Tag: Gokak Falls

  • ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ – ಗೋಕಾಕ್ ಜಲಪಾತಕ್ಕೆ ಜೀವಕಳೆ

    ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ – ಗೋಕಾಕ್ ಜಲಪಾತಕ್ಕೆ ಜೀವಕಳೆ

    – ಫಾಲ್ಸ್ ದಂಡೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಪ್ರವಾಸಿಗರ ಸಂಭ್ರಮ

    ಬೆಳಗಾವಿ: ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ (Rain) ಹಿನ್ನೆಲೆ ಪ್ರಸಿದ್ಧ ಗೋಕಾಕ್ ಜಲಪಾತಕ್ಕೆ (Gokak Falls) ಜೀವಕಳೆ ಬಂದಿದೆ.

    ಬೆಳಗಾವಿ (Belagavi) ಜಿಲ್ಲೆ ಗೋಕಾಕ್ ಬಳಿ ಇರುವ ಜಲಪಾತ ಸದ್ಯ ತನ್ನ ಜಲವೈಭವದಿಂದ ಜನರ ಕಣ್ಮನ ಸೆಳೆಯುತ್ತಿದೆ. ಭಾರತದ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್‌ನಲ್ಲಿ 180 ಅಡಿ ಎತ್ತರದಿಂದ ಜಲಧಾರೆ ಧುಮುಕುತ್ತಿದೆ. ಜಲಪಾತದ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಗೋವಾ, ಮಹಾರಾಷ್ಟ್ರ ಸೇರಿ ರಾಜ್ಯದ ನಾನಾ ಭಾಗದಿಂದ ಪ್ರವಾಸಿಗರು ಬರುತ್ತಿದ್ದಾರೆ. ಇದನ್ನೂ ಓದಿ: Chikkamagaluru | ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

    ಇನ್ನು ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ ತಡೆಯಲು ಪ್ರವಾಸೋದ್ಯಮ ಇಲಾಖೆಯಿಂದ ಸಿಬ್ಬಂದಿ ಕಾವಲು ನಿಯೋಜಿಸಲಾಗಿದೆ.ನೀರಿಗೆ ಇಳಿಯದಂತೆ ಸಿಬ್ಬಂದಿ ಫಾಲ್ಸ್‌ಗೆ ಕಾವಲಾಗಿ ನಿಯೋಜನೆ ಮಾಡಲಾಗಿದೆ. ಆದರೂ ಸಹ ದಂಡೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಪ್ರವಾಸಿಗರು ಸಂಭ್ರಮ ಪಡುತ್ತಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ, ಹಠಾತ್ ಪ್ರವಾಹ – 9 ಕಾರ್ಮಿಕರು ನಾಪತ್ತೆ

  • ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    ಬೆಳಗಾವಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರು ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದು, ಅಪಾಯವನ್ನು ಲೆಕ್ಕಿಸದೇ ಜಲಪಾತದ ತುತ್ತತುದಿಗೆ ತೆರಳಿ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳ್ಳುತ್ತಿದ್ದಾರೆ.

    ಕಳೆದ ಒಂದು ವಾರಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶ ಮತ್ತು ಬೆಳಗಾವಿಯಲ್ಲಿ ಆಗುತ್ತಿರುವ ಮಳೆಯಿಂದ ಗೋಕಾಕ್ ಜಲಪಾತ ಹಾಲಿನ ನೊರೆಯಂತೆ ಮೈದುಂಬಿ ಧುಮ್ಮುಕ್ಕುತ್ತಿದ್ದು 180 ಅಡಿ ಎತ್ತರದಿಂದ ಧುಮುಕುತ್ತಿರುವ ಜಲಧಾರೆ ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಇದನ್ನೂ ಓದಿ: ಭಾರೀ ಮಳೆಯಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧ – ರಾಜ್ಯದ ವಿವಿಧೆಡೆ ಭೂಕುಸಿತ, ಭೂಮಿ ಕಂಪಿಸಿದ ಅನುಭವ

