17ನೇ ಆವೃತ್ತಿಯ ಐಪಿಎಲ್ ಟೂರ್ನಿ ಅದ್ಧೂರಿಯಾಗಿ ಚಾಲನೆಗೊಂಡಿದೆ. ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಹಿಂದಿ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ. ಸೋನು ನಿಗಂ, ಎ.ಆರ್ ರೆಹಮಾನ್ ತಮ್ಮ ಸಂಗೀತದ ಕಡಲಲ್ಲಿ ಅಭಿಮಾನಿಗಳನ್ನ ತೇಲಾಡಿಸಿದ್ದಾರೆ. ಈ ಸುಂದರ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದಾಗಿದೆ..
ಚೆನ್ನೈ: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2024) ಇಂದಿನಿಂದ (ಮಾ.22) ಆರಂಭಗೊಳ್ಳುತ್ತಿದೆ. ಆರ್‌ಸಿಬಿ – ಸಿಎಸ್‌ಕೆ (RCB vs CSK) ನಡುವಿನ ಹೈವೋಲ್ಟೇಜ್ ಕದನಕ್ಕೆ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ಸಜ್ಜಾಗಿದೆ. ಇನ್ನೆರಡು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಚೆನ್ನೈ ಮತ್ತು ಆರ್‌ಸಿಬಿ ತಂಡಗಳು ತಮ್ಮದೇ ಆದ ಫ್ಯಾನ್ಸ್ ಬೇಸ್ ಹೊಂದಿವೆ. ಭಾರತ-ಪಾಕಿಸ್ತಾನ ಪಂದ್ಯದಷ್ಟೇ ಇತ್ತಂಡಗಳ ಕಾದಾಟ ರೋಚಕವಾಗಿರುತ್ತದೆ. ಆದ್ರೆ ಐಪಿಎಲ್‌ನಲ್ಲಿ ರನ್ ಹೊಳೆ ಹರಿಸಿ ಇತಿಹಾಸ ನಿರ್ಮಿಸಿದ್ದು, ಕಳಪೆ ಮೊತ್ತಕ್ಕೆ ಆಲೌಟ್ ಆಗಿ ದಾಖಲೆ ಬರೆದಿರುವ ಹೆಸರು ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡದ ಹೆಸರಿನಲ್ಲಿಯೇ ಅನ್ನೋದು ವಿಶೇಷ. ಅದನ್ನು ನಾವಿಲ್ಲಿ ಮೆಲುಕು ಹಾಕಬಹುದು.
ಅತಿಹೆಚ್ಚು ರನ್ ಗಳಿಸಿ ಇತಿಹಾಸ ನಿರ್ಮಿಸಿದ ಟಾಪ್-5 ತಂಡಗಳು
* ಆರ್‌ಸಿಬಿ – 263 ರನ್ – ಪುಣೆ ವಾರಿಯರ್ಸ್ ವಿರುದ್ಧ – 2013
* ಲಕ್ನೋ ಸೂಪರ್ ಜೈಂಟ್ಸ್- 257 ರನ್ – ಪಂಜಾಬ್ ಕಿಂಗ್ಸ್ ವಿರುದ್ಧ – 2023
* ಆರ್‌ಸಿಬಿ – 248 ರನ್ – ಗುಜರಾತ್ ಲಯನ್ಸ್ – 2016
* ಸಿಎಸ್‌ಕೆ – 246 ರನ್ – ರಾಜಸ್ಥಾನ್ ರಾಯಲ್ಸ್ ವಿರುದ್ಧ – 2010
* ಕೆಕೆಆರ್ – 245 ರನ್ – ಪಂಜಾಬ್ ಕಿಂಗ್ಸ್ ವಿರುದ್ಧ – 2018
ಅತೀ ಕಡಿಮೆ ರನ್‌ಗಳಿಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದ ಅಗ್ರ-5 ತಂಡಗಳು
* ಆರ್‌ಸಿಬಿ – 49 ರನ್ – ಕೋಲ್ಕತ್ತಾ ನೈಟ್‌ರೈಡರ್ಸ್ ವಿರುದ್ಧ – 2017
* ರಾಜಸ್ಥಾನ್ ರಾಯಲ್ಸ್ – 58 ರನ್ – ಆರ್‌ಸಿಬಿ ವಿರುದ್ಧ – 2009
* ರಾಜಸ್ಥಾನ ರಾಯಲ್ಸ್ – 59 ರನ್ – ಆರ್‌ಸಿಬಿ ವಿರುದ್ಧ – 2023
* ಡೆಲ್ಲಿ ಡೇರ್ ಡೆವಿಲ್ಸ್ – 66 ರನ್ – ಮುಂಬೈ ಇಂಡಿಯನ್ಸ್ ವಿರುದ್ಧ – 2017
* ಡೆಲ್ಲಿ ಡೇರ್ ಡೆವಿಲ್ಸ್ – 67 ರನ್ – ಪಂಜಾಬ್ ಕಿಂಗ್ಸ್ ವಿರುದ್ಧ – 2017
ಕ್ಯಾನ್ಬೆರಾ: ಇಲ್ಲಿನ ಅಡಿಲೇಡ್ ಓವೆಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಆಸೀಸ್ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) 120 ರನ್ ಸಿಡಿಸುವ ಮೂಲಕ 5 ಅಂತಾರಾಷ್ಟ್ರೀಯ ಟಿ20 (T20I Cricket) ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಮೂಲಕ 4 ಶತಕ ಸಿಡಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ದಾಖಲೆಯನ್ನ ಮುರಿದಿದ್ದಾರೆ. ಜೊತೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಶತಕ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತ್ತೀಚೆಗೆ ಆಫ್ಘಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 121 ರನ್ ಸಿಡಿಸುವ ಮೂಲಕ ತಮ್ಮ 5ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದ್ದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಟಿ20ಯಲ್ಲಿ 5 ಶತಕ ಸಿಡಿಸಿ ರೋಹಿತ್ ಶರ್ಮಾ ದಾಖಲೆ
ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಆಸೀಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 241 ರನ್ ಬಾರಿಸಿತು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಗ್ಲೇನ್ ಮ್ಯಾಕ್ಸ್‌ವೆಲ್ 55 ಎಸೆತಗಳಲ್ಲಿ ಬರೋಬ್ಬರಿ 120 ರನ್ ಬಾರಿಸಿದರು. 25 ಎಸೆತಗಳಲ್ಲಿ 50 ರನ್ ಸಿಡಿಸಿದ್ದ ಮ್ಯಾಕ್ಸಿ, 50 ಎಸೆತಗಳಲ್ಲಿ 100 ರನ್ ಬಾರಿಸಿದ್ರು. ಒಟ್ಟಾರೆ ಎದುರಿಸಿದ 55 ಎಸೆತಗಳಲ್ಲಿ 120 ರನ್ ಸಿಡಿಸಿ ಮಿಂಚಿದರು. ಇದರಲ್ಲಿ 12 ಬೌಂಡರಿ ಹಾಗೂ 8 ಸಿಕ್ಸರ್‌ಗಳೂ ಸೇರಿವೆ.
ಪಂಚ ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ:
ಅಫ್ಘಾನಿಸ್ತಾನ ವಿರುದ್ಧ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ 5 ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಇದೀಗ ಮ್ಯಾಕ್ಸಿ 5 ಶತಕ ಸಿಡಿಸಿದ ವಿಶ್ವದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಇದನ್ನೂ ಓದಿ: 95 ಎಸೆತಗಳಲ್ಲಿ ಬರೋಬ್ಬರಿ 190 ರನ್ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್ ಜೊತೆಯಾಟ
ರೋಹಿತ್ ಶರ್ಮಾ 143 ಇನ್ನಿಂಗ್ಸ್ಗಳಲ್ಲಿ 5 ಶತಕ ಸಿಡಿಸಿದ್ದರೆ, ಮ್ಯಾಕ್ಸ್ವೆಲ್ ಕೇವಲ 94 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸೂರ್ಯಕುಮಾರ್ ಯಾದವ್ ಕೇವಲ 57 ಇನ್ನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್ ಶರ್ಮಾ
ರಾಯ್ಪುರ: ಆಸ್ಟ್ರೇಲಿಯಾ (Australia) ವಿರುದ್ಧ ಟಿ20 ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ (Team India) ಯುವ ಪಡೆ, ಶುಕ್ರವಾರ (ಇಂದು) 4ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ರಾಯ್ಪುರ ಕ್ರಿಕೆಟ್ ಮೈದಾನದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.
ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ 3ನೇ ಟಿ20 ಪಂದ್ಯವನ್ನು ಪಂದ್ಯವನ್ನು ಮ್ಯಾಕ್ಸ್‌ವೆಲ್ ಅವರ ಸಾಹಸದ ಮುಂದೆ ಕೈಚೆಲ್ಲಿತ್ತು. ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲರ್‌ಗಳ (Bowlers) ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆಸೀಸ್ ವಿರುದ್ಧ ಕ್ರಮವಾಗಿ 209, 191 ಹಾಗೂ 225 ರನ್ ಬಿಟ್ಟುಕೊಟ್ಟಿತು. ಆದ್ದರಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ನಲ್ಲೂ ಬಲ ಬೇಕಿದೆ.
