Tag: goddess parvati

  • ಪಾರ್ವತಿ ವೇಷದಲ್ಲಿ ನರ್ತಿಸುತ್ತಿದ್ದ 20ರ ಹುಡುಗ- ಹೃದಯಾಘಾತದಿಂದ ಸ್ಟೇಜ್‍ನಲ್ಲೇ ಕುಸಿದು ಸಾವು

    ಪಾರ್ವತಿ ವೇಷದಲ್ಲಿ ನರ್ತಿಸುತ್ತಿದ್ದ 20ರ ಹುಡುಗ- ಹೃದಯಾಘಾತದಿಂದ ಸ್ಟೇಜ್‍ನಲ್ಲೇ ಕುಸಿದು ಸಾವು

    ಶ್ರೀನಗರ: ಪಾರ್ವತಿಯ(Goddess Parvati) ವೇಷ ಧರಿಸಿ ಹುಡುಗಿಯಂತೆ ನರ್ತಿಸುತ್ತಿದ್ದ 20 ವರ್ಷದ ಹುಡುಗನೊಬ್ಬ ಹೃದಯಾಘಾತದಿಂದ ವೇದಿಕೆಯಲ್ಲೇ(Stage) ಕುಸಿದು ಸಾವನ್ನಪ್ಪಿದ ಘಟನೆ ಜಮ್ಮುವಿನಲ್ಲಿ ನಡೆದಿದೆ.

    ಜಮ್ಮು ಮತ್ತು ಕಾಶ್ಮೀರದ(Jammu and Kashmir) ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ನರ್ತಕಿಯ ವೇಷ ಧರಿಸಿ ಪ್ರದರ್ಶನ ನೀಡುತ್ತಿದ್ದ. ಈ ವೇಳೆ ಹೃದಯಾಘಾತವಾಗಿ(Heart Attack) ಅಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ?: ವೈರಲ್ ವೀಡಿಯೋದಲ್ಲಿ ಪಾರ್ವತಿ ವೇಷ ಧರಿಸಿ ಯೋಗೇಶ್ ಗುಪ್ತಾ ನೃತ್ಯ ಮಾಡುತ್ತಿದ್ದ. ಅಲ್ಲಿ ನೆರೆದಿದ್ದ ಜನರೆಲ್ಲರೂ ಆ ನೃತ್ಯವನ್ನು ಆಹ್ಲಾದಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆತ ಕುಸಿದು ಅಲ್ಲಿಯೇ ಬೀಳುತ್ತಾನೆ. ಅದಾದ ಬಳಿಕವೂ ಕೆಲ ಸೆಕೆಂಡಿನ ನಂತರ ಕೆಲವು ಸ್ಟೇಪ್‍ಗಳನ್ನು ಮಾಡುತ್ತಾನೆ. ಆ ಬಳಿಕ ಆತ ಅಲ್ಲಿಂದ ಏಳುವುದೇ ಇಲ್ಲ. ಇದನ್ನೂ ಓದಿ: ರಾಜಪಥ್‍ನಿಂದ ಕರ್ತವ್ಯ ಪಥವಾಗಿ ಬದಲಾದ ದೆಹಲಿ ಐಕಾನಿಕ್ ರಸ್ತೆ ಹೇಗೆ ಅಭಿವೃದ್ಧಿಯಾಗಿದೆ ಗೊತ್ತಾ?

    ಆದರೆ ದುರಂತವೆಂದರೆ ಕೆಲಕಾಲ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಆತ ಇನ್ನೂ ಪ್ರದರ್ಶನವನ್ನೇ ನೀಡುತ್ತಿದ್ದಾನೆ ಎಂದು ಕೊಳ್ಳುತ್ತಾರೆ. ಆದರೆ ಕೆಲ ನಿಮಿಷಗಳಾದರೂ ಆತ ಏಳದಿದ್ದಾಗ ಅಲ್ಲಿದ್ದ ಶಿವನ ವೇಷವನ್ನು ಧರಿಸಿದ ಯೋಗೇಶ್ ಬಳಿ ಹೋಗಿ ಪರೀಕ್ಷೆ ನಡೆಸುತ್ತಾನೆ. ಆದರೂ ಆತನಿಗೆ ಎಚ್ಚರವಾಗಿಲ್ಲವೆಂದು ಅಲ್ಲಿದ್ದ ಸಿಬ್ಬಂದಿಯನ್ನು ಕರೆಯುತ್ತಾನೆ. ತಕ್ಷಣ ಯೋಗೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಯೋಗೇಶ್ ಗುಪ್ತಾ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್‌ ವಿರುದ್ಧ ಬಿಜೆಪಿ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

    ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

    ಒಟ್ಟಾವಾ: ಕಾಳಿ ಸಾಕ್ಷ್ಯಾಚಿತ್ರದ ವಿವಾದ ಬಳಿಕ ನಿರ್ಮಾಪಕಿ ಲೀನಾ ಮತ್ತೊಂದು ಪೋಸ್ಟ್ ಮಾಡಿ, ಕಾಳಿ ಪೊಸ್ಟರ್ ವಿರೋಧಿಸಿದವರನ್ನು ವ್ಯಂಗ್ಯ ಮಾಡಿದ್ದಾರೆ.

    ಈಗಾಗಲೇ ಲೀನಾ ಅವರು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದ್ದ ತಮ್ಮ ಸಾಕ್ಷ್ಯ ಚಿತ್ರದ ಪೋಸ್ಟರ್‌ವೊಂದನ್ನು ಶೇರ್ ಮಾಡುವ ಮೂಲಕ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ತನ್ನ ವಿರುದ್ಧ ಹಲವು ಎಫ್‍ಐಆರ್‌ಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ತನ್ನ ರಕ್ಷಣೆಗಾಗಿ ಹೊಸ ಟ್ವೀಟ್‍ವೊಂದನ್ನು ಮಾಡಿದ್ದಾರೆ.

    ಈ ಪೋಸ್ಟ್‌ನಲ್ಲಿ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಇಬ್ಬರು ಪಾತ್ರಧಾರಿಗಳು ಧೂಮಪಾನದಲ್ಲಿ ತೊಡಗಿದ್ದಾರೆ. ಇದೀಗ ಈ ಚಿತ್ರಕ್ಕೆ ನಿರ್ಮಾಪಕಿ ವಿರುದ್ಧ ಮತ್ತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ಪದೇ ಪದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

    ಟ್ವಿಟ್ಟರ್ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿರ್ಮಾಪಕಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಆಕೆ ಧಕ್ಕೆ ಮಾಡಿದ್ದಾರೆ ಎಂದು ಕಿಡಿಕಾರಿ, ಅವರ ವಿರುದ್ಧ ಅನೇಕ ಎಫ್‍ಐಆರ್ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ನಾನು ಪಾರ್ವತಿ ಅವತಾರ, ಶಿವನನ್ನು ಮದುವೆ ಆಗಲು ಬಂದಿದ್ದೇನೆ- ಗಡಿಯಲ್ಲಿ ಮಹಿಳೆ ಕಿರಿಕ್

    ನಾನು ಪಾರ್ವತಿ ಅವತಾರ, ಶಿವನನ್ನು ಮದುವೆ ಆಗಲು ಬಂದಿದ್ದೇನೆ- ಗಡಿಯಲ್ಲಿ ಮಹಿಳೆ ಕಿರಿಕ್

    ನವದೆಹಲಿ: ನಿರ್ಬಂಧಿತ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಲಕ್ನೋದ ಮಹಿಳೆಯೊಬ್ಬರು ತಾನು ಪಾರ್ವತಿ ದೇವಿಯ ಅವತಾರವಾಗಿದ್ದೇನೆ. ಕೈಲಾಸ ಪರ್ವತದಲ್ಲಿರುವ ಶಿವನನ್ನು ತಾನೇ ಮದುವೆಯಾಗುವುದಾಗಿ ಹೇಳಿರುವ ಘಟನೆ ಭಾರತ ಮತ್ತು ಚೀನಾ ಗಡಿಯ ಸಮೀಪವಿರುವ ನಾಭಿದಾಂಗ್‍ವನ ಗುಂಜಿಯಲ್ಲಿ ನಡೆದಿದೆ.

