದು ಲಕ್ಷಾಂತರ ರೂಪಾಯಿ ಮೌಲ್ಯದ 110 ಗ್ರಾಂ ಚಿನ್ನಾಭರಣ ಮತ್ತು ನಗದನ್ನು ದೋಚಿ ಎಸ್ಕೇಪ್ ಆಗಿದ್ದಾರೆ.

    ಬಳಿಕ ವಿಷಯ ತಿಳಿದು ಕೊತ್ತನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ವೇಳೆ, ಆರೋಪಿಗಳಲ್ಲಿ ಕೆಲವರು ಹಿಂದಿ ಭಾಷೆಯಲ್ಲಿ ಮಾತನಾಡ್ತಿದ್ರು ಅನ್ನೋದು ಗೊತ್ತಾಗಿದೆ. ಉತ್ತರಭಾರತ ಮೂಲದ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದೆ.

    ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • 2ನೇ ಮದುವೆಯ ಖರ್ಚಿಗೆ ಒಂಟಿ ಮಹಿಳೆಯನ್ನ ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್

    2ನೇ ಮದುವೆಯ ಖರ್ಚಿಗೆ ಒಂಟಿ ಮಹಿಳೆಯನ್ನ ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್

    ರಾಮನಗರ: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಆರೋಪಿಯನ್ನ ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬೇವೂರು ಮಂಡ್ಯ ಗ್ರಾಮದ ನಾಗೇಶ್ ಬಂಧಿತ ಆರೋಪಿ. ಇದೇ ತಿಂಗಳ 15 ರಂದು ಬೇವೂರು ಮಂಡ್ಯ ನಿವಾಸಿ ಸರೋಜಮ್ಮ ಎಂಬಾಕೆಯ ಕತ್ತು ಕೂಯ್ದು ಕೊಲೆ ಮಾಡಲಾಗಿತ್ತು. ಎರಡನೇ ಮದುವೆಯ ಖರ್ಚಿಗಾಗಿ ಆರೋಪಿ ನಾಗೇಶ್ ಸರೋಜಮ್ಮಳನ್ನು ಕೊಂದು ಚಿನ್ನಾಭರಣ ದೋಚಿದ್ದ.

    ಘಟನೆ ಸಂಬಂಧ ಎಂಕೆ ದೊಡ್ಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ 80 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.

  • ಗೋಲ್ಡ್ ಖರೀದಿಗೆ ಇದೇ ಗೋಲ್ಡನ್ ಟೈಂ- ಚಿನ್ನದ ದರದಲ್ಲಿ ಭಾರೀ ಇಳಿಕೆ

    ಗೋಲ್ಡ್ ಖರೀದಿಗೆ ಇದೇ ಗೋಲ್ಡನ್ ಟೈಂ- ಚಿನ್ನದ ದರದಲ್ಲಿ ಭಾರೀ ಇಳಿಕೆ

    ಬೆಂಗಳೂರು: ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದೇ ಸೂಕ್ತ ಸಮಯ. ಯಾಕಂದ್ರೆ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ.

    ಹತ್ತು ಗ್ರಾಂ ಚಿನ್ನಕ್ಕೆ ಒಂದು ಸಾವಿರ ರೂ. ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ದರ ಹತ್ತು ಸಾವಿರ ರೂ. ಇಳಿಕೆ ಕಂಡಿದೆ.

     

    ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವಿನ ಯುದ್ಧ ಭೀತಿಯಿಂದ ದರ ಇಳಿಕೆಯಾಗಿದೆ. ಜಾಗತಿಕ ಪರಿಣಾಮಗಳಿಂದಾಗಿ ಮಾರುಕಟ್ಟೆಯಲ್ಲಿ ಉಂಟಾದ ನೀರಸ ಪ್ರಕ್ರಿಯೆಯಿಂದ ಉದ್ಯಮದಾರರು ಚಿನ್ನ ಖರೀದಿಯಲ್ಲಿ ನಿರಾಸಕ್ತಿ ತೋರಿದ್ದಾರೆ. ಇದು ಚಿನ್ನದ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.

    24 ಕ್ಯಾರೆಟ್ ಚಿನ್ನದ ದರ ಮುವತ್ತು ಸಾವಿರದಿಂದ 29 ಸಾವಿರಕ್ಕೆ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 26250 ರೂ ಆಗಿದೆ. ಡಿಸೆಂಬರ್ ಪ್ರಾರಂಭದಲ್ಲಿ 27,369 ರೂ. ಇತ್ತು.