Tag: gold jewelery

  • ಬಂಗಾರ ಬದಿಗಿಟ್ಟು ಸಿಲ್ವರ್ ಜ್ಯುವೆಲ್ಲರಿ ಮೊರೆಹೋದ ಫ್ಯಾಷನ್ ಪ್ರಿಯರು

    ಬಂಗಾರ ಬದಿಗಿಟ್ಟು ಸಿಲ್ವರ್ ಜ್ಯುವೆಲ್ಲರಿ ಮೊರೆಹೋದ ಫ್ಯಾಷನ್ ಪ್ರಿಯರು

    ಫ್ಯಾಷನ್ ಲೋಕದಲ್ಲಿ ಈಗ ಸಿಲ್ವರ್‌ಗೆ ಬೇಡಿಕೆ ಹೆಚ್ಚಾಗಿದೆ. ಬಂಗಾರ (Gold) ಬದಿಗಿಟ್ಟು ಸಿಲ್ವರ್ ಜ್ಯುವೆಲ್ಲರಿ (Silver Jewellery) ಮೊರೆ ಹೋಗ್ತಿದ್ದಾರೆ ಫ್ಯಾಷನ್ ಪ್ರಿಯರು. ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್‌ನಲ್ಲಿ ಸಿಲ್ವರ್ ಜ್ಯುವೆಲ್ಲರಿಗಳು ಇದೀಗ ಟ್ರೆಂಡಿಯಾಗಿವೆ. ಮಹಿಳೆಯರು ಸಾಮಾನ್ಯ ಡಿಸೈನ್‌ಗಳಿಂದಿಡಿದು ಬ್ರೈಡಲ್ ಜ್ಯುವೆಲ್ಲರಿಗಳಲ್ಲೂ (Bridal Jewellery) ಎಂಟ್ರಿ ನೀಡಿವೆ. ವೆಡ್ಡಿಂಗ್ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಲೆಕ್ಕವಿಲ್ಲದಷ್ಟು ಬಂಗಾರದ ಇಮಿಟೇಷನ್ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿವೆ.

    ಸಿಲ್ವರ್ ಜ್ಯುವೆಲ್ಲರಿಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ವೆಡ್ಡಿಂಗ್ ಸೀಸನ್‌ಗೆ ಊಹೆಗೂ ಮೀರಿದ ಡಿಸೈನ್‌ನಲ್ಲಿ ಆಗಮಿಸಿವೆ. ಒಂದಕ್ಕಿಂತ ಒಂದು ಡಿಸೈನ್‌ಗಳು ಬಂಗಾರದ ಆಭರಣಗಳ ಡಿಸೈನ್‌ಗಳನ್ನು ಮೀರಿಸಿವೆ. ಹಾಗಾಗಿ ಮದುವೆಯಾಗುವ ಹೆಣ್ಣು ಮಕ್ಕಳು ಮಾತ್ರವಲ್ಲ, ಫ್ಯಾಮಿಲಿಯ ಇತರೇ ಹೆಣ್ಣು ಮಕ್ಕಳು ಕೂಡ ಇವನ್ನು ಕೊಳ್ಳತೊಡಗಿದ್ದಾರೆ. ಆ ಮಟ್ಟಿಗೆ ಇವು ಮಾನಿನಿಯರನ್ನು ಸೆಳೆದಿವೆ. ಇದನ್ನೂ ಓದಿ:ನಿರ್ದೇಶನದತ್ತ ‘ರಂಗಿತರಂಗ’ ಚಿತ್ರದ ನಟ ನಿರೂಪ್ ಭಂಡಾರಿ

    ಆಂಟಿಕ್ ಆಭರಣಗಳ ಸೆಟ್, ಪ್ರೀಶಿಯಸ್ ಜ್ಯುವೆಲ್ಲರಿಗಳು, ಟೆಂಪಲ್ ಜ್ಯುವೆಲರಿ, ಕಂಟೆಂಪರರಿ ಡಿಸೈನ್ಸ್, ಹವಳದ ಸೆಟ್, ಮುತ್ತಿನ ಸೆಟ್, ಎಮರಾಲ್ಡ್ ಸೆಟ್, ಮೋಹನ್‌ಮಾಲ, ಬಿಗ್ ಚೋಕರ್ಸ್, ಸೊಂಟದ ಪಟ್ಟಿ, ಬಾಜುಬಂಧ್, ಕಡಗ, ಬಂಗಾರದ ಬಳೆಗಳ ಸೆಟ್, ಜಡೆನಾಗರ, ಮಾಟಿ, ಕಿವಿಯ ಬಿಗ್ ಮುತ್ತಿನ ಜುಮಕಿಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನ ಸಿಲ್ವರ್ ಆಭರಣಗಳು ಎಂಟ್ರಿ ನೀಡಿವೆ. ಅದರಲ್ಲೂ ಬಂಗಾರದ ಹಾಗೂ ವಜ್ರಾಭರಣಗಳ ಸೆಟ್‌ಗಳು ಅತಿ ಹೆಚ್ಚು ವೆಡ್ಡಿಂಗ್ ಬ್ರೈಡಲ್ ಸೆಟ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

    ಬ್ರೇಸ್‌ಲೆಟ್ಸ್, ಕತ್ತಿನ ನಾನಾ ಬಗೆಯ ಚೈನ್‌ಗಳು, ಕೈ ಉಂಗುರಗಳು ಇದೀಗ ಮೆನ್ಸ್ ಜ್ಯುವೆಲ್ಲರಿ ಕೆಟಗರಿಯಲ್ಲಿ ದೊರೆಯುತ್ತಿವೆ. ಬಂಗಾರ ಖರೀದಿಸಲು ಆಗದಿದ್ದವರಿಂದಿಡಿದು, ವೆರೈಟಿ ಡಿಸೈನ್ ಸೆಟ್‌ಗಳನ್ನು ಧರಿಸಲು ಬಯಸುವವರು, ಒಮ್ಮೆ ಧರಿಸಿ, ಮತ್ತೆ ರಿಪೀಟ್ ಮಾಡಲು ಬಯಸದವರು ಸಿಲ್ವರ್ ಜ್ಯುವೆಲ್ಲರಿಗಳನ್ನು ಖರೀದಿಸತೊಡಗಿದ್ದಾರೆ.

    ಮೊದಮೊದಲು ಕೇವಲ ಹೆಣ್ಣು ಮಕ್ಕಳ ಸಿಲ್ವರ್ ಜ್ಯುವೆಲ್ಲರಿಗಳು ಹೆಚ್ಚು ಲಭ್ಯವಿದ್ದವು. ಇದೀಗ ಪುರುಷರ ಜ್ಯುವೆಲ್ಲರಿಗಳು ಬಂದಿವೆ. ಕಡಿಮೆ ದರದಲ್ಲಿ ಅಂದರೇ ಸಾವಿರಾರು ರೂ.ಗಳಲ್ಲಿ ಭಾರೀ ಡಿಸೈನ್‌ನವನ್ನು ಖರೀದಿಸಬಹುದೆಂಬ ಲೆಕ್ಕಚಾರ ಹಲವರದ್ದು. ಲಕ್ಷಗಟ್ಟಲೇ ಬಂಗಾರಕ್ಕೆ ಸುರಿಯುವ ಬದಲು ಅದರ ತದ್ರೂಪದಂತಿರುವ ಸಿಲ್ವರ್ ಜ್ಯುವೆಲ್ಲರಿಗಳನ್ನು ಖರೀದಿಸಿ, ಧರಿಸುವುದು ಇದೀಗ ಕಾಮನ್ ಆಗಿದೆ.

    ಇಲ್ಲಿದೆ ಫ್ಯಾಷನ್ ಟಿಪ್ಸ್:
    ಟ್ರೆಂಡಿಯಾಗಿರುವ ವಿನ್ಯಾಸವನ್ನು ಖರೀದಿಸಿ.
    ಹೆವ್ವಿ ಬಂಗಾರದ ರಿಪ್ಲೀಕಾ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ.
    ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
    ನೀರು ಸೋಕಿಸಿದಲ್ಲಿ ಮಾಸಬಹುದು.
    ಪಾಲಿಶ್ ಕಡಿಮೆಯಾದಾಗ ಮತ್ತೊಮ್ಮೆ ಹಾಕಿಸಲು ಅಂಗಡಿಯವರನ್ನು ಸಂಪರ್ಕಿಸಿ.
    ರೀಸೇಲ್ ವ್ಯಾಲ್ಯೂ ಬಗ್ಗೆ ತಿಳಿದುಕೊಂಡು ಖರೀದಿಸಿ.
    ಬ್ರಾಂಡೆಡ್ ಆಭರಣ ಮಾರಾಟಗಾರರ ಬಳಿ ಖರೀದಿಸಿ

  • ಚಿನ್ನಾಭರಣ, ನಗದು ಜೊತೆ ಕಾಲ್ಕಿತ್ತ ವಧು

    ಚಿನ್ನಾಭರಣ, ನಗದು ಜೊತೆ ಕಾಲ್ಕಿತ್ತ ವಧು

    – ಕುಟುಂಬಸ್ಥರಿಂದ ದೂರು ದಾಖಲು

    ಪಾಟ್ನಾ: ರಾತ್ರಿ ಚಿನ್ನಾಭರಣ ಮತ್ತು ನಗದು ಜೊತೆ ವಧು ಮನೆಯಿಂದ ಎಸ್ಕೇಪ್ ಆಗಿರುವ ಘಟನೆ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ವರನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪರಾರಿಯಾಗಿರುವ ವಧುವಿನ ಹುಡುಕಾಟದಲ್ಲಿದ್ದಾರೆ.

    ಪಾಟ್ನಾದ ಚೌಕ್ ಠಾಣಾ ಕ್ಷೇತ್ರದ ನಿವಾಸಿ ರಾಜೇಶ್ ರಾಮ್ ನವೆಂಬರ್ 29ರಂದು ಪುತ್ರ ಸುಧೀರ್ ಕುಮಾರ್ ಮದುವೆಯನ್ನ ಬೇಗೂಸರಾಯ್ ನ ಸಂಜಯ್ ರಾವತ್ ಪುತ್ರಿ ಮೋನಿ ಕುಮಾರಿ ಜೊತೆ ಮಾಡಿದ್ದರು. ಮದುವೆ ನಂತರ ಮೋನಿ ಕುಮಾರಿ ಪತಿ ಮತ್ತು ಕುಟುಂಬಸ್ಥರ ಜೊತೆ ಚೆನ್ನಾಗಿಯೇ ಇದ್ದಳು. ಮಂಗಳವಾರ ರಾತ್ರಿ ಚಿನ್ನಾಭರಣ, ನಗದು ಮತ್ತು ಅಮೂಲ್ಯ ವಸ್ತುಗಳ ಜೊತೆ ಮನೆಯಿಂದ ಪರಾರಿಯಾಗಿದ್ದಾಳೆ.

    ಬೆಳಗ್ಗೆ ವಧು ಮೋನಿ ಕುಮಾರಿ ಮತ್ತು ಮನೆಯಲ್ಲಿಯ ಚಿನ್ನಾಭರಣ ಕಾಣದಿದ್ದಾಗ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಮೋನಿ ಕುಮಾರಿಯ ಸುಳಿವು ಸಿಗಿದಿದ್ದಾಗ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ವಸ್ತುಗಳು ಕಾಣೆಯಾಗಿದೆ ಎಂದು ತಿಳಿಸಿದ್ದಾರೆ. ವಧು ಮೋನಿ ಕುಮಾರಿಯನ್ನ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

     

  • ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

    ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

    ಗಾಂಧಿನಗರ: ಚಿನ್ನದ ಆಭರಣವನ್ನು ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ.

    ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಕುರಿತು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ ಪತಿ ಚಿನ್ನದ ಆಭರಣ ಧರಿಸಲು ಬಿಡುತ್ತಿರಲಿಲ್ಲ. ಇದರಿಂದ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಮಹಿಳೆ ಪತಿ ವಿರುದ್ಧ ದೂರಿದ್ದಾಳೆ.

    ಮಹಿಳೆ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಐಟಿ ಎಂಜಿನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2016ರಲ್ಲಿ ನಮ್ಮ ಮದುವೆಯಾಯ್ತು. ನಮಗೆ ಎರಡು ವರ್ಷದ ಮಗುವಿದೆ. ರಕ್ಷಾಬಂಧನದ ದಿನ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬಂದ ಮೇಲೆ ನನ್ನ ಜೊತೆ ಪತಿ ಗಲಾಟೆ ಮಾಡಿದ್ದರು ಎಂದು ಭಾನುವಾರ ಪೊಲೀಸ್ ಠಾಣೆಗೆ ಬಂದ ಮಹಿಳೆ ಪತಿ ವಿರುದ್ಧ ದೂರು ನೀಡಿದ್ದಾಳೆ.

    ನನ್ನ ಪತಿ ನನಗೆ ಚಿನ್ನದ ಆಭರಣ ಧರಿಸಲು ಬಿಡುವುದಿಲ್ಲ. ಅವರ ಮಾತು ಕೇಳದಿದ್ದರೆ ಬೆದರಿಸಿ, ಹೊಡೆದು ಚಿತ್ರಹಿಂಸೆ ಕೊಡುತ್ತಾರೆ. ಚಿಕ್ಕ ಚಿಕ್ಕ ವಿಷಯಕ್ಕೂ ನಮ್ಮ ಮಧ್ಯೆ ಜಗಳವಾಗುತ್ತೆ. ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮದುವೆ ಸಂಧರ್ಭದಲ್ಲಿ ತವರಿನಿಂದ ನನಗೆ 20 ತೊಲ (200 ಗ್ರಾಂ) ಚಿನ್ನಾಭರಣ ಮಾಡಿಸಿ ಕೊಟ್ಟಿದ್ದರು. ಆದರೆ ಮದುವೆಯ ಬಳಿಕ ನನ್ನ ಪತಿ ಒಂದು ದಿನ ಕೂಡ ಅದನ್ನು ಧರಿಸಲು ನನಗೆ ಬಿಡಲಿಲ್ಲ ಎಂದು ಮಹಿಳೆ ಅಳಲನ್ನು ತೋಡಿಕೊಂಡಿದ್ದಾರೆ.

  • ಒಂದೇ ತಿಂಗ್ಳಲ್ಲಿ 20 ಮನೆಗಳ್ಳತನ – ಪೊಲೀಸರೇ ಕಳ್ಳತನ ಮಾಡಿಸ್ತಾರೆ ಎಂದ ಮಾಜಿ ಸಚಿವ

    ಒಂದೇ ತಿಂಗ್ಳಲ್ಲಿ 20 ಮನೆಗಳ್ಳತನ – ಪೊಲೀಸರೇ ಕಳ್ಳತನ ಮಾಡಿಸ್ತಾರೆ ಎಂದ ಮಾಜಿ ಸಚಿವ

    ತುಮಕೂರು: ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಮನೆ ಕಳ್ಳತನ ಮಿತಿಮೀರಿದೆ. ಕಳೆದ ಒಂದೇ ತಿಂಗಳಲ್ಲಿ ಸರಿಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ಕನ್ನಹಾಕಲಾಗಿದೆ ಎನ್ನಲಾಗಿದೆ. ಆದರೂ ಹೆಬ್ಬರೂ ಪೊಲೀಸರು ಕನಿಷ್ಠ ಪಕ್ಷ ದೂರು ದಾಖಲಿಸಿಕೊಳ್ಳದೇ ದಿವ್ಯ ಮೌನ ವಹಿಸಿದ್ದಾರೆ. ಪೊಲೀಸರೇ ನಿಂತು ಕಳ್ಳತನ ಮಾಡಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

    ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದಾದ ಮೇಲೊಂದು ಮನೆಗಳ್ಳತನ ಪ್ರಕರಣ ಬೆಳಕಿಗೆ ಬರುತ್ತಿವೆ. ಮನೆಯ ಬೀಗದ ಕೀಯನ್ನು ಕಿಟಕಿಯ ಪಕ್ಕದಲ್ಲೋ, ಬಾಗಿಲ ಮೇಲಕ್ಕೋ ಇಟ್ಟು ಹೋಗಿದ್ದನ್ನು ಗಮನಿಸುವ ಕಳ್ಳರು ಇಂತಹ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಹಾಡಹಗಲೇ ಇಂತಹ ಮನೆಗಳಿಗೆ ರಾಜಾರೋಷವಾಗಿ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಕೆಲ ಮನೆಗಳ ಬೀಗ ಮುರಿದು ಮಧ್ಯಾಹ್ನದ ವೇಳೆಯೇ ಕನ್ನ ಹಾಕಿದ್ದಾರೆ.

    ಸೋಮವಾರದಂದು ಹುಳ್ಳೇಹಳ್ಳಿ ಗ್ರಾಮದಲ್ಲೂ ಕಳ್ಳತನ ಘಟನೆ ನಡೆದಿದೆ. ತಿಮ್ಮೇಗೌಡ ಎಂಬವರ ಮನೆಯ ಕಿಟಕಿ ಮೇಲಿದ್ದ ಬೀಗದ ಕೀ ಬಳಸಿಕೊಂಡು ಕಳ್ಳನೋರ್ವ ಮನೆಯೊಳಗೆ ಪ್ರವೇಶಿಸಿದ್ದಾನೆ. ಬೀರುವಿನಲ್ಲಿದ್ದ 1.5 ಲಕ್ಷ ನಗದು, 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಇದೇ ರೀತಿ ಡಿ.ಕೊರಟಗೆರೆ ಗ್ರಾಮದ ಕೃಷ್ಣಮೂರ್ತಿ ಆಚಾರ್ ಎಂಬವರ ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

    ಒಂದೇ ತಿಂಗಳಲ್ಲಿ ಸರಿಸುಮಾರು 20 ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ನಡೆದಿದೆ. ಆದರೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುವುದು ಮನೆ ಮಾಲೀಕರ ಆರೋಪ. ಪ್ರಕರಣದ ಬಗ್ಗೆ ಕೇಳಲು ಹೋದರೆ ಕಳ್ಳರು ಸಿಕ್ಕಿದಾಗ ಕಳೆದು ಹೋದ ಮಾಲುಗಳನ್ನು ನಾವೇ ತಂದು ಕೊಡುತ್ತೇವೆ ಎಂದು ಸಮಾಧಾನ ಮಾಡಿ ಕಳಿಸುತ್ತಿದ್ದಾರೆ. ಅದರಲ್ಲೂ ಹೆಬ್ಬೂರು ಪೊಲೀಸ್ ಠಾಣೆಯವರಂತೂ ಕಳ್ಳರನ್ನು ಹಿಡಿಯುವ ಪ್ರಯತ್ನವೇ ಮಾಡುತಿಲ್ಲ ಎಂದು ಸಾರ್ವಜನಿಕರ ಆರೋಸಿಸುತ್ತಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ, ಹೆಬ್ಬೂರು ಠಾಣೆಯ ಪೇದೆ ಪುಟ್ಟರಾಜು ಹಾಗೂ ಪಿಎಸ್‍ಐ ಶ್ರೀಕಾಂತರ ಕರಿನೆರಳಿನಲ್ಲಿ ಕಳ್ಳತನ ನಡಿಯುತ್ತಿದೆ. ಒಂದಿಷ್ಟು ಯುವಕರನ್ನು ಬಿಟ್ಟು ಪೊಲೀಸರೇ ಕಳ್ಳತನ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಮನೆಗಳ್ಳತನದ ಜೊತೆಗೆ ಸರಗಳ್ಳತನ, ಹಸು-ಕುರಿಗಳ ಕಳ್ಳತನವೂ ಎಲ್ಲೆ ಮೀರಿದೆ. ಇವೆಲ್ಲದಕ್ಕೂ ಹೆಬ್ಬೂರು ಪೊಲೀಸರ ಕುಮ್ಮಕ್ಕು ಇದೆ. ಪೊಲೀಸರ ಪಾತ್ರ ಇಲ್ಲದೇ ಇದ್ದರೆ ಒಂದು ತಿಂಗಳಲ್ಲಿ ನಡೆದ ಸರಿಸುಮಾರು 20 ಪ್ರಕರಣದಲ್ಲಿ ಒಂದನ್ನಾದರೂ ಭೇದಿಸುತ್ತಿದ್ದರು ಅನ್ನೋದು ಸುರೇಶ್ ಗೌಡರ ವಾದವಾಗಿದೆ. ಒಟ್ಟಾರೆ ಗ್ರಾಮಾಂತರ ಕ್ಷೇತ್ರದಲ್ಲಿನ ಮನೆಗಳ್ಳತನದ ವಿಚಾರ ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ.