    ಹರ್ಮಿಂದರ್ ಕೌರ್ ಮಹಿಳೆ. ಈಕೆ ಉತ್ತರ ಪ್ರದೇಶದ ಅಲಿಗಂಜ್ ಪ್ರದೇಶದ ನಿವಾಸಿಯಾಗಿದ್ದಾರೆ. ಗುಂಜಿ ಕೈಲಾಸ-ಮಾನಸ ಸರೋವರದ ಹಾದಿಯಲ್ಲಿದೆ. ಇವಳನ್ನು ನಿರ್ಬಂಧಿತ ಪ್ರದೇಶದಿಂದ ಆಚೆ ಹಾಕಲು ಪೊಲೀಸ್ ತಂಡ ಹೋಗಿತ್ತು. ಆದರೆ ಹಮಿರ್ಂದರ್ ಕೌರ್ ಪೊಲೀಸರಿಗೆ ಆತ್ಮಹತ್ಯೆಯ ಬೆದರಿಕೆಯನ್ನು ಹಾಕಿದ್ದಾಳೆ. ಇದರಿಂದಾಗಿ ಆ ಪೊಲೀಸ್ ತಂಡ ವಿಧಿ ಇಲ್ಲದೇ ವಾಪಸ್ ಬರಬೇಕಾಯಿತು.

    ಅಷ್ಟೇ ಅಲ್ಲದೇ ಹರ್ಮಿಂದರ್ ತಾನು ಪಾರ್ವತಿ ದೇವಿಯ ಅವತಾರ. ಶಿವನನ್ನು ಮದುವೆಯಾಗಲು ಬಂದಿದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದರು. ಇದರಿಂದಾಗಿ ಪೊಲೀಸರು ಹರ್ಮಿಂದರ್ ಅವರು ಮಾನಸಿಕವಾಗಿ ಸ್ಥಿರವಾಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಇಬ್ಬರು ಹೆಣ್ಮಕ್ಕಳನ್ನು ಹೆತ್ತಿದ್ದಕ್ಕೆ ರಸ್ತೆಯಲ್ಲಿ ಪತ್ನಿಗೆ ಥಳಿಸಿದ ಪತಿ, ಅತ್ತೆಯಂದಿರು

    ಈ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿ ಮಾತನಾಡಿ, 15 ದಿನಗಳ ಅನುಮತಿಯ ಮೇರೆಗೆ ತಾಯಿಯೊಂದಿಗೆ ಈ ಪ್ರದೇಶಕ್ಕೆ ಬಂದಿದ್ದರು. ಆದರೆ ಅವರು ಅಲ್ಲಿ ವಾಸವಾಗಲು ಅವಧಿ ಮುಗಿದರೂ ನಿರ್ಬಂಧಿತ ಪ್ರದೇಶವನ್ನು ತೊರಯಲು ನಿರಾಕರಿಸಿದರು. ಹರ್ಮಿಂದರ್‌ನ್ನು ನಿರ್ಬಂಧಿತ ಪ್ರದೇಶದಿಂದ ಕರೆತರಲು ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂವರ ಪೊಲೀಸ್ ತಂಡವನ್ನು ಧಾರ್ಚುಲಾದಿಂದ ಕಳುಹಿಸಲಾಗಿತ್ತು ಎಂದರು.

    POLICE JEEP

    ಹಮಿರ್ಂದರ್ ಕೌರ್‌ನನ್ನು ಬಲವಂತಯವಾಗಿ ಧಾರ್ಚುಲಾಗೆ ಕಳುಹಿಸಲು ನಿರ್ಧಸಿದ್ದೆವು. ಆದರೆ ಪ್ರಯೋಜನವಾಗಲಿಲ್ಲ. ಇದರಿಂದಾಗಿ ನಾವು ಈಗ ಹರ್ಮಿಂದರ್‌ನ್ನು ಮರಳಿ ಕರೆತರಲು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 12 ಸದಸ್ಯರ ದೊಡ್ಡ ಪೊಲೀಸ್ ತಂಡವನ್ನು ಕಳುಹಿಸಲು ಯೋಜಿಸಿದ್ದೇವೆ ಎಂದು ಹೇಳಿದರು. ದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ದಾಳಿ – 177 ಶಿಕ್ಷಕರ ವರ್ಗಾವಣೆ