Tag: godse

  • ‘ಗಾಂಧಿ ಗೋಡ್ಸೆ’ ನಿರ್ದೇಶಕನಿಗೆ ಜೀವ ಬೆದರಿಕೆ : ಭದ್ರತೆಗೆ ಮೊರೆ ಹೋದ ರಾಜ್ ಕುಮಾರ್

    ‘ಗಾಂಧಿ ಗೋಡ್ಸೆ’ ನಿರ್ದೇಶಕನಿಗೆ ಜೀವ ಬೆದರಿಕೆ : ಭದ್ರತೆಗೆ ಮೊರೆ ಹೋದ ರಾಜ್ ಕುಮಾರ್

    ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ಕುಮಾರ್ ಸಂತೋಷಿ (Rajkumar Santoshi) ತಮಗೆ ಜೀವ ಬೆದರಿಕೆ ಇದೆ, ಭದ್ರತೆ ನೀಡಬೇಕು ಎಂದು ಮುಂಬೈ ಪೊಲೀಸರ ಮೊರೆ ಹೋಗಿದ್ದಾರೆ. ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ‘ಗಾಂಧಿ ಗೋಡ್ಸೆ: ಏಕ್ ಯುದ್ಧ’ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ತಮಗೆ ಅನೇಕರು ಜೀವ ಬೆದರಿಕೆ ಹಾಕಿದ್ದಾರೆ. ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಭದ್ರತೆ ನೀಡಬೇಕು ಎಂದು ಅವರು ಮುಂಬೈನ ವಿಶೇಷ ಪೊಲೀಸ್ ಆಯುಕ್ತ ದೇವೇನ್ ಭಾರ್ತಿಗೆ (Deven Bharti) ಪತ್ರ ಬರೆದಿದ್ದಾರೆ.

    ಜನವರಿ 30ಕ್ಕೆ ಗಾಂಧೀಜಿ ಪುಣ್ಯತಿಥಿ. ಈ ಸಂದರ್ಭದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆದರೆ, ಜನವರಿ 26 ರಂದು ಸಿನಿಮಾ ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ನಡೆಯುತ್ತಿರುವ ಪ್ರಚಾರ ಸಂದರ್ಭದಲ್ಲಿ ಅನೇಕರು ಅಡೆತಡೆ ಉಂಟು ಮಾಡುತ್ತಿದ್ದಾರಂತೆ. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆಯೇ ತಮಗೆ ಒತ್ತಡ ಕೂಡ ಜಾಸ್ತಿ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

    ಸೂಕ್ಷ್ಮ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿರುವ ಅವರು, ಗೋಡ್ಸೆ (Godse) ಗುಂಡು ಹಾರಿಸಿದ ನಂತರವೂ ಗಾಂಧೀಜಿ (Gandhiji) ಬದುಕಿದ್ದರೆ ಏನೆಲ್ಲ ಆಗುತ್ತಿತ್ತು ಎನ್ನುವುದನ್ನು ಕಥಾವಸ್ತುವಾಗಿ ಅವರು ತಗೆದುಕೊಂಡಿದ್ದಾರೆ. ಈ ಕಥಾವಸ್ತುವೆ ವಿವಾದಕ್ಕೂ ಕಾರಣವಾಗಿದೆ. ಸ್ವತಃ ಗಾಂಧೀಜಿ ಕುಟುಂಬದವರೇ ಸಿನಿಮಾಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದೊಂದು ಕಾಲ್ಪನಿಕ ಕಥೆ ಎಂದು ಚಿತ್ರತಂಡ ಹೇಳಿಕೊಂಡರೂ, ಅಡೆತಡೆ ಮಾತ್ರ ಇನ್ನೂ ನಿಂತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ತಮಗೆ ಮಾತ್ರವಲ್ಲ, ತಮ್ಮ ಕುಟುಂಬಕ್ಕೂ ಭದ್ರತೆ ಬೇಕು ಎಂದು ಅವರು ಕೇಳಿದ್ದಾರೆ.

    ಈ ಸಿನಿಮಾದಲ್ಲಿ ದೀಪಕ್ ಅಂತಾನಿ ಅವರು ಗಾಂಧೀಜಿ ಅವರ ಪಾತ್ರವನ್ನು ನಿರ್ವಹಿಸಿದ್ದರೆ, ಗೋಡ್ಸೆಯಾಗಿ ಚಿನ್ಮಯ್ ಮಂಡ್ಲೇಕರ್ ಪಾತ್ರ ಮಾಡಿದ್ದಾರೆ. ಗಾಂಧಿ ಮತ್ತು ಗೋಡ್ಸೆ ಅವರ ಸೈದ್ಧಾಂತಿಕ ಯುದ್ಧವೇ ಈ ಸಿನಿಮಾದಲ್ಲಿದೆ. ಗೋಡ್ಸೆ ಹಾರಿಸಿದ ಗುಂಡು ಗಾಂಧೀಜಿಯನ್ನು ಕೊಲ್ಲದೇ, ಅವರು ಬದುಕಿ ಆನಂತರ ಗೋಡ್ಸೆಯನ್ನು ಕಾಣಲು ಗಾಂಧಿ ಬಯಸುತ್ತಾರೆ. ಭೇಟಿಯಾದ ನಂತರ ಅವರಿಬ್ಬರ ನಡುವೆ ನಡೆಯುವ ಸನ್ನಿವೇಶಗಳೇ ಸಿನಿಮಾವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆಧುನಿಕ ಗೋಡ್ಸೆಗಳಿಂದ ನಿತ್ಯವೂ ಗಾಂಧೀಜಿ ಹತ್ಯೆ: ಓವೈಸಿ

    ಆಧುನಿಕ ಗೋಡ್ಸೆಗಳಿಂದ ನಿತ್ಯವೂ ಗಾಂಧೀಜಿ ಹತ್ಯೆ: ಓವೈಸಿ

    ಮುಂಬೈ: ಮಹಾತ್ಮ ಗಾಂಧೀಜಿ ಅವರನ್ನು ನಾಥೂರಾಮ್ ಗೋಡ್ಸೆ ಒಂದು ಬಾರಿ ಹತ್ಯೆ ಮಾಡಿದರೆ, ಆಧುನಿಕ ಗೋಡ್ಸೆಗಳು ನಿತ್ಯವೂ ಗಾಂಧೀಜಿ ಅವರನ್ನು ಹತ್ಯೆಗೈಯುತ್ತಿದ್ದಾರೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಗಾಂಧೀಜಿ ಹೆಸರಿನಲ್ಲಿ ದೇಶವನ್ನೇ ಮರಳು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ತಮ್ಮ ನಾಯಕನೆಂದು ಪರಿಗಣಿಸುತ್ತಾರೆ. ಅವರು ಗಾಂಧೀಜಿ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ಮನಸ್ಸಿನಲ್ಲಿ ನಾಥೂರಾಮ್ ಗೋಡ್ಸೆಯ ಆಲೋಚನೆಗಳೇ ತುಂಬಿವೆ ಎಂದು ದೂರಿದರು.  ಇದನ್ನೂ ಓದಿ: ಬಿಜೆಪಿಯನ್ನ ಸೋಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಅಕ್ಬರುದ್ದೀನ್ ಓವೈಸಿ ಮನವಿ

    ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾರತದಲ್ಲೆಡೆ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಸಂವಿಧಾನವಿದೆ ಎನ್ನುವುದನ್ನೇ ಅವರು ಮರೆತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚುನಾವಣೆಗೂ ಮುನ್ನ ‘ಮಹಾ’ ಸಿಎಂಗೆ ಭಾರೀ ಹಿನ್ನಡೆ – ತನಿಖೆಗೆ ಸುಪ್ರೀಂ ಸಮ್ಮತಿ

    ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಅಕ್ಟೋಬರ್ 21ರಂದು ಮತದಾನ ನಡೆಯಲಿದೆ. 288 ಕ್ಷೇತ್ರಗಳಲ್ಲಿ ಮತದಾನವು ಏಕಕಾಲದಲ್ಲಿಯೇ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಿಟ್ಟಿನಲ್ಲಿ ಎಐಎಂಐಎಂ ಪಕ್ಷವು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  • ಬಿಜೆಪಿ ಗೋಡ್ಸೆಯನ್ನು ಎಂದೂ ಒಪ್ಪಿಕೊಂಡಿಲ್ಲ, ಗೋಡ್ಸೆ ಸಮಾಜಕ್ಕೆ ಕಪ್ಪು ಚುಕ್ಕಿ – ಶೆಟ್ಟರ್

    ಬಿಜೆಪಿ ಗೋಡ್ಸೆಯನ್ನು ಎಂದೂ ಒಪ್ಪಿಕೊಂಡಿಲ್ಲ, ಗೋಡ್ಸೆ ಸಮಾಜಕ್ಕೆ ಕಪ್ಪು ಚುಕ್ಕಿ – ಶೆಟ್ಟರ್

    ಹುಬ್ಬಳ್ಳಿ: ಬಿಜೆಪಿ ಎಂದೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಮತ್ತು ಬಿಜೆಪಿ ಕುರಿತು ರಾಹುಲ್ ಗಾಂಧಿ ಟ್ವೀಟ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿ ಗೋಡ್ಸೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    ಗೋಡ್ಸೆ ಬಗ್ಗೆ ನಳಿನ್‍ಕುಮಾರ್ ಕಟೀಲ್ ಮತ್ತು ಅನಂತಕುಮಾರ ಹೆಗ್ಡೆ ಅವರ ಟ್ವೀಟ್ ಮಾಡಿರುವುದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿರುವ ವಿಚಾರ ಬಗ್ಗೆ ಕೇಳಿದಾಗ ಅವರು ಏನ್ ಟ್ವೀಟ್ ಮಾಡಿದ್ದಾರೆ ಎಂದು ನಾನು ನೋಡಿಲ್ಲ. ಇದರ ಬಗ್ಗೆ ಕೇಳಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ಮಾಡಿದರು.

    ನಾನು ಕೇಳಿದ ಯಾವ ಪ್ರಶ್ನೆಗೂ ಸಿದ್ದರಾಮಯ್ಯ ಉತ್ತರ ನೀಡಿಲ್ಲ. ಕಾವೇರಿ ಅನಧಿಕೃತ ವಾಸದ ಬಗ್ಗೆ ಪ್ರಶ್ನೆ ಕೇಳಿದ್ದೆ ಅದರ ಬಗ್ಗೆ ಯಾವ ಉತ್ತರವನ್ನು ನೀಡಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿಯಲ್ಲಿಯೂ ದ್ವೇಷದ ರಾಜಕಾರಣ ಮಾಡುತ್ತಾರೆ. ಇಂದು ಹುಬ್ಬಳ್ಳಿ-ಧಾರವಾಡದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಸಿದ್ದರಾಮಯ್ಯ ಕಾರಣ. ಹಾವಿಗೆ ದ್ವೇಷ 12 ವರ್ಷ ಆದರೆ ಸಿದ್ದರಾಮಯ್ಯಗೆ ಜೀವ ಇರೋವರೆಗೂ ದ್ವೇಷ ಇರುತ್ತದೆ. ಮಾನ ಮರ್ಯಾದೆ ನಾಚಿಕೆ ಇಲ್ಲದ ಮನುಷ್ಯ ಎಂದರೆ ಅದು ಸಿದ್ದರಾಮಯ್ಯ ಎಂದು ಕಿಡಿಕಾರಿದರು.

    ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಂಶಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯೋಜನೆಗೆ ಡಿಕೆಶಿ ಚಾಲನೆ ಕೊಟ್ಟಿದ್ದರು. ಆದರೆ ನಿರಂತರವೂ ಇಲ್ಲ ಜ್ಯೋತಿಯೂ ಇಲ್ಲ. ಧಾರವಾಡ ಪೇಡ ಹೇಗೆ ಸಿಹಿಯಿದೆ ಆ ರೀತಿ ಕುಂದಗೋಳ ಅಭಿವೃದ್ಧಿ ಮಾಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ಹಾಗಾದರೆ ಈ ಹಿಂದೆ ಏನ್ ಅಭಿವೃದ್ಧಿ ಮಾಡಿದ್ದೀರಾ? ಬಳ್ಳಾರಿ ಉಸ್ತುವಾರಿಯಾಗಿ ಬೈ ಎಲೆಕ್ಷನ್ ಗೆದ್ದ ನೀವು ಬಳ್ಳಾರಿಯಲ್ಲಿ ಹಣ ಹಂಚುವುದು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

  • ಗಾಂಧಿಯನ್ನು ಗೋಡ್ಸೆ ಕೊಂದಿದ್ದು ಸರಿ-ಹಿಂದೂ ಮಹಾಸಭಾದಿಂದ ಹತ್ಯೆಗೆ ಸಮರ್ಥನೆ

    ಗಾಂಧಿಯನ್ನು ಗೋಡ್ಸೆ ಕೊಂದಿದ್ದು ಸರಿ-ಹಿಂದೂ ಮಹಾಸಭಾದಿಂದ ಹತ್ಯೆಗೆ ಸಮರ್ಥನೆ

    ಮಂಗಳೂರು: ನಗರದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ನಾ ಸುಬ್ರಹ್ಮಣ್ಯ ರಾಜು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಮಹಾಸಭಾ ನಾಯಕ, ಅಂದಿನ ದಿನಗಳಲ್ಲಿ ಗಾಂಧೀಜಿಯವರ ನಡವಳಿಕೆಗಳಲ್ಲಿ ವಿಪರೀತವಾಗಿತ್ತಂತೆ. ಪಾಕಿಸ್ತಾನದ ಮುಸಲ್ಮಾನರಿಗೆ ಪೂರಕವಾಗಿ ನಿಲುವುಗಳನ್ನು ತೆಗೆದುಕೊಳ್ತಿದ್ರು. ಹೀಗಾಗಿ ಭಾರತ ದೇಶ ಮತ್ತಷ್ಟು ವಿಭಜನೆ ಆಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಗಾಂಧೀಜಿಯನ್ನ ಗೋಡ್ಸೆ ಕೊಂದಿದ್ದಾರೆ ಅಂತ ಹೇಳಿದ್ದಾರೆ.

    ಮಹಾತ್ಮ ಗಾಂಧಿ ಹತ್ಯೆ ಬಳಿಕ ಹಲವಾರು ಘಟನೆಗಳು ನಡೆದಿವೆ. ಗಾಂಧೀಜಿಯವರು ಇರುತ್ತಿದ್ದರೆ ಮುಂಬರುವ ದಿನಗಳಲ್ಲಿ ನಮ್ಮ ದೇಶ, ಸಮಾಜ ಇನ್ನು ಹಲವಾರು ವಿಭಜನೆಗಳಾಗುವ ಸಾಧ್ಯತೆಗಳು ಹೆಚ್ಚಿದ್ದ ಕಾರಣ ನಾನು ಈ ಕೃತ್ಯಕ್ಕೆ ಕೈ ಹಾಕಿದೆ ಅಂತ ಗಾಂಧೀಜಿಯನ್ನು ಕೊಂದ ಬಳಿಕ ಗೋಡ್ಸೆ ಹೇಳುತ್ತಾರೆ ಅಂತ ರಾಜು ವಿವರಿಸಿದ್ರು.

    ಒಟ್ಟಿನಲ್ಲಿ ದೇಶಕ್ಕೆ ಕಂಟಕ ಆಗುವಂತಹ ವ್ಯಕ್ತಿಗಳನ್ನು ಮಟ್ಟ ಹಾಕೋದು ನಮ್ಮ ಕಾನೂನು ಎಂದು ಹೇಳುವುದರ ಮೂಲಕ ಗಾಂಧೀಜಿ ಹತ್ಯೆಯನ್ನು ಸಮರ್ಥಿಸಿಕೊಂಡರು.