    ಇತ್ತ ಅಪಾಯವನ್ನು ಲೆಕ್ಕಿಸದೇ ಪ್ರವಾಸಿಗರು ಜಲಪಾತದ ತುತ್ತತುದಿಗೆ ತೆರಳಿ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳ್ಳುತ್ತಿದ್ದಾರೆ. ಕೆಲವರು ಜಲಪಾತದ ಮೇಲಿನ ಬಂಡೆಗಳ ಮೇಲೆ ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದು ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟಕ್ಕೆ ಬ್ರೇಕ್ ಹಾಕುವವರೇ ಇಲ್ಲದಂತಾಗಿದೆ. ಏನಾದರೂ ಅನಾಹುತ ಸಂಭವಿಸುವ ಮೊದಲೇ ಗೋಕಾಕ್ ತಾಲೂಕಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇದನ್ನೂ ಓದಿ: ಕಾಣಿಯೂರಿನಲ್ಲಿ ಹೊಳೆಗೆ ಬಿದ್ದ ಕಾರು- ನೀರಿನಲ್ಲಿ ಕೊಚ್ಚಿಕೊಂಡು ಹೋಗಿರೋ ಶಂಕೆ

    Live Tv
    [brid partner=56869869 player=32851 video=960834 autoplay=true]

  • ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿ ಕಿಡಿಗೇಡಿಗಳಿಂದ ವಿಕೃತಿ

    ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿ ಕಿಡಿಗೇಡಿಗಳಿಂದ ವಿಕೃತಿ

    ಬೆಳಗಾವಿ: ವಿದ್ಯುತ್ ದೀಪಗಳನ್ನು ಕಳ್ಳತನ ಮಾಡುವುದಲ್ಲದೇ ಕಂಬಕ್ಕೆ ದನದ ಬುರುಡೆ ಕಟ್ಟಿ ಕಳ್ಳರು ವಿಕೃತಿ ಮೆರೆದಿರುವ ಘಟನೆ ಜಿಲ್ಲೆಯ ಗೋಕಾಕ್ ನಗರದಲ್ಲಿ ನಡೆದಿದೆ.

    ಗೋಕಾಕ್ ನಗರ – ಗೋಕಾಕ್ ಫಾಲ್ಸ್ ರಸ್ತೆ ಮಧ್ಯೆ ಸೋಲಾರ್ ದೀಪ ಅಳವಡಿಕೆ ಮಾಡಲಾಗಿತ್ತು. ಈ ವೇಳೆ ಸೋಲಾರ್ ದೀಪ ಕಳ್ಳತನ ಮಾಡಿದ ಬಳಿಕ ದೀಪದ ಕಂಬಕ್ಕೆ ಜಾನುವಾರುಗಳ ಬುರುಡೆ ಕಟ್ಟಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ

    ಎರಡ್ಮೂರು ಕಂಬಗಳಿಗೆ ಜಾನುವಾರುಗಳ ಬುರುಡೆ ಅಳವಡಿಕೆ ಮಾಡಲಾಗಿದೆ. ನಗರಸಭೆ ಅಧಿಕಾರಿಗಳ ಗಮನಕ್ಕಿದ್ದರೂ ಬುರುಡೆಗಳನ್ನು ತೆರವು ಮಾಡಿಲ್ಲ. ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅತೀ ಎತ್ತರದಲ್ಲಿ ಯೋಗ ಮಾಡಿ ದಾಖಲೆ ಬರೆದ ಐಟಿಬಿಪಿ ತಂಡ

  • ಗೋಕಾಕ್ ಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಕಂದಕಕ್ಕೆ ಬಿದ್ದವ ಪವಾಡ ಸದೃಶ ರೀತಿ ಪಾರು

    ಗೋಕಾಕ್ ಫಾಲ್ಸ್ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಕಂದಕಕ್ಕೆ ಬಿದ್ದವ ಪವಾಡ ಸದೃಶ ರೀತಿ ಪಾರು

    – ಸ್ನೇಹಿತರಿಗೆ ಲೊಕೇಶನ್ ಶೇರ್ ಮಾಡಿದ್ದ ಯುವಕ

    ಬೆಳಗಾವಿ: ಗೋಕಾಕ್ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಕಂದಕಕ್ಕೆ ಬಿದ್ದಿದ್ದ ಯುವಕ ಪವಾಡ ಸದೃಶ ರೀತಿ ಪಾರಾಗಿದ್ದು, ಸ್ನೇಹಿತರಿಗೆ ಲೊಕೇಶನ್ ಕಳುಹಿಸಿದ್ದರ ಆಧಾರದ ಮೇಲೆ ರಕ್ಷಿಸಲಾಗಿದೆ.

    ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಯುವಕ ಪ್ರದೀಪ್ ಸಾಗರ್ 140 ಅಡಿ ಕಂದಕಕ್ಕೆ ಬಿದ್ದಿದ್ದ. ಯುವಕನನ್ನು ಗೋಕಾಕ್‍ನ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ರಕ್ಷಿಸಿದ್ದಾರೆ. ಆಯೂಬ್ ಖಾನ್‍ಗೆ ಪ್ರದೀಪ್ ಸಾಗರ್ ಪೋಷಕರು ಅಳುತ್ತಲೇ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಕಾರು ಬಿಟ್ಟು ಜೆಸಿಬಿಯಲ್ಲಿ ನವ ವಿವಾಹಿತ ದಂಪತಿ ಸವಾರಿ- ವೀಡಿಯೋ ವೈರಲ್

    ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ್ ಸಾಗರ್ ಬೆಳಗಾವಿಯ ಖಾಸಗಿ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ರಜೆ ಹಿನ್ನೆಲೆ ಸ್ನೇಹಿತರ ಜೊತೆ ಟ್ರಿಪ್‍ಗೆ ಹೋಗಿದ್ದ. ಈ ವೇಳೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ್ದ ಗೋಕಾಕ್ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ, ಪ್ರದೀಪ್ ಸಾಗರ್ ಸಿಗದ್ದಕ್ಕೆ ಬರಿಗೈಲಿ ಮರಳಿದ್ದರು. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಮೊಟಕುಗೊಳಿಸಿ ತೆರಳಿದ್ದರು. ಇದನ್ನೂ ಓದಿ:  ಮೂವರು ಪ್ರಭಾವಿಗಳು ಸೇರಿ 40 ಬಿಜೆಪಿ ಶಾಸಕರು ಶೀಘ್ರವೇ ಕಾಂಗ್ರೆಸ್‍ಗೆ ಬರುತ್ತಾರೆ: ರಾಜು ಕಾಗೆ

    ಸ್ನೇಹಿತರು ಹಾಗೂ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಪ್ರದೀಪ್ ಸಾಗರ್ ಮೃತಪಟ್ಟಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಬೆಳಗಿನ ಜಾವ 4 ಗಂಟೆಗೆ ಪ್ರದೀಪ್ ಸಾಗರ್ ಸ್ನೇಹಿತರಿಗೆ ಕರೆ ಮಾಡಿದ್ದ. ಅಲ್ಲದೆ ತನ್ನ ಲೊಕೇಶನ್ ಶೇರ್ ಮಾಡಿದ್ದ. ಬಳಿಕ ಸ್ನೇಹಿತರು ಗೋಕಾಕ್ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್‍ಗೆ ಕರೆ ಮಾಡಿದ್ದರು. ಈ ವೇಳೆ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ 140 ಅಡಿ ಆಳದ ಕಂದಕಕ್ಕೆ ತೆರಳಿ ಪ್ರದೀಪ್ ಸಾಗರ್ ರಕ್ಷಿಸಿದ್ದಾರೆ. ಆಯೂಬ್ ಖಾನ್ ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರದೀಪ್ ಸಾಗರ್ ಸದ್ಯ ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಮೂರು ದಿನ ಭಾರೀ ಮಳೆ- ಗೋಕಾಕ್ ಜಲಪಾತಕ್ಕೆ ಜೀವ ಕಳೆ

    ಮೂರು ದಿನ ಭಾರೀ ಮಳೆ- ಗೋಕಾಕ್ ಜಲಪಾತಕ್ಕೆ ಜೀವ ಕಳೆ

    ಬೆಳಗಾವಿ: ಘಟ್ಟ ಪ್ರದೇಶ ಸೇರಿ ಜಿಲ್ಲೆಯ ಹಲವೆಡೆ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ನದಿ, ಹಳ್ಳ, ಕೆರೆಗಳು ಮೈದು0ಬಿವೆ. ಮೂರು ದಿನಗಳ ಮಳೆಗೆ ಗೋಕಾಕ್ ಜಲಪಾತಕ್ಕೆ ಸಹ ಜೀವ ಕಳೆ ಬಂದಿದ್ದು, ಧುಮ್ಮಿಕ್ಕಿ ಹರಿಯುತ್ತಿದೆ.

