Tag: Global Market

  • UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    UK ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು 99 ರೂ.ಗೆ ಖರೀದಿದ HSBC

    ಲಂಡನ್: ಸ್ಟಾರ್ಟ್ಅಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದಲ್ಲಿ (USA) ದಿವಾಳಿಯಾಗಿರುವ ಬೆನ್ನಲ್ಲೇ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬ್ರಿಟನ್ ಘಟಕವನ್ನು ಹೆಚ್‌ಎಸ್‌ಬಿಸಿ (HSBC) ಕೇವಲ 1 ಪೌಂಡ್‌ಗೆ (99.86 ರೂಪಾಯಿ) ಖರೀದಿಸಿದೆ.

    ಮಾರ್ಚ್ 10ರ ಹೊತ್ತಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಯುಕೆ ಘಟಕವು ಸುಮಾರು 5.5 ಬಿಲಿಯನ್ ಪೌಂಡ್ ಸಾಲಗಳನ್ನು ಮತ್ತು ಸುಮಾರು 6.7 ಬಿಲಿಯನ್ ಪೌಂಡ್ ಠೇವಣಿ ಹೊಂದಿದೆ. ಜೊತೆಗೆ ಒಟ್ಟು 8.8 ಶತಕೋಟಿ ಪೌಂಡ್‌ಗಳಷ್ಟು ಬ್ಯಾಲೆನ್ಸ್ ಶೀಟ್ ಗಾತ್ರವನ್ನು ಹೊಂದಿದೆ. ಇದೀಗ ಹೂಡಿಕೆದಾರರಲ್ಲಿ ಮತ್ತಷ್ಟು ಉತ್ಸಾಹ ತುಂಬಲು ಹೆಚ್‌ಎಸ್‌ಬಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿಲಿಕಾನ್ ವ್ಯಾಲಿ ಬಳಿಕ ಅಮೆರಿಕದ ಮತ್ತೊಂದು ಬ್ಯಾಂಕ್ ದಿವಾಳಿ

    Silicon Valley Bank

    ಬ್ಯಾಂಕ್‌ನ ಬ್ರಿಟನ್ (UK) ವ್ಯವಹಾರಕ್ಕೆ ಇದು ಅತ್ಯುತ್ತಮ ಕಾರ್ಯತಂತ್ರದ ಅರ್ಥ ನೀಡುವ ಜೊತೆಗೆ ವಾಣಿಜ್ಯ ಬ್ಯಾಂಕಿಂಗ್ ಅನ್ನು ಬಲಪಡಿಸುತ್ತದೆ. ಅಷ್ಟೇ ಅಲ್ಲದೆ ಬ್ರಿಟನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ ಹಾಗೂ ಜೀವ-ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಂತೆ ನವೀನ ಮತ್ತು ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಬ್ರಿಟನ್‌ನ ಬ್ಲೂ-ಚಿಪ್ FTSC 100 ಷೇರುಗಳ ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇ.1ರಷ್ಟು ಕಡಿಮೆಯಾಗಿದೆ. ಸಿಲಿಕಾನ್ ವ್ಯಾಲಿಬ್ಯಾಂಕ್ ಮೌಲ್ಯ ಕುಸಿತದಿಂದ ಎಚ್‌ಎಸ್‌ಬಿಸಿ ಷೇರುಗಳು ಶೇ.1.7ರಷ್ಟು ಕುಸಿದಿವೆ ಎಂದು ಎನ್ನಲಾಗಿದೆ. ಇದನ್ನೂ ಓದಿ: 

    ಆರ್ಥಿಕ ಹಿಂಜರಿತದ ಭೀತಿಯ ನಡುವೆ ಅಮೆದಿಕದ ದೊಡ್ಡ-ದೊಡ್ಡ ಬ್ಯಾಂಕ್‌ಗಳು ದಿವಾಳಿ ಹಂತ ತಲುಪಿತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಒಂದು ದಿನದ ಅಂತರದಲ್ಲಿ ಎರಡು ಬ್ಯಾಂಕ್‌ಗಳು ಬಾಗಿಲುಮುಚ್ಚಿವೆ. ಠೇವಣಿದಾರರು ದೊಡ್ಡ ಮಟ್ಟದಲ್ಲಿ ಹೂಡಿಕೆ ಹಿಂಪಡೆದ ಕಾರಣ ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ ಎದ್ದಿದೆ. ಎಸ್‌ವಿಬಿ ವೈಫಲ್ಯದ ಕಾರಣ ಇದರಲ್ಲಿ ಡೆಪಾಸಿಟ್ ಮಾಡಿದ 10,000 ಚಿಕ್ಕ ಚಿಕ್ಕ ವಾಣಿಜ್ಯ ಸಂಸ್ಥೆಗಳು ತಮ್ಮ 2 ಲಕ್ಷ ಉದ್ಯೋಗಿಗಳಿಗೆ ವೇತನ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.

    Signature Bank

    ಹಣದುಬ್ಬರ ನಿಯಂತ್ರಿಸಲು ಅಮೆರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ವಿಪರೀತವಾಗಿ ಹೆಚ್ಚಿಸಿರುವುದೇ ಎಸ್‌ವಿಬಿ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಇದು ಬೇರೆ ದೇಶಗಳಲ್ಲಿನ ಎಸ್‌ವಿಬಿ ಬ್ಯಾಂಕ್‌ಗಳ ಮೇಲೆಯೂ ಪರಿಣಾಮ ಬೀರಿದೆ…

  • ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    ಮಾಸ್ಕೋ/ನವದೆಹಲಿ: G-7 ರಾಷ್ಟ್ರಗಳು (G7 Countries) ಪ್ರಸ್ತಾಪಿರುವ ಬೆಲೆಯ (Price) ಮಿತಿ ನ್ಯಾಯುತವಾಗಿಲ್ಲದೇ ಇದ್ದರೇ ಜಾಗತಿಕ ಮಾರುಕಟ್ಟೆಗೆ (Global Market) ತೈಲ ಪೂರೈಕೆಯನ್ನು ನಿಲ್ಲಿಸಲಾಗುವುದೆಂದು ರಷ್ಯಾ (Russia) ಹೇಳಿದೆ.

    ಈ ಕುರಿತು ಭಾರತದಲ್ಲಿರುವ ರಷ್ಯಾದ ರಾಯಭಾರಿ (Russia’s Ambassador) ಡೆನಿಸ್ ಅಲಿಪೋವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಅಲ್ಲದೇ ಈಚೆಗೆ ಸಮರ್‌ಕಂಡ್‌ನಲ್ಲಿ ನಡೆದ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) `ಇದು ಯುದ್ಧದ ಯುಗವಲ್ಲ’ ಎಂದು ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರಿಗೆ ಸಲಹೆ ನೀಡಿದ್ದನ್ನೂ ಪರಿಗಣಿಸಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕ ಪ್ರವಾಸಿಗರನ್ನು ಸ್ವಾಗತಿಸಿದ ಭೂತಾನ್- ಭಾರತೀಯರಿಗೆ ದಿನಕ್ಕೆ 1,200 ರೂ. ಶುಲ್ಕ

    G-7 ರಾಷ್ಟ್ರಗಳು ನಿಗದಿಪಡಿಸಿರುವ ಬೆಲೆ ನ್ಯಾಯಯುತ ಅಥವಾ ಸ್ವೀಕಾರಾರ್ಹವಲ್ಲದೇ ಇದ್ದರೇ ಜಾಗತಿಕ ಮಾರುಕಟ್ಟೆಗೆ (Global Market) ಮತ್ತು ಯುಎಸ್ (US) ಉಪಕ್ರಮಕ್ಕೆ ಸೇರುವ ದೇಶಗಳಿಗೆ ತೈಲ ಪೂರೈಕೆ ನಿಲ್ಲಿಸುತ್ತೇವೆ ಎಂದು ಅಲಿಪೋವ್ ತಿಳಿಸಿದ್ದಾರೆ. ಇದನ್ನೂ ಓದಿ: ಕಿಸೆಯಲ್ಲಿ ಸಿಕ್ತು ಕಾಂಡೋಮ್‌ನ ರಶೀದಿ- ಮಹಿಳಾ ಪೇದೆಯಿಂದ ಗೆಳೆಯನಿಗೇ ಶೂಟೌಟ್

    RUSSIA OIL

    ರಷ್ಯಾ ತನ್ನ ವ್ಯಾಪಾರ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಯಾವುದೇ ಕಾರ್ಯವಿಧಾನವನ್ನು ಅನುಸರಿಸುವುದಿಲ್ಲ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳು ರಷ್ಯಾದ ಮೇಲೆ ಪ್ರಭಾವ ಬೀರಲಿವೆ. ಜಿ-7 ರಾಷ್ಟ್ರಗಳು ಮತ್ತು ಯುರೋಪಿಯನ್ ಒಕ್ಕೂಟವು ರಷ್ಯಾದ ಆದಾಯವನ್ನು ಮಿತಿಗೊಳಿಸುವ ಉದ್ದೇಶದಿಂದಲೇ ರಷ್ಯಾದ ಕಚ್ಚಾ ಹಾಗೂ ಸಂಸ್ಕರಿಸಿದ ಉತ್ಪನ್ನಗಳ ಮೇಲೆ ತೈಲ ಬೆಲೆ ಮಿತಿಯನ್ನು ವಿಧಿಸಿವೆ. ಇದು ನಿರ್ದಿಷ್ಟವಾಗಿ ರಷ್ಯಾದ ಆದಾಯ ಕಡಿಮೆ ಮಾಡಲು ಹಾಗೂ ಉಕ್ರೇನ್ (Ukraine war) ವಿರುದ್ಧ ನಡೆಸುತ್ತಿರುವ ಯುದ್ಧಕ್ಕೆ ನಿಧಿಯ ಸಾಮರ್ಥ್ಯವನ್ನು ತಗ್ಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

