Tag: Gobi

  • ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಕಬಾಬ್, ಪಾನಿಪುರಿ ಟೆಸ್ಟ್‌ಗೆ ಪ್ಲಾನ್!

    ಗೋಬಿ, ಕಾಟನ್ ಕ್ಯಾಂಡಿ ಆಯ್ತು ಈಗ ಕಬಾಬ್, ಪಾನಿಪುರಿ ಟೆಸ್ಟ್‌ಗೆ ಪ್ಲಾನ್!

    – ಕೆಮಿಕಲ್ ಬಳಕೆ ಪತ್ತೆಯಾದ್ರೆ ಬ್ಯಾನ್ ಫಿಕ್ಸ್

    ಬೆಂಗಳೂರು: ಗೋಬಿ ಆಯ್ತು, ಕಾಟನ್ ಕ್ಯಾಂಡಿ ಆಯ್ತು. ಈಗ ಕಬಾಬ್ (Kabab), ಪಾನಿಪುರಿಯನ್ನ ಟೆಸ್ಟ್‍ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ. ಬೆಂಗಳೂರಿನ ಹಲವು ಏರಿಯಾಗಳ ಕಬಾಬ್, ಪಾನಿಪುರಿ ಅಸುರಕ್ಷತೆಯನ್ನ ಪರಿಶೀಲಿಸಿ ಈ ತಿಂಗಳ ಅಂತ್ಯದಲ್ಲಿಯೇ ವರದಿ ಪ್ರಕಟಿಸಿ ಕ್ರಮಕ್ಕೆ ಮುಂದಾಗಲಿದೆ.

    ಕಳೆದ ಕೆಲದಿನಗಳ ಹಿಂದಷ್ಟೆ ಆಹಾರ ಮತ್ತು ಸುರಕ್ಷತಾ ಇಲಾಖೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನ (Cotton Candy) ಪರೀಕ್ಷಿಸಿ ಅದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆ ಮಾಡಿ ಕಲರ್‍ಗಳ ಬಳಕೆ ಮಾಡೋದನ್ನ ನಿಷೇಧ ಮಾಡಿದೆ. ಆರೋಗ್ಯ ಸಚಿವರು ಸಹ ಗೋಬಿಗೆ ಮೂರು ಬಗೆಯ ಕಲರ್‍ಗಳನ್ನ ಬಳಕೆ ಮಾಡಬಾರದು ಅಂತಾ ಆದೇಶ ಮಾಡಿದ್ದಾರೆ. ಈ ಬೆನ್ನಲ್ಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಕಬಾಬ್ ಮತ್ತು ಪಾನಿಪುರಿ ಬಳಕೆ ಮಾಡುತ್ತಿರುವ ಕಲರ್ ಮತ್ತು ಕಲಬೆರಕೆಯ ಬಗ್ಗೆ ತಪಾಸಣೆ ಮಾಡಲು ಮುಂದಾಗಿದೆ.‌ ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

    ಬೆಂಗಳೂರಿನ ಪ್ರಮುಖ ಏರಿಯಾಗಳು, ಹೋಟೆಲ್‍ಗಳು ಮತ್ತು ಬೀದಿಬದಿ ವ್ಯಾಪಾರಗಳಿಂದ ಕಬಾಬ್ ಮತ್ತು ಪಾನಿಪುರಿ ಸಂಗ್ರಹಿಸಿ ಲ್ಯಾಬ್‍ಗೆ ಕಳಿಸಲಿದ್ದಾರೆ. ಅಸುರಕ್ಷತೆನಾ ಅಂತಾ ತಪಾಸಣೆ ಮಾಡಿ ಹಾನಿಕಾರಕ ಅಂಶಗಳನ್ನ ಪತ್ತೆ ಮಾಡಲಿದ್ದಾರೆ. ಇದರಲ್ಲೂ ಕ್ಯಾನ್ಸರ್ ಕಾರಕ, ಹಾನಿಕಾರಕ ಅಂಶಗಳು ಇದ್ದರೆ ಕೂಡಲೇ ಕಲರ್ ಬಳಕೆ ನೀಷೇಧ ಹೇರಿ ಕ್ರಮ ವಹಿಸುತ್ತಾರಂತೆ. ಈ ತಿಂಗಳ ಅಂತ್ಯಕ್ಕೆ ಟೆಸ್ಟಿಂಗ್  ರಿಪೋರ್ಟ್  ಹೊರಬರುತ್ತೆ ಅಂತಾ ಪಬ್ಲಿಕ್ ಟಿವಿಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಬಾಬ್, ಪಾನಿಪೂರಿ ತಯಾರಿಕೆಯಲ್ಲಿ ಸ್ವಚ್ಛತೆ ಇರಲ್ಲ ಅಂತಾ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೂಡ ಬಂದಿವೆ. ಈ ಮಧ್ಯೆ ಆಹಾರ& ಸುರಕ್ಷತಾ ಇಲಾಖೆ ಪರೀಕ್ಷೆಗೆ ಒಳಪಡಿಸಲು ಮುಂದಾಗಿರೋದು ಒಳ್ಳೆಯ ನಿರ್ಧಾರ.

  • ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ

    ಹೆಂಗಳೆಯರ ಮನಗೆದ್ದ ʼಗೋಬಿ ಮಂಚೂರಿʼ ಮಾಡುವ ಸಿಂಪಲ್ ವಿಧಾನ

    ಗೋಬಿ ಎಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಅದರಲ್ಲಿಯೂ ಯುವಜನತೆಗೆ ಮಾತ್ರ ಗೋಬಿ ಹೆಸರು ಕೇಳಿದ್ರೆ ತಿನ್ನಲೇ ಬೇಕು ಎಂದು ಹಾತೊರೆಯುತ್ತಾರೆ. ‘ಗೋಬಿ ಮಂಚೂರಿ’ ರೆಸಿಪಿ ತುಂಬಾ ಸಿಂಪಲ್ ಆಗಿದ್ದು, ನೀವು ಮನೆಯಲ್ಲಿ ಟ್ರೈ ಮಾಡಬಹುದು. ಅದು ಹೇಗೆ ಎಂದು ಯೋಚನೆ ಮಾಡುತ್ತಿದ್ದೀರಾ, ಈ ಕೆಳಗೆ ಸೂಚಿಸಿದ ರೀತಿ ಮಾಡಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ನೀರು – 4 ಕಪ್
    * ಉಪ್ಪು – ಅರ್ಧ ಟೀಸ್ಪೂನ್
    * ಕಟ್ ಮಾಡಿದ ಗೋಬಿ/ಹೂಕೋಸು – 20
    * ಮೈದಾ – ಅರ್ಧ ಕಪ್
    * ಕಾರ್ನ್ ಫ್ಲೋರ್ – 2 ಕಪ್
    * ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    * ನೀರು – 1 ಕಪ್
    * ಎಣ್ಣೆ ಹುರಿಯಲು
    * ರುಚಿಗೆ ತಕ್ಕಷ್ಟು ಉಪ್ಪು

    ಮಂಚೂರಿಯನ್ ಸಾಸ್‍ಗಾಗಿ:
    * ಎಣ್ಣೆ – 4 ಟೀಸ್ಪೂನ್
    * ಕಟ್ ಮಾಡಿದ ಬೆಳ್ಳುಳ್ಳಿ, ಶುಂಠಿ – 2 ಟೀಸ್ಪೂನ್
    * ಹಸಿರು ಮೆಣಸಿನಕಾಯಿ – 1
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಸ್ಪ್ರಿಂಗ್ ಈರುಳ್ಳಿ – 1 ಕಪ್
    * ಕ್ಯಾಪ್ಸಿಕಂ – ಅರ್ಧ ಕಪ್
    * ಟೊಮೆಟೊ ಸಾಸ್ – 2 ಟೇಬಲ್ಸ್ಪೂನ್
    * ಮೆಣಸಿನಕಾಯಿ ಸಾಸ್ – 1 ಟೀಸ್ಪೂನ್
    * ವಿನೆಗರ್ – 2 ಟೀಸ್ಪೂನ್
    * ಸೋಯಾ ಸಾಸ್ – 2 ಟೀಸ್ಪೂನ್
    * ಮೆಣಸಿನ ಪುಡಿ – 1 ಟೀಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಮೊದಲನೆಯದಾಗಿ, ಒಂದು ದೊಡ್ಡ ಪಾತ್ರೆಯಲ್ಲಿ 4 ಕಪ್ ನೀರನ್ನು ತೆಗೆದುಕೊಂಡು ಉಪ್ಪು ಸೇರಿಸಿ ಕುದಿಸಿ.
    * ನೀರು ಕುದಿಯಲು ಬಂದ ನಂತರ ಕಟ್ ಮಾಡಿದ ಗೋಬಿ ಹಾಕಿ 2 ನಿಮಿಷ ಕುದಿಸಿ.
    * ಗೋಬಿ ಬೇಯಿಸಿದ ಮೇಲೆ ನೀರನ್ನು ಸುರಿದು ತಣ್ಣಗಾಗಲು ಬಿಡಿ. ಈಗ ಮೈದಾ ಮತ್ತು ಕಾರ್ನ್‍ನ್ನು ಬಟ್ಟಲಿಗೆ ಹಾಕಿ ಹಿಟ್ಟುನ್ನು ತಯಾರಿಸಿ. ಅದಕ್ಕೆ ಮೆಣಸಿನ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ. ಯಾವುದೇ ರೀತಿಯ ಗಟ್ಟಾಗದಂತೆ ಹಿಟ್ಟು ತಯಾರಿಸಿ.
    * ಈ ಮಿಶ್ರಣಕ್ಕೆ ಗೋಬಿ ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಿ. ನಂತರ ಇದನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ.


    * ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಗೋಬಿ ಮಿಶ್ರಣವನ್ನು ಡೀಪ್ ಫ್ರೈ ಮಾಡಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ಮೊದಲನೆಯದಾಗಿ, ದೊಡ್ಡ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಲವಂಗ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ಸರಿಯಾಗಿ ಫ್ರೈ ಮಾಡಿ.
    * ಅದಕ್ಕೆ ಈರುಳ್ಳಿ ಮತ್ತು ಸ್ಪ್ರಿಂಗ್ ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ 5 ನಿಮಿಷ ಉರಿಯಿರಿ.
    * ಟೊಮೆಟೊ ಸಾಸ್, ಮೆಣಸಿನಕಾಯಿ ಸಾಸ್, ವಿನೆಗರ್, ಸೋಯಾ ಸಾಸ್, ಪೆಪರ್ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ನಿಮಿಷ ಬೇಯಿಸಿ.
    * ಕಾರ್ನ್ ಫ್ಲೊರ್‌ ಸ್ವಲ್ಪ ಹಾಕಿ ಗ್ರೇವಿ ಸ್ವಲ್ಪ ಗಟ್ಟಿಯಾಗುವವರೆಗೂ ಫ್ರೈ ಮಾಡಿ. ಇದಕ್ಕೆ ಹುರಿದ ಗೋಬಿಯನ್ನು ಸೇರಿಸಿ. ಸಾಸ್ ಚೆನ್ನಾಗಿ ಮಿಶ್ರಣ ಮಾಡಿ.


    – ಅಂತಿಮವಾಗಿ, ಗೋಬಿ ಮಂಚೂರಿಯನ್‍ಯನ್ನು ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿ, ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಸರ್ವ್ ಮಾಡಿ.

    Live Tv
    [brid partner=56869869 player=32851 video=960834 autoplay=true]