Tag: goa government

  • ಮಹದಾಯಿ ಯೋಜನೆ ಅನುಷ್ಠಾನ – ಗೋವಾ ಸರ್ಕಾರದ ನಡೆಯ ಬಗ್ಗೆ ಗೊತ್ತಿಲ್ಲವೆಂದ ಸಿಎಂ

    ಮಹದಾಯಿ ಯೋಜನೆ ಅನುಷ್ಠಾನ – ಗೋವಾ ಸರ್ಕಾರದ ನಡೆಯ ಬಗ್ಗೆ ಗೊತ್ತಿಲ್ಲವೆಂದ ಸಿಎಂ

    ಹುಬ್ಬಳ್ಳಿ: ಮಹದಾಯಿ ಯೋಜನೆ (Mahadayi River Project) ಅನುಷ್ಠಾನ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನಮಗೆ ಗೋತ್ತಿಲ್ಲ. ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ (Supreme Court) ಆದೇಶದ ಮೇಲೆ ನ್ಯಾಯಾಧಿಕರಣ ರಚನೆಯಾಗಿದೆ. ಅದರ ಪರಿಶೀಲನೆ ಸಹ ಆಗಿ, ತೀರ್ಪು ನೀಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿಂದು (Hubbali) ಮಾತನಾಡಿದ ಅವರು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ 2016 ರಲ್ಲಿ ಸಮಗ್ರ ಯೋಜನಾ ವರದಿ (DPR) ನೀಡಲಾಗಿತ್ತು. ಸದ್ಯ ಡಿಪಿಆರ್‌ಗೂ ಅನುಮತಿ ಸಿಕ್ಕಿದೆ. ಕಾನೂನು (Law) ಹೋರಾಟವಾಗಿಯೇ ಇದೆಲ್ಲವೂ ನಡೆದಿದೆ ಎಂದು ಹೇಳಿದ್ದಾರೆ.

    ಎಚ್.ವಿಶ್ವನಾಥ್ (H Vishwanath) ಅವರ ಹೇಳಿಕೆಗೆ ನಾನು ಯಾವತ್ತೂ ಪ್ರತಿಕ್ರಿಯಿಸಿಲ್ಲ. ಅವರು ಪದೇ-ಪದೇ ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುತ್ತಾ ತುಳು? – ಅಧ್ಯಯನಕ್ಕೆ ಸಮಿತಿ ರಚನೆ

    ಫೆಬ್ರವರಿ 6 ರಂದು ಪ್ರಧಾನಿ ಮೋದಿ ((Narendra Modi) ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಅಂದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಇದರೊಂದಿಗೆ `CD ಬಾಂಬ್’ ಸಿಡಿಸಿದ್ದ ರಮೇಶ್ ಜಾರಕಿಹೊಳಿ (Ramesh Jarkiholi) ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬೆಂಗಳೂರಿನಿಂದ ಸಿಎಂ ಜೊತೆಗೆ ಜಾರಕಿಹೊಳಿ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಹಲವು ಕುತೂಹಲಕ್ಕೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋವಾ ಸರ್ಕಾರದ ಬಗ್ಗೆ ಪ್ರತಿಪಕ್ಷಗಳಿಂದ ವಿವಾದ ಸೃಷ್ಟಿ ಸಲ್ಲದು- ಸಿ.ಟಿ.ರವಿ

    ಗೋವಾ ಸರ್ಕಾರದ ಬಗ್ಗೆ ಪ್ರತಿಪಕ್ಷಗಳಿಂದ ವಿವಾದ ಸೃಷ್ಟಿ ಸಲ್ಲದು- ಸಿ.ಟಿ.ರವಿ

    ನವದೆಹಲಿ: ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸರ್ಕಾರ ಗೋವಾದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಪ್ರತಿಪಕ್ಷಗಳು ಈ ಬಗ್ಗೆ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಹಾಗೂ ಗೋವಾ ರಾಜ್ಯ ಉಸ್ತುವಾರಿ ಸಿ.ಟಿ.ರವಿ ಹೇಳಿದ್ದಾರೆ.

    SATYAPAL MALIK

    ಗೋವಾ ಮುಖ್ಯಮಂತ್ರಿ ಆಡಳಿತ ಕುರಿತು ತಾವು ಯಾವುದೇ ಹೇಳಿಕೆ ನೀಡಿಲ್ಲ ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪಷ್ಟಪಡಿಸಿದ್ದಾರೆ. ಆದರೂ ಪ್ರತಿಪಕ್ಷಗಳು ವಿವಾದ ಸೃಷ್ಟಿಸುತ್ತಿರುವುದು ಸಲ್ಲ ಎಂದು ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಅವರ ಸಂಪುಟ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು.

  • ಕರ್ನಾಟಕ ಮೀನುಗಾರರ ಮೇಲೆ ಗೋವಾ ಗೂಂಡಾಗಿರಿ – 10 ಲಕ್ಷ ಮೌಲ್ಯದ ಮೀನು ಕಸದ ತೊಟ್ಟಿಗೆ

    ಕರ್ನಾಟಕ ಮೀನುಗಾರರ ಮೇಲೆ ಗೋವಾ ಗೂಂಡಾಗಿರಿ – 10 ಲಕ್ಷ ಮೌಲ್ಯದ ಮೀನು ಕಸದ ತೊಟ್ಟಿಗೆ

    ಕಾರವಾರ: ಸುಮಾರು 10 ಲಕ್ಷ ಮೌಲ್ಯದ ಮೀನನ್ನು ಕಸದ ತೊಟ್ಟಿಗೆ ಎಸೆದು ಗೋವಾ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಮೀನುಗಾರರ ಮೇಲೆ ಉದ್ಧಟತನ ತೋರಿದ್ದಾರೆ. ಕಾರವಾರದಿಂದ ರಾಮಣ್ಣ ಎಂಬವರಿಗೆ ಸೇರಿದ್ದ ಮೀನು ತುಂಬಿದ ಲಾರಿಯನ್ನು ಗೋವಾದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಕಸದ ತೊಟ್ಟಿಗೆ ಎಸೆದಿದ್ದಾರೆ.

    ಗೋವಾದ ಆಹಾರ ಇಲಾಖೆಯ ಅನುಮತಿ ಪಡೆದು ಪಣಜಿಯಲ್ಲಿರುವ ಅಟ್ಲಾಸ್ ಕಂಪನಿಗೆ ಕೊಂಡೊಯ್ಯುವ ವೇಳೆ ಗಡಿಯಲ್ಲಿ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಪಣಜಿಯ ಎಫ್‍ಡಿಎ ಕಚೇರಿಗೆ ಕೊಂಡೊಯ್ದು ಎರಡು ದಿನ ಇಟ್ಟು ಫಾರ್ಮಲಿನ್ ಇಲ್ಲವೆಂದು ದೃಢಪಟ್ಟರೂ ಗಾಡಿಯನ್ನು ಬಿಡದೇ ಅಲ್ಲಿನ ನಗರಸಭೆಯ ಕಸದ ತೊಟ್ಟಿಗೆ ಎಸೆದು ಉದ್ಧಟತನ ತೋರಿದ್ದಾರೆ.

    ಕಳೆದ ಒಂದೂವರೆ ತಿಂಗಳ ಹಿಂದೆ ಕರ್ನಾಟಕದ ಮೀನಿನ ಮೇಲೆ ನಿಷೇಧ ಹೇರಿರುವ ಗೋವಾ ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿ ಗೋವಾಕ್ಕೆ ತರಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಗೋವಾ ಸರ್ಕಾರದ ನಿಯಮವನ್ನು ಅನುಸರಿಸಿದರೂ ಆಹಾರ ಇಲಾಖೆ ಅನುಮತಿ ಪಡೆದು ಶಿಥಿಲೀಕರಣ ವಾಹನದಲ್ಲಿ ಮೀನು ತರುವಂತೆ ಆದೇಶವನ್ನು ಪಾಲನೆ ಮಾಡಲಾಗಿತ್ತು. ಆದರೂ ಕೂಡ ಗಡಿಯಲ್ಲಿ ಕರ್ನಾಟಕದ ವಾಹನ ತಡೆದು ನಂತರ ಪಣಜಿ ನಗರಸಭೆಗೆ ವಾಹನ ತೆಗೆದುಕೊಂಡು ಹೋಗಿ ಅದರಲ್ಲಿದ್ದ ಸುಮಾರು 10 ಲಕ್ಷ ಮೌಲ್ಯದ ಮೀನನ್ನ ಕಸಕ್ಕೆ ಎಸೆದಿದೆ.

    ಒಟ್ಟಿನಲ್ಲಿ ಕೇವಲ ಕರ್ನಾಟಕದ ಮೇಲೆ ಟಾರ್ಗೆಟ್ ಮಾಡಿ ಮಲತಾಯಿ ಧೋರಣೆ ತೊರಿಸುವ ಗೋವಾ ಸರ್ಕಾರದ ವಿರುದ್ಧ ಕಾರವಾರ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಡೆ ಹಿಡಿಯುತ್ತಿರುವುದು ಯಾಕೆ?
    ಫಾರ್ಮಲಿನ್ ರಾಸಾಯಲಿಕ ಪತ್ತೆಯಾಗಿದ್ದರಿಂದ ಹೊರರಾಜ್ಯಗಳಿಂದ ಮೀನು ಆಮದನ್ನು ಗೋವಾ ಸರ್ಕಾರವು ಜುಲೈ ತಿಂಗಳಿನಿಂದ ನಿರ್ಬಂಧಿಸಿತ್ತು. ಅಷ್ಟೇ ಅಲ್ಲದೇ ನವೆಂಬರ್ ಎರಡನೇ ವಾರದಲ್ಲಿ ಅಧಿಕೃತ ಆದೇಶವನ್ನು ಹೊರಡಿಸಿತ್ತು. ನಿರ್ಬಂಧದಿಂದಾಗಿ ಕರ್ನಾಟಕದ ಮೀನುಗಾರರಿಗೆ ಹಾಗೂ ವ್ಯಾಪಾರಿಗಳಿಗೆ ಬಿಸಿ ಮುಟ್ಟಿತ್ತು. ಇದರಿಂದಾಗಿ ಕರ್ನಾಟಕದ ಮೀನುಗಾರರನ್ನು ಗುರಿಯಾಗಿಸಿಕೊಂಡು ಮೀನು ಲಾರಿಗಳನ್ನು ಗೋವಾ-ಕಾರವಾರದ ಗಡಿಭಾಗದಲ್ಲಿ ತಡೆದು ನಿಲ್ಲಿಸಲಾಗಿತ್ತು. ಗೋವಾಕ್ಕೆ ಆಮದು ಆಗುತ್ತಿದ್ದ ಮೀನಿನ ಮೇಲೆ ಸಂಪೂರ್ಣ ನಿರ್ಬಂಧ ಹೊರಡಿಸಿದ್ದರಿಂದ ರಾಜ್ಯದ ಮೀನು ಬೆಳೆಗಾರರು ಭಾರೀ ನಷ್ಟ ಎದುರಿಸಿದ್ದರು. ಬಳಿಕ ಕೆಲ ನಿಯಮಗಳನ್ನು ಸಡಿಲಿಸಿ ಮೀನು ವ್ಯಾಪಾರಿಗಳಿಗೆ ಗೋವಾಗೆ ತರಲು ಅನುಮತಿ ನೀಡಿತ್ತು.

    https://www.youtube.com/watch?v=PcwI1RtvWqs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv