Tag: gnanavapi Mosque

  • ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

    ಮುಂಬೈ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ.

    ನೂಪುರ್ ಶರ್ಮಾ ಜ್ಞಾನವಾಪಿ ಮಸೀದಿ ಕುರಿತ ಚರ್ಚೆಯ ವೇಳೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಗದ್ದಲ ಎಬ್ಬಿದ್ದಾರೆ. ಈ ಸಂಬಂಧ ಇದೇ ಜೂನ್ 22ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೂಪುರ್ ಶರ್ಮಾಗೆ ಇ-ಮೇಲ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ 

    ಈಗಾಗಲೇ ಅವಹೇಳನಕಾರಿ ಹೇಳಿಕೆ ಕುರಿತಂತೆ ನೂಪುರ್ ವಿರುದ್ಧ ಥಾಣೆ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಂಬರ್‌ನಾಥ್ ಪೋಲೀಸರೂ ಸಹ ದೂರನ್ನು ಸ್ವೀಕರಿಸಿದ್ದಾರೆ. ಇದೂ ಸಹ ಎಫ್‌ಐಆರ್ ಆದರೆ ಥಾಣೆ ಜಿಲ್ಲೆಯಲ್ಲೇ ಮೂರು ಪ್ರಕರಣ ದಾಖಲಾಗಲಿದೆ. ಈ ಹಿನ್ನೆಲೆಯಲ್ಲಿ ಜೂನ್ 22ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸಮನ್ಸ್ ಜಾರಿ ಮಾಡಲಾಗಿದೆ ಎಂದು ಥಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

    ಭಾರತದ ರಾಯಭಾರಿಗೂ ಸಮನ್ಸ್: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಜಕಾರ್ತದಲ್ಲಿರುವ ಭಾರತದ ರಾಯಭಾರಿಗೆ ಇಂಡೋನೇಷ್ಯಾ ಸರ್ಕಾರ ಸಮನ್ಸ್ ನೀಡಿದೆ. ಸಮನ್ಸ್ ನೀಡಿರುವ ವಿಚಾರವನ್ನು ಇಂಡೋನೇಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ತೆವುಕು ಫಜಾಸ್ಯಾಹ್ ಖಚಿತಪಡಿಸಿದ್ದಾರೆ. ಜಕಾರ್ತದಲ್ಲಿರುವ ಭಾರತದ ರಾಯಭಾರಿ ಮನೋಜ್ ಕುಮಾರ್ ಭಾರ್ತಿ ಅವರನ್ನು ನಿನ್ನೆ ಕರೆದು ಪ್ರತಿಭಟನೆ ದಾಖಲಿಸಿದ್ದು, ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಬ್ ರಾಷ್ಟ್ರಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿದ್ದವು. ಕುವೈತ್ ಸೂಪರ್ ಮಾರ್ಕೆಟ್‌ನಿಂದ ಭಾರತದ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಇಂಡೋನೇಷ್ಯಾ ಕೂಡ ಕ್ರಮ ಕೈಗೊಂಡಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯವು, ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಭಾರತದ ಇಬ್ಬರು ರಾಜಕಾರಣಿಗಳು ನೀಡಿರುವ ಆಕ್ಷೇಪಾರ್ಹ, ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇವೆ ಎಂದು ಹೇಳಿದೆ.

  • ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್

    ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಗುಜರಾತ್‍ನ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಡ್ಯಾನಿಶ್ ಖುರೇಷಿ ಅವರನ್ನು ಅಹಮದಾಬಾದ್ ಸೈಬರ್ ಕ್ರೈಂ ಬ್ರಾಂಚ್ ಬಂಧಿಸಿದೆ.

    ಶಿವಲಿಂಗದ ಬಗ್ಗೆ ಆಕ್ಷೇಪಾರ್ಹ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಖುರೇಷಿ ವಿರುದ್ಧ ವಿಶ್ವ ಹಿಂದೂ ಪರಿಷತ್ ದೂರು ದಾಖಲಿಸಿದೆ. ಕಾಶಿ ಜ್ಞಾನವಾಪಿ ಮಸೀದಿಯಲ್ಲಿ ನಡೆಸಿದ ಮೂರು ದಿನಗಳ ಸಮೀಕ್ಷೆ ವೇಳೆ ಗುಮ್ಮಟ ಆಕಾರದ ರಚನೆಯುಳ್ಳ ಶಿವಲಿಂಗ ಪತ್ತೆಯಾಗಿದೆ. ಆದರೆ ಈ ಪ್ರಕರಣವನ್ನು ಮಸೀದಿಯ ಆಡಳಿತ ಮಂಡಳಿ ತಳ್ಳಿಹಾಕಿದ್ದು, ಅದು ವಾಸ್ತವವಾಗಿ ರಚಿಸಲಾಗಿರುವ ಕಾರಂಜಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ಈ ಕುರಿತಂತೆ ಖುರೇಷಿಗೆ ಸೇರಿದ ಟ್ವಿಟ್ಟರ್‌ ಹ್ಯಾಂಡಲ್‍ನಿಂದ ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಅವಹೇಳನಕಾರಿ ಪದ ಬಳಸಿರುವುದು ಸೈಬರ್ ತಂಡದ ಗಮನಕ್ಕೆ ಬಂದಿದ್ದು, ನಂತರ ಕ್ರಮ ಕೈಗೊಳ್ಳಲಾಗಿದೆ. ನಾವು ಟ್ವಿಟ್ಟರ್‌ ಹ್ಯಾಂಡಲ್‍ನ ತಾಂತ್ರಿಕ ವಿಶ್ಲೇಷಣೆ ನಡೆಸಿ ಖುರೇಷಿಯನ್ನು ಬಂಧಿಸಿದ್ದೇವೆ ಎಂದು ಅಪರಾಧ ವಿಭಾಗ ಎಸಿಪಿ ಜೆಎಂ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ

  • ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿ ಸಲ್ಲಿಕೆ – ಶಿವಲಿಂಗ ಮಾತ್ರವಲ್ಲ, ತಾವರೆ ಹೂವು, ತ್ರಿಶೂಲ, ಢಮರುಗ ಚಿತ್ರಗಳು ಪತ್ತೆ

    ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿ ಸಲ್ಲಿಕೆ – ಶಿವಲಿಂಗ ಮಾತ್ರವಲ್ಲ, ತಾವರೆ ಹೂವು, ತ್ರಿಶೂಲ, ಢಮರುಗ ಚಿತ್ರಗಳು ಪತ್ತೆ

    ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ಆಯೋಗ ಇಂದು ತನ್ನ ವರದಿಯನ್ನು ವಾರಣಾಸಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯನ್ನು ಆಯೋಗವು ಮುಚ್ಚಿದ ಕವರ್‌ನಲ್ಲಿ ಸಲ್ಲಿಸಿದ್ದು ಸರ್ವೇ ವೇಳೆ ಮಾಡಿದ ವೀಡಿಯೊಗಳು ಮತ್ತು ಛಾಯಾಚಿತ್ರಗಳಿರುವ ಚಿಪ್ ಅನ್ನು ಸಹ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ.

    ಸಹಾಯಕ ನ್ಯಾಯಾಲಯದ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಈ ವರದಿಯನ್ನು ಸಲ್ಲಿಕೆ ಮಾಡಿದ್ದು, ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿಯು 10-15 ಪುಟಗಳಿಂದ ಕೂಡಿದ್ದು, ದಾಖಲೆಗಳ ಸಹಿತ ಕೋರ್ಟ್‍ಗೆ ಸಲ್ಲಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ವಾರಣಾಸಿ ಕೋರ್ಟ್‌ ವಿಚಾರಣೆಗೆ ಸುಪ್ರೀಂ ತಡೆ

    ವರದಿಯಲ್ಲಿ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ, ಇದಲ್ಲದೆ ಮಸೀದಿಗೆ ಗೋಡೆಗಳ ಮೇಲೆ ತಾವರೆ ಹೂವು, ತ್ರಿಶೂಲ, ಢಮರುಗ, ನಾಗಸರ್ಪ ಸೇರಿದಂತೆ ಹಲವು ಹಿಂದೂ ಸಂಸ್ಕೃತಿ ಹೊಂದಿರುವ ಚಿತ್ರಗಳಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ಹೇಳಿವೆ.

    ವಾರಣಾಸಿಯ ಕೋರ್ಟ್ ಈ ಹಿಂದೆ ಮೂರು ದಿನಗಳ ಕಾಲ ಮಸೀದಿಯಲ್ಲಿ ವೀಡಿಯೋಗ್ರಫಿ ಸಹಿತ ಸರ್ವೆ ನಡೆಸಲು ಅನುಮತಿ ನೀಡಿತ್ತು. ಅನುಮತಿ ಹಿನ್ನಲೆ ಸ್ಥಳೀಯ ಜಿಲ್ಲಾಡಳಿತ ಅರ್ಜಿದಾರರ ಸಮ್ಮುಖದಲ್ಲಿ ಸರ್ವೇ ನಡೆಸಿ ಇಂದು ತನ್ನ ವರದಿಯನ್ನು ಸಲ್ಲಿಸಿದೆ. ಈಗ ಸಲ್ಲಿಕೆಯಾಗಿರುವ ವರದಿ ಆಧರಿಸಿ ಮುಂದಿನ ಹಂತದ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಮದುವೆ ಮೆರವಣಿಗೆಯಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದಕ್ಕೆ ಕಲ್ಲು ತೂರಾಟ