    ಈ ಬೆಲೆಯ ಮಿತಿಯು ಜಾಗತಿಕ ಮಾರುಕಟ್ಟೆಗಳಲ್ಲಿ ತೈಲದ ತೀವ್ರ ಕೊರತೆಗೆ ಕಾರಣವಾಗುತ್ತದೆ. ಜೊತೆಗೆ ಮಾರುಕಟ್ಟೆಗಳಲ್ಲಿ ತೈಲ ಬೆಲೆ ಏರಿಕೆಗೂ ಕಾರಣವಾಗುತ್ತದೆ ಎಂದು ಅಲಿಪೋವ್ ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಹಿ ಸುದ್ದಿ – ಚಿನ್ನದ ದರದಲ್ಲಿ ಭಾರೀ ಇಳಿಕೆ

    ಸಿಹಿ ಸುದ್ದಿ – ಚಿನ್ನದ ದರದಲ್ಲಿ ಭಾರೀ ಇಳಿಕೆ

    ನವದೆಹಲಿ: ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ದಿಢೀರ್ ಭಾರೀ ಇಳಿಕೆಯಾಗಿದೆ. ಭಾರೀ ಕುಸಿತ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 2,300 ರೂ. ಇಳಿಕೆಯಾಗಿದೆ.

    ಇತ್ತೀಚೆಗೆ ಸೆಪ್ಟೆಂಬರಿನಲ್ಲಿ ಪ್ರತಿ 10 ಗ್ರಾಂ.ಗೆ 40 ಸಾವಿರ ರೂ. ತಲುಪಿದ್ದ ಚಿನ್ನದ ಬೆಲೆ ಇದೀಗ ಕಡಿಮೆಯಾಗಿದೆ. ಸಿಎಕ್ಸ್(ಮಲ್ಟಿ ಕಮಾಡಿಟಿ ಎಕ್ಸ್‍ಚೇಂಜ್)ನಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ 10 ಗ್ರಾಂ. ಚಿನ್ನಕ್ಕೆ ಶೇ.0.04ರಷ್ಟು ಕಡಿಮೆಯಾಗಿದ್ದು, ಚಿನ್ನದ ಬೆಲೆ 37,671 ರೂ.ಗೆ ತಲುಪಿದೆ. ಇದನ್ನೂ ಓದಿ: ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

    ಚೀನಾ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಮರ ಕಡಿಮೆಯಾಗಲಿದೆ ಎನ್ನುವ ಸುಳಿವು ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಸಂತೋಷಗೊಂಡಿದ್ದು ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಜೊತೆ ಭಾರತದ ಷೇರು ಮಾರುಕಟ್ಟೆ ಉತ್ತಮ ಫಲಿತಾಂಶ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತಿರುವುದರಿಂದ ಬೆಲೆ ಕಡಿಮೆಯಾಗುತ್ತಿದೆ.

    ಮದುವೆ ಸೀಸನ್ ಹತ್ತಿರದಲ್ಲಿರುವಾಗಲೇ ಚಿನ್ನದ ಬೆಲೆ ಕಡಿಮೆಯಾಗಿರುವುದು ಜಾಗತಿಕ ಮಾರುಕಟ್ಟೆ ಹಾಗೂ ಚಿಲ್ಲರೆ ಖರೀದಿದಾರರಲ್ಲಿ ಸಂತಸ ತಂದಿದೆ.

    ಇನ್ನೊಂದೆಡೆ ಎಂಸಿಎಕ್ಸ್‍ಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ ಶೇ.0.30ರಷ್ಟು ಹೆಚ್ಚಳವಾಗಿದ್ದು, ಪ್ರತಿ ಕೆ.ಜಿ. ದರ 44,000 ರೂ. ತಲುಪಿದೆ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿದ್ದ ದರಕ್ಕೆ ಹೋಲಿಸದರೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ದೇಶೀಯ ಚಿನ್ನದ ಬೆಲೆಯಲ್ಲಿ ಕುಸಿತದ ರೀತಿಯಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರೈಸಸ್ 1,455.55 ಡಾಲರ್ ಕುಸಿತವನ್ನು ಕಂಡಿದೆ.

    ಯುಎಸ್-ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರು. ಪರಿಣಾಮ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು. ಪ್ರತಿ ಆನ್ಸ್(1 ಆನ್ಸ್-28.34 ಗ್ರಾಂ.)ಗೆ 1,550 ಡಾಲರ್ ಏರಿಕೆಯಾಗಿತ್ತು.