Tag: Gobi Manchuri

  • ರಾಜ್ಯದಲ್ಲೂ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್?

    ರಾಜ್ಯದಲ್ಲೂ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ ಬ್ಯಾನ್?

    ಬೆಂಗಳೂರು: ಕಾಟನ್ ಕ್ಯಾಂಡಿ (Cotton Candy) ಹಾಗೂ ಗೋಬಿ ಮಂಚೂರಿಯಲ್ಲಿ (Gobi Manchuri) ಕೆಲವು ಹಾನಿಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಗೋವಾ, ತಮಿಳುನಾಡು ಈ ಆಹಾರಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಕಲರ್ ಜೆಲ್ಲಿಗಳನ್ನು ಸ್ಯಾಂಪಲ್ ಟೆಸ್ಟ್‌ಗೆ ಒಳಪಡಿಸಿಲಾಗಿತ್ತು. ಇದೀಗ ಕಾಟನ್ ಕ್ಯಾಂಡಿ ಜೆಲ್ಲಿ ಹಾಗೂ ಗೋಬಿ ಮಂಚೂರಿಯ ಟೆಸ್ಟಿಂಗ್ ರಿಪೋರ್ಟ್ ಆರೋಗ್ಯ ಇಲಾಖೆ (Health Department) ಕೈ ಸೇರಿದೆ.

    ಆಹಾರ ಮತ್ತು ಸುರಕ್ಷತಾ ಇಲಾಖೆಯಿಂದ ರಿಪೋರ್ಟ್ ಆಧರಿಸಿ ನಿರ್ಧಾರ ಕೈಗೊಳ್ಳಲಿದ್ದು, ಸೋಮವಾರ (ಮಾ.11) ಆರೋಗ್ಯ ಸಚಿವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸ್ಯಾಂಪಲ್‌ನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ಅಂಶ ಇರುವುದು ಪತ್ತೆಯಾಗಿದ್ದು, ಗೋಬಿ ಮಂಚೂರಿಯಲ್ಲಿ Sunset Yellow ಮತ್ತು Tartrazine ಅಂಶ ಇರುವುದು ಪತ್ತೆಯಾಗಿದೆ. ರಾಸಾಯನಿಕ ಕಲಬೆರಕೆ ಇರುವುದರಿಂದ ಕಾಟನ್ ಕ್ಯಾಂಡಿ ಬ್ಯಾನ್ ಮಾಡುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನಾವು ತ್ಯಾಗ ಮಾಡಿ ಬಂದವರು, ಲೋಕಸಭಾ ಟಿಕೆಟ್ ನನಗೆ ಕೊಡ್ಬೇಕು: ಬಿ.ಸಿ ಪಾಟೀಲ್

    ಗೋಬಿ ಮಂಚೂರಿಯಲ್ಲಿ Sunset Yellow ಹಾಗೂ Tartrazine ಹಾನಿಕಾರಕ ಅಂಶ ಇರೋದ್ರಿಂದ ಎರಡೂ ರಾಸಾಯನಿಕ ಅಂಶಗಳನ್ನು ಬಳಕೆ ಮಾಡದೇ ಇರುವ ಥರ ಆರೋಗ್ಯ ಸಚಿವರು ಘೋಷಣೆ ಮಾಡುವ ಸಾಧ್ಯತೆ ಇದೆ. ಟೆಸ್ಟಿಂಗ್‌ನಲ್ಲಿ ಹಾನಿಕಾರಕ ಅಂಶ ಇರೋದು ವರದಿಯಲ್ಲಿ ತಿಳಿದು ಬಂದಿರುವುದಾಗಿ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಕಾಂಗ್ರೆಸ್ ಶಾಸಕ ವಾಸು ಅನಾರೋಗ್ಯದಿಂದ ನಿಧನ

    ರೊಡಮೈನ್ ಬಿ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಏನು?
    ರೊಡಮೈನ್ ಬಿ ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿದ್ದು, ಕಣ್ಣು ದೃಷ್ಟಿ ಸಮಸ್ಯೆ ಹಾಗೂ ಲಿವರ್ ಸಂಬಂಧಿ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಗೋಬಿಯಲ್ಲಿ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚಿವೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಳ್ಳಾರಿಯಲ್ಲಿ ತನಿಖೆ ಚುರುಕು, ಬಾಂಬರ್‌ನಂತೆ ಡ್ರೆಸ್‌ ಹಾಕಿ ಓರ್ವನ ವಿಚಾರಣೆ

    ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ರೊಡಮೈನ್-ಬಿ ಅಂಶ ಇರುವುದು ದೃಢಪಟ್ಟಿದೆ. ಹೀಗಾಗಿ ಅಲ್ಲಿ ಬ್ಯಾನ್ ಆಗಿತ್ತು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎಂಬ ಅಂಶ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ರಾಜ್ಯದಲ್ಲೂ ಬಾಂಬೆ ಮಿಠಾಯಿಯ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಗೋದು ಅನುಮಾನ – ಮೈಸೂರಿನಿಂದ ಯದುವೀರ್‌ ಸ್ಪರ್ಧೆ?

    ಗೋಬಿ ಮಂಚೂರಿಗೆ ಬಳಕೆ ಮಾಡುವ ಕೆಲವೊಂದು ಕಲರ್‌ಗಳನ್ನು ಬ್ಯಾನ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಅಲ್ಲದೇ ಗೋಬಿ ಮಂಚೂರಿಗೆ ಬಳಕೆ ಮಾಡುವ ಮೂರು ಬಗೆಯ ಕಲರ್‌ಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದೆ. Sunset Yellow ಕಲರ್, Tartrazine, ಸಿಂಥೆಟಿಕ್ ಕಲರ್ ಸಾಸ್‌ಗಳನ್ನು ಬ್ಯಾನ್ ಮಾಡುವ ಸಾಧ್ಯತೆ ಇದ್ದು, ಕಲರ್‌ಗಳನ್ನ ಬಳಕೆ ಮಾಡದೇ ಗೋಬಿಮಂಚೂರಿಗೆ ಮಾರಾಟಕ್ಕೆ ಅವಕಾಶ ಕೊಡಬಹುದು. ಕಾಟನ್ ಕ್ಯಾಂಡಿ ಸಂಪೂರ್ಣ ಬ್ಯಾನ್‌ಗೆ ನಿರ್ಧರಿಸುವ ಸಾಧ್ಯತೆ ಹೆಚ್ಚಾಗಿದ್ದು, ಸೋಮವಾರ ಮಹತ್ವದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವರು ಈ ಬಗ್ಗೆ ಘೋಷಣೆ ಮಾಡೋ ಸಾಧ್ಯತೆಯಿದೆ. ಇದನ್ನೂ ಓದಿ: ರಣಬಿಸಿಲ ನಡುವೆ ದಾಖಲೆಯ ವಿದ್ಯುತ್ ಬಳಕೆ – ಲೋಡ್ ಶೆಡ್ಡಿಂಗ್ ಭೀತಿ

  • ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್

    ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್

    ಬೆಂಗಳೂರು: ಕೆಂಗೇರಿ (Kengeri)  ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣದ ಆರೋಪಿಗಳನ್ನು ಐದು ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.

    ಹೌದು, ವೃದ್ದೆ ಶಾಂತಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ (Kollapura) ವೃದ್ಧೆಯ ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಬಂಧಿಸಿದ್ಧಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಡಾಡ್ತಿದೆಯಂತೆ ಗುಜರಿ ಅಂಬುಲೆನ್ಸ್- ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!

    2016ರ ಆಗಸ್ಟ್‌ನಲ್ಲಿ ಕೆಂಗೇರಿ ಸ್ಯಾಟಲೈಟ್‍ನಲ್ಲಿ (Satellite) ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರು ತಿಂಗಳು ಮನೆಯಲ್ಲೇ ಶವವನ್ನು ಆರೋಪಿಗಳು ಹೂತಿಟ್ಟಿದ್ದರು. ಶಾಂತಕುಮಾರಿ, ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಒಟ್ಟಿಗೆ ವಾಸವಾಗಿದ್ದರು. ಒಂದು ದಿನ ಮೊಮ್ಮಗ ಸಂಜಯ್ ಅಜ್ಜಿಗೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಗೋಬಿ ಮಂಚೂರಿಯನ್ನು (Gobi Manchuri) ತಂದು ಕೊಟ್ಟಿದ್ದ. ಆದರೆ ವಿಪರೀತ ಮಡಿವಂತಿಕೆ, ಶಿಸ್ತಿನಿಂದಿರುತ್ತಿದ್ದ ಶಾಂತಮ್ಮ, ಸಂಜಯ್ ಮುಖಕ್ಕೆ ಗೋಬಿ ಮಂಚೂರಿಯನ್ನು ಎಸೆದು ಬೈದಿದ್ದರು.

    ಇದರಿಂದ ಕೋಪಗೊಂಡ ಸಂಜಯ್ ಅಜ್ಜಿ ತಲೆಗೆ ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ಕೆಮಿಕಲ್ ಹಾಕಿ ಕಬೋರ್ಡ್‍ನಲ್ಲಿ ಮುಚ್ಚಿಟ್ಟು, ಊರಿಗೆ ಹೋಗಿ ಬರುತ್ತೇವೆ ಅಂತ ಯಾರಿಗೂ ಅನುಮಾನ ಬಾರದಂತೆ ತಾಯಿ-ಮಗ ಮನೆ ಖಾಲಿ ಮಾಡಿದ್ದರು. ಆರು ತಿಂಗಳ ಬಳಿಕ ಮನೆ ಓನರ್ ರಿಪೇರಿ ಕೆಲಸ ಮಾಡುವ ವೇಳೆ ಶವದ ಅಸ್ಥಿಪಂಜರ ಪತ್ತೆಯಾಗಿತ್ತು. ನಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಸಂಜಯ್ ಸ್ನೇಹಿತ ನಂದೀಶ್ ಎಂಬಾತನನ್ನು ಬಂಧಿಸಿದ್ದರು. ಅಲ್ಲದೇ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ತಾಯಿ – ಮಗ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ಸದ್ಯ ಕೊಲ್ಲಾಪುರದಲ್ಲಿ ತಾಯಿ, ಮಗ ವಾಸವಾಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಮೊಮ್ಮಗ ಸಂಜಯ್ ಎಂಜಿನಿಯರಿಂಗ್ ಮಾಡಿಕೊಂಡು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ಇದೀಗ ಐದು ವರ್ಷದ ಬಳಿಕ ಕೊಲೆ ಆರೋಪಿಗಳಾದ ಶಶಿಕಲಾ ಮತ್ತು ಸಂಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]