Tag: go back campaign

  • ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್

    ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್

    ಚಿಕ್ಕಮಗಳೂರು: ತನ್ನ ವಿರುದ್ಧ ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಕ್ಕ ವಿರುದ್ಧ ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ಭಾವನೆ ಇದೆ. ಈ ದರ್ಪದಿಂದಲೇ ಕೆಲವರು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ವ್ಯವಸ್ಥಿತವಾಗಿ ದುಡ್ಡಿನ ಅಹಂಕಾರದಿಂದ ಈ ರೀತಿ ಮಾಡ್ತಿದ್ದಾರೆ. ಷಡ್ಯಂತ್ರಕ್ಕೆ ಉತ್ತರ ನಾನು ಕೊಡಲ್ಲ, ನಮ್ಮ ನಾಯಕರು, ದೊಡ್ಡವರು ಕೊಡ್ತಾರೆ. ಯಾರು ಬರೆದರೂ, ಬರೆಸಿದವರು ಯಾರು, ಯಾವ ಹ್ಯಾಂಡ್ ರೈಟಿಂಗ್ ಬರೆದರು ಎಲ್ಲಾ ಗೊತ್ತಿದೆ. ನನ್ನ ಹಿರಿಯರ ಮೇಲೆ ನಂಬಿಕೆ ಇದೆ, ಅವರು ಉತ್ತರ ನೀಡುತ್ತಾರೆ. ಕೇಂದ್ರ ಕೂಡ ಎಲ್ಲಾ ವರದಿ ತರೆಸಿಕೊಂಡಿದೆ ಎಂದರು.

    ಇದೇ ವೇಳೆ ಶೋಭಾ ಮೊದ್ಲು ಟಿಕೆಟ್ (Ticket) ಉಳಿಸಿಕೊಳ್ಳಲಿ ಎಂದ ಎಂ.ಬಿ.ಪಾಟೀಲ್ ಗೆ (MB Patil) ತಿರುಗೇಟು ನೀಡಿದ ಅವರು, ಸಿಎಂ-ಡಿಸಿಎಂ ಮಧ್ಯೆ ಏನು ನಡೀತಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ. ಕಾಂಗ್ರೆಸ್ ನಲ್ಲಿ (Congress) ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಅವರ ಎಂ.ಎಲ್.ಎ. ಉಳಿಸಿಕೊಳ್ಳಲು ಆಗಲ್ಲ ಅಂತ ಬಿಜೆಪಿ ಶಾಸಕರಿಗೆ ಕೈ ಹಾಕಿದೆ. ಚುನಾವಣೆ ಬಳಿಕ ಎಲ್ಲವೂ ಹೊರಬರಲಿದೆ ಎಂದು ವಾಗ್ದಾಳಿ ನಡೆಸಿದರು.

    ಗೋ ಬ್ಯಾಕ್ ಅಭಿಯಾನ: ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ಮುಂದುವರಿದಿದ್ದು, ಶೋಭಾ ಸಾಕು ಡಿ.ಎನ್.ಜೀವರಾಜ್ ಅಭ್ಯರ್ಥಿ ಆಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದೆ ವಿರುದ್ಧ ಗೋ ಬ್ಯಾಕ್ ಅಭಿಯಾನ (Go Back Campaign) ಮುಂದುವರಿದಿದೆ. ಈ ಮೂಲಕ ಶೋಭಾ ಪರ ಬಿ.ಎಸ್. ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ರೂ ಅಭಿಯಾನ ಮಾತ್ರ ನಿಂತಿಲ್ಲ. ಇದನ್ನೂ ಓದಿ: ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಜನಾರ್ದನ ರೆಡ್ಡಿ – ಕುತೂಹಲ ಮೂಡಿಸಿದ ಗಣಿಧಣಿ ನಡೆ

