Tag: Glass door

  • ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಗಾಜಿನ ಡೋರಿಗೆ ಡಿಕ್ಕಿ- ಮಹಿಳೆ ಸಾವು

    ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಗಾಜಿನ ಡೋರಿಗೆ ಡಿಕ್ಕಿ- ಮಹಿಳೆ ಸಾವು

    ತಿರುವನಂತಪುರಂ: ಬ್ಯಾಂಕ್‍ನಿಂದ ಹೊರಗೆ ಓಡುವ ಭರದಲ್ಲಿ ಮಹಿಳೆಯೊಬ್ಬರು ಗಾಜಿನ ಡೋರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಕೇರಳದ ಪೆರುಂಬವೂರ್ ನಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಪೆರುಂಬವೂರಿನ ಬೀನಾ ಜಿಜು ಪಾಲ್ (46) ಎಂದು ಗುರುತಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಪೆರುಂಬವೂರ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೀನಾ ವಹಿವಾಟು ನಡೆಸಲು ಬ್ಯಾಂಕಿಗೆ ಭೇಟಿ ನೀಡಿದ್ದರು. ಬಳಿಕ ಬ್ಯಾಂಕ್‍ನಿಂದ ವೇಗವಾಗಿ ಹೊರಗೆ ಹೆಜ್ಜೆ ಹಾಕುತ್ತಿದ್ದಾಗ ಗಾಜಿನ ಬಾಗಿಲು ಇದೆ ಎನ್ನುವುದನನ್ನೇ ಮರೆತಿದ್ದರು. ಪರಿಣಾಮ ಡಿಕ್ಕಿ ಗೊಡೆದಿದ್ದರಿಂದ ಎದೆಗೆ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೆ ಗಾಜು ಬೀನಾ ಅವರ ಹೊಟ್ಟೆಗೆ ಚುಚ್ಚಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಮಹಿಳೆ ಬೈಕ್‍ನಲ್ಲಿ ಕೀ ಬಿಟ್ಟು ಬ್ಯಾಂಕ್ ಒಳಗೆ ಬಂದಿದ್ದರು. ಹೀಗಾಗಿ ಬ್ಯಾಂಕ್‍ನಿಂದ ಹೊರಗೆ ವೇಗವಾಗಿ ಹೋಗುತ್ತಿದ್ದಾಗ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬ್ಯಾಂಕಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

    ಮಹಿಳೆಯು ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದ ಬಳಿಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಕುಸಿದು ಬಿದ್ದರು. ನಂತರ ಬ್ಯಾಂಕ್ ಸಿಬ್ಬಂದಿ ಆಕೆಯನ್ನು ಕುರ್ಚಿ ಮೇಲೆ ಕೂರಿಸಿ ಆರೈಕೆ ಮಾಡುವ ಪ್ರಯತ್ನಿಸಿದರು. ಈ ಮಧ್ಯೆ ತೀವ್ರ ರಕ್ತಸ್ರಾವ ಕಂಡ ಗಾಬರಿಗೊಂಡ ಸಿಬ್ಬಂದಿ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಬೀನಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.