  • ಏಷ್ಯಾ ಜ್ಯೂವೆಲ್ಸ್ ಫೇರ್- ಕಣ್ಣು ಕುಕ್ಕುವ ಆಭರಣಗಳು

    ಏಷ್ಯಾ ಜ್ಯೂವೆಲ್ಸ್ ಫೇರ್- ಕಣ್ಣು ಕುಕ್ಕುವ ಆಭರಣಗಳು

    ಬೆಂಗಳೂರು: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮಹಿಳೆಯರು ಆಭರಣ ಪ್ರಿಯರು. ಈಗ ಮದುವೆ ಸೀಜನ್ ಆರಂಭಗೊಂಡಿದ್ದು ಜ್ಯೂವೆಲರಿಗಳಿಗೆ ಸಖತ್ ಡಿಮ್ಯಾಂಡ್ ಬಂದಿದೆ. ಹೀಗಾಗಿ ನಗರದ ಖಾಸಗಿ ಹೋಟೆಲ್ ನಲ್ಲಿ ಏಷ್ಯಾ ಜ್ಯೂವೆಲ್ಸ್ ಫೇರ್-2019 ನಡೆದಿದ್ದು, ಇವತ್ತು ತೆರೆಬೀಳಲಿದೆ.

    ಕಲರ್ ಕಲರ್ ಸ್ಟೋನ್ಸ್ ನೆಕ್‍ಲೆಸ್, ಪುಟ್ಟ ಪುಟ್ಟ ಇಯರಿಂಗ್ಸ್ ಹಾಗೂ ರಿಂಗ್ಸ್ ಎಲ್ಲರನ್ನೂ ಆಕರ್ಷಿಸಿದ್ದವು. ಒಂದಕ್ಕಿಂತ ಒಂದು ಸೂಪರ್ ಆಗಿದ್ದು, ಡಿಸೈನ್ ನಂತೂ ಬೊಂಬಾಟ್ ಆಗಿವೆ. ಇವುಗಳನ್ನು ನೋಡುತ್ತಿದ್ದರೆ ಯಾವುದು ಖರೀದಿಸಬೇಕು? ಯಾವುದು ಬಿಡಬೇಕು ಅಂತಾ ಮಹಿಳೆಯರು ಕನ್ಪ್ಯೂಸ್ ಆಗೋದು ಗ್ಯಾರೆಂಟಿ. ಇಲ್ಲಿ ಭಾರತದ ಅತ್ಯುತ್ತಮ ಬ್ರಾಂಡೆಡ್ ಚಿನ್ನ ಹಾಗೂ ವಜ್ರಾಭರಣಗಳ ಪ್ರದರ್ಶನ ನಡೆದಿದ್ದು, ಅತಿಥಿಯಾಗಿದ್ದ ಆಗಮಿಸಿದ್ದ ನಟಿ ಹರ್ಷಿಕಾ ಪೂನಚ್ಚ ಆಭರಣಗಳನ್ನು ತೊಟ್ಟು ಮಿಂಚಿದರು.

    ಚಿನ್ನ, ವಜ್ರ, ಜಡಾ, ಪ್ಲಾಟಿನಂ ಹಾಗೂ ಬೆಳ್ಳಿಗಳ ವಿವಿಧ ಆಭರಣಗಳಿವೆ. ಸಖತ್ ಟ್ರೆಂಡಿ ಬಳೆಗಳು ಹಾಗೂ ಸೊಂಟದ ಪಟ್ಟಿಯನ್ನು ಜನರು ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಡಿಫೆರೆಂಟ್ ಆದ ಹರಳಿ, ಕುಂದನ್, ಜಡೌ ಹಾಗೂ ಪೋಲ್ಕಿ ಆಭರಣಗಳಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇವುಗಳನ್ನು ತೊಟ್ಟು ಹುಡುಗಿಯರಂತೂ ಮಿರ ಮಿರ ಮಿಂಚುತ್ತಿದ್ದಾರೆ. ಇವುಗಳನ್ನು ನೋಡಿದ್ರೆ ನೀವು ಫಿದಾ ಆಗುತ್ತೀರಿ. ಆದರೆ ಬೆಲೆ ಮಾತ್ರ ಸ್ವಲ್ಪ ಹೆಚ್ಚು. ಒಟ್ಟಿನಲ್ಲಿ ವೆಡ್ಡಿಂಗ್ ಸೀಜನ್ ಗೆ ಈ ಜ್ಯೂವೆಲ್ಸ್ ಹೊಸ ಲುಕ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    6 ಕೋಟಿ ರೂ. ಮೌಲ್ಯದ ಚಿನ್ನಾಭರಣ ಧರಿಸಿ ಗೋಲ್ಡನ್ ಬಾಬಾ ಯಾತ್ರೆ

