Tag: goa minister

  • ಮೈಕೆಲ್ ಲೋಬೋ ಸಚಿವ ಸ್ಥಾನಕ್ಕೆ ರಾಜೀನಾಮೆ – ಚುನಾವಣೆಗೂ ಮುನ್ನ ಗೋವಾದಲ್ಲಿ ಬಿಜೆಪಿಗೆ ಹಿನ್ನೆಡೆ

    ಮೈಕೆಲ್ ಲೋಬೋ ಸಚಿವ ಸ್ಥಾನಕ್ಕೆ ರಾಜೀನಾಮೆ – ಚುನಾವಣೆಗೂ ಮುನ್ನ ಗೋವಾದಲ್ಲಿ ಬಿಜೆಪಿಗೆ ಹಿನ್ನೆಡೆ

    ಪಣಜಿ: ಬಿಜೆಪಿ ನೇತೃತ್ವದ ಗೋವಾ ಸರ್ಕಾರದಲ್ಲಿ ಸಚಿವ ಮೈಕೆಲ್ ಲೋಬೋ ಅವರು ಶಾಸಕ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಗೋವಾ ಚುನಾವಣೆಗೆ ಕೇವಲ ಒಂದು ತಿಂಗಳಿರುವಾಗಲೇ ಬಿಜೆಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಾಮಾನ್ಯ ಜನರ ಪಕ್ಷವಲ್ಲವಾಗಿ ಉಳಿದಿಲ್ಲ. ಇದರಿಂದಾಗಿ ನಾನು ಶಾಸಕ ಹಾಗೂ ಸಚಿವ ಸ್ಥಾನವೆರಡಕ್ಕೂ ರಾಜೀನಾಮೆ ನೀಡಿದ್ದೇನೆ. ಇದರ ಜೊತೆಗೆ ನಾನು ಬಿಜೆಪಿ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ಯಾವ ಪಕ್ಷಕ್ಕೆ ಸೇರಬೇಕೆನ್ನುವುದನ್ನು ನಾನು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ ಎಂದ ಅವರು, ಬಿಜೆಪಿ ಸಾಮಾನ್ಯ ಜನರ ಪಕ್ಷವಲ್ಲ ಎಂದು ಮತದಾರರು ತಿಳಿಸಿದ್ದಾರೆ ಎಂದು ತಮ್ಮ ರಾಜೀನಾಮೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದರು, ಕಾಂಗ್ರೆಸ್‌ಗೆ ಸೇರುತ್ತಾರೋ ಅಥವಾ ಇತರೆ ಪಕ್ಷಕ್ಕೆ ಸೇರುತ್ತಾರೋ ಎಂನ್ನುವುದರ ಕುರಿತು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಬದಲಾಗಿ ನಾನು ಯಾವ ಪಕ್ಷಕ್ಕೆ ಸೇರುತ್ತೇನೋ, ಆ ಪಕ್ಷದಲ್ಲಿ ಅತಿ ಹೆಚ್ಚು ಮತದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಗೋವಾ ರಾಜ್ಯದ ತ್ಯಾಜ್ಯ ನಿವಹಣಾ ಇಲಾಖೆಯ ಉಸ್ತುವಾರಿಯನ್ನು ಇವರು ನೋಡಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಮೈಕೆಲ್ ಲೋಬೋ ಅವರು ಬಹಿರಂಗವಾಗಿ ತಮ್ಮ ಪಕ್ಷದ ಬಗ್ಗೆ ಟೀಕಿಸುತ್ತಿದ್ದರು. ಇದು ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಕಟ್ಟಿದ್ದ ಪಕ್ಷವಾಗಿ ಉಳಿದಿಲ್ಲ ಎಂದಿದ್ದರು. 2019ರಲ್ಲಿ ಮನೋಹರ್ ಪರಿಕ್ಕರ್ ಅವರ ಸಾವಿನ ನಂತರ ಅಧಿಕಾರ ವಹಿಸಿಕೊಂಡ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೊಂದಿಗೆ ಅವರು ಭಿನ್ನಾಭಿಪ್ರಾಯ ಹೊಂದಿದ್ದರು. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್

  • ಮುಖ್ಯಮಂತ್ರಿಗಳೇ ನಿದ್ದೆಯಿಂದ ಎದ್ದೇಳಿ – ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

    ಮುಖ್ಯಮಂತ್ರಿಗಳೇ ನಿದ್ದೆಯಿಂದ ಎದ್ದೇಳಿ – ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

    ಬೆಂಗಳೂರು: ಗೋವಾ ಜಲಸಂಪನ್ಮೂಲ ಸಚಿವ ಅವಹೇಳನಕಾರಿ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿದ ಸಂಸದರು, ಸಿಎಂ ಸಿದ್ದರಾಮಯ್ಯ ಸರ್.. ನಿದ್ದೆಯಿಂದ ಎದ್ದೇಳಿ.. ನಿಮ್ಮ ನಿದ್ದೆ ರಾಜ್ಯದ ಹಿತಾಸಕ್ತಿಗೆ ಮಾರಕವಾಗುತ್ತಿದೆ. ನೀವು ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡೊವರೆಗೂ ಆದ್ರೂ ಎಚ್ಚರದಿಂದಿರಿ. ಮೇ ತಿಂಗಳ ಮೊದಲ ವಾರದವರೆಗೂ ಆದ್ರೂ ನಿದ್ದೆಬಿಟ್ಟು ಎಚ್ಚರದಿಂದ ಕಾರ್ಯನಿರ್ವಹಿಸಿ ಅಂತ ಹೇಳಿದ್ದಾರೆ.

    ನಮ್ಮ ಜಲಸಂಪನ್ಮೂಲ ಸಚಿವರು, ಎಂಜಿನಿಯರ್‍ಗಳು ಎಂದಾದ್ರೂ ಮೆಟ್ಟೂರು ಜಲಾಶಯ ಪರಿಶೀಲಿಸುವ ಧೈರ್ಯ ತೋರಿದ್ದಾರಾ? ಸೂಕ್ಷ್ಮ ಪ್ರದೇಶ ಆಗಿರುವ ಕಣಕುಂಬಿ ಪ್ರದೇಶಕ್ಕೆ ಗೋವಾ ಸಚಿವರನ್ನು ಹೋಗಲು ನೀವು ಹೇಗೆ ಬಿಟ್ರಿ? ಅಂತ ಸರಣಿ ಟ್ವೀಟ್‍ಗಳ ಮೂಲಕ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.


    ಈ ಮೂಲಕ ಸಂಸದರು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರಾಜ್ಯಕ್ಕೆ ಹಿನ್ನೆಡೆಯಾಗುವ ಆತಂಕ ವ್ಯಕ್ತಪಡಿಸಿದ್ರು.

    ಗೋವಾ ಸಚಿವರು ಏನಂದಿದ್ದರು?: ಕನ್ನಡಿಗರನ್ನು ಹರಾಮಿಗಳು ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ಬೆಳಗಾವಿಯ ಕಣಕುಂಬಿ ಕಳಸಾ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸಚಿವರ ಈ ಹೇಳಿಕೆಯನ್ನು ಬಿಎಸ್ ಯಡಿಯೂರಪ್ಪ ಹಾಗೂ ಪ್ರತಾಪ್ ಸಿಂಹ ಈಗಾಗಲೇ ಖಂಡಿಸಿದ್ದಾರೆ.

    ಮಾನ್ಯ ಮುಖ್ಯಮಂತ್ರಿ ಪರಿಕ್ಕರ್ ಜೀ ಅವರೇ ನಿಮ್ಮ ಸರ್ಕಾರದ ಉದಾರತೆ ಬಗ್ಗೆ ನಮಗೆ ಗೌರವ ಇದೆ. ಕಾಂಗ್ರೆಸ್‍ನ ಕೊಳಕು ರಾಜಕಾರಣದ ಹೊರತಾಗಿ ಕುಡಿಯುವ ನೀರು ಕೊಡುವ ವಿಷಯದ ನಿಮ್ಮ ನಿಲುವಿಗೆ ಗೌರವ ಇದೆ. ಆದ್ರೆ ಪದಗಳು ಉಚಿತವಾಗಿ ಸಿಗುತ್ತವೆ ಅಂತ ಮಾತನಾಡಬಾರದು. ಆ ಪದಗಳನ್ನ ಬಳಸುವಾಗ ಎಚ್ಚರವಿರಬೇಕು. ನಿಮ್ಮ ಸಚಿವ ವಿನೋದ್ ಪಾಲೇಕರ್ ಗೆ ಸರಿಯಾದ ಭಾಷೆ ಬಳಸಲು ಹೇಳಿ. ಇಲ್ಲವಾದರೆ ಅವರು ಇನ್ನೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತೆ ಅಂತ ಪ್ರತಾಪ್ ಸಿಂಹ ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಕನ್ನಡರ ವಿರುದ್ಧದ ಹೇಳಿಕೆಗೆ ಗೋವಾ ಬಿಜೆಪಿ ವಿರುದ್ಧವೇ ಧ್ವನಿ ಎತ್ತಿದ ಪ್ರತಾಪ್ ಸಿಂಹ ಅವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದರು.