Tag: gloves

  • ಮಾಸ್ಕ್, ಗ್ಲೌಸ್ ಇಲ್ಲದೆ ಕೋವಿಡ್ ಆಸ್ಪತ್ರೆ ತ್ಯಾಜ್ಯ ವಿಲೇವಾರಿ- ಪೌರಕಾರ್ಮಿಕರಿಗಿಲ್ಲ ಸುರಕ್ಷತೆ

    ಮಾಸ್ಕ್, ಗ್ಲೌಸ್ ಇಲ್ಲದೆ ಕೋವಿಡ್ ಆಸ್ಪತ್ರೆ ತ್ಯಾಜ್ಯ ವಿಲೇವಾರಿ- ಪೌರಕಾರ್ಮಿಕರಿಗಿಲ್ಲ ಸುರಕ್ಷತೆ

    ರಾಯಚೂರು: ಸುರಕ್ಷತಾ ಕ್ರಮಗಳಿಲ್ಲದೆ ರಾಯಚೂರು ನಗರಸಭೆ ಪೌರಕಾರ್ಮಿಕರು ಖಾಸಗಿ ಕೋವಿಡ್ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.

    ರಾಯಚೂರು ನಗರವೊಂದರಲ್ಲೇ 19 ಖಾಸಗಿ ಕೋವಿಡ್ ಆಸ್ಪತ್ರೆಗಳಿದ್ದು, ಆಸ್ಪತ್ರೆ ತ್ಯಾಜ್ಯವನ್ನ ನಗರಸಭೆ ಸಿಬ್ಬಂದಿಗಳೇ ವಿಲೇವಾರಿ ಮಾಡುತ್ತಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ಸೌಲಭ್ಯವನ್ನೂ ಸಮರ್ಪಕವಾಗಿ ನೀಡಿದೆ ಬೇಜವಾಬ್ದಾರಿತನ ಮೆರೆದಿದ್ದಾರೆ. ಗ್ಲೌಸ್, ಮಾಸ್ಕ್ ಧರಿಸದೆ ಕೋವಿಡ್ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಪೌರಕಾರ್ಮಿಕರಿಗೆ ಕೊರೊನಾ ಸೋಂಕಿನ ಭಯ ಕಾಡುತ್ತಿದೆ.

    ನಗರಸಭೆ ಎಲ್ಲಾ ಪೌರಕಾರ್ಮಿಕರಿಗೂ ಮಾಸ್ಕ್,ಗ್ಲೌಸ್ ಸಮರ್ಪಕವಾಗಿ ವಿತರಿಸದ ಹಿನ್ನೆಲೆ ಕಾರ್ಮಿಕರು ಸುರಕ್ಷತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಡೀ ನಗರವನ್ನ ಸ್ವಚ್ಛವಾಗಿಡುವ ಪೌರಕಾರ್ಮಿಕರಿಗೆ ಸುರಕ್ಷತೆಯಿಲ್ಲದಂತಾಗಿದೆ. ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕಾದ ನಗರಸಭೆ ಸೌಲಭ್ಯ ನೀಡದ ಹಿನ್ನೆಲೆ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ ಅಂತ ಪೌರಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  • ಕೋವಿಡ್ ರೋಗಿಯನ್ನು ಗುಣಪಡಿಸಲು ನರ್ಸ್ ಐಡಿಯಾಗೆ ಭಾರೀ ಮೆಚ್ಚುಗೆ

    ಕೋವಿಡ್ ರೋಗಿಯನ್ನು ಗುಣಪಡಿಸಲು ನರ್ಸ್ ಐಡಿಯಾಗೆ ಭಾರೀ ಮೆಚ್ಚುಗೆ

    ರಿಯೋ ಡಿ ಜನೈರೋ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜನರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮನುಷ್ಯ ಏನನ್ನು ಸ್ಪರ್ಶಿಸದೇ ಇರುವುದು ಅಸಾಧ್ಯ. ಆದರೆ ಐಸೋಲೆಷನ್‍ನಲ್ಲಿದ್ದ ಕೋವಿಡ್-19 ರೋಗಿಗೆ ಸಾಂತ್ವನಗೊಳಿಸುವ ಸಲುವಾಗಿ ಬ್ರೆಜಿಲ್ ನರ್ಸ್ ಮಾನವರ ಸ್ಪರ್ಶದ ಅನುಭವಗೊಳಿಸಲು ಒಂದು ನೂತನ ಆಲೋಚನೆ ನಡೆಸಿದ್ದಾರೆ.

    ಹೌದು, ನರ್ಸ್ ಒಬ್ಬರು ಎರಡು ಗ್ಲೌಸ್ ಒಳಗೆ ಬಿಸಿ ನೀರನ್ನು ತುಂಬಿದ್ದಾರೆ. ಬಳಿಕ ನೀರು ತುಂಬಿರುವ ಗ್ಲೌಸ್ ಅನ್ನು ರೋಗಿಯ ಕೈ ಮೇಲೆ ಇರಿಸುವ ಮೂಲಕ ಕಟ್ಟಿದ್ದು, ಮಾನವ ಸ್ಪರ್ಶದ ಭಾವನೆಯನ್ನು ತರಿಸಿದ್ದಾರೆ.

    ಈ ಫೋಟೋವನ್ನು ಸಾದಿಕ್ ಸಮೀರ್ ಭಟ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ದೇವರ ಕೈ’- ಬ್ರೆಜಿಲಿಯನ್ ಕೋವಿಡ್ ಐಸೋಲೇಷನ್ ವಾರ್ಡ್‍ನಲ್ಲಿ ಪ್ರತ್ಯೇಕವಾಗಿರುವ ರೋಗಿಗಳಿಗೆ ಸಾಂತ್ವನ ನೀಡಲು ನರ್ಸ್‍ಯೊಬ್ಬರು ಪ್ರಯತ್ನಿಸಿದ್ದಾರೆ. ಎರಡು ಬಿಸಾಡುವ ಗ್ಲೌಸ್‍ಗಳನ್ನು ತೆಗೆದುಕೊಂಡು ಅದಕ್ಕೆ ಬಿಸಿ ನೀರನ್ನು ತುಂಬಿ ರೋಗಿಯ ಕೈಗೆ ಕಟ್ಟಿದ್ದಾರೆ. ಕೊರೊನಾ ವಾರಿಯರ್ಸ್‍ಗಳಿಗೆ ನನ್ನ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಹಲವರು ರೀ ಟ್ವೀಟ್ ಮಾಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಒಬ್ಬ ರೋಗಿಯನ್ನು ಗುಣಪಡಿಸಲು ಸ್ಪರ್ಶವು ನಿಜವಾಗಿಯೂ ಅತೀ ಅಗತ್ಯವಾದವೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.