Tag: gold coin

  • ರಾಕಿಭಾಯ್ ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್, ಬಿಸ್ಕೆಟ್

    ರಾಕಿಭಾಯ್ ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್, ಬಿಸ್ಕೆಟ್

    ದೇ ಮೊದಲ ಬಾರಿಗೆ ಕನ್ನಡ ಸಿನಿಮಾ ನಟನೊಬ್ಬನ ಗೋಲ್ಡ್ ಕಾಯಿನ್ ಮತ್ತು ಗೋಲ್ಡ್ ಬಿಸ್ಕೆಟ್ ರಿಲೀಸ್ ಆಗಿದೆ. ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ ಪ್ರವಾಸ ಬೆಳೆಸಿದ್ದರು. ಅಲ್ಲಿ ಬಂಗಾರದ ಅಂಗಡಿಯ ಉದ್ಘಾಟನೆಯನ್ನು ಅವರು ಮಾಡಿದ್ದರು. ಅದೇ ಅಂಗಡಿಯವರು ರಾಕಿಭಾಯ್ (Rakibhai) ಯಶ್ ಹೆಸರಿನಲ್ಲಿ ಗೋಲ್ಡ್ ಕಾಯಿನ್ ಮತ್ತು ಬಿಸ್ಕೆಟ್ (Gold Biscuit) ಬಿಡುಗಡೆ ಮಾಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಮಲೇಷ್ಯಾಗೆ ಹೋಗಿರುವ ಸಂದರ್ಭದಲ್ಲೇ ಯಶ್ ತಮ್ಮ ಮುಂದಿನ (New Movie) ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ (Update) ನೀಡಿದ್ದಾರೆ. ಮಲೇಷ್ಯಾದಲ್ಲಿ ಹೊಸ ಸಿನಿಮಾದ ಕುರಿತು ಮಾತನಾಡಿರುವ ಯಶ್, ‘ದೊಡ್ಡ ಸಿನಿಮಾವನ್ನು ಮಾಡುತ್ತೇನೆ ಎಂದು ಹೇಳುತ್ತಿಲ್ಲ, ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದೊಂದು ಮಾಸ್ ಸಿನಿಮಾವಾಗಿರಲಿದೆ. ಸದ್ಯದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

    ರಾಕಿಭಾಯ್ ಯಶ್ (Yash) ಮೊನ್ನೆ ಮಲೇಷ್ಯಾಗೆ ಹಾರಿದ್ದರು. ನಾಲ್ಕೈದು ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಅವರು, ಮಲೇಷ್ಯಾದಲ್ಲಿ (Malaysia) ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರಿಗೆ ನೀಡಲಾದ ಗಿಫ್ಟ್ (Gift) ಸಾಕಷ್ಟು ವೈರಲ್ ಕೂಡ ಆಗಿದೆ.

     

    ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು (Group Photo) ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್

    130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್

    ಮೊದಲ ಸಿನಿಮಾದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ತಮಿಳು ನಟಿ ಕೀರ್ತಿ ಸುರೇಶ್ (Kirti Suresh), ತನ್ನ ಗೆಲುವಿಗೆ ಕಾರಣರಾಗುತ್ತಿರುವ ವ್ಯಕ್ತಿಗಳು ಬರೋಬ್ಬರಿ 75 ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ಚಿನ್ನದ ನಾಣ್ಯವನ್ನು (Gold Coin) ನೀಡಿದ್ದಾರೆ. ಯುಗಾದಿ ಹಬ್ಬಕ್ಕಾಗಿ ಅವರು ಈ ಉಡುಗೊರೆಯನ್ನು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

