Tag: Global Investors Summit

  • ಜಾಗತಿಕ ಹೂಡಿಕೆದಾರರ ಸಮಾವೇಶ – ಸಿದ್ಧತೆ ಪರಿಶೀಲಿಸಿದ ಎಂ.ಬಿ ಪಾಟೀಲ್

    ಜಾಗತಿಕ ಹೂಡಿಕೆದಾರರ ಸಮಾವೇಶ – ಸಿದ್ಧತೆ ಪರಿಶೀಲಿಸಿದ ಎಂ.ಬಿ ಪಾಟೀಲ್

    ಬೆಂಗಳೂರು: ಫೆ.11ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (Global Investor’s Summit) ಆಗಿರುವ ಸಿದ್ಧತೆಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಶನಿವಾರ ಕೂಲಂಕಷವಾಗಿ ವೀಕ್ಷಿಸಿದರು.

    ಅರಮನೆ ಮೈದಾನಕ್ಕೆ (Palace Ground) ಭೇಟಿ ನೀಡಿದ ಅವರು, ಸಮಾವೇಶದಲ್ಲಿ ಪ್ರತಿಯೊಂದು ಸೌಕರ್ಯವೂ ಪರಿಪೂರ್ಣವಾಗಿರಬೇಕು. ಆದರಾತಿಥ್ಯಗಳಲ್ಲಿ ಸಣ್ಣ ಲೋಪವೂ ಆಗಬಾರದು. ಇದರಿಂದ ರಾಜ್ಯದ ವರ್ಚಸ್ಸು ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ನಾನಾ ಇಲಾಖೆಗಳ ನಡುವೆ ಒಳ್ಳೆಯ ಸಮನ್ವಯತೆ ಇರಬೇಕು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮ

    ಪ್ರಮುಖ ಕಾರ್ಯಕ್ರಮ ನಡೆಯುವ ಪ್ರಧಾನ ವೇದಿಕೆ ಹಾಗೂ ವಿವಿಧ ವಸ್ತು ಪ್ರದರ್ಶನ ಪ್ರದೇಶಕ್ಕೂ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು. ಇದನ್ನೂ ಓದಿ: ಕೇಜ್ರಿವಾಲ್ ನಶೆ ಇಳಿಸಿದ ದೆಹಲಿ ಜನ, ಎಣ್ಣೆ ಏಟಿಗೆ ಎಎಪಿಗೆ ಸೋಲಿನ `ಕಿಕ್’

    ಜೊತೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪ ನಿರ್ದೇಶಕ ದೊಡ್ಡ ಬಸವರಾಜ, ಐಕೆಎಫ್ ಸಿಒಒ ಜಗದೀಶ್ ಸೇರಿದಂತೆ ಇತರ ಉನ್ನತ ಅಧಿಕಾರಿಗಳು ಇದ್ದರು. ಇದನ್ನೂ ಓದಿ: ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿ ಮೇಲಿನ ನಂಬಿಕೆ ವೃದ್ಧಿಸಿದೆ: ಸುಧಾಕರ್ ರೆಡ್ಡಿ

  • ಜಾಗತಿಕ ಹೂಡಿಕೆದಾರರ ಸಮಾವೇಶ – ಸಚಿವೆ ನಿರ್ಮಲಾ, ಪಿಯೂಷ್‌ಗೆ ಆಹ್ವಾನ

    ಜಾಗತಿಕ ಹೂಡಿಕೆದಾರರ ಸಮಾವೇಶ – ಸಚಿವೆ ನಿರ್ಮಲಾ, ಪಿಯೂಷ್‌ಗೆ ಆಹ್ವಾನ

    ಬೆಂಗಳೂರು: ಇದೇ ತಿಂಗಳ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (Global Investors Summit) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಬುಧವಾರ ಎಂ.ಬಿ ಪಾಟೀಲ್ ಖುದ್ದಾಗಿ ಆಹ್ವಾನಿಸಿದ್ದಾರೆ.

    ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸಚಿವೆಯನ್ನು ಭೇಟಿಯಾದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ಆಮಂತ್ರಣ ನೀಡಿದ್ದಾರೆ. ಇದನ್ನೂ ಓದಿ: ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ? – ಖಡಕ್ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ

    ಈ ಸಂದರ್ಭದಲ್ಲಿ ಹೂಡಿಕೆದಾರರ ಸಮಾವೇಶದ ವೈಶಿಷ್ಟ್ಯಗಳನ್ನು ಮತ್ತು ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ ಹಾಗೂ ಸ್ವಚ್ಛ ಇಂಧನ ನೀತಿಯ ಬಗ್ಗೆ ನಿರ್ಮಲಾ ಸೀತಾರಾಮನ್ ಅವರಿಗೆ ಎಂ.ಬಿ ಪಾಟೀಲ್ ಮಾಹಿತಿ ನೀಡಿದರು. ಇದನ್ನೂ ಓದಿ: Bengaluru| ಹಣಕಾಸು ವಿಚಾರವಾಗಿ ಗಲಾಟೆ – ಪತ್ನಿಯನ್ನು ಉಸಿರುಗಟ್ಟಿಸಿ ಕೊಂದ ಟೆಕ್ಕಿ

    ಬಳಿಕ ಪಾಟೀಲ್ ಅವರು, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ, ಸಂಸದ ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದರು. ಇದನ್ನೂ ಓದಿ: ವರ್ಗಾವಣೆಯಾಗಿ ಅಥವಾ VRS ತೆಗೆದುಕೊಳ್ಳಿ- ಹಿಂದೂಯೇತರ 18 ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ತಿರುಪತಿ ಬೋರ್ಡ್‌

  • ಜಾಗತಿಕ ಹೂಡಿಕೆದಾರರ ಸಮಾವೇಶ; ಫೆ.13ರಂದು `ಕ್ವಿನ್ ಸಿಟಿ’ ಕುರಿತು ರೌಂಡ್ ಟೇಬಲ್ ಚರ್ಚೆ: ಎಂ.ಬಿ ಪಾಟೀಲ್

    ಜಾಗತಿಕ ಹೂಡಿಕೆದಾರರ ಸಮಾವೇಶ; ಫೆ.13ರಂದು `ಕ್ವಿನ್ ಸಿಟಿ’ ಕುರಿತು ರೌಂಡ್ ಟೇಬಲ್ ಚರ್ಚೆ: ಎಂ.ಬಿ ಪಾಟೀಲ್

    – 5-6 ವಿದೇಶಿ ವಿವಿ ಜತೆ ಒಡಂಬಡಿಕೆ, ಪ್ರತಿಷ್ಠಿತ ವಿ.ವಿ.ಗಳು, ಪ್ರತಿಷ್ಠಾನಗಳು ಭಾಗಿ

    ಬೆಂಗಳೂರು: ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಹೆಸರಾಂತ ಉದ್ಯಮಗಳ ಪ್ರತಿಷ್ಠಾನಗಳೊಂದಿಗೆ ಉದ್ದೇಶಿತ `ಕ್ವಿನ್ ಸಿಟಿ’ಯಲ್ಲಿ ಅತ್ಯುತ್ಕೃಷ್ಟ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳ ಕ್ಷೇತ್ರದಲ್ಲಿ ಸಹಭಾಗಿತ್ವದ ಮೂಲಕ ದಕ್ಷ ಕಾರ್ಯ ಪರಿಸರ ಸೃಷ್ಟಿಸುವ ಕುರಿತು ಪ್ರತ್ಯೇಕ ರೌಂಡ್ ಟೇಬಲ್ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

    ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸಮಾವೇಶದ ಎರಡನೆಯ ದಿನವಾದ ಫೆ.13ರಂದು ಈ ಗೋಷ್ಠಿ ನಡೆಯಲಿದೆ. ಈ ಸಂದರ್ಭದಲ್ಲಿ ವಿದೇಶಗಳ 5-6 ಮತ್ತು ಭಾರತದ 7-8 ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ಕೂಡ ಇದೆ. ಈ ಸಂಬಂಧ ಮಾತುಕತೆ ಪ್ರಗತಿಯಲ್ಲಿದ್ದು, ಯಾವ ವಿ.ವಿಗಳೊಂದಿಗೆ ಒಡಂಬಡಿಕೆ ಆಗಲಿದೆ ಎನ್ನುವುದನ್ನು ನಂತರದ ದಿನಗಳಲ್ಲಿ ಅಂತಿಮವಾಗಲಿದೆ. ಯುಜಿಸಿ ನಿಯಮಗಳ ಪ್ರಕಾರ, ಜಗತ್ತಿನ ಮೊದಲ 500 ಸ್ಥಾನಗಳಲ್ಲಿರುವ ವಿ.ವಿ.ಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ಸನ್ನು ತೆರೆಯಲು ಅವಕಾಶವಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

    ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾರಿಕೋದ್ಯಮಗಳಲ್ಲಿನ ಹೂಡಿಕೆ ಬಗ್ಗೆ ಮಾತ್ರ ಗಮನವಿರುವುದಿಲ್ಲ. ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯೂ ಸೇರಿದಂತೆ ಸಂಶೋಧನೆ ಮತ್ತು ಅದಕ್ಕೆ ಪೂರಕವಾಗಿರುವ ವಲಯಗಳಿಗೂ ಆದ್ಯತೆ ಇರಲಿದೆ. ಏಕೆಂದರೆ, ಕ್ವಿನ್ ಸಿಟಿ ಯೋಜನೆಯು ಭವಿಷ್ಯದ ನಗರಾಭಿವೃದ್ಧಿಯ ಪರಿಕಲ್ಪನೆ ಮತ್ತು ಜಾಗತಿಕ ಗುಣಮಟ್ಟದ ಉದ್ಯಮಶೀಲತೆ, ಕೌಶಲ ಮುಂತಾದವನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: USA vs China Tax War | ಅಮೆರಿಕದ ಕಲ್ಲಿದ್ದಲು, ಗ್ಯಾಸ್‌ ಮೇಲೆ ತೆರಿಗೆ ವಿಧಿಸಿದ ಚೀನಾ