ಪ್ರಸಿದ್ ಕೃಷ್ಣ ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿದ ಬಳಿಕ ದುಬಾರಿಯಾಗುತ್ತಿದ್ದು, ಇತರರಿಂದಲೂ ಆಸೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ 4ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ತಿಲಕ್ ವರ್ಮಾ ಅವರ ಜಾಗಕ್ಕೆ ಶ್ರೇಯಸ್ ಹಾಗೂ ಪ್ರಸಿದ್ಧ್ ಕೃಷ್ಣ ಬದಲಿಗೆ ದೀಪಕ್ ಚಹಾರ್ ಅವರನ್ನ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ.
3 ಪಂದ್ಯಗಳ ಸಂಕ್ಷಿಪ್ತ ಸ್ಕೋರ್
ಮೊದಲ ಟಿ20: ಭಾರತ – 209/8, ಆಸ್ಟ್ರೇಲಿಯಾ – 208/3
2ನೇ ಟಿ20: ಭಾರತ – 235/4, ಆಸ್ಟ್ರೇಲಿಯಾ – 191/9
3ನೇ ಟಿ20: ಭಾರತ – 222/3, ಆಸ್ಟ್ರೇಲಿಯಾ – 225/5
ಗುವಾಹಟಿ: ಪುರುಷರ ಅಂತಾರಾಷ್ಟ್ರೀಯ ಟಿ20 ಯಲ್ಲಿ ಗುರಿ ಬೆನ್ನತ್ತುವ ವೇಳೆ ಕೊನೆ ಓವರ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿ ಮ್ಯಾಚ್ ಗೆದ್ದು ಹೊಸ ದಾಖಲೆಯನ್ನು ಆಸ್ಟ್ರೇಲಿಯಾ ಬರೆದಿದೆ.
ಗುವಾಹಟಿಯಲ್ಲಿ ನಡೆದ ಭಾರತದ ವಿರುದ್ಧದ ಮೂರನೇ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತು. ಆ ಮೂಲಕ ಸರಣಿಯನ್ನು ಆಸೀಸ್ ಜೀವಂತವಾಗಿರಿಸಿದೆ. ಮೂರನೇ ಪಂದ್ಯದ ಗೆಲುವಿನ ಜೊತೆಗೆ ಆಸ್ಟ್ರೇಲಿಯಾ ದಾಖಲೆಯನ್ನೂ ಬರೆದಿದೆ.
ಕೊನೆ ಓವರ್‌ನಲ್ಲಿ ಹೆಚ್ಚು ರನ್ ಸಿಡಿಸಿ ಪಂದ್ಯ ಗೆದ್ದ ದಾಖಲೆಯನ್ನು ಆಸೀಸ್ ಬರೆದಿದೆ. ಮಂಗಳವಾರದ ಮ್ಯಾಚ್‌ನಲ್ಲಿ ಆಸೀಸ್ 21 ರನ್‌ಗಳನ್ನು ಯಶಸ್ವಿಯಾಗಿ ಬೆನ್ನತ್ತಿತು.
2016 ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ 19 ರನ್ ಗಳಿಸಿತ್ತು. ಕಳೆದ ವರ್ಷದ ಪಲ್ಲೆಕೆಲೆ ಟಿ20ಐ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 19 ರನ್ ಗಳಿಸಿದ್ದು ಹಿಂದಿನ ಗರಿಷ್ಠವಾಗಿತ್ತು. ಕೊನೆ ಓವರ್‌ನಲ್ಲಿ ದಾಖಲಾಗಿದ್ದ ಅತಿ ಹೆಚ್ಚು ರನ್ ಇದಾಗಿತ್ತು. ಆ ದಾಖಲೆಯನ್ನು ಆಸ್ಟ್ರೇಲಿಯಾ ಪುಡಿಗಟ್ಟಿದೆ.
ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸೀಸ್‌ಗೆ ಭಾರತ 223 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿತು.
ಪ್ರಸಿದ್ಧ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್ ಎರಡನೇ ಎಸೆತದಲ್ಲಿ ಒಂದು ರನ್ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆತದಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆದರು. ಆ ಮೂಲಕ ಕೊನೆ ಓವರ್‌ನಲ್ಲಿ 23 ರನ್‌ಗಳು ಹರಿದುಬಂದವು.
ಗುವಾಹಟಿ: ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಸ್ಫೋಟಕ ಶತಕದ ನೆರವಿನಿಂದ ಆಸ್ಟ್ರೇಲಿಯಾ (Australia) ಭಾರತದ (Team India) ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ. 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿದೆ.
223 ರನ್‌ಗಳ ಕಠಿಣ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಮ್ಯಾಕ್ಸ್‌ವೆಲ್ ಬೌಂಡರಿ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 225 ರನ್ ಹೊಡೆಯುವ ಮೂಲಕ ಸರಣಿಯಲ್ಲಿ ಮೊದಲ ಜಯ ಸಾಧಿಸಿತು.
13.3 ಓವರ್‌ಗಳಲ್ಲಿ 134 ರನ್ ಗಳಿಸಿದ್ದಾಗ ಟಿಮ್ ಡೇವಿಡ್ ಶೂನ್ಯಕ್ಕೆ ಔಟಾದಾಗ ಪಂದ್ಯ ಸ್ವಲ್ಪ ಭಾರತದ ಕಡೆ ವಾಲಿತ್ತು. ಆದರೆ ಮುರಿಯದ 6ನೇ ವಿಕೆಟಿಗೆ ಮ್ಯಾಕ್ಸ್‌ವೆಲ್ ಮತ್ತು ನಾಯಕ ಮ್ಯಾಥ್ಯೂ ವೇಡ್ 40 ಎಸೆತಗಳಲ್ಲಿ 91 ರನ್ ಚಚ್ಚಿ ಪಂದ್ಯವನ್ನು ಭಾರತದಿಂದ ಕಸಿದುಕೊಂಡರು.
ಕೊನೆಯ 12 ಎಸೆತಗಳಲ್ಲಿ ಆಸ್ಟ್ರೇಲಿಯಾಗೆ 43 ರನ್ ಬೇಕಿತ್ತು. ಅಕ್ಷರ್ ಪಟೇಲ್ ಎಸೆದ ಮೊದಲ ಮೂರು ಎಸೆತಗಳಲ್ಲಿ 4,2,4 ರನ್ ಬಂದರೆ 4ನೇ ಎಸೆತ ನೋಬಾಲ್ ಆಗಿತ್ತು. ನಂತರ ಫ್ರಿ ಹಿಟ್ ಎಸೆತವನ್ನು ವೇಡ್ ಸಿಕ್ಸರ್‌ಗೆ ಅಟ್ಟಿದ್ದರು. ನಂತರ ವೇಡ್ ಸಿಂಗಲ್ ರನ್ ತೆಗೆದರೆ ಕೊನೆಯ ಎಸೆತವನ್ನು ಇಶನ್ ಕಿಶನ್ ಹಿಡಿಯದ ಕಾರಣ ಬೈ ಮೂಲಕ 4 ರನ್ ಆಸೀಸ್ ಖಾತೆಗೆ ಸೇರಿತು.
ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್‌ನಲ್ಲಿ 21 ರನ್ ಬೇಕಿತ್ತು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ ವೇಡ್ ಎರಡನೇ ಎಸೆತದಲ್ಲಿ ಒಂಟಿ ರನ್ ತೆಗೆದರು. ಮೂರನೇ ಎಸೆತವನ್ನು ಮ್ಯಾಕ್ಸ್‌ವೆಲ್ ಸಿಕ್ಸರ್‌ಗೆ ಅಟ್ಟಿದರು. ಕೊನೆಯ ಮೂರು ಎಸೆದತದಲ್ಲಿ ಹ್ಯಾಟ್ರಿಕ್ ಬೌಂಡರಿ ಹೊಡೆಯುವ ಮೂಲಕ ಮ್ಯಾಕ್ಸ್‌ವೆಲ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಆಸೀಸ್ ವಿರುದ್ಧ ಶತಕ ಸಿಡಿಸಿ ದಾಖಲೆ ಬರೆದ ಗಾಯಕ್‌ವಾಡ್
ಮ್ಯಾಕ್ಸ್‌ವೆಲ್ 28 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 47 ಎಸೆತದಲ್ಲಿ ಶತಕ ಸಿಡಿಸಿದರು. ಅಂತಿಮವಾಗಿ ಮ್ಯಾಕ್ಸ್‌ವೆಲ್ ಔಟಾಗದೇ 104 ರನ್(48 ಎಸೆತ, 8 ಬೌಂಡರಿ, 8 ಸಿಕ್ಸರ್) ಹೊಡೆದರೆ ವೇಡ್ ಔಟಾಗದೇ 28 ರನ್(16 ಎಸೆತ, 3 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಭಾರತ ತಂಡ ಇತರ ರೂಪದಲ್ಲಿ 15 ರನ್ (ಬೈ 4, ಲೆಗ್ ಬೈ 3, ನೋಬಾಲ್ 2 , ವೈಡ್ 6) ನೀಡಿತ್ತು. ಪ್ರಸಿದ್ಧ್ ಕೃಷ್ಣ 68 ರನ್ ನೀಡಿದರೆ ಅರ್ಶ್‌ದೀಪ್ ಸಿಂಗ್ 44 ರನ್ ನೀಡಿದರು. ರವಿ ಬಿಶ್ನೋಯಿ 32 ರನ್ ನೀಡಿ 2 ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 24 ರನ್‌ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿದ್ದರೂ ಗಾಯಕ್‌ವಾಡ್ ಸಿಡಿಸಿದ ಸ್ಫೋಟಕ ಶತಕದ ನೆರವಿನಿಂದ 3 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು.
