Tag: Glenn McGrath

  • ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

    ಶಮಿಗೆ 7 ವಿಕೆಟ್ ಸಿಗುತ್ತೆ – ನ.14ಕ್ಕೆ ಬಿದ್ದ ಕನಸು ನನಸಾಯ್ತು

    ಮುಂಬೈ: ನ್ಯೂಜಿಲೆಂಡ್ (New Zealand) ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಆಟಗಾರ ಶಮಿ (Mohammed Shami) 7 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮುನ್ನ ದಿನವೇ ಅಷ್ಟು ವಿಕೆಟ್ ಗಳಿಸುವುದಾಗಿ ಕನಸು ಕಂಡ ವಿಚಾರವನ್ನು ವ್ಯಕ್ತಿಯೊಬ್ಬ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾನೆ. ಈಗ ವ್ಯಕ್ತಿಯ ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

    16 ಲಕ್ಷ ಜನ ಈ ಪೋಸ್ಟ್ ನೋಡಿದ್ದಾರೆ. 43.5 ಸಾವಿರ ಲೈಕ್ ಪಡೆದಿದೆ. 13.4 ಸಾವಿರ ಜನ ಹಂಚಿಕೊಂಡಿದ್ದಾರೆ. 3 ಸಾವಿರ ಜನ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಬ್ಬರದ ಬೌಲಿಂಗ್ ನಡೆಸಿ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ತಂಡದ 7 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ವೇಗದ ಬೌಲರ್ ಗ್ಲೆನ್ ಮೆಕ್‍ಗ್ರಾತ್ ಅವರ ದಾಖಲೆಯನ್ನು ಶಮಿ ಸರಿಗಟ್ಟಿದ್ದಾರೆ. ಗ್ಲೆನ್ ಮೆಕ್‍ಗ್ರಾತ್ ಐಸಿಸಿ ವಿಶ್ವಕಪ್ 2003ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್ ನೀಡಿ 7 ವಿಕೆಟ್ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್ ಶಮಿ ಈಗ ಸರಿಗಟ್ಟಿದ್ದಾರೆ. ಅಲ್ಲದೇ ಮೂರು ಬಾರಿ 5 ವಿಕೆಟ್ ಪಡೆದ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ಶಮಿ ಮುರಿದಿದ್ದಾರೆ.

    ಇದರೊಂದಿಗೆ ಮೊಹಮ್ಮದ್ ಶಮಿ ಏಕದಿನ ಮಾದರಿಯಲ್ಲಿ 7 ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದು, ಅಲ್ಲದೇ ಕೇವಲ 17 ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಪಡೆದು ಮಿಂಚಿದ್ದಾರೆ. 9.5 ಓವರ್‌ಗಳಲ್ಲಿ 57 ರನ್ ನೀಡಿ 7 ವಿಕೆಟ್‍ಗಳನ್ನು ಶಮಿ ಪಡೆದು ಮಿಂಚಿದ್ದಾರೆ. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್ ಕೂಡ ಶಮಿಗೆ ಒಲಿಯಿತು. ಇದನ್ನೂ ಓದಿ: World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ವಿಶ್ವಕಪ್‍ನಲ್ಲಿ 7 ವಿಕೆಟ್ ಉರುಳಿಸಿದ ದಿಗ್ಗಜರು
    ಆಸ್ಟ್ರೇಲಿಯಾದ ಆಂಡಿ ಬಿಚೆಲ್ – 20 ರನ್ 7 ವಿಕೆಟ್, ಇಂಗ್ಲೆಂಡ್ (ಎದುರಾಳಿ) 2003, ಮಾ.2
    ನ್ಯೂಜಿಲೆಂಡ್‍ನ ಟಿಮ್ ಸೌಥಿ – 33 ಕ್ಕೆ 7, ಇಂಗ್ಲೆಂಡ್ (ಎದುರಾಳಿ) 2015, ಫೆ.20
    ವೆಸ್ಟಿಂಡೀಸ್‍ನ ವಿನ್ಸ್ಟನ್ ಡೇವಿಸ್ – 51 ಕ್ಕೆ 7, ಆಸ್ಟ್ರೇಲಿಯಾ (ಎದುರಾಳಿ) 1983, ಜೂ.11
    ಭಾರತದ ಮೊಹಮ್ಮದ್ ಶಮಿ – 57 ಕ್ಕೆ 7, ನ್ಯೂಜಿಲೆಂಡ್ (ಎದುರಾಳಿ) 2023, ನ.15

  • World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

    World Cup Semifinal: 7 ವಿಕೆಟ್‌ ಕಿತ್ತು ಗ್ಲೆನ್‌ ಮ್ಯಾಕ್‌ಗ್ರಾತ್‌ ದಾಖಲೆ ಸರಿಗಟ್ಟಿದ ಶಮಿ

    ಮುಂಬೈ: ಏಕದಿನ ವಿಶ್ವಕಪ್‌ 2023 (World Cup 2023) ರ ಟೂರ್ನಿಯಲ್ಲಿ ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅಬ್ಬರದ ಬೌಲಿಂಗ್‌ ದಾಳಿ ನಡೆಸಿ 7 ವಿಕೆಟ್‌ ಕಬಳಿಸಿದ ಭಾರತದ ವೇಗಿ ಮೊಹಮ್ಮದ್‌ ಶಮಿ (Mohammed Shami) ದಾಖಲೆ ಬರೆದಿದ್ದಾರೆ. ಲೆಜೆಂಡರಿ ಆಸ್ಟ್ರೇಲಿಯಾ ವೇಗದ ಬೌಲರ್‌ ಗ್ಲೆನ್‌ ಮೆಕ್‌ಗ್ರಾತ್‌ (Glenn Mcgrath) ದಾಖಲೆಯನ್ನು ಸರಿಗಟ್ಟಿದ್ದಾರೆ.

    ಹೌದು, ಗ್ಲೆನ್‌ ಮೆಕ್‌ಗ್ರಾತ್‌ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳ ದಾಖಲೆಯನ್ನು ಹೊಂದಿದ್ದಾರೆ. ಐಸಿಸಿ ವಿಶ್ವಕಪ್ 2003 ರ ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ನಮೀಬಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 15 ರನ್‌ ನೀಡಿ 7 ವಿಕೆಟ್‌ ಕಿತ್ತು ವಿಶ್ವ ದಾಖಲೆ ಬರೆದಿದ್ದರು. ಆ ದಾಖಲೆಯನ್ನು ಭಾರತದ ಬೌಲರ್‌ ಶಮಿ ಸರಿಗಟ್ಟಿದ್ದಾರೆ. ಇದನ್ನೂ ಓದಿ: ಸೆಮಿಸ್‌ನಲ್ಲೂ ಶಮಿ ಮಿಂಚು; ಕಿವೀಸ್‌ ವಿರುದ್ಧ 70 ರನ್‌ಗಳ ಭರ್ಜರಿ ಜಯ – 4ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಭಾರತ ಎಂಟ್ರಿ

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನ್ಯೂಜಿಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ಬೌಲಿಂಗ್‌ ಮೋಡಿ ಮಾಡಿದರು. 9.5 ಓವರ್‌ಗಳಿಗೆ 57 ರನ್‌ ನೀಡಿ 7 ವಿಕೆಟ್‌ ಕಬಳಿಸಿ ಮಿಂಚಿದರು. ಜೊತೆಗೆ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು.

    7 ವಿಕೆಟ್‌ ಕಿತ್ತ ಬೌಲರ್‌ಗಳು
    ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲೇ 7 ವಿಕೆಟ್‌ ಕಬಳಿಸಿ ಮಿಂಚಿದ 5 ಆಟಗಾರರಿದ್ದಾರೆ. ಅವರಲ್ಲಿ ಅತಿ ಕಡಿಮೆ ರನ್‌ಗೆ 7 ವಿಕೆಟ್‌ ಕಬಳಿಸಿದವರು ಗ್ಲೆನ್‌ ಮೆಕ್‌ಗ್ರಾತ್‌. ಇದನ್ನೂ ಓದಿ: ‌World Cup Semifinal: 48 ವರ್ಷಗಳ ವಿಶ್ವಕಪ್‌ ಇತಿಹಾಸದಲ್ಲಿ ಹೊಸ ಮೈಲುಗಲ್ಲು‌ ಸ್ಥಾಪಿಸಿದ ಶಮಿ.!

    ಆಸ್ಟ್ರೇಲಿಯಾದ ಆಂಡಿ ಬಿಚೆಲ್ – 20 ರನ್‌ 7 ವಿಕೆಟ್‌ – ಇಂಗ್ಲೆಂಡ್‌ (ಎದುರಾಳಿ) – 2003, ಮಾ.2

    ನ್ಯೂಜಿಲೆಂಡ್‌ನ ಟಿಮ್ ಸೌಥಿ – 33 ಕ್ಕೆ 7 – ಇಂಗ್ಲೆಂಡ್‌ (ಎದುರಾಳಿ) – 2015, ಫೆ.20

    ವೆಸ್ಟಿಂಡೀಸ್‌ನ ವಿನ್ಸ್ಟನ್ ಡೇವಿಸ್ – 51 ಕ್ಕೆ 7 – ಆಸ್ಟ್ರೇಲಿಯಾ (ಎದುರಾಳಿ) – 1983, ಜೂ.11

    ಭಾರತದ ಮೊಹಮ್ಮದ್‌ ಶಮಿ – 57 ಕ್ಕೆ 7 – ನ್ಯೂಜಿಲೆಂಡ್‌ (ಎದುರಾಳಿ) – 2023, ನ.15