Tag: Godfather

  • ಮೆಗಾಸ್ಟಾರ್ ಚಿರಂಜೀವಿ ಜೊತೆ ಬಾಲಿವುಡ್ ಬ್ಯಾಡ್ ಬಾಯ್ ಡಾನ್ಸ್

    ಮೆಗಾಸ್ಟಾರ್ ಚಿರಂಜೀವಿ ಜೊತೆ ಬಾಲಿವುಡ್ ಬ್ಯಾಡ್ ಬಾಯ್ ಡಾನ್ಸ್

    ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸಿರುವ ಅಪ್‍ಕಮಿಂಗ್ ಸಿನಿಮಾಗಳಲ್ಲಿ ಗಾಡ್‍ಫಾದರ್ ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುವ ಮೂಲಕ ಚಿರಂಜೀವಿಗೆ ಸಾಥ್ ನೀಡುತ್ತಿದ್ದಾರೆ. ಸದ್ಯ ಇಬ್ಬರೂ ಘಟಾನುಘಟಿ ಸ್ಟಾರ್ಸ್ ಸಿನಿಮಾದ ವಿಶೇಷ ಸಾಂಗ್‍ವೊಂದರಲ್ಲಿ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಟಾಲಿವುಡ್ ಸಿನಿ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಹೌದು, ನಟ ಚಿರಂಜೀವಿ ಹಾಗೂ ಸಲ್ಮಾನ್‍ಖಾನ್ ಗಾಡ್ ಫಾದರ್ ಸಿನಿಮಾದ ಹಾಡೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಲು ನಿರ್ದೇಶಕ ಮೋಹನ್ ರಾಜ್ ಅವರು ಪ್ರಭುದೇವ್ ಅವರನ್ನು ಕರೆತರುತ್ತಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಎಸ್.ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈ ವಿಶೇಷ ಹಾಡಿನ ಜವಾಬ್ದಾರಿಯನ್ನು ಸಹ ತಾವೇ ಹೊತ್ತುಕೊಂಡಿದ್ದಾರೆ.

    ಈ ಕುರಿತಂತೆ ಎಸ್.ಥಮನ್ ಅವರು ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಫೋಟೋದಲ್ಲಿ ಪ್ರಭುದೇವ್, ಚಿರಂಜೀವಿ, ಜಯಂ ಮೋಹನ್ ರಾಜ್, ಎಸ್. ಥಮನ್ ಅವರು ಒಟ್ಟಿಗೆ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ಕ್ಯಾಪ್ಷನ್‍ನಲ್ಲಿ ನಮ್ಮ ಬಾಸ್ ಚಿರಂಜೀವಿ ಮತ್ತು ಸಲ್ಮಾನ್‍ಖಾನ್ ಒಟ್ಟಿಗೆ ಅಭಿನಯಿಸುತ್ತಿರುವ ಹಾಡಿಗೆ ಪ್ರಭುದೇವ್ ಅವರು ನೃತ್ಯ ಸಂಯೋಜಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    ಗಾಡ್‍ಫಾದರ್ ಸಿನಿಮಾ ಮಲಯಾಳಂನ ಮೋಸ್ಟ್ ಹ್ಯಾಪನಿಂಗ್ ಹೀರೋ ಮೋಹನ್‍ಲಾಲ್ ಹಾಗೂ ನಟ ಪೃಥ್ವಿರಾಜ್ ನಟಿಸಿರುವ ಮಲಯಾಳಂ ಬ್ಲಾಕ್‍ಬಸ್ಟರ್ ಚಿತ್ರ ಲೂಸಿಫರ್(2019)ನ ರಿಮೇಕ್ ಆಗಿದೆ. ಸದ್ಯ ತೆಲುಗಿನಲ್ಲಿ ಗಾಡ್ ಫಾದರ್ ಸಿನಿಮಾಕ್ಕೆ ಮೋಹನ್ ರಾಜಾ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಚಿತ್ರವನ್ನು ನಿರ್ಮಿಸುತ್ತಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.

    ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡರೆ, ಸತ್ಯದೇವ್ ಕಾಂಚರಣ, ಹರೀಶ್ ಉತ್ತಮನ್, ಜಯಪ್ರಕಾಶ್ ಮತ್ತು ವಂಶಿ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:  ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

  • ಮೆಗಾಸ್ಟಾರ್ ಜೊತೆ ತೆರೆ ಹಂಚಿಕೊಂಡ ಬಾಲಿವುಡ್ ಬಾದ್ ಶಾ

    ಮೆಗಾಸ್ಟಾರ್ ಜೊತೆ ತೆರೆ ಹಂಚಿಕೊಂಡ ಬಾಲಿವುಡ್ ಬಾದ್ ಶಾ

    ಮುಂಬೈ: ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ನಟಿಸುವ ಟ್ರೆಂಡ್ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಅಂಗಳದಲ್ಲಿ ಟ್ರೆಂಡಿಂಗ್ ಆಗಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi), ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಗಾಡ್‍ಫಾದರ್(Godfather) ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.


    ಈ ಸಿನಿಮಾಕ್ಕೆ ನಿಮ್ಮ ಪ್ರವೇಶ ಎಲ್ಲರಿಗೂ ಶಕ್ತಿ ಮತ್ತು ಉತ್ಸಾಹವು ತಂದಿದೆ. ನಿಮ್ಮೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ. ಈ ಸಿನಿಮಾದಲ್ಲಿ ನಿಮ್ಮ ಉಪಸ್ಥಿತಿ ಪ್ರೇಕ್ಷಕರಿಗೆ ಮ್ಯಾಜಿಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮೆಗಾಸ್ಟಾರ್ ಚಿರಂಜೀವಿ ಟ್ವೀಟ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇಬ್ಬರು ಒಟ್ಟಿಗೆ ನಿಂತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಸ್ಟಾರ್ ನಟರನ್ನು ಒಟ್ಟಿಗೆ ಒಂದೇ ಪರೆದೆ ಮೇಲೆ ನೋಡಲು ಕಾತುರರಾಗಿರುವ ಅಭಿಮಾನಿಗಳು ಇಬ್ಬರಿಗೂ ಶುಭ ಹಾರೈಸಿ ಕಾಮೆಂಟ್ ಮಾಡುತ್ತಿದ್ದಾರೆ.  ಇದನ್ನೂ ಓದಿ : ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ಮೆಗಾಸ್ಟಾರ್ ಚಿರಂಜೀವಿ ಅವರ ಮುಂಬರುವ ಚಿತ್ರ ಗಾಡ್‍ಫಾದರ್. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು ಮಲಯಾಳಂನ ಸೂಪರ್ಹಿಟ್ ಚಿತ್ರ ‘ಲೂಸಿಫರ್’ ರಿಮೇಕ್ ಆಗಿದೆ. ಗಾಡ್ ಫಾದರ್ ಸಿನಿಮಾ ರಾಜಕೀಯ ಆಕ್ಷನ್ ಥ್ರಿಲ್ಲರ್ ಆಗಿದ್ದು, ಮೋಹನ್ ರಾಜ್ ನಿರ್ದೇಶಿಸಿದ್ದಾರೆ. ಚಿತ್ರವನ್ನು ಕೊನಿಡೆಲಾ ಪ್ರೊಡೆಕ್ಷನ್ ಕಂಪನಿ, ಜಯಂ ಕಂಪನಿ ಮತ್ತು ಎನ್‌ವಿಆರ್‌ ಸಿನಿಮಾ ಎಲ್ಎಲ್‌ಪಿ ಜಂಟಿಯಾಗಿ ನಿರ್ಮಿಸುತ್ತಿದೆ. ನೀರವ್ ಶಾ ಅವರ ಛಾಯಾಗ್ರಹಣ ಮತ್ತು ಎಸ್ ಥಮನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

    ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ, ಗಾಡ್‍ಫಾದರ್‌ನಲ್ಲಿ ನಯನತಾರಾ, ಸತ್ಯದೇವ್ ಕಾಂಚರಣ, ಹರೀಶ್ ಉತ್ತಮನ್, ಜಯಪ್ರಕಾಶ್ ಮತ್ತು ವಂಶಿ ಕೃಷ್ಣ ನಟಿಸಲಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ರಾಮ್ ಚರಣ್, ಅನುಷ್ಕಾ ಶೆಟ್ಟಿ ಮತ್ತು ಶ್ರುತಿ ಹಾಸನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಬಹುದು ಎಂದು ವದಂತಿಗಳಿವೆ.

  • ನನಗೆ ನಾನೇ ಗಾಡ್ ಫಾದರ್ – ಸಿಎಂ ಆಗುವ ಆಸೆ ಬಿಚ್ಚಿಟ್ಟ ಸಿ.ಟಿ.ರವಿ

    ನನಗೆ ನಾನೇ ಗಾಡ್ ಫಾದರ್ – ಸಿಎಂ ಆಗುವ ಆಸೆ ಬಿಚ್ಚಿಟ್ಟ ಸಿ.ಟಿ.ರವಿ

    ಮೈಸೂರು: ನನಗೆ ನಾನೇ ಗಾಡ್ ಫಾದರ್ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ ರವಿ ಇಂದು ಮೈಸೂರಿನಲ್ಲಿ ಹೇಳಿದ್ದಾರೆ.

    ನಾನು ಶಾಶ್ವತ ಮಾಜಿ ಮುಖ್ಯಮಂತ್ರಿಯಾಗಿರಬೇಕು ಎಂಬ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಚಂದ್ರು ಇದ್ದ ಕಾರಣ ಆ ಮಾತನ್ನು ಹೇಳಿದೆ. ಅವರಿಗೆ ಅವಿಶ್ವಾಸದ ಕಾಟ ಇಲ್ಲ. ಅವರು ಶಾಶ್ವತ ಮುಖ್ಯಮಂತ್ರಿ ಈ ಕಾರಣಕ್ಕೆ ನಾನು ಆ ಮಾತನ್ನು ಹೇಳಿದೆ ಎಂದು ತಿಳಿಸಿದರು.

    ಭಗವಂತನ ಇಚ್ಛೆ ಏನಿದೆ ಎಂದು ಗೊತ್ತಿಲ್ಲ, ನಾನು ಪಕ್ಷ ನಿಷ್ಠೆ ಇಟ್ಟುಕೊಂಡವನು. ಇದನ್ನು ಯಾರು ಪ್ರಶ್ನೆ ಮಾಡುವ ವಿಚಾರ ಇಲ್ಲ. ಕೆಲವರಿಗೆ ಗಾಡ್ ಫಾದರ್ ಇದ್ದಾರೆ ಆದರೆ ನನಗೆ ನಾನೇ ಗಾಡ್ ಫಾದರ್. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಅದಾದ ಮೇಲೆ ಏನಾಗುತ್ತೆ ಗೊತ್ತಿಲ್ಲ. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರಿಗೆ ಗೊತ್ತಿತ್ತು. ಯಾವ ಜ್ಯೋತಿಷಿಯು ಹೇಳಿರಲಿಲ್ಲ. ಹಾಗೇ ನಾನು ಮಾರ್ಮಿಕವಾಗಿ ಹೇಳಿದೆ ಅಷ್ಟೆ ಎಂದು ತನ್ನ ಸಿಎಂ ಆಸೆಯನ್ನು ವ್ಯಕ್ತಪಡಿಸಿದರು.

    ಆನಂದ್ ಸಿಂಗ್‍ಗೆ ಅರಣ್ಯ ಖಾತೆ ನೀಡಿದಕ್ಕೆ ಕಾಂಗ್ರೆಸ್ ಆಕ್ಷೇಪ ವಿಚಾರವಾಗಿ ಮಾತನಾಡಿ, ಅವರು ಈಗಷ್ಟೇ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ದುರ್ಬಳಕೆಯ ಪ್ರಶ್ನೆಯೇ ಬರಲ್ಲ ಎಂದು ಸಮರ್ಥಿಸಿಕೊಂಡರು. ನಂತರ ಕಾಂಗ್ರೆಸ್ಸಿನಲ್ಲಿ ಇದ್ದಷ್ಟು ಕಾಲ ಅವರು ಪತಿವ್ರತರಾಗಿದ್ದರು. ಬಿಟ್ಟು ಬಂದ ಮೇಲೆ ಅವರು ಕೆಟ್ಟು ಹೋದರಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಪುಲ್ವಾಮಾ ದಾಳಿ ವಿಚಾರವಾಗಿ ರಾಹುಲ್ ಗಾಂಧಿ ಟೀಕೆ ಬಗ್ಗೆ ಮಾತನಾಡಿ, ಇದೇ ಮೊದಲ ಬಾರಿಗೆ ಅವರು ಟೀಕೆ ಮಾಡುತ್ತಿಲ್ಲ. ನಮ್ಮ ಸಾಂಸ್ಕೃತಿಕ ವ್ಯವಸ್ಥೆಯನ್ನು ನಿರಂತವಾಗಿ ಅನುಮಾನವಾಗಿ ಕಾಂಗ್ರೆಸ್ ನೋಡುತ್ತಿದೆ. ಇಂತವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ, ಜನರೆ ಇದಕ್ಕೆ ತೀರ್ಮಾನಿಸುತ್ತಾರೆ ಎಂದರು.

    ಎಂಎಲ್‍ಸಿ ಚುನಾವಣೆಯಲ್ಲಿ ನಮಗೆ ಹೆಚ್ಚುವರಿಯಾಗಿ 25 ಮತ ಬರುತ್ತೆ. ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ ನೋಡುತ್ತೀರಿ ಗೆಲುವಿಗೆ ಬೇಕಾದ ಮತಕ್ಕಿಂತ ಹೆಚ್ಚುವರಿ ಮತ ಬರುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್-ಕಾಂಗ್ರೆಸ್ ಆಪರೇಷನ್ ಗುಟ್ಟುಬಿಟ್ಟು ಕೊಟ್ಟರು.