Tag: Global NCAP

  • ನಿಸ್ಸಾನ್ ಮ್ಯಾಗ್ನೈಟ್ ಕಾರ್‌ಗೆ ಸಿಕ್ತು 5-ಸ್ಟಾರ್ ಸೇಫ್ಟಿ ರೇಟಿಂಗ್

    ನಿಸ್ಸಾನ್ ಮ್ಯಾಗ್ನೈಟ್ ಕಾರ್‌ಗೆ ಸಿಕ್ತು 5-ಸ್ಟಾರ್ ಸೇಫ್ಟಿ ರೇಟಿಂಗ್

    ನಿಸ್ಸಾನ್ ಮ್ಯಾಗ್ನೈಟ್ (Nisasn Magnite) ಕಾರು ಗ್ಲೋಬಲ್ NCAP (Global NCAP) ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ (5 Star Rating) ಪಡೆದುಕೊಂಡಿದೆ. ನಿಸ್ಸಾನ್ ಕಂಪನಿಯು ಮೂರು ಬಾರಿ ಮ್ಯಾಗ್ನೈಟ್ ಕಾರನ್ನು ಕ್ರ್ಯಾಶ್ ಟೆಸ್ಟಿಂಗ್‌ಗೆ ಕಳುಹಿಸಿತ್ತು. ಫೇಸ್‌ಲಿಫ್ಟ್‌ಗೂ ಮುಂಚಿನ ಕಾರು (ಅಕ್ಟೋಬರ್‌ 2024ಕ್ಕೂ ಮುಂಚೆ ತಯಾರಾದ ಕಾರ್) ಕೇವಲ 2-ಸ್ಟಾರ್ ರೇಟಿಂಗ್ ಪಡೆದಿತ್ತು. ಫೇಸ್‌ಲಿಫ್ಟ್‌ ನಂತರದ ಕಾರು 4-ಸ್ಟಾರ್ ರೇಟಿಂಗ್ ಪಡೆಯಲು ಯಶಸ್ವಿಯಾಗಿತ್ತು. ಆದರೆ ಇಷ್ಟಕೇ ಸುಮ್ಮನಾಗದ ಕಂಪನಿಯು ಕೆಲವೊಂದು ಬದಲಾವಣೆ ಮಾಡಿ ಮತ್ತೆ ಕ್ರ್ಯಾಶ್ ಟೆಸ್ಟ್‌ಗೆ ಕಳುಹಿಸಿತ್ತು. ಈ ಬಾರಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ರೇಟಿಂಗ್ ಪಡೆದು ಮ್ಯಾಗ್ನೈಟ್ ಸುರಕ್ಷಿತ ಕಾರು ಎನಿಸಿಕೊಂಡಿದೆ.

    ಗ್ಲೋಬಲ್ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 32.31 ಅಂಕಗಳನ್ನು ಗಳಿಸುವ ಮೂಲಕ ಮ್ಯಾಗ್ನೈಟ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 33.64 ಅಂಕಗಳನ್ನು ಪಡೆದು 3-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ.

    ನಿಸ್ಸಾನ್ ಮ್ಯಾಗ್ನೈಟ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. 1.0-ಲೀಟರ್ B4D ಪೆಟ್ರೋಲ್ ಎಂಜಿನ್ 72 hp ಪವರ್‌ ಮತ್ತು 96 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೆಚ್ಚು ಶಕ್ತಿಶಾಲಿಯಾಗಿದ್ದು 99 hp ಪವರ್‌ ಮತ್ತು 160 Nm ಟಾರ್ಕ್ ಉತ್ಪಾದಿಸುತ್ತದೆ. B4D ಎಂಜಿನ್ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್ ಬಾಕ್ಸ್‌ನೊಂದಿಗೆ ಲಭ್ಯವಿದೆ, ಟರ್ಬೋಚಾರ್ಜ್ಡ್ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.

    ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ಲೋಬಲ್ NCAP ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಮ್ಯಾಗ್ನೈಟ್ ಕಾರಿನಲ್ಲಿ 6-ಏರ್‌ಬ್ಯಾಗ್‌ಗಳು, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಎಲ್ಲಾ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್‌, ISOFIX ಆಂಕರೇಜ್‌ಗಳು , 360 ಡಿಗ್ರೀ ಕ್ಯಾಮೆರಾ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ.

    ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 6,14,000 ದಿಂದ 11,76,000 ರೂಪಾಯಿವರೆಗೆ (ಎಕ್ಸ್ ಶೋರೂಮ್) ಇದೆ.

  • ಹೊಸ ಮಾರುತಿ ಡಿಸೈರ್‌ಗೆ ಸಿಕ್ಕಿತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಹೊಸ ಮಾರುತಿ ಡಿಸೈರ್‌ಗೆ ಸಿಕ್ಕಿತು 5 ಸ್ಟಾರ್ ಸೇಫ್ಟಿ ರೇಟಿಂಗ್

    ಮಾರುತಿ ಕಂಪನಿಯ ಕಾರುಗಳು ತಗೋಬೇಡಿ, ಸೇಫ್ ಅಲ್ಲ.. ಮಾರುತಿಯ ಕಾರುಗಳು ಟಿನ್ ಡಬ್ಬಿಗಳು ಎಂದೆಲ್ಲಾ ಕರೆಯುತ್ತಿದ್ದವರಿಗೆ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದೆ ಹೊಸ ಮಾರುತಿ ಸುಜುಕಿ ಡಿಸೈರ್ (Maruthi Suzuki Dzire) ಕಾರು. ಇದು 5 ಸ್ಟಾರ್ ಸೇಫ್ಟಿ ರೇಟಿಂಗ್ ಸಿಕ್ಕ ಮಾರುತಿ ಕಂಪನಿಯ ಮೊದಲ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ.

    ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ. ಟಾಟಾ ಕಂಪನಿಯ ಆಲ್ಟ್ರೋಜ್ ಮತ್ತು ಟಿಯಾಗೋ ಕಾರುಗಳಿಗಿಂತ ಹೊಸ ಡಿಸೈರ್ ಸುರಕ್ಷಿತವಾಗಿದೆ.

    ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಗ್ಲೋಬಲ್ NCAP ಈ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಡಿಸೈರ್ ಕಾರು 6-ಏರ್‌ಬ್ಯಾಗ್‌ಗಳು, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಹಾಗೂ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ. ಈಗ ಮಾರಾಟದಲ್ಲಿರುವ ಡಿಸೈರ್ ಕೇವಲ 2-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಮಾತ್ರ ಪಡೆದಿತ್ತು. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಹೊಸ ಸ್ವಿಫ್ಟ್ ಕಾರಿನಂತೆಯೇ ಹೊಸ ಡಿಸೈರ್ ಕಾರು ಕೂಡ Z12E 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 81.58 PS ಪವರ್ ಮತ್ತು 111.7 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಡಿಸೈರ್ ದೊರೆಯಲಿದೆ. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ಎಲೆಕ್ಟ್ರಿಕ್ ಸನ್ ರೂಫ್, 360 ಡಿಗ್ರಿ ಕ್ಯಾಮೆರಾ, 9 ಇಂಚ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌, ಆಟೋ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಯುಎಸ್‌ಬಿ ಟೈಪ್-A & ಟೈಪ್-C ಪೋರ್ಟ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಡಿಸೈರ್ ಹೊಂದಿರುವ ನಿರೀಕ್ಷೆ ಇದೆ.

    ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ಡಿಸೈರ್ ಕಾರನ್ನು ಸಮೀಪದ ಶೋರೂಂ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ.11,000 ಮುಂಗಡವಾಗಿ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು.

    ಮಾರುತಿ ಸುಜುಕಿ ಕಂಪನಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇದರಿಂದ ಗ್ರಾಹಕರಿಗೆ ಕಂಪನಿ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಮುಂಬರುವ ಎಲ್ಲಾ ಕಾರುಗಳು ಸಹ ಇದೇ ಕಾರಿನ ರೀತಿ 5 ಸ್ಟಾರ್ ಸೇಫ್ಟಿ ರೇಟಿಂಗ್‌ನೊಂದಿಗೆ ಬರಲಿ. ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