    ಒಂದೂವರೆ ಗಂಟೆ ಕಾಲದ ಈ ಗೋಷ್ಠಿಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಹ್ಲಿ ವಿಶ್ವದಾಖಲೆ ನಿರ್ಮಾಣಕ್ಕೆ ಬೇಕಿದೆ ಕೇವಲ 94 ರನ್‌!

    ಅಜೀಂ ಪ್ರೇಂಜಿ, ಪಿಇಎಸ್, ಎಂ ಎಸ್ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿವಿ, ದಯಾನಂದ ಸಾಗರ್, ಚಾಣಕ್ಯ, ಸೆಂಟ್ ಜೋಸೆಫ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಅಮಿಟಿ, ಬಿಎಲ್ ಡಿಇ, ಕ್ರೈಸ್ಟ್, ಜೈನ್, ಕೆಎಲ್‌ಇ ಸೇರಿದಂತೆ ಇನ್ನೂ ಅನೇಕ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡಲಾಗಿದೆ. ಜತೆಗೆ ಐಐಎಸ್ಸಿ, ಜವಾಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರ, ನಿಮ್ಹಾನ್ಸ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ನ್ಯೂಯಾರ್ಕಿನ ಸೆಂಟ್ ಜಾನ್ ಯೂನಿವರ್ಸಿಟಿ, ಇಂಗ್ಲೆಂಡಿನ ಯೂನಿವರ್ಸಿಟಿ ಆಫ್ ಯಾರ್ಕ್, ವೆಲ್ಲೂರಿನ ವಿಐಟಿ ಮತ್ತು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಪಿಲಾನಿಯ ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ (ಬಿಟ್ಸ್), ಶಾಸ್ತ್ರ ಯೂನಿವರ್ಸಿಟಿ ಮತ್ತು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಗಳ ಪರಿಣತರೂ ಭಾಗವಹಿಸಲು ವಿಶ್ವಾಸ ಇದೆ ಎಂದು ನುಡಿದರು. ಇದನ್ನೂ ಓದಿ: ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ, ಶಾಸಕಾಂಗ ಸಭೆಯ ಮುಂದೆಯೂ ಇಲ್ಲ: ಆರ್.ವಿ.ದೇಶಪಾಂಡೆ

    ಮಿಗಿಲಾಗಿ ಅಜೀಂ ಪ್ರೇಂಜಿ, ಇನ್ಫೋಸಿಸ್, ರಿಲಯನ್ಸ್, ಅದಾನಿ, ಭಾರತಿ, ವಿಪ್ರೋ, ಬಯೋಕಾನ್, ಕೊಟಕ್ ಎಜುಕೇಶನ್, ಶಿವ ನಾಡಾರ್, ಬಜಾಜ್ ಮತ್ತು ಮಹೀಂದ್ರ ಪ್ರತಿಷ್ಠಾನಗಳು, ಟಾಟಾ ಟ್ರಸ್ಟ್, ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್, ಆದಿತ್ಯ ಬಿರ್ಲಾ ಗ್ರೂಪ್ ಸಿಎಸ್‌ಆರ್ ಹಾಗೂ ಏಷ್ಯನ್ ಪೇಂಟ್ಸ್ ಸಿಎಸ್‌ಆರ್ ಸಂಸ್ಥೆಗಳ ಉನ್ನತ ಮಟ್ಟದ ಪ್ರತಿನಿಧಿಗಳು ಕೂಡ ಇದರಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಅಶೋಕ್ ವಿಪಕ್ಷ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ವಿರುದ್ಧ ನಿತ್ಯ ಆರೋಪ – ಲಕ್ಷ್ಮಣ ಸವದಿ

    ದೊಡ್ಡಬಳ್ಳಾಪುರ- ದಾಬಸ್‌ಪೇಟೆ ಮಧ್ಯೆ ಸುಮಾರು 5000 ಎಕರೆ ಪ್ರದೇಶದಲ್ಲಿ ಕ್ವಿನ್ ಸಿಟಿ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ನಾವೀನ್ಯತೆ ಕುರಿತಾದ ಪ್ರತಿಷ್ಠಿತ ಸಂಸ್ಥೆಗಳು ತಲೆ ಎತ್ತಲಿವೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯಕ್ಕೆ ಕಳೆದ ಬಾರಿಗಿಂತ ಶೇ.10ರಷ್ಟು ಹೆಚ್ಚು ತೆರಿಗೆ ಹಂಚಿಕೆ: ಜೋಶಿ