Tag: Gobi Manchurian

  • ಚಾ.ನಗರ| ಐಸ್ ಕ್ರೀಂ, ಗೋಬಿಗಾಗಿ ಕಿಡ್ನ್ಯಾಪ್‌ ಕಥೆ ಕಟ್ಟಿದ 10 ವರ್ಷದ ಬಾಲಕ

    ಚಾ.ನಗರ| ಐಸ್ ಕ್ರೀಂ, ಗೋಬಿಗಾಗಿ ಕಿಡ್ನ್ಯಾಪ್‌ ಕಥೆ ಕಟ್ಟಿದ 10 ವರ್ಷದ ಬಾಲಕ

    – ಮಗನ ಮಾತು ನಂಬಿ ದೂರು ಕೊಟ್ಟಿದ್ದ ತಂದೆ
    – ಪ್ರಕರಣ ಬೆನ್ನತ್ತಿ ಹೊರಟ ಪೊಲೀಸರಿಗೆ ಗೊತ್ತಾಯ್ತು ಬಾಲಕನ ಅಸಲಿಯತ್ತು

    ಚಾಮರಾಜನಗರ: ಮನೆಯವರಿಗೆ ಗೊತ್ತಾಗದಂತೆ ಐಸ್ ಕ್ರೀಂ, ಗೋಬಿ ತಿನ್ನಲು ಹೋಗಿದ್ದ ಬಾಲಕ ಪೋಟೋ ತೆಗೆದು ಮನೆಯವರಿಗೆ ಕಳಿಸಿ ಕಿಡ್ನ್ಯಾಪ್‌ ಕಥೆ ಕಟ್ಟಿದ್ದ. ಈತನ ಮಾತು ನಂಬಿ ಪೋಷಕರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಕೊನೆಗೂ ಅಸಲಿಯತ್ತು ಗೊತ್ತಾಗಿದೆ.

    ಗೋಬಿ, ಐಸ್ ಕ್ರೀಂ ತಿನ್ನಲು ಟ್ಯೂಷನ್‌ಗೆ ಚಕ್ಕರ್ ಹಾಕಿದ ಬಾಲಕ ಪೋಷಕರಿಗೆ ನಿಜಾಂಶ ಮುಚ್ಚಿಡಲು ತನ್ನನ್ನು ಕಿಡ್ನ್ಯಾಪ್ ಮಾಡಲಾಗಿತ್ತು ಅಂತಾ ಕಥೆ ಹೆಣೆದಿದ್ದ. ಈತನ ಮಾತನ್ನು ನಂಬಿದ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗ ನಡೆದಿದೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಈ ಬಾಲಕ ಪ್ರತಿದಿನ ಸಂಜೆ ಶಾಲೆ ಮುಗಿಸಿ ಕೋಚಿಂಗ್ ಸೆಂಟರ್ ಒಂದಕ್ಕೆ ಟ್ಯೂಷನ್‌ಗೆ ಹೋಗುತ್ತಿದ್ದ. ಮನೆಯಲ್ಲಿ ಹಣ ಕದ್ದು ಟ್ಯೂಷನ್‌ಗೆ ಚಕ್ಕರ್ ಹೊಡೆದು ಗೋಬಿ, ಐಸ್ ಕ್ರೀಂ ತಿನ್ನಲು ಹೋಗಿದ್ದ. ಈತ ಗೋಬಿ ತಿನ್ನುವ ವೇಳೆ ಸಂಬಂಧಿಕರೊಬ್ಬರು ಪೋಟೋ ತೆಗೆದುಕೊಂಡಿದ್ದರು. ಅದನ್ನು ಗಮನಿಸಿದ್ದ ಬಾಲಕ ಎಲ್ಲಿ ತಂದೆ-ತಾಯಿಗೆ ತನ್ನ ವಿಚಾರವನ್ನು ಹೇಳಿ ಬಿಡುತ್ತಾರೆಂದು ಹೆದರಿದ್ದ. ಬಳಿಕ ಪಕ್ಕದ ಮನೆಯ ಮಹಿಳೆಯೊಂದಿಗೆ ಮನೆಗೆ ತೆರಳಿದ ಬಾಲಕ ತನ್ನನ್ನು ಕಿಡ್ನ್ಯಾಪ್ ಮಾಡಲಾಗಿತ್ತು ಅಂತಾ ಕಥೆ ಸೃಷ್ಟಿಸಿ ಪೋಷಕರನ್ನು ನಂಬಿಸಿದ್ದ.