    ಹರಿದ್ವಾರ: ಉತ್ತರಾಖಂಡ ಪ್ರಸಿದ್ಧ ಕನ್ವರ ಯಾತ್ರೆ ಆರಂಭವಾಗಿದ್ದು, ಪ್ರತಿ ಬಾರಿ ಯಾತ್ರೆಯಲ್ಲಿ ಕೇಂದ್ರ ಬಿಂದುವಾಗುವ ಗೋಲ್ಡನ್ ಬಾಬಾ ಈ ಬಾರಿಯೂ ತಾವು ಧರಿಸುವ ಚಿನ್ನಾಭರಣದಿಂದ ಎಲ್ಲರ ಗಮನ ಸೆಳೆದಿದ್ದಾರೆ.

    56 ವರ್ಷದ ಗೋಲ್ಡನ್ ಬಾಬಾ ಖ್ಯಾತಿಯ ಪುರಿ ಮಹಾರಾಜ್ ಅವರು ಈ ಬಾರಿ ಸುಮಾರು 6 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನಾಭರಣವನ್ನು ಧರಿಸಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ತಾವು ಯಾತ್ರೆಯ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದು, ಜನರು ನಾನು ತೆರಳುವ ಎಲ್ಲಾ ಸ್ಥಳಗಳಿಗೆ ಆಗಮಿಸುತ್ತಾರೆ. ಯಾತ್ರೆ ವೇಳೆ ಪೊಲೀಸರು ನನಗೆ ರಕ್ಷಣೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಕಾರು ಹಾಗೂ ಚಿನ್ನದ ಮೇಲಿನ ಆಕರ್ಷಣೆ ನಾನು ಮೃತ ಪಡುವವರೆಗೂ ಹೋಗುವುದಿಲ್ಲ. ಅಲ್ಲದೇ ನಾನು 25 ಬಾರಿ ಕನ್ವರ್ ಯಾತ್ರೆ ಮಾಡುತ್ತಿದ್ದು, ಇದು ಕೊನೆಯ ಯಾತ್ರೆಯಾಗಿದೆ. ಈ ಯಾತ್ರೆಯ ಅವಧಿಯಲ್ಲಿ ಮಾತ್ರ ಚಿನ್ನಾಭರಣಗಳನ್ನು ಧರಿಸುತ್ತೇನೆ. ಹೆಚ್ಚಿನ ತೂಕದ ಅಭರಣ ಧರಿಸುವುದರಿಂದ ನನ್ನ ದೇಹದ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುತ್ತದೆ ಎಂದು ಹೇಳಿದ್ದಾರೆ.

    ಅಂದಹಾಗೇ ಪುರಿ ಮಹಾರಾಜ್ ಬಾಬಾ ಆಗುವ ಮುನ್ನ ದೆಹಲಿಯಲ್ಲಿ ಉದ್ಯಮಿಯಾಗಿದ್ದು, ಬಳಿಕ ಬಾಬಾ ಆಗಿ ಪರಿವರ್ತನೆಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಪುರಿ ಮಹಾರಾಜ್ 25 ಬಾರಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಅವರೊಂದಿಗೆ ಭಾಗವಹಿಸುವ ಇತರೇ ಮಂದಿಗೆ 1.25 ಕೋಟಿ ರೂ. ಖರ್ಚು ಮಾಡಿದ್ದಾರೆ. ಅವರೊಂದಿಗೆ ಬರುವ 250 ರಿಂದ 300 ಮಂದಿ ಯಾತ್ರಿಗಳ ಊಟ, ವಸತಿ, ಆಹಾರ, ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

    ಕೇವಲ ಚಿನ್ನಾಭರಣಗಳನ್ನ ಮಾತ್ರ ಧರಿಸದೇ ಬಾಬಾ 27 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಸಹ ಹೊಂದಿದ್ದು, ಸ್ವತಃ ಬಿಎಂಡಬ್ಲೂ, 3 ಫಾರ್ಚುನರ್, 2 ಆಡಿ ಹಾಗೂ 2 ಇನ್ನೋವಾ ಕಾರುಗಳನ್ನು ಹೊಂದಿದ್ದಾರೆ. ಅಲ್ಲದೇ ಯಾತ್ರೆಯ ವೇಳೆ ಜಾಗ್ವಾರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಸಹ ಪಡೆಯುತ್ತಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.