    ಮಹಾನಟಿ ಸಿನಿಮಾ ಮೂಲಕ ಚಿತ್ರ ಜಗತ್ತಿಗೆ ಪರಿಚಯವಾದ ಕೀರ್ತಿ ಸುರೇಶ್, ಮೂಲತಃ ಮಲಯಾಳಂ ಚಿತ್ರರಂಗದವರಾದರೂ, ಸಾಕಷ್ಟು ಹೆಸರು ಮಾಡಿದ್ದು ತೆಲುಗು ಮತ್ತು ತಮಿಳಿನಲ್ಲಿ. ಇದೀಗ ಅವರ ನಟನೆಯ ತೆಲುಗಿನ ದಸರಾ (Dasara) ಸಿನಿಮಾ ರಿಲೀಸ್‍ ಗೆ ರೆಡಿಯಾಗಿದೆ. ನಾನಿ (Nani) ಜೊತೆ ಈ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ಅವರು, ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೂ ಮುಂದಾಗಿದ್ದಾರೆ. ಈ ಸಮಯದಲ್ಲಿ ಉಡುಗೊರೆ ನೀಡಿ ಸಖತ್ ಸುದ್ದಿ ಆಗಿದ್ದಾರೆ.

    ದಸರಾ ಸಿನಿಮಾದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ 130 ಜನರಿಗೆ ತಲಾ ಹತ್ತು ಗ್ರಾಂ ಚಿನ್ನದ ನಾಣ್ಯಗಳನ್ನು ಕೊಡುವ ಮೂಲಕ ಯುಗಾದಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ ಕೀರ್ತಿ ಸುರೇಶ್. ಸಿನಿಮಾದ ಕೊನೆಯ ದಿನದ ಶೂಟಿಂಗ್ ನಲ್ಲಿ ಸೆಟ್ ನಲ್ಲಿದ್ದ ಬಹುತೇಕರು ಭಾವುಕರಾಗಿದ್ದರಂತೆ. ಅಷ್ಟೊಂದು ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಎಲ್ಲರಿಗೂ ಚಿನ್ನದ ಉಡುಗೊರೆ ಸಿಕ್ಕಿದೆ.

  • ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ

    ಅಡುಗೆ ಮನೆಯ ನೆಲಮಾಳಿಗೆಯಲ್ಲಿ 2.3ಕೋಟಿ ರೂ. ಮೌಲ್ಯದ ಚಿನ್ನದ ನಾಣ್ಯ ಪತ್ತೆ

    ಲಂಡನ್: ಮನೆಯನ್ನು ನವೀಕರಿಸುವಾಗ ಅಡುಗೆ ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಅಪಾರ ಮೊತ್ತದ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

    ಇಂಗ್ಲೆಂಡ್‍ನ ಉತ್ತರ ಯಾರ್ಕ್‍ಷೈರ್‌ನಲ್ಲಿ ನೆಲೆಸಿರುವ ದಂಪತಿ ಮನೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆ ದಂಪತಿ ಕಳೆದ 10 ವರ್ಷಗಳಿಂದ ಆ ಮನೆಯಲ್ಲಿ ನೆಲೆಸಿದ್ದರು. ಮನೆ ತುಂಬಾ ಹಳೆಯದಾಗಿದೆ ಎಂದು ನವೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಒಂದು ಲೋಹದ ಡಬ್ಬಿ ದೊರಕಿದೆ. ಅದನ್ನು ತೆರೆದಾಗ ಅವರಿಗೆ ಆಶ್ಚರ್ಯವೊಂದು ಕಾದಿದ್ದು, ಬರೋಬ್ಬರಿ 264 ಚಿನ್ನದ ನಾಣ್ಯಗಳು ಪತ್ತೆ ಆಗಿವೆ.

    ಈ ಬಗ್ಗೆ ಚಿನ್ನದ ನಾಣ್ಯ ಸಿಕ್ಕಿರುವ ದಂಪತಿ ಮಾತನಾಡಿ, ಈ ಎಲ್ಲಾ ನಾಣ್ಯಗಳು ಕಾಂಕ್ರೀಟ್ ಅಡಿಯಲ್ಲಿ ಕೇವಲ 6 ಇಂಚುಗಳಷ್ಟಿರುವ ಲೋಹದ ಡಬ್ಬಿಯಲ್ಲಿ ಪತ್ತೆಯಾಗಿವೆ. ಈ ಪ್ರಾಚೀನ ನಾಣ್ಯಗಳನ್ನು ಹರಾಜು ಮಾಡಿದ್ದೇವೆ. 250,000 ಫೌಂಡ್‍ಗಳಿಗೆ(2.3ಕೋಟಿ ರೂ.) ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮನವಿ ಸಲ್ಲಿಸಲು ಬಂದ ಮಹಿಳೆಗೆ ಗದರಿದ ಅರವಿಂದ ಲಿಂಬಾವಳಿ

    ಈ ಎಲ್ಲಾ ಚಿನ್ನದ ನಾಣ್ಯವು 400 ವರ್ಷಕ್ಕಿಂತಲೂ ಹಳೆಯದ್ದಾಗಿದ್ದು, 1610 ರಿಂದ 1726ರ ಆಡಳಿತದಲ್ಲಿದ್ದ ಚಿನ್ನದ ನಾಣ್ಯಗಳಾಗಿವೆ. ಜೊತೆಗೆ ಈ ಎಲ್ಲಾ ನಾಣ್ಯಗಳನ್ನು ಜೇಮ್ಸ್ 1 ಮತ್ತು ಚಾರ್ಲ್ಸ್‌ 1ರ ಆಳ್ವಿಕೆಯಲ್ಲಿ ತಯಾರಿಸಲ್ಪಟ್ಟಿದ್ದವು ಎನ್ನಲಾಗುತ್ತಿದೆ. ಈ ಎಲ್ಲಾ ನಾಣ್ಯಗಳು ಪ್ರಭಾವಿ ವ್ಯಾಪಾರಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಿಂತಿದ್ದ ಬಸ್‍ಗೆ ಡಿಕ್ಕಿ ಹೊಡೆದ ಟ್ರಕ್ – ನಾಲ್ವರು ಸಾವು, 24 ಮಂದಿಗೆ ಗಾಯ

    Live Tv
    [brid partner=56869869 player=32851 video=960834 autoplay=true]

  • ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ವಂಚನೆ – 7.50 ಲಕ್ಷ ರೂ. ಕಸಿದು ಗ್ಯಾಂಗ್ ಎಸ್ಕೇಪ್

    ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ವಂಚನೆ – 7.50 ಲಕ್ಷ ರೂ. ಕಸಿದು ಗ್ಯಾಂಗ್ ಎಸ್ಕೇಪ್

    ದಾವಣಗೆರೆ: ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ಆಮಿಷವೊಡ್ಡಿ ನಕಲಿ ಚಿನ್ನದ ನಾಣ್ಯ ನೀಡಿದ ಐವರು ವಂಚಕರ ತಂಡ ಲಕ್ಷಾಂತರ ರೂ. ವಂಚಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    BRIBE

    ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಕುಳೇನೂರು ರಸ್ತೆಯಲ್ಲಿ ಘಟನೆ ನಡೆದಿದೆ. ವಂಚಕರ ತಂಡವೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಹ್ಲಾದ್ ಎಂಬುವರ ಮೇಲೆ ಹಲ್ಲೆ ನಡೆಸುವ ಮೂಲಕ 7.50 ಲಕ್ಷ ನಗದು, ಒಂದು ಚಿನ್ನದ ಸರ, ಎರಡು ಚಿನ್ನದ ಉಂಗುರ ಹಾಗೂ ಮೊಬೈಲ್ ಕಸಿದು ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣ ಒಬ್ಬ ಕಚಡ, ಮಾರ್ಕ್ಸ್‌ಕಾರ್ಡ್‌ ಮಾರ್ಕೊಂಡು ಬದುಕಿದವನು: ಡಿ.ಕೆ.ಸುರೇಶ್ ವಾಗ್ದಾಳಿ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ನಿವಾಸಿಯಾಗಿರುವ ಪ್ರಹ್ಲಾದ್ ಅವರಿಗೆ 10 ದಿನಗಳ ಹಿಂದೆ ಕರೆ ಮಾಡಿದ್ದ ರಮೇಶ್ ಉಡುಪಿಯ ಹೆಬ್ರಿಯಲ್ಲಿ ಮೂರು ವರ್ಷಗಳ ಹಿಂದೆ ವಸತಿ ಗೃಹವೊಂದರಲ್ಲಿ ಪರಿಚಿತರಾಗಿದ್ದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ್, ಪರಿಚಯವಾಗಿದ್ದು ನೆನಪಿಲ್ಲ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಮತ್ತೆ ಮತ್ತೆ ಕರೆ ಮಾಡಿದ ರಮೇಶ್, ನನ್ನ ಬಳಿ ಅರ್ಧ ಕೆ.ಜಿ. ಚಿನ್ನದ ನಾಣ್ಯಗಳಿವೆ. ಯಾರಿಗಾದರೂ ಕೊಡಿಸಿ ಅಥವಾ ನೀವೇ ಕೊಂಡುಕೊಳ್ಳಿ. ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಆಮಿಷವೊಡ್ಡಿದ್ದಾರೆ.

    ಪ್ರಹ್ಲಾದ್ ಜೂನ್ 5 ರಂದು ಕುಳೇನೂರು ರಸ್ತೆಗೆ ಬಂದು ರಮೇಶ್ ಅವರನ್ನು ಭೇಟಿಯಾಗಿ ಎರಡು ಚಿನ್ನದ ನಾಣ್ಯ ಪಡೆದು ಬೆಂಗಳೂರಿಗೆ ತೆರಳಿ ಪರೀಕ್ಷಿಸಿ ನೋಡಿದಾಗ ಅಸಲಿ ಚಿನ್ನ ಎಂದು ಖಾತರಿಯಾಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್‍ಗೆ ಕರೆ ಮಾಡಿ 8 ಲಕ್ಷಕ್ಕೆ ಅರ್ಧ ಕೆ.ಜಿ. ಚಿನ್ನದ ನಾಣ್ಯಗಳನ್ನು ನೀಡುವಂತೆ ತಿಳಿಸಿದ್ದರು. ಇದನ್ನೂ ಓದಿ: ಅಶ್ವಥ ಎಲೆಯಲ್ಲಿ ಮೂಡಿದ ಮಾಸ್ಟರ್ ಬ್ಲಾಸ್ಟರ್ – ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ ಉಡುಪಿಯ ಮಹೇಶ್

    ಜೂನ್ 12 ರಂದು ಸಂಜೆ 6.30ರ ವೇಳೆಗೆ 7.50 ಲಕ್ಷ ತೆಗೆದುಕೊಂಡು ಕುಳೇನೂರು ರಸ್ತೆಗೆ ಬಂದಿದ್ದ ಪ್ರಹ್ಲಾದ್ ಅವರನ್ನು ರಮೇಶ್ ಸೇರಿದಂತೆ ಐವರು ಭೇಟಿ ಮಾಡಿ ಹಣ ಪಡೆದು ನಾಣ್ಯಗಳನ್ನು ನೀಡಿ ಚಿನ್ನದ್ದು ಎಂದು ನಂಬಿಸಲು ಯತ್ನಿಸಿದ್ದಾರೆ. ನಾಣ್ಯಗಳನ್ನು ಸ್ಥಳದಲ್ಲೇ ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅವು ನಕಲಿ ಎಂಬ ಅನುಮಾನ ಮೂಡಿ ಖರೀದಿಗೆ ನಿರಾಕರಿಸಿದ ಪ್ರಹ್ಲಾದ್ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, 60,000 ರೂ. ಮೌಲ್ಯದ ಚಿನ್ನದ ಸರ, 43,000 ರೂ. ಮೌಲ್ಯದ ಎರಡು ಚಿನ್ನದ ಉಂಗುರಗಳು ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮಳೆ ಜೊತೆಯಲ್ಲಿ ಬಿತ್ತಾ ಚಿನ್ನದ ನಾಣ್ಯ?- ಬಾಗಲೂರಿನಲ್ಲಿ ಮುಗಿಬಿದ್ದ ಜನ

    ಮಳೆ ಜೊತೆಯಲ್ಲಿ ಬಿತ್ತಾ ಚಿನ್ನದ ನಾಣ್ಯ?- ಬಾಗಲೂರಿನಲ್ಲಿ ಮುಗಿಬಿದ್ದ ಜನ

    ಬೆಂಗಳೂರು/ಅನೇಕಲ್: ಮಳೆ ಬರೋವಾಗ ಚಿನ್ನದ ನಾಣ್ಯ ಬಿದ್ದಿದೆ ಎಂಬ ವದಂತಿಯನ್ನು ನಂಬಿದ ಜನರು ಒಂದೇಡೆ ಜಮಾಯಿಸಿ ಚಿನ್ನದ ನಾಣ್ಯ ಹುಡುಕಾಟ ನಡೆಸಿರುವ ಘಟನೆ ಕರ್ನಾಟಕದ ಗಡಿಯ ತಮಿಳುನಾಡಿನ ಬಾಗಲೂರಿನಲ್ಲಿ ನಡೆದಿದೆ.

    ನಿನ್ನೆ ಮಧ್ಯಾಹ್ನ ನಾಲ್ಕು ಗಂಟೆ ಸಮಯಕ್ಕೆ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಬಾಗಲೂರು ಪೊಲೀಸ್ ಕ್ವಾಟ್ರಸ್ ಎದುರು ಮಳೆ ಬಂದಾಗ ನಾಣ್ಯ ಬಿದ್ದಿದೆ ಎನ್ನುವ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಅಕ್ಕಪಕ್ಕದ ಜನರೆಲ್ಲ ಜಮಾಯಿಸಿ ಚಿನ್ನದ ನಾಣ್ಯದ ಹುಡುಕಾಟ ಮಾಡಿದ್ದಾರೆ. ಈ ವೇಳೆ ಕೆಲವರಿಗೆ ನಾಣ್ಯಗಳು ಸಿಕ್ಕಿದ್ದು, ಇನ್ನು ಕೆಲವರು ಹುಡುಕಾಟ ನಡೆಸಿ ಬೇಸರದಿಂದ ಮನೆಗೆ ಹೋಗಿದ್ದಾರೆ. ಆ ವೇಳೆಗಾಗಲೇ ಮಾಹಿತಿ ತಿಳಿದ ಬಾಗಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲವು ನಾಣ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

    ಚಿನ್ನದ ನಾಣ್ಯ ಸಿಗುತ್ತಿದೆ ಎಂದಾಕ್ಷಣ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಅಕ್ಕಪಕ್ಕದ ಗ್ರಾಮಸ್ಥರಲ್ಲದೆ ಸರ್ಜಾಪುರ-ಬಾಗಲೂರು ರಸ್ತೆಯ ಅಕ್ಕಪಕ್ಕದ ನಿವಾಸಿಗಳು ಕೂಡ ಸ್ಥಳಕ್ಕೆ ತೆರಳಿದ್ದರು. ಈ ವದಂತಿಯನ್ನು ನಂಬಿದ್ದ ಜನರು ಇಂದು ಬೆಳಗ್ಗೆಯೂ ನಾಣ್ಯವನ್ನು ಹುಡುಕಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

    ಘಟನೆ ಕುರಿತಂತೆ ಪೊಲೀಸರು ಈಗಾಗಲೇ ಘಟನೆ ವೇಳೆ ಸಿಕ್ಕಿರುವ ನಾಣ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿ ಪರಿಶೀಲನೆ ನಡೆಸಿದಾಗ ಇದು ಚಿನ್ನದ ನಾಣ್ಯ ಎನ್ನುವುದು ಗೊತ್ತಾಗಿದ್ದು, ನಾಣ್ಯವನ್ನು ತೆಗೆದುಕೊಂಡು ಮನೆಗೆ ಹೋದವರಲ್ಲಿಯೂ ಕೂಡ ಆತಂಕ ಪ್ರಾರಂಭವಾಗಿದೆ. ಈ ಬಗ್ಗೆ ಕೆಲ ಸ್ಥಳೀಯರು ಹೇಳುವ ಪ್ರಕಾರ ಹಳೆಯ ಕಾಲದಲ್ಲಿ ಈ ಭಾಗದಲ್ಲಿ ಚಿನ್ನದ ನಿಕ್ಷೇಪ ಆಗಿರಬಹುದು ಅಥವಾ ರಾಜಮಹಾರಾಜರ ಕಾಲದಲ್ಲಿ ನಾಣ್ಯಗಳನ್ನು ಭೂಮಿಯಲ್ಲಿ ಇಟ್ಟಿರಬಹುದು, ಮಳೆ ಬಂದಾಗ ಇದು ಮಣ್ಣಿನಲ್ಲಿ ಇರುವುದು ಕೊಚ್ಚಿಕೊಂಡು ಹೀಗೆ ಬಂದಿರಬಹುದು ಎನ್ನುತ್ತಿದ್ದಾರೆ.

    ಚಿನ್ನದ ನಾಣ್ಯ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ತನಿಖೆಯ ನಂತರವಷ್ಟೇ ಇದು ಎಲ್ಲಿಂದ ಬಂದ ನಾಣ್ಯಗಳು ಎನ್ನುವ ಬಗ್ಗೆ ಮಾಹಿತಿ ತಿಳಿಸಬೇಕಿದೆ. ಕೆಲ ನಾಣ್ಯಗಳಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವ ಲಿಪಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಬಾಗಲೂರಿನಲ್ಲಿ ಸಿಕ್ಕ ನಾಣ್ಯಗಳ ಬಗ್ಗೆ ಈಗ ಎಲ್ಲೆಡೆ ಚರ್ಚೆ ಪ್ರಾರಂಭವಾಗಿದ್ದು, ಮಳೆಯಲ್ಲಿ ಸಿಡಿಲಿನಿಂದ ಬಂದ ನಾಣ್ಯಗಳೋ ಅಥವಾ ಭೂಮಿಯಿಂದ ಹೊರ ಬಂದ ನಾಣ್ಯಗಳು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

  • ಹೆಣ್ಣು ಮಗು ಹುಟ್ಟಿದ್ರೆ 1 ಗ್ರಾಂ ಚಿನ್ನ ಸಿಗುತ್ತೆ!

    ಹೆಣ್ಣು ಮಗು ಹುಟ್ಟಿದ್ರೆ 1 ಗ್ರಾಂ ಚಿನ್ನ ಸಿಗುತ್ತೆ!

    ತಿರುವನಂತಪುರ: ಹೆಣ್ಣು ಮಗು ಹುಟ್ಟಿದ್ರೆ ಸಾಕು ಶಾಪ ಹಾಕುವ ಅಥವಾ ಹೆಣ್ಣು ಭ್ರೂಣವನ್ನು ಕಸದ ಬುಟ್ಟಿಗೆ ಎಸೆಯೋ ಅನೇಕ ಘಟನೆಗಳು ಪ್ರತಿನಿತ್ಯ ನಡೆಯುತ್ತವೆ. ಅಂತದ್ದರಲ್ಲಿ ಕೇರಳದ ವ್ಯಕ್ತಿಯೊಬ್ಬರು ಹೆಣ್ಣು ಮಗು ಹುಟ್ಟಿದ್ರೆ ಚಿನ್ನ ನೀಡೋ ಮೂಲಕ ರಕ್ಷಣೆಗೆ ನಿಂತಿದ್ದಾರೆ.

    ಹೌದು. ಕೇರಳದ ಮುಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಹೆಣ್ಣು ಮಗು ಹುಟ್ಟಿದ ಸಂತಸದ ಜೊತೆಗೆ ಮಗುವಿನ ಕುಟುಂಬಕ್ಕೆ ಈ ಉಡುಗೊರೆಯನ್ನು ನೀಡುತ್ತಾರೆ. ಮಲಪ್ಪುರಂ ಜಿಲ್ಲೆಯ ಪುಸಭೆ ಕೌನ್ಸಿಲರ್ 38 ವರ್ಷ ವಯಸ್ಸಿನ ಅಬ್ದುಲ್ ರಹೀಮ್ ಎಂಬವರೇ ಈ ಮಹಾನ್ ಕಾರ್ಯ ಮಾಡುತ್ತಿರೋ ವ್ಯಕ್ತಿಯಾಗಿದ್ದಾರೆ. ಇವರು ತನ್ನ ವಾರ್ಡ್ ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ಅದರ ಸಂಭ್ರಮಾಚರಣೆಯ ಜೊತೆಗೆ ಆ ಕುಟುಂಬಕ್ಕೆ ಒಂದು ಗ್ರಾಂ ಚಿನ್ನ ನೀಡುತ್ತಿದ್ದಾರೆ. ರಹೀಮ್ ಅವರು ಈ ಕೆಲಸವನ್ನು ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

    `ಹುಟ್ಟಿದ ಮಗು ಹೆಣ್ಣಾದ್ರೆ ಕೆಲ ಕುಟುಂಬಗಳು ಶಪಿಸುವುದನ್ನು ನಾನು ನೋಡಿದ್ದೇನೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಯಾಕಂದ್ರೆ ಹೆಣ್ಣು ಮಗು ಮನೆಗೆ ಸಂಪತ್ತನ್ನು ತರುತ್ತಾಳೆ. ಹೆಚ್ಚಿನ ಜನರಿಗೆ ಈ ವಿಚಾರ ತಿಳಿದಿಲ್ಲ. ಹೆಣ್ಣು ಇಲ್ಲದಿದ್ದಲ್ಲಿ ಈ ಜಗತ್ತನ್ನು ಕಲ್ಪನೆ ಮಾಡಲು ಸಾಧ್ಯವೇ ಅಂತ 4 ವರ್ಷದ ಮಗುವಿನ ತಂದೆಯಾಗಿರೋ ಅಬ್ದುಲ್ ರಹೀಮ್ ಪ್ರಶ್ನಿಸಿದ್ದಾರೆ.

    ರಹೀಮ್ ಅವರು ಇಲ್ಲಿಯವರೆಗೆ ಸುಮಾರು 16 ಹೆಣ್ಣು ಮಗುವಿನ ತಾಯಂದಿರಿಗೆ ಈ ಉಡುಗೊರೆಯನ್ನು ನೀಡಿದ್ದಾರೆ. ಅಲ್ಲದೇ ಈ ಚಿನ್ನದ ನಾಣ್ಯದ ಪ್ರಮಾಣವನ್ನು ಎರಡಷ್ಟು ಹೆಚ್ಚಿಸಲು ಚಿಂತಿಸಿದ್ದಾರೆ. ಹುಟ್ಟಿದ ಮಗು ಹೆಣ್ಣಾದ್ರೆ ಸಾಕು ಆಸ್ಪತ್ರೆಯಿಂದಲೇ ರಹೀಮಾನ್ ಅವರಿಗೆ ಕರೆ ಬರುತ್ತದೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಅವರು ಚಿನ್ನದ ನಾಣ್ಯವನ್ನು ನೀಡಿ ಗಿಫ್ಟ್ ನೀಡುತ್ತಾರೆ.

    ಮಹಿಳೆಗೆ ಹೆಣ್ಣು ಮಗು ಹುಟ್ಟಿದ ವಿಚಾರವನ್ನು ನಮಗೂ ತಿಳಿಸಿ, ನಾವು ಕೂಡ ಚಿನ್ನ ಕೊಡುತ್ತೇವೆ ಎಂದು ಕೊಟ್ಟಕ್ಕಲ್ ನ ಪ್ರಮುಖ ಆಭರಣ ಮಳಿಗೆಗಳು ರಹೀಮ್ ಅವರೆ ಮುಂದೆ ಆಫರ್ ಪ್ರಸ್ತಾಪಿಸಿದ್ದವು. ಆದ್ರೆ ರಹೀಮಾನ್ ಮಳಿಗೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಅಂತ ಹೇಳಿದ್ದಾರೆ.

    ಪುರಸಭೆ ಕೌನ್ಸಿಲರ್ ಆಗಿರೋ ನನಗೆ ತಿಂಗಳಿಗೆ 8 ಸಾವಿರದಿಂದ 10 ಸಾವಿರ ಸಂಬಳ ಬರುತ್ತದೆ. ಒಂದು ಗ್ರಾಂ ನಾಣ್ಯಕ್ಕೆ 2500 ರೂ. ವೆಚ್ಚವಾಗುತ್ತದೆ. ನನ್ನ ಸಂಬಳದ ಸಣ್ಣ ಮೊತ್ತವನ್ನು ಇದಕ್ಕಾಗಿ ನಾನು ಖರ್ಚ ಮಾಡಬಲ್ಲೆ ಎಂದು ರಹೀಮ್ ಹೇಳಿದ್ದಾರೆ.

    ದೇಶದ ಇತರ ಭಾಗಗಳಿಗಿಂತ ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದಾರೆ. ಆದರೆ ಜನನ ದರ ಇಳಿಕೆಯಾಗುತ್ತಿದ್ದು, ಲಿಂಗಾನುಪಾತ ಇಳಿಕೆಯಾಗುವ ಸಾಧ್ಯತೆಯಿದೆ.