    ಕರ್ನಾಟಕದ ನಯಾಗರ ಎಂದೇ ಕರೆಯಲಾಗುವ ಗೋಕಾಕ್ ಜಲಪಾತ ಈಗ ಧುಮ್ಮಿಕ್ಕುತ್ತಿದ್ದು, ಕಣ್ಮನ ಸೆಳೆಯುತಿದ್ದೆ. ಘಟಪ್ರಭಾ ನದಿಯ ಸೌಂದರ್ಯ ಗೋಕಾಕ್ ಜಲಪಾತದಲ್ಲಿ ಗರಿಬಿಚ್ಚಿದೆ. ಸುತ್ತಲೂ ಹಚ್ಚ ಹಸಿರು ನಡುವೆ ನೀರ ಧಾರೆಯ ಸೊಬಗು, ಸ್ವರ್ಗವೇ ಧರೆಗಿಳಿದಂತಿದೆ. ನಿಸರ್ಗ ಪ್ರಿಯರಿನ್ನು ಗೋಕಾಕ್ ಜಲಪಾತ ತನ್ನತ್ತ ಸೆಳೆಯುತ್ತಿದೆ. ಆದರೆ ಲಾಕ್‍ಡೌನ್ ಜಾರಿಯಲ್ಲಿರುವದರಿಂದ ಹೆಚ್ಚು ಜನ ತೆರಳುತ್ತಿಲ್ಲ.

    ರಾಜ್ಯದ ಹಲವೆಡೆ ಮುಂಗಾರು ಅಬ್ಬರಿಸುತಿದ್ದು, ಬೆಳಗಾವಿ ಜಿಲ್ಲೆ ಹಾಗೂ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃಷ್ಣಾ ಹಾಗೂ ಉಪನದಿಗಳಾದ ದೂದಗಂಗಾ, ವೇದಗಂಗಾ ಸೇರಿ ಎಲ್ಲ ನದಿ, ಹಳ್ಳ ಕೊಳ್ಳಗಳು ಭೋರ್ಗರೆಯುತ್ತಿವೆ.

  • ಗೋಕಾಕ್ ಫಾಲ್ಸ್ ಮೇಲಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ

    ಗೋಕಾಕ್ ಫಾಲ್ಸ್ ಮೇಲಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ

    ಬೆಳಗಾವಿ: ಗೋಕಾಕ್ ಫಾಲ್ಸ್ ಮೇಲಿಂದ ಬಿದ್ದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಗೋಕಾಕ್ ಫಾಲ್ಸ್ ಮೇಲಿಂದ ಬಿದ್ದು ಟೆಕ್ಕಿ ಶಿವಾನಂದ ಕುರಬೇಟ(55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟೆಕ್ಕಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

  • ಧುಮ್ಮಿಕ್ಕಿ ಹರಿಯುತ್ತಿರೋ ಗೋಕಾಕ್ ಜಲಪಾತ

    ಧುಮ್ಮಿಕ್ಕಿ ಹರಿಯುತ್ತಿರೋ ಗೋಕಾಕ್ ಜಲಪಾತ

    – ಲೋಳಸೂರ ಸೇತುವೆ ಜಲಾವೃತ

    ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತ ಜಿಲ್ಲೆಯ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಗೋಕಾಕ್‍ನಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಜೊತೆ ಗೋಕಾಲ್ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದ್ದು, ಅನೇಕರು ಜಲಪಾತವನ್ನು ನೋಡಲು ಹೋಗಿದ್ದಾರೆ.

    ಈಗಾಗಲೇ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಜಲಾಶಯದಿಂದ ಘಟಪ್ರಭಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಗೋಕಾಕ್-ಘಟಪ್ರಭಾ ಸಂಪರ್ಕಿಸುವ ಲೋಳಸೂರ ಸೇತುವೆ ಜಲಾವೃತವಾಗಿದೆ. ಜೊತೆಗೆ ಗೋಕಾಕ್ ನಗರದ ಹೊರವಲಯದಲ್ಲಿನ ದನದಪೇಟೆಗೆ ನೀರು ನುಗ್ಗಿದೆ. ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು.

    ಇತ್ತ ಮಲಪ್ರಭಾ ನದಿ ಪ್ರವಾಹಕ್ಕೆ ರಾಮದುರ್ಗ ಸುನ್ನಾಳ, ಕಿಲಬನೂರು ಹಾಗೂ ಮುಲಂಗಿ ಗ್ರಾಮಗಳು ಅಕ್ಷರಶಃ ನಡುಗಡ್ಡೆಗಳಾಗಿವೆ. ಖಾನಾಪುರ ತಾಲೂಕಿನಲ್ಲಿ 12, ಬೆಳಗಾವಿ ತಾಲೂಕಿನಲ್ಲಿ 5 ಹಾಗೂ ರಾಮದುರ್ಗ ಸವದತ್ತಿ ತಾಲೂಕಿನಲ್ಲಿ ತಲಾ 6 ಸೇತುವೆಗಳು ಮುಳುಗಿವೆ. ಬೆಳಗಾವಿ-ಗೋವಾ ಹಾಗೂ ಬೆಳಗಾವಿ-ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

    ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಸಹ್ಯಾದ್ರಿ ಪರ್ವತಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಾಖಲೆ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಇದರಿಂದ ಜಿಲ್ಲೆಯ ಏಳು ನದಿಗಳು, ಬೆಳಗಾವಿ ನಗರದಲ್ಲಿನ ಬಳ್ಳಾರಿ ನಾಲಾ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಪ್ರವಾಹ ಪರಿಸ್ಥಿತಿ ಎದುರಿಸಲು ಬೋಟಗಳು, ಟಾಸ್ಕ್ ಪೋರ್ಸ್ ಜೊತೆ ಜಿಲ್ಲಾಡಳಿತ ಸನ್ನದ್ಧವಾಗಿದೆ.

  • ಮೈದುಂಬಿ ಧುಮ್ಮುಕ್ತಿರೋ ಗೋಕಾಕ್ ಫಾಲ್ಸ್ ಬಳಿ ಯುವಕರ ಸೆಲ್ಫಿ ಹುಚ್ಚಾಟ

    ಮೈದುಂಬಿ ಧುಮ್ಮುಕ್ತಿರೋ ಗೋಕಾಕ್ ಫಾಲ್ಸ್ ಬಳಿ ಯುವಕರ ಸೆಲ್ಫಿ ಹುಚ್ಚಾಟ

    ಬೆಳಗಾವಿ: ಜಿಲ್ಲೆಯ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ನೀರಿನ ಭಯವಿಲ್ಲದೆ ಯುವಕರು ತಮ್ಮ ಹುಚ್ಚಾಟ ಮೆರೆಯುತ್ತಿದ್ದಾರೆ.

    ಹೌದು. ಜಲಪಾತದ ತುದಿಗೆ ಹೋಗಿ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಮಳೆ ತಗ್ಗಿದರೂ ಅಪಾಯದ ಮಟ್ಟ ಮೀರಿ ಘಟಪ್ರಭಾ ನದಿ ಹರಿಯುತ್ತಿದೆ. 180 ಅಡಿಯಿಂದ ಧುಮ್ಮುಕ್ಕುತ್ತಿರುವ ಜಲಪಾತದ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಯುವಕರು ಮಜಾ ಮಾಡುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

    ಭಾರತದ ನಯಾಗಾರ್ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಗೋಕಾಕ್ ಫಾಲ್ಸ್ ಸಮೀಪ ಯಾರೂ ಹೋಗದಂತೆ ತಾಲೂಕು ಆಡಳಿತ ಇನ್ನೂ ಕಡಿವಾಣ ಹಾಕಿಲ್ಲ. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಇದಕ್ಕೆ ಕಡಿವಾಣ ಹಾಕೋ ಅಗತ್ಯತೆ ಇದ್ದು, ಜಲಪಾತ ನೋಡಲು ಬಂದವರು ಕಾಲುಜಾರಿ ಬಿದ್ರೆ ಯಾರು ಹೊಣೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

  • ಮಳೆಯ ಅಬ್ಬರಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ

    ಮಳೆಯ ಅಬ್ಬರಕ್ಕೆ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ

    ಚಾಮರಾಜನಗರ: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ವಿಪರೀತ ಮಳೆಯಿಂದಾಗಿ ಭೂ ಕುಸಿತ ಸಂಭವಿಸುತ್ತಿದ್ದು, ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿಯೂ ಸಹ ರಸ್ತೆ ಕುಸಿದ ಪರಿಣಾಮ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

    ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ಕುಸಿತ ಸಂಭವಿಸಿದೆ. ಮಲೆಮಹದೇಶ್ವರ ಬೆಟ್ಟದ ಪಾಲಾರ್ ಮಾರ್ಗದಲ್ಲಿ ಮೂರು ಕಡೆ ರಸ್ತೆ ಕುಸಿತವಾಗಿದೆ. ರಸ್ತೆ ಕುಸಿತದ ಪರಿಣಾಮ ಬೆಳಗ್ಗೆಯಿಂದಲೇ ಭಾರೀ ವಾಹನಗಳು ಹಾಗೂ ಅಂತರರಾಜ್ಯ ಸಂಪರ್ಕಿಸುವ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಮಲೆ ಮಹದೇಶ್ವರ ಬೆಟ್ಟದಿಂದ ಹೋಗೆನಕಲ್ ಫಾಲ್ಸ್ ಗೆ ಸಂಪರ್ಕ ಕಲ್ಪಿಸುವ ಕೆಲ ರಸ್ತೆಗಳಲ್ಲೂ ಗುಡ್ಡ ಕುಸಿತ ಉಂಟಾಗಿದ್ದು, ಜೆಸಿಬಿಯಿಂದ ಮಣ್ಣು ತೆಗೆಯುವ ಕೆಲಸ ಆರಂಭವಾಗಿದೆ. ಹೀಗಾಗಿ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.

    ಮಳೆಯ ಅಬ್ಬರಕ್ಕೆ ನಾಡದೇವತೆ ಚಾಮುಂಡಿ ದರ್ಶನಕ್ಕೆ ಹೋಗುವ ಚಾಮುಂಡಿ ಬೆಟ್ಟದಲ್ಲೂ ಭೂ ಕುಸಿತವಾಗಿದೆ. ಚಾಮುಂಡಿ ಬೆಟ್ಟದ ವ್ಯೂವ್ ಪಾಯಿಂಟ್ ಬಳಿಯಲ್ಲಿ ಭೂಮಿ ಕುಸಿದಿದ್ದರಿಂದ ರಸ್ತೆಯೂ ಕುಸಿತವಾಗಿದೆ. ನಂದಿ ವಿಗ್ರಹದ ಕಡೆಗೆ ಸಾಗುವ ಮಾರ್ಗದ ಸನಿಹದಲ್ಲಿಯೇ ಈ ವ್ಯೂವ್ ಪಾಯಿಂಟ್ ಇದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದಾರೆ.

    ಇತ್ತ ಮಳೆಯಬ್ಬರಕ್ಕೆ ಗೋಕಾಕ್ ಫಾಲ್ಸ್ ಬಳಿ ಇರುವ ಗುಡ್ಡ ಮತ್ತೆ ಕುಸಿಯುತ್ತಿದ್ದು, ರಸ್ತೆಗೆ ಬೃಹತ್ ಗಾತ್ರದ ಕಲ್ಲುಗಳು ಉರುಳಿ ಬಿದ್ದಿವೆ. ಬೆಳಗಾವಿ-ಗೋಕಾಕ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸವಾರರು ಆತಂಕದಲ್ಲೇ ಓಡಾಡುತ್ತಿದ್ದಾರೆ. ಉರುಳಿ ಬಿದ್ದಿರುವ ಬಂಡೆಗಲ್ಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಬೆಳಗ್ಗೆ 7 ಗಂಟೆಯಿಂದ ಮತ್ತೆ ಆರಂಭವಾಗಿದೆ. ಉರುಳಿರುವ ಎರಡು ಬೃಹತ್ ಬಂಡೆಗಳನ್ನು ಮೊದಲು ಬ್ಲಾಸ್ಟ್ ಮಾಡಿ ಅವುಗಳನ್ನು ಅಲ್ಲಿಂದ ಸಾಗಿಸಲಾಗುತ್ತದೆ.

  • ಪ್ರಸಿದ್ಧ ನಯಾಗರ ಫಾಲ್ಸ್​​ನ್ನು ಹೋಲುವ ಬೆಳಗಾವಿಯ ಗೋಕಾಕ್ ಫಾಲ್ಸ್- ವಿಡಿಯೋ ನೋಡಿ

    ಪ್ರಸಿದ್ಧ ನಯಾಗರ ಫಾಲ್ಸ್​​ನ್ನು ಹೋಲುವ ಬೆಳಗಾವಿಯ ಗೋಕಾಕ್ ಫಾಲ್ಸ್- ವಿಡಿಯೋ ನೋಡಿ

    ಬೆಳಗಾವಿ: ಜಗತ್ ಪ್ರಸಿದ್ಧ ನಯಾಗರ ಫಾಲ್ಸ್ ನೀವು ನೋಡಿರಬಹುದು. ಅದೇ ನಮ್ಮ ರಾಜ್ಯದಲ್ಲಿಯೇ ಒಂದು ಮಿನಿ ನಯಾಗರ ಫಾಲ್ಸ್ ಇದ್ದು, ರಾಜ್ಯದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಎಲ್ಲಿ ನೋಡಿದ್ರೂ ನೀರು ಕಲ್ಲು ಬಂಡೆಗಳಿಂದ ಹರಿದು ಬರುತ್ತಿರುವ ಜಲಸಾಗರ ಮುಂದೆ ಬಂದು ಎತ್ತರದ ಪ್ರದೇಶದಿಂದ ಕೆಳಕ್ಕೆ ಧುಮ್ಮುಕುವ ದೃಶ್ಯವನ್ನು ನೋಡಲು ಕಣ್ಣಿಗೆ ಹಬ್ಬ.

    ಸಕ್ಕರೆ ಬೀಡು ರಾಜ್ಯದ ಹೆಬ್ಬಾಗಿಲು ಬೆಳಗಾವಿ ಅಂದಾಕ್ಷಣ ಜನರಿಗೆ ಗಡಿ ಗಲಾಟೆ ಭಾಷಾ ವೈಷಮ್ಯ ನೆನಪಾಗುವುದು ಸಹಜ. ಆದರೆ ಇಲ್ಲಿಯ ಹಲವಾರು ಪ್ರೇಕ್ಷಣಿಯ ಸ್ಥಳಗಳ ಬಗ್ಗೆ ಇನ್ನು ಕೆಲವರಿಗೆ ಮಾಹಿತಿಯೇ ಇಲ್ಲ. ಬೆಳಗಾವಿ ಜಿಲ್ಲೆ ಭೌಗೊಳಿಕವಾಗಿ ಎತ್ತರದ ಸ್ಥಾನದಲ್ಲಿದೆ. ಮಹದಾಯಿ ಮಲಪ್ರಭಾ ಮಾರ್ಕಂಡೆಯ, ಘಟಪ್ರಭಾ ಹಿರಣ್ಯ ಕೇಶಿ, ಕೃಷ್ಣಾ ವೇದಗಂಗಾ, ದೂಧಗಂಗಾ ನದಿಗಳು ಇಲ್ಲಿ ಹರಿಯುತ್ತವೆ. ಅತಿ ಹೆಚ್ಚು ನದಿಗಳು ಹರಿಯುವ ಜಿಲ್ಲೆ ಬೆಳಗಾವಿ ಎಂದರೆ ತಪ್ಪಾಗಲಾರದು.

    ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ಸಂಗಮದಿಂದ ಸ್ವಲ್ಪ ದೂರ ಕ್ರಮಿಸಿದರೆ ಅಲ್ಲಿ ಮಿನಿ ನಯಾಗರ ಫಾಲ್ಸ್ ಸಿಗುತ್ತದೆ. ಜಗಪ್ರಸಿದ್ಧ ನಯಾಗರ ಫಾಲ್ಸ್‍ನ್ನು ಹೋಲುವ ಈ ಫಾಲ್ಸ್ ಗೆ ಗೋಕಾಕ್ ಫಾಲ್ಸ್ ಎನ್ನುತ್ತಾರೆ. ಬೆಳಗಾವಿ ಜಿಲ್ಲೆ ಗೊಕಾಕ್ ತಾಲೂಕಿನ ಗೊಕಾಕ್ ಫಾಲ್ಸ್​​ನಲ್ಲಿ ಬ್ರಿಟಿಷರು ಸ್ಥಾಪಿಸಿದ ಹತ್ತಿಯ ಗಿರಣಿಯೂ ಇದೆ. ಮಳೆಗಾಲ ಬಂತೆಂದರೆ ಈ ಮಿನಿ ನಯಾಗಾರ ಫಾಲ್ಸ್ ನೋಡಲು ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗೋವಾ ರಾಜ್ಯದಿಂದ ಜನ ಸಾಗರ ಹರಿದು ಬರುತ್ತಿದೆ. ದಿನವೊಂದಕ್ಕೆ 10 ಸಾವಿರ ಜನ ಇಲ್ಲಿ ಭೇಟಿ ನೀಡುತ್ತಿದ್ದಾರೆ. ಬೆಳಗಾವಿಯಿಂದ 60 ಕಿ.ಮೀ ದೂರದಲ್ಲಿರುವ ಈ ಗೋಕಾಕ್ ಫಾಲ್ಸ್ ಇದೆ.

    ಇಲ್ಲಿ ಅತಿ ಹಳೆಯದಾದ ತೂಗು ಸೇತುವೆಯಿದೆ. ಬ್ರಿಟಿಷರು ನಿರ್ಮಿಸಿದ ಈ ಸೇತುವೆಯಲ್ಲಿ ದಾಟುವುದೆಂದರೆ ಭಾರೀ ರೋಮಾಂಚನವಾಗುತ್ತದೆ. ಕಾಟನ್ ಮಿಲ್ ಕಾರ್ಮಿಕರಿಗಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆ ಮೇಲೆ ಪ್ರವಾಸಿಗರು ಹೋಗುವುದನ್ನು ನಿಷೇಧಿಸಲಾಗಿದೆ. ಶಿವಲಿಂಗೇಶ್ವರ ದೇವಸ್ಥಾನ ಹಾಗೂ ಹಳೆಯ ಕಾಟನ್ ಮಿಲ್ ಅಲ್ಲಿಯೇ ಸಿದ್ಧಪಡಿಸಿದ ವಸ್ತ್ರ ಉಡುಪುಗಳ ಮಳಿಗೆ ಹೀಗೆ ಒಂದು ದಿನದ ಪ್ರವಾಸಕ್ಕೆ ಈ ಫಾಲ್ಸ್ ಹೇಳಿ ಮಾಡಿಸಿದ ತಾಣವಾಗಿದೆ.

    ಭೋರ್ಗರೆಯುವ ನೀರು ವಿಶಾಲವಾಗಿ ಹರಿದು ಬರುವ ಜಲಸಾಗರವನ್ನು ನೋಡುತ್ತ ಜನ ಮೈ ಮರೆಯುತ್ತಾರೆ. ಟರ್ಬೈನ್ ನಿಂದ ವಿದ್ಯುತ್ ಉತ್ಪಾದನೆ ಮಾಡಿ ಇಲ್ಲಿಯ ಕಾಟನ್ ಮಿಲ್‍ಗೆ ಬಳಸಲಾಗುತ್ತದೆ. ಮಳೆಗಾಲದಲ್ಲಿ ಸರಿ ಸುಮಾರು ಲಕ್ಷಾಂತರ ಜನ ಇಲ್ಲಿಗೆ ಬರುವುದರಿಂದ ಕಡಲೆಕಾಯಿ, ಗೋವಿನ ಜೋಳ ಹೊಟೇಲ್ ಉದ್ಯಮದವರಿಗೆ ಉತ್ತಮ ಲಾಭ ದೊರೆಯುತ್ತದೆ.

    ಈ ಫಾಲ್ಸ್ ನಿಂದ ಸ್ವಲ್ಪ ದೂರ ಕ್ರಮಿಸಿದರೆ ಸ್ಟೆಪ್ ಫಾಲ್ಸ್ ಅಂದರೆ ಗೊಡಚಿನಮಲ್ಕಿ ಫಾಲ್ಸ್, ಘಟಪ್ರಭಾ ಪಕ್ಷಿಧಾಮಗಳು ಪ್ರೇಕ್ಷಣಿಯ ಸ್ಥಳಗಳನ್ನು ನೋಡಬಹುದು. ಒಟ್ಟಾರೆ ಮಿನಿ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv