Tag: global health emergency

  • ಸಲಿಂಗಿಗಳ ಸೆಕ್ಸ್‌ನಿಂದಲೇ ಮಂಕಿಪಾಕ್ಸ್ ಹೆಚ್ಚಳ – ಸೆಕ್ಸ್ ಪಾಲುದಾರರನ್ನು ಮಿತಿಗೊಳಿಸುವಂತೆ WHO ಸೂಚನೆ

    ಸಲಿಂಗಿಗಳ ಸೆಕ್ಸ್‌ನಿಂದಲೇ ಮಂಕಿಪಾಕ್ಸ್ ಹೆಚ್ಚಳ – ಸೆಕ್ಸ್ ಪಾಲುದಾರರನ್ನು ಮಿತಿಗೊಳಿಸುವಂತೆ WHO ಸೂಚನೆ

    ವಾಷಿಂಗ್ಟನ್: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರು ಹೊರ ಹಾಕಿದ್ದಾರೆ. ನಿಕಟ ದೈಹಿಕ ಸಂಪರ್ಕದ ಮೂಲಕ ಹರಡುತ್ತವೆ ಎಂಬುದನ್ನು ಹಲವು ವರದಿಗಳು ಹೇಳಿವೆ.

    ಈ ನಡುವೆ ಅಚ್ಚರಿಯ ಸಂಶೋಧನಾ ಮಾಹಿತಿ ಹೊರಬಿದ್ದಿದ್ದು, ಈ ಕುರಿತು, ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಸೆಕ್ಸ್ಗೆ ಪ್ರಭಾವಿತರಾದ ಗುಂಪನ್ನು ಕರೆದಿದ್ದು, ಪುರುಷ-ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವವರು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಮಿತಿಗೊಳಿಸಬೇಕು ಎಂದು ಹೇಳಿದೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- ಬಂಧಿತ ಕೆಲಸ ಮಾಡುತ್ತಿದೆ ಅಂಗಡಿಗೆ ಮುತ್ತಿಗೆ

    ಕಳೆದವಾರ ಮಂಕಿಪಾಕ್ಸ್ ಪ್ರಕರಣ ಹೆಚ್ಚಿದ ಸಂಖ್ಯೆಯಿಂದಾಗಿ ಜಾಗತೀಕ ತುರ್ತುಪರಿಸ್ಥಿತಿ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಲಿಂಗಿಗಳು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡುವುದು, ಹೊಸ ಪಾಲುದಾರರೊಂದಿಗೆ ಲೈಂಗಿಕತೆ ಮರು ಪರಿಶೀಲಿಸುವುದು ಮೊದಲಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದಿದ್ದಕ್ಕೆ ಕ್ಷಮೆ ಕೋರಿದ ಅಧೀರ್ ರಂಜನ್ ಚೌಧರಿ

    ನಿನ್ನೆವರೆಗೆ 78 ದೇಶಗಳಲ್ಲಿ 18 ಸಾವಿರ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಶೇ.25 ರಷ್ಟು ಅಮೆರಿಕದಲ್ಲಿ ವರದಿಯಾಗಿದ್ದರೆ ಉಳಿದ ಶೇ.75 ರಷ್ಟು ಪ್ರಕರಣಗಳು ಯುರೋಪಿಯನ್ ದೇಶಗಳಲ್ಲಿ ಕಾಣಿಸಿಕೊಂಡಿವೆ. ಕಳೆದ ಮೇ ತಿಂಗಳಿನಿಂದ 5 ಮರಣ ಪ್ರಕರಣಗಳು ವರದಿಯಾಗಿವೆ. ಈ ಬೆನ್ನಲ್ಲೇ ಶೇ.98 ರಷ್ಟು ಮಂಕಿಪಾಕ್ಸ್ ಸಲಿಂಗಿಗಳ ಲೈಂಗಿಕ ಕ್ರಿಯೆಯಿಂದಲೇ ಹರಡುತ್ತಿದೆ ಎಂಬ ಅಂಶ ಹೊರಬಿದ್ದಿದೆ. ಇಂಗ್ಲೆಂಡ್‌ನ ಜರ್ನಲ್ ಆಫ್ ಮಡಿಸನ್ ಈ ಅಂಶವನ್ನು ಪ್ರಕಟಿಸಿದೆ.

    ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಲೈಂಗಿಕವಾಗಿ ಹರಡುವ ಸೋಂಕುಗಳ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಸಲಿಂಗಿಗಳು ತಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಅವರಿಗೆ ಸಂದೇಶಗಳನ್ನು ತಿಳಿಸಲಾಗುತ್ತಿದೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • 75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO

    75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO

    ಬರ್ನ್: ವಿಶ್ವ ಆರೋಗ್ಯ ಸಂಸ್ಥೆ(WHO) ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಶನಿವಾರ ಘೋಷಣೆ ಮಾಡಿದೆ.

    WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಜಾಗತಿಕವಾಗಿ ಏಕಾಏಕಿ ಹರಡುತ್ತಿರುವ ಮಂಕಿಪಾಕ್ಸ್ ಅಂತಾರಾಷ್ಟ್ರೀಯ ಕಾಳಜಿಯಿಂದಾಗಿ ತುರ್ತು ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.

     

    who

    ಕಳೆದ ತಿಂಗಳು WHO ತುರ್ತು ಸಭೆ ನಡೆಸಿ, ಮಂಕಿಪಾಕ್ಸ್ ಅನ್ನು ತುರ್ತು ಪರಿಸ್ಥಿತಿ ಅಲ್ಲ, ಇದು ಹೆಚ್ಚು ಅಪಾಯಕಾರಿಯಾಗಿಲ್ಲ ಎಂದು ತಿಳಿಸಿತ್ತು. ಈ ಘೋಷಣೆ ಬಳಿಕ ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣಗಳು ಏರಿಕೆ ಕಂಡವು. ಇದೀಗ ಒಟ್ಟು 75 ದೇಶಗಳಲ್ಲಿ ಮಂಕಿಪಾಕ್ಸ್ ಕಂಡುಬಂದಿದ್ದು, ಸೋಂಕಿಗೆ 16,000 ಜನರು ಗುರಿಯಾಗಿದ್ದಾರೆ ಹಾಗೂ 5 ಜನ ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    ಮಂಕಿಪಾಕ್ಸ್ ಅನ್ನು ತುರ್ತು ಪರಿಸ್ಥಿತಿಯ ಪರಿಗಣನೆಗೆ ತೆಗೆದುಕೊಳ್ಳಲು ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಈ ಹಿಂದೆ ಮಂಕಿಪಾಕ್ಸ್ ವೈರಸ್ ಅನ್ನು ಎದುರಿಸಿರದ ದೇಶಗಳಲ್ಲಿ ಇದು ಅತ್ಯಂತ ವೇಗವಾಗಿ ಹರಡುತ್ತಿದೆ. ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು 3 ಮಾನದಂಡಗಳನ್ನು ಪೂರೈಸಲಾಗಿದೆ. ತುರ್ತು ಪರಿಸ್ಥಿತಿಯ ಸಲಹೆಯೂ ಒಮ್ಮತಕ್ಕೆ ಬಾರದೇ ಇರುವುದು ಕೂಡಾ ಇದೀಗ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದೆ.

    ಮಂಕಿಪಾಕ್ಸ್ ವೈರಸ್ ಬಗೆಗಿನ ವೈಜ್ಞಾನಿಕ ತತ್ವ, ಪುರಾವೆಗಳು ಹಾಗೂ ಇತರ ಮಾಹಿತಿಗಳು ಪ್ರಸ್ತುತ ಸಾಕಷ್ಟಿಲ್ಲದಿರುವುದರಿಂದ ಇದರ ಬಗ್ಗೆ ಇನ್ನೂ ತಿಳಿದುಕೊಳ್ಳುವುದಿದೆ. ಇದು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಅಂತಾರಾಷ್ಟ್ರೀಯವಾಗಿ ಹರಡುತ್ತಿದೆ. ಹಾಗೂ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಅಡ್ಡಿಪಡಿಸುತ್ತಿದೆ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲಿನ ದಾಳಿ ವಿರೋಧಿಸಿ ಬಾಂಗ್ಲಾದಲ್ಲಿ ಪ್ರತಿಭಟನೆ

    ಮಂಕಿಪಾಕ್ಸ್ ಈಗಾಗಲೇ ಭಾರತಕ್ಕೂ ಲಗ್ಗೆಯಿಟ್ಟಿದ್ದು, ಕೇರಳದಲ್ಲಿ 3 ಕೇಸ್‌ಗಳು ಪತ್ತೆಯಾಗಿವೆ.

    Live Tv
    [brid partner=56869869 player=32851 video=960834 autoplay=true]