Tag: gold garland

  • ಐಐಟಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಚಿನ್ನದ ಸರ ಗಿಫ್ಟ್!

    ಐಐಟಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಚಿನ್ನದ ಸರ ಗಿಫ್ಟ್!

    ನವದೆಹಲಿ: ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಜಾರ್ಖಂಡ್ ಧನ್‍ಬಾದ್ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿನಿಯರಿಂಗ್ ಓದುತ್ತಿರುವ ರಬೆಶ್ ಕುಮಾರ್ ಅವರಿಗೆ ಮೋದಿ ಚಿನ್ನದ ಸರವನ್ನು ಗಿಫ್ಟ್ ನೀಡಿದ್ದಾರೆ.

    ಮಧ್ಯಪ್ರದೇಶದ ಸಾರ್ವಜನಿಕ ಜಾಥಾದ ವೇಳೆ ಮೋದಿ ಭಾಷಣ ಮಾಡಿದ್ದರು. ಆ ಸಮಯದಲ್ಲಿ ಮೋದಿ ಅವರು ಚಿನ್ನದ ಸರವೊಂದನ್ನು ತನ್ನ ಕೊರಳಲ್ಲಿ ಹಾಕಿಕೊಂಡಿದ್ದರು. ಇದನ್ನು ವಿದ್ಯಾರ್ಥಿ ಗಮನಿಸಿದ್ದಾರೆ.

    ಕೆಲ ದಿನಗಳ ಬಳಿಕ ವಿದ್ಯಾರ್ಥಿ `ಕಳೆದ ತಿಂಗಳಿನಲ್ಲಿ ಮಧ್ಯಪ್ರದೇಶದಲ್ಲಿ ನಡೆಸಿದ ಜಾಥಾದ ಸಂದರ್ಭದಲ್ಲಿ ವೇಳೆ ತಾವು ಧರಿಸಿದ್ದ ಸರವನ್ನು ತನಗೆ ನೀಡುವಂತೆ ಮನವಿ ಮಾಡಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದು ಮೋದಿಗೆ ಟ್ಯಾಗ್ ಮಾಡಿದ್ದಾರೆ.

    ಟ್ವೀಟ್ ನಲ್ಲಿ `ಪಂಚಾಯತ್ ರಾಜ್ ದಿನದಂದು ನೀವು ಮಾಡಿದ ಭಾಷಣವನ್ನು ಕೇಳಿದ್ದೇನೆ. ನಿಮ್ಮ ಭಾಷಣ ಉತ್ತಮವಾಗಿತ್ತು. ಆ ಸಂದರ್ಭದಲ್ಲಿ ನೀವು ಧರಿಸಿದ್ದ ಚಿನ್ನದ ಬಣ್ಣ ಇರೋ ಸರ ನನಗೆ ತುಂಬಾ ಇಷ್ಟವಾಯಿತು. ಆ ಸರವನ್ನು ನನಗೆ ಕೊಡುತ್ತೀರಾ?’ ಅಂತ ಸಿಂಗ್ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸಿಂಗ್ ಟ್ವೀಟ್ ಮಾಡಿದ ಮರಿದಿನವೇ, ಪ್ರಧಾನಿಯವರ ಹೆಸರಿನಲ್ಲಿ ಚಿನ್ನದ ಸರದ ಜೊತೆ ಪತ್ರವೊಂದು ವಿದ್ಯಾರ್ಥಿಯ ಕೈ ಸೇರಿದೆ. `ಟ್ವಿಟ್ಟರ್ ನಲ್ಲಿ ನೀನು ಬರೆದ ಮೆಸೇಜ್ ಓದಿದ್ದೇನೆ. ನಾನು ಧರಿಸಿದ್ದ ಚಿನ್ನದ ಸರ ನಿನಗೆ ಇಷ್ಟವಾಗಿರುವುದಾಗಿ ಬರೆದಿದ್ದೆ. ಹೀಗಾಗಿ ಪತ್ರದ ಜೊತೆಗೆ ಸರವನ್ನೂ ಕೂಡ ಕಳುಹಿಸಿದ್ದೇನೆ. ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಅಂತ ಪತ್ರದಲ್ಲಿ ತಿಳಿಸಲಾಗಿತ್ತು.

    ಚಿನ್ನದ ಸರ ಕೈ ಸೇರಿದ ಕೂಡಲೇ ಸಿಂಗ್ ಮತ್ತೆ ಟ್ವೀಟ್ ಮಾಡಿದ್ದು, ಚಿನ್ನದ ಸರ ಹಾಗೂ ಪತ್ರ ನನ್ನ ಕೈ ಸೇರಿದ ಬಳಿಕ ನನಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಒಂದು ಸುಂದರವಾದ ಉಡುಗೊರೆ ನೀಡಿದ್ದಕ್ಕೆ ಹಾಗೂ ನಿಮ್ಮ ಗುಡ್ ಲಕ್ ಮೆಸೇಜ್ ಗೆ ಧನ್ಯವಾದಗಳು ಅಂತ ಸಂತಸ ಹಂಚಿಕೊಂಡಿದ್ದಾರೆ.