Tag: global leaders

  • ಜಾಗತಿಕ ನಾಯಕರ ಪಟ್ಟಿ ರಿಲೀಸ್‌ – ಮೋದಿಯೇ ನಂಬರ್‌ 1

    ಜಾಗತಿಕ ನಾಯಕರ ಪಟ್ಟಿ ರಿಲೀಸ್‌ – ಮೋದಿಯೇ ನಂಬರ್‌ 1

    ನವದೆಹಲಿ: ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶ್ವ ನಾಯಕರ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

    ಯುಎಸ್ ಮೂಲದ ಕನ್ಸಲ್ಟೆನ್ಸಿ ಸಂಸ್ಥೆಯ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್’ ಪ್ರಕಾರ ಭಾರತದಲ್ಲಿ ಶೇ.76 ರಷ್ಟು ಜನರು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2ನೇ ಸ್ಥಾನವನ್ನು ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್‌ ಮ್ಯಾನುಯಲ್‌ ಲೋಪೆಜ್ ಒಬ್ರಡಾರ್ ಪಡೆದಿದ್ದಾರೆ. ಅವರ ನಾಯಕತ್ವಕ್ಕೆ ಶೇ.66 ಬೆಂಬಲ ವ್ಯಕ್ತವಾಗಿದೆ. ಇದನ್ನೂ ಓದಿ: ‘ಸೋ ಬ್ಯೂಟಿಫುಲ್‌’..: ಸಂಸತ್‌ ಭವನ ಕಣ್ತುಂಬಿಕೊಂಡು ಖುಷಿಪಟ್ಟ ಇನ್ಫೋಸಿಸ್‌ ಸುಧಾಮೂರ್ತಿ

    58% ನೊಂದಿಗೆ ಸ್ವಿಟ್ಜರ್ಲೆಂಡ್ ಅಧ್ಯಕ್ಷ ಅಲೈನ್ ಬರ್ಸೆಟ್ ಮೂರನೇ ಸ್ಥಾನ ಪಡೆದಿದ್ದಾರೆ. ಹಿಂದಿನ ಸಮೀಕ್ಷೆಗಳಲ್ಲೂ ಪ್ರಧಾನಿ ಮೋದಿ ಜಾಗತಿಕ ರೇಟಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ 37% ಅನುಮೋದನೆ ಹೊಂದಿದ್ದಾರೆ.

    ಕೆನಡಾದ ಪಿಎಂ ಜಸ್ಟಿನ್ ಟ್ರುಡೊಗೆ 31%, ಭಾರತದ ಅಳಿಯನೂ ಆಗಿರುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ರೇಟಿಂಗ್ 25% ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ 24 % ರೇಟಿಂಗ್‌ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪಿಎಂ ಮೋದಿ ಸಂತಾಪ

    ಪ್ರಧಾನಿ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು (BJP) ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ವಿಜಯ ದಾಖಲಿಸಿದರು. ನಂತರ ಈ ರೇಟಿಂಗ್‌ಗಳು ಬಂದಿವೆ. ಪ್ರಧಾನಿ ಮೋದಿ ಇತ್ತೀಚೆಗೆ ಯುಎಇಯಲ್ಲಿ ನಡೆದ COP-28 ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

  • ಕೋವಿಡ್ ನಿರ್ವಹಣೆಯಲ್ಲಿ ಭಾರತ ಜಗತ್ತಿಗೆ ಮಾದರಿ- ಜಾಗತಿಕ ನಾಯಕರು

    ಕೋವಿಡ್ ನಿರ್ವಹಣೆಯಲ್ಲಿ ಭಾರತ ಜಗತ್ತಿಗೆ ಮಾದರಿ- ಜಾಗತಿಕ ನಾಯಕರು

    ನವದೆಹಲಿ: ಸರಿಸುಮಾರು ಮೂರು ವರ್ಷಗಳಿಂದ ಭಾರತ ಅನುಸರಿಸಿದ ಕೋವಿಡ್ ನಿರ್ವಹಣೆ ಮಾದರಿಯಿಂದ ಇಡೀ ಜಗತ್ತು ಪಾಠ ಕಲಿಯಬೇಕು ಎಂದು ಜಾಗತಿಕ ನಾಯಕರು ಅಕ್ಷಾ ಕಾರ್ಯಕ್ರಮದಲ್ಲಿ ಮೆಚ್ಚುಗೆಯ ಮಾತನಾಡಿದ್ದಾರೆ.

    ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಫೌಂಡೇಶನ್ ಆಯೋಜಿಸಿದ ಆಕ್ಷಾ ಭಾರತದಿಂದ ಪಾಠಗಳು ಕಾರ್ಯಕ್ರಮದಲ್ಲಿ ಜಾಗತಿಕ ನಾಯಕರು ಭಾಗವಹಿಸಿದ್ದರು. ಕೊರೊನಾ ಸೋಂಕಿನ ನಿಯಂತ್ರಣದ ವೇಳೆ ಭಾರತ ಕೈಗೊಂಡಿರುವ ನಿರ್ಧಾರ ಕುರಿತಾಗಿ ಚರ್ಚೆ ಮಾಡಲಾಗಿದೆ.

    ಈ ವೇಳೆ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ದೇಶೀಯ ನಿರ್ದೇಶಕ ಟೇಕೂ ಕೊನಿಶಿ ಭಾರತದ ಕೋವಿಡ್ ನಿರ್ವಹಣಾ ಮಾದರಿಯಿಂದ ಉತ್ತಮವಾಗಿದ್ದು, ಅನುಕರಣೆಗೆ ಯೋಗ್ಯವಾಗಿದೆ. ಇದರಿಂದ ಇಡೀ ಜಗತ್ತು ಪಾಠ ಕಲಿಯಬೇಕು ಎಂದು ಹೇಳಿದ್ದಾರೆ.

    ಭಾರತದಲ್ಲಿನ ಯುನಿಸೆಫ್‌ ಪ್ರತಿನಿಧಿ ಯಾಸು ಮಾಸಾ ಕಿಮುರಾ, ಭಾರತ ದೇಶದಲ್ಲಿ ಕೊರೊನಾ ಸಮರ್ಥವಾಗಿ ನಿಭಾಯಿಸಿದೆ. ವಿವಿಧ ದೇಶಗಳಿಗೂ ಲಸಿಕೆ ಒದಗಿಸಿ ಸಹಾಯ ಮಾಡಿದೆ ಎಂದು ಹಾಡಿ ಹೊಗಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದ ಪ್ರತಿನಿಧಿ ಡಾ. ರೊಡೆರಿಕೊ ಆಫ್ರಿನ್ ಕೋವಿಡ್ ವಿರುದ್ಧದ ಹೋರಾಟಕ್ಕೆ ಭಾರತ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

    ಭಾರತವು ಸುರಕ್ಷಿತ ಲಸಿಕೆಗಳ ತಯಾರಿಕೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಷೇ ವೇಗದಲ್ಲಿ ಲಸಿಕೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಿದೆ. ಕ್ರಿಸ್ ಎಲಿಯಾಸ್ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಭಾರತದ ಕೋವಿಡ್ ನಿರ್ವಹಣೆ ಯಶಸ್ಸು ಸಮರ್ಪಣೆ, ಪಾಲುಗಾರಿಕೆ ಹಾಗ ತಂತ್ರಜ್ಞಾನದ ಹಂಚಿಕೆಯ ಫಲವಾಗಿದೆ ಎಂದು ಹೇಳಿದ್ದಾರೆ.