Tag: gold

  • ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ (IGI Airport) ಯಾಂಗೋನ್‌ನಿಂದ ಬಂದ ಮಹಿಳಾ ಪ್ರಯಾಣಿಕಳೊಬ್ಬಳು ಚಿನ್ನ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.

    ಯಾಂಗೂನ್‌ನಿಂದ ಬಂದ ವಿಮಾನ 8M 620 ರಲ್ಲಿ ಮಹಿಳೆ ದೆಹಲಿಗೆ ಬಂದಿದ್ದಳು. ಒಳ ಉಡುಪುಗಳಲ್ಲಿ 997.5 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ಅಡಗಿಸಿಟ್ಟುಕೊಂಡಿದ್ದಳು. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಚಿನ್ನ ಇರುವುದು ಪತ್ತೆಯಾಗಿತ್ತು.

    1962ರ ಕಸ್ಟಮ್ಸ್ ಕಾಯ್ದೆಯ ಅಡಿ ಚಿನ್ನವನ್ನು ಅಧಿಕಾರಿಗಳು ಸೀಜ್‌ ಮಾಡಿದ್ದಾರೆ.

  • ಚಿನ್ನಪ್ರಿಯರಿಗೆ ಸಿಹಿಸುದ್ದಿ – ಬೆಳ್ಳಿ, ಬಂಗಾರ ಸ್ವಲ್ಪ ಕಡಿಮೆ ಭಾರ!

    ಚಿನ್ನಪ್ರಿಯರಿಗೆ ಸಿಹಿಸುದ್ದಿ – ಬೆಳ್ಳಿ, ಬಂಗಾರ ಸ್ವಲ್ಪ ಕಡಿಮೆ ಭಾರ!

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ (Gold Jewellery) ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನ, ಬೆಳ್ಳಿ ದರ ಈಗ ಕೊಂಚ ಇಳಿಕೆಯಾಗಿದೆ.

    ಪ್ರತಿ ಗ್ರಾಂಗೆ ಚಿನ್ನ ಕಳೆದ 2-3 ದಿನಗಳಿಂದ 600 ರೂ. ಇಳಿಕೆ ಕಂಡಿದೆ. ಇನ್ನು 1.95 ಲಕ್ಷ ರೂ.ವರೆಗೆ ಏರಿಕೆ ಕಂಡಿದ್ದ ಬೆಳ್ಳಿ ದರ 1.58 ಲಕ್ಷ ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: PUBLiC TV Explainer| ಅಮೆರಿಕ Vs ಚೀನಾ – ಏನಿದು ಗೋಲ್ಡ್‌ ಬಾಂಬ್‌? ವಿಶ್ವದ ಮೇಲೆ ಪರಿಣಾಮ ಏನು?

    ದಿಢೀರ್ ಇಳಿಕೆಗೆ ಕಾರಣ ಏನು?
    * ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
    * ಅಮೆರಿಕ-ಭಾರತದ ಮಧ್ಯೆ ಕಚ್ಚಾ ತೈಲದ ವ್ಯಾಪಾರದ ಮುನ್ಸೂಚನೆ
    * ಮುಂದಿನ ದಿನದಲ್ಲಿ ತೈಲ (Oil) ವ್ಯಾಪಾರದ ಮುನ್ಸೂಚನೆ
    * ತಿಳಿಯಾದ ಚೀನಾ-ಅಮೆರಿಕ ಜಾಗತಿಕ ವ್ಯಾಪಾರ

    ಚಿನ್ನ, ಬೆಳ್ಳಿ ದರ ಡಿಸೆಂಬರ್ ವೇಳೆಯಲ್ಲಿ ಇನ್ನಷ್ಟು ಕಡಿತಗೊಳ್ಳುವ ನಿರೀಕ್ಷೆಯಿದೆ ಅನ್ನೋದು ಹಣಕಾಸು ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

  • ಹಾವೇರಿ | ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಹಾವೇರಿ | ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

    ಹಾವೇರಿ: ನಗರದಲ್ಲಿರುವ (Haveri) ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt) ಕಳ್ಳರು ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ.

    ನಗರದ ಹೃದಯ ಭಾಗದಲ್ಲಿರೋ ಮಠದಲ್ಲಿ ಎರಡು ಕೋಣೆಯ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮಠದಲ್ಲಿರೋ ಚಿನ್ನಾಭರಣ, ಬೆಳ್ಳಿಯ ಆಭರಣ, ಹಾಗೂ ತಾಮ್ರದ ವಸ್ತುಗಳನ್ನ ಖದೀಮರು ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳವಾದ ವಸ್ತುಗಳು
    1) 15 ಗ್ರಾಂ ಬಂಗಾರದ ಸರದ ಹುಕ್ಕು, 1,79,550 ರೂ. ಮೌಲ್ಯದ್ದು
    2) 18 ಗ್ರಾಂ ಬಂಗಾರದ ಸರ, ಒಂದು ಹುಕ್ಕು, 2,15,460 ರೂ. ಮೌಲ್ಯದ್ದು
    3) 06 ಗ್ರಾಂ ತೂಕದ ಬಂಗಾರದ ಸಣ್ಣ ಪುಷ್ಪ ಎಲೆ 71,820 ರೂ. ಮೌಲ್ಯದ್ದು
    4) 2 ಬೆಳ್ಳಿಯ ತಂಬಿಗೆ, 6 ಬೆಳ್ಳಿಯ ಆಚುಮ್ಯ ಲೋಟ,
    6) ಬೆಳ್ಳಿಯ ಉದ್ದರಣಿ, 2 ಬೆಳ್ಳಿಯ ತಟ್ಟೆಗಳು, 1 ಬೆಳ್ಳಿಯ ಆರತಿ ಇವುಳ, 2,70,920 ರೂ. ಮೌಲ್ಯದ್ದು
    5) 75 ಕೆ.ಜಿ ರಥದ ಮೇಲಿನ ಹಿತ್ತಾಳೆಯ 03 ಕಳಸ, 1,00,00 ರೂ. ಮೌಲ್ಯದ್ದು
    6) 60 ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು, 42,000 ರೂ. ಮೌಲ್ಯದ್ದು
    7) 18 ಕೆ.ಜಿ ತಾಮ್ರದ 50 ತಂಬಿಗಳು 17,928 ರೂ. ಮೌಲ್ಯದ್ದು
    8) 207 ಕೆ.ಜಿ ಹಿತ್ತಾಳೆಯ 02 ಸಾಲು ದೀಪಗಳು, 42,000 ರೂ. ಮೌಲ್ಯದ್ದು
    9) 40 ಕೆ.ಜಿ ಹಿತ್ತಾಳೆಯ 20 ಗಂಟೆಗಳು, 20,000 ರೂ. ಮೌಲ್ಯದ್ದು
    ಒಟ್ಟು 10,67,668 ರೂ. ಮೌಲ್ಯದ ಆಭರಣ, ತಾಮ್ರದ ಮತ್ತು ಹಿತ್ತಾಳೆಯ ವಸ್ತುಗಳು ಕಳವಾಗಿದ್ದು, ಈ ಬಗ್ಗೆ ಡಾ. ವೀಣಾ ಎಸ್, ಶ್ರೀನಿವಾಸ ವೈದ್ಯ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಹಾವೇರಿ ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

  • ದೀಪಾವಳಿಗೆ ಚಿನ್ನ ಖರೀದಿ ಯಾಕೆ?

    ದೀಪಾವಳಿಗೆ ಚಿನ್ನ ಖರೀದಿ ಯಾಕೆ?

    ಭಾರತೀಯ ಸಂಪ್ರದಾಯದಲ್ಲಿ ಪ್ರತಿ ಹಬ್ಬ ಬಂದಾಗ ಚಿನ್ನ, ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸುವ ಪದ್ದತಿಯಿದೆ. ಅದರಲ್ಲೂ ದೀಪಾವಳಿ (Deepavali) ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ದೀಪಾವಳಿ ಹಬ್ಬದಂದು ಭಾರೀ ಪ್ರಮಾಣದಲ್ಲಿ ಭಾರತದಲ್ಲಿ ಚಿನ್ನ(Gold) ಮಾರಾಟವಾಗುತ್ತದೆ.

    ಚಿನ್ನದ ಬೇಡಿಕೆ ಹೆಚ್ಚಿದಂತೆ ಈಗ ದರವೂ ಭಾರೀ ಏರಿಕೆ ಕಾಣುತ್ತಿದ. ಟ್ರಂಪ್‌ ಒಂದೊಂದು ನಿರ್ಧಾರ ಪ್ರಕಟಿಸುತ್ತಿದ್ದಂತೆ ಷೇರು ಮಾರುಕಟ್ಟೆಗಳು ಪತನಗೊಳ್ಳುತ್ತಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಪರಿಣಾಮ ವಿಶ್ವಾದ್ಯಂತ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಮಾಡುತ್ತಿದ್ದತೆ ಈ ಲೋಹಗಳ ಬೆಲೆ ರಾಕೆಟ್‌ ವೇಗದಂತೆ ಮೇಲಕ್ಕೆ ಏರುತ್ತಿದೆ.

    ಚಿನ್ನವನ್ನು ಆಭರಣವನ್ನಾಗಿಯೂ ಖರೀದಿಸಬಹುದು ಅಥವಾ ಹೂಡಿಕೆ ಮಾಡಬಹುದು. ಆಭರಣವಾಗಿ ಚಿನ್ನ ಖರೀದಿ ಮಾಡಿದಾಗ ಮೇಕಿಂಗ್‌ ಚಾರ್ಜ್‌ ಬೀಳುತ್ತದೆ. ಒಂದು ವೇಳೆ ಮಾರಾಟ ಮಾಡುವಾಗಲೂ ಅದನ್ನು ಪರಿಶೀಲಿಸುವಾಗ ಇತರ ಕಾರಣಗಳಿಂದ ತೂಕ ಸ್ವಲ್ಪ ಕಡಿಮೆಯಾಗುತ್ತದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಜುವೆಲ್ಲರಿಗಳಲ್ಲಿ ನಾಣ್ಯಗಳನ್ನು ಖರೀದಿ ಮಾಡಿದರೆ ನಂತರ ಮಾರಾಟ ಮಾಡಿದರೂ ಆಗಿನ ಮಾರುಕಟ್ಟೆಯ ಬೆಲೆಯೇ ಸಿಗುತ್ತದೆ.

    ಒಂದು ವೇಳೆ ಚಿನ್ನವನ್ನು ಈಗಲೇ ಖರೀದಿಸಬೇಕೆಂದೇ ಇಲ್ಲ. ಹಲವಾರು ಜುವೆಲ್ಲರಿ ಮಳಿಗೆಗೆಗಳು ಪ್ರತಿ ತಿಂಗಳು ನಿಗದಿತ ಪ್ರಮಾಣ ಹಣದ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. 11 ತಿಂಗಳ ನಂತರ ಚಿನ್ನ ಖರೀದಿಸಬಹುದು. ಚಿನ್ನ ಖರೀದಿ ಮಾಡುವ ಸಂದರ್ಭದಲ್ಲಿ ಕಂಪನಿಗಳು ಹಲವಾರು ರಿಯಾಯಿತಿಗಳನ್ನು ಪ್ರಕಟಿಸುತ್ತವೆ.

    ಬಹಳಷ್ಟು ಖಾಸಗಿ ಸಂಸ್ಥೆಗಳು ಡಿಜಿಟಲ್‌ ರೂಪದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತವೆ. ಇಲ್ಲೂ ಈಗ ಹೂಡಿಕೆ ಮಾಡಬಹುದು. ಇದರ ಹೊರತಾಗಿ ಚಿನ್ನದ ಮ್ಯೂಚುಬಲ್‌ ಫಂಡ್‌ ಅಥವಾ ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ನಲ್ಲಿ(ಗೋಲ್ಡ್ ಇಟಿಎಫ್‌) ಯೂನಿಟ್‌ ಲೆಕ್ಕದಲ್ಲಿ ಖರೀದಿ ಮಾಡಬಹುದು. ಆದರೆ ಇಲ್ಲಿ ಖರೀದಿಸಿದ ಚಿನ್ನವನ್ನು ನಿಮಗೆ ಖರೀದಿ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ದರ ಬದಲಾಗುತ್ತದೆ.

  • ನ್ಯಾಮತಿ ಎಸ್‍ಬಿಐ ಗ್ರಾಹಕರಿಗೆ ಗುಡ್‌ನ್ಯೂಸ್‌ – ಕಳ್ಳತನವಾಗಿದ್ದ 17 ಕೆಜಿ ಚಿನ್ನ ಬ್ಯಾಂಕ್‌ಗೆ ವಾಪಸ್‌

    ನ್ಯಾಮತಿ ಎಸ್‍ಬಿಐ ಗ್ರಾಹಕರಿಗೆ ಗುಡ್‌ನ್ಯೂಸ್‌ – ಕಳ್ಳತನವಾಗಿದ್ದ 17 ಕೆಜಿ ಚಿನ್ನ ಬ್ಯಾಂಕ್‌ಗೆ ವಾಪಸ್‌

    ದಾವಣಗೆರೆ: ಕಳೆದ ವರ್ಷದ ದೀಪಾವಳಿ ಮುನ್ನಾ ದಿನ ನ್ಯಾಮತಿಯ (Nyamathi) ಎಸ್‍ಬಿಐನಲ್ಲಿ (SBI) ನಡೆದಿದ್ದ 17 ಕೆಜಿ ಚಿನ್ನ (Gold) ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದೆ. ಗ್ರಾಹಕರ ಬಂಗಾರವನ್ನು ಪೊಲೀಸರು ಬ್ಯಾಂಕ್‍ಗೆ ಹಸ್ತಾಂತರಿಸಿದ್ದಾರೆ.

    ಅಕ್ಟೋಬರ್ 2024ರ 28ರಂದು ಕಳ್ಳತನ ನಡೆದಿತ್ತು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಅಲ್ಲಿ ಪಕ್ಕಾ ಹಾಲಿವುಡ್ ಸಿನೆಮಾ ಮೀರಿಸುವಂತೆ ಸಂಚು ಮಾಡಿ ಕಳ್ಳತನ ಮಾಡಲಾಗಿತ್ತು. ಆ ಬ್ಯಾಂಕಿನಿಂದ 12.95 ಕೋಟಿ ರೂ. ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ಕದ್ದು ಕಳ್ಳರು ಕಾಲ್ಕಿತ್ತಿದ್ದರು. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ – ತಮಿಳುನಾಡಿನ ಪಾಳು ಬಾವಿಯಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ಯಾಂಗ್!

    ಹೊರಡುವ ಮುನ್ನ ಖತರ್ನಾಕ್ ಕಳ್ಳರು ಬ್ಯಾಂಕ್‍ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾ ಡಿವಿಆರ್ ತೆಗೆದುಕೊಂಡು, ಇಡಿ ಬ್ಯಾಂಕ್ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್‍ನಲ್ಲಿ ಬಂಗಾರ ಅಡವಿಟ್ಟಿದ್ದ ಗ್ರಾಹಕರು ಅಕ್ಷರಶಃ ಕಂಗಾಲಾಗಿದ್ದರು.

    ದಾವಣಗೆರೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಬಂಗಾರ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಹಿನ್ನಲೆ ಪೊಲೀಸರು ಗ್ರಾಹಕರ ಸಮ್ಮುಖದಲ್ಲಿ ಎಲ್ಲ ಬಂಗಾರವನ್ನು ಬ್ಯಾಂಕ್‍ಗೆ ಹಸ್ತಾಂತರ ಮಾಡಿದ್ದಾರೆ.

    ಪೊಲೀಸರು ಹಸ್ತಾಂತರ ಮಾಡುತ್ತಿದ್ದಂತೆ ಸೇರಿದ್ದ ಎಸ್‍ಬಿಐ ಗ್ರಾಹಕರು, ಕಳ್ಳತನ ನಡೆದ ದಿನ ತಮ್ಮ ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಎಸ್‌ಬಿಐ ಬ್ಯಾಂಕ್ ದರೋಡೆ ಕೇಸ್ – 12.96 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ್ದ 5 ಆರೋಪಿಗಳು ಅರೆಸ್ಟ್

  • 9 ಲಕ್ಷ ಕೋಟಿ ದಾಟಿದ RBI ಚಿನ್ನದ ಮೀಸಲು ಸಂಗ್ರಹ

    9 ಲಕ್ಷ ಕೋಟಿ ದಾಟಿದ RBI ಚಿನ್ನದ ಮೀಸಲು ಸಂಗ್ರಹ

    ಮುಂಬೈ: ಈ ತಿಂಗಳ (ಅಕ್ಟೋಬರ್) 10ರ ವೇಳೆಗೆ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣವು 19,153 ಕೋಟಿ ರೂ. ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಆರ್‌ಬಿಐ (RBI) ಚಿನ್ನದ ಮೀಸಲು ಸಂಗ್ರಹದ ಪ್ರಮಾಣ 9 ಲಕ್ಷ ಕೋಟಿ ರೂ. ದಾಟಿದೆ ಎಂದು ಆರ್‌ಬಿಐ ತಿಳಿಸಿದೆ.

    ಈ ಮೂಲಕ ಒಟ್ಟು ಚಿನ್ನದ ಮೀಸಲು ಸಂಗ್ರಹ (RBI Gold Reserves) 61.41 ಲಕ್ಷ ಕೋಟಿ ರೂ. ಅಷ್ಟಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ತಿಳಿಸಿದೆ. ಇದನ್ನೂ ಓದಿ: RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

    ಆರ್‌ಬಿಐ ಬಳಿ ಇರುವ ವಿದೇಶಿ ಕರೆನ್ಸಿಗಳ ಸಂಪತ್ತಿನ ಮೌಲ್ಯ 49,333 ಕೋಟಿ ಕಡಿಮೆಯಾಗಿದ್ದು, 50.35 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹ 31,642 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿಯಿದೆ: RBI

  • ದೀಪಾವಳಿಗೆ ಬೆಳ್ಳಿ-ಬಂಗಾರ ಬಲು ಭಾರ – 10 ಗ್ರಾಂ ಚಿನ್ನ ಒಂದೂವರೆ ಲಕ್ಷಕ್ಕೆ ತಲುಪುತ್ತಾ?

    ದೀಪಾವಳಿಗೆ ಬೆಳ್ಳಿ-ಬಂಗಾರ ಬಲು ಭಾರ – 10 ಗ್ರಾಂ ಚಿನ್ನ ಒಂದೂವರೆ ಲಕ್ಷಕ್ಕೆ ತಲುಪುತ್ತಾ?

    ಬೆಂಗಳೂರು: ದೀಪಾವಳಿಗೂ ಮೊದಲೇ ಬೆಳ್ಳಿ-ಚಿನ್ನ ಪೈಪೋಟಿಗೆ ಬಿದ್ದಿದೆ. ಇತ್ತ ಚಿನ್ನ (Gold) ಬಿಟ್ಟು ಬೆಳ್ಳಿ ಕಡೆ ಮುಖ ಮಾಡಿದವರಿಗೂ ಬಿಗ್ ಶಾಕ್ ಆಗ್ತಿದೆ. ಬಂಗಾರದ ಜೊತೆಗೆ ಬೆಳ್ಳಿ ಬೆಲೆಯೂ ದಿಢೀರನೇ ಏರುತ್ತಿದೆ. ಹಾಗಿದ್ರೆ ಧನತ್ರಯೋದಶಿಗೆ ಚಿನ್ನ-ಬೆಳ್ಳಿ ಇನ್ನಷ್ಟು ಏರಿಕೆಯಾಗುತ್ತಾ? ಈ ಕುತೂಹಲ ನಿಮಗೂ ಇದ್ರೆ ಮುಂದೆ ಓದಿ..

    ಯಾವುದೇ ಹಬ್ಬ ಇರಲಿ ಹೊಸ ಬದುಕಿನ ಜೊತೆಗೆ ಚಿನ್ನ ಬೆಳ್ಳಿ ಖರೀದಿ ಮಾಡೋದು ವಾಡಿಕೆ. ಇನ್ನು ದೀಪಾವಳಿಯಲ್ಲಂತೂ (Deepavali) ಚಿನ್ನ ಬೆಳ್ಳಿ ಖರೀದಿಯಲ್ಲಿ ಜನ ಮುಗಿ ಬಿದ್ದಿರುತ್ತಾರೆ. ಜನ ಸಾಮಾನ್ಯರಿಗೆ ಚಿನ್ನ-ಬೆಳ್ಳಿಯ ಮೇಲೆ ಸಾಕಷ್ಟು ವ್ಯಾಮೋಹವಿದೆ. ಹಬ್ಬ ಬಂದ್ರೆ ಸಾಕು ಚಿನ್ನ ಅಥವಾ ಬೆಳ್ಳಿ ಕೊಂಡರೇನೇ ಶುಭ ಅನ್ನೋ ನಂಬಿಕೆಯೂ ಬೇರೂರಿದೆ. ಹಾಗಾಗೇ ಹಬ್ಬಗಳು ಹತ್ತಿರ ಆಗ್ತಿದ್ದಂತೆ ಚಿನ್ನ ಬೆಳ್ಳಿ ರೇಟ್ ಹೆಚ್ಚಾಗ್ತಿರುತ್ತೆ. ಆದ್ರೆ ಈ ಬಾರಿ ಚಿನ್ನ-ಬೆಳ್ಳಿ ರೇಟ್ (Gold And Silver Price Hike) ಸಖತ್ ಪೈಪೋಟಿಯೊಂದಿಗೆ ಜನರಿಗೆ ಶಾಕ್ ಕೊಡುತ್ತಿವೆ.

    ಈಗಾಗಲೇ ಚಿನ್ನದ ರೇಟ್ ಅಂತೂ ಕೇಳೋ ಹಾಗಿಲ್ಲ. 10 ಗ್ರಾಂ ಚಿನ್ನದ ರೇಟ್ 1 ಲಕ್ಷ ಗಡಿ ದಾಟಿದ್ದಲ್ಲದೇ 1 ಲಕ್ಷ 20 ಸಾವಿರಕ್ಕೆ ಬಂದು ನಿಲ್ಲುತ್ತಿದೆ. ದೀಪಾವಳಿ ವೇಳೆಗೆ ಒಂದೂವರೆ ಲಕ್ಷ ತಲುಪುವ ಸಾಧ್ಯತೆಯಿದೆ. ಜೊತೆಗೆ ಇನ್ನೇನು ಈ ವಾರ ಕಳೆದ್ರೆ ದೀಪಾವಳಿ. ದೀಪಾವಳಿಗೆ ಬೆಳ್ಳಿ ದೀಪನೋ.. ಬೆಳ್ಳಿ ಲಕ್ಷ್ಮಿವಿಗ್ರಹವೋ ಹೀಗೆ ಬೆಳ್ಳಿಯಲ್ಲಿ ಏನಾದರೂ ಖರೀದಿಸೊಕೆ ಮುಂದಾದವರಿಗೂ ಬೆಲೆಯೂ ಕೈ ಸುಡುವಂತೆ ಮಾಡಿದೆ. ದೀಪಾವಳಿ ಹೊತ್ತಿಗೆಲ್ಲಾ ಬೆಳ್ಳಿ ಬೆಲೆ ಕೆಜಿಗೆ 2 ಲಕ್ಷ ರೂ. ದಾಟಲಿದೆ ಅನ್ನೋ ಮಾತುಗಳೂ ಕೇಳಿ ಬರ್ತಿದೆ. ಇದೇಲ್ಲದಕ್ಕೂ ಹಲವು ಕಾರಣಗಳನ್ನ ಚಿನ್ನದ ವ್ಯಾಪಾರಿಗಳು ಕೊಡ್ತಿದ್ದಾರೆ.

    ಅಕ್ಷಯ ತೃತಿಯದಂತೆ ಧನತ್ರಯೋದಶಿ!
    ಅಕ್ಷಯ ತೃತಿಯದಂತೆ ಧನತ್ರಯೋದಶಿ. ಧನತ್ರಯೋದಶಿ ದಿನ ಚಿನ್ನ ಹಾಗೂ ಬೆಳ್ಳಿ ಖರೀದಿ ಮಾಡಿದ್ರೆ ಒಳಿತಾಗುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಈ ಬೆಲೆ ಏರಿಕೆ ನಡುವೆ ಧನತ್ರಯೋದಶಿಗೂ ಜನ ಸಂಕಷ್ಟ ಎದುರಿಸುವಂತಾಗಿದೆ.

    ಚಿನ್ನ-ಬೆಳ್ಳಿ ದರ ಏರಿಕೆಗೆ ಕಾರಣಗಳೇನು?
    – ಅಮೆರಿಕದ ಅಧ್ಯಕ್ಷ ಟ್ರಂಪ್ ನೀತಿಗಳಿಂದಾಗಿ ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತ
    – ಹೂಡಿಕೆದಾರರು ಡಾಲರ್ ಬದಲು ಚಿನ್ನದ ಖರೀದಿಗೆ ಮುಂದಾಗಿರೋದು
    – ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಹೆಚ್ಚಳ
    – ಕೈಗಾರಿಕೆ ಉದ್ದೇಶದಿಂದ ಬೆಳ್ಳಿ ಬಳಕೆ
    – ಇರಾನ್-ಇಸ್ರೇಲ್, ಉಕ್ರೇನ್-ರಷ್ಯಾ ಯುದ್ಧಗಳ ಪರಿಣಾಮ

  • ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳ ಕೊಲೆ – ಸತ್ಯ ಹೊರಬರುತ್ತಿದ್ದಂತೆ ಆರೋಪಿ ಆತ್ಮಹತ್ಯೆ

    ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳ ಕೊಲೆ – ಸತ್ಯ ಹೊರಬರುತ್ತಿದ್ದಂತೆ ಆರೋಪಿ ಆತ್ಮಹತ್ಯೆ

    – ಕೊಲೆ ಮಾಡಿ ಹೃದಯಾಘಾತ ಎಂದು ಬಿಂಬಿಸಿದ್ದ ಆರೋಪಿ

    ಹಾಸನ: ಚಿನ್ನದ ಮಾಂಗಲ್ಯ ಸರದ (Mangalsutra) ಆಸೆಗೆ ಮಾವನ ಮಗಳನ್ನೇ ಕೊಂದು ಹೃದಯಾಘಾತ (Heart Attack) ಎಂದು ಬಿಂಬಿಸಿ, ಸತ್ಯ ಹೊರಬರುತ್ತಿದ್ದಂತೆ ಆರೋಪಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arasikere) ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಶಕುಂತಲ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಮಾವನ ಮಗಳನ್ನೇ ಕೊಂದ ಆರೋಪಿ. ತನಿಖೆ ನಂತರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 27 ವರ್ಷಗಳ ಹಿಂದೆ ಪಾಲಾಕ್ಷ ಜೊತೆ ವಿವಾಹವಾಗಿದ್ದ ಶಕುಂತಲಾ, ಮಕ್ಕಳಿಲ್ಲದ ಕಾರಣ ಮನೆಯಲ್ಲಿ ಇಬ್ಬರೇ ವಾಸವಿದ್ದರು. ಆ.20 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾವನ ಮಗಳ ಮನೆಗೆ ಶಿವಮೂರ್ತಿ ಬಂದಿದ್ದ. ಮನೆಗೆ ಬರುವಾಗಲೇ ನಕಲಿ ಚಿನ್ನದ ಸರ ತಂದಿದ್ದ. ಬಳಿಕ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ನಕಲಿ ಚಿನ್ನದ ಸರ ಹಾಕಿದ್ದ. ದನ ಮೇಯಿಸಲು ಹೋಗಿದ್ದ ಶಕುಂತಲಾ ಪತಿ ಪಾಲಾಕ್ಷ ವಾಪಸ್ ಮನೆಗೆ ಬಂದ ವೇಳೆ ಶಕುಂತಲಾ ನೆಲದ ಮೇಲೆ ಬಿದ್ದಿದ್ದಳು. ಇದನ್ನೂ ಓದಿ: ನಾವು ಮಾಡುವ ಈ ಸಣ್ಣ ತಪ್ಪುಗಳೇ ಸೈಬರ್‌ ಅಪರಾಧಕ್ಕೆ ದಾರಿ – 7 ತಿಂಗಳಲ್ಲಿ ಬರೋಬ್ಬರಿ 861 ಕೋಟಿ ಲೂಟಿ

    ಪತ್ನಿ ನೆಲದ ಮೇಲೆ ಬಿದ್ದಿರುವ ಬಗ್ಗೆ ಪಾಲಾಕ್ಷ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಶಕುಂತಲಾ ಸಾವನ್ನಪ್ಪಿರುವ ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಶಕುಂತಲಾ ಸಹೋದರಿಯರು ಪತಿ ಪಾಲಾಕ್ಷ ವಿರುದ್ಧವೇ ಆರೋಪ ಮಾಡಿದ್ದರು. ಇದೇ ವೇಳೆ ಘಟನಾ ಸ್ಥಳಕ್ಕೆ ಬಂದಿದ್ದ ಆರೋಪಿ ಶಿವಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ವೇಳೆ ಗ್ರಾಮಸ್ಥರು ಶಿವಮೂರ್ತಿ ಮಾತನ್ನೇ ನಂಬಿದ್ದರು. ಆದರೆ ಸಾವಿನ ಬಗ್ಗೆ ಅನುಮಾನಗೊಂಡ ಶಕುಂತಲಾ ಸಂಬಂಧಿಕ 112ಕ್ಕೆ ಕರೆ ಮಾಡಿದ ಹಿನ್ನೆಲೆ ಸ್ಥಳಕ್ಕೆ ಜಾವಗಲ್ ಪೊಲೀಸರು ಆಗಮಿಸಿದ್ದರು. ಈ ವೇಳೆ ಹೃದಯಾಘಾತವಾಗಿದೆ ಮರಣೋತ್ತರ ಪರೀಕ್ಷೆ ಬೇಡ ಎಂದು ಶಿವಮೂರ್ತಿ ಹೇಳಿದ್ದಾನೆ. ಅಲ್ಲದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂಗೆ ಮರಣೋತ್ತರ ಪರೀಕ್ಷೆ ಬೇಡ ಎಂದು ಗ್ರಾಮದ ಕೆಲವರು ಫೋನ್ ಮಾಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯ ಕೊಂದ ಪ್ರಿಯಕರ

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಂತೆ ಶಿವಮೂರ್ತಿ ಭಯಗೊಂಡಿದ್ದ. ಗ್ರಾಮದ ಹಲವೆಡೆ ಸಿಸಿಟಿವಿ ಅಳವಡಿಸಿದ್ದು, ಶಿವಮೂರ್ತಿ ಸಿಸಿಟಿವಿ ಇದ್ದ ಕಡೆ ಓಡಾಡುವುದನ್ನೇ ಬಿಟ್ಟಿದ್ದ. ಶಿವಮೂರ್ತಿ ಪತ್ನಿ ಗ್ರಾ.ಪಂ. ಸದಸ್ಯೆ ಆಗಿದ್ದರು. ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಹೆದರಿದ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿಯೇ ನೇಣುಬಿಗಿದುಕೊಂಡು ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ ನಂತರ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಬಯಲಾಗಿದೆ. ಚಿನ್ನದ ಸರ ಕದ್ದ ಶಿವಮೂರ್ತಿ ಅದನ್ನು ಜಾವಗಲ್‌ನ ಚಾಮುಂಡೇಶ್ವರಿ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟಿದ್ದ. ಸದ್ಯ ಪೊಲೀಸರು ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರವಾಡ | ಯೂಟ್ಯೂಬರ್‌ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ

  • ದಾವಣಗೆರೆ | ವೃದ್ಧ ದಂಪತಿಯ ಕೈಕಾಲು ಕಟ್ಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್