ಮುಂಬೈ: ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಭರ್ಜರಿ ದ್ವಿಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ (Australia) ತಂಡವು ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್‌ಗಳ ಅಮೋಘ ಜಯ ಸಾಧಿಸಿದ್ದು, ವಿಶ್ವಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಪಂದ್ಯಗೆದ್ದು ಸೆಮೀಸ್ ಪ್ರವೇಶಿಸುವ ಆಸೆಯಲ್ಲಿದ್ದ ಅಫ್ಘಾನಿಸ್ತಾನ ತಂಡದ ಕನಸು ಭಗ್ನಗೊಂಡಿದೆ.
ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು, ಪವರ್ ಪ್ಲೇ ಮುಗಿಯುವಷ್ಟರಲ್ಲೇ 52 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರವೂ ಆಫ್ಘನ್ ಬೌಲರ್‌ಗಳು ಬೆಂಬಿಡದೇ ಆಸೀಸ್ ಮೇಲೆ ತಮ್ಮ ಪರಾಕ್ರಮ ಮುಂದುವರಿಸಿ 39 ರನ್‌ಗಳ ಅಂತರದಲ್ಲೇ ಇನ್ನೂ 7 ವಿಕೆಟ್‌ಗಳನ್ನ ಉಡೀಸ್ ಮಾಡಿದ್ದರು. ಇದು ಆಸ್ಟ್ರೇಲಿಯಾಗೆ ದೊಡ್ಡ ಆಘಾತವಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್ ಶೂನ್ಯ ಸುತ್ತಿದ್ದರು. ಡೇವಿಡ್ ವಾರ್ನರ್ 18 ರನ್, ಮಿಚೆಲ್ ಮಾರ್ಚ್ 24 ರನ್, ಮಾರ್ನಸ್ ಲಾಬುಶೇನ್ 14 ರನ್, ಮಾರ್ಕಸ್ ಸ್ಟೋಯ್ನಿಸ್ 6 ರನ್, ಮಿಚೆಲ್ ಸ್ಟಾರ್ಕ್ 3 ರನ್‌ಗಳಿಗೆ ವಿಕೆಟ್ ಕೈಚೆಲ್ಲಿದರು.
ಇದರಿಂದ ಆಸ್ಟ್ರೇಲಿಯಾ ತಂಡದ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮ್ಯಾಕ್ಸ್‌ವೆಲ್ ಏಕಾಂಗಿ ಹೋರಾಟದಿಂದ ಆಸೀಸ್ ತಂಡ ಅಮೋಘ ಜಯ ಸಾಧಿಸಿತು. ಮುರಿಯದ 8ನೇ ವಿಕೆಟ್‌ಗೆ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಜೋಡಿ 170 ಎಸೆತಗಳಲ್ಲಿ 202 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ತಡ ಸೇರಿಸಿದರು. ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 201 ರನ್ (10 ಸಿಕ್ಸರ್, 21 ಬೌಂಡರಿ) ಬಾರಿಸಿದ್ರೆ, ಪ್ಯಾಟ್ ಕಮ್ಮಿನ್ಸ್ 12 ರನ್ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: World Cup 2023: ಆಸೀಸ್ ವಿರುದ್ಧ ಹಲವು ದಾಖಲೆ ನಿರ್ಮಿಸಿದ ಅಫ್ಘಾನ್..!
40.2ನೇ ಓವರ್‌ನಲ್ಲಿ ಆಸೀಸ್ 237 ರನ್ ಗಳಿಸಿದ್ದಾಗ ಮ್ಯಾಕ್ಸ್‌ವೆಲ್‌ಗೆ ತೀವ್ರವಾಗಿ ಕಾಲುನೋವು ಕಾಣಿಸಿಕೊಂಡಿತ್ತು. ಅವರು ಮೈದಾನ ತೊರೆಯುವ ಸಂದರ್ಭ ಎದುರಾಗಿತ್ತು. ಆದ್ರೆ ತಂಡಕ್ಕಾಗಿ ಆಡಿಯೇ ತೀರುತ್ತೇನೆ ಎಂದು ನಿಂತ ಮ್ಯಾಕ್ಸಿ ದ್ವಿಶತಕ ಸಿಡಿಸುವ ಜೊತೆಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಜೊತೆಗೆ ಆಸ್ಟ್ರೇಲಿಯಾ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿ ಗಳಿಸಿದ್ದು, ಮಾತ್ರವಲ್ಲದೇ 48 ವರ್ಷಗಳ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ 5ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಮಾಡಿದರು. ಅಫ್ಘಾನಿಸ್ತಾನ ಪರ ನವೀನ್-ಉಲ್-ಹಕ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತರು.
ಇನ್ನೂ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ಮಾರಕ ಬೌಲರ್‌ಗಳ ಬೆವರಿಳಿಸಿದರು. ಅಫ್ಘಾನ್ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್, ಜವಾಬ್ದಾರಿಯುತ ಶತಕ ಸಿಡಿಸಿ, ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಅಫ್ಘಾನಿಸ್ತಾನದ ಆಟಗಾರನೊಬ್ಬ ಶತಕ ಸಿಡಿಸಿದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವಕಪ್ ಕ್ರಿಕೆಟ್‌ನಲ್ಲೇ ಅಫ್ಘಾನಿಸ್ತಾನ ತಂಡ ಗಳಿಸಿದ ಅತ್ಯಧಿಕ ಸ್ಕೋರ್ ಇದಾಗಿತ್ತು. ಇದನ್ನೂ ಓದಿ: ಕ್ರಿಕೆಟ್ ಆಡಬೇಕಂದ್ರೆ ಕೀಳು ಮನಸ್ಥಿತಿಯಿಂದ ಹೊರಬನ್ನಿ – ಶಕೀಬ್ ವಿರುದ್ಧ ಮಾಥ್ಯೂಸ್ ಕೆಂಡ
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಒಂದೆಡೆ ವಿಕೆಟ್ ಕಳೆದುಕೊಂಡರೂ ಜವಾಬ್ದಾರಿಯುತ ರನ್ ಕಲೆಹಾಕುತ್ತಾ ಸಾಗಿತು. ಆದ್ರೆ ಕೊನೆಯಲ್ಲಿ ರಶೀದ್ ಖಾನ್ ಮತ್ತು ಜದ್ರಾನ್ ಅವರ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ತಂಡದ ಮೊತ್ತ 300ರ ಗಡಿ ಸಮೀಪಿಸಿತು. ಅಫ್ಘಾನಿಸ್ತಾನದ ಪರ ಇಬ್ರಾಹಿಂ ಜದ್ರಾನ್ 129 ರನ್ (143 ಎಸೆತ, 3 ಸಿಕ್ಸರ್, 8 ಬೌಂಡರಿ), ರಶೀದ್ ಖಾನ್ 35 ರನ್ (18 ಎಸೆತ, 3 ಸಿಕ್ಸರ್, 2 ಬೌಂಡರಿ ಗಳಿಸಿ ಅಜೇಯರಾಗಿ ಉಳಿದರೆ, ರಹಮಾನುಲ್ಲಾ ಗುರ್ಬಾಜ್ 21 ರನ್. ರಹಮತ್ ಶಾ 30 ರನ್, ಹಸ್ಮತುಲ್ಲಾ ಶಾಹಿದಿ 26 ರನ್, ಅಜ್ಮತುಲ್ಲಾ ಒಮರ್ಜಾಯ್ 22 ರನ್, ಮೊಹಮ್ಮದ್ ನಬಿ 12 ರನ್ ಗಳಿಸಿ ಔಟಾದರು.
ಆಸೀಸ್ ಪರ 9 ಓವರ್‌ನಲ್ಲಿ 70 ರನ್ ಬಿಟ್ಟುಕೊಟ್ಟ ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ 2 ವಿಕೆಟ್, ಗ್ಲೇನ್ ಮ್ಯಾಕ್ಸ್‌ವೆಲ್ ಮತ್ತು ಆಡಂ ಝಂಪಾ ತಲಾ ಒಂದೊಂದು ವಿಕೆಟ್ ಪಡೆದರು.
ಅಹಮದಾಬಾದ್: ಇದೇ ನವೆಂಬರ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಿಂದ ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಹೊರಗುಳಿದಿದ್ದಾರೆ.
ಗಾಲ್ಫ್ ಕಾರ್ಟ್‌ನಲ್ಲಿ (Golf Cart) (ಗಾಲ್ಫ್ ಕೋರ್ಟ್‌ನಲ್ಲಿ ಬಳಸುವ ವಾಹನ) ಕ್ಲಬ್‌ಹೌಸ್‌ನಿಂದ ಹೋಟೆಲ್‌ಗೆ ಹಿಂದಿರುಗುತ್ತಿದ್ದ ವೇಳೆ ಮ್ಯಾಕ್ಸ್‌ವೆಲ್ ಕಾರ್ಟ್‌ನಿಂದ ಸ್ಲಿಪ್‌ಆಗಿ ಬಿದ್ದಿದ್ದಾರೆ. ಇದರಿಂದ ತಲೆಗೆ ಪೆಟ್ಟಾಗಿದ್ದು, ತೀವ್ರ ನೋವನುಭವಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಅವರಿಗೆ ವಿಶ್ರಾಂತಿ ಬೇಕಿರುವುದರಿಂದ ಇಂಗ್ಲೆಂಡ್ (England) ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಆಂಡ್ರ‍್ಯೂ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.
ಸದ್ಯ ಸೆಮಿಫೈನಲ್‌ಗೆ ಸನಿಹದಲ್ಲಿರುವ ಆಸೀಸ್, ಇಂಗ್ಲೆಂಡ್ ವಿರುದ್ಧ ಮ್ಯಾಕ್ಸ್‌ವೆಲ್ ಬದಲಿಗೆ ಕ್ಯಾಮರೂನ್ ಗ್ರೀನ್ (Cameron Green) ಅಥವಾ ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಅವರನ್ನು ಕಣಕ್ಕಿಳಿಸುವ ಪ್ಲ್ಯಾನ್ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೀಂ ಇಂಡಿಯಾ ಗೆದ್ದರೂ ಪಟಾಕಿ ಸಿಡಿಸುವಂತಿಲ್ಲ – BCCI ಪಟಾಕಿ ಬ್ಯಾನ್ ಮಾಡಿದ್ದೇಕೆ?
ಇತ್ತೀಚೆಗೆ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಕ್ಸಿ 40 ಎಸೆತಗಳಲ್ಲೇ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಕೊನೆಯದ್ದಾಗಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 24 ಎಸೆತಗಳಲ್ಲಿ 41 ರನ್ ಬಾರಿಸಿದ್ದರು. ಇದನ್ನೂ ಓದಿ: ಕಿಂಗ್ ಕೊಹ್ಲಿ, ರೋಹಿತ್ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?
ಈವರೆಗೆ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿರುವ ಆಸೀಸ್ 8 ಅಂಕಗಳು, +0.970 ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶಿಸಲು ಇನ್ನೂ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಮ್ಯಾಕ್ಸ್‌ವೆಲ್ ಬದಲಿಗೆ ಮತ್ತೊಬ್ಬ ಆಲ್‌ರೌಂಡರ್‌ನನ್ನ ಕಣಕ್ಕಿಳಿಸುವ ಪ್ಲ್ಯಾನ್ ಮಾಡಿದೆ.
ನವದೆಹಲಿ: ವಿಶ್ವಕಪ್ ಕ್ರಿಕೆಟ್ (World Cup Cricket) ಪಂದ್ಯದ ವೇಳೆ ಆಯೋಜನೆಗೊಂಡಿರುವ ಲೈಟ್ ಶೋಗೆ ಆಸ್ಟ್ರೇಲಿಯಾದ (Australia) ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಅಸಮಾಧಾನ ಹೊರ ಹಾಕಿದ್ದಾರೆ.
ನೆದರ್ಲೆಂಡ್ಸ್ (Netherlands) ವಿರುದ್ಧ ವೇಗದ ಶತಕ ಸಿಡಿಸಿದ ನಂತರ ಪ್ರತಿಕ್ರಿಯಿಸಿದ ಅವರು, ಲೈಟ್ ಶೋ (Light Show) ನನಗೆ ತಲೆನೋವು ತಂದಿತ್ತು. ನನ್ನ ಕಣ್ಣುಗಳು ಮರುಹೊಂದಿಸಲು ನನಗೆ ಸ್ವಲ್ಪ ಸಮಯ ಬೇಕಾಗಿತ್ತು ಎಂದು ಹೇಳಿದರು.
ನೆದರ್ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ 309 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 399 ರನ್ ಹೊಡೆದರೆ ನೆದರ್ಲೆಂಡ್ಸ್ 309 ರನ್‌ಗಳಿಗೆ ಆಲೌಟ್ ಆಗಿತ್ತು.
ಗ್ಲೇನ್ ಮ್ಯಾಕ್ಸ್‌ವೆಲ್ 27 ಎಸೆತಗಳಲ್ಲಿ 50 ರನ್ ಹೊಡೆದಿದ್ದರೆ ನಂತರ ಕೇವಲ 13 ಎಸೆತಗಳಲ್ಲಿ 50 ರನ್ ಚಚ್ಚಿದ್ದರು. ಅಂತಿಮವಾಗಿ ಮ್ಯಾಕ್ಸ್‌ವೆಲ್ 106 ರನ್ (44 ಎಸೆತ, 9 ಬೌಂಡರಿ, 8 ಸಿಕ್ಸರ್) ಹೊಡೆದು ಔಟಾದರು.
ನವದೆಹಲಿ: ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಶರವೇಗದ ಶತಕ ಸಿಡಿಸುವ ಮೂಲಕ ಏಕದಿನ ವಿಶ್ವಕಪ್ (World Cup 2023) ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೇವಲ 40 ಬಾಲ್‌ಗಳಿಗೆ ಮಿಂಚಿನ ಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವಕಪ್ 2023 ಟೂರ್ನಿಯ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಮಿಂಚಿನ ಬ್ಯಾಟಿಂಗ್ ನಡೆಸಿದರು. ನೆದರ್ಲೆಂಡ್ಸ್ ಬೌಲರ್‌ಗಳನ್ನು ಚೆಂಡಾಡಿದ ಮ್ಯಾಕ್ಸ್‌ವೆಲ್, ಕೇವಲ 40 ಬಾಲ್‌ಗಳಿಗೆ ಶತಕ ಸಿಡಿಸಿದರು. 8 ಫೋರ್ ಮತ್ತು 8 ಸಿಕ್ಸರ್ ಬಾರಿಸುವ ಮೂಲಕ ಶರವೇಗದಲ್ಲಿ ಶತಕ ದಾಖಲಿಸಿದರು. ಇದನ್ನೂ ಓದಿ: ಇಂಗ್ಲೆಂಡ್ ಪಂದ್ಯದಿಂದಲೂ ಔಟ್ – ಪಾಂಡ್ಯಗೆ ಗಾಯ ಗಂಭೀರ ಸ್ವರೂಪದ್ದು
ವಿಶ್ವಕಪ್ ಇತಿಹಾಸದಲ್ಲೇ ಅತೀ ಕಡಿಮೆ ಬಾಲ್‌ಗಳಿಗೆ ಶತಕ ಸಿಡಿಸಿದ ಆಟಗಾರನಾಗಿ ಮ್ಯಾಕ್ಸ್‌ವೆಲ್ ಹೊರಹೊಮ್ಮಿದ್ದಾರೆ. ಶ್ರೀಲಂಕಾ ವಿರುದ್ಧ 49 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ದ.ಆಫ್ರಿಕಾ ತಂಡದ ಏಡೆನ್ ಮಾರ್ಕ್ರಾಮ್ ಅವರ ದಾಖಲೆಯನ್ನು ಮ್ಯಾಕ್ಸ್‌ವೆಲ್ ಬ್ರೇಕ್ ಮಾಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ, ನೆದರ್ಲೆಂಡ್ಸ್‌ಗೆ 400 ರನ್‌ಗಳ ಗುರಿ ನೀಡಿದೆ. 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 399 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರವಾಗಿ ಡೇವಿಡ್ ವಾರ್ನರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಶತಕ ಸಿಡಿಸಿದ್ದಾರೆ. ಇದನ್ನೂ ಓದಿ: World Cup 2023: ಡಿಕಾಕ್ ಡಿಚ್ಚಿಗೆ ಬಾಂಗ್ಲಾ ಬರ್ನ್ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು
ಅಬ್ಬರದ ಬ್ಯಾಟಿಂಗ್ ನಡೆಸಿದ ಡೇವಿಡ್ ವಾರ್ನರ್ 93 ಬಾಲ್‌ಗಳಿಗೆ 104 ರನ್ (11 ಫೋರ್, 3 ಸಿಕ್ಸರ್) ಬಾರಿಸಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ 44 ಬಾಲ್‌ಗಳಿಗೆ 106 ರನ್ ಸಿಡಿಸಿ (9 ಫೋರ್, 8 ಸಿಕ್ಸರ್) ಸಿಡಿಸಿ ಮಿಂಚಿದ್ದಾರೆ.