    ಬಿಎಸ್‍ವೈ ಹೇಳಿದ್ದೇನು..?: ಶೋಭಾ ಮತ್ತೆ ಹೆಚ್ಚಿನ ಮತಗಳಿಂದ ಗೆಲ್ತಾರೆ. ಶೋಭಾ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಬಿ.ಎಸ್.ವೈ ಗುಡುಗಿದ್ದರು. ಶೋಭಾ ಪರ ಯಡಿಯೂರಪ್ಪ ಇದ್ದರೂ ನಾವು ಗೋ ಬ್ಯಾಕ್ ಅಭಿಯಾನ ಮಾಡುತ್ತೇವೆ ಎಂದು ಪೋಸ್ಟ್ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರ ಸೋತರೂ ಶೋಭಾ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿಲ್ಲ ಎಂದು ಗರಂ ಆಗಿದ್ದು, ಮತ್ತೆ ಚಿಕ್ಕಮಗಳೂರು, ಶೃಂಗೇರಿ ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ.

  • ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

    ಮಂಡ್ಯದಲ್ಲಿ ಅಶೋಕ್ ಗೋಬ್ಯಾಕ್ ಭುಗಿಲು- ವರಿಷ್ಠರಿಗೆ ವರದಿ ರವಾನೆ

    ಬೆಂಗಳೂರು/ಮಂಡ್ಯ: ಕಂದಾಯ ಸಚಿವ ಆರ್.ಅಶೋಕ್ (R Ashok) ಅಡ್ಜೆಸ್ಟ್‍ಮೆಂಟ್ ಪಾಲಿಟಿಕ್ಸ್ ಪಾಲಿಸಿಕೊಂಡು ಬಂದಿದ್ದರ ಪರಿಣಾಮ ಕೊನೆಗೂ ಅದರ ಬಿಸಿ ಮಂಡ್ಯದಲ್ಲಿ ತಟ್ಟೆ ಬಿಟ್ಟಿದೆ. ತಮ್ಮ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ (Adjustment Politics) ನ ಪರಿಣಾಮ ಈ ಪರಿ ಇರುತ್ತೆ ಅಂತ ಖುದ್ದು ಅಶೋಕ್ ಅವರೇ ಎಣಿಸಿರಲಿಕ್ಕಿಲ್ಲ. ಸಾಮ್ರಾಟ್ ವಿರುದ್ಧ ಸ್ವಪಕ್ಷೀಯರೇ ಗೋ ಬ್ಯಾಕ್ (Go Back Ashok), ಬಾಯ್ಕಾಟ್ ಅಶೋಕ್ ಅಭಿಯಾನ ನಡೆಸ್ತಿರುವುದು ಬಿಜೆಪಿಗೆ ದೊಡ್ಡ ತಲೆಬಿಸಿ ಆದಂತಿದೆ. ಮಂಡ್ಯ ಕಾರ್ಯಕರ್ತರ ಈ ವಿರೋಧ ಕುರಿತು ರಾಜ್ಯ ಬಿಜೆಪಿ ಘಟಕವು ಹೈಕಮಾಂಡ್ ಗಮನಕ್ಕೆ ತಂದಿದೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಜರುಗುತ್ತಿರುವ ವಿದ್ಯಮಾನಗಳ ಕುರಿತು ಹೈಕಮಾಂಡ್ ಗೆ ರಾಜ್ಯ ಘಟಕದಿಂದ ವರದಿ ರವಾನಿಸಲಾಗಿದೆ. ವರಿಷ್ಠರ ಗಮನಕ್ಕ ಸಮಸ್ಯೆ ತರುವ ಮೂಲಕ ಮುಂದಿನ ತೀರ್ಮಾನ ಈಗ ದೆಹಲಿ ನಾಯಕರ ಹೆಗಲಿಗೇರಿದಂತಾಗಿದೆ.

