Tag: Go Madhusudhan

  • ಅಳುಬುರುಕ ಸಿಎಂ ನಮ್ಗೆ ಬೇಕಿಲ್ಲ, ಎಚ್‍ಡಿಕೆ ಹೇಳಿಕೆಯನ್ನು ಸ್ವಾಗತಿಸ್ತೀನಿ: ಗೋ.ಮಧುಸೂದನ್

    ಅಳುಬುರುಕ ಸಿಎಂ ನಮ್ಗೆ ಬೇಕಿಲ್ಲ, ಎಚ್‍ಡಿಕೆ ಹೇಳಿಕೆಯನ್ನು ಸ್ವಾಗತಿಸ್ತೀನಿ: ಗೋ.ಮಧುಸೂದನ್

    ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸಿಎಂ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ರಾಜ್ಯದ ಜನತೆಗೆ ಪದೇ ಪದೇ ಅಳುವ ಸಿಎಂ ಬೇಕಿಲ್ಲ ಎಂದು ಬಿಜೆಪಿ ಮುಖಂಡ ಗೋ.ಮಧುಸೂದನ್ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಜೊತೆ ಅಧಿಕಾರ ಹಂಚಿಕೊಂಡ ನಾಯಕರು ಮಾತ್ರ ಮೈತ್ರಿಯೊಂದಿಗೆ ಖುಷಿಯಾಗಿದ್ದಾರೆ. ಉಳಿ ನಾಯಕರು, ಶಾಸಕರು ಮೈತ್ರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ನಾಡಿನ ಜನತೆಯೂ ಮೈತ್ರಿಯನ್ನು ಒಪ್ಪಿಕೊಂಡಿಲ್ಲ. ಸರ್ಕಾರ ರಚನೆಯಾದಗಿನಿಂದ ರಾಜ್ಯದಲ್ಲಿ ನಾಯಕರು ಪ್ರತಿದಿನ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿದಿನ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿಕೊಂಡು ಏಳು ತಿಂಗಳು ಸರ್ಕಾರ ರಚಿಸಿ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಈ ಅಳುಬರುಕ ಸಿಎಂ ಎಷ್ಟು ದಿನ ಸಾಮ್ರಾಜ್ಯ ನಡೆಸಲು ಸಾಧ್ಯ. ನಾಡಿನ ಜನರ ಹಿತವನ್ನು ಕಾಯಬೇಕಿದ್ದ ರಾಜನೇ ಅಳಲು ಶುರು ಮಾಡಿಕೊಂಡ್ರೆ ಏನು ಮಾಡೋದಕ್ಕೆ ಅಗುತ್ತದೆ. ಸಿಎಂ ಅನ್ನುವ ಸ್ಥಾನ ಗುಲಾಬಿ ಹೂಗಳಿಂದ ಕೂಡಿದ ಹಾಸಿಗೆಯಲ್ಲ. ಅದೊಂದು ಮುಳ್ಳುಗಳಿಂದ ತಯಾರಾದ ಹಾಸಿಗೆ. ಹಾಗಾಗಿ ರಾಜನಾದಂತಹ ವ್ಯಕ್ತಿ ಪದೇ ಪದೇ ಕಣ್ಣೀರು ಹಾಕಬಾರದು. ನಮ್ಮ ಜೊತೆ ಸೇರಿ ಸಿಎಂ ಆದಾಗ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೂವಿನ ಹಾಸಿಗೆ ನೀಡಿತ್ತು. ಕೊನೆಗೇ ಅವರೇ ನಮ್ಮ ಮೇಲೆ ಮುಳ್ಳು ಹಾಕಿ ಕಾಂಗ್ರೆಸ್ ಜೊತೆ ಸೇರಿಕೊಂಡರು. ಕಾಂಗ್ರೆಸ್ ಕೇವಲ ಮುಳ್ಳಲ್ಲ, ಅದೊಂದು ವಿಷದ ಮುಳ್ಳು ಎಂದು ಆಕ್ರೋಶ ಹೊರಹಾಕಿದರು.

    https://www.youtube.com/watch?v=OKtezRt3nd4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸವರಾಜ್ ರಾಯರೆಡ್ಡಿ ಒಬ್ಬ ನಾಲಾಯಕ್, ನಾಮರ್ದ ಮಂತ್ರಿ- ಗೋ ಮಧುಸೂಧನ್

    ಬಸವರಾಜ್ ರಾಯರೆಡ್ಡಿ ಒಬ್ಬ ನಾಲಾಯಕ್, ನಾಮರ್ದ ಮಂತ್ರಿ- ಗೋ ಮಧುಸೂಧನ್

    ಮೈಸೂರು: ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಒಬ್ಬ ನಾಲಾಯಕ್, ನಾಮರ್ದ ಮಂತ್ರಿ ಎಂದು ಬಿಜೆಪಿ ಮುಖಂಡ ಗೋ. ಮಧುಸೂದನ್ ಅವಾಚ್ಯ ಶಬ್ದಗಳಿಂದ ಕಿಡಿ ಕಾರಿದ್ದಾರೆ.

    ರಾಜ್ಯ ಮುಕ್ತ ವಿವಿಗೆ ಗೆ ಮಾನ್ಯತೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೋ. ಮಧುಸೂಧನ್ ಈ ರೀತಿ ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ರಾಯರೆಡ್ಡಿಯನ್ನ ನೋಡಿದ್ರೆ ಅಯ್ಯೋ ಪಾಪಾ ಅನಿಸುತ್ತೆ. ಪ್ರೊಫೆಸರ್ ಹಾಗೂ ಕುಲಪತಿಗಳ ಮೇಲೆ ಸುಮ್ಮನೆ ಎಗರಾಡುತ್ತಾರೆ ಅಷ್ಟೇ. ನಾಲೆಗೆಯ ತೀಟೆ ತೀರಿಸಿಕೊಳ್ಳಲು ಮಾತಾಡುತ್ತಾರೆ ಅಂತ ಗೋ ಮಧುಸೂಧನ್ ಹೇಳಿದ್ರು.

    ಮುಕ್ತ ವಿವಿಗೆ ಬಂದ ಹಣ ಯಾವುದೇ ಕಾರಣಕ್ಕೂ ಸರ್ಕಾರ ಮುಟ್ಟಬಾರದು. ವಿವಿಯ ನಿವೃತ್ತ ಕುಲಪತಿ ರಂಗಪ್ಪ ನಂಬರ್ ಒನ್ 420. ಇನ್ನೊಬ್ಬ ನಿವೃತ್ತ ಕುಲಪತಿ ಕೃಷ್ಣನ್ ಕೂಡ ನಂಬರ್ ಒನ್ 420. ಇಬ್ಬರು ಸೇರಿ 840 ಎಂದು ಟೀಕಿಸಿದರು. ರಾಜ್ಯ ಮುಕ್ತ ವಿವಿ ಹಗರಣದಲ್ಲಿ ಸರ್ಕಾರ ಹಾಗೂ ಸಿಎಂ ಬುಕ್ ಆಗಿದ್ದಾರೆ ಎಂದು ಆರೋಪಿಸಿದರು.

  • ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಅಳಿಸಿಹೋಗುತ್ತೆ: ಗೋ ಮಧುಸೂದನ್

    ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಅಳಿಸಿಹೋಗುತ್ತೆ: ಗೋ ಮಧುಸೂದನ್

    – ಗೋವಾದಲ್ಲಿ ಸಂಘ ಪರಿವಾರ, ಬಿಜೆಪಿ ಜಗಳದಿಂದ ಹಿನ್ನಡೆ – ಶೋಭಾ ಕರಂದ್ಲಾಜೆ

    ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಕೂಡ ಅಳಿಸಿಹೋಗುತ್ತೆ. ಬಿಜೆಪಿ ಖಂಡಿತ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಪರಿಷತ್ ಸದಸ್ಯ ಗೋ ಮಧುಸೂದನ್ ಹೇಳಿಕೆ ನೀಡಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯ ಈ ಎಲ್ಲಾ ಸಾಧನೆಗೆ ಮೋದಿ, ಅಧ್ಯಕ್ಷರಾದ ಅಮಿತ್ ಷಾ ಅವರನ್ನ ಅಭಿನಂದಿಸಬೇಕು. ದೇಶದ ಜನ ನೋಟ್‍ಬ್ಯಾನ್ ಒಪ್ಪಿಕೊಂಡಿದ್ದಾರೆ. ಮೋದಿಯವರನ್ನ, ಅವರ ಕಾರ್ಯಕ್ರಮವನ್ನ ಒಪ್ಪಿಕೊಂಡಿದ್ದಾರೆ. 2019ರ ಚುನಾವಣೆಗೆ ಇದೊಂದು ದ್ಯೋತಕ. 2019 ರಿಂದ 2024ರವರೆಗೆ ಮತ್ತೊಂದು ಅವಧಿವರೆಗೆ ಮೋದಿ ಅವರ ಆಡಳಿತ ಭಾರತಕ್ಕೆ ಖಚಿತವಾಗಿ ದೊರಕಲಿದೆ ಎಂಬ ವಿಶ್ವಾಸವಿದೆ ಅಂದ್ರು

    ಸಂಸದೆ ಶೋಭಾ ಕರಂದ್ಲಾಜೆ ಕೂಡ ಬಿಜೆಪಿ ಮೇಲುಗೈ ಸಾಧಿಸಿರೋ ಬಗ್ಗೆ ಪ್ರತಿಕ್ರಿಯಿಸಿದ್ದು, 26 ವರ್ಷಗಳ ನಂತರ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಡಿಮಾನಿಟೈಸೇಷನ್ ನಂತರ ಚುನಾವಣೆ ನಡೆದಿರೋದು. ಇದ್ರಿಂದ ಗೊತ್ತಾಗುತ್ತೆ ಮೋದಿಯ ಜೊತೆ ಜನರಿದ್ದಾರೆ. ಪಂಜಾಬ್ ಫಲಿತಾಂಶದ ಬಗ್ಗೆ ಹೆಚ್ಚಿಗೆ ನಿರೀಕ್ಷಿಸಿರಲಿಲ್ಲ. ಗೋವಾದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಜಗಳ ದಿಂದ ಹಿನ್ನಡೆಯಾಗಿದೆ. ಡಿವೈಡ್ ಆದ್ರೆ ಈ ರೀತಿ ಆಗುತ್ತೆ ಎಂಬುದಕ್ಕೆ ಇದು ನಮಗೆ ಪಾಠ ಅಂತ ಹೇಳಿದ್ರು.