Tag: Goa Elections

  • ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್

    ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್

    ಪಣಜಿ: ಗೋವಾ ಮತದಾರರು ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಗೋವಾದಲ್ಲಿ ಮಾಧ್ಯಮ ಮಿತ್ರರ ಕಳೆದ ಬಾರಿ ಆದ ತಪ್ಪು ಈ ಬಾರಿ ಮರುಕಳಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಮ್ಮ ಎಲ್ಲ ಸದಸ್ಯರು ಪಕ್ಷದ ಪರ ನಿಷ್ಠೆ ತೋರಿದ್ದು, ಯಾರೊಬ್ಬರೂ ಪಕ್ಷ ತೊರೆಯುವುದಿಲ್ಲ. ಎಲ್ಲರೂ ಒಟ್ಟಾಗಿ ಹೋರಾಡಿದ್ದು, ಪರಿಸ್ಥಿತಿಯನ್ನು ಒಟ್ಟಾಗಿ ನಿಭಾಹಿಸುತ್ತೇವೆ ಎಂದರು.

    ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಸಿಎಂ ಅವರ ಹೇಳಿಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅನ್ಯ ಪಕ್ಷದ ಹಾಗೂ ಆ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಾರವಾಗಿ ನುಡಿದರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಭಾಷಣದ ವೇಳೆ ʼಮೋದಿ, ಮೋದಿʼ ಎಂದು ಕೂಗಿದ ಬಿಜೆಪಿ ಶಾಸಕರು

    ಇದೇ ವೇಳೆ ಫಲಿತಾಂಶದ ದಿನ ನೀವೇ ಕೇಂದ್ರ ಬಿಂದು ಆಗಿದ್ದು ಕಳೆದ ಬಾರಿ ಆದ ತಪ್ಪು ಮರುಕಳಿಸದಂತೆ ತಡೆಯಲು ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆಯೇ ಎಂದು ಕೇಳಿದಾಗ, ಇಲ್ಲಿ ಎಲ್ಲರೂ ಪ್ರಮುಖರೇ. ನಮ್ಮ ರಾಜ್ಯದಿಂದ ಹಲವು ನಾಯಕರು ಬಂದಿದ್ದು, ನಾವು ಸಹಾಯ ಮಾಡಲು ಬಂದಿದ್ದೇವೆ ಅಷ್ಟೇ ಎಂದು ಡಿಕೆಶಿ ಹೇಳಿದರು.

  • ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ಮೀಸಲಾತಿ, ಪ್ರತಿ ಮನೆಗೆ ಉದ್ಯೋಗ – ಗೋವಾದಲ್ಲಿ ಕೇಜ್ರಿವಾಲ್ ಘೋಷಣೆ

    ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ಮೀಸಲಾತಿ, ಪ್ರತಿ ಮನೆಗೆ ಉದ್ಯೋಗ – ಗೋವಾದಲ್ಲಿ ಕೇಜ್ರಿವಾಲ್ ಘೋಷಣೆ

    ಪಣಜಿ: ಗೋವಾದಲ್ಲಿ ಆಮ್ ಅದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಸ್ಥಳೀಯರಿಗೆ ಖಾಸಗಿ ಕ್ಷೇತ್ರದಲ್ಲಿ ಶೇ.80 ರಷ್ಟು ಉದ್ಯೋಗಗಳನ್ನು ಮೀಸಲಿಡುವುದಾಗಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

    ವಿಧಾನಸಭೆ ಚುನಾವಣೆ ಹಿನ್ನಲೆ ಪ್ರಚಾರಕ್ಕೆ ತೆರಳಿದ್ದ ಅವರು ಯುವ ಜನತೆಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ಯುವ ಮತಗಳ ಮೇಲೆ ಕಣ್ಣಿಟ್ಟಿರುವ ಅರವಿಂದ್ ಕೇಜ್ರಿವಾಲ್ ನಿರುದ್ಯೋಗ ಸಮಸ್ಯೆಯನ್ನು ಚುನಾವಣಾ ಅಸ್ತ್ರ ಮಾಡಿಕೊಂಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಾದಲ್ಲಿ ಸರ್ಕಾರಿ ಉದ್ಯೋಗ ರಾಜಕಾರಣಿಗಳ ಸಂಬಂಧಿಗಳಿಗೆ ಮೀಸಲಾಗಿದೆ. ಸಾಮಾನ್ಯ ಯುವಕರು ಇಲ್ಲಿ ಸರ್ಕಾರ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

    ಒಂದು ವೇಳೆ ಗೋವಾದಲ್ಲಿ ಆಮ್ ಅದ್ಮಿ ಅಧಿಕಾರಕ್ಕೆ ಬಂದಲ್ಲಿ ಸಾಮಾನ್ಯ ಯುವಕರಿಗೆ ಸರ್ಕಾರಿ ಹುದ್ದೆ ಹೊಂದಬಹುದು. ಖಾಸಗಿ ಕ್ಷೇತ್ರದ ಶೇ.80ರಷ್ಟು ನೌಕರಿಗಳನ್ನು ಸ್ಥಳೀಯರಿಗೆ ಮೀಸಲಿಡುವ ಕಾನೂನು ತರಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.

    ಪ್ರತಿ ಮನೆಗೆ ಒಂದು ಉದ್ಯೋಗ ನೀಡಲಾಗುವುದು, ಉದ್ಯೋಗ ಸಿಗುವವರೆಗೂ 3000 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಹೇಳಿದ ಅವರು, ಕೊರೊನಾದಿಂದ ಉದ್ಯೋಗ ಕಳೆದುಕೊಂಡ ಪ್ರವಾಸೋದ್ಯಮ ವಲಯದ ಜನರಿಗೆ, ಹಾಗೂ ಗಣಿಗಾರಿಕೆ ನಿಷೇಧದಿಂದ ನಿರುದ್ಯೋಗಿಗಳಾದ ಜನರಿಗೆ 5,000 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ನನಗೆ ಎರಡು ಬಾರಿ ರಾಜ್ಯಸಭಾ ಸೀಟ್ ಆಫರ್ ಬಂದಿತ್ತು: ಸೋನು ಸೂದ್

    ಗೋವಾ ಸಿಎಂ ಪ್ರಮೋದ್ ಸಾವಂತ್ ದೆಹಲಿ ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ಮನೆ ಬಾಗಿಲಿಗೆ ಸೇವೆ ಕಾರ್ಯಕ್ರಮ ಆರಂಭಿಸಿದ್ದಾರೆ. ನಕಲಿ ಸರ್ಕಾರಕ್ಕೆ ಏಕೆ ಮತ ಹಾಕುಬೇಕು ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.  ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್