    ಮಂಡ್ಯದಲ್ಲಿ ಸಚಿವ ಆರ್.ಅಶೋಕ್ ಗೆ ಓಪನಿಂಗ್ ಶಾಕ್ ಸಿಕ್ಕಿರುವ ಬಗ್ಗೆ ಪಕ್ಷದ ವಲಯದಲ್ಲೂ ಭಾರೀ ಚರ್ಚೆಗೆ ಅವಕಾಶ ಕೊಟ್ಟಂತಾಗಿದೆ. ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತ ಮೊದಲ ದಿನನ ಆರಂಭವಾದ ಅಶೋಕ್ ವಿರುದ್ಧದ ಆಕ್ರೋಶ ಇನ್ನೂ ತಣಿದಿಲ್ಲ. ದಿನೇ ದಿನೇ ಗೋಬ್ಯಾಕ್, ಬಾಯ್ಕಾಟ್ ಅಶೋಕ್ ಅಭಿಯಾನ ಬೇರೆ ಬೇರೆ ವೇದಿಕೆ, ಸಂದರ್ಭಗಳಲ್ಲಿ ಪ್ರತಿಧ್ವಿನಿಸುತ್ತಿದೆ. ಇತ್ತ ರಾಜ್ಯ ಬಿಜೆಪಿ (BJP) ನಾಯಕರು ಜಾಣ ಮೌನ ಅಪ್ಪಿಕೊಂಡು ಸೈಲೆಂಟಾಗಿದ್ದಾರೆ. ಪಕ್ಷಕ್ಕೆ ಮಂಡ್ಯ ಕಾರ್ಯಕರ್ತರ ಆಕ್ರೋಶ ಗೊಂದಲ ಹುಟ್ಟಿಸಿದೆ. ಮಂಡ್ಯ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಬೇಕೋ, ಅಶೋಕ್ ಪರ ನಿಲ್ಲಬೇಕೋ ಅಂತ ಪಕ್ಷದ ಪ್ರಮುಖರಲ್ಲಿ ಗೊಂದಲ ಮನೆ ಮಾಡಿದೆ. ಹೀಗಾಗಿ ರಾಜ್ಯ ಬಿಜೆಪಿಯಿಂದ ಯಾವುದೇ ಕ್ರಮಕ್ಕೂ ಮುಂದಾಗದೇ ಹೈಕಮಾಂಡ್ ಅಂಗಳಕ್ಕೆ ಚೆಂಡು ಉರುಳಿಸಲಾಗಿದೆ. ಮಂಡ್ಯ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ಗೆ ಸಂಪೂರ್ಣ ವರದಿ ರವಾನೆ ಮಾಡಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಬರಲಿರುವ ಮುಂದಿನ ರಿಯಾಕ್ಷನ್‍ಗಾಗಿ ರಾಜ್ಯ ನಾಯಕರು ಕಾಯುತ್ತಿದ್ದಾರೆ. ಇದನ್ನೂ ಓದಿ: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು

    ಈಗ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ತಾನೇ ಕೈಕೊಂಡ ತೀರ್ಮಾನಕ್ಕೆ ತಾನೇ ಪರಿಹಾರ ಹುಡುಕಬೇಕಿರುವ ಅನಿವಾರ್ಯತೆಗೆ ಹೈಕಮಾಂಡ್ ಸಿಲುಕಿದೆ. ಮಂಡ್ಯ ಸಮಸ್ಯೆಗೆ ಹೈಕಮಾಂಡ್ ಪರಿಹಾರ ಸೂತ್ರ ಏನಿರಲಿದೆ ಅನ್ನುವ ಕುತೂಹಲ ಕೆರಳಿದೆ. ವರಿಷ್ಠರು ಕಾರ್ಯಕರ್ತರ ಮನವೊಲಿಕೆಗೆ ಸೂತ್ರ ರೂಪಿಸ್ತಾರಾ ಅಥವಾ ಅಭಿಯಾನ ನಡೆಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ತಾರಾ ಅನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k