Tag: Glenn Maxwell

  • ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

    ಏಕದಿನಕ್ಕೆ ಆಸೀಸ್‌ ಆಲ್‌ರೌಂಡರ್‌ ಮ್ಯಾಕ್ಸ್‌ವೆಲ್‌ ದಿಢೀರ್‌ ನಿವೃತ್ತಿ

    ಮೆಲ್ಬರ್ನ್‌: ಆಸ್ಟ್ರೇಲಿಯಾದ (Australia) ಆಲ್‌ರೌಂಡರ್ 36 ವರ್ಷದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ (ODI cricket) ನಿವೃತ್ತಿ ಹೇಳಿದ್ದಾರೆ.

    2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 world Cup) ಗಮನದಲ್ಲಿಟ್ಟುಕೊಂಡು ಫೈನಲ್ ವರ್ಡ್ ಪಾಡ್‌ಕ್ಯಾಸ್ಟ್‌ನಲ್ಲಿ ಮ್ಯಾಕ್ಸ್‌ವೆಲ್‌ ಮಹತ್ವದ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

    2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್ ಸೋತಿತ್ತು. ಈ ಸೋಲಿನ ನಂತರ ಮಾಜಿ ನಾಯಕ ಸ್ವೀವ್‌ಸ್ಮಿತ್‌ ಏಕದಿನ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದರು. ಈಗ ಅವರ ಸಾಲಿಗೆ ಮ್ಯಾಕ್ಸ್‌ವೆಲ್‌ ಸೇರಿದ್ದಾರೆ. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

    ಮ್ಯಾಕ್ಸ್‌ವೆಲ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿಲ್ಲ. ಆದರೆ ಕೊನೆಯ ಬಾರಿಗೆ ಮ್ಯಾಕ್ಸ್‌ವೆಲ್‌ ಟೆಸ್ಟ್‌ ಆಡಿದ್ದು 2017 ರಲ್ಲಿ. ನಂತರ ಅವರು ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಆಗಿಲ್ಲ.

    ಒಟ್ಟು 149 ಏಕದಿನ ಪಂದ್ಯವಾಡಿರುವ ಮ್ಯಾಕ್ಸ್‌ವೆಲ್‌ 136 ಇನ್ನಿಂಗ್ಸ್‌ಗಳಿಂದ 33.81 ಸರಾಸರಿಯಲ್ಲಿ 3,990 ರನ್‌ ಹೊಡೆದಿದ್ದಾರೆ. ಈ ಆಟದಲ್ಲಿ 4 ಶತಕ, 23 ಅರ್ಧಶತಕ ಬಾರಿಸಿದ್ದಾರೆ. 77 ವಿಕೆಟ್‌ ಪಡೆದಿದ್ದಾರೆ.

    ಮ್ಯಾಕ್ಸ್‌ವೆಲ್‌ ಹಲವು ನೆನಪಿನಲ್ಲಿ ಉಳಿಯುವ ಆಟವಾಡಿದ್ದಾರೆ. 2023ರ ವಿಶ್ವಕಪ್‌ನ ಮುಂಬೈನಲ್ಲಿ ನಡೆದ ಲೀಗ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 5 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿತ್ತು. ನಂತರ ಬ್ಯಾಟ್‌ ಬೀಸಿದ್ದ ಆಸ್ಟ್ರೇಲಿಯಾ 91 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮುರಿಯದ 8ನೇ ವಿಕೆಟಿಗೆ ಮ್ಯಾಕ್ಸ್‌ವೆಲ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ 170 ಎಸೆತಗಳಲ್ಲಿ 202 ರನ್‌ ಜೊತೆಯಾಟವಾಡಿದ್ದರು. ಈ ಪಂದ್ಯದಲ್ಲಿ ಮ್ಯಾಕ್ಸ್‌ ಔಟಾಗದೇ 201 ರನ್‌(128 ಎಸೆತ, 21 ಬೌಂಡರಿ, 10 ಸಿಕ್ಸ್‌ ) ಸಿಡಿಸಿದ್ದರು.

    ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಮ್ಯಾಕ್ಸ್‌ವೆಲ್‌ 8 ಪಂದ್ಯಗಳಿಂದ 48 ರನ್‌ ಹೊಡೆದಿದ್ದರು. ಪಂದ್ಯದ ಮಧ್ಯೆ ಕೈ ಬೆರಳಿಗೆ ಗಾಯವಾಗಿದ್ದರಿಂದ ಮ್ಯಾಕ್ಸ್‌ವೆಲ್‌ ತಂಡವನ್ನು ತೊರೆದಿದ್ದರು.

  • ʻನೀವು ಮದ್ವೆ ಆಗ್ಲಿಲ್ಲ ಅಂತ ಮ್ಯಾಕ್ಸಿ ಚೆನ್ನಾಗಿ ಆಡ್ತಿಲ್ಲʼ – ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್‌

    ʻನೀವು ಮದ್ವೆ ಆಗ್ಲಿಲ್ಲ ಅಂತ ಮ್ಯಾಕ್ಸಿ ಚೆನ್ನಾಗಿ ಆಡ್ತಿಲ್ಲʼ – ಕಾಮೆಂಟ್‌ ಮಾಡಿದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್‌

    ಪಂಜಾಬ್ ಕಿಂಗ್ಸ್ (Punjab Kings) ತಂಡದ ಸಹ ಮಾಲೀಕರೂ ಆಗಿರುವ ಬಾಲಿವುಡ್ ನಟಿ ಪ್ರೀತಿ ಝಿಂಟಾ (Preity G Zinta) ವೈಯಕ್ತಿಕ ಬದುಕಿನ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.

    ಪ್ರೀತಿ ಝಿಂಟಾ ತಮ್ಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಸೆಷನ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಪಂಜಾಬ್‌ ಕಿಂಗ್ಸ್‌ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಬಗ್ಗೆ ಮಾಡಿದ ಕಾಮೆಂಟ್ ಸಂಚಲನ ಸೃಷ್ಟಿಸಿದೆ. ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಯಿಂದ ಬೇಸರಗೊಂಡ ನಟಿ ಎಕ್ಸ್‌ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್ ಬಣ್ಣದ ಬದುಕಿಗೆ 12 ವರ್ಷ- ಶುಭಕೋರಿದ ದರ್ಶನ್

