Tag: godown

  • ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.

    ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಈ ವಕಾರಸಾಲುಗಳನ್ನು ಹತ್ತಿ, ಅರಳಿ, ಶೇಂಗಾ, ಮೆಣಸಿನಕಾಯಿ ವ್ಯಾಪಾರ ಮಾಡುವ ಸಲುವಾಗಿ 1889 ರಲ್ಲಿ ನೂರು ವರ್ಷಗಳ ಒಪ್ಪಂದದ ಮೇರೆಗೆ ವರ್ತಕರಿಗೆ ಬಾಡಿಗೆಗೆ ನೀಡಲಾಗಿತ್ತು.

    ಲೀಜ್ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್ ನೀಡಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಬಾಡಿಗೆದಾರರ ನಡುವೆ ದಶಕಗಳಿಂದ ಹಗ್ಗ ಜಗ್ಗಾಟ ಮುಂದುವರಿದಿತ್ತು. ಇಂದಿನಿಂದ 2 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.

    ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಎಪಿಎಂಸಿಯಿಂದ ಕೆ.ಎಚ್ ಪಾಟೀಲ ವೃತ್ತ, ಗಾಂಧಿ ವೃತ್ತದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ 500 ಪೊಲೀಸರು, 400 ಜನ ಪೌರಕಾರ್ಮಿಕರ ನೆರವು ಪಡೆಯಲಾಗಿದೆ. ಸುಮಾರು 40 ಜೆಸಿಬಿ, 5 ಇಟಾಚಿ, 70ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಹೇಳಿದರು.

  • ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಚಂಢಿಗಡ್: ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಮಹಿಳೆ ಮೃತಪಟ್ಟ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

    ನೀತಾ, ಯಶಿಕಾ ಹಾಗೂ ಲಕ್ಕಿ ಮೃತ ದುರ್ದೈವಿಗಳು. ಅಗ್ನಿ ಅವಘಡದಿಂದ ಉಸಿರುಗಟ್ಟಿ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಕೆಳಮಹಡಿಯಲ್ಲಿ ಇದ್ದ ಬಟ್ಟೆಯ ಗೋಡೌನ್‍ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡದ ಮೊದಲ ಹಾಗೂ ಎರಡನೇಯ ಮಹಡಿಯಲ್ಲಿ ಶಾಲೆ ನಡೆಸಲಾಗುತಿತ್ತು. ಅಲ್ಲದೆ ಶಾಲೆಯ ನಿರ್ವಾಹಕ ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು.

    ಗ್ರೌಂಡ್ ಫ್ಲೋರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ಶಾಲೆಯ ನಿರ್ವಾಹಕ ಅದನ್ನು ನಂದಿಸಲು ಕೆಳಗೆ ಬಂದಿದ್ದಾನೆ. ಮೊದಲು ಗೋಡೌನ್‍ನ ಬೀಗ ತೆಗೆದು ಬಳಿಕ ಕೆಳಗಡೆ ನಿಂತಿದ್ದ ತಮ್ಮ ಕಾರನ್ನು ಹೊರಗೆ ನಿಲ್ಲಿಸಿ ಮತ್ತೆ ಮೇಲೆ ಹೋಗಲು ಯತ್ನಿಸಿದ್ದಾನೆ.

    ನೋಡುವಷ್ಟರಲ್ಲಿ ಬೆಂಕಿ ಮೊದಲನೇ ಹಾಗೂ ಎರಡನೇ ಮಹಡಿ ತಲುಪಿದೆ. ಎರಡನೇ ಮಹಡಿಯಲ್ಲಿ ನೀತಾ ಹಾಗೂ ಅವರ ಇಬ್ಬರ ಮಕ್ಕಳು ಯಶಿಕಾ ಹಾಗೂ ಲಕ್ಕಿ ಇದ್ದರು. ಹೊಗೆ ಹರಡಿಕೊಂಡಿದ್ದ ಕಾರಣ ಮೂವರು ಕೆಳಗೆ ಬರಲು ಸಾಧ್ಯವಾಗಲಿಲ್ಲ.

    ಹೊಗೆಯಿಂದ ಮೂವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ನಂತರ ಮನೆಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ.

  • ಒಂದೇ ದಿನದಲ್ಲಿ ರೈತ ಸಂಘದ ಜಾಗ ಮಗಳ ಕಂಪನಿಗೆ -ಸಿಪಿ ಯೋಗೇಶ್ವರ್ ದರ್ಬಾರ್!

    ಒಂದೇ ದಿನದಲ್ಲಿ ರೈತ ಸಂಘದ ಜಾಗ ಮಗಳ ಕಂಪನಿಗೆ -ಸಿಪಿ ಯೋಗೇಶ್ವರ್ ದರ್ಬಾರ್!

    ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ರೈತರ ಸಹಕಾರ ಸಂಘಕ್ಕೆ ಸೇರಿದ ಜಾಗ ಹಾಗೂ ಗೋಡೌನನ್ನು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅಕ್ರಮವಾಗಿ ಕಬಳಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

    ಸಿಪಿ ಯೋಗೇಶ್ವರ್ ತಮ್ಮ ಮಗಳು ನಿಶಾ ಒಡೆತನದ ಡೆಕನ್ ಫೀಲ್ಡ್ ಕಂಪನಿಗೆ 30 ವರ್ಷಕ್ಕೆ ಅಕ್ರಮವಾಗಿ ಜಾಗವನ್ನು ಅಗ್ರಿಮೆಂಟ್ ಮಾಡಿಸಿದ್ದಾರೆ ಎನ್ನಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್‍ಗೆ ಮೀಸಲಿಟ್ಟಿದ್ದ ಜಾಗಕ್ಕೆ ನಿಶಾ ಒಡೆತನದ ಡೆಕನ್ ಕಂಪನಿ ಕಳೆದ ಏಪ್ರಿಲ್ 11 ರಂದು ಟೆಂಡರ್‍ಗೆ ಅರ್ಜಿ ಸಲ್ಲಿಸಿತ್ತು. ಆದರೆ ಒಂದೇ ದಿನದಲ್ಲಿ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಕಂಪನಿಗೆ ಬಾಡಿಗೆ ಕೊಡಲು ತೀರ್ಮಾನಿಸಿದೆ.

    ಪ್ರತಿ ತಿಂಗಳು ಗೋಡೌನ್‍ಗೆ 80 ಸಾವಿರ ರೂಪಾಯಿ ಮತ್ತು ಪ್ರತಿ ವರ್ಷಕ್ಕೆ ಒಂದು ಎಕರೆ ಖಾಲಿ ನಿವೇಶನಕ್ಕೆ 30 ಸಾವಿರ ರೂಪಾಯಿ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷ ಶೇ.10ರಷ್ಟು ಬಾಡಿಗೆ ಹೆಚ್ಚಿಸುವ ಬದಲು ಪ್ರತಿ ಮೂರು ವರ್ಷಕ್ಕೊಮ್ಮೆ ಕೇವಲ ಶೇ.5ರಷ್ಟು ಬಾಡಿಗೆ ಹೆಚ್ಚಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ.

    ಆದರೆ ಯಾವುದೇ ಅಕ್ರಮ ನಡೆದಿಲ್ಲ, ನಡೆದಿದ್ದರೆ ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ಸಂಘದ ನಿರ್ದೇಶಕರು ಹೇಳುತ್ತಾರೆ.

  • ಆರ್‍ಆರ್‍ ನಗರದಲ್ಲಿ ಭಾರೀ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಹಳೇ ಪ್ಲಾಸ್ಟಿಕ್ ಭಸ್ಮ

    ಆರ್‍ಆರ್‍ ನಗರದಲ್ಲಿ ಭಾರೀ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಹಳೇ ಪ್ಲಾಸ್ಟಿಕ್ ಭಸ್ಮ

    ಬೆಂಗಳೂರು: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಕೆಂಚನಹಳ್ಳಿಯಲ್ಲಿರುವ ಹಳೇ ಪ್ಲಾಸ್ಟಿಕ್‍ ನ ಸಂಸ್ಕರಣ ಘಟಕದಲ್ಲಿ ಭಾನುವಾರ ರಾತ್ರಿ 12 ಗಂಟೆಗೆ ದಿಢೀರ್ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಹಳೇ ಪ್ಲಾಸ್ಟಿಕ್ ಸುಟ್ಟು ಭಸ್ಮವಾಗಿದೆ.

    ಇದು ದೇವು ಎಂಬುವವರಿಗೆ ಸೇರಿದ ಗೋದಾಮು ಆಗಿದ್ದು, ಸ್ಥಳಕ್ಕೆ 8 ಆಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಕುಡಿತದ ಅಮಲಿನಲ್ಲಿ ಯಾರೋ ಗೋದಾಮಿಗೆ ಬೆಂಕಿ ಹಚ್ಚಿದ್ದಾರೆಂದು ಎಂದು ಶಂಕಿಸಲಾಗಿದೆ. ಬೆಂಕಿ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಈ ಸಂಬಂಧ ಕೆಂಗೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

    https://www.youtube.com/watch?v=moctcEHg1KM&feature=youtu.be