ಕಾರವಾರ: ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ಗೋವಾದಿಂದ ಬೆಂಗಳೂರಿಗೆ ದಾಖಲೆ ಇಲ್ಲದೇ ಒಂದು ಕೋಟಿ ಹಣ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿಯ ಮಾಜಾಳಿ ಚಕ್ ಪೋಸ್ಟ್ ಬಳಿ ನಡೆದಿದೆ.
ಗೋವಾದಿಂದ(goa) ಬೆಂಗಳೂರಿನ ಹೊಸೂರಿಗೆ 1 ಕೋಟಿ ಹಣವನ್ನು ಸಾಗಾಟ ಮಾಡಲಾಗುತ್ತಿತ್ತು. ಚೆಕ್‌ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುವ ವೇಳೆ ಚೀಲದಲ್ಲಿ ಹಣ ಪತ್ತೆಯಾಗಿದೆ. ಹಣದ ಸಂಬಂಧ ದಾಖಲೆ ಕೇಳಿದಾಗ ನೀಡದ ಕಾರಣ ಬೆಂಗಳೂರು ಮೂಲದ ಕಲ್ಪೇಶ, ರಾಜಸ್ಥಾನ ಮೂಲದ ಬಮರ ರಾಮ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಕೈಕೊಳ್ಳಲಾಗಿದೆ. ಇದನ್ನೂ ಓದಿ: ಬ್ರಿಟಿಷರ ದಾಖಲೆ ಸುಟ್ಟಿದ್ದ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ
ಪ್ರಾಥಮಿಕ ಮಾಹಿತಿ ಪ್ರಕಾರ ಬೆಂಗಳೂರಿನ ಕಲ್ಪೇಶ್ ಹಾಗೂ ಬಮರ ರಾಮ್ ಗೋವಾದ ಬೇರೆಯೊಬ್ಬರ ಹಣವನ್ನು ವ್ಯವಹಾರಕ್ಕಾಗಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಆದರೆ ಈ ಹಣದ ಮೂಲ ದಾಖಲೆಗಳನ್ನು ಪೊಲೀಸರು ಕೇಳಿದಾಗ ನೀಡಿಲ್ಲ. ಚಿತ್ತಾಕುಲ ಪೊಲೀಸರು ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ: ನವಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋವಾ ತಂಡದ ವಿರುದ್ಧ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ222 ರನ್ ಗಳಿಸಿದೆ.
ಮಳೆಯಿಂದಾಗಿ ಪಂದ್ಯ ತಡವಾಗಿ ಪ್ರಾರಂಭವಾಯಿತು. ಟಾಸ್ ಗೆದ್ದ ಗೋವಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮಳೆಯಿಂದ ಒದ್ದೆಯಾದ ಪಿಚ್ನ ಲಾಭ ಪಡೆದ ಗೋವಾ ಬೌಲರ್ಗಳು ಕರ್ನಾಟಕದ ಬ್ಯಾಟರ್ಗಳನ್ನು ಕಾಡಿದರು. 65 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಆರಂಭಿಕರಾದ ನಿಖಿನ್ ಜೋಸೆ ಹಾಗೂ ನಾಯಕ ಮಾಯಂಕ್ ಅರ್ಗವಾಲ್ ಜೋಡಿ ನಿಧಾನಗತಿಯಲ್ಲಿ ಬರುತ್ತಿದ್ದ ಚೆಂಡನ್ನು ಎದುರಿಸಲು ಪರದಾಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ 3 ವಿಕೆಟ್ ಪಡೆದು ವಿಜೃಂಭಿಸಿದರು. ನಿಖಿನ್ (3), ಕೃಷ್ಣನ್ ಶ್ರೀಜಿತ್ (0), ಉತ್ತಮವಾಗಿ ಆಡುತ್ತಿದ್ದ ಅಭಿನವ್ ಮನೋಹರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ನೆಲಕಚ್ಚಿ ಆಡಿದ ನಾಯಕ ಮಾಯಾಂಕ್ ಅರ್ಗವಾಲ್ 69 ಎಸೆತಗಳಲ್ಲಿ 28 ರನ್ ಗಳಿಸಿದ್ದಾಗ ವಾಸುಕಿ ಕೌಶಿಕ್ ಅವರಿಗೆ ವಿಕೆಟ್ ಒಪ್ಪಿಸಿದರು. ಐದನೇ ಕ್ರಮಾಂಕದಲ್ಲಿ ಆಡಲು ಬಂದ ಸಮರನ್ ರವಿಚಂದ್ರನ್ 3 ರನ್ ಗಳಿಸುವಷ್ಟರಲ್ಲಿ ಸುಸ್ತಾದರು.
ಶತಕದತ್ತ ಕರುಣ್ ನಾಯರ್: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಕಂಡು ಹೊರಬಿದ್ದಿರುವ ಕರುಣ್ ನಾಯರ್ ದೇಶೀ ಟೂರ್ನಿಗಳಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. 138 ಎಸೆತಗಳಲ್ಲಿ 86 ರನ್ ಗಳಿಸಿದ್ದಾರೆ. ಶ್ರೇಯಸ್ ಗೋಪಾಲ್ 48 ರನ್ ಗಳಿಸಿದ್ದು, ಇಬ್ಬರೂ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶ್ರೇಯಸ್ ಗೋಪಾಲ್ ಹಾಗೂ ಕರುಣ್ ನಾಯರ್ 94 ರನ್ಗಳ ಜೊತೆಯಾಟದಿಂದ ತಂಡವು ದಿಢೀರ್ ಕುಸಿತದಿಂದ ಚೇತರಿಸಿಕೊಂಡು, ದಿನದಾಂತ್ಯಕ್ಕೆ 222 ರನ್ ಗಳಿಸಿತು. ಗೋವಾ ಪರವಾಗಿ ಅರ್ಜುನ್ ತೆಂಡೊಲ್ಕರ್ 17 ಓವರ್ ಎಸೆದು 3 ವಿಕೆಟ್ ಪಡೆದರೆ, ಕೌಶಿಕ್ 18 ಓವರ್ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.
ರಾತ್ರಿ ಮಳೆ ಬೀಳದೇ ಹೋದರೆ ನಾಳೆ ಕರ್ನಾಟಕ ತಂಡವು ರನ್ ಗಳಿಸಲು ಉತ್ತಮವಾದ ಅವಕಾಶ ಸಿಗುವ ಸಾಧ್ಯತೆಗಳಿವೆ. ಮೊದಲ ದಿನದಲ್ಲಿ 69 ಓವರ್ಗಳು ಮಾತ್ರ ಎಸೆಯಲು ಸಾಧ್ಯವಾಯಿತು. ಮಳೆಯಿಂದಾಗಿ ಪಂದ್ಯವು ನಿಗದಿತ ಅವಧಿಗಿಂತ ತಡವಾಗಿ ಆರಂಭವಾಯಿತು.
ಕಾರವಾರ: ದೇಶದ ಕರಾವಳಿ (Karavali) ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಗಾಳಿ, ಮಳೆಯ ಆರ್ಭಟಕ್ಕೆ ಕರ್ನಾಟಕ (Karnataka) ಕರಾವಳಿ ಹಾಗೂ ಗೋವಾ (Goa) ಕರಾವಳಿ ಭಾಗದಲ್ಲಿ ಹಲವು ಅನಾಹುತ ತಂದೊಡ್ಡಿದೆ.
ರಾಜ್ಯದಲ್ಲೇ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಜಿಲ್ಲೆಯ ಅಂಕೋಲ ತಾಲೂಕಿನ ಹಾರವಾಡದಲ್ಲಿ ಕಳೆದ 24 ಗಂಟೆಯಲ್ಲಿ 80 ಮಿ.ಮೀ, ಬೇಲಿಕೇರಿ 76 ಮಿ.ಮೀ., ಕುಮಟಾ 72.8 ಮಿ.ಮೀ ಮಳೆಯಾಗಿದೆ. ರಾಜ್ಯದಲ್ಲಿ ರಾಯಚೂರು, ದಕ್ಷಿಣ ಕನ್ನಡ, ವಿಜಯಪುರ, ಗದಗದಲ್ಲಿ ಹೆಚ್ಚಿನ ಮಳೆ ವರದಿಯಾಗಿದೆ. ಇದನ್ನೂ ಓದಿ: ಮಧ್ಯಪ್ರದೇಶ | ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅರೆಸ್ಟ್
ಉತ್ತರ ಕನ್ನಡ ಜಿಲ್ಲೆಯ ಅಂಕೋಲ, ಕುಮಟಾ, ಕಾರವಾರ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಕಾರವಾರದಲ್ಲಿ ಇಂದು ಬೆಳಗ್ಗೆ ಸುರಿದ ಮಳೆಗೆ ನಗರದ ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ನೀರು ನಿಂತು ಸವಾರರಿಗೆ ಸಮಸ್ಯೆ ತಂದೊಡ್ಡಿತು. ಇದನ್ನೂ ಓದಿ: Kolar | ಶಾಲೆಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆ
ಇನ್ನು ಕಾರವಾರದ ನೆರೆಯ ಗೋವಾ ರಾಜ್ಯದಲ್ಲೂ ಅಬ್ಬರದ ಗಾಳಿ-ಮಳೆ ಸುರಿದಿದ್ದು, ಗೋವಾದ ತಲೆಯಗಾವ್‌ನ ಡಾ.ಶಾಮಪ್ರಸಾದ್ ಮುಖರ್ಜಿ ಸ್ಟೇಡಿಯಮ್‌ನ ಮುಖ್ಯ ದ್ವಾರದ ಕಮಾನು ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಇದಲ್ಲದೇ ಪಣಜಿ ನಗರದ ಹೈಕೋರ್ಟ್ ಸಮೀಪ ಇರುವ ಗುಡ್ಡ ಕುಸಿದು ಮನೆಗಳಿಗೆ ಹಾನಿ ಸಂಭವಿಸಿದೆ. ಇದಲ್ಲದೇ ಗಾಳಿಯ ಪ್ರಮಾಣ ಹೆಚ್ಚಾಗಿ ಮಳೆ ಆರ್ಭಟವೂ ಹೆಚ್ಚಾಗಿದ್ದು, ಕೆಲವು ಸಮಯ ಕಾರವಾರ-ಗೋವಾ ಹೆದ್ದಾರಿಯಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಇನ್ನು ಕರ್ನಾಟಕ, ಗೋವಾ ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನ ಅಬ್ಬರದ ಮಳೆ ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಇದನ್ನೂ ಓದಿ: ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ಬಿಡಲು ರೆಡಿ: ಕೃಷ್ಣ ಬೈರೇಗೌಡ
ಹುಬ್ಬಳ್ಳಿ: ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈರುತ್ಯ ರೈಲ್ವೆ ಮಂಡಳಿ ಮೈಸೂರು ಮತ್ತು ಜೈಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.
ಟ್ರೈನ್ ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06231 ಮೈಸೂರು–ಜೈಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.18 ಮತ್ತು 25 ರಂದು ಮೈಸೂರಿನಿಂದ ರಾತ್ರಿ 11:55 ಗಂಟೆಗೆ ಹೊರಡಲಿದೆ. ಸೋಮವಾರ ಸಂಜೆ 6:40 ಗಂಟೆಗೆ ಜೈಪುರವನ್ನು ತಲುಪಲಿದೆ. ಮತ್ತೆ ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06232 ಜೈಪುರ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.21 ಮತ್ತು 28 ರಂದು ಜೈಪುರದಿಂದ ಮುಂಜಾನೆ 4 ಗಂಟೆಗೆ ಹೊರಟು, ಗುರುವಾರ ಮುಂಜಾನೆ 3:30ಕ್ಕೆ ಮೈಸೂರಿಗೆ ಆಗಮಿಸಲಿದೆ. ಇದನ್ನೂ ಓದಿ: ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?
ಜೈಪುರದ ಕಡೆಗೆ ಹೋಗುವ ರೈಲು ಸಂಖ್ಯೆ 06231 ತನ್ನ ಪ್ರಯಾಣದಲ್ಲಿ ಸಾಬರಮತಿ ಬಿಜಿ ನಿಲುಗಡೆಯನ್ನು ಬಿಟ್ಟುಬಿಡುತ್ತದೆ. ಮತ್ತು ಮೈಸೂರಿನ ಕಡೆಗೆ ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06232 ಅಹಮದಾಬಾದ್ ನಿಲುಗಡೆ ಇರುವುದಿಲ್ಲ.
ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ 2 ಎಸಿ ಟು-ಟೈರ್, 12 ಎಸಿ ತ್ರಿ-ಟೈರ್, 2 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.
ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲುಗಳು
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು– ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಡಬೇಡಿ – ಸರ್ಕಾರಕ್ಕೆ ಯತ್ನಾಳ್ ಪತ್ರ
ರೈಲು ಸಂಖ್ಯೆ 07317/07318 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ (ಒಂದು ಟ್ರಿಪ್):
ರೈಲು ಸಂಖ್ಯೆ 07317 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.17ರ ರಾತ್ರಿ 11:25ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2:55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07318 ವಾಸ್ಕೊ-ಡ-ಗಾಮ – ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.18 ರಂದು ಸಂಜೆ 5 ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಗ್ಗೆ 8:30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ತಲುಪಲಿದೆ.
ರೈಲು ಸಂಖ್ಯೆ 07317 ಮಾರ್ಗ ಮಧ್ಯೆ ಬೆಂಗಳೂರು ಕಂಟೋನ್ಮೆಂಟ್, ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್‌ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಅದೇ ರೀತಿ, ರೈಲು ಸಂಖ್ಯೆ 07318 ಸಹ ಬೆಂಗಳೂರು ಕಂಟೋನ್ಮೆಂಟ್‌ನತ್ತ ಹಿಮ್ಮುಖ ದಿಕ್ಕಿನಲ್ಲಿ ಇದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಒಟ್ಟು 22 ಬೋಗಿಗಳ ಸಂಯೋಜನೆಯನ್ನು ಹೊಂದಿದ್ದು, ಅದರಲ್ಲಿ 13 ಎಸಿ 3-ಟೈರ್, 7 ಸ್ಲೀಪರ್ ದರ್ಜೆ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.
ಪಣಜಿ: ಹೃದಯಸ್ತಂಭನದಿಂದ (Cardiac Arrest) ಗೋವಾ ಮಾಜಿ ಸಿಎಂ, ಕೃಷಿ ಸಚಿವ ರವಿ ನಾಯ್ಕ್ (Ravi Naik) ಮಂಗಳವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪಣಜಿಯಿಂದ 30 ಕಿ.ಮೀ ದೂರದಲ್ಲಿರುವ ನಿವಾಸದಲ್ಲಿ ರವಿ ನಾಯ್ಕ್ ಅವರು ಹೃದಯಸ್ತಂಭನಕ್ಕೊಳಗಾಗಿದ್ದರು. ಕೂಡಲೇ ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆದರೆ ತಡರಾತ್ರಿ 1 ಗಂಟೆಯ ಸುಮಾರಿಗೆ ರವಿ ನಾಯ್ಕ್ ನಿಧನರಾಗಿದ್ದಾರೆ. ಇಂದು ಸಂಜೆ 3 ಗಂಟೆಯ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇದನ್ನೂ ಓದಿ: Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್
79 ವರ್ಷದ ರವಿ ನಾಯ್ಕ್ 2 ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದರು. ಅಲ್ಲದೇ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇನ್ನು ರವಿ ನಾಯ್ಕ್ ನಿಧನಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಸಂತಾಪ ಸೂಚಿಸಿದ್ದಾರೆ. ರವಿ ನಾಯ್ಕ್ ಅವರ ನಾಯಕತ್ವ, ವಿನಯತೆ ಹಾಗೂ ಸಾರ್ವಜನಿಕ ಕಲ್ಯಾಣಕ್ಕೆ ನೀಡಿದ ಕೊಡುಗೆ ಗಮನಾರ್ಹ ಎಂದು ಪ್ರಮೋದ್ ಸಾವಂತ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್
ಇನ್ನು ರವಿ ನಾಯ್ಕ್ ನಿಧನಕ್ಕೆ ಪ್ರಧಾನಿ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಸಚಿವ ರವಿ ನಾಯ್ಕ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದೀನದಲಿತರ ಸಬಲೀಕರಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ರವಿ ನಾಯ್ಕ್, ಗೋವಾದ ಅಭಿವೃದ್ಧಿ ಪಥವನ್ನು ಹೆಚ್ಚು ಶ್ರೀಮಂತಗೊಳಿಸಿದ ಅನುಭವಿ ಆಡಳಿತಗಾರ. ಅಲ್ಲದೇ ಸಾರ್ವಜನಿಕರ ಸೇವೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು ಎಂದು ಮೋದಿ ಎಕ್ಸ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್
ಕಿರುತೆರೆ ಹಾಗೂ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ (Niveditha Gowda) ಹೊಸ ಹೊಸ ರೀಲ್ಸ್ ಮಾಡುತ್ತಾ ಯಾವಾಗಲೂ ಜಾಲತಾಣದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ತಮ್ಮ ಇನ್ಸ್ಟಾದಲ್ಲಿ ವೆರೈಟಿ ವೆರೈಟಿ ರೀಲ್ಸ್ ಹಾಕುತ್ತಾ ಮನರಂಜನೆ ನೀಡುವ ನಿವೇದಿತಾ ಗೌಡ ಬೀಚ್‍ನಲ್ಲಿ ಮುಸ್ಸಂಜೆ ವೇಳೆ ಜಾಲಿ ಜಾಲಿಯಾಗಿ ನಲಿದಾಡಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ಹಲ್‍ಚಲ್ ಎಬ್ಬಿಸಿದೆ.
ನಿವೇದಿತಾ ಗೌಡ ಬಿಗ್‍ಬಾಸ್ ಹಾಗೂ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಎಷ್ಟು ಖ್ಯಾತಿ ಪಡೆದಿದ್ದರೋ ಅದಕ್ಕಿಂತ ಒಂದು ಕೈ ಜಾಸ್ತಿ ಎನ್ನುವಂತೆ ಅವರ ರೀಲ್ಸ್‌ನಿಂದ ಖ್ಯಾತಿ ಗಳಿಸಿದ್ದಾರೆ ಎಂದರೆ ತಪ್ಪಾಗ್ಲಿಕ್ಕಿಲ್ಲ. ತಮ್ಮ ವೈಯಕ್ತಿ ಜೀವನದಲ್ಲಿ ಆದ ಎಲ್ಲಾ ತೊಡಕುಗಳನ್ನ ಬದಿಗೊತ್ತಿ ಜಾಲಿಯಾಗಿ ರೀಲ್ಸ್ ಮಾಡುತ್ತಾ ದೇಶ ವಿದೇಶ ಸುತ್ತುತ್ತಾ ಕಾಲ ಕಳೆಯುತ್ತಿದ್ದಾರೆ.
ಗೋವಾ ಕಡಲ ಕಿನಾರೆಯಲ್ಲಿ ಬಿಳಿ ಬಣ್ಣದ ತುಂಡುಡುಗೆಯಲ್ಲಿ ಹಾಟ್ ಆಗಿ ನಿವೇದಿತಾ ಗೌಡ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿನದಿಂದ ದಿನಕ್ಕೆ ಡಿಫರೆಂಟ್ ಡಿಫರೆಂಟ್ ಕಂಟೆಂಟ್ ಹಾಕುತ್ತಿರುವ ನಿವೇದಿತಾಗೌಡ ಬೀಚ್‍ನಲ್ಲಿ ಕುಣಿದು ಕುಪ್ಪಳಿಸಿರುವ ವಿಡಿಯೋ ಹಾಕಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ.
– ಡಿಸೆಂಬರ್‌ನಿಂದ ಇಲ್ಲಿಯವರೆಗೆ ಹಾಸ್ಟೆಲ್‌ನಲ್ಲಿ ಐದು ವಿದ್ಯಾರ್ಥಿಗಳ ಸಾವು
ಪಣಜಿ: ವಿದ್ಯಾರ್ಥಿಯೋರ್ವ ಹಾಸ್ಟೆಲ್ ರೂಮ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಗುರುವಾರ ದಕ್ಷಿಣ ಗೋವಾದ (Goa) ಬಿಐಟಿಎಸ್ ಪಿಲಾನಿ ಕ್ಯಾಂಪಸ್‌ನಲ್ಲಿ (BITS Pilani campus) ನಡೆದಿದೆ.
ರಿಷಿ ನಾಯರ್ (20) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗುರುವಾರ ಪೋಷಕರು ಮಾಡಿದ ಕರೆಗಳಿಗೆ ರಿಷಿ ಪ್ರತಿಕ್ರಿಯಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಹಾಸ್ಟೆಲ್ ಸಿಬ್ಬಂದಿಗೆ ಕರೆ ಮಾಡಿ ಪರಿಶೀಲಿಸುವಂತೆ ಹೇಳಿದ್ದರು. ಈ ವೇಳೆ ಹಾಸ್ಟೆಲ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ರಿಷಿ ಹಾಸಿಗೆ ಮೇಲೆ ಮಲಗಿದ್ದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಪ್ಲಾಸ್ಟಿಕ್ ಗನ್ ಹಿಡಿದ ಚಿನ್ನದಂಗಡಿ ದರೋಡೆ ಮಾಡಿದ್ದ ಗ್ಯಾಂಗ್ ಬಂಧನ
ರಿಷಿ, ಬಿಐಟಿಎಸ್ ಪಿಲಾನಿಯ ಹೈದರಾಬಾದ್ (Hyderabad) ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ ಅಲ್ಲಿ ಹೈದರಾಬಾದ್‌ನ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಎರಡೂವರೆ ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಆಕೆಯ ಸಾವಿನಿಂದ ರಿಷಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೆಲ್ಲದರಿಂದ ಹೊರಬರಲು ಆತನನನ್ನು ಹೈದರಾಬಾದ್‌ನಿಂದ ಗೋವಾದ ಬಿಐಟಿಎಸ್ ಪಿಲಾನಿ ಕಾಲೇಜಿಗೆ ಸೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ
ಡಿಸೆಂಬರ್ 2024ರಿಂದ ಇಲ್ಲಿವರೆಗೆ ಗೋವಾ ಕ್ಯಾಂಪಸ್‌ನಲ್ಲಿ ಇದು ಐದನೇ ವಿದ್ಯಾರ್ಥಿಯ ಸಾವಾಗಿದೆ. ವಿದ್ಯಾರ್ಥಿಗಳಾದ ಓಂ ಪ್ರಿಯಾನ್ ಸಿಂಗ್ (ಡಿಸೆಂಬರ್ 2024), ಅಥರ್ವ್ ದೇಸಾಯಿ (ಮಾರ್ಚ್ 2025), ಕೃಷ್ಣ ಕಸೇರಾ (ಮೇ 2025) ಮತ್ತು ಕುಶಾಗ್ರ ಜೈನ್ (ಆಗಸ್ಟ್ 2025) ಹಾಸ್ಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಈ ಸಂಬಂಧ ಗೋವಾ ಸಿಎಂ ಪ್ರಮೋದ್ ಸಾವಂತ್ ಮಾತನಾಡಿ, ತನಿಖೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇಂತಹ ಘಟನೆಗಳು ದುರದೃಷ್ಟಕರ ಮತ್ತು ಮತ್ತೆ ಸಂಭವಿಸಬಾರದು. ವರದಿಯನ್ನು ಸ್ವೀಕರಿಸಿದ ನಂತರ ರಾಜ್ಯ ಸರ್ಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿಗೆ (Chiranjeevi) ಇಂದು (ಆ.22) ಹುಟ್ಟುಹಬ್ಬದ ಸಂಭ್ರಮ. 70ನೇ ವರ್ಷಕ್ಕೆ ಕಾಲಿಟ್ಟ ನಟ ಚಿರಂಜೀವಿಗೆ ಪುತ್ರ ರಾಮ್ ಚರಣ್ (Ram Charan) ತೇಜ ಹಾಗೂ ಕುಟುಂಬಸ್ಥರು ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿಯಾಗಿರುವ ರಾಮ್‌ಚರಣ್ ತೇಜ ತಂದೆ ಚಿರಂಜೀವಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ಕೋರಿದ್ದಾರೆ.
`ಇದು ಕೇವಲ ನಿಮ್ಮ ಬರ್ತ್ಡೇ ಅಲ್ಲ, ಸೆಲಬ್ರೇಷನ್, ನನ್ನ ಹೀರೋ ನೀವು, ನನ್ನ ಪ್ರತಿ ಹೆಜ್ಜೆಯಲ್ಲೂ ಸ್ಫೂರ್ತಿ ತುಂಬಿದವರು. ನನ್ನ ಮಾರ್ಗದರ್ಶಕರು, ನನ್ನ ಯಶಸ್ಸಿನ ಹಾದಿ ಎಲ್ಲ ನಿಮ್ಮಿಂದ ಬಂದಿರುವ ಕೊಡುಗೆ’ ಎಂದು ಅಪ್ಪನನ್ನ ಬಣ್ಣಿಸಿದ್ದಾರೆ ನಟ ರಾಮ್ ಚರಣ್. ಇದನ್ನೂ ಓದಿ: ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು
ಚಿರಂಜೀವಿ ಅಭಿನಯದ ವಿಶ್ವಂಭರ ಸಿನಿಮಾದ ಗ್ಲಿಂಪ್ಸ್ ಚಿರಂಜೀವಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ. ಸದ್ಯ ರಾಮ್ ಚರಣ್ ಪೆದ್ದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ತಂದೆಯ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ನವದೆಹಲಿ: ಮಹದಾಯಿ ಯೋಜನೆಗೆ (Mahadayi Scheme) ಕೇಂದ್ರ ಅನುಮತಿ ನೀಡುವುದಿಲ್ಲ ಎಂಬುದು ಗೋವಾ ಸಿಎಂ (Goa CM) ವೈಯಕ್ತಿಕ ಹೇಳಿಕೆ. ಇದು ಕೇಂದ್ರದ ಅಧಿಕೃತ ಹೇಳಿಕೆಯಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಸ್ಪಷ್ಟನೆ ನೀಡಿದ್ದಾರೆ.
ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿಗೆ ಕೇಂದ್ರ ಅನುಮತಿ ನೀಡಲ್ಲವೆಂದು ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವುದು ಅವರ ವೈಯುಕ್ತಿಕ ಅನಿಸಿಕೆಯಾಗಿದೆ. ಕೇಂದ್ರ ಸರ್ಕಾರ ಹಾಗೆ ಹೇಳಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಹೊಳೆನರಸೀಪುರ ರೇಪ್ ಕೇಸ್ – 2ನೇ ಬಾರಿಯೂ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ
ಕೇಂದ್ರ ಸರ್ಕಾರ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ. ಮೂರೂ ರಾಜ್ಯಗಳಿಗೆ ಹೊಂದಿಕೆ ಆಗುವಂತೆಯೇ ನಿರ್ಧಾರ ತೆಗೆದುಕೊಳ್ಳಲಿದೆ. ಅದರಲ್ಲೂ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
ಕಳಸಾ ಬಂಡೂರಿ ಅನುಷ್ಠಾನಕ್ಕೆ ಸಿದ್ಧ:
ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಭಾಗದ ಜನರ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅವರು ನಿಷ್ಪಕ್ಷಪಾತ ನಡೆ ಅನುಸರಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದಿದ್ದಾರೆ.
ರಾಜಕೀಯ ಬಣ್ಣ ಬೇಡ:
ಮಹದಾಯಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥವಾಗಬೇಕಿದೆ. ವಾದ-ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ಗೋವಾ ಸಿಎಂ ಹೇಳಿಕೆ ವೈಯುಕ್ತಿಕವಾಗಿದ್ದು, ಇದಕ್ಕೆ ರಾಜಕೀಯ ಬಣ್ಣ ಹಚ್ಚಬಾರದು ಎಂದು ಮನವಿ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ನನ್ನನ್ನೂ ಭೇಟಿಯಾಗಿ `ಜಲಶಕ್ತಿ ಸಚಿವರು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿಗೆ ಬೆಂಬಲವಾಗಿದ್ದಾರೆ ಎಂದಿದ್ದಾರೆ. ಮಾಧ್ಯಮಗಳ ಮುಂದೆಯೂ ಅದನ್ನೇ ಹೇಳಿದ್ದಾರೆಂದು ತಿಳಿಸಿದ್ದಾರೆ.ಇದನ್ನೂ ಓದಿ: ಫಿನಾಲೆ ತಲುಪಿದ ಭರ್ಜರಿ ಬ್ಯಾಚುಲರ್ಸ್- ಗೆಲುವಿಗಾಗಿ ಸುನಿಲ್, ರಕ್ಷಕ್ ಬುಲೆಟ್ ಪೈಪೋಟಿ
ಬೆಂಗಳೂರು: ಮಹದಾಯಿ ವಿಚಾರದಲ್ಲಿ (Mahadayi) ಕರ್ನಾಟಕದ (Karnataka) ಹಿತಾಸಕ್ತಿ ಬಲಿ ಕೊಡಲು ಬಿಜೆಪಿ (BJP) ಅವಕಾಶ ನೀಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಮಹದಾಯಿ ಯೋಜನೆಗೆ ಗೋವಾ ಸಿಎಂ ಕ್ಯಾತೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಸಿಎಂ ರಾಜಾರೋಷವಾಗಿ ಹೇಳಿಕೆ ನೀಡಿದ್ದಾರೆ. ಸಂತೋಷ, ರಾಜ್ಯ ಬಿಜೆಪಿ ಸದಾ ರಾಜ್ಯದ ಜನರ ಜೊತೆ ಇರುತ್ತದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಜ್ಯ ಬಿಜೆಪಿ ಸಿದ್ಧವಾಗಿರುತ್ತದೆ. ಗೋವಾ ಮುಖ್ಯಮಂತ್ರಿ ಹಾಗೂ ಪ್ರಹ್ಲಾದ್ ಜೋಶಿ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಕರ್ನಾಟಕದ ಹಿತಾಸಕ್ತಿ ಬಲಿ ಕೊಡಲು ಬಿಜೆಪಿ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಸೌಮ್ಯ ರೇಪ್ & ಮರ್ಡರ್ ಕೇಸ್ | ಕಣ್ಣೂರು ಸೆಂಟ್ರಲ್ ಜೈಲ್‌ನಿಂದ ಪರಾರಿಯಾಗಿದ್ದ ಆರೋಪಿ ಅರೆಸ್ಟ್
ಇದೇ ವೇಳೆ ಪ್ರಧಾನಿ ಮೋದಿ (PM Modi) ಅವರ 4078 ದಿನ ದಾಖಲೆಗೆ ಅಭಿನಂದನೆ ಸಲ್ಲಿಸಿದರು. ಮೋದಿ ಹೊಸ ದಾಖಲೆ ಬರೆದಿದ್ದಾರೆ. ನೆಹರು ಬಳಿಕ ಹೆಚ್ಚು ದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ತಿಳಿಸಿ ಸಂಭ್ರಮಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸೇವಕನಾಗಿ ಆಡಳಿತ ನಡೆಸುತ್ತಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಹೇರಿಕೆ ಮಾಡದೇ, ಯಾವುದೇ ಅನುಕಂಪದ ಲಾಭ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಪರಿಶ್ರಮದಿಂದ ಅಭಿವೃದ್ಧಿ ಆಡಳಿತ ನಡೆಸುತ್ತಿದ್ದಾರೆ. ಮೋದಿಯವರಿಗೆ ದೇಶದ ಪರವಾಗಿ, ರಾಜ್ಯದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಬೆಂಗಳೂರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನ ಪರಿಹಾರ ಮಾಡಿ: ಛಲವಾದಿ ನಾರಾಯಣಸ್ವಾಮಿ