    ದಾವಣಗೆರೆ | ವೃದ್ಧ ದಂಪತಿಯ ಕೈಕಾಲು ಕಟ್ಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಗ್ಯಾಂಗ್

    ದಾವಣಗೆರೆ: ಐವರು ಮುಸುಕುಧಾರಿಗಳು ವೃದ್ಧ ದಂಪತಿಯ ಕೈಕಾಲು ಕಟ್ಟಿ 8.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ (Gold) ದರೋಡೆ ಮಾಡಿದ ಘಟನೆ ಚನ್ನಗಿರಿ (Channagiri) ತಾಲೂಕಿನ ಕಾಕನೂರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸಾವಿತ್ರಮ್ಮ (60) ಹಾಗೂ ಮಾದಪ್ಪ (62) ಎಂಬವರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಕೈಕಾಲು ಕಟ್ಟಿ, ಚಿನ್ನಾಭರಣ ದರೋಡೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಕಳ್ಳರು ಪರಾರಿಯಾಗಿದ್ದಾರೆ. ಇದನ್ನೂ ಓದಿ: 17ರ ಹುಡುಗನ ಜೊತೆ 30ರ ಆಂಟಿ ಚಕ್ಕಂದ – ಏಕಾಂತದಲ್ಲಿದ್ದಾಗ ನೋಡಿದ ಬಾಲಕಿ ಕತ್ತು ಹಿಸುಕಿ ಕೊಲೆ

    ಸ್ಥಳದಲ್ಲಿ ಸಂತೆಬೆನ್ನೂರು (Santebennuru) ಠಾಣೆಯ ಪೊಲೀಸರು ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆದಿದೆ. ದರೋಡೆ ಗ್ಯಾಂಗ್ ಬಂಧನಕ್ಕೆ ಎಸ್‍ಪಿ ಉಮಾ ಪ್ರಶಾಂತ್ ತಂಡ ರಚಿಸಿದ್ದಾರೆ. ಇದನ್ನೂ ಓದಿ: ಬಾಲಕನ ಕೊಲೆ ಆರೋಪ – ಹಿಗ್ಗಾಮುಗ್ಗಾ ಥಳಿಸಿ ದಂಪತಿಯ ಹತ್ಯೆ

  • ಏರುತ್ತಿದೆ ಚಿನ್ನದ ಬೆಲೆ – 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ

    ಏರುತ್ತಿದೆ ಚಿನ್ನದ ಬೆಲೆ – 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ

    ನವದೆಹಲಿ: ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. 2026ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,25,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಸಿಐಸಿಐ ಬ್ಯಾಂಕಿನ ಎಕನಾಮಿಕ್‌ ರಿಸರ್ಚ್‌ ಗ್ರೂಪ್‌ ತಿಳಿಸಿದೆ.

    2025ರ ಅಂತ್ಯದ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂಗೆ 99,500 ರೂ. ನಿಂದ 1,10,000 ರೂ. ವರೆಗೆ ವಹಿವಾಟು ನಡೆಸುತ್ತದೆ ಎಂದು ಗ್ರೂಪ್ ವಿಶ್ಲೇಷಿಸಿದೆ.‌ ಇದನ್ನೂ ಓದಿ: ಛತ್ತೀಸ್‌ಗಢ | ಬಲರಾಂಪುರದಲ್ಲಿ ಅಣೆಕಟ್ಟು ಕುಸಿದು ಪ್ರವಾಹ – ನಾಲ್ವರು ಸಾವು, ಮೂವರು ನಾಪತ್ತೆ

    2025 ರಲ್ಲಿ ಜಾಗತಿಕ ಚಿನ್ನದ ಬೆಲೆಗಳು ಇಲ್ಲಿಯವರೆಗೆ ಶೇ.33 ರಷ್ಟು ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ 2025 ರ ಅಂತ್ಯಕ್ಕೆ ಒಂದು ಔನ್ಸ್‌ಗೆ (28.34 ಗ್ರಾಂ) ಸರಾಸರಿ 3,400-3,600 ಡಾಲರ್‌ಗೆ ತಲುಪಲಿದೆ. ಇದು, 2026 ರ ಮೊದಲಾರ್ಧದಲ್ಲಿ ಒಂದು ಔನ್ಸ್‌ಗೆ 3,600-3,800 ಡಾಲರ್‌ಗೆ ತಲುಪಬಹುದು ಎಂದು ವರದಿ ತಿಳಿಸಿದೆ.

    ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ತೀವ್ರಗೊಂಡರೆ, ಈ ಶ್ರೇಣಿಗಳಲ್ಲಿ ಮತ್ತಷ್ಟು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದೆ. ಇದನ್ನೂ ಓದಿ: 2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್‌, ಅಫ್ಘಾನ್‌, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