Tag: Gokak Falls

  • 180 ಅಡಿ ಎತ್ತರದಿಂದ ಕಂದು ಬಣ್ಣದಲ್ಲಿ ಧುಮ್ಮಿಕ್ಕುತ್ತಿದೆ ಗೋಕಾಕ್ ಫಾಲ್ಸ್

    180 ಅಡಿ ಎತ್ತರದಿಂದ ಕಂದು ಬಣ್ಣದಲ್ಲಿ ಧುಮ್ಮಿಕ್ಕುತ್ತಿದೆ ಗೋಕಾಕ್ ಫಾಲ್ಸ್

    ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ಜೋರಾಗಿದೆ. ವರುಣನ ಅಬ್ಬರಕ್ಕೆ ಜಲಪಾತ, ನದಿಗಳು ತುಂಬಿ ಹರಿಯುತ್ತಿವೆ. ಹೀಗೆ ಜಿಲ್ಲೆಯ ಪ್ರಖ್ಯಾತ ಗೋಕಾಕ್ ಫಾಲ್ಸ್ ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಫಾಲ್ಸ್ ನೋಡಲು ಈಗ ಪ್ರವಾಸಿಗರ ದಂಡೆ ಆಗಮಿಸುತ್ತಿದೆ.

    ಗೋಕಾಕ್ ಫಾಲ್ಸ್ ಭಾರತದ ನಯಾಗಾರ ಫಾಲ್ಸ್ ಎಂದು ಖ್ಯಾತಿ ಗಳಿಸಿದೆ. ವರುಣನ ಅಬ್ಬರ ಜೋರಾಗಿದ್ದು, ಫಾಲ್ಸ್ ಜೀವ ಕಳೆ ಬಂದಿದೆ. ಫಾಲ್ಸ್ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. 180 ಅಡಿ ಎತ್ತರಿಂದ ಕಂದು ಬಣ್ಣದ ನೀರು ಧುಮ್ಮಿಕ್ಕುತ್ತಿದ್ದು, ಈ ಸುಂದುರ ದೃಶ್ಯ ನೋಡಲು ನೂರಾರು ಪ್ರವಾಸಿಗರು ಸ್ಥಳದಲ್ಲಿ ಜಮಾಯಿಸಿದ್ದಾರೆ.


    ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಘಟಪ್ರಭಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ನೋಡುಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಗೋಕಾಕ್ ನಗರದಿಂದ ಕೇವಲ 6 ಕೀ. ಮೀ ದೂರದಲ್ಲಿ ಇರುವ ಫಾಲ್ಸ್ ನೋಡಲು ದೂರ ದೂರದ ಊರುಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.

    ಗೋಕಾಕ್ ಫಾಲ್ಸ್ ನಿಂದ ಧುಮ್ಮಿಕ್ಕುವ ಜಲಧಾರೆ ನೋಡಿದರೆ ಮೈ ಜುಮ್ ಅನ್ನಿಸುತ್ತದೆ. ಪಕ್ಕದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದಲೂ ಪ್ರವಾಸಿಗರು ಈ ಸೌಂದರ್ಯವನ್ನು ಸವಿಯಲು ಬರುತ್ತಿದ್ದಾರೆ. ಫಾಲ್ಸ್ ಅಷ್ಟೇ ಅಲ್ಲದೇ ಬೆಟ್ಟದ ಇಕ್ಕೆಲಗಳಲ್ಲಿ ಜೋಡಿಸಿರುವ ತೂಗು ಸೇತುವೆ ಕೂಡ ಜನರ ಆಕರ್ಷಣೆಯಾಗಿದೆ ಎಂದು ಪ್ರವಾಸಿಗರೊಬ್ಬರು ಹೇಳಿದ್ದಾರೆ.

    ಫಾಲ್ಸ್ ನೋಡೋ ಪ್ರವಾಸಿಗರು ಇಲ್ಲಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದ ನಯಾಗರಾ ಎಂದೇ ಪ್ರಸಿದ್ಧವಾಗಿರುವ ಈ ಜಲಪಾತವನ್ನು ಮಳೆಗಾಲದಲ್ಲಿ ನೋಡುವುದಕ್ಕೆ ಎರಡು ಕಣ್ಣು ಸಾಲದಾಗಿದೆ.

  • ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ – ಜಲಪಾತದಿಂದ ಕೆಳಗೆ ಬೀಳುವ ದೃಶ್ಯ ಸೆರೆ

    ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ – ಜಲಪಾತದಿಂದ ಕೆಳಗೆ ಬೀಳುವ ದೃಶ್ಯ ಸೆರೆ

    ಬೆಳಗಾವಿ: ಇಲ್ಲಿನ ಗೋಕಾಕ್ ಫಾಲ್ಸ್ ನಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಘಟಪ್ರಭಾದ ನಿವಾಸಿ ರೆಹಮಾನ್ ಉಸ್ಮಾನ್ ಕಾಜಿ (35) ಮೃತ ದುರ್ದೈವಿ. ಉಸ್ಮಾನ್ ರಂಜಾನ್ ಇದ್ದ ಪ್ರಯುಕ್ತ ಸ್ನೇಹಿತರ ಜೊತೆ ಗೋಕಾಕ್ ಫಾಲ್ಸ್ ಗೆ ಹೋಗಿದ್ದಾನೆ. ಆದರೆ ತಮಾಷೆ ಮಾಡಲು ಹೋಗಿ ಫಾಲ್ಸ್ ನ ಕೆಳಗೆ ಇಳಿದಿದ್ದಾನೆ. ನಂತರ ಫಾಲ್ಸ್ ಸ್ವಲ್ಪ ಕೆಳಗೆ ಕಲ್ಲು ಬಂಡೆ ಹಿಡಿದು ಸ್ನೇಹಿತರ ಜೊತೆ ಮಾತನಾಡುತ್ತಿರುತ್ತಾನೆ. ಬಳಿಕ ಉಸ್ಮಾನ್ ಮೇಲೆ ಎದ್ದು ತಕ್ಷಣ ಕೈ ಜಾರಿ ಜಲಪಾತಕ್ಕೆ ಧುಮುಕಿ ಮೃತಪಟ್ಟಿದ್ದಾನೆ.

    ಉಸ್ಮಾನ್ ಕೆಳಗೆ ಬೀಳುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರೀ ಮಳೆಯಿಂದ ಗೋಕಾಕ್ ಜಲಪಾತಕ್ಕೆ ಜೀವ ಕಳೆ: ವಿಡಿಯೋ ನೋಡಿ

    ಭಾರೀ ಮಳೆಯಿಂದ ಗೋಕಾಕ್ ಜಲಪಾತಕ್ಕೆ ಜೀವ ಕಳೆ: ವಿಡಿಯೋ ನೋಡಿ

    ಬೆಳಗಾವಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ, ಮಾರ್ಕಂಡೇಯ ನದಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

    ಕರ್ನಾಟಕ ಎರಡನೇ ಅತಿ ದೊಡ್ಡ ಜಲಪಾತ ಎಂದು ಹೆಸರುವಾಸಿಯಾದ ಈಗ ಈ ಫಾಲ್ಸ್ ಗೆ ಜೀವ ಕಳೆ ತುಂಬಿದೆ. ಈ ಫಾಲ್ಸ್‍ನ್ನು ಜನರು ನೋಡಲು ಮುಗಿಬಿದ್ದಿದ್ದಾರೆ. ಈ ಜಲಧಾರೆಯನ್ನು ನೋಡಿ ಜನರು ಸಂತಸಗೊಳ್ಳುತ್ತಿದ್ದಾರೆ.