    ಪ್ರಶ್ನೆ ಕೇಳುವ ಸೆಷನ್‌ ವೇಳೆ ನೆಟ್ಟಿಗರೊಬ್ಬರು, ʻಸತತ ಕಳಪೆ ಪ್ರದರ್ಶನದಿಂದಾಗಿ ಪ್ರೀತಿ, ಮ್ಯಾಕ್ಸ್‌ವೆಲ್‌ರನ್ನ ಮದುವೆಯಾಗುತ್ತಿಲ್ಲʼ ಎಂದು ಕಾಲೆಳೆದಿದ್ದರು. ಮತ್ತೊಬ್ಬರು ʻಮೇಡಂ ನೀವು ಮ್ಯಾಕ್ಸ್‌ವೆಲ್‌ ಅವರನ್ನ ಮದುವೆಯಾಗ್ಲಿಲ್ಲ (Marriage), ಅದಕ್ಕಾಗಿ ಅವರು ನಿಮ್ಮ ತಂಡದಲ್ಲಿ ಚೆನ್ನಾಗಿ ಆಡ್ತಿಲ್ಲʼ ಎಂದು ಕಾಮೆಂಟ್‌ ಮಾಡಿದ್ದರು. ಇದರಿಂದ ಕೆರಳಿದ ನೆಟ್ಟಿಗರನ್ನ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ತಮಿಳಿನತ್ತ ಕೋಮಲ್- ರಗಡ್ ಲುಕ್‌ನಲ್ಲಿ ಕನ್ನಡದ ನಟ

    ʻನೀವು ಎಲ್ಲಾ ಫ್ರಾಂಚೈಸಿಗಳ ಮಾಲೀಕರಿಗೂ ಇದೇ ರೀತಿ ಕೇಳ್ತೀರಾ? ಅಥವಾ ಮಹಿಳೆಯರಿಗೆ ಮಾತ್ರ ಮಾಡುತ್ತಿರುವ ತಾರತಮ್ಯವಾ? ನಾನು ಕ್ರಿಕೆಟ್‌ ಫ್ರಾಂಚೈಸಿಗೆ ಬರುವವರೆಗೂ ಕಾರ್ಪೋರೇಟ್‌ ವ್ಯವಸ್ಥೆಗಳಲ್ಲಿ ಮಹಿಳೆಯರು ಬದುಕುವುದು ಎಷ್ಟು ಕಷ್ಟ ಅಂತ ಗೊತ್ತಿರಲಿಲ್ಲ. ನೀವು ಹಾಸ್ಯದಿಂದ ಈ ಪ್ರಶ್ನೆ ಕೇಳಿದ್ದೀರಿ ಅಂದುಕೊಳ್ತೀನಿ.. ಆದ್ರೆ, ಒಮ್ಮೆ ಅದನ್ನ ನೀವೇ ನೋಡಿ, ಏನು ಕೇಳ್ತಾ ಇದ್ದೀರಿ ಅನ್ನೋದು ಅರ್ಥವಾಗುತ್ತೆ, ಇದೆಲ್ಲ ಒಳ್ಳೆಯದಲ್ಲ. ಕಳೆದ 18 ವರ್ಷಗಳಿಂದಲೂ ಬಹಳ ಕಷ್ಟಪಟ್ಟು ಒಂದೊಂದೇ ಹಂತಗಳನ್ನು ದಾಟಿ ಇಲ್ಲಿಗೆ ಬಂದಿದ್ದೇನೆ. ಈ ರೀತಿ ತಾರತಮ್ಯ ಮಾಡುವುದು ಹಾಗೂ ಅಗೌರವ ತೋರಿಸುವ ಹೇಳಿಕೆ ನೀಡೋದನ್ನ ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

    Preity Zinta

    ಮದುವೆ ಬಳಿಕ ವಿದೇಶದಲ್ಲಿ ನೆಲೆಸಿರುವ ಪ್ರೀತಿ ಝಿಂಟಾ ಐಪಿಎಲ್ ಸಂದರ್ಭದಲ್ಲಿ ಮಾತ್ರ ಭಾರತದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ಸೆಲ್ಫಿ- ಡೇಟಿಂಗ್ ಬಗ್ಗೆ ಹಿಂಟ್ ಕೊಟ್ರಾ ಈ ಜೋಡಿ?

    2012ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಿದ ಆಸ್ಟ್ರೇಲಿಯಾ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಈವರೆಗೆ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ತಂಡಗಳಲ್ಲಿ ಆಡಿದ್ದಾರೆ. 2013 ರಿಂದ 2016ರ ಆವೃತ್ತಿಯಲ್ಲಿ ಮ್ಯಾಕ್ಸಿ ಪಂಜಾಬ್‌ ಕಿಂಗ್ಸ್‌ ಪರ ಭರ್ಜರಿ ಪ್ರದರ್ಶನ ನೀಡಿದ್ದರು. ಆದ್ರೆ 2017ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಫ್ರಾಂಚೈಸಿ ಅವರನ್ನು ಕೈಬಿಟ್ಟಿತ್ತು. 2021ರಿಂದ ಆರ್‌ಸಿಬಿ ಪರ ಆಡ್ತಿದ್ದ ಮ್ಯಾಕ್ಸ್‌ವೆಲ್‌ ಅವರ ಅದ್ಭುತ ಪ್ರದರ್ಶನ ಕಂಡು ಪಂಜಾಬ್‌ 2025ರ ಆವೃತ್ತಿಗೆ ಮತ್ತೆ ಅವರನ್ನ ಖರೀದಿ ಮಾಡಿತ್ತು. ಇದೀಗ ಈ ಆವೃತ್ತಿಯಲ್ಲಿ ಅವರ ಕಳಪೆ ಪ್ರದರ್ಶನದಿಂದ ಫ್ರಾಂಚೈಸಿ ಪ್ಲೇಯಿಂಗ್‌ -11 ನಿಂದಲೇ ಕೈಬಿಟ್ಟಿದೆ.

  • ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

    ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

    -ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಗ್ಲೆನ್

    ಚಂಡೀಗಢ: ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (Glenn Maxwell) ಐಪಿಎಲ್ (IPL) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ (BCCI) ಪಂದ್ಯದ ಶೇ.25 ರಷ್ಟು ದಂಡ ವಿಧಿಸಿದೆ.

    ಏ.8 ರಂದು ಪಂಜಾಬ್‌ನ (Punjab) ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ  ಕ್ರೀಡಾಂಗಣದಲ್ಲಿ (Maharaja Yadavindra Singh International Cricket Stadium) ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಪಂಜಾಬ್ ಕಿಂಗ್ಸ್ (Punjab Kings) ನಡುವೆ ನಡೆದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್‌ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆ ಬಿಸಿಸಿಐ ಪಂದ್ಯದ ಶೇ.25 ರಷ್ಟು ಶುಲ್ಕ ಪಾವತಿಸುವಂತೆ ದಂಡ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಿದ್ದು, ಈ ಸೀಸನ್‌ನಲ್ಲಿ ದಂಡಕ್ಕೆ ಒಳಗಾದ ಆರನೇ ಆಟಗಾರರಾಗಿದ್ದಾರೆ.ಇದನ್ನೂ ಓದಿ: ಆರ್ಯನ ಆರ್ಭಟಕ್ಕೆ ಚೆನ್ನೈ ಉಡೀಸ್; ಪಂಜಾಬ್‌ಗೆ 18 ರನ್‌ಗಳ ಜಯ

    ನೀತಿ ಸಂಹಿತೆ ಉಲ್ಲಂಘಿಸಿದ ಕುರಿತು ಬಿಸಿಸಿಐ ನಿರ್ದಿಷ್ಟ ಕಾರಣ ತಿಳಿಸಿಲ್ಲವಾದರೂ, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಹಾಗೂ ಮ್ಯಾಚ್ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಇದೇ ರೀತಿ ಅಪರಾಧ ಮಾಡಿದ್ದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧದ ಪಂದ್ಯದ ಸಮಯದಲ್ಲಿ ಗುಜರಾತ್ ಟೈಟಾನ್ಸ್ (Gujrat Titans) ಆಟಗಾರ ಇಶಾಂತ್ ಶರ್ಮಾಗೆ (Ishant Sharma) ದಂಡ ವಿಧಿಸಲಾಗಿತ್ತು.

    ಐಪಿಎಲ್ ನೀತಿ ಸಂಹಿತೆಯ ಪ್ರಕಾರ, ಆರ್ಟಿಕಲ್ 2.2ರ ಅಡಿಯಲ್ಲಿ ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ಗ್ರೌಂಡ್ ಉಪಕರಣಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗಪಡಿಸಿಕೊಂಡರೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ ಉದ್ದೇಶಪೂರ್ವಕವಾಗಿ ವಿಕೆಟ್‌ಗಳನ್ನು ಹೊಡೆಯುವುದು ಅಥವಾ ಒದೆಯುವುದು ಮತ್ತು ಅಜಾಗರೂಕತೆಯಿಂದ ಅಥವಾ ನಿರ್ಲಕ್ಷ್ಯದಿಂದ ಜಾಹೀರಾತು ಫಲಕಗಳು, ಡ್ರೆಸ್ಸಿಂಗ್ ಕೋಣೆಯ ಬಾಗಿಲು, ಕನ್ನಡಿ, ಕಿಟಕಿಗಳು ಮತ್ತು ಇತರ ನೆಲೆವಸ್ತುಗಳು ಮತ್ತು ಫಿಟ್ಟಿಂಗ್‌ಗಳಿಗೆ ಹಾನಿಯನ್ನುಂಟುಮಾಡುವುದು ಮತ್ತು ಆಟಗಾರನು ಹತಾಶೆಯಿಂದ ಬ್ಯಾಟ್‌ನ್ನು ತೀವ್ರವಾಗಿ ಬೀಸಿ ಹಾನಿಯನ್ನುಂಟು ಮಾಡಿದಾಗ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ.

    ಈ ಸೀಸನ್‌ನಲ್ಲಿ ದಿಗ್ವೇಶ್ ಸಿಂಗ್, ರಿಷಬ್ ಪಂತ್ ಮತ್ತು ರಿಯಾನ್ ಪರಾಗ್ ಸೇರಿದಂತೆ ಹಲವಾರು ಆಟಗಾರರಿಗೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹಾಗೂ ನಿಧಾನಗತಿಯ ಓವರ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ.

    ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 18 ರನ್‌ಗಳ ರೋಚಕ ಗೆಲುವು ಸಾಧಿಸಿದ್ದು, ಮೊದಲ ಬ್ಯಾಟಿಂಗ್ ಮಾಡಿದ್ದ ಪಂಜಾಬ್ 219 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 201 ರನ್ ಗಳಿಸಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್‌ ಅವರ ಬೌಲಿಂಗ್ ಅಬ್ಬರದಿಂದ ಸಿಎಸ್‌ಕೆ ಸೋಲುವಲ್ಲಿ ಕಾರಣವಾಯಿತು. ಸಿಎಸ್‌ಕೆ ವಿರುದ್ಧದ ಗೆಲುವಿನೊಂದಿಗೆ ಪಿಬಿಕೆಎಸ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಈ ಸೀಸನ್‌ನಲ್ಲಿ ಸತತ ನಾಲ್ಕನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಸ್ಫೋಟಕ ಶತಕ – ಎಬಿಡಿ, ಕೊಹ್ಲಿ ದಾಖಲೆ ಪುಡಿಗಟ್ಟಿದ 24ರ ಯುವಕ

  • ಡಕೆಟ್‌, ರೂಟ್‌ ಶತಕದ ಜೊತೆಯಾಟ – ಗರಿಷ್ಠ ರನ್‌ ದಾಖಲೆ, ಆಸೀಸ್‌ ಗೆಲುವಿಗೆ 352 ರನ್‌ ಗುರಿ

    ಡಕೆಟ್‌, ರೂಟ್‌ ಶತಕದ ಜೊತೆಯಾಟ – ಗರಿಷ್ಠ ರನ್‌ ದಾಖಲೆ, ಆಸೀಸ್‌ ಗೆಲುವಿಗೆ 352 ರನ್‌ ಗುರಿ

    ಲಾಹೋರ್: ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿರುವ ಇಂಗ್ಲೆಂಡ್‌ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 351 ರನ್‌ ಗಳಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ 352 ರನ್‌ಗಳ ಬೃಹತ್‌ ಮೊತ್ತದ ಗುರಿ ನೀಡಿದೆ. ಅಲ್ಲದೇ ಚಾಂಪಿಯನ್ಸ್‌ ಟ್ರೋಫಿ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಅತಿಹೆಚ್ಚು ರನ್‌ ಕೂಡ ಇದಾಗಿದೆ.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 5.2 ಓವರ್‌ಗಳಲ್ಲೇ 43 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಪ್ಯಾಟ್‌ ಕಮ್ಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್ವುಡ್‌ ಅವರಂತಹ ದೈತ್ಯ ಬೌಲರ್‌ಗಳಿಲ್ಲದೇ ಅನೇಕ ಹೊಸಬರೊಂದಿಗೆ ಕಣಕ್ಕಿಳಿದ ಆಸೀಸ್‌ ಸ್ಪರ್ಧಾತ್ಮಕ ಪೈಪೋಟಿ ನೀಡುವ ನಿರೀಕ್ಷೆ ಹೆಚ್ಚಿಸಿತ್ತು. ಆದ್ರೆ 3ನೇ ವಿಕೆಟ್‌ಗೆ ಜೊತೆಯಾದ ಬೆನ್‌ ಡಕೆಟ್‌ ಹಾಗೂ ಜೋ ರೂಟ್‌ ಶತಕದ ಜೊಯಾಟ ನೀಡುವ ಮೂಲಕ ಇಂಗ್ಲೆಂಡ್‌ಗೆ ಜೀವ ತುಂಬಿದರು.

    ಡಕೆಟ್, ರೂಟ್‌ ಶತಕದ ಜೊತೆಯಾಟ:
    ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ ಈ ಜೋಡಿ 155 ಎಸೆತಗಳಲ್ಲಿ 158 ರನ್‌ಗಳ ಜೊತೆಯಾಟ ನೀಡಿತು. ರೂಟ್‌ 78 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 68 ರನ್‌ ಗಳಿಸಿ ಔಟಾದರು. ಆ ಬಳಿಕವೂ ಘಾತುಕ ದಾಳಿ ನಡೆಸಿದ ಬೆನ್‌ ಡಕೆಟ್‌ ಆಸೀಸ್‌ ಬೌಲರ್‌ಗಳನ್ನು ಚೆನ್ನಾಗಿ ಬೆಂಡೆತ್ತಿದರು. ಕೊನೆಯವರೆಗೂ ಹೋರಾಡಿದ ಡಕೆಟ್‌ 143 ಎಸೆತಗಳಲ್ಲಿ 165 ರನ್‌ (17 ಬೌಂಡರಿ, 3 ಸಿಕ್ಸರ್) ಗಳಿಸಿ ಔಟಾದರು. ಇದರೊಂದಿಗೆ ನಾಯಕ ಜೋಸ್‌ ಬಟ್ಲರ್‌ 23 ರನ್‌, ಜೋಫ್ರಾ ಆರ್ಚರ್‌ 21 ರನ್‌, ಲಿಯಾಮ್‌ ಲಿವಿಂಗ್‌ಸ್ಟನ್‌14 ರನ್‌, ಜೇಮಿ ಸ್ಮಿತ್‌ 15 ರನ್‌, ಫಿಲ್‌ ಸಾಲ್ಟ್‌ 10 ರನ್‌ಗಳ ಕೊಡುಗೆ ನೀಡಿದರು.

    ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅತಿಹೆಚ್ಚು ರನ್‌ಗಳಿಸಿದ ಟೀಮ್‌ಗಳು
    * 351/8 – ಇಂಗ್ಲೆಂಡ್ – ಲಾಹೋರ್ – 2025
    * 347/4 – ನ್ಯೂಜಿಲೆಂಡ್ – ದಿ ಓವಲ್ – 2004
    * 338/4 – ಪಾಕಿಸ್ತಾನ – ಓವಲ್ – 2017
    * 331/7 – ಭಾರತ – ಕಾರ್ಡಿಫ್ – 2013
    * 323/8 – ಇಂಗ್ಲೆಂಡ್ – ಸೆಂಚುರಿಯನ್ – 2009
    * 322/3 – ಶ್ರೀಲಂಕಾ – ದಿ ಓವಲ್ – 2017

    ಇನ್ನೂ ಆಸ್ಟ್ರೇಲಿಯಾ ಪರ ಬೆನ್ ದ್ವಾರ್ಶುಯಿಸ್ 3 ವಿಕೆಟ್‌ ಕಿತ್ತರೆ, ಮಾರ್ನಸ್‌ ಲಾಬುಶೇನ್‌, ಆಡಂ ಝಂಪಾ ತಲಾ 2 ವಿಕೆಟ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ 1 ವಿಕೆಟ್‌ ಪಡೆದರು.

  • ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ಕ್ಯಾನ್ಬೆರಾ: ಇಲ್ಲಿನ ಪರ್ತ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ (Pakistan) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ. ಜೊತೆಗೆ ಕಳೆದ 22 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಪಾಕ್‌, ಆಸ್ಟ್ರೇಲಿಯಾದಲ್ಲಿ ಸರಣಿಗೆದ್ದ ಸಾಧನೆ ಮಾಡಿದೆ. ಇದು ನೂತನ ಕ್ಯಾಪ್ಟನ್‌ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅವರ ನಾಯಕತ್ವದಲ್ಲಿ ಗೆದ್ದ ಮೊದಲ ಸರಣಿಯೂ ಆಗಿದೆ. ಕೊನೆಯದ್ದಾಗಿ 2002ರಲ್ಲಿ ಪಾಕ್‌ ಆಸೀಸ್‌ ನೆಲದಲ್ಲಿ ಸರಣಿ ಗೆದ್ದಿತ್ತು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ -‌ ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು

    141 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ಪಾಕ್‌ ಬ್ಯಾಟರ್‌ಗಳು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಪಾಕ್ ‌84 ರನ್‌ಗಳ ಜೊತೆಯಾಟ ನೀಡಿತ್ತು. ಆರಂಭಿಕರ ವಿಕೆಟ್‌ ಪತನವಾದ ಬಳಿಕ ಕ್ರೀಸ್‌ಗಿಳಿದ ನಾಯಕ ಮೊಹಮ್ಮದ್‌ ರಿಜ್ವಾನ್‌ ಮತ್ತು ಬಾಬರ್‌ ಆಜಂ ಜೋಡಿ ವಿಕೆಟ್‌ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಪಾಕ್‌ ಪರ ಸೈಮ್‌ ಅಯೂಬ್‌ 42 ರನ್‌, ಅಬ್ದುಲ್ಲಾ ಶಫಿಕ್‌ 37 ರನ್‌ ಗಳಿಸಿ ಔಟಾದರೆ, ಮೊಹಮ್ಮದ್‌ ರಿಜ್ವಾನ್‌ 30 ರನ್‌ ಹಾಗೂ ಬಾಬರ್‌ ಆಜಂ (Babar Azam) 28 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು. ಇನ್ನೂ ಆಸ್ಟ್ರೇಲಿಯಾ ಪಾರ ಲ್ಯಾನ್ಸ್‌ ಮೊರಿಸ್‌ 6 ಓವರ್‌ಗಳಲ್ಲಿ 24 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರು. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಆಸೀಸ್‌ ತಂಡವು 31.5 ಓವರ್‌ಗಳಲ್ಲಿ ಕೇವಲ 140 ರನ್​ಗಳಿಗೆ ಆಲೌಟ್ ಆಯಿತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ನೆಲಕಚ್ಚಿದರು. ಆದರೆ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ 41 ಎಸೆತಗಳಲ್ಲಿ 30 ರನ್ ಬಾರಿಸಿದರು. ಅತ್ತ ಸಂಘಟಿತ ದಾಳಿಯೊಂದಿಗೆ ಆಸ್ಟ್ರೇಲಿಯನ್ನರ ಮೇಲೆ ಹಿಡಿತ ಸಾಧಿಸಿದ ಪಾಕ್ ಬೌಲರ್​ಗಳು ಅಂತಿಮವಾಗಿ ಆತಿಥೇಯರನ್ನು 31.5 ಓವರ್​ಗಳಲ್ಲಿ 140 ರನ್​ಗಳಿಗೆ ಆಲೌಟ್ ಮಾಡಿದರು.

    ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 32 ರನ್ ನೀಡಿ 3 ವಿಕೆಟ್ ಪಡೆದರೆ, ನಸೀಮ್ ಶಾ 54 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಹ್ಯಾರಿಸ್ ರೌಫ್ 24 ರನ್​ಗಳಿಗೆ 2 ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ಸರಣಿಯಲ್ಲಿ ಒಟ್ಟು 10 ವಿಕೆಟ್‌ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಹಾಗೂ ಸರಣಿಶೇಷ್ಠ ಪ್ರಶಸ್ತಿಗೂ ಪಾತ್ರರಾದರು. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ  

  • ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?

    ಫ್ಯಾನ್ಸ್‌ಗೆ ಶಾಕ್ ಕೊಟ್ಟ ಆರ್‌ಸಿಬಿ – ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಔಟ್?

    ಬೆಂಗಳೂರು: ಐಪಿಎಲ್ (IPL) ಮೆಗಾ ಹರಾಜಿಗೂ ಮುನ್ನವೇ ಆರ್‌ಸಿಬಿ ಇಬ್ಬರು ವಿದೇಶಿ ಆಟಗಾರರನ್ನು ಕೈ ಬಿಡುವ ಸಾಧ್ಯತೆಯಿದೆ. ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಅವರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದ್ದು, ಆರ್‌ಸಿಬಿ (RCB) ಫ್ಯಾನ್ಸ್‌ಗೆ ಆಘಾತ ನೀಡಿದೆ.

    ಕಳೆದ ಐಪಿಎಲ್‍ನಲ್ಲಿ ಫಾಫ್ ಬ್ಯಾಟಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಮ್ಯಾಕ್ಸ್‌ವೆಲ್ ನಿರೀಕ್ಷೆಯ ಪ್ರಕಾರ ಪ್ರದರ್ಶನ ನೀಡಿರಲಿಲ್ಲ. ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರಿ ವಿಫಲರಾದರು. ಆದರೂ ತಂಡದ ಯಶಸ್ಸಿನಲ್ಲಿ ಇಬ್ಬರೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.

    ಇಬ್ಬರು ಆಟಗಾರರ ಕೈಬಿಟ್ಟ ಬಳಿಕ ತಂಡಕ್ಕೆ ಕೆ.ಎಲ್ ರಾಹುಲ್ ಸೇರ್ಪಡೆಯಾಗಬಹುದು ಎಂದು ವರದಿ ಪ್ರಕಟವಾಗಿದ್ದರೂ ಹರಾಜು ನಡೆಯುವ ವೇಳೆ ಅಧಿಕೃತವಾಗಿ ತಿಳಿದು ಬರಲಿದೆ.

    ಆರ್‌ಸಿಬಿಯು ಕ್ಯಾಮರೂನ್ ಗ್ರೀನ್ ಮತ್ತು ವಿಲ್ ಜ್ಯಾಕ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿದರೆ ಬೇರೆ ತಂಡಗಳು ಇವರನ್ನು ಖರೀದಿಸುವ ಸಾಧ್ಯತೆ ಕಡಿಮೆಯಿದೆ.

    ಡು ಪ್ಲೆಸಿಸ್‍ಗೆ ಈಗಾಗಲೇ 40 ವರ್ಷವಾಗಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಹೆಚ್ಚು ವಯಸ್ಸು ಆಗದೇ ಇದ್ದರೂ ಎರಡು ತಿಂಗಳಲ್ಲಿ 36 ವರ್ಷ ಪೂರೈಸಲಿದ್ದಾರೆ. ಅವರು ಕ್ರಿಕೆಟ್‍ನಲ್ಲಿ ಉತ್ತಮ ಕೌಶಲ್ಯಗಳ ಹೊರತಾಗಿಯೂ ಸಾಕಷ್ಟು ಋತುಗಳಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಈ ಇಬ್ಬರೂ ಆಟಗಾರರ ವೃತ್ತಿ ಜೀವನ ಅಂತ್ಯವಾಗುವ ಸಾಧ್ಯತೆ ಇದೆ.

  • IPL 2024: ತವರಿನಲ್ಲೇ ಆರ್‌ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್‌ಗಳ ಸೂಪರ್‌ ಜಯ

    IPL 2024: ತವರಿನಲ್ಲೇ ಆರ್‌ಸಿಬಿಗೆ ಹೀನಾಯ ಸೋಲು – ಲಕ್ನೋಗೆ 28 ರನ್‌ಗಳ ಸೂಪರ್‌ ಜಯ

    ಬೆಂಗಳೂರು: ಕಳಪೆ ಬೌಲಿಂಗ್‌ ಹಾಗೂ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫಲ್ಯದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ತವರಿನಲ್ಲೇ ಹೀನಾಯ ಸೋಲನುಭವಿಸಿದೆ. ಮಯಾಂಕ್‌ ಯಾದವ್‌ ಮಾರಕ ಬೌಲಿಂಗ್‌ ಹಾಗೂ ಕ್ವಿಂಟನ್‌ ಡಿಕಾಕ್‌, ನಿಕೋಲಸ್‌ ಪೂರನ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ತಂಡ 28 ರನ್‌ಗಳ ಗೆಲುವು ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಆರ್‌ಸಿಬಿ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಲಕ್ನೋ ತಂಡಕ್ಕೆ ಬಿಟ್ಟುಕೊಟ್ಟಿತು. ಮೊದಲು ಕ್ರೀಸ್‌ಗಿಳಿದ ಲಕ್ನೋ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. 182 ರನ್‌ಗಳ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಸರ್ವಪತನ ಕಂಡಿದ್ದು, ಸೋಲೊಪ್ಪಿಕೊಂಡಿತು.

    182 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭದಲ್ಲಿ ಸ್ಪೋಟಕ ಪ್ರದರ್ಶನ ನೀಡಿದರೂ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 4.2 ಓವರ್‌ಗಳಲ್ಲಿ 40 ರನ್‌ ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿ ಮುಂದಿನ 18 ರನ್‌ ಗಳಿಸುಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

    ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್‌ ಲೋಮ್ರೋರ್‌ ಹಾಗೂ ರಜತ್‌ ಪಾಟೀದಾರ್‌ ಅವರ ಆಟವು ಗೆಲುವಿನ ಭರವಸೆ ಹೆಚ್ಚಿಸಿತ್ತು. ಇವರಿಬ್ಬರ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ಆರ್‌ಸಿಬಿ ಗೆಲುವಿನ ಕನಸು ಕುಸಿಯಿತು.

    ಆರ್‌ಸಿಬಿ ಪರ ಮಹಿಪಾಲ್‌ ಲೋಮ್ರೋರ್‌ 13 ಎಸೆತಗಳಲ್ಲಿ ಸ್ಫೋಟಕ 33 ರನ್‌ (3 ಸಿಕ್ಸರ್‌, 3 ಬೌಂಡರಿ) ಚಚ್ಚಿದರೆ, ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ 22 ರನ್‌, ಫಾಫ್‌ ಡು ಪ್ಲೆಸಿಸ್‌ 19 ರನ್‌, ರಜತ್‌ ಪಾಟಿದಾರ್‌ 29 ರನ್‌, ಕ್ಯಾಮರೂನ್‌ ಗ್ರೀನ್‌ 9 ರನ್‌, ಅನೂಜ್‌ ರಾವತ್‌ 11 ರನ್‌, ಸಿರಾಜ್‌ 12 ರನ್‌, ಟಾಪ್ಲಿ 3 ರನ್‌ ಗಳಿಸಿದರು. ಭರವಸೆ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಶೂನ್ಯ ಸುತ್ತಿದರು.

    ಲಕ್ನೋ ಪರ ಮಯಾಂಕ್‌ ಯಾದವ್‌ 3 ವಿಕೆಟ್‌ ಕಿತ್ತರೆ, ನವೀನ್‌ ಉಲ್‌ ಹಕ್‌ 2 ವಿಕೆಟ್‌ ಹಾಗೂ ಮಣಿಮಾರನ್‌ ಸಿದ್ಧಾರ್ಥ್‌, ಯಶ್‌ ಠಾಕೂರ್‌, ಮಾರ್ಕಸ್ಟ್‌ ಸ್ಟೋಯ್ನಿಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ಅಬ್ಬರದ ಬ್ಯಾಟಿಂಗ್‌ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡಿತು. 53 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಲಕ್ನೋ ತಂಡ 8.5 ಓವರ್‌ಗಳಲ್ಲಿ 73 ರನ್‌ಗಳಿಗೆ ಪ್ರಮುಖ 2 ವಿಕೆಟ್‌ ಕಳೆದುಕೊಂಡಿತು. ಆದ್ರೆ ಆರಂಭಿಕ ಕ್ವಿಂಟನ್‌ ಡಿಕಾಕ್‌, ನಿಕೋಲಸ್‌ ಪೂರನ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಅವರ ಸ್ಫೋಟಕ ಪ್ರದರ್ಶನದಿಂದ ತಂಡ 180 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

    ಲಕ್ನೋ ತಂಡದ ಪರವಾಗಿ ಕ್ವಿಂಟನ್‌ ಡಿ ಕಾಕ್‌ 56 ಎಸೆತಗಳಲ್ಲಿ 81 ರನ್‌ (5 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, ನಿಕೋಲಸ್‌ ಪೂರನ್‌ 40 ರನ್‌ (21 ಎಸೆತ, 5 ಸಿಕ್ಸರ್‌, 1 ಬೌಂಡರಿ), ಮಾರ್ಕಸ್‌ ಸ್ಟೋಯ್ನಿಸ್‌ 24 ರನ್‌ (15, ಎಸೆತ, 2 ಸಿಕ್ಸರ್‌, 1 ಬೌಂಡರಿ) ಗಳಿಸಿದ್ರೆ, ಕೆ.ಎಲ್‌ ರಾಹುಲ್‌, 20 ರನ್‌, ದೇವದತ್‌ ಪಡಿಕಲ್‌ 6 ರನ್‌ ಗಳಿಸಿದರು.

    ಆರ್‌ಸಿಬಿ ಪರ ಗ್ಲೆನ್‌ ಮ್ಯಾಕ್ಸ್‌ವೆಲ್‌ 2 ವಿಕೆಟ್‌ ಕಿತ್ತರೆ ರೀಸ್ ಟೋಪ್ಲಿ, ಯಶ್‌ ದಯಾಳ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • IPL 2024: ತವರಿನಲ್ಲಿ ರಾಯಲ್‌ ಆಗಿ ಚಾಲೆಂಜ್‌ ಗೆದ್ದ ಚೆನ್ನೈ – 6 ವಿಕೆಟ್‌ಗಳ ಜಯ, ಸಿಎಸ್‌ಕೆ ಶುಭಾರಂಭ

    IPL 2024: ತವರಿನಲ್ಲಿ ರಾಯಲ್‌ ಆಗಿ ಚಾಲೆಂಜ್‌ ಗೆದ್ದ ಚೆನ್ನೈ – 6 ವಿಕೆಟ್‌ಗಳ ಜಯ, ಸಿಎಸ್‌ಕೆ ಶುಭಾರಂಭ

    – ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿಗೆ ಸೋಲು

    ಚೆನ್ನೈ: ಸಂಘಟಿತ ಬ್ಯಾಟಿಂಗ್‌ ಹಾಗೂ ಮುಸ್ತಫಿಜುರ್ ರೆಹಮಾನ್ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಸಿಎಸ್‌ಕೆ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರ ನಾಯಕತ್ವದಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

    ಇಲ್ಲಿನ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (RCB) 173 ರನ್‌ ಗಳಿತ್ತು. 174 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌‌ ಕಿಂಗ್ಸ್‌ ತಂಡ 18.4 ಓವರ್‌ಗಳಲ್ಲಿ 176 ರನ್‌ ಬಾರಿ 17ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದಿದೆ.

    ಚೇಸಿಂಗ್‌ ಆರಂಭಿಸಿದ ಚೆನ್ನೈ ತಂಡ ಸ್ಫೋಟಕ ಪ್ರದರ್ಶನದ ಹೊರತಾಗಿಯೂ ವಿಕೆಟ್‌ಗಳನ್ನ ಕಳೆದುಕೊಳ್ಳುತ್ತಾ ಸಾಗಿತ್ತು. ಆರಂಭಿಕ ಆಟಗಾರ ರಚಿನ್‌ ರವೀಂದ್ರ 15 ಎಸೆತಗಳಲ್ಲಿ 37 ರನ್‌ ಚಚ್ಚಿದರೆ, ಅಜಿಂಕ್ಯಾ ರಹಾನೆ (Ajinkya Rahane) 27 ರನ್‌, ಡೇರಿಲ್‌ ಮಿಚೆಲ್‌ 22 ರನ್‌, ನಾಯಕ ಋತುರಾಜ್‌ ಗಾಯಕ್ವಾಡ್‌ 15 ರನ್‌ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್‌ ಹಿಡಿತ ಸಾಧಿಸಿದ್ದಾಗ ಆರ್‌ಸಿಬಿ ಮೇಲೆ ಗೆಲುವಿನ ನಿರೀಕ್ಷೆ ಇತ್ತು.

    ದುಬೆ-ಜಡೇಜಾ ಸಂಘಟಿತ ಬ್ಯಾಟಿಂಗ್‌:
    ಮಧ್ಯಮ ಕ್ರಮಾಂಕದಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ 37 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟ ನೀಡಿದರು. ದುಬೆ 28 ಎಸೆತಗಳಲ್ಲಿ 34 ರನ್‌ ಗಳಿಸಿದರೆ, ಜಡೇಜಾ 17 ಎಸೆತಗಳಲ್ಲಿ 25 ರನ್‌ ಬಾರಿಸಿ ಗೆಲುವಿಗೆ ನೆರವಾದರು.

    ಕಳಪೆ ಬೌಲಿಂಗ್‌: 
    ಮಧ್ಯಮ ಕ್ರಮಾಂಕದಲ್ಲಿ ಸುಧಾರಿತ ಪ್ರದರ್ಶನ ನೀಡಿದ್ದ ಆರ್‌ಸಿಬಿ ಬಳಿಕ ಮತ್ತಷ್ಟು ಕಳಪೆ ಬೌಲಿಂಗ್‌ ಪ್ರದರ್ಶನ ತೋರಿತು. ವೈಡ್‌, ಲೆಗ್‌ಬೈಸ್‌ನಿಂದಲೇ 16 ರನ್‌ ಬಿಟ್ಟುಕೊಟ್ಟಿತು. ಇದು ಚೆನ್ನೈ ತಂಡಕ್ಕೆ ಮತ್ತಷ್ಟು ಸಹಕಾರವಾಯಿತು. ಆರ್‌ಸಿಬಿ ಪರ ಕ್ಯಾಮರೂನ್‌ ಗ್ರೀನ್‌ (Cameron Green) 2 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌, ಕರ್ಣ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದರು.

    ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 173 ರನ್‌ ಬಾರಿಸಿತ್ತು. ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಮೊದಲ ವಿಕೆಟ್‌ಗೆ ಕೊಹ್ಲಿ ಹಾಗೂ ಡುಪ್ಲೆಸಿಸ್‌ ಜೋಡಿ 27 ಎಸೆತಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿತ್ತು. ಆದ್ರೆ ಡುಪ್ಲೆಸಿಸ್‌ 23 ಎಸೆತಗಳಲ್ಲಿ 35 ರನ್‌ (8 ಬೌಂಡರಿ) ಬಾರಿಸಿ ಔಟಾಗುತ್ತಿದ್ದಂತೆ, ಒಂದೊಂದೇ ವಿಕೆಟ್‌ ಬೀಳಲಾರಂಭಿಸಿದವು. ಮುಂದಿನ 37 ರನ್‌ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐದು ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

    ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಇನ್ನೀಂಗ್ಸ್‌ ಕಟ್ಟಿದ ದಿನೇಶ್‌ ಕಾರ್ತಿಕ್‌ ಮತ್ತು ಅನೂಜ್‌ ರಾವತ್‌ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 50 ಎಸೆತಗಳಲ್ಲಿ ಈ ಜೋಡಿ 95 ರನ್‌ ಬಾರಿಸುವ ಮೂಲಕ ತಂಡದ ಮೊತ್ತ 170 ರನ್‌ ಗಳ ಗಡಿ ದಾಟುವಂತೆ ಮಾಡಿತು. ಆರ್‌ಸಿಬಿ ಪರ ಅನೂಜ್‌ ರಾವತ್‌ 48 ರನ್‌ (25 ಎಸೆತ, 4 ಬೌಂಡರಿ, 3 ಸಿಕ್ಸರ್‌), ದಿನೇಶ್‌ ಕಾರ್ತಿಕ್‌ 38 ರನ್‌ (26 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿದ್ರೆ, ಡುಪ್ಲೆಸಿಸ್‌ 35 ರನ್‌, ಕೊಹ್ಲಿ 21 ರನ್‌, ಕ್ಯಾಮರೂನ್‌ ಗ್ರೀನ್‌ 18 ರನ್‌ ಗಳಿಸಿದರು. ಹೆಚ್ಚುವರಿ 13 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮುಸ್ತಫಿಜುರ್ ರೆಹಮಾನ್ 4 ಓವರ್‌ಗಳಲ್ಲಿ 9 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ದೀಪಕ್‌ ಚಹಾರ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

  • IPL 2024: 21 ರನ್‌ ಬಾರಿಸಿದ್ರೂ ಎರಡೆರಡು ದಾಖಲೆ ಬರೆದ ಕಿಂಗ್‌ ಕೊಹ್ಲಿ!

    IPL 2024: 21 ರನ್‌ ಬಾರಿಸಿದ್ರೂ ಎರಡೆರಡು ದಾಖಲೆ ಬರೆದ ಕಿಂಗ್‌ ಕೊಹ್ಲಿ!

    ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನ (IPL) ಉದ್ಘಾಟನಾ ಪಂದ್ಯದಲ್ಲೇ ಆರ್‌ಸಿಬಿ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ (Virat Kohli) 21 ರನ್‌ ಬಾರಿಸುವ ಮೂಲಕ ಎರಡೆರಡು ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ.

    ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಫೀಲ್ಡಿಂಗ್‌ ಮಾಡುವ ಅವಕಾಶವನ್ನು ಸಿಎಸ್‌ಕೆಗೆ (CSK) ಬಿಟ್ಟುಕೊಟ್ಟಿತು. ಆರ್‌ಸಿಬಿ ಪರ ನಿಧಾನಗತಿಯ ಬ್ಯಾಟಿಂಗ್‌ ಮಾಡಿ 1 ಸಿಕ್ಸರ್‌ ಜೊತೆಗೆ 21 ರನ್‌ ಗಳಿಸಿದ ಕೊಹ್ಲಿ, ಟಿ20 ಕ್ರಿಕೆಟ್‌ನಲ್ಲಿ ಎರಡು ತಂಡಗಳ (ಡೆಲ್ಲಿ ಕ್ಯಾಪಿಟಲ್ಸ್‌ & ಸಿಎಸ್‌ಕೆ) ವಿರುದ್ಧ 1,000 ಸಾವಿರ ರನ್‌ ಪೂರೈಸಿದ ಮೊದಲ ಭಾರತೀಯ ಬ್ಯಾಟರ್‌ ಎಂಬ ಖ್ಯಾತಿಗೆ ಪಾತ್ರರಾದರು. ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 12,000 ರನ್‌ ಪೂರೈಸಿದ ಮೊದಲ ಭಾರತೀಯ ಹಾಗೂ ವಿಶ್ವದ 2ನೇ ಆಟಗಾರ ಸಹ ಎನಿಸಿಕಕೊಂಡರು.

    ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಟಗಾರ ಕ್ರಿಸ್‌ ಗೇಲ್‌ (Chris Gayle) 343 ಇನ್ನೀಂಗ್ಸ್‌ಗಳಲ್ಲಿ 12,000 ರನ್‌ ಪೂರೈಸಿದ್ದರೆ, ವಿರಾಟ್‌ 360 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: IPL 2024: ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿನ್ನರ್ಸ್‌ ಲಿಸ್ಟ್‌ – ಶಾನ್‌ ಮಾರ್ಷ್‌ನಿಂದ ಗಿಲ್‌ ವರೆಗೆ

    ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರು:
    * 14,562 – ಕ್ರಿಸ್ ಗೇಲ್
    * 13,360 – ಶೋಯೆಬ್ ಮಲಿಕ್
    * 12,900 – ಕಿರನ್‌ ಪೊಲಾರ್ಡ್
    * 12,319 – ಅಲೆಕ್ಸ್ ಹೇಲ್ಸ್
    * 12,065 – ಡೇವಿಡ್ ವಾರ್ನರ್
    * 12,000 – ವಿರಾಟ್ ಕೊಹ್ಲಿ

    ಸದ್ಯ ಚೆನ್ನೈನ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 173 ರನ್‌ ಗಳಿಸಿ. ಸಿಎಸ್‌ಕೆಗೆ 174 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಇಲ್ಲಿದೆ ಅಂದ-ಚೆಂದದ ಫೋಟೋಸ್‌!

  • IPL 2024: ಡಿಕೆ-ರಾವತ್‌ 95 ರನ್‌ಗಳ ಜೊತೆಯಾಟ – ಸಿಎಸ್‌ಕೆ ಗೆಲುವಿಗೆ 174 ರನ್‌ಗಳ ಗುರಿ

    IPL 2024: ಡಿಕೆ-ರಾವತ್‌ 95 ರನ್‌ಗಳ ಜೊತೆಯಾಟ – ಸಿಎಸ್‌ಕೆ ಗೆಲುವಿಗೆ 174 ರನ್‌ಗಳ ಗುರಿ

    ಬೆಂಗಳೂರು: ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿದೆ. ಎದುರಾಳಿ ಸಿಎಸ್‌ಕೆ (CSK) ತಂಡಕ್ಕೆ 174 ರನ್‌ಗಳ ಗುರಿ ನೀಡಿದೆ.

    ಟಾಸ್‌ ಗೆದ್ದು ಮೊದಲು ಕ್ರೀಸ್‌ಗಿಳಿದ ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ (Faf du Plessis) ಆರಂಭದಲ್ಲೇ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ಮುಂದಾದರು. ಮೊದಲ ವಿಕೆಟ್‌ಗೆ ಕೊಹ್ಲಿ (Virat Kohli) ಹಾಗೂ ಡುಪ್ಲೆಸಿಸ್‌ ಜೋಡಿ 27 ಎಸೆತಗಳಲ್ಲಿ 41 ರನ್‌ಗಳ ಜೊತೆಯಾಟ ನೀಡಿತ್ತು. ಆದ್ರೆ ಡುಪ್ಲೆಸಿಸ್‌ 23 ಎಸೆತಗಳಲ್ಲಿ 35 ರನ್‌ (8 ಬೌಂಡರಿ) ಬಾರಿಸಿ ಔಟಾಗುತ್ತಿದ್ದಂತೆ, ಒಂದೊಂದೇ ವಿಕೆಟ್‌ ಬೀಳಲಾರಂಭಿಸಿದವು. ಮುಂದಿನ 37 ರನ್‌ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಐದು ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

    ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಇನ್ನೀಂಗ್ಸ್‌ ಕಟ್ಟಿದ ದಿನೇಶ್‌ ಕಾರ್ತಿಕ್‌ (Dinesh Karthik) ಮತ್ತು ಅನೂಜ್‌ ರಾವತ್‌ (Anuj Rawat) ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 50 ಎಸೆತಗಳಲ್ಲಿ ಈ ಜೋಡಿ 95 ರನ್‌ ಬಾರಿಸುವ ಮೂಲಕ ತಂಡದ ಮೊತ್ತ 170 ರನ್‌ ಗಳ ಗಡಿ ದಾಟುವಂತೆ ಮಾಡಿತು. ಇದನ್ನೂ ಓದಿ: ನನ್ನ ಜೆರ್ಸಿ ನಂ.17, ಇದು 17ನೇ ಆವೃತ್ತಿ – ಈ ಸಲ ಆರ್‌ಸಿಬಿ ಕಪ್‌ ಗೆದ್ದೇ ಗೆಲ್ಲುತ್ತೆ ಎಂದ ಎಬಿಡಿ

    ಆರ್‌ಸಿಬಿ ಪರ ಅನೂಜ್‌ ರಾವತ್‌ 48 ರನ್‌ (25 ಎಸೆತ, 4 ಬೌಂಡರಿ, 3 ಸಿಕ್ಸರ್‌), ದಿನೇಶ್‌ ಕಾರ್ತಿಕ್‌ 38 ರನ್‌ (26 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿದ್ರೆ, ಡುಪ್ಲೆಸಿಸ್‌ 35 ರನ್‌, ಕೊಹ್ಲಿ 21 ರನ್‌, ಕ್ಯಾಮರೂನ್‌ ಗ್ರೀನ್‌ 18 ರನ್‌ ಗಳಿಸಿದರು. ಹೆಚ್ಚುವರಿ 13 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

    ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮುಸ್ತಫಿಜುರ್ ರೆಹಮಾನ್ 4 ಓವರ್‌ಗಳಲ್ಲಿ 9 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ದೀಪಕ್‌ ಚಹಾರ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: IPL ಉದ್ಘಾಟನಾ ವೇದಿಕೆಯಲ್ಲಿ ಬೆಡಗು ಬಿನ್ನಾಣ; ಇಲ್ಲಿದೆ ಅಂದ-ಚೆಂದದ ಫೋಟೋಸ್‌!