Tag: Glimpses

  • ಸಾಯಿಧರಮ್ ತೇಜ್ ನಟನೆಯ ‘ವಿರೂಪಾಕ್ಷ’ ಚಿತ್ರದ ಟೈಟಲ್ ಗ್ಲಿಂಪ್ಸ್ ರಿಲೀಸ್

    ಸಾಯಿಧರಮ್ ತೇಜ್ ನಟನೆಯ ‘ವಿರೂಪಾಕ್ಷ’ ಚಿತ್ರದ ಟೈಟಲ್ ಗ್ಲಿಂಪ್ಸ್ ರಿಲೀಸ್

    ‘ಸುಪ್ರೀಂ ಹೀರೋ’ ಸಾಯಿಧರಮ್ ತೇಜ್ ಅಭಿನಯದ ಪ್ಯಾನ್-ಇಂಡಿಯಾ ಮಿಸ್ಟಿಕ್ ಥ್ರಿಲ್ಲರ್ ಚಿತ್ರಕ್ಕೆ ‘ವಿರೂಪಾಕ್ಷ’ ಎಂಬ ಹೆಸರಿಡಲಾಗಿದ್ದು, ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ‘ವಿರೂಪಾಕ್ಷ’ ಚಿತ್ರವನ್ನು ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್‌ಎಲ್‌ಪಿ ನಿರ್ಮಿಸುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರಸ್ತುತಪಡಿಸಿದ್ದಾರೆ.

    ಇದು 1990ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿಗೆ ಅಂಟಿಕೊಂಡಿರುವ ಹಳ್ಳಿಯೊಂದರಲ್ಲಿ ಮೂಢನಂಬಿಕೆಗಳ ಹೆಸರಿನಲ್ಲಿ ನಡೆಯುವ ಕೆಲವು ವಿಲಕ್ಷಣ ಘಟನೆಗಳನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಎಂಬುದು ತೋರಿಸಲಾಗಿದೆ.  ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಕಳೆದ ವರ್ಷ ಹೈದರಾಬಾದ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಿಂದ ಚೇತರಿಸಿಕೊಂಡಿರುವ ಸಾಯಿಧರಮ್​ ತೇಜ್ ಈ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕಾರ್ತಿಕ್​ ದಂಡು ನಿರ್ದೇಶಿಸಿದ್ದು, ಶ್ಯಾಮ್​ ದತ್​ ಅವರ ಛಾಯಾಗ್ರಹಣ ಮತ್ತು ಕನ್ನಡದ ಅಜನೀಶ್​ ಲೋಕನಾಥ್​ ಸಂಗೀತವಿದೆ. ‘ವಿರೂಪಾಕ್ಷ’ ಚಿತ್ರವು ಏಪ್ರಿಲ್ 21, 2023ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಯಶೋದಾ ಫಸ್ಟ್ ಗ್ಲಿಂಪ್ಸ್ ರಿಲೀಸ್: ಜೈ ಹೋ ಅಂದ ಸಮಂತಾ ಅಭಿಮಾನಿಗಳು

    ಯಶೋದಾ ಫಸ್ಟ್ ಗ್ಲಿಂಪ್ಸ್ ರಿಲೀಸ್: ಜೈ ಹೋ ಅಂದ ಸಮಂತಾ ಅಭಿಮಾನಿಗಳು

    ಮಂತಾ ಅವರೇ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಯಶೋದಾ ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಅಭಿಮಾನಿಗಳು ಸಮಂತಾ ಲುಕ್ ಕಂಡು ಫಿದಾ ಆಗಿದ್ದಾರೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಈ ಮೂಲಕ ಸಮಂತ್ ಮತ್ತೊಂದು ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಈ ಗ್ಲಿಂಪ್ಸ್ ಜೊತೆಗೆ ಯಶೋದ ಸಿನಿಮಾದ ಸಣ್ಣ ವಿಡಿಯೋ ತುಣುಕನ್ನು ಕೂಡ ಇಂದು ರಿಲೀಸ್ ಮಾಡಲಾಗಿದ್ದು, ಆ ವಿಡಿಯೋ ಕುತೂಹಲ ಮೂಡಿಸುತ್ತಿದೆ. ಸಮಂತಾ ಅವರ ನಟನೆ ಕೂಡ ಕಾಯುವಿಕೆಗೆ ಸಾಕ್ಷಿಯಾಗಿದೆ. ಈಗಾಗಲೇ ಸಿನಿಮಾದ ಶೇ.80ರಷ್ಟು ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ತೊಡಗಿದೆ ಚಿತ್ರತಂಡ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಶ್ರೀದೇವಿ ಪ್ರೊಡಕ್ಷನ್‌ನ 14ನೇ ಸಿನಿಮಾ ಇದಾಗಿದ್ದು, ಹರಿ ಮತ್ತು ಹರೀಶ್‌ ಈ ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಶಿವಲೆಂಕಾ ಕೃಷ್ಣ ಪ್ರಸಾದ್‌ ನಿರ್ಮಿಸಿದ್ದಾರೆ. ಸಿನಿಮಾ ಬಗ್ಗೆ ಹೇಳಿಕೊಳ್ಳುವ ನಿರ್ಮಾಪಕರು, ಫ್ಯಾಮಿಲಿ ಮ್ಯಾನ್‌ 2 ವೆಬ್‌ ಸಿರೀಸ್‌ ಮೂಲಕ ಪ್ಯಾನ್‌ ಇಂಡಿಯಾ ಜನರನ್ನು ಸಮಂತಾ ತಲುಪಿದ್ದಾರೆ. ಆ ಒಂದು ಕಾರಣಕ್ಕೆ ಎಲ್ಲಿಯೂ ಕಾಂಪ್ರಮೈಸ್‌ ಆಗದೇ, ಎಲ್ಲೆಡೆ ಸಲ್ಲುವ ಸಿನಿಮಾ ಮಾಡಿದ್ದೇವೆ. ಈ ಸಿನಿಮಾದಲ್ಲಿನ ಸಮಂತಾ ಅವರ ಡೆಡಿಕೇಷನ್‌ ತೆರೆಮೇಲೆ ಕಾಣಿಸಲಿದೆ. ಅವರ ನಟನೆಯನ್ನು ನೋಡುವುದೇ ಚಂದʼ ಎನ್ನುತ್ತಾರೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ಚಿತ್ರೀಕರಣದ ಬಗ್ಗೆಯೂ ಮಾಹಿತಿ ನೀಡುವ ಅವರು, ಚಿತ್ರದ ಕ್ಲೈಮ್ಯಾಕ್ಸ್‌ ಹಂತವನ್ನು ಕೊಡೈಕೆನಾಲ್‌ನಲ್ಲಿ ಏಪ್ರಿಲ್‌ನಲ್ಲಿ ಚಿತ್ರೀಕರಿಸಿದ್ದೇವೆ. ಶೇ. 80 ಭಾಗದ ಶೂಟಿಂಗ್‌ ಮುಕ್ತಾಯವಾಗಿದ್ದು, ಹೈದರಾಬಾದ್‌ನಲ್ಲಿ ಕೊನೇ ಶೆಡ್ಯೂಲ್‌ ನಡೆಯುತ್ತಿದೆ. ಜೂನ್‌ 1ಕ್ಕೆ ಶೂಟ್‌ ಮುಗಿಸಲಿದ್ದೇವೆ. ಇಡೀ ಸಿನಿಮಾದಲ್ಲಿ ಗ್ರಾಫಿಕ್ಸ್‌ ಕೆಲಸ ಪ್ರಮುಖ ಪಾತ್ರ ವಹಿಸಲಿದೆ. ನಿರ್ದೇಶಕರ ಕೆಲಸವೂ ಇಂಪ್ರೆಸಿವ್‌ ಆಗಿದೆ ಎಂದರು. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಅಂದಹಾಗೆ, ಇದು ಕೇವಲ ತೆಲುಗಿನಲ್ಲಿ ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೆ ದಿನಾಂಕವೂ ನಿಗದಿಯಾಗಿದ್ದು, ಆಗಸ್ಟ್‌ 12ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಸ್ಟಾರ್‌ ನಟರ ದಂಡೇ ಇದೆ. ವರಲಕ್ಷ್ಮೀ ಶರತ್‌ಕುಮಾರ್‌, ಉನ್ನಿ ಮುಕುಂದನ್‌, ರಾವ್‌ ರಮೇಶ್‌, ಮುರಳಿ ಶರ್ಮಾ, ಸಂಪತ್‌ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್‌, ದಿವ್ಯಾ ಶ್ರೀಪಾದ್‌, ಪ್ರಿಯಾಂಕಾ ಶರ್ಮಾ ಸೇರಿ ಹಲವರಿದ್ದಾರೆ.