    ಬಾಲಕ ಹೆಣೆದಿದ್ದ ಕಥೆ ಏನು?
    ನಾನು ಟ್ಯೂಷನ್ ಹೋಗ್ತಿದ್ದ ವೇಳೆ ಯಾರೋ ಅಪರಿಚಿತರು ಬಂದು ತಲೆ ನೋವಾಗುತ್ತಿದೆ ಎಂದು ನಿಮ್ಮ ಟ್ಯೂಷನ್ ಮೇಡಂಗೆ ಹೇಳಿ ವಾಪಾಸ್ ಬಾ ಅಂತ ಹೇಳಿದ್ರು. ನಂತರ ಕಾರಿನಲ್ಲಿ ಕೂರಿಸಿಕೊಂಡು, ಬಾಯಿಗೆ ಪ್ಲಾಸ್ಟರ್ ಹಾಕಿ ಯಾವುದೋ ಒಂದು ಗೋಡೌನ್ ಬಳಿ ಕಾರು ನಿಲ್ಲಿಸಿದರು. ಮತ್ತೆ ಅದೇ ಕಾರಿನಲ್ಲಿ ವಾಪಾಸ್ ತಂದು ಗೋಬಿ ಅಂಗಡಿ ಮುಂದೆ ನಿಲ್ಲಿಸಿ 50 ರೂ. ಕೊಟ್ಟು ಗೋಬಿ, ಐಸ್ ಕ್ರೀ ತಿನ್ನು ಇಲ್ಲದಿದ್ರೆ ಸಾಯಿಸ್ತೀನಿ ಅಂತ ಹೆದರಿಸಿದ್ದರೆಂದು ಬಾಲಕ ಕಥೆ ಕಟ್ಟಿದ್ದಾನೆ.

    ಈತನ ಮಾತು ನಂಬಿ ಬೆದರಿದ ಪೋಷಕರು ತಕ್ಷಣ ಪಟ್ಟಣ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಬಾಲಕ ಹೇಳಿದ ಕಥೆಯನ್ನು ಸೀರಿಯಸ್ ಆಗಿ ತೆಗೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರು. ಬಾಲಕ ಹೇಳಿದ ಕಡೆಯೆಲ್ಲಾ ಹೋಗಿ ಶೋಧ ನಡೆಸಿ, ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲನೆ ನಡೆಸಿದರು. ಆದರೆ, ಕಿಡ್ನ್ಯಾಪರ್ಸ್ ಸುಳಿವು ಎಲ್ಲಿಯೂ ಸಿಗದೇ ಮತ್ತೆ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆ ವೇಳೆ ಬಾಲಕ ಗೋಬಿಗಾಗಿ ಕಥೆ ಕಟ್ಟಿದ್ದಾನೆ ಅಂತಾ ಗೊತ್ತಾಗಿದೆ.

  • PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

    PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

    ಕಾಟನ್ ಕ್ಯಾಂಡಿ ಎಂದರೆ ಮಕ್ಕಳಿಗೆ ಬಹಳ ಇಷ್ಟ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಕಲರ್ ಕಲರ್ ಕಾಟನ್ ಕ್ಯಾಂಡಿಗಳು (Cotton Candy) ಮಕ್ಕಳನ್ನು ಕೈಬೀಸಿ ಕರೆಯುತ್ತಿರುತ್ತವೆ. ಬಾಯಿಗಿಟ್ಟರೆ ಕರಗುತ್ತದೆ, ನಾಲಿಗೆಗೆ ರುಚಿಯಾಗಿರುತ್ತದೆ ಅಂತ ಮಕ್ಕಳು ಅದನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಮಕ್ಕಳ ಆಸೆಗೆ ಕಟ್ಟುಬಿದ್ದು ಪೋಷಕರು ಸ್ವಲ್ಪವೂ ಯೋಚಿಸದೇ ಕ್ಯಾಂಡಿ ಕೊಡಿಸುತ್ತಾರೆ. ಆದರೆ ಇಂತಹ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ವೈದ್ಯಕೀಯ ಲೋಕ ಸಾರಿ ಸಾರಿ ಹೇಳುತ್ತಿದೆ.

    ಆರೋಗ್ಯಕ್ಕೆ ಹಾನಿಕರವಾದ ಇಂತಹ ಪದಾರ್ಥಗಳಿಗೆ ಹಲವು ರಾಜ್ಯಗಳಲ್ಲಿ ನಿಷೇಧಿಸಿ ಇತರೆ ರಾಜ್ಯಗಳಿಗೆ ಮಾದರಿಯಾಗಿವೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಗೋಬಿ ಮಂಚೂರಿ (Gobi Manchurian), ಪಾನಿಪುರಿ, ಕಬಾಬ್ ಇತರೆ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ.

    ಕಲರ್ ಕಾಟನ್ ಕ್ಯಾಂಡಿ ನಿಷೇಧ ಏಕೆ? ಅದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳೇನು? ನಿಯಮ ಉಲ್ಲಂಘಿಸಿ ಮಾರಾಟ ಮಾಡಿದ್ರೆ ಶಿಕ್ಷೆ ಏನು? ಖಾದ್ಯಗಳಲ್ಲಿ ಅಪಾಯಕಾರಿ ಕೃತಕ ಬಣ್ಣ ಬಳಸದಂತೆ ಕರ್ನಾಟಕ ಕೈಗೊಂಡಿರುವ ಕ್ರಮಗಳೇನು?

    ಏನಿದು ಕಾಟನ್ ಕ್ಯಾಂಡಿ?
    ಇದೊಂದು ಸಿಹಿ ತಿನಿಸು. ಮಕ್ಕಳಿಗೆ ಪ್ರಿಯವಾದ ತಿನಿಸು. ಇದು ತಿನ್ನಲು ಹತ್ತಿಯಂತೆ ಇರುತ್ತದೆ. ಆಕರ್ಷಣೀಯವಾಗಿ ಇರಲೆಂದು ಈ ತಿನಿಸಿಗೆ ಕೃತಕ ಬಣ್ಣ ಬಳಸಲಾಗುತ್ತದೆ. ಮಕ್ಕಳೇ ಇದನ್ನು ಹೆಚ್ಚು ಖರೀದಿಸಿ ತಿನ್ನುತ್ತಾರೆ.

    ಇದು ಅಪಾಯಕಾರಿಯೇ?
    ಹೌದು, ಕಾಟನ್ ಕ್ಯಾಂಡಿಯಲ್ಲಿ ಬಳಸುವ ರೋಡಮೈನ್-ಬಿ ಅತ್ಯಂತ ಅಪಾಯಕಾರಿ. ತಿನಿಸು ಕಲರ್‌ಫುಲ್ ಆಗಿ ಕಾಣಲಿ ಎಂದು ಇದನ್ನು ಬಳಸುತ್ತಾರೆ. ಆದರೆ ರೋಡಮೈನ್-ಬಿಯನ್ನು ಆಹಾರದಲ್ಲಿ ಬಳಸುವುದಕ್ಕೆ ನಿಷೇಧವಿದೆ. ಇದನ್ನು ಇಂಕ್, ಬಟ್ಟೆಗಳು (ಬಣ್ಣಕ್ಕೆ) ಮತ್ತು ಸೌಂದರ್ಯವರ್ಧಕಗಳಿಗೂ ಬಳಸಲಾಗುತ್ತದೆ.

    ಆರೋಗ್ಯದ ಮೇಲಾಗುವ ದುಷ್ಪರಿಣಾಮ ಏನು?
    ದಟ್ಟ ಮತ್ತು ಆಕರ್ಷಕ ಬಣ್ಣ ಬರಲು ಕಾಟನ್ ಕ್ಯಾಂಡಿಗೆ ರೋಡಮೈನ್-ಬಿಯನ್ನು ಬಳಸಲಾಗುತ್ತದೆ. ಇದು ಕ್ಯಾನ್ಸರ್‌ಗೆ ಕಾರಣವಾಗುವ ಅಂಶವನ್ನು ಹೊಂದಿದೆ. ಅಷ್ಟೇ ಅಲ್ಲ, ಮಿದುಳು, ಮೂತ್ರಪಿಂಡ, ಹೃದಯಕ್ಕೂ ಹಾನಿ ಮಾಡಬಲ್ಲದು.

    ಮಕ್ಕಳಿಗೆ ತೊಂದರೆಯೇನು?
    ಕಾಟನ್ ಕ್ಯಾಂಡಿಯಲ್ಲಿನ ಹೆಚ್ಚಿನ ಸಕ್ಕರೆ ಅಂಶವು ದೊಡ್ಡ ಪ್ರಮಾಣದ ಅಪಾಯವನ್ನುಂಟು ಮಾಡುತ್ತದೆ. ಲಂಡನ್‌ನ ಕಿಂಗ್ಸ್ ಕಾಲೇಜ್‌ನಲ್ಲಿ ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿಯಲ್ಲಿ ಪರಿಣಿತರಾಗಿರುವ ಪ್ರೊಫೆಸರ್ ಟಾಮ್ ಸ್ಯಾಂಡರ್ಸ್, ಕ್ಯಾಂಡಿ ಫ್ಲೋಸ್‌ನಿಂದ ಮಕ್ಕಳಲ್ಲಿ ಹಲ್ಲು ಕ್ಷಯ ಉಂಟಾಗಲು ಕಾರಣವಾಗುತ್ತದೆ ಎಂದಿದ್ದಾರೆ.

    ವಿದೇಶಗಳಲ್ಲಿ ಎಲ್ಲೆಲ್ಲಿ ಬ್ಯಾನ್?
    ಯೂರೋಪ್, ಯುಕೆ ಮತ್ತು ಕ್ಯಾಲಿಫೋರ್ನಿಯಾದಲ್ಲೂ (California) ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. 2014 ರಲ್ಲಿ ವೆಸ್ಟ್ ಯಾರ್ಕ್ಷೈರ್‌ನಲ್ಲಿ ಮೊದಲ ಬಾರಿಗೆ ಪರೀಕ್ಷೆ ನಡೆಸಲಾಯಿತು. ಆಗ ಏಷ್ಯನ್ ಸಿಹಿತಿಂಡಿಗಳಲ್ಲಿ ರೋಡಮೈನ್-ಬಿ ಇರುವುದು ದೃಢಪಟ್ಟಿತು.

    ಭಾರತದ ಯಾವ ರಾಜ್ಯಗಳಲ್ಲಿ ನಿಷೇಧ?
    ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕ ಅಂಶವಿರುವುದು ಸಾಬೀತಾದ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೇರಿಯಲ್ಲಿ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಬಣ್ಣ ಬಳಸಿ ಮಾಡಿದ ಕಾಟನ್ ಕ್ಯಾಂಡಿಗಳನ್ನು ನಿಷೇಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಲ್ಲದೇ, ಬಣ್ಣ ರಹಿತ ಕಾಟನ್ ಕ್ಯಾಂಡಿ ತಯಾರಿಕೆಗೆ ನಿರ್ಬಂಧ ಇಲ್ಲ ಎಂದು ಹೇಳಿದೆ. ಜೊತೆಗೆ ಆಂಧ್ರಪ್ರದೇಶ ಮತ್ತು ದೆಹಲಿಯಲ್ಲೂ ಕಾಟನ್ ಕ್ಯಾಂಡಿ ನಿಷೇಧಕ್ಕೆ ಕ್ರಮಕೈಗೊಳ್ಳಲಾಗಿದೆ. ಕಾಟನ್ ಕ್ಯಾಂಡಿಗೆ ಬಳಸುವ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ಕರ್ನಾಟಕದಲ್ಲಿ ಬ್ಯಾನ್?
    ಕೃತಕ ಬಣ್ಣ ಬಳಸಿ ಮಾಡಿದ ಕಾಟನ್ ಕ್ಯಾಂಡಿಗಳನ್ನು ಕರ್ನಾಟಕದಲ್ಲಿ ನಿಷೇಧಿಸಲಾಗುವುದು. ಬಣ್ಣ ಬರಲು ಬಳಸುವ ರೋಡಮೈನ್-ಬಿಯನ್ನು ಕಾಟನ್ ಕ್ಯಾಂಡಿಯಲ್ಲಿ ಬಳಸಲಾಗುತ್ತದೆ. ಇದನ್ನು ಆಹಾರದಲ್ಲಿ ಬಳಸುವಂತಿಲ್ಲ. ಇದು ಕ್ಯಾನ್ಸರ್‌ಗೆ ಕಾರಣವಾಗುವ ಅಂಶವನ್ನು ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದ್ದಾರೆ.

    ಗೋಬಿ ಮಂಚೂರಿ ಕಥೆ ಏನು?
    ಗೋಬಿ ಮಂಚೂರಿ, ಪಾನಿಪುರಿ, ಕಬಾಬ್ ಹೀಗೆ ಎಲ್ಲ ರೀತಿಯ ಖಾದ್ಯಗಳಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಬೀದಿ ಬದಿಯ ತಳ್ಳುವ ಗಾಡಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಹೋಟೆಲ್‌ವರೆಗೂ ಈ ಆದೇಶ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವಂತಿಲ್ಲ. ಬಣ್ಣ ಬಳಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ 171 ಕಡೆ ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆ ಪೈಕಿ 107 ಕಡೆಗಳಲ್ಲಿನ ಗೋಬಿ ಮಂಚೂರಿಗಳಲ್ಲಿ ಹಾನಿಕಾರಕ ಕೃತಕ ಬಣ್ಣ ಬಳಸಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

    ಕೃತಕ ಬಣ್ಣ ಬಳಸಿದ್ರೆ ಶಿಕ್ಷೆ ಏನು?
    ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ನಿಯಮ 59 ರಡಿ 7 ವರ್ಷಗಳ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು.

  • ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್?-ನಾಳೆ ಅಧಿಕೃತ ಆದೇಶ ಸಾಧ್ಯತೆ

    ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಬ್ಯಾನ್?-ನಾಳೆ ಅಧಿಕೃತ ಆದೇಶ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಬಾಂಬೆ ಮಿಠಾಯಿ, ಗೋಬಿ ಮಂಚೂರಿ (Gobi Manchurian) ಬ್ಯಾನ್ ಆಗುತ್ತಾ..? ಆರೋಗ್ಯ ಸಚಿವರು ಈ ಬಗ್ಗೆ ಮಹತ್ವದ ಸುಳಿವು ಕೊಟ್ಟಿದ್ದಾರೆ. ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದೆ. ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು, ನಾಳೆ (ಸೋಮವಾರ) ಹೊರಬೀಳುವ ಸಾಧ್ಯತೆ ಇದೆ.

    ಹೊರರಾಜ್ಯಗಳಲ್ಲಿ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಬ್ಯಾನ್ ಆಗಿದೆ. ಕಾರಣ ಕಲಬೆರಕೆ ಕಲರ್ ಬಳಕೆ ಮಾಡೋದು ಮತ್ತು ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಆಹಾರ ಮತ್ತು ಸುರಕ್ಷತಾ ಇಲಾಖೆ ಹೋಟೆಲ್, ಬೀದಿಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಬಳಿ ಕಾಂಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡಿದೆ. ಈ ಟೆಸ್ಟ್ ನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ರಂಡೋಮನ್ ಬಿ ಅಂಶ ಇರೋದು ಪತ್ತೆಯಾಗಿದೆ. ಜೊತೆಗೆ ಗೋಬಿ ಮಂಚೂರಿಗೆ ಹಾಕುವ ಕಲರ್ ಜಲ್ಲಿಗಳನ್ನ ಟೌನ್ ಟೆಸ್ಟ್ ಗೆ ಒಳಪಡಿಸಿದಾಗ ಅದರಲ್ಲೂ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ. ಹೀಗಾಗಿ ರಾಜ್ಯದಲ್ಲೂ ಬ್ಯಾನ್ ಮಾಡುವ ಸಾಧ್ಯತೆ ಇದೆ.

    ಕೃತಕ ಬಣ್ಣ ಬೆರಸಿ ಗೋಬಿ ಮಾಡುವುದಕ್ಕೆ ಅವಕಾಶ ಇಲ್ಲ. ಆಹಾರ ಸುರಕ್ಷತೆ ಕಾಯ್ದೆಯಡಿ 10 ಲಕ್ಷದ ವರೆಗೂ ದಂಡ ವಿಧಿಸುವ ಸಂಭವ ಇದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆ ಇದೆ. ಇದನ್ನೂ ಓದಿ: Lok Sabha: ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ 9 ಸ್ಥಾನ ಬಿಟ್ಟುಕೊಟ್ಟ ಡಿಎಂಕೆ

    ಒಟ್ಟಾರೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯಲ್ಲಿ ಹಾನಿಕಾರಕ ಅಂಶ ಇರೋದು ವರದಿಯಲ್ಲಿ ಕನ್ಫರ್ಮ್ ಆಗಿದ್ದು ಆರೋಗ್ಯ ಸಚಿವರಿಗೆ ವರದಿ ಕೈ ಸೇರಿದೆ. ಆರೋಗ್ಯ ಸಚಿವರು ಕಾಟನ್ ಕ್ಯಾಂಡಿ ಬ್ಯಾನ್ ಮಾಡಿ ಗೋಬಿ ಮಂಚೂರಿಗೆ ಬಳಸೋ ಪದಾರ್ಥಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್ ಬಿಡುಗಡೆ ಮಾಡ್ತಾರಾ ಕಾದು ನೋಡಬೇಕಿದೆ.

  • ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ

    ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ

    ಗೋಬಿ ಎಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಯುವಜನತೆಗೆ ಮಾತ್ರ ಗೋಬಿ ಹೆಸರು ಕೇಳಿದ್ರೆ ತಿನ್ನಲೇ ಬೇಕು ಎಂದು ಹಾತೊರೆಯುತ್ತಾರೆ. ‘ಗೋಬಿ ಮಂಚೂರಿ’ ರೆಸಿಪಿ ತುಂಬಾ ಸಿಂಪಲ್ ಆಗಿದ್ದು, ನೀವು ಮನೆಯಲ್ಲಿ ಟ್ರೈ ಮಾಡಬಹುದು. ಅದು ಹೇಗೆ ಎಂದು ಯೋಚನೆ ಮಾಡುತ್ತಿದ್ದೀರಾ, ಈ ಕೆಳಗೆ ಸೂಚಿಸಿದ ರೀತಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ನೀರು – 4 ಕಪ್
    * ಉಪ್ಪು – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಗೋಬಿ/ಹೂಕೋಸು – 20
    * ಮೈದಾ – ಅರ್ಧ ಕಪ್
    * ಕಾರ್ನ್ ಫ್ಲೋರ್ – 2 ಕಪ್
    * ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ನೀರು – 1 ಕಪ್
    * ಎಣ್ಣೆ ಹುರಿಯಲು
    * ರುಚಿಗೆ ತಕ್ಕಷ್ಟು ಉಪ್ಪು

    ಮಂಚೂರಿಯನ್ ಸಾಸ್‍ಗಾಗಿ:
    * ಎಣ್ಣೆ – 4 ಟೀಸ್ಪೂನ್
    * ಕಟ್ ಮಾಡಿದ ಬೆಳ್ಳುಳ್ಳಿ, ಶುಂಠಿ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಸ್ಪ್ರಿಂಗ್ ಈರುಳ್ಳಿ – 1 ಕಪ್
    * ಕ್ಯಾಪ್ಸಿಕಂ – ಅರ್ಧ ಕಪ್
    * ಟೊಮೆಟೊ ಸಾಸ್ – 2 ಟೇಬಲ್ಸ್ಪೂನ್
    * ಮೆಣಸಿನಕಾಯಿ ಸಾಸ್ – 1 ಟೀಸ್ಪೂನ್
    * ವಿನೆಗರ್ – 2 ಟೀಸ್ಪೂನ್
    * ಸೋಯಾ ಸಾಸ್ – 2 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ, ಒಂದು ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ತೆಗೆದುಕೊಂಡು ಉಪ್ಪು ಸೇರಿಸಿ ಕುದಿಸಿ.
    * ನೀರು ಕುದಿಯಲು ಬಂದ ನಂತರ ಕಟ್ ಮಾಡಿದ ಗೋಬಿ ಹಾಕಿ 2 ನಿಮಿಷ ಕುದಿಸಿ.
    * ಗೋಬಿ ಬೇಯಿಸಿದ ಮೇಲೆ ನೀರನ್ನು ಸುರಿದು ತಣ್ಣಗಾಗಲು ಬಿಡಿ. ಈಗ ಮೈದಾ ಮತ್ತು ಕಾರ್ನ್‍ನ್ನು ಬಟ್ಟಲಿಗೆ ಹಾಕಿ ಹಿಟ್ಟುನ್ನು ತಯಾರಿಸಿ. ಅದಕ್ಕೆ ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ. ಯಾವುದೇ ರೀತಿಯ ಗಟ್ಟಾಗದಂತೆ ಹಿಟ್ಟು ತಯಾರಿಸಿ.
    * ಈ ಮಿಶ್ರಣಕ್ಕೆ ಗೋಬಿ ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಿ. ನಂತರ ಇದನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ.


    * ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಗೋಬಿ ಮಿಶ್ರಣವನ್ನು ಡೀಪ್ ಫ್ರೈ ಮಾಡಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಮೊದಲನೆಯದಾಗಿ, ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಲವಂಗ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಸರಿಯಾಗಿ ಫ್ರೈ ಮಾಡಿ.
    * ಅದಕ್ಕೆ ಈರುಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ 5 ನಿಮಿಷ ಉರಿಯಿರಿ.
    * ಟೊಮೆಟೊ ಸಾಸ್, ಮೆಣಸಿನಕಾಯಿ ಸಾಸ್, ವಿನೆಗರ್, ಸೋಯಾ ಸಾಸ್, ಪೆಪರ್ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ನಿಮಿಷ ಬೇಯಿಸಿ.
    * ಕಾರ್ನ್ ಫ್ಲೊರ್‌ ಸ್ವಲ್ಪ ಹಾಕಿ ಗ್ರೇವಿ ಸ್ವಲ್ಪ ಗಟ್ಟಿಯಾಗುವವರೆಗೂ ಫ್ರೈ ಮಾಡಿ. ಇದಕ್ಕೆ ಹುರಿದ ಗೋಬಿಯನ್ನು ಸೇರಿಸಿ. ಸಾಸ್ ಚೆನ್ನಾಗಿ ಮಿಶ್ರಣ ಮಾಡಿ.


    – ಅಂತಿಮವಾಗಿ, ಗೋಬಿ ಮಂಚೂರಿಯನ್‍ಯನ್ನು ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ, ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಸರ್ವ್ ಮಾಡಿ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಯ ಅಪ್ಪುಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ತಂದ ಅಭಿಮಾನಿ

    ಪ್ರೀತಿಯ ಅಪ್ಪುಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ತಂದ ಅಭಿಮಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯೊಬ್ಬರು ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ಬದುಕಿದ್ದಾಗ ಕೊಡಲಾಗಲಿಲ್ಲ, ಈಗ ತೆಗೆದುಕೊಂಡು ಬಂದಿದ್ದೇನೆ ಎಂದು ಅಭಿಮಾನವನ್ನು ತೋರಿಸಿದ್ದಾರೆ.

    PUNEET RAJKUMAR

    ಯಲಹಂಕದಿಂದ ಬಂದಿರುವ ಅಭಿಮಾನಿ, ಪುನೀತ್ ಅವರ ಅಂಗ ರಕ್ಷಕ ಚಿಕ್ಕಣ್ಣಗೆ ಆನಂದ್ ಪರಿಚಯಸ್ಥರಾಗಿದ್ದಾರೆ. ಇವರಿಗೆ ಪುನೀತ್ ಅವರನ್ನು ಭೇಟಿಯಾಗುವ ಆಸೆ ಇತ್ತು. ಅದು ಈಡೇರಿರಲಿಲ್ಲ. ಹೀಗಾಗಿ ಅವರ ಸಾವಿನ ಸುದ್ದಿ ಕೇಳಿ ಫ್ರೈಡ್ ರೈಸ್, ಗೋಬಿ ಮಂಚೂರಿಯನ್ನು ತಂದಿದ್ದರು. ಇದನ್ನೂ ಓದಿ:   ಚಿಕ್ಕಮಗಳೂರಿನ ನೇಚರ್, ಕಾಫಿ ಅಂದ್ರೆ ಪುನೀತ್‍ಗೆ ತುಂಬಾ ಇಷ್ಟ: ಭರತ್

    PUNEET

    ಆನಂದ್ ಫ್ರೈಡ್ ರೈಸ್, ಗೋಬಿ ವ್ಯಾಪಾರಿಯಾಗಿದ್ದಾರೆ. ಚಿಕ್ಕಣ್ಣನಿಗೆ, ಆನಂದ್ ಕೇಳಿದ್ದರು ಪುನೀತ್ ರನ್ನ ಪರಿಚಯ ಮಾಡಿಸಬೇಕು ಎಂದು. ಪುನೀತ್‍ಗೆ ಫ್ರೈಡ್ ರೈಸ್, ಗೋಬಿ ಮಂಚೂರಿ ಇಷ್ಟ ಅಂದಿದ್ದರು. ಬದುಕಿದ್ದಾಗ ಕೊಡಲಾಗಾಲಿಲ್ಲ. ಈಗ ತೆಗದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾ ಆನಂದ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿಕೆಗೆ ಮಂತ್ರಾಲಯ ಶ್ರೀಗಳಿಂದ ಸಂತಾಪ

    ಜನ ಮೆಚ್ಚುವ ಸಿನಿಮಾ ಹಾಗೂ ಯುವಕರಿಗೆ ಅಡ್ವೈಸ್ ಮಾಡುವಂತಹಾ ಸಿನಿಮಾ ಮಾಡಬೇಕು ಎಂಬುದು ಪುನೀತ್ ರಾಜ್‍ಕುಮಾರ್ ಅವರ ಕನಸಾಗಿತ್ತು. ಅವರಿಗೆ ಚಿಕ್ಕಮಗಳೂರಿನ ನೇಚರ್, ಕಾಫಿ ಎಂದರೆ ತುಂಬಾ ಇಷ್ಟ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ಭರತ್ ಪಬ್ಲಿಕ್ ಟಿವಿ ಜೊತೆ ಪುನೀತ್ ಜೊತೆಗಿನ ಆತ್ಮೀಯತೆಯನ್ನು ಮೆಲುಕು ಹಾಕಿದ್